ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಫೈಟಿಂಗ್ ದೃಶ್ಯ ಚಿತ್ರೀಕರಿಸುವ ವೇಳೆ ಗಾಯಗೊಂಡಿದ್ದಾರೆ.
ವಿಜಯ್ ಆಂಧ್ರದ ಕಾಕಿನಾಡಿನಲ್ಲಿ ‘ಡಿಯರ್ ಕಾಮ್ರೆಡ್’ ಚಿತ್ರದ ಶೂಟಿಂಗ್‍ನಲ್ಲಿ ತೊಡಗಿಕೊಂಡಿದ್ದರು. ಮೂರು ವಾರಗಳ ಕಾಲ ಈ ಚಿತ್ರದ ಚಿತ್ರೀಕರಣವನ್ನು ನಡೆಸುತ್ತಿದ್ದಾರೆ. ಆದರೆ ಈಗ ವಿಜಯ್ ಸಾಹಸ ದೃಶ್ಯ ಚಿತ್ರೀಕರಿಸುವಾಗ ಗಾಯಗೊಂಡಿದ್ದು, ವೈದ್ಯರು ಒಂದು ದಿನ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ.
ವಿಜಯ್ ಅವರು ಸ್ವತಃ ತಮಗೆ ಗಾಯಗೊಂಡಿರುವ ವಿಷಯವನ್ನು ಇನ್‍ಸ್ಟಾಗ್ರಾಂನಲ್ಲಿ ಫೋಟೋ ಹಾಕುವ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ವಿಜಯ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ “ನಿಮ್ಮ ಗಾಯಗಳನ್ನು ನೀವೇ ಆಚರಿಸಿಕೊಳ್ಳಿ. ಏಕೆಂದರೆ ಜೀವನದಲ್ಲಿ ಯಾವುದು ಸುಲಭವಾಗಿ ಸಿಗುವುದಿಲ್ಲ” ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ರಶ್ಮಿಕಾಗೆ ಚೈಲ್ಡ್ ನಟಿ ಎಂದ ವಿಜಯ್ ದೇವರಕೊಂಡ
ಡಿಯರ್ ಕಾಮ್ರೆಡ್ ಚಿತ್ರವನ್ನು ಭರತ್ ಕಮ್ಮ ನಿರ್ದೇಶನ ಮಾಡುತ್ತಿದ್ದು, ಯಶ್ ರಂಗಿನೇನಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಜಯ್‍ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ.
ಗೀತಾ ಗೋವಿಂದಂ ಚಿತ್ರದ ಯಶಸ್ಸಿನ ನಂತರ ವಿಜಯ್ ಹಾಗೂ ರಶ್ಮಿಕಾ ಡಿಯರ್ ಕಾಮ್ರೆಡ್ ಚಿತ್ರದಲ್ಲಿ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ.
ಹೈದರಾಬಾದ್: ಟಾಲಿವುಡ್ ಸೂಪರ್ ಹಿಟ್ ‘ಗೀತಾ ಗೋವಿಂದಂ’ ಚಿತ್ರದಿಂದ ನಟ ವಿಜಯ್ ದೇವರಕೊಂಡ ಹಾಗೂ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಎಲ್ಲರ ಹಾಟ್ ಫೇವರೇಟ್ ಜೋಡಿ ಆಗಿದ್ದು, ಈಗ ಈ ಜೋಡಿ ಟ್ವಿಟ್ಟರಿನಲ್ಲಿ ಪರಸ್ಪರ ಕಾಲೆಳೆದುಕೊಂಡಿದ್ದಾರೆ.
ವಿಜಯ್ ದೇವರಕೊಂಡ ತಮ್ಮ ಟ್ವಿಟ್ಟರಿನಲ್ಲಿ, “ಕಾಮ್ರೆಡ್ ರಶ್ಮಿಕಾ. ದಕ್ಷಿಣ ಭಾರತದ ಅತೀ ಗೂಗಲ್ ಆಗಿರುವ ಚೈಲ್ಡ್ ನಟಿ ರಶ್ಮಿಕಾಗೆ ಶುಭಾಶಯಗಳು. ಈ ವರ್ಷದಲ್ಲಿ ಅತಿ ಹೆಚ್ಚು ಗೂಗಲ್ಡ್ ಆಗಿರುವ ಹಾಡಿನಲ್ಲಿ ನಿಮ್ಮ ಹಾಡು ಮೊದಲನೇ, ನಾಲ್ಕನೇ ಹಾಗೂ ಒಂಬತ್ತನೇ ಸ್ಥಾನದಲ್ಲಿದೆ. ನಮಗೆ ಪಾರ್ಟಿ ಬೇಕು” ಎಂದು ಕಾಮ್ರೆಡ್ ಚಿತ್ರದಲ್ಲಿನ ರಶ್ಮಿಕಾ ಅವರ ಪೋಸ್ಟರ್ ಹಾಕಿ ಟ್ವೀಟ್ ಮಾಡಿದ್ದಾರೆ.
Congratulations on being South's most Googled actress child of the year, the superstar who has the most googled film of the year, the 1st, 4th & 9th most googled songs of the year. We want a party. #GoogleDomination! pic.twitter.com/kpGrQNwyrE
ವಿಜಯ್ ಟ್ವೀಟ್‍ಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿ, “ಕಾಮ್ರೆಡ್ ದೇವರಕೊಂಡ. ಮಿ. ಫಿಲ್ಮ್ ಫೇರ್ ಹಾಗೂ ರೌಡಿವೇರ್ ನ ಮಾಲೀಕ ನನ್ನ ಪಾರ್ಟಿ ಎಲ್ಲಿ?. ಅತೀ ಹೆಚ್ಚು ಗೂಗಲ್ ಆಗಿರುವ ನಾಯಕರಲ್ಲಿ ನೀವು ನಾಲ್ಕನೇ ಸ್ಥಾನ ಪಡೆದಿದ್ದೀರಿ ಹಾಗೂ ಗೂಗಲ್ಡ್ ಆಗಿರುವ ಚಿತ್ರದಲ್ಲಿ ನೀವು ಸ್ಟಾರ್ ಆಗಿದ್ದೀರಿ. ಅಲ್ಲದೇ ಗೂಗಲ್ಡ್ ಆಗಿರುವ ಹಾಡಿನಲ್ಲಿ 2ನೇ ಹಾಗೂ 4ನೇ ಸ್ಥಾನದಲ್ಲಿದೆ. ಎಲೆಕ್ಷನ್ ರಿಸಲ್ಟ್ ಬಂದ ನಂತರ ನೀವು ಇಡೀ ತಂಡಕ್ಕೆ ಪಾರ್ಟಿ ನೀಡುತ್ತೀರಿ ಎಂದು ಹೇಳಿದ್ದೀರಿ. ಆದರೆ ಈಗ ಪಾರ್ಟಿ ಎಲ್ಲಿ? ನನ್ನನ್ನು ಚೈಲ್ಡ್ ಎಂದು ಕರೆಯಬೇಡಿ” ಎಂದು ಹ್ಯಾಶ್‍ಟ್ಯಾಗ್ ಬಳಸಿ ವಿಜಯ್ ಅವರ ಪೋಸ್ಟರ್ ಹಾಕಿ ರಶ್ಮಿಕಾ ರೀ-ಟ್ವೀಟ್ ಮಾಡಿದ್ದಾರೆ.
Where is MY party Mr.Filmfare-Owner of Rowdywear🤷🏻♀️ The 4th most googled actor &star of the most googled film😈 and 2nd&4th most googled song🤔 AND you promised a party to the whole set after the Election results- where I say?💁🏻♀️ AND. #Dontcallmechild😒 pic.twitter.com/tbd5OmRvGz
ವಿಜಯ್ ಹಾಗೂ ರಶ್ಮಿಕಾ ತೆಲುಗುವಿನಲ್ಲಿ ‘ಗೀತಾ ಗೋವಿಂದಂ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಹಿಟ್ ಆಗಿತ್ತು. ಈ ಚಿತ್ರದ ನಂತರ ವಿಜಯ್ ಹಾಗೂ ರಶ್ಮಿಕಾ ಕಾಮ್ರೆಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪ್ರಮೋಶನ್‍ಗಾಗಿ ರಶ್ಮಿಕಾ ಹಾಗೂ ವಿಜಯ್ ಪರಸ್ಪರ ಫೋಟೋ ಹಾಕಿ ಟ್ವಿಟ್ಟರಿನಲ್ಲಿ ಕಾಲೆಳೆದುಕೊಂಡಿದ್ದಾರೆ.
ಹೈದರಾಬಾದ್: ಟಾಲಿವುಡ್ ಹ್ಯಾಂಡ್ಸಮ್ ಹಂಕ್ ವಿಜಯ್ ದೇವರಕೊಂಡ ಬಾಲಿವುಡ್ ನಟಿಯ ಆಸೆಯನ್ನು ನೆರವೇರಿಸಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ಆಸೆಯನ್ನು ನಟ ವಿಜಯ್ ದೇವರಕೊಂಡ ನೆರವೇರಿಸುತ್ತಿದ್ದಾರೆ. ಇತ್ತೀಚೆಗೆ ಖ್ಯಾತ ನಟ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಜಾಹ್ನವಿ ಕಪೂರ್ ತಮ್ಮ ಈ ಆಸೆಯನ್ನು ವ್ಯಕ್ತಪಡಿಸಿದ್ದರು.
ಈ ಕಾರ್ಯಕ್ರಮದಲ್ಲಿ ಜಾಹ್ನವಿ ದಕ್ಷಿಣ ಚಿತ್ರರಂಗದಲ್ಲಿ ವಿಜಯ್ ದೇವರಕೊಂಡ ಜೊತೆ ಸಿನಿಮಾವನ್ನು ಮಾಡುವ ಆಸೆಯನ್ನು ವ್ಯಕ್ತಪಡಿಸಿದರು. ಆಗ ಕರಣ್ ಸೂಪರ್ ಸೆಕ್ಸಿ ಸೌತ್ ಇಂಡಿಯನ್ ಸ್ಟಾರ್ ಎಂದು ವಿಜಯ್ ದೇವರಕೊಂಡ ಅವರನ್ನು ಹೊಗಳಲು ಶುರು ಮಾಡಿದರು.
ಕರಣ್ ಹಾಗೂ ಜಾಹ್ನವಿ ಮಾತುಗಳನ್ನು ಕೇಳಿ ವಿಜಯ್ ಲಾಟ್ಸ್ ಆಫ್ ಲವ್ ಎಂದು ಪ್ರತಿಕ್ರಿಯಿಸಿದರು. ಇದಾದ ಬಳಿಕ ವಿಜಯ್ ತಾವು ಬಾಲಿವುಡ್‍ಗೆ ಎಂಟ್ರಿ ನೀಡುತ್ತಿದ್ದೇನೆ ಎಂದು ಹೇಳಿ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದರು. ಕರಣ್ ಜೋಹರ್ ಹಾಗೂ ಜಾಹ್ನವಿ ಕಪೂರ್ ಜೊತೆ ಚಿತ್ರ ಮಾಡುತ್ತೇನೆ ಎಂದು ಭರವಸೆ ನೀಡಿದರು.
ವಿಜಯ್ ಬಾಲಿವುಡ್‍ಗೆ ಎಂಟ್ರಿ ನೀಡುವ ಹೇಳಿಕೆ ನೀಡಿದ್ದು, ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಹೊರಹಾಕುತ್ತಿಲ್ಲ ಎಂದು ಹೇಳಲಾಗುತ್ತಿದೆ. ಕೆಲವು ವಾರಗಳ ಹಿಂದೆ ವಿಜಯ್ ನಿರ್ದೇಶಕ ಕರಣ್ ಅವರನ್ನು ಭೇಟಿ ಮಾಡಿ ಚಿತ್ರದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಬೆಂಗಳೂರು: ತನ್ನ ಸಿನಿಮಾ ಜರ್ನಿಯ ಆರಂಭದಲ್ಲಿಯೇ ನಿರ್ಮಾಪಕರಾದ ರಾಕ್‍ಲೈನ್ ವೆಂಕಟೇಶ್ ಅವರು ತನಗೆ ಆರ್ಥಿಕ ಸಹಾಯ ಮಾಡಿದ್ದ ಕುರಿತ ಸಂಗತಿಯನ್ನು ಟಾಲಿವುಡ್ ನಟ ವಿಜಯ್ ದೇವರಕೊಂಡ ರಿವೀಲ್ ಮಾಡಿದ್ದಾರೆ.
ತಮ್ಮ ಮುಂದಿನ ನೋಟಾ ಸಿನಿಮಾ ಪ್ರಚಾರಕ್ಕಾಗಿ ನಗರಕ್ಕೆ ಆಗಮಿಸಿದ ವಿಜಯ್ ತಮ್ಮ ಜೀವನದಲ್ಲಿ ಬೆಂಗಳೂರಿನಲ್ಲಿ ಕಳೆದ ಸಮಯದ ಕ್ಷಣಗಳನ್ನು ತೆರೆದಿಟ್ಟರು. ಈ ವೇಳೆ ತಮ್ಮ ಸಿನಿ ಜರ್ನಿಯ ಆರಂಭದಲ್ಲಿ ಮೊದಲ ಮನೆ ಖರೀದಿ ಮಾಡಲು ಮುಂದಾಗಿದ್ದೆ. ಇದೇ ಸಮಯದಲ್ಲಿ ನಾನು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದೆ. ಆ ಸಂದರ್ಭದಲ್ಲಿ ಅವರು ಒಂದು ದೊಡ್ಡ ಮೊತ್ತವನ್ನು ಪಾವತಿಸಿದ್ದರು. ಇದು ತನಗೆ ತುಂಬಾ ಸಹಾಯವಾಯಿತು ಎಂದು ತಿಳಿಸಿದ್ದಾರೆ.
ನನ್ನ `ಪೆಳ್ಳಿ ಚೂಪುಲು’ ಎಂಬ ಸಿನಿಮಾ ಆಗತಾನೇ ಸಿದ್ಧವಾಗುತ್ತಿತ್ತು. ಆ ವೇಳೆಯೇ ಅವರು ನನಗೆ ಅವಕಾಶ ನೀಡಿದರು. ಅದ್ದರಿಂದ ನಾನು ಅವರಿಗೆ ಧನ್ಯವಾದ ತಿಳಿಸುತ್ತೇನೆ. ನಾನು ಕಳೆದ ಹಲವು ದಿನಗಳಿಂದ ಸಿನಿಮಾ ಸ್ಕ್ರಿಪ್ಟ್ ಕಳಿಸಿದ್ದೆ. ಆದರೆ ಯಾವುದು ಇಷ್ಟವಾಗಿರಲಿಲ್ಲ. ಆದರೆ ಸದ್ಯ ಒಂದು ಕಥೆ ಇಷ್ಟವಾಗಿದೆ. ಮುಂದಿನ ದಿನಗಳಲ್ಲಿ ನನ್ನ ಅವರ ಕಂಬಿನೇಷನ್ ಸಿನಿಮಾ ಮೂಡಿ ಬರಲಿದೆ ಎಂದು ತಿಳಿಸಿದರು. ಇದೇ ವೇಳೆ ತಾನು ಕನ್ನಡಿದಲ್ಲಿ ಕೂಡ ನಟನೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದರು. ಇದನ್ನು ಓದಿ: ರಶ್ಮಿಕಾ, ರಕ್ಷಿತ್ ಬ್ರೇಕಪ್ ಬಗ್ಗೆ ವಿಜಯ್ ದೇವರಕೊಂಡ ಹೇಳಿದ್ದೇನು?
ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಿರ್ಮಾಪಕ ಜ್ಞಾನವೇಲು ರಾಜು ಅವರು ಭಾಗವಹಿಸಿದ್ದರು. ನೋಟಾ ಸಿನಿಮಾ ಇದೇ ಶುಕ್ರವಾರ ಬಿಡುಗಡೆ ಆಗಲಿದೆ. ಇದನ್ನು ಓದಿ: ನಮ್ಮ ಬೆಂಗಳೂರು ಉಳಿಸುವುದು ನಮ್ಮ ಕರ್ತವ್ಯ: ವಿಜಯ್ ದೇವರಕೊಂಡ
ಬೆಂಗಳೂರು: ಟಾಲಿವುಡ್ ನಲ್ಲಿ ಸತತ ಯಶಸ್ವಿ ಚಿತ್ರಗಳ ಮೂಲಕ ಹೆಸರು ಪಡೆದಿರುವ ನಟ ವಿಜಯ್ ದೇವರಕೊಂಡ ತಮ್ಮ ಜೀವನದಲ್ಲಿ ಬೆಂಗಳೂರು ಹಾಗೂ ಸ್ಯಾಂಡಲ್‍ವುಡ್ ಸ್ಟಾರ್ ನಟರೊಂದಿಗೆ ತಮಗಿರುವ ಆತ್ಮೀಯತೆಯನ್ನು ಬಿಚ್ಚಿಟ್ಟಿದ್ದಾರೆ.
ವಿಜಯ್ ತಮ್ಮ ಮುಂದಿನ ಸಿನಿಮಾ `ನೋಟಾ’ ಕುರಿತ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ್ದು, ನನ್ನ ಸಿನಿಮಾ ಕುರಿತು ಮೊದಲು ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬು ಅವರು ಮಾತನಾಡಿದ ವೇಳೆ ಅಚ್ಚರಿ ಆಗಲಿಲ್ಲ. ಆದರೆ ಮೊದಲ ಬಾರಿಗೆ ಪುನೀತ್ ರಾಜ್‍ಕುಮಾರ್ ಸರ್ ಫೋನ್ ಮಾಡಿದ ವೇಳೆ ಅಚ್ಚರಿಗೊಂಡಿದೆ. ಅಲ್ಲದೇ ನನ್ನ ಭೇಟಿ ಮಾಡಲು ಶಿವರಾಜ್ ಕುಮಾರ್ ಅವರು ಇಷ್ಟಪಟ್ಟಿದ್ದು ಹೆಚ್ಚು ಖುಷಿ ಕೊಟ್ಟಿತ್ತು. ಅಲ್ಲದೇ ಸುದೀಪ್ ಸರ್ ಕೂಡ ನನಗೆ ಹೆಚ್ಚು ಪರಿಚಯ ಇದ್ದಾರೆ. ಬಿಗ್ ಬಾಸ್ ವೇಳೆ ನಾನು ಅವರನ್ನು ಭೇಟಿ ಮಾಡಿದ್ದೆ ಎಂದು ತಮ್ಮ ನೆನಪಿನ ಸರಣಿಯನ್ನು ತೆರೆದಿಟ್ಟರು.
ಕಾಲೇಜು ಜೀವನದ ದಿನಗಳಲ್ಲೇ ತಾನು ಹೆಚ್ಚು ಬೆಂಗಳೂರಿಗೆ ಆಗಮಿಸುತ್ತಿದ್ದೆ. ನಾನು ಓದುತ್ತಿದ್ದ ಕಾಲೇಜಿನಿಂದ ಕೇವಲ 4 ಗಂಟೆಗಳ ಜರ್ನಿ. ಆದ್ದರಿಂದ ನಾನು ಹೆಚ್ಚು ಬಾರೀ ಇಲ್ಲಿಗೆ ಭೇಟಿ ನೀಡಿದ್ದೇನೆ. ಅಲ್ಲದೇ ನನ್ನ ಸ್ಮೇಹಿತರು ಹೆಚ್ಚು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೇ ಅಲ್ಲಿಂದ ಹೆಬ್ಬಾಳ, ಜಾಲಹಳ್ಳಿ ಪ್ರದೇಶದಲ್ಲಿ ಹೆಚ್ಚು ಓಡಾಟ ನಡೆಸಿದ್ದೇನೆ. ಆದರೆ ಅಂದು ಮಾಡಿದಂತೆ ಇಂದು ಇರಲು ಸಾಧ್ಯವಾಗುತ್ತಾ ಎಂಬುವುದು ನನಗೆ ಗೊತ್ತಿಲ್ಲ ಎಂದರು.
ನಮ್ಮ ಬೆಂಗಳೂರು ಉಳಿಸುವುದು ನಮ್ಮ ಕರ್ತವ್ಯ: ನನ್ನ ಹೆಚ್ಚಿನ ವಿರಾಮ ಸಮಯವನ್ನು ನಾನು ಇಲ್ಲಿಯೇ ಕಳೆಯುತ್ತಿದ್ದ ಕಾರಣದಿಂದ ನಾನು ಬೆಂಗಳೂರಿಗೆ ತುಂಬಾ ಸನಿಹನಾಗಿದ್ದೇನೆ. ಆದರೆ ಕೆಲ ಮಾಧ್ಯಮಗಳಲ್ಲಿ ಬೆಂಗಳೂರು 2020 ರ ವೇಳೆಗೆ ಹೆಚ್ಚಿನ ನೀರಿನ ಸಮಸ್ಯೆ ಉಂಟಾಗುತ್ತದೆ ಎಂದು ವರದಿಯಾಗಿದೆ. ಆದ್ದರಿಂದ ನಮ್ಮ ಬೆಂಗಳೂರು ರಕ್ಷಿಸಿಕೊಳ್ಳುವುದು ನಮ್ಮ ಕರ್ತವ್ಯ. ಇದಕ್ಕಾಗಿ ನಾವು ಕಾರ್ಯಪ್ರವೃತ್ತರಾಗಬೇಕು ಎಂದರು.
ನನ್ನ ತಾಯಿ ಕನ್ನಡ ಮೂಲದವರೇ ಆಗಿರುವುದರಿಂದ ಅವರು ಕನ್ನಡ ಸುಲಭವಾಗಿ ಮಾತನಾಡುತ್ತಾರೆ. ಆದರೆ ನಾನು ಒಂದೇ ಭಾಷೆಗೆ ಅಂಟಿಕೊಂಡಿದ್ದೇನೆ. ಶಿವರಾಜ್ ಕುಮಾರ್ ಅವರು 5 ಭಾಷೆ ಮಾತನಾಡಲು ಬರುತ್ತದೆ ಎಂದು ತಿಳಿಸಿದ ವೇಳೆ ನನಗೂ ಅಷ್ಟು ಭಾಷೆ ಬರುತ್ತಿದ್ದರೆ ಚೆನ್ನಾಗಿರುತ್ತಿತ್ತು ಎನಿಸಿತು. ಆದರೆ ಮುಂದಿನ ಬಾರಿ ಬೆಂಗಳೂರಿಗೆ ಬರುವ ವೇಳೆಗೆ ಖಂಡಿತ ಉತ್ತಮವಾಗಿ ಕನ್ನಡ ಮಾತನಾಡಲು ಕಲಿತು ಬರುತ್ತೇನೆ. ಎಲ್ಲಾ ಕನ್ನಡ ಅಭಿಮಾನಿಗಳಿಗೆ ನನ್ನ ಧನ್ಯವಾದ ಎಂದು ಕನ್ನಡದಲ್ಲೇ ಹೇಳಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.
ಇದೇ ವೇಳೆ ಕನ್ನಡದಲ್ಲಿ ಸಿನಿಮಾ ಮಾಡುವ ಕುರಿತು ಉತ್ತರಿಸಿದ ವಿಜಯ್ ದೇವರಕೊಂಡ, ಕನ್ನಡ ಹಲವು ಸ್ಟಾರ್ ನಟರು ಈಗಾಗಲೇ ತೆಲುಗು, ತಮಿಳು ಸೇರಿದಂತೆ ವಿವಿಧ ರಂಗಗಳಲ್ಲಿ ಅಭಿನಯಿಸಿ ಎಲ್ಲರ ಮನ ಗೆದ್ದಿದ್ದಾರೆ. ಆಗ ನಾವು ಏಕೆ ಕನ್ನಡ ಸಿನಿಮಾಗಳಲ್ಲಿ ಮಾಡಬಾರದು ಎನಿಸಿತು. ಅದ್ದರಿಂದ ನಾನು ಮೊದಲ ಪ್ರಯತ್ನವಾಗಿ ಕನ್ನಡದ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದೇನೆ. ಈ ಜಾಹಿರಾತುಗಳಿಗೆ ನಾನೇ ಕನ್ನಡದಲ್ಲಿ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಸ್ಟಾರ್ ನಿರ್ಮಾಪಕರಾದ ರಾಕ್‍ಲೈನ್ ವೆಂಕಟೇಶ್ ಅವರ ನಿರ್ಮಾಣದಲ್ಲಿ ಸಿನಿಮಾ ಮಾಡುತ್ತಿದ್ದು, ಖಂಡಿತ ಕನ್ನಡ ಸಿನಿಮಾ ಮಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮಾತನಾಡಿ, ಕಮಲ್ ಹಾಸನ್ ಅವರ ಬಳಿಕ ನಾನು ಇಷ್ಟ ಪಟ್ಟ ನಟ ವಿಜಯ್. ನನ್ನ ಮಗಳು ಕೂಡ ವಿಜಯ್ ಅವರ ಅಭಿಮಾನಿ. ಅವರ ಕೆಲ ಸಿನಿಮಾಗಳನ್ನು ನೋಡಿದ್ದು, ತಮ್ಮದೇ ವಿಭಿನ್ನ ರೀತಿಯಲ್ಲಿ ನಟಿಸಿದ್ದಾರೆ. ಅವರ ಮುಂದಿನ `ನೋಟಾ’ ಸಿನಿಮಾ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಬೆಂಗಳೂರು: ಟಾಲಿವುಡ್ ನಟ ವಿಜಯ್ ದೇವರಕೊಂಡ ತಮ್ಮ `ಗೀತಾ ಗೋವಿಂದಂ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರೊಂದಗಿನ ಕಿಸ್ಸಿಂಗ್ ಸೀನ್ ಹಾಗೂ ರಕ್ಷಿತ್ ಬ್ರೇಕಪ್ ಬಗ್ಗೆ ಮಾತನಾಡಿದ್ದು, ರಕ್ಷಿತ್ ಹಾಗೂ ರಶ್ಮಿಕಾ ಅವರ ಲವ್ ಬ್ರೇಕಪ್ ಆಗಿದ್ದಾರೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.
ವಿಜಯ್ ದೇವರಕೊಂಡ ಅವರ ಅಪ್ ಕಮಿಂಗ್ ಸಿನಿಮಾ `ನೋಟಾ’ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ರಶ್ಮಿಕಾ ಅವರ ಕುರಿತ ಪ್ರಶ್ನೆಗೆ ಉತ್ತರಿಸಿದ ವಿಜಯ್, ಮಂದಣ್ಣ ಅವರ ಜೊತೆ ಅಭಿನಯಿಸಿರುವುದು ಖುಷಿ ತಂದಿದೆ. ಆದರೆ ಬೇರೆ ಒಬ್ಬರಿಗೆ ನೋವುಂಟು ಮಾಡುವ ವಿಚಾರಗಳಿಂದ ಮನರಂಜನೆ ಪಡೆದು ಉತ್ತಮ ಎನಿಸುವುದಿಲ್ಲ. ಅವರ ಬಗ್ಗೆ ನನಗೆ ವೈಯಕ್ತಿಕವಾಗಿ ತಿಳಿದಿದ್ದು, ಇಂತಹ ಎಷ್ಟು ನೋವು ಅನುಭವಿಸಿದ್ದಾರೆ ಎಂದು ನನಗೆ ತಿಳಿದಿದೆ. ಈ ಕುರಿತು ನಿರ್ಣಯ ಮಾಡಿಕೊಳ್ಳಲು ಅವರಿಗೆ ಮೊದಲು ಸಮಯ ನೀಡಬೇಕು ಎಂದು ತಿಳಿಸಿದರು.
ಇದೇ ವೇಳೆ ರಕ್ಷಿತ್ ಅವರ `ಅವನೇ ಶ್ರೀಮನ್ನಾರಾಯಣ’ ಸಿನಿಮಾ ಕುರಿತು ಕುತೂಹಲ ವ್ಯಕ್ತಪಡಿಸಿದ ವಿಜಯ್, ರಕ್ಷಿತ್ ವರ್ಕ್ ಅನ್ನು ನಾನು ಬಹಳ ಇಷ್ಟಪಡುತ್ತೇನೆ. ಅಲ್ಲದೇ ರಶ್ಮಿಕಾ ಹಾಗೂ ರಕ್ಷಿತ್ ಇಬ್ಬರಿಗೂ ನಾನು ತುಂಬಾ ಗೌರವ ನೀಡುತ್ತೇನೆ. ಆದರೆ ಈ ವಿಚಾರದ ಕುರಿತು ಅವರೇ ಮಾತನಾಡಿದರೆ ಉತ್ತಮ ಎಂದು ತಿಳಿಸಿದರು.
ಇದಕ್ಕೂ ಮುನ್ನ ಸುದ್ದಿಗೋಷ್ಠಿಗೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಕನ್ನಡದಲ್ಲೇ ಶುಭಕೋರಿದ ವಿಜಯ್, `ನೋಟಾ’ ಚಿತ್ರ ಇದೇ ಶುಕ್ರವಾರ ತೆರೆ ಕಾಣಲಿದೆ. ಎಲ್ಲರೂ ಸಿನಿಮಾ ವೀಕ್ಷಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಮತ್ತು ಜ್ಞಾನವೇಲು ರಾಜು ಭಾಗವಹಿಸಿದ್ದರು.
ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ತನ್ನ ಗರ್ಲ್ ಫ್ರೆಂಡ್ ಜೊತೆಯಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಜಯ್ ಅವರಿಗೆ ಗರ್ಲ್ ಫ್ರೆಂಡ್ ಇದ್ದಾರೆ ಎಂಬುದು ತಿಳಿದಿತ್ತು. ಆದರೆ ಆ ಯುವತಿ ಯಾರೂ ಎಂಬುದರ ಬಗ್ಗೆ ಖಚಿತ ಮಾಹಿತಿ ಇರಲಿಲ್ಲ. ಆದರೆ ಈಗ ವಿಜಯ್ ವಿದೇಶಿ ಹುಡುಗಿಯ ಜೊತೆಯಿರುವ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಜಯ್ ಯುವತಿ ಜೊತೆಯಿರುವ ವೈರಲ್ ಫೋಟೋಗಳು ಈಗಿನ ಫೋಟೋ ಅಲ್ಲ ಎಂದು ಹೇಳಲಾಗುತ್ತಿದೆ. ‘ಅರ್ಜುನ್ ರೆಡ್ಡಿ’ ಸಿನಿಮಾ ಬಿಡುಗಡೆಯಾಗುವ ಮೊದಲು ಈ ಫೋಟೋಗಳನ್ನು ತೆಗೆಯಲಾಗಿತ್ತು. ಆದರೆ ಈಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ವಿಜಯ್ ಆಪ್ತರು ತಿಳಿಸಿದ್ದಾರೆ.
ಸದ್ಯ ವಿಜಯ್ ಜೊತೆಯಿರುವ ಯುವತಿಯ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ ಮೂಲಗಳ ಪ್ರಕಾರ ಈ ಯುವತಿ ವಿಜಯ್ ಅವರ ಗರ್ಲ್ ಫ್ರೆಂಡ್ ಆಗಿದ್ದರು. ಆದರೆ ಈಗ ಇವರಿಬ್ಬರ ಬ್ರೇಕಪ್ ಆಗಿದೆ ಎನ್ನಲಾಗಿದೆ.
ಸದ್ಯ ‘ಗೀತಾ ಗೋವಿಂದಂ’ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ವಿಜಯ್ ಈಗ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ‘ನೋಟ’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಆದ ಬಳಿಕ ‘ಡಿಯರ್ ಕಾಮ್ರೆಡ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಬೆಂಗಳೂರು: ನಟಿ ರಶ್ಮಿಕಾ ಮತ್ತು ನಿನ್ನ ಜೋಡಿ ಸೂಪರ್ ಆಗಿರುತ್ತದೆ. ನೀವಿಬ್ಬರೂ ಮದುವೆಯಾದರೆ ಮೇಡ್ ಫಾರ್ ಈಚ್ ಅದರ್ ಜೋಡಿಯಾಗುತ್ತದೆ. ಪ್ಲೀಸ್ ವಿಜಯ್ ಅಣ್ಣಾ. ನಮ್ಮ ಮನವಿಯನ್ನು ಒಪ್ಪಿಕೋ ಎಂದು ವಿಜಯ್ ಅಭಿಮಾನಿಯೊಬ್ಬರು ಕೇಳಿಕೊಂಡಿದ್ದಾರೆ.
‘ಗೀತಾ ಗೋವಿಂದಂ’ ಚಿತ್ರ ತೆರೆ ಕಂಡು ಎರಡು ಮೂರು ವಾರಗಳಾಗಿವೆ. ಕಡಿಮೆ ದಿನಗಳಲ್ಲಿ ಈ ಚಿತ್ರ ಭರ್ಜರಿ ನೂರು ಕೋಟಿಯನ್ನು ದಾಟಿ ಮುನ್ನುಗ್ಗುತ್ತಿದೆ. ತೆಲುಗು ಮಂದಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇಬ್ಬರನ್ನು ಮೆಚ್ಚಿಕೊಂಡಿದ್ದಾರೆ. ತೆಲುಗು ಚಿತ್ರರಂಗದ ಟಾಪ್ ಹೀರೋಗಳು ರಶ್ಮಿಕಾ ಕಾಲ್‍ಶೀಟ್‍ಗೆ ಮುಗಿಬಿದ್ದಿದ್ದಾರೆ. ಸದ್ಯ ಈ ಚಿತ್ರದ ಯಶಸ್ಸನ್ನು ವಿಜಯ್ ತಮ್ಮ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರಿಗೆ ಸಲ್ಲಿಸಿದ್ದಾರೆ.
ಸಾಮಾನ್ಯವಾಗಿ ಒಂದು ಸಿನಿಮಾ ಸೂಪರ್ ಹಿಟ್ ಆದರೆ, ನೂರು ಕೋಟಿಯನ್ನು ದಾಟಿದರೆ ಎಲ್ಲಾ ಕ್ರೆಡಿಟ್ ಹೀರೋಗೆ ಸಲ್ಲುತ್ತದೆ. ಆ ಚಿತ್ರತಂಡದಿಂದ ಹಿಡಿದು ಉದ್ಯಮ ಕೂಡ ಅದನ್ನೇ ಪಾಲಿಸುತ್ತದೆ. ಆದರೆ ವಿಜಯ್ ದೇವರಕೊಂಡರಂಥ ಕೆಲವು ಹೀರೋಗಳು ಇದಕ್ಕೆ ಅಪವಾದ. ಅದಕ್ಕೇ ಗೀತಾಗೋವಿಂದಂ ನೂರು ಕೋಟಿ ಗಳಿಸಲು ಕಾರಣ ನಿರ್ದೇಶಕ ಪರಶುರಾಮ್ ಮತ್ತು ಮೈ ಲವ್ಲಿ ಪಾರ್ಟನರ್‍ಶಿಪ್ ರಶ್ಮಿಕಾ ಮಂದಣ್ಣ ಎಂದು ಹೇಳಿದ್ದಾರೆ.
ಸದ್ಯ ಈಗ ಅಭಿಮಾನಿಗಳೆಲ್ಲರೂ ವಿಜಯ್ ಹಾಗೂ ರಶ್ಮಿಕಾ ಅವರ ಅಭಿನಯಕ್ಕೆ ಫಿದಾ ಆಗಿದ್ದಾರೆ. ಅಲ್ಲದೇ ಇಬ್ಬರ ಜೋಡಿ ಇಷ್ಟಪಟ್ಟು ವಿಜಯ್ ನೀನು ರಶ್ಮಿಕಾರನ್ನೇ ಮದುವೆಯಾಗು ಎಂದು ವಿಜಯ್ ಅಭಿಮಾನಿಗಳು ಹೊಸ ಚಳುವಳಿ ಶುರು ಮಾಡಿದ್ದಾರೆ. ರಶ್ಮಿಕಾ ಮತ್ತು ನಿನ್ನ ಜೋಡಿ ಸೂಪರ್ ಆಗಿರುತ್ತದೆ. ನೀವಿಬ್ಬರೂ ಮದುವೆಯಾದರೆ ಮೇಡ್ ಫಾರ್ ಈಚ್ ಅದರ್ ಜೋಡಿಯಾಗುತ್ತದೆ. ಪ್ಲೀಸ್ ಒಪ್ಪಿಕೊಳ್ಳಿ ಅಣ್ಣ ಎಂದು ವಿಜಯ್ ಅಭಿಮಾನಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ ಹಾಗೂ ತೆಲುಗಿ ವಿಜಯ್ ದೇವರಕೊಂಡ ಅಭಿನಯದ `ಗೀತಾ ಗೋವಿಂದ’ ಸಿನಿಮಾ ಬಿಡುಗಡೆಗೊಂಡಿದ್ದು, ಕರ್ನಾಟಕ ಸೇರಿದಂತೆ ಎಲ್ಲ ಕಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
ಈ ಸಿನಿಮಾ ಬಿಡುಗಡೆಯಾಗುವ ಮೊದಲೆ ಟ್ರೇಲರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡಿತ್ತು. ಅಷ್ಟೆ ಅಲ್ಲದೇ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ನಡುವಿನ ಕೆಮಿಷ್ಟ್ರಿಯ ಬಗ್ಗೆ ಭಾರೀ ಚರ್ಚೆಯಾಗಿತ್ತು. ಸದ್ಯಕ್ಕೆ ಈ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸುಮಾರು 12 ದಿನಗಳಲ್ಲಿ 100 ಕೋಟಿ ಗಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಯಶಸ್ಸಿನ ಖುಷಿಯಲ್ಲಿರುವ ಅಜಯ್ ದೇವರಕೊಂಡ ಅವರು ತಮ್ಮ ಈ ಸಂತಸದ ಸುದ್ದಿಯನ್ನ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಈ ಯಶಸ್ಸನ್ನ ಸಿನಿಮಾದಲ್ಲಿ ತಮಗೆ ಸಾಥ್ ನೀಡಿದ್ದ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಅರ್ಪಿಸಿದ್ದಾರೆ.
“ನನ್ನ ಮೊದಲ 100 ಕೋಟಿಯನ್ನ ನನ್ನ ಕೋಚಿಂಗ್ ಸಿಬ್ಬಂದಿ, ಗೀತಾ ಆರ್ಟ್ಸ್, ನನ್ನ ಕ್ಯಾಪ್ಟನ್ ಬುಜ್ಜಿ, ನನ್ನ ಲವ್ಲಿ ಪಾಟ್ನರ್ ರಶ್ಮಿಕಾ ಮಂದಣ್ಣ ಅವರಿಗೆ ಅರ್ಪಿಸಲು ಇಷ್ಟಪಡುತ್ತೇನೆ. ಜೊತೆಗೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಕನ್ನಡ ಜನತೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದು ವಿಜಯ್ ದೇವರಕೊಂಡ ಅವರು ಟ್ವೀಟ್ ಮಾಡಿದ್ದಾರೆ.
The boys played well.
I would like to dedicate my first century to my coaching staff – Geetha Arts, my captain Bujji and @iamRashmika for the lovely partnership. And the amazing crowd :)) The Telugu crowd, The Tamil crowd, The Kannada crowd and The Malayali crowd. Amazing! pic.twitter.com/6cZGEJUQdJ
ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ತೆಲುಗಿನಲ್ಲಿ ಒಂದು ಸಿನಿಮಾ ಮಾಡಿದ್ದು, ಇದು ಅವರ ಎರಡನೇ ಸಿನಿಮಾವಾಗಿದೆ. ಈ ಹಿಂದೆ `ಚಲೋ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈಗ ಮತ್ತೊಂದು ತೆಲುಗು ಸಿನಿಮಾ ಮಾಡುತ್ತಿದ್ದು, ಈ ಸಿನಿಮಾದಲ್ಲೂ ಕೂಡ ವಿಜಯ ದೇವರಕೊಂಡ ನಾಯಯಕರಾಗಿದ್ದಾರೆ. ಸದ್ಯಕ್ಕೆ ಕನ್ನಡದಲ್ಲಿ ನಟ ದರ್ಶನ್ ಅಭಿನಯದ `ಯಜಮಾನ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಬೆಂಗಳೂರು: ಕನ್ನಡದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ತೆಲುಗಿನ `ಗೀತಾ ಗೋವಿಂದಂ’ ಸಿನಿಮಾದ ಟೀಸರ್ ಬಿಡುಗಡೆಗೊಂಡು ಸಖತ್ ಸದ್ದು ಮಾಡಿತ್ತು. ಇದರ ಬೆನ್ನಲ್ಲೆ ಅದೇ ಸಿನಿಮಾದ ಕಿಸ್ಸಿಂಗ್ ದೃಶ್ಯವೊಂದು ಲೀಕ್ ಆಗಿದೆ.
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರಿಬ್ಬರ ಫೋಟೋ ಇವರು ಡಾರ್ಕ್ ಎಂಬ ಹೆಸರಿನ ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ರಶ್ಮಿಕಾ ಮತ್ತು ವಿಜಯ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು, ಈ ವೇಳೆ ರಶ್ಮಿಕಾ ವಿಜಯ್ ಅವರ ತೊಡೆ ಮೇಲೆ ಕುಳಿತು ಅವರಿಗೆ ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ. ಈ ದೃಶ್ಯ ಕೇವಲ 26 ಸೆಕೆಂಡ್ ಗಳಿದ್ದು, ಸಖತ್ ವೈರಲ್ ಆಗಿದೆ.
`ಗೀತಾ ಗೋವಿಂದಂ’ ಸಿನಿಮಾ ಟೀಸರ್ ಮೂಲಕ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಟೀಸರ್ ನಲ್ಲಿ ರಶ್ಮಿಕಾ ಮಂದಣ್ಣ ಅವರು ತೆಲುಗಿನಲ್ಲಿ ನಟ ವಿಜಯ್ ದೇವರಕೊಂಡ ಅವರ ರೊಮ್ಯಾಂಟಿಕ್ ದೃಶ್ಯಗಳು ಅಧಿಕವಾಗಿದ್ದವು. ಇದನ್ನು ನೋಡಿದ ಅಭಿಮಾನಿಗಳು ರಶ್ಮಿಕಾ ಅವರ ವಿರುದ್ಧವಾಗಿ ಕಮೆಂಟ್ ಮಾಡುತ್ತಿದ್ದರು. ಈಗ ಇದೆ ಬೆನ್ನಲ್ಲೆ ಅವರಿಬ್ಬರ ಕಿಸ್ಸಿಂಗ್ ದೃಶ್ಯವೊಂದು ಲೀಕ್ ಆಗಿದೆ.
ಜುಲೈ 19ರಂದು ರಶ್ಮಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಗೀತಾ ಗೋವಿಂದಂ ಚಿತ್ರದ ಪೋಸ್ಟರ್ ಪೋಸ್ಟ್ ಮಾಡಿದ್ದರು. ನಟ ವಿಜಯ್ ದೇವರಕೊಂಡ ರಶ್ಮಿಕಾರನ್ನು ತನ್ನ ಬೆನ್ನ ಮೇಲೆ ಎತ್ತಿಕೊಂಡಿರುವ ಪೋಸ್ಟರ್ ನೋಡಿ ಅಭಿಮಾನಿಗಳು ರಶ್ಮಿಕಾರನ್ನು ಟ್ರೋಲ್ ಮಾಡಲು ಶುರು ಮಾಡಿದ್ದರು. ರಶ್ಮಿಕಾ ನಿಮಗೆ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಆಗಿದೆ. ನೀವು ಈ ರೀತಿಯ ಸಿನಿಮಾ ಮಾಡಿ ರಕ್ಷಿತ್ ಅವರ ಹೆಸರನ್ನು ಹಾಳು ಮಾಡಬಾರದು. ನೀವು ಈ ರೀತಿಯ ಸಿನಿಮಾ ಮಾಡಿದರೆ ರಕ್ಷಿತ್ ಶೆಟ್ಟಿ ಅವರ ಮರ್ಯಾದೆ ಹೋಗುತ್ತದೆ ಎಂದು ನೆಗೆಟೀವ್ ಕಮೆಂಟ್ ಮಾಡಿದ್ದರು.
`ಗೀತಾ ಗೋವಿಂದಂ’ ಟೀಸರ್ ಬಿಡುಗಡೆಯಾದ 7 ಗಂಟೆಯಲ್ಲಿ 14 ಲಕ್ಷ ವ್ಯೂ ಆಗಿತ್ತು. ನಂ.1 ಟ್ರೆಂಡಿಂಗ್ ನಲ್ಲಿತ್ತು. ಕನ್ನಡದ ವರನಟ ರಾಜ್ ಕುಮಾರ್ ಅವರ ಎಂದೆಂದೂ ನಿನ್ನನು ಮರೆತು ನಾನಿರಲಾರೆ ಹಾಡಿನ ತೆಲುಗು ಟ್ಯೂನ್ ನೊಂದಿಗೆ ಟೀಸರ್ ಆರಂಭವಾಗುತ್ತದೆ.
ಚಿತ್ರ ಪರಶುರಾಮ್ ನಿರ್ದೇಶನದಲ್ಲಿ ಮೂಡಿಬಂದಿದ್ದು, ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ಟೀಸರ್ ಮೂಲಕವೇ ಸಿನಿಮಾ ಸೂಪರ್ ಹಿಟ್ ಆಗುವ ಭರವಸೆ ಮೂಡಿಸಿದ್ದು, ಚಿತ್ರದ ಆಡಿಯೋ ಜುಲೈ 29ರಂದು ರಿಲೀಸ್ ಆಗಲಿದೆ.