Tag: ವಿಜಯ್ ದೇವರಕೊಂಡ

  • ಡಿಯರ್ ಕಾಮ್ರೆಡ್ ಚಿತ್ರದ ಟ್ರೈಲರ್‌ನಲ್ಲೂ ವಿಜಯ್, ರಶ್ಮಿಕಾ ಲಿಪ್‍ಲಾಕ್

    ಡಿಯರ್ ಕಾಮ್ರೆಡ್ ಚಿತ್ರದ ಟ್ರೈಲರ್‌ನಲ್ಲೂ ವಿಜಯ್, ರಶ್ಮಿಕಾ ಲಿಪ್‍ಲಾಕ್

    ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ನಟ ವಿಜಯ್ ದೇವರಕೊಂಡ ನಟಿಸಿದ ‘ಡಿಯರ್ ಕಾಮ್ರೆಡ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಹಿಂದೆ ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿ ರಶ್ಮಿಕಾ ಕಿಸ್ಸಿಂಗ್ ಸೀನ್‍ನಲ್ಲಿ ನಟಿಸಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಇಬ್ಬರು ಲಿಪ್‍ಲಾಕ್ ಸೀನ್‍ನಲ್ಲಿ ನಟಿಸಿದ್ದಾರೆ.

    ವಿಜಯ ದೇವರಕೊಂಡ ಈ ಚಿತ್ರದಲ್ಲಿ ವಿದ್ಯಾರ್ಥಿಯ ಪಾತ್ರದಲ್ಲಿ ನಟಿಸಿದ್ದರೆ, ರಶ್ಮಿಕಾ ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಮಾಸ್ ಹಾಗೂ ಲವ್ವರ್ ಬಾಯ್ ಪಾತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಹಾಗೂ ರಶ್ಮಿಕಾ ಅವರ ಕ್ಯೂಟ್ ಲವ್ ಸ್ಟೋರಿಯನ್ನು ಡಿಯರ್ ಕಾಮ್ರೆಡ್ ಹೊಂದಿದೆ.

    ಈ ಹಿಂದೆ ಟ್ರೈಲರ್‌ನಲ್ಲಿ ವಿಜಯ್ ಹಾಗೂ ರಶ್ಮಿಕಾ ಲಿಪ್‍ಲಾಕ್ ಸೀನ್‍ನಲ್ಲಿ ನಟಿಸಿದ್ದರು. ಟೀಸರ್ ನೋಡಿ ಹಲವು ಜನರು ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಕ್ಕೆ ರಶ್ಮಿಕಾ ಹಾಗೂ ವಿಜಯ್ ಅವರನ್ನು ಟ್ರೋಲ್ ಮಾಡಿದ್ದರು. ಹೀಗಿದ್ದರೂ ಸಹ ಟ್ರೈಲರ್‌ನಲ್ಲಿ ಈಗ ಇಬ್ಬರು ಒಟ್ಟು ಮೂರು ಕಿಸ್ಸಿಂಗ್ ದೃಶ್ಯಗಳಿವೆ.

    ರಶ್ಮಿಕಾ ಹಾಗೂ ವಿಜಯ್ ತಮ್ಮ ಪ್ರೀತಿಗಾಗಿ ಹೇಗೆ ಹೋರಾಡುತ್ತಾರೆ ಎಂಬುದು ಚಿತ್ರದ ಟ್ರೈಲರ್‌ನಲ್ಲಿ ತೋರಿಸಲಾಗಿದೆ. ಟ್ರೈಲರ್‌ನಲ್ಲಿ ಎಮೋಶನಲ್, ಆ್ಯಕ್ಷನ್, ಕಾಮಿಡಿ, ರೊಮ್ಯಾನ್ಸ್ ಎಲ್ಲವೂ ತುಂಬಿದ್ದು, ಇದೇ ತಿಂಗಳು 26ರಂದು ಬಿಡುಗಡೆ ಆಗಲಿದೆ. ಈ ಚಿತ್ರ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯಲ್ಲಿ ತೆರೆ ಕಾಣಲಿದೆ.

    ಭರತ್ ಕಾಮಾ ನಿದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ನವೀನ್ ಯೆರನೆನಿ, ವೈ. ರವಿಶಂಕರ್, ಮೋಹನ್ ಮತ್ತು ಯಶ್ ರಂಗಿನೇನಿ ಜಂಟಿಯಾಗಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಜಸ್ಟಿನ್ ಪ್ರಭಾಕರನ್ ಅವರ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿದ್ದು, ಟ್ರೈಲರ್ ಲಹರಿ ಮ್ಯೂಸಿಕ್ ಯೂಟ್ಯೂಬ್ ಖಾತೆಯಲ್ಲಿ ನೋಡಬಹುದು.

  • ಡಿಯರ್ ಕಾಮ್ರೆಡ್ ಚಿತ್ರದ ರೊಮ್ಯಾಂಟಿಕ್, ಮೆಲೋಡಿ ಹಾಡು ರಿಲೀಸ್

    ಡಿಯರ್ ಕಾಮ್ರೆಡ್ ಚಿತ್ರದ ರೊಮ್ಯಾಂಟಿಕ್, ಮೆಲೋಡಿ ಹಾಡು ರಿಲೀಸ್

    ಬೆಂಗಳೂರು: ಟಾಲಿವುಡ್ ಯಂಗ್ ಆ್ಯಂಡ್ ಎನರ್ಜಿಟಿಕ್ ವಿಜಯ್ ದೇವರಕೊಂಡ ಮತ್ತು ಕನ್ನಡದ ಚೆಲುವೆ ರಶ್ಮಿಕಾ ಮಂದಣ್ಣ ಅಭಿನಯದ ಡಿಯರ್ ಕಾಮ್ರೆಡ್ ಸಿನಿಮಾದ ಲಿರಿಕಲ್ ಹಾಡು ಬಿಡುಗಡೆಯಾಗಿದೆ.

    ‘ಕಡಲಂತೆ ಕಾದ ಕಣ್ಣು, ನದಿಯಂತೆ ಓಡುವ ಕನಸು’ ಎಂಬ ಸುಂದರ ಸಾಲುಗಳಿಂದ ಕೂಡಿದ ರೊಮ್ಯಾಂಟಿಕ್ ಮೆಲೋಡಿ ಸಾಂಗ್ ಕೇಳುಗರ ಹತ್ತಿರವಾಗುತ್ತಿದೆ. ಹಾಡಿನಲ್ಲಿ ರಶ್ಮಿಕಾ-ವಿಜಯ್ ಕೆಮಿಸ್ಟ್ರಿ ವರ್ಕೌಟ್ ಆಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಧನಂಜಯ್ ರಂಜನ್ ಲೇಖನಿಯಲ್ಲಿ ಹಾಡು ರಚಿತವಾಗಿದ್ದು, ಸಿದ್ ಶ್ರೀರಾಮ ಮತ್ತು ಐಶ್ವರ್ಯ ರವಿಚಂದ್ರನ್ ಕಂಠದಲ್ಲಿ ಹಾಡು ಮೂಡಿ ಬಂದಿದೆ.

    ಭರತ್ ಕಾಮಾ ನಿರ್ದೇಶನದ ಡಿಯರ್ ಕಾಮ್ರೆಡ್ ಮೈತ್ರಿ ಮೂವಿ ಮೇಕರ್ಸ್ ಮತ್ತು ಬಿಗ್‍ಬೆನ್ ನಿರ್ಮಾಣದಲ್ಲಿ ಬಂದಿದೆ. ಚಿತ್ರದ ಟೀಸರ್ ನಲ್ಲಿ ರಶ್ಮಿಕಾ ಮತ್ತು ವಿಜಯ್ ಕಿಸ್ಸಿಂಗ್ ಸೀನ್ ನಿಂದಲೇ ಸಾಕಷ್ಟು ಸುದ್ದಿಯಾಗಿತ್ತು. ಕನ್ನಡ, ತಮಿಳು, ತೆಲಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಯ ಮೇಲೆ ಬರಲಿದೆ. ಗೀತಾ ಗೋವಿಂದಂ ಬಳಿಕ ಮತ್ತೊಮ್ಮೆ ಬಾಬಿ ಮತ್ತು ಲಿಲ್ಲಿ ಪಾತ್ರದಲ್ಲಿ ವಿಜಯ್-ರಶ್ಮಿಕಾ ಜೋಡಿ ಮಿಂಚಲು ಸಿದ್ಧಗೊಂಡಿದೆ. ಡಿಯರ್ ಕಾಮ್ರೆಡ್ ಚಿತ್ರದ ಲಿರಿಕಲ್ ಹಾಡನ್ನು ಲಹರಿ ಯೂ ಟ್ಯೂಬ್ ಖಾತೆಯಲ್ಲಿ ನೋಡಬಹುದಾಗಿದೆ.

    https://www.youtube.com/watch?v=pQvNsiLJXpE

  • ಬಾಬಿ ವಿಜಯ್‍ಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ರಶ್ಮಿಕಾ

    ಬಾಬಿ ವಿಜಯ್‍ಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ರಶ್ಮಿಕಾ

    ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ತೆಲುಗು ನಟ ವಿಜಯ್ ದೇವರಕೊಂಡ ಅವರಿಗೆ ಡಿಯರ್ ಬಾಬಿ ಎಂದು ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದರು. ಇದೀಗ ವಿಜಯ್ ಅವರಿಗೆ ಬರ್ತ್ ಡೇಗೆ ಸರ್ಪ್ರೈಸ್ ಉಡುಗೊರೆ ಕೊಟ್ಟಿದ್ದಾರೆ.

    ನಟ ವಿಜಯ್ ದೇವರಕೊಂಡ ‘ಡಿಯರ್ ಕಾಮ್ರೇಡ್’ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ಅವರ ಹುಟ್ಟುಹಬ್ಬವನ್ನು ಚಿತ್ರತಂಡ ಶೂಟಿಂಗ್ ಸೆಟ್‍ನಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಿದೆ. ಚಿತ್ರತಂಡದ ಜೊತೆಗೆ ರಶ್ಮಿಕಾ ಕೂಡ ಭಾಗಿಯಾಗಿದ್ದು, ಕೇಕ್ ಕತ್ತರಿಸುವ ಮೂಲಕ ವಿಜಯ್‍ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ವಿಶೇಷವಾಗಿ ರಶ್ಮಿಕಾ ವಿಜಯ್‍ಗೆ ಕೇಕ್ ತಿನ್ನಿಸಿ ಸಂಭ್ರಮಿಸಿದ್ದರು.

    ಇದೇ ವೇಳೆ ನಟಿ ರಶ್ಮಿಕಾ ವಿಜಯ್ ಅವರಿಗೆ ಬ್ರಾಸ್ಲೆಟ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ರಶ್ಮಿಕಾ ಕೊಟ್ಟ ಗಿಫ್ಟ್ ಅನ್ನು ಶೂಟಿಂಗ್ ಸೆಟ್‍ನಲ್ಲಿಯೇ ವಿಜಯ್ ಓಪನ್ ಮಾಡಿದ್ದಾರೆ. ಬಳಿಕ ಮೊದಲು ಆ ಬ್ರಾಸ್ಲೆಟ್ ಅನ್ನು ಮೊದಲು ರಶ್ಮಿಕಾ ಕೈಗೆ ಹಾಕಿ ನಂತರ ತಮ್ಮ ಕೈಗೆ ಹಾಕಿಕೊಂಡಿದ್ದಾರೆ.

    ನಟಿ ರಶ್ಮಿಕಾ ಅವರು ಟ್ವೀಟ್ ಮಾಡುವ ಮೂಲಕ ವಿಜಯ್ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದರು. `ಡಿಯರ್ ಬಾಬಿ ಹ್ಯಾಪಿಯೆಸ್ಟ್ ಬರ್ತ್ ಡೇ ಟು ಯೂ’ ಎಂದು ಬರೆದು ಅವರ ಫೋಟೋವನ್ನು ಪೋಸ್ಟ್ ಮಾಡಿದ್ದರು. `ಡಿಯರ್ ಕಾಮ್ರೇಡ್’ ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಯಲ್ಲಿ ಜುಲೈ 26ರಂದು ಬಿಡುಗಡೆಯಾಗುತ್ತಿದೆ. ಈ ಜೋಡಿ `ಗೀತಾ ಗೋವಿಂದಂ’ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿತ್ತು.

    https://www.instagram.com/p/BxR4EvAgqK4/

  • ಡಿಯರ್ ಬಾಬಿ ಎಂದು ವಿಜಯ್‍ಗೆ ರಶ್ಮಿಕಾ ವಿಶ್

    ಡಿಯರ್ ಬಾಬಿ ಎಂದು ವಿಜಯ್‍ಗೆ ರಶ್ಮಿಕಾ ವಿಶ್

    ಬೆಂಗಳೂರು: ಇಂದು ತೆಲುಗು ನಟ ವಿಜಯ್ ದೇವರಕೊಂಡ ಅವರ ಹುಟ್ಟುಹುಬ್ಬ. ಈ ಹಿನ್ನೆಲೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಡಿಯರ್ ಬಾಬಿ ಎಂದು ಕರೆಯುವ ಮೂಲಕ ಶುಭಾಶಯ ತಿಳಿಸಿದ್ದಾರೆ.

    ನಟಿ ರಶ್ಮಿಕಾ ಅವರು ಟ್ವೀಟ್ ಮಾಡುವ ಮೂಲಕ ವಿಜಯ್ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. “ಡಿಯರ್ ಬಾಬಿ ಹ್ಯಾಪಿಯೆಸ್ಟ್ ಬರ್ತ್ ಡೇ ಟು ಯೂ” ಎಂದು ಬರೆದು ಅವರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

    ಈ ಹಿಂದೆ ರಶ್ಮಿಕಾ ಹುಟ್ಟುಹಬ್ಬಕ್ಕೂ ವಿಜಯ್ ದೇವರಕೊಂಡ ಸ್ಪೆಷಲ್ ಆಗಿ ವಿಶ್ ಮಾಡಿದ್ದರು. ಈಗ ಅವರ ಬರ್ತ್ ಡೇಗೆ ರಶ್ಮಿಕಾ ಶುಭ ಕೋರಿದ್ದಾರೆ. ಅಸಲಿಗೆ ಇವರಿಬ್ಬರು ಅಭಿನಯಿಸುತ್ತಿರುವ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ಬರುವ ಪಾತ್ರಗಳ ಹೆಸರಾಗಿದೆ. ಅಂದರೆ ಚಿತ್ರದಲ್ಲಿ ದೇವರಕೊಂಡ ಬಾಬಿ ಎಂದು ಹಾಗೂ ರಶ್ಮಿಕಾ ಲಿಲ್ಲಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.

    ‘ಡಿಯರ್ ಕಾಮ್ರೇಡ್’ ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಯಲ್ಲಿ ಜುಲೈ 26ರಂದು ಬಿಡುಗಡೆಯಾಗುತ್ತಿದೆ. ಈ ಜೋಡಿ ‘ಗೀತಾ ಗೋವಿಂದಂ’ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿತ್ತು. ವಿಜಯ್ ದೇವರಕೊಂಡ ‘ನುವ್ವಿಲಾ’ ಸಿನಿಮಾದ ಮೂಲಕ ಸಿನಿರಂಗ ಪ್ರವೇಶ ಮಾಡಿದ್ದರು. ನಂತರ ‘ಪೆಳ್ಳಿ ಚೂಪುಲು’ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದರು.

  • ವಿಶೇಷ ವಿಡಿಯೋ ಹಾಕಿ ‘ಲಿಲ್ಲಿ’ಗೆ ವಿಜಯ್ ವಿಶ್

    ವಿಶೇಷ ವಿಡಿಯೋ ಹಾಕಿ ‘ಲಿಲ್ಲಿ’ಗೆ ವಿಜಯ್ ವಿಶ್

    ಹೈದರಾಬಾದ್: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಇಂದು ತಮ್ಮ 23ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ನಟ ವಿಜಯ್ ದೇವರಕೊಂಡ ತಮ್ಮ ಸ್ನೇಹಿತೆಯ ಹುಟ್ಟುಹಬ್ಬಕ್ಕೆ ವಿಚಿತ್ರವಾಗಿ ವಿಶ್ ಮಾಡಿದ್ದಾರೆ.

    ವಿಜಯ ದೇವರಕೊಂಡ ತಮ್ಮ ‘ಡಿಯರ್ ಕಾಮ್ರೆಡ್’ ಚಿತ್ರದ ಟೀಸರ್ ಹಾಸ್ಯವನ್ನಾಗಿ ಪರಿವರ್ತಿಸಿ ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಅವರು “ಹುಟ್ಟುಹಬ್ಬದ ಶುಭಾಶಯಗಳು ಲಿಲ್ಲಿ” ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಲಿಲ್ಲಿ ಎಂಬುದು ಡಿಯರ್ ಕಾಮ್ರೆಡ್‍ನಲ್ಲಿ ರಶ್ಮಿಕಾ ಪಾತ್ರದ ಹೆಸರು.

    https://twitter.com/TheDeverakonda/status/1114008336834293760

    ವಿಜಯ್ ತಮ್ಮ ಮತ್ತೊಂದು ಟ್ವೀಟ್‍ನಲ್ಲಿ, “ಪ್ರೀತಿಯ ಲಿಲ್ಲಿ. ನಾವು ಸುಮ್ಮನೆ ತಮಾಷೆ ಮಾಡುದ್ದೇವೆ. ನಮ್ಮ ಮೇಲೆ ಬೇಸರ ಮಾಡಿಕೊಳ್ಳಬೇಡ. ಇಡೀ ಚಿತ್ರತಂಡಕ್ಕೆ ನೀನು ಸಂಭ್ರಮ. ನೀನು ನಿನ್ನ ಅಭಿನಯದಿಂದ ನಮ್ಮನ್ನು ಅಳಿಸಿದ್ದೀಯಾ ಹಾಗೂ ಇಡೀ ದಿನ ನಮ್ಮನ್ನು ನಗಿಸಿದ್ದೀಯಾ. ಈ ತಿಂಗಳ 8ರಂದು ಬೆಳಗ್ಗೆ 11.11ಕ್ಕೆ ಚಿತ್ರದ ಮೊದಲ ಹಾಡನ್ನು ನಿನಗೆ ಡೆಡಿಕೇಟ್ ಮಾಡುತ್ತೇವೆ” ಎಂದು ಡಿಯರ್ ಕಾಮ್ರೆಡ್ ಚಿತ್ರದ ರಶ್ಮಿಕಾ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.

    ಡಿಯರ್ ಕಾಮ್ರೆಡ್ ಚಿತ್ರ ಭರತ್ ಕಾಮಾ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ನವೀನ್ ಯೆರನೆನಿ, ವೈ.ರವಿಶಂಕರ್, ಮೋಹನ್ ಮತ್ತು ಯಶ್ ರಂಗಿನೇನಿ ಜಂಟಿಯಾಗಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಜಸ್ಟಿನ್ ಪ್ರಭಾಕರನ್ ಅವರ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿದ್ದು, ಟೀಸರ್ ಲಹರಿ ಮ್ಯೂಸಿಕ್ ಯೂಟ್ಯೂಬ್ ಖಾತೆಯಲ್ಲಿ ನೋಡಬಹುದು. ಈ ಚಿತ್ರದ ಮೇ 31ರಂದು ಬಿಡುಗಡೆ ಆಗಲಿದೆ.

  • ಕಿಸ್ಸಿಂಗ್ ಸೀನ್ ಟಾರ್ಗೆಟ್ ಮಾಡಿದ್ದಕ್ಕೆ ನಟ ವಿಜಯ್ ಬೇಸರ

    ಕಿಸ್ಸಿಂಗ್ ಸೀನ್ ಟಾರ್ಗೆಟ್ ಮಾಡಿದ್ದಕ್ಕೆ ನಟ ವಿಜಯ್ ಬೇಸರ

    ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ನಟಿಸಿದ ‘ಡಿಯರ್ ಕಾಮ್ರೆಡ್’ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಟ್ರೈಲರ್ ನೋಡಿದ್ದ ಅಭಿಮಾನಿಗಳು ಕಿಸ್ಸಿಂಗ್ ಸೀನ್ ಟಾರ್ಗೆಟ್ ಮಾಡಿದ್ದು, ಇದರಿಂದ ವಿಜಯ್ ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ವಿಜಯ್, ನಾನು ಅಭಿಮಾನಿಗಳಿಂದ ಈ ರೀತಿಯ ಮಾತುಗಳು ನಿರೀಕ್ಷೆ ಮಾಡಿರಲಿಲ್ಲ. ಈ ದೇಶದಲ್ಲಿ ಚರ್ಚೆ ಮಾಡುವ ವಿಷಯ ಸಾಕಷ್ಟು ಇದೆ. ಅದನ್ನು ಬಿಟ್ಟು ಕಿಸ್ಸಿಂಗ್ ಸೀನ್ ಬಗ್ಗೆಯೇ ಚರ್ಚೆ ಮಾಡುವುದು ಸರಿಯಲ್ಲ. ಈ ಹಿಂದೆ ‘ಗೀತಾ ಗೋವಿಂದಂ’ ಚಿತ್ರದ ಕಿಸ್ಸಿಂಗ್ ಸೀನ್ ಕೂಡ ವೈರಲ್ ಆಗಿತ್ತು. ಆಗ ಚಿತ್ರದಿಂದ ಆ ಸೀನ್ ತೆಗೆಯಲಾಗಿತ್ತು. ಈಗ ಮತ್ತೆ ಡಿಯರ್ ಕಾಮ್ರೆಡ್ ಚಿತ್ರದ ಕಿಸ್ಸಿಂಗ್ ಸೀನ್ ಬಗ್ಗೆ ಮಾತನಾಡುತ್ತಿದ್ದೀರಿ. ಈ ಚರ್ಚೆ ಮುಗಿಯುವುದಿಲ್ಲ ಎಂದು ಅನಿಸುತ್ತದೆ ಎಂದರು.

    ಸದ್ಯ ವಿಜಯ್ `ಅರ್ಜುನ್ ರೆಡ್ಡಿ’ ಚಿತ್ರದಿಂದ ಎಲ್ಲ ಚಿತ್ರದಲ್ಲಿ ಲಿಪ್‍ಲಾಕ್ ಸೀನ್ ಮಾಡುತ್ತಿದ್ದಾರೆ. ಹಾಗಾಗಿ ಜನರು ವಿಜಯ್ ಅವರನ್ನು ಟಾಲಿವುಡ್ ಇಮ್ರಾನ್ ಹಶ್ಮಿ ಆಗಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

    ಇತ್ತೀಚೆಗೆ ಚಿತ್ರದ ನಟಿ ರಶ್ಮಿಕಾ ಮಂದಣ್ಣ ಕೂಡ ಟ್ರೋಲ್‍ಗಳಿಗೆ ಪ್ರತಿಕ್ರಿಯಿಸಿದ್ದರು. “ಈ ಚಿತ್ರದಲ್ಲಿ ಈ ಸೀನ್ ಬೇಕೇಬೇಕು ಎಂದು ಹೇಳಿದ್ದರು. ಹಾಗಾಗಿ ನಾನು ನನ್ನ ಪಾತ್ರಕ್ಕೆ ನ್ಯಾಯ ಒದಗಿಸಲು ಕಿಸ್ಸಿಂಗ್ ಸೀನ್ ಮಾಡಿದೆ. ಲಿಪ್‍ಲಾಕ್ ಸೀನ್ ನೋಡಿ ಯಾವುದೇ ಸಿನಿಮಾದ ಬಗ್ಗೆ ನಿರ್ಧರಿಸಬಾರದು. ಜನರು `ಗೀತಾ ಗೋವಿಂದಂ’ ಚಿತ್ರವನ್ನು ನೋಡಿ ಮೆಚ್ಚಿದ್ದಾರೆ. ಈ ಸಿನಿಮಾವನ್ನು ಕೂಡ ಮೆಚ್ಚಿಕೊಳ್ಳುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

    ಡಿಯರ್ ಕಾಮ್ರೆಡ್ ಚಿತ್ರ ಭರತ್ ಕಾಮಾ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ನವೀನ್ ಯೆರನೆನಿ, ವೈ.ರವಿಶಂಕರ್, ಮೋಹನ್ ಮತ್ತು ಯಶ್ ರಂಗಿನೇನಿ ಜಂಟಿಯಾಗಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಜಸ್ಟಿನ್ ಪ್ರಭಾಕರನ್ ಅವರ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿದ್ದು, ಟೀಸರ್ ಲಹರಿ ಮ್ಯೂಸಿಕ್ ಯೂಟ್ಯೂಬ್ ಖಾತೆಯಲ್ಲಿ ನೋಡಬಹುದು.

    https://www.youtube.com/watch?v=z9uAL7o5jq0

  • ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಲಿಪ್‍ಲಾಕ್- ಡಿಯರ್ ಕಾಮ್ರೆಡ್ ಟೀಸರ್ ನಲ್ಲಿ ರಶ್ಮಿಕಾ ಫುಲ್ ಬೋಲ್ಡ್

    ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಲಿಪ್‍ಲಾಕ್- ಡಿಯರ್ ಕಾಮ್ರೆಡ್ ಟೀಸರ್ ನಲ್ಲಿ ರಶ್ಮಿಕಾ ಫುಲ್ ಬೋಲ್ಡ್

    ಬೆಂಗಳೂರು: ವಿಜಯ್ ದೇವರಕೊಂಡ ಮತ್ತು ಕನ್ನಡದ ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ ಅಭಿನಯದ ಡಿಯರ್ ಕಾಮ್ರೆಡ್ ಚಿತ್ರದ ಕನ್ನಡ ಟೀಸರ್ ರಿಲೀಸ್ ಆಗಿದೆ. ಟೀಸರ್ 1 ನಿಮಿಷ 7 ಸೆಕೆಂಡ್ ಅವಧಿಯ ಟೀಸರ್ ಇದಾಗಿದ್ದು, ರಶ್ಮಿಕಾ ಫುಲ್ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆಯನ್ನು ಕೆಡಿಸಿದ್ದಾರೆ.

    ಎಂದಿನಂತೆ ಟೀಸರ್ ನಲ್ಲಿ ಮಾಸ್ ಆ್ಯಂಡ್ ರೊಮ್ಯಾಂಟಿಕ್ ಎರಡು ಶೇಡ್ ಗಳಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ರಶ್ಮಿಕಾ ಮತ್ತು ವಿಜಯ್ ನಟಿಸಿದ್ದ ‘ಗೀತಾ ಗೋವಿಂದಂ’ ಸೂಪರ್ ಹಿಟ್ ಆಗಿತ್ತು. ಗೀತಾ ಗೋವಿಂದಂ ಸಿನಿಮಾದ ಕಿಸ್ಸಿಂಗ್ ಸೀನ್ ಕ್ಲಿಪ್ ಚಿತ್ರ ಬಿಡುಗಡೆ ಮುನ್ನವೇ ಲೀಕ್ ಆಗಿತ್ತು. ಆದ್ರೆ ಸಿನಿಮಾದಲ್ಲಿ ಚುಂಬನ ದೃಶ್ಯ ಕ್ಕೆ ಕತ್ತರಿ ಹಾಕಲಾಗಿತ್ತು. ಇದೀಗ ಟೀಸರ್ ನಲ್ಲಿ ಚುಂಬನ ದೃಶ್ಯವನ್ನು ‘ಡಿಯರ್ ಕಾಮ್ರೆಡ್’ ಚಿತ್ರತಂಡ ತೋರಿಸಿದೆ. ಕಡಲಂತೆ ಕಾದ ಕಣ್ಣು, ನದಿಯಂತೆ ಓಡುವ ಮನಸ್ಸು ಸಾಲುಗಳ ಹಾಡಿನ ಮೂಲಕ ಆರಂಭವಾಗುವ ಟೀಸರ್ ನೋಡುಗರನ್ನು ಸೆಳೆಯುತ್ತಿದೆ.

    ಭರತ್ ಕಾಮಾ ನಿದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ನವೀನ್ ಯೆರನೆನಿ, ವೈ.ರವಿಶಂಕರ್, ಮೋಹನ್ ಮತ್ತು ಯಶ್ ರಂಗಿನೇನಿ ಜಂಟಿಯಾಗಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಜಸ್ಟಿನ್ ಪ್ರಭಾಕರನ್ ಅವರ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿದ್ದು, ಟೀಸರ್ ಲಹರಿ ಮ್ಯೂಸಿಕ್ ಯೂಟ್ಯೂಬ್ ಖಾತೆಯಲ್ಲಿ ನೋಡಬಹುದು.

    https://www.youtube.com/watch?v=z9uAL7o5jq0

  • ಕನ್ನಡಕ್ಕೆ ವಿಜಯ್ ದೇವರಕೊಂಡ ಎಂಟ್ರಿ – ಮತ್ತೆ ಒಂದಾದ ‘ಗೀತಾ ಗೋವಿಂದಂ’ ಜೋಡಿ

    ಕನ್ನಡಕ್ಕೆ ವಿಜಯ್ ದೇವರಕೊಂಡ ಎಂಟ್ರಿ – ಮತ್ತೆ ಒಂದಾದ ‘ಗೀತಾ ಗೋವಿಂದಂ’ ಜೋಡಿ

    ಬೆಂಗಳೂರು: ‘ಗೀತಾ ಗೋವಿಂದಂ’ ಸಿನಿಮಾದ ಮೂಲಕ ಖ್ಯಾತಿ ಪಡೆದಿದ್ದ ನಟ ವಿಜಯ್ ದೇವರಕೊಂಡ ಅವರು ಈಗ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುತ್ತಿದ್ದಾರೆ. ಜೊತೆಗೆ ಗೀತಾ ಗೋವಿಂದಂ ಸಿನಿಮಾದಲ್ಲಿ ಮೋಡಿ ಮಾಡಿದ್ದ ಚೆಲುವೆ ರಶ್ಮಿಕಾ ಮತ್ತು ವಿಜಯ್ ಜೋಡಿ ಮತ್ತೆ ಒಟ್ಟಿಗೆ ಅಭಿನಯಿಸುತ್ತಿದ್ದಾರೆ.

    ಹೌದು..ಅರ್ಜುನ್ ರೆಡ್ಡಿ ಮತ್ತು ಗೀತಾ ಗೋವಿಂದಂ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ದೇವರಕೊಂಡ ಈಗ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ವಿಜಯ್ ನಟನೆಯ ‘ಡಿಯರ್ ಕಾಮ್ರೇಡ್’ ಸಿನಿಮಾ ಈಗ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಮೂಲಕ ವಿಜಯ್ ಸ್ಯಾಂಡಲ್‍ವುಡ್‍ಗೆ ಪ್ರವೇಶ ಮಾಡುತ್ತಿದ್ದಾರೆ.

    ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ರಶ್ಮಿಕಾ ಮತ್ತು ವಿಜಯ್ ಒಟ್ಟಿಗೆ ಅಭಿನಯಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ರಶ್ಮಿಕಾ ಅವರು ವಿಜಯ್ ದೇವರಕೊಂಡ ಅವರನ್ನ ಗಟ್ಟಿಯಾಗಿ ಅಪ್ಪಿಕೊಂಡಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಇವರಿಬ್ಬರು ಈ ಹಿಂದೆ ಅಭಿನಯಿಸಿದ್ದ ಸಿನಿಮಾದಲ್ಲಿಯೂ ರಶ್ಮಿಕಾ ಮತ್ತು ವಿಜಯ್ ಕೆಮಿಸ್ಟ್ರಿ ವರ್ಕೌಟ್ ಆಗಿತ್ತು.

    ‘ಗೀತಾ ಗೋವಿಂದಂ’ ಸಿನಿಮಾದ ಮೂಲಕ ನಟಿ ರಶ್ಮಿಕಾ ಮತ್ತು ನಟ ವಿಜಯ್ ಖ್ಯಾತಿ ಪಡೆದಿದ್ದಾರೆ. ‘ಡಿಯರ್ ಕಾಮ್ರೇಡ್’ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮಾತ್ರವಲ್ಲದೆ, ತಮಿಳು, ಮಲಯಾಳಂ ಭಾಷೆಯಲ್ಲೂ ಏಕಕಾಲಕ್ಕೆ ತೆರೆ ಕಾಣುತ್ತಿದೆ. ಒಟ್ಟು ನಾಲ್ಕು ಭಾಷೆಯಲ್ಲೂ ಸಿನಿಮಾ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `ಅಪ್ಪ’ ಆಗಲಿದ್ದಾರೆ ವಿಜಯ್ ದೇವರಕೊಂಡ

    `ಅಪ್ಪ’ ಆಗಲಿದ್ದಾರೆ ವಿಜಯ್ ದೇವರಕೊಂಡ

    ಹೈದರಾಬಾದ್: ಅರ್ಜುನ್ ರೆಡ್ಡಿ ಖ್ಯಾತಿಯ ಟಾಲಿವುಡ್ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಅವರು ಸದ್ಯ `ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದ ನಂತರ ಅವರು ಈಗಾಗಲೇ ಸಹಿ ಹಾಕಿರುವ `ಕ್ರಾಂತಿ ಮಾಧವ್’ ಚಿತ್ರ ಸೆಟ್ಟೆರಲಿದೆ. ಈ ಚಿತ್ರದಲ್ಲಿ ವಿಜಯ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇಂಟರೆಸ್ಟಿಂಗ್ ವಿಷಯ.

    ಹೌದು. ವಿಜಯ್ ಮೊದಲ ಬಾರಿಗೆ ಇಂತಹ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದು, ಅಭಿಮಾನಿಗಳು ಅವರು ಹೇಗೆ ಈ ಪಾತ್ರದಲ್ಲಿ ಮಿಂಚಲಿದ್ದಾರೆ ಎಂದು ನೋಡಲು ಕಾರರದಿಂದಿದ್ದಾರೆ. ಸದ್ಯ `ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ `ಗೀತ ಗೋವಿಂದಂ’ ಖ್ಯಾತಿಯ ರಶ್ಮಿಕಾ ಮಂದಣ್ಣ ನಟಿಸುತ್ತಿರುವುದು ಸಿನಿರಂಗದಲ್ಲಿ ಬಹಳಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ. ಈ ಚಿತ್ರದ ಶೂಟಿಂಗ್ ಇನ್ನೇನೂ ಮುಗಿಯುವ ಹಂತಕ್ಕೆ ಬಂದಿದ್ದು, ಈ ಚಿತ್ರದ ನಂತರ ವಿಜಯ್ ದೇವರಕೊಂಡ ಅಪ್ಪನ ಪಾತ್ರದಲ್ಲಿ ನಟಿಸಲು ರೆಡಿಯಾಗಲಿದ್ದಾರೆ.

    `ಡಿಯರ್ ಕಾಮ್ರೆಡ್’ ನಂತರ `ಕ್ರಾಂತಿ ಮಾಧವ್’ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿ ವಿಜಯ್ ಎಂಟು ವರ್ಷದ ಮಗುವಿನ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಕ್ರಾಂತಿ ಮಾಧವ್ ಸದ್ಯಕ್ಕೆ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಗ್ಗೆ ವಿಜಯ್ ದೇವರಕೊಂಡ ಅವರಿಗೆ ಕೆಲವು ನಿರೀಕ್ಷೆಗಳಿವೆ. ಯಾಕೆಂದರೆ ಅರ್ಜುನ್ ರೆಡ್ಡಿ ಬಳಿಕ ಗೀತ ಗೋವಿಂದಂ ಚಿತ್ರ ಬಿಟ್ಟರೆ ವಿಜಯ್ ದೇವರಕೊಂಡ ನಟಿಸಿದ್ದ ಇತರೇ ಚಿತ್ರಗಳು ಅಷ್ಟೇನೂ ಸದ್ದು ಮಾಡಿರಲಿಲ್ಲ. ಆದ್ದರಿಂದ ಇತ್ತೀಚಿಗೆ ವಿಜಯ್ ಪಾತ್ರಗಳ ಆಯ್ಕೆ ಹಾಗೂ ಸಿನಿಮಾ ಟೀಮ್ ಬಗ್ಗೆ ಬಹಳಷ್ಟು ಯೋಚಿಸಿ ಆಯ್ಕೆ ಮಾಡುತ್ತಿದ್ದಾರಂತೆ.

    ಕ್ರಾಂತಿ ಮಾಧವ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರಿಗೆ ನಾಯಕಿಯರಾಗಿ ರಾಶಿ ಖನ್ನ, ಐಶ್ವರ್ಯ ರಾಜೇಶ್ ಹಾಗೂ ಈಜಾಬೆಲ್ಲೆ ಲೈಟೇ ಆಯ್ಕೆಯಾಗಿದ್ದಾರೆ. ಅಂದುಕೊಂಡಂತೆ ಚಿತ್ರದ ಶೂಟಿಂಗ್ ಮುಗಿದರೆ ಈ ವರ್ಷದ ಕೊನೆಯಲ್ಲಿ ಚಿತ್ರ ತೆರೆ ಕಾಣಲಿದೆ ಎಂದು ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2019ನೇ ಸಾಲಿನ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ವಿಜಯ್ ದೇವರಕೊಂಡ

    2019ನೇ ಸಾಲಿನ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ವಿಜಯ್ ದೇವರಕೊಂಡ

    ಮುಂಬೈ: ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಎಲ್ಲೆಡೆ ಜನಪ್ರಿಯತೆ ಪಡೆದ ಯುವ ಟಾಲಿವುಡ್ ನಟ ವಿಜಯ್ ದೇವರಕೊಂಡ 2019ನೇ ಸಾಲಿನ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ 30ನೇ ಸ್ಥಾನ ಪಡೆದ ಸಂಭ್ರಮದಲ್ಲಿದ್ದಾರೆ.

    ಟಾಲಿವುಡ್ ಮಾತ್ರವಲ್ಲದೆ ಎಲ್ಲಾ ಸಿನಿಪ್ರಿಯರ ಮನ ಗೆದ್ದ ಚಿತ್ರ ಅರ್ಜುನ್ ರೆಡ್ಡಿ ಮೂಲಕ ವಿಜಯ್ ದೇವರಕೊಂಡ ಎಲ್ಲಡೆ ಹವಾ ಸೃಷ್ಟಿಸಿದ್ದರು. ಅಲ್ಲದೆ ಕಳೆದ ವರ್ಷ ತೆರೆಕಂಡ ಗೀತಾ ಗೋವಿಂದಂ ಸಿನಿಮಾದ ಭರ್ಜರಿ ಯಶಸ್ಸಿನಲ್ಲಿ ಇರುವಾಗಲೇ ವಿಜಯ್‍ಗೆ ಮತ್ತೊಂದು ಅದೃಷ್ಟ ಸಾಧನೆ ಬಾಗಿಲನ್ನು ತಟ್ಟಿದ್ದಾರೆ. ಯುವ ಸಾಧಕರ ಫೋರ್ಬ್ಸ್ ಪಟ್ಟಿಯಲ್ಲಿ 30ನೇ ಸ್ಥಾನ ಗಿಟ್ಟಿಸಿಕೊಂಡ ವಿಜಯ್ ತಮ್ಮ ಸಂಭ್ರಮದ ಕುರಿತು ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ನಾನು 25 ವರ್ಷದವನಿದ್ದಾಗ ನನ್ನ ಬಳಿ ಇದ್ದ ಆಂಧ್ರ ಬ್ಯಾಂಕ್ ಅಕೌಂಟ್‍ನಲ್ಲಿ 500 ರೂ. ಕನಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳಲು ತುಂಬಾ ಕಷ್ಟ ಪಡುತ್ತಿದ್ದೆ. ಆಗ ನನ್ನ ತಂದೆ 30 ವರ್ಷದೊಳಗೆ ಜೀವನದಲ್ಲಿ ಒಂದು ನೆಲೆ ಕಾಣವಂತಹ ಕೆಲಸ ಮಾಡು ಎಂದು ಹೇಳಿದ್ದರು. ಹಾಗಾಗಿ ನಿಮ್ಮ ತಂದೆ ತಾಯಿ ಆರೋಗ್ಯದಿಂದ ಇರುವಾಗಲೇ ಸಾಧನೆಯೊಂದಿಗೆ ಯೌವನವನ್ನು ಎಂಜಾಯ್ ಮಾಡಿ.

    ನಾಲ್ಕು ವರ್ಷಗಳ ನಂತರ ಫೋರ್ಬ್ಸ್ ನ 100 ಜನ ಸೆಲೆಬ್ರಿಟಿಗಳ ಪಟ್ಟಿಯಲ್ಲಿ, 30 ವರ್ಷದೊಳಗಿನ ಸಾಧಕರಲ್ಲಿ 30ನೇ ಸ್ಥಾನ ದೊರಕಿದೆ ಎಂದು ತಂದೆ ಮಾತನ್ನು ನೆನಸಿಕೊಂಡು ಟ್ವೀಟ್ ಮಾಡಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

    ಫೋರ್ಬ್ಸ್ ಪಟ್ಟಿಯಲ್ಲಿರುವ ಸಾಧಕರು ಯಾರು?
    ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ, ಅಥ್ಲೀಟ್ ಹಿಮಾ ದಾಸ್, ಅಭಿನಯ್ ಭಸಿನ್, ಅಸುತೋಷ್ ವಿಕ್ರಮ್, ಕಾರ್ತೀಶ್ವರನ್ ಕೆ ಕೆ, ದಿಪ್ತೇಜ್ ವರ್ನೇಕರ್, ಕೇಶವ್ ಪ್ರವಾಸಿ, ನಿತಿನ್ ಬಾಬೆಲ್, ಶಿಶಿರ್ ಮೋದಿ, ಪ್ರಣಯ್ ಸುರಾನಾ, ತುಶಾರ್ ಸಕ್ಸೇನಾ, ಅದಿತಿ ಅಗರ್ವಾಲ್, ಅಂಜಲಿ ಮೆನನ್, ನಿನಾದ್ ಕುಲಕರ್ಣಿ, ತನ್ವಿ ಜೋಹ್ರಿ, ಸಾಗರ್ ಯರ್ನಾಲ್ಕರ್, ಅನುರಾಗ್ ಗುಪ್ತಾ, ಪ್ರಜಕ್ತಾ ಕೊಲಿ, ಮೇಘನಾ ಮಿಶ್ರಾ, ಟೀನಾ ಸುತ್ರಾಧರ್, ನಿಕಿತಾ ಸುತ್ರಾಧರ್, ಕನಿಕಾ ಗೋಯಲ್, ವಸಂತ್ ಕಾಮತ್, ಅನುರಾಗ್ ಶ್ರೀವಾಸ್ತವ್, ರೋಷನ್ ಗುಪ್ತಾ, ನಿಖಿಲ್ ಬಹೇತಿ, ಆಯುಷ್ ಅಗರ್ವಾಲ್, ಕರ್ಯಾನ ಬಜಾಜ್, ನಿತೇಶ್ ಜಾಂಗೀರ್, ಪುಷ್ಕರ್ ಸಿಂಗ್, ಸುದರ್ಶನ್ ರವಿ, ಅಂಕಿತ್ ಪರಶೇರ್, ಅಂಕಿತ್ ಗರ್ಗ್, ರಿತು ಮಲ್ಹೋತ್ರಾ, ಪ್ರತೀಕ್ ಮಲ್ಹೋತ್ರಾ, ಮಂಜೀತ್ ಗೊಹಿಲ್, ಸಂಚಿತ್ ಗೋವಿಲ್, ಅಲ್ಬಿನ್ ಜೋಸೆ, ಡೇನಿಯಲ್ ರಾಜ್, ಹರಿಕೃಷ್ಣನ್ ಎ ಎಸ್, ಕಾರ್ತಿಕ್ ಆರ್, ತರುಣ್ ಕುಮಾರ್ ಮಿಶ್ರಾ, ನೀರಜ್ ಚೋಪ್ರಾ, ಅಭಿಷೇಕ್ ಬನ್ಸಾಲ್, ವೈಭವ್ ಖಂಡೇಲ್ವಾಲ, ಪ್ರಣವ್ ಗೋಯೆಲ್, ಉತ್ತಮ್ ದಿಗ್ಗಾ, ವಿಕಾಸ್ ಚೌಧರಿ ಮತ್ತಿತರರು ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv