Tag: ವಿಜಯ್ ದೇವರಕೊಂಡ

  • ‘ಲೈಗರ್’ ಗಾಗಿ ಮುಂಬೈಗೆ ಹಾರಿದ ಟಾಲಿವುಡ್ ರೌಡಿ

    ‘ಲೈಗರ್’ ಗಾಗಿ ಮುಂಬೈಗೆ ಹಾರಿದ ಟಾಲಿವುಡ್ ರೌಡಿ

    ಮುಂಬೈ: ಟಾಲಿವುಡ್ ನಟ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾದ ಶೂಟಿಂಗ್‍ನನ್ನು ಮುಂಬೈನಲ್ಲಿ ಮತ್ತೆ ಆರಂಭವಾಗಿದೆ. ಸದ್ಯ ಲೈಗರ್ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಚಾರ್ಮಿ ಕೌರ್ ವಿಜಯ್ ಜೊತೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಗುರುವಾರ ಲೈಗರ್ ಸಿನಿಮಾದ ಶೂಟಿಂಗ್‍ಗಾಗಿ ವಿಜಯ್ ದೇವರಕೊಂಡ ಮುಂಬೈಗೆ ಹಾರಿದ್ದು, ಚಾರ್ಮಿ ಕೌರ್ ವಿಜಯ್ ದೇವರಕೊಂಡಗೆ ಸ್ವಾಗತ ಕೋರಿದ್ದಾರೆ ಹಾಗೂ ವಿಜಯ್ ಜೊತೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನಮ್ಮ ಲೈಗರ್ ಮತ್ತೆ ಮರಳಿದೆ ಎಂದು ಚಾರ್ಮಿ ಕೌರ್ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

    ಸಿನಿಮಾ ಕುರಿತ ಪ್ರಮೋಷನ್ ಇಲ್ಲದಿದ್ದರೆ ವಿಜಯ್ ದೇವರಕೊಂಡ ಅಷ್ಟಾಗಿ ಸಾಮಾಜಿಕ ಜಾಲಾತಾಣದಲ್ಲಿ ಸಕ್ರಿಯರಾಗಿರುವುದಿಲ್ಲ. ಈಗ ಒಂದು ತಿಂಗಳ ಬಳಿಕ ವಿಜಯ್ ದೇವರಕೊಂಡ ಅವರು ಸೋಫಾದ ಮೇಲೆ ಕುಳಿತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Vijay Deverakonda (@thedeverakonda)

    11 ತಿಂಗಳ ಬಳಿಕ ಲೈಗರ್ ಸಿನಿಮಾದ ಚಿತ್ರೀಕರಣ ಪುನಾರಂಭಗೊಂಡಿದ್ದು, ವಿಜಯ್ ದೇವರಕೊಂಡ ಹೈದರಾಬಾದ್‍ನಿಂದ ಮುಂಬೈಗೆ ಫ್ಲೈಟ್ ಮೂಲಕ ಓಡಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಿದ್ದು, ವಿಜಯ್ ಜೊತೆ ಅನನ್ಯ ಪಾಂಡೇ ಸ್ಕ್ರೀನ್ ಶೇರ್ ಮಾಡಿದ್ದಾರೆ. ಚಾರ್ಮಿ ಕೌರ್ ಮತ್ತು ಕರಣ್ ಜೋಹರ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಲೈಗರ್ ಸಿನಿಮಾ ಸೆಪ್ಟೆಂಬರ್ 9 ರಂದು ಅನೇಕ ಭಾಷೆಗಳಲ್ಲಿ ತೆರೆ ಮೇಲೆ ಬರಲಿದೆ.

  • ಮದುವೆಯ ಬಗ್ಗೆ ವಿಜಯ್‌ ದೇವರಕೊಂಡ ಮಾತು

    ಮದುವೆಯ ಬಗ್ಗೆ ವಿಜಯ್‌ ದೇವರಕೊಂಡ ಮಾತು

    ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟರಲ್ಲಿ ದಿ ಮೋಸ್ಟ್ ಹ್ಯಾಂಡ್‍ಸಮ್ ನಟ ವಿಜಯ್ ದೇವರಕೊಂಡ ಕೂಡ ಒಬ್ಬರು. ಇದೀಗ ವಿಜಯ್ ದೇವರಕೊಂಡ ತಮ್ಮ ಮುಂದಿನ ಲೈಗರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಈ ಸಿನಿಮಾದಲ್ಲಿ ವಿಜಯ್‍ಗೆ ನಾಯಕಿಯಾಗಿ ಅನನ್ಯ ಪಾಂಡೆ ಅಭಿನಯಿಸುತ್ತಿದ್ದಾರೆ. ಸದ್ಯ ಬ್ಯಾಚುಲರ್ ಲಿಸ್ಟ್ ನಲ್ಲಿರುವ ವಿಜಯ್ ದೇವರಕೊಂಡಗೆ ಶೀಘ್ರವೇ ಮದುವೆಯಾಗುವಂತೆ ಅವರ ತಾಯಿ ತಿಳಿಸಿದ್ದಾರೆ ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿದ ಅವರು, ತಮ್ಮ ತಾಯಿ ದೇವರಕೊಂಡ ಮಾಧವಿಯವರು ಮದುವೆ ವಿಚಾರ ಬಂದಾಗ ಶಾಂತವಾಗಿ ಬಿಡುತ್ತಾರೆ. ಕಾರಣ ನನ್ನ ಪೋಷಕರಿಗೆ ನನಗಿರುವ ಜವಾಬ್ದಾರಿ ಬಗ್ಗೆ ತಿಳಿದಿದೆ ಹಾಗೂ ನಾನು ಏನು ಮಾಡುತ್ತಿದ್ದೇನೆ ಎಂಬುವುದು ಕೂಡ ಅರಿತಿದ್ದಾರೆ. ಹಾಗಾಗಿ ತಮ್ಮ ವಿಚಾರವಾಗಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರ ನೀಡಿದ್ದಾರೆ ಎಂದು ಹೇಳಿದರು.

    ತಾಯಿ ಕುರಿತಂತೆ ಮಾತನಾಡಲು ಆರಂಭಿಸಿದ ವಿಜಯ್ ದೇವರಕೊಂಡ, ನಾನು ನನ್ನ ತಾಯಿ ಜೊತೆ ಚಿತ್ರ ಮಂದಿರದಲ್ಲಿ ರಜನಿಕಾಂತ್ ಹಾಗೂ ಚಿರಂಜೀವಿ ಅಭಿನಯದ ಸಿನಿಮಾ ನೋಡಿದ್ದೇನೆ. ಅಲ್ಲದೇ ನಾನು ಹೆಚ್ಚಾಗಿ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ತಾಯಿ ಹಾಗೂ ಇಡೀ ಕುಟುಂಬದೊಂದಿಗೆ ಹೋಗುತ್ತಿದ್ದೆ. ಅಡುಗೆ ವಿಚಾರಕ್ಕೆ ಬಂದರೆ ಅಮ್ಮ ಮಾಡುವ ದಾಲ್ ಮತ್ತು ರೋಟಿ ಎಂದರೆ ನನಗೆ ಬಹಳ ಇಷ್ಟ ಎಂದರು.

    ತಾಯಿಗೆ ನೀಡಿದ ಮೊದಲ ಗಿಫ್ಟ್ ಯಾವುದು ಎಂದು ಕೇಳಿದ ಪ್ರಶ್ನೆಗೆ, ನಾನು ಮೂರನೇ ತರಗತಿಯಲ್ಲಿದ್ದಾಗ ಅಪ್ಪ-ಅಮ್ಮ ಹೊರಗೆ ಹೋಗಿದ್ದರು. ಆಗ ನಾನು ನನ್ನ ಸಹೋದರನೊಂದಿಗೆ ಸೇರಿ ಮನೆಯನ್ನು ಸ್ಚಚ್ಛಗೊಳಿಸಿ ಗ್ರೀಟಿಂಗ್ ಕಾರ್ಡ್ ಒಂದರಲ್ಲಿ ಅವರ ಭಾವಚಿತ್ರವನ್ನು ಅಂಟಿಸಿ ಐ ಲವ್ ಯು ಎಂದು ಬರೆದು ಕೊಟ್ಟಿದ್ದೆ. ಅದನ್ನು ನೋಡಿ ನನ್ನ ತಾಯಿ ಸಂತೋಷದಿಂದ ಕಣ್ಣೀರಿಟ್ಟಿದ್ದರು ಎಂದು ಹೇಳಿದರು. ಹೀಗೆ ವಿಜಯ್ ದೇವರಕೊಂಡ ತಮ್ಮ ಬಾಲ್ಯದ ಹಳೆಯ ಸವಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.

    ಸದ್ಯ ವಿಜಯ್ ದೇವರಕೊಂಡ ಲೈಗರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಈ ಚಿತ್ರಕ್ಕೆ ನಿರ್ದೇಶಕ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅಲ್ಲದೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಮ್ಯಾಕೃಷ್ಣ, ಮಕರಂದ್ ದೇಶಪಾಂಡೆ ಮತ್ತು ರೋನಿತ್ ರಾಯ್ ಮಿಂಚಿದ್ದಾರೆ. ಈ ಸಿನಿಮಾ 2021ರ ಸೆಪ್ಟೆಂಬರ್ 9 ರಂದು ತೆರೆ ಮೇಲೆ ಬರಲಿದೆ.

  • ಲೈಗರ್ ಸಿನಿಮಾದ ಡೇಟ್ ಫಿಕ್ಸ್ – ಹೊಸ ಪೋಸ್ಟರ್ ಔಟ್

    ಲೈಗರ್ ಸಿನಿಮಾದ ಡೇಟ್ ಫಿಕ್ಸ್ – ಹೊಸ ಪೋಸ್ಟರ್ ಔಟ್

    ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ ಇದೇ ಸೆಪ್ಟೆಂಬರ್ 9ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾ ತಮಿಳು, ತೆಲಗು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.

    ವಿಶೇಷವೆಂದರೆ ಸಿನಿಮಾ ತಯಾರಕರು ಲೈಗರ್ ಸಿನಿಮಾದ ಹೊಸ ಪೋಸ್ಟರ್‍ನನ್ನು ಬಿಡುಗಡೆಗೊಳಿಸುವ ಮೂಲಕ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ. ಈ ಪೋಸ್ಟರ್‍ನಲ್ಲಿ ವಿಜಯ್ ಕೈನಲ್ಲಿ ಕೋಲು ಹಿಡಿದು ಜೋರಾಗಿ ಕಿರುಚುತ್ತಿರುವುದನ್ನು ಕಾಣಬಹುದು.

    ಸಿನಿಮಾ ಆಪ್‍ಡೇಟ್ಸ್ ಕುರಿತಂತೆ ವಿಜಯ್ ದೇವರಕೊಂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್ ಶೇರ್ ಮಾಡಿಕೊಂಡಿದ್ದು, ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ 9ಕ್ಕೆ ನಾವು ಬರುತ್ತಿದ್ದೇವೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಬಿಡುಗಡೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಲೈಗರ್ ಸಿನಿಮಾದ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

    ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಕರಣ್ ಜೋಹರ್, ಜಗತ್ತಿನಾದ್ಯಂತ ಪಂಚ್ ಪ್ಯಾಕ್ ನೀಡಲು ಸಿನಿಮಾ ಸಿದ್ಧವಾಗಿದೆ. ಲೈಗರ್ ಸೆಪ್ಟೆಂಬರ್ 9 ರಂದು ಜಗತ್ತಿನಾದ್ಯಂತ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹಿಂದಿ, ತೆಲಗು, ತಮಿಳ್, ಕನ್ನಡ ಮತ್ತು ಮಲೆಯಾಳಂ ಎಂದು ಕ್ಯಾಪ್ಷನ್ ಹಾಕಿಕೊಳ್ಳುವುದರ ಮೂಲಕ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    https://twitter.com/karanjohar/status/1359694753198088192

    ಕೊರೊನಾ ಸಾಂಕ್ರಮಿಕ ರೋಗದಿಂದ ಮಾರ್ಚ್ 2020ರಲ್ಲಿ ಸ್ಥಗಿತಗೊಂಡಿದ್ದ ಲೈಗರ್ ಸಿನಿಮಾದ ಚಿತ್ರೀಕರಣ 11 ತಿಂಗಳ ಬಳಿಕ ಇಂದಿನಿಂದ ಮುಂಬೈನಲ್ಲಿ ಚಿತ್ರೀಕರಣ ಆರಂಭಗೊಂಡಿದೆ.

    ನಿನ್ನೆ ಮುಂಬೈನಲ್ಲಿ ಅನನ್ಯಾ ಪಾಂಡೆ ಮತ್ತು ಅವರ ಕುಟುಂಬವನ್ನು ಪೂರಿಜಗನ್ನಾಥ್ ಹಾಗೂ ಚಾರ್ಮ್ ಎಂದು ಚಾರ್ಮ್ ಭೇಟಿಯಾಗಿದ್ದರು. ಈ ವೇಳೆ ಕ್ಲಿಕ್ಕಿಸಿದ ಕೆಲವು ಫೋಟೋವನ್ನು ಚಾರ್ಮಿ ಕೌರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಲೈಗರ್ ಸಿನಿಮಾದ ಲೀಡಿಂಗ್ ರೋಲ್‍ನಲ್ಲಿ ನಟ ವಿಜಯ್ ದೇವರಕೊಂಡ ಅಭಿನಯಿಸಿದ್ದು, ವಿಜಯ್ ಜೊತೆ ಅನನ್ಯಪಾಂಡೆ ಡ್ಯೂಯೆಟ್ ಹಾಡಲಿದ್ದಾರೆ. ಇನ್ನೂ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ರಮ್ಯಾ ಕೃಷ್ಣನ್, ರೋನಿತ್ ರಾಯ್, ಅಲಿ, ಮಕರಂದ್ ದೇಶಪಾಂಡೆ ಮತ್ತು ಗೆಟಪ್ ಶ್ರೀನು ಅಭಿನಯಿಸಿದ್ದಾರೆ. ಲೈಗರ್ ಸಿನಿಮಾ ಬಾಕ್ಸಿಂಗ್ ಕಥೆ ಆಧಾರಿತ ಸಿನಿಮಾವಾಗಿದ್ದು, ನಿರ್ದೇಶಕ ಪೂರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಪೂರಿ ಜಗನ್ನಾಥ್, ಚಾರ್ಮ್ ಕೌರ್, ಕರಣ್ ಜೋಹರ್ ಬಂಡವಾಳ ಹೂಡಿದ್ದಾರೆ.

  • ಅಭಿಮಾನ ತೋರಿದ ಯುವತಿಗೆ ವಿಜಯ್ ದೇವರಕೊಂಡ ಧನ್ಯವಾದ

    ಅಭಿಮಾನ ತೋರಿದ ಯುವತಿಗೆ ವಿಜಯ್ ದೇವರಕೊಂಡ ಧನ್ಯವಾದ

    ಹೈದರಾಬಾದ್: ನಟರೆಂದರೆ ಅವರಿಗೆ ಒಂದಷ್ಟು ಅಭಿಮಾನಿಗಳು ಇದ್ದೇ ಇರುತ್ತಾರೆ. ತಮ್ಮ ನೆಚ್ಚಿನ ನಟನ ಗಮನಸೆಳೆಯಲು ಅಭಿಮಾನಿಗಳು ಇನ್ನಿಲ್ಲದ ಸರ್ಕಸ್ ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವತಿ ಪೆನ್ಸಿಲ್ ಸ್ಕೆಚ್ ಬಿಡಿಸುವ ಮೂಲಕ ನಟ ವಿಜಯ್ ದೇವರಕೊಂಡ ಅವರ ಮನಸೆಳೆದಿದ್ದಾರೆ.

    ಹೌದು. ಸ್ವಪ್ನಿಕಾ ಕೊವ್ವಾಡಾ ಎಂಬಾಕೆ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದಾಳೆ. ಈಕೆ ತನ್ನ ಬಾಯಿಯ ಮೂಲಕ ವಿಜಯ್ ದೇವರಕೊಮಡ ಅವರ ಚಿತ್ರವನ್ನು ಬಿಡಿಸಿದ್ದಾಳೆ. ಅಲ್ಲದೆ ಚಿತ್ರ ಬಿಡಿಸುವ ವೀಡಿಯೋ ಮಾಡಿದ್ದು, ಅದನ್ನು ಟ್ವಟ್ಟರ್ ನಲ್ಲಿ ಶೇರ್ ಮಾಡಿಕೊಂಡು ಇದು ನನ್ನ ಹೊಸ ಕಲೆ ಎಂದು ಬರೆದುಕೊಂಡಿದ್ದಾರೆ.

    ಸ್ವಪ್ನಿಕಾ ಅವರ ಟ್ವೀಟ್ ಗೆ ರೀಟ್ವೀಟ್ ಮಾಡಿರುವ ವಿಜಯ್, ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು ಸ್ವಪ್ನಿಕಾ. ನಿಮ್ಮಿಂದ ಶಕ್ತಿಯನ್ನು ಸ್ಫೂರ್ತಿಯಾಗಿ ಪಡೆಯುವುದಕ್ಕೆ ಇಚ್ಛಿಸುತ್ತೇನೆ, ಥ್ಯಾಂಕ್ಯೂ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವೀಡಿಯೋವನ್ನು ಲಕ್ಷಾಂತರ ಜನ ವೀಕ್ಷಣೆ ಮಾಡಿದ್ದಾರೆ. ಯುವತಿಯ ಕಲೆಗೆ ಮನಸೋತಿರುವ ನೆಟ್ಟಿಗರು ಶಹಬ್ಬಾಸ್ ಗಿರಿ ನೀಡಿದ್ದಾರೆ.

    ಮುಂದಿನ ವರ್ಷ ಜನವರಿಯಲ್ಲಿ ನಟ ವಿಜಯ್ ದೇವರಕೊಂಡ ಹಾಗೂ ಅನನ್ಯ ಪಾಂಡೆ ಫೈಟರ್ ಚಿತ್ರೀಕರಣ ಆರಂಭಿಸಲಿದ್ದಾರೆ. ಈ ಚಿತ್ರಕ್ಕೆ ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿತ್ತಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ.

  • ‘ಹೈದರಾಬಾದ್‍ಗೆ ಬಾ ಚಿಲ್ ಮಾಡೋಣ’- ರಶ್ಮಿಕಾಗೆ ವಿಜಯ್ ಸಂದೇಶ

    ‘ಹೈದರಾಬಾದ್‍ಗೆ ಬಾ ಚಿಲ್ ಮಾಡೋಣ’- ರಶ್ಮಿಕಾಗೆ ವಿಜಯ್ ಸಂದೇಶ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆ ‘ಹೈದರಾಬಾದ್‍ಗೆ ಬಾ ಚಿಲ್ ಮಾಡೋಣ’ ಎಂದು ನಟ ವಿಜಯ್ ದೇವರಕೊಂಡ  ಫನ್ನಿಯಾಗಿ ಸಂದೇಶ ರವಾನಿಸಿದ್ದಾರೆ.

    ಲಾಕ್‍ಡೌನ್‍ನಿಂದ ಸಿನಿಮಾ ಕೆಲಸಗಳು ಸಂಪೂರ್ಣವಾಗಿ ನಿಂತಿವೆ. ಹೀಗಾಗಿ ರಶ್ಮಿಕಾ ಹೈದರಾಬಾದ್ ಬಿಟ್ಟು ಕೊಡಗಿನ ತಮ್ಮ ಮನೆಯಲ್ಲಿದ್ದಾರೆ. ವಿಜಯ್ ದೇವರಕೊಂಡ ಹೈದರಾಬಾದ್‍ನಲ್ಲಿ ಲಾಕ್ ಆಗಿದ್ದಾರೆ. ಈ ಸಮಯದಲ್ಲಿ ಒಬ್ಬರನೊಬ್ಬರು ಮಿಸ್ ಮಾಡಿಕೊಳ್ಳುತ್ತಿರುವ ರಶ್ಮಿಕಾ ಮತ್ತು ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸುತ್ತಿದ್ದಾರೆ.

    ಇತ್ತೀಚೆಗೆ ನಟ ವಿಜಯ್ ದೇವರಕೊಂಡ ಹುಟ್ಟುಹಬ್ಬ ಇತ್ತು. ಅಂದು ರಶ್ಮಿಕಾ “ನನ್ನ ಕಾಮ್ರೇಡ್ ವಿಜಯ್ ದೇವರಕೊಂಡಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಟ್ವೀಟ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದರು. ಇದೀಗ ಆ ಟ್ವೀಟ್‍ಗೆ ವಿಜಯ್ ದೇವರಕೊಂಡ ರಿಪ್ಲೈ ಮಾಡಿದ್ದು, “ಮಂದಣ್ಣ ಬೇಗ ಹೈದರಾಬಾದ್‍ಗೆ ಬಾ ಚಿಲ್ ಮಾಡೋಣ. ನಮ್ಮ ಗ್ಯಾಂಗ್ ನಿನ್ನನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದೆ” ಎಂದು ಹಾರ್ಟ್ ಮತ್ತು ನಗುವ ಎಮೋಜಿ ಹಾಕಿ  ಟ್ವೀಟ್ ಮಾಡಿದ್ದಾರೆ.

    ವಿಜಯ್ ಈ ರೀತಿ ಟ್ವೀಟ್ ಮಾಡುತ್ತಿದ್ದಂತೆಯೇ ಅದಕ್ಕೆ ರಶ್ಮಿಕಾ ಕೂಡ ಸಖತ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. “ನನ್ನ ಬಿಟ್ಟು ನೀವು ಯಾವುದೇ ಫನ್ ಮಾಡದಿರುವುದೇ ಉತ್ತಮ’ ಎಂದಿದ್ದಾರೆ. ಸದ್ಯ ರಶ್ಮಿಕಾ ಮತ್ತು ವಿಜಯ್ ಒಟ್ಟಿಗೆ ಯಾವುದೇ ಸಿನಿಮಾಗಳಲ್ಲಿ ಅಭಿನಯಿಸುತ್ತಿಲ್ಲ. ಆದರೂ ಇಬ್ಬರ ನಡುವೆ ಉತ್ತಮ ಸ್ನೇಹವಿದೆ.

    ರಶ್ಮಿಕಾ ಕನ್ನಡಲ್ಲಿ ಧ್ರುವ ಸರ್ಜಾ ಜೊತೆ ‘ಪೊಗರು’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಮಿಳಿನಲ್ಲಿ ‘ಸುಲ್ತಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ ‘ಪುಷ್ಪ’ ಸಿನಿಮಾ ಮಾಡಬೇಕಿದೆ. ವಿಜಯ್ ದೇವರಕೊಂಡ ‘ಫೈಟರ್’ ಸಿನಿಮಾ ಮಾಡುತ್ತಿದ್ದರೆ.

     

  • ಲಾಕ್‍ಡೌನ್‍ನಲ್ಲಿ ಮುದ್ದಿನ ಅಮ್ಮನಿಗಾಗಿ ಐಸ್‍ಕ್ರೀಮ್ ಮಾಡಿದ ದೇವರಕೊಂಡ

    ಲಾಕ್‍ಡೌನ್‍ನಲ್ಲಿ ಮುದ್ದಿನ ಅಮ್ಮನಿಗಾಗಿ ಐಸ್‍ಕ್ರೀಮ್ ಮಾಡಿದ ದೇವರಕೊಂಡ

    ಹೈದರಾಬಾದ್: ಲಾಕ್‍ಡೌನ್‍ ಸಮಯದಲ್ಲಿ ಸದ್ಯ ಮನೆಯಲ್ಲಿಯೇ ಇರುವ ಸೆಲೆಬ್ರಿಟಿಗಳು #BeARealMan ಎಂಬ ಚಾಲೆಂಜ್ ಸ್ವೀಕರಿಸಿ, ಎಂಜಾಯ್ ಮಾಡುತ್ತಿದ್ದಾರೆ. ಈ ಸಾಲಿಗೆ ಈಗ ಟಾಲಿವುಡ್ ನಟ ವಿಜಯ್ ದೇವರಕೊಂಡ ಕೂಡ ಸೇರಿಕೊಂಡಿದ್ದು, ಮನೆ ಕೆಲಸ ಮಾಡಿ ಮುದ್ದಿನ ಅಮ್ಮನಿಗೆ ಸಹಾಯ ಮಾಡಿ ಎಲ್ಲರ ಮನಗೆದ್ದಿದ್ದಾರೆ.

    #BeARealMan ಚಾಲೆಂಜ್ ಸ್ವೀಕರಿಸಿದ ಸೆಲೆಬ್ರಿಟಿಗಳು ಮನೆಯಲ್ಲಿನ ಮಹಿಳೆಯರಿಗೆ ಸಹಾಯ ಮಾಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಸಿನಿ ಕಲಾವಿದರನ್ನು ಟ್ಯಾಗ್ ಮಾಡುತ್ತಾ ಚಾಲೆಂಜ್ ಪಾಸ್ ಮಾಡುತ್ತಿದ್ದಾರೆ. ಹೀಗೆ ನಿರ್ದೇಶಕ ಶಿವ ಕೊರಟಾಲ ಅವರು ವಿಜಯ್ ದೇವರಕೊಂಡ ಅವರಿಗೆ ಚಾಲೆಂಜ್ ಹಾಕಿದ್ದರು. ಇದನ್ನು ಸ್ವೀಕರಿಸಿದ ವಿಜಯ್ ಮನೆ ಕೆಲಸ ಮಾಡಿ, ಅಮ್ಮನಿಗೆ ಪ್ರೀತಿಯಿಂದ ಐಸ್‍ಕ್ರೀಮ್ ಕೂಡ ಮಾಡಿಕೊಟ್ಟಿದ್ದಾರೆ.

    ಈ ಚಾಲೆಂಜ್‍ನ ವಿಡಿಯೋವೊಂದನ್ನು ವಿಜಯ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಲಾಕ್‍ಡೌನ್‍ನಲ್ಲಿ ನನ್ನ ದಿನನಿತ್ಯದ ಜೀವನಕ್ಕೆ ಸಂಬಂಧಿಸಿದ ಒಂದು ಪುಟ್ಟ ವಿಡಿಯೋ ಇದು. ಆನಂದ್ ದೇವರಕೊಂಡ ಈ ವಿಡಿಯೋ ಮಾಡಿದ್ದಾರೆ. ನಿರ್ದೇಶಕ ಶಿವ ಕೊರಟಾಲ ನನಗೆ #BeARealMan ಚಾಲೆಂಜ್ ಹಾಕಿದರು. ನಾನೀಗ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಅವರಿಗೆ ಚಾಲೆಂಜ್ ಪಾಸ್ ಮಾಡುತ್ತಿದ್ದೇನೆ ಎಂದು ವಿಜಯ್ ವಿಡಿಯೋಗೆ ಕ್ಯಾಪ್ಷನ್ ಹಾಕಿದ್ದಾರೆ.

    ವಿಶೇಷ ಎಂದರೆ ವಿಜಯ್ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಮ್ಮ ಮನೆ ಹೇಗಿದೆ ಎನ್ನೋದನ್ನು ತೋರಿಸಿದ್ದಾರೆ. ಸಿನಿಮಾದಲ್ಲಿ ಬ್ಯುಸಿ ಇದ್ದಾದ ಹೆಚ್ಚು ಎಂದರೆ 6 ಗಂಟೆ ಕಾಲ ನಿದ್ದೆ ಮಾಡುತ್ತಿದ್ದೆ. ಆದ್ರೆ ಲಾಕ್‍ಡೌನ್‍ನಿಂದು ಈಗ ನಾನು ಒಂಬತ್ತುವರೆ ಗಂಟೆ ನಿದ್ದೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ವಿಡಿಯೋದಲ್ಲಿ ವಿಜಯ್ ಪಾತ್ರೆ ತೊಳೆಯುವುದು, ಮನೆ ಕ್ಲೀನ್ ಮಾಡುವುದು ಹಾಗೂ ಅಮ್ಮನಿಗೆ ಪ್ರೀತಿಯಿಂದ ಮಾವಿನ ಹಣ್ಣಿನ ಐಸ್‍ಕ್ರೀಮ್ ಮಾಡಿಕೊಟ್ಟ ದೃಶ್ಯಗಳು ಸೆರೆಯಾಗಿದೆ. ಈ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಿಂದೆ ಬಾಹುಬಲಿ ನಿರ್ದೇಶಕ ರಾಜಮೌಳಿ ಅವರು ಕೂಡ #BeARealMan ಚಾಲೆಂಜ್ ಸ್ವೀಕರಿಸಿದ್ದರು. ನಿರ್ದೇಶನದಲ್ಲಿ ಕಮಾಲ್ ಮಾಡಿದ್ದ ರಾಜಮೌಳಿ ಅವರು ಮನೆ ಕೆಲಸ ಮಾಡಿ ಭೇಷ್ ಎನಿಸಿಕೊಂಡಿದ್ದರು.

    ಅಷ್ಟೇ ಅಲ್ಲದೆ ಮೆಗಾಸ್ಟಾರ್ ಚಿರಂಜೀವಿ, ನಟ ರಾಮ್‍ಚರಣ್, ಜೂನಿಯರ್ ಎನ್‍ಟಿಆರ್, ನಟ ವೆಂಕಟೇಶ್ ಹೀಗೆ ಹಲವು ನಟರು, ನಿರ್ದೇಶಕರು, ಕಲಾವಿದರು ಈ ಚಾಲೆಂಜ್ ಸ್ವೀಕರಿಸಿ ರಿಯಲ್ ಮ್ಯಾನ್ ಆಗಿದ್ದಾರೆ.

  • ಕಡಲ ಕಿನಾರೆಯಲ್ಲಿ ಆಯ ತಪ್ಪಿದ ಅರ್ಜುನ್ ರೆಡ್ಡಿ

    ಕಡಲ ಕಿನಾರೆಯಲ್ಲಿ ಆಯ ತಪ್ಪಿದ ಅರ್ಜುನ್ ರೆಡ್ಡಿ

    ಮುಂಬೈ: ಟಾಲಿವುಡ್ ಅರ್ಜುನ್ ರೆಡ್ಡಿ, ವಿಜಯ್ ದೇವರಕೊಂಡ ಕಡಲ ಕಿನಾರೆಯಲ್ಲಿ ಆಯತಪ್ಪಿ ಬಿದ್ದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಟಾಲಿವುಡ್ ನ ಬಹುಬೇಡಿಕೆ ನಟನಾಗಿರುವ ವಿಜಯ್ ದೇವರಕೊಂಡ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಮುಂಬೈನ ವರ್ಸೋವಾ ಕಡಲ ಕಿನಾರೆಯಲ್ಲಿ ಹೋಗುತ್ತಿರುವಾಗ ಜಾರಿದ್ದಾರೆ. ವಿಜಯ್ ದೇವರಕೊಂಡ ಜಾರಿ ಬೀಳುತ್ತಿದ್ದಂತೆ ಜೊತೆಯಲ್ಲಿದ್ದವರು ನಟನನ್ನು ಹಿಡಿದು ರಕ್ಷಿಸಿದ್ದಾರೆ. ವಿಡಿಯೋ ನೋಡಿದ ಅಭಿಮಾನಿಗಳು ಬೀ ಕೇರ್‍ಫುಲ್ ಡಾರ್ಲಿಂಗ್ ಎಂದು ಕಮೆಂಟ್ ಮಾಡುತ್ತಿದ್ದಾರೆ.

    https://www.instagram.com/p/B9Um954HmJS/

    ಫೈಟರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡಗೆ ಜೊತೆಯಾಗಿ ಅನನ್ಯ ಪಾಂಡ್ಯ ನಟಿಸುತ್ತಿದ್ದರು. ಇಬ್ಬರು ಜೊತೆಯಾಗಿ ಬೋಟ್ ನಲ್ಲಿ ತೆರಳುತ್ತಿರುವಾಗ ಅನನ್ಯರನ್ನ ತಬ್ಬಿಕೊಂಡಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಕರಣ್ ಜೋಹರ್ ನಿರ್ಮಾಣದಲ್ಲಿ ಫೈಟರ್ ಸಿದ್ಧವಾಗುತ್ತಿದ್ದು, ಹಿಂದಿ ಸೇರಿದಂತೆ ಇತರೆ ಭಾಷೆಗಳಲ್ಲಿ ತೆರೆ ಕಾಣಲಿದೆ.

    https://www.instagram.com/p/B9Un-eunCsF/

  • ವಿಜಯ್ ದೇವರಕೊಂಡ ಜೊತೆ ನಟಿಸಲ್ಲ ಎಂದ ದಿಶಾ ಪಠಾಣಿ

    ವಿಜಯ್ ದೇವರಕೊಂಡ ಜೊತೆ ನಟಿಸಲ್ಲ ಎಂದ ದಿಶಾ ಪಠಾಣಿ

    ಮುಂಬೈ: ಬಾಲಿವುಡ್ ಬೆಡಗಿ ದಿಶಾ ಪಠಾಣಿ ತೆಲುಗು ನಟ ವಿಜಯ್ ದೇವರಕೊಂಡ ಜೊತೆ ನಟಿಸಲು ನಿರಾಕರಿಸಿದ್ದಾರೆ ಎನ್ನುವ ಮಾತುಗಳು ಟಿ-ಟೌನ್‍ನಲ್ಲಿ ಹರಿದಾಡುತ್ತಿದೆ.

    ವಿಜಯ್ ಈ ನಡುವೆ ತಮ್ಮ ಮುಂಬರುವ ‘ಫೈಟರ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದ್ದು, ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ಅವರಿಗೆ ನಾಯಕಿಯಾಗಿ ಬಾಲಿವುಡ್ ನಟಿ ಅನನ್ಯ ಪಾಂಡೆ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅನನ್ಯ ಪಾಂಡೆ ಅವರಿಗೆ ಅವಕಾಶ ನೀಡುವ ಮೊದಲು ದಿಶಾ ಪಠಾಣಿಗೆ ಆಫರ್ ಮಾಡಲಾಗಿತ್ತು. ಆದರೆ ದಿಶಾ ಈ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

    ಈ ಮೊದಲು ದಿಶಾ ತೆಲುಗಿನಲ್ಲಿ ‘ಲೋಫರ್’ ಚಿತ್ರದಲ್ಲಿ ನಟಿಸಿದ್ದಳು. ಈ ಚಿತ್ರವನ್ನು ಕೂಡ ಪೂರಿ ಜಗನ್ನಾಥ್ ನಿರ್ದೇಶಿಸಿದ್ದು, ಮೆಗಾ ಪ್ರಿನ್ಸ್ ವರುಣ್ ತೇಜ್ ನಾಯಕನಾಗಿ ನಟಿಸಿದ್ದರು. ದಿಶಾ ಅವರನ್ನು ಪೂರಿ ಜಗನ್ನಾಥ್ ಚಿತ್ರರಂಗಕ್ಕೆ ಪರಿಚಯ ಮಾಡಿಸಿದ್ದರು. ಇದೀಗ ದಿಶಾ ಬಾಲಿವುಡ್‍ನಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದಿಶಾ ಈ ಚಿತ್ರ ನಿರಾಕರಿಸಿದ ಕಾರಣ ಅನನ್ಯ ಅವರಿಗೆ ಆಫರ್ ನೀಡಲಾಗಿತ್ತು.

    ಸದ್ಯ ವಿಜಯ್ ಫೈಟರ್ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಇತ್ತೀಚೆಗೆ ಈ ಚಿತ್ರದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿತ್ತು. ಫೋಟೋದಲ್ಲಿ ವಿಜಯ್ ಬೈಕ್ ಚಲಾಯಿಸುತ್ತಿದ್ದರೆ, ಅನನ್ಯ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿದ್ದರು. ಚಿತ್ರತಂಡ ಮುಂಬೈನ ಬೀದಿಯಲ್ಲಿ ವಿಜಯ್ ಹಾಗೂ ಅನನ್ಯ ಅವರ ರೊಮ್ಯಾಂಟಿಕ್ ದೃಶ್ಯವನ್ನು ಚಿತ್ರೀಕರಿಸುತ್ತಿತ್ತು. ಈ ಫೋಟೋ ನೋಡಿ ನೆಟ್ಟಿಗರು ಅಸಭ್ಯವಾಗಿ ಕಾಣುತ್ತಿದ್ದೀರಾ ಎಂದು ಕಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದರು.

    ಫೈಟರ್ ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ಟಾಲಿವುಡ್ ನಟಿ ಚಾರ್ಮಿ ಕೌರ್ ಕೂಡ ನಟಿಸುತ್ತಿದ್ದಾರೆ. ಈ ಹಿಂದೆ ಅನನ್ಯ ಪಾಂಡೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಅವರ ಜೊತೆಗಿದ್ದ ಫೋಟೋವನ್ನು ಹಂಚಿಕೊಂಡಿದ್ದರು. ಅಲ್ಲದೆ ಅದಕ್ಕೆ, “ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲು ಖುಷಿಯಾಗುತ್ತಿದೆ. ಅಲ್ಲದೆ ಪೂರಿ ಜಗ್ಗನಾಥ್ ಹಾಗೂ ವಿಜಯ್ ದೇವರಕೊಂಡ ಜೊತೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ” ಎಂದು ಬರೆದು ಪೋಸ್ಟ್ ಮಾಡಿದ್ದರು.

  • ಬಾಲಿವುಡ್ ನಟಿಯನ್ನು ಅಪ್ಪಿಕೊಂಡಿದ್ದಕ್ಕೆ ವಿಜಯ್ ವಿರುದ್ಧ ನೆಟ್ಟಿಗರು ಗರಂ: ವಿಡಿಯೋ

    ಬಾಲಿವುಡ್ ನಟಿಯನ್ನು ಅಪ್ಪಿಕೊಂಡಿದ್ದಕ್ಕೆ ವಿಜಯ್ ವಿರುದ್ಧ ನೆಟ್ಟಿಗರು ಗರಂ: ವಿಡಿಯೋ

    ಮುಂಬೈ: ಟಾಲಿವುಡ್ ಅರ್ಜುನ್ ರೆಡ್ಡಿ ಎಂದೇ ಖ್ಯಾತರಾಗಿರುವ ನಟ ವಿಜಯ್ ದೇವರಕೊಂಡ ಬಾಲಿವುಡ್ ನಟಿ ಅನನ್ಯ ಪಾಂಡೆ ಅವರನ್ನು ಅಪ್ಪಿಕೊಂಡಿದ್ದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ.

    ನಟಿ ಅನನ್ಯ ಪಾಂಡೆ ‘ಫೈಟರ್’ ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ಈ ಚಿತ್ರದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿತ್ತು. ಅದರಲ್ಲಿ ವಿಜಯ್ ಬೈಕ್ ಚಲಾಯಿಸುತ್ತಿದ್ದರೆ, ಅನನ್ಯ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿದ್ದರು. ಚಿತ್ರತಂಡ ಮುಂಬೈನ ಬೀದಿಯಲ್ಲಿ ವಿಜಯ್ ಹಾಗೂ ಅನನ್ಯ ಅವರ ರೊಮ್ಯಾಂಟಿಕ್ ದೃಶ್ಯವನ್ನು ಚಿತ್ರೀಕರಿಸುತ್ತಿತ್ತು. ಈ ಫೋಟೋ ನೋಡಿ ನೆಟ್ಟಿಗರು ಅಸಭ್ಯವಾಗಿ ಕಾಣುತ್ತಿದ್ದೀರಾ ಎಂದು ಕಮೆಂಟ್ ಮಾಡುತ್ತಿದ್ದರು.

    ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ವಿಜಯ್ ಹಾಗೂ ಅನನ್ಯ ಬೋಟಿನಲ್ಲಿ ಹೋಗುತ್ತಿರುತ್ತಾರೆ. ವಿಜಯ್ ಅವರು ಮೊದಲು ಬೋಟ್ ಒಳಗೆ ಹೋಗಿ ಕುಳಿತಿರುತ್ತಾರೆ. ಈ ವೇಳೆ ಬಿಳಿ ಬಣ್ಣದ ಶಾರ್ಟ್ಸ್ ಹಾಗೂ ಟಾಪ್ ಧರಿಸಿದ ಅನನ್ಯ ಅಲ್ಲಿಗೆ ಬಂದಿದ್ದು, ಅಲ್ಲಿಯೇ ಕುಳಿತಿದ ವಿಜಯ್ ಅವರನ್ನು ಅಪ್ಪಿಕೊಂಡಿದ್ದಾರೆ. ವಿಜಯ್ ಅವರನ್ನು ಅಪ್ಪಿಕೊಂಡಾಗ ಅನನ್ಯ ವಿಚಿತ್ರವಾಗಿ ಎಕ್ಸ್‌ಪ್ರೆಶನ್ ಕೊಟ್ಟಿದ್ದು, ಅದನ್ನು ನೋಡಿದ ನೆಟ್ಟಿಗರು ಇಬ್ಬರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ಫೈಟರ್ ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ಟಾಲಿವುಡ್ ನಟಿ ಚಾರ್ಮಿ ಕೌರ್ ಕೂಡ ನಟಿಸುತ್ತಿದ್ದಾರೆ. ಈ ಹಿಂದೆ ಅನನ್ಯ ಪಾಂಡೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಅವರ ಜೊತೆಗಿದ್ದ ಫೋಟೋವನ್ನು ಹಂಚಿಕೊಂಡಿದ್ದರು. ಅಲ್ಲದೆ ಅದಕ್ಕೆ, “ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲು ಖುಷಿಯಾಗುತ್ತಿದೆ. ಅಲ್ಲದೆ ಪೂರಿ ಜಗ್ಗನಾಥ್ ಹಾಗೂ ವಿಜಯ್ ದೇವರಕೊಂಡ ಜೊತೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದರು.

     

    View this post on Instagram

     

    #vijaydevarkonda #ananyapanday and #charmeekaur snapped at Versova ferry #viralbhayani @viralbhayani

    A post shared by Viral Bhayani (@viralbhayani) on

  • ಬಿಟೌನ್ ಸುಂದರಿ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್

    ಬಿಟೌನ್ ಸುಂದರಿ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್

    ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಬಾಲಿವುಡ್ ನಟಿಯೊಂದಿಗೆ ರೊಮ್ಯಾನ್ಸ್ ಮಾಡಲಿದ್ದು, ನಟಿಯೊಂದಿಗೆ ವಿಜಯ್ ಇರುವ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಸದ್ಯ ವಿಜಯ್ ಹಾಗೂ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ಕಾಂಬಿನೇಷನ್‍ನಲ್ಲಿ ಸಿನಿಮಾವೊಂದು ಸೆಟ್ಟೇರಿರುವುದು ಗೊತ್ತಿರುವ ವಿಷಯ. ಆದರೆ ಈಗ ಈ ಸಿನಿಮಾಗೆ ನಾಯಕಿ ಫಿಕ್ಸ್ ಆಗಿದ್ದಾರೆ. ‘ಸ್ಟುಡೆಂಟ್ ಆಫ್ ದಿ ಇಯರ್ 2’ ಸಿನಿಮಾದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟ ಅನನ್ಯಾ ಪಾಂಡೆ ವಿಜಯ್ ಹೊಸ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಹೀಗಾಗಿ ವಿಜಯ್, ಅನನ್ಯಾ ಸಿನಿಮಾ ತಂಡದ ಜೊತೆಗಿರುವ ಫೋಟೋಗಳು ಸದ್ಯ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.

    ವಿಜಯ್ ಹಾಗೂ ಪೂರಿ ಕಾಂಬಿನೇಷನ್‍ನಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ‘ಫೈಟರ್’ ಎಂದು ಹೆಸರಿಡಲಾಗಿದ್ದು, ಈ ಚಿತ್ರ ಹಿಂದಿ, ತೆಲುಗು ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಬಿಡುಗಡೆಗೊಳ್ಳಲಿದೆ. ‘ಫೈಟರ್’ ಚಿತ್ರವನ್ನು ಬಾಲಿವುಡ್‍ನಲ್ಲಿ ಕರಣ್ ಜೋಹರ್ ನಿರ್ಮಿಸುತ್ತಿದ್ದು, ತೆಲುಗಿನಲ್ಲಿ ಪೂರಿ ಜಗನ್ನಾಥ್ ಹಾಗೂ ನಟಿ ಚಾರ್ಮಿ ಹಣ ಹೂಡಿದ್ದಾರೆ.

    https://www.instagram.com/p/B8xwjk7hmFd/

    ಈ ಹಿಂದೆ ‘ಫೈಟರ್’ ಚಿತ್ರದಲ್ಲಿ ವಿಜಯ್‍ಗೆ ಜಾಹ್ನವಿ ಕಪೂರ್ ಜೋಡಿಯಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಕೊನೆಗೆ ಅನನ್ಯಾರನ್ನು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದ್ದು, ಚಿತ್ರದಲ್ಲಿ ವಿಜಯ್‍ಗೆ ಅನನ್ಯಾ ಸಾಥ್ ಕೊಡಲಿದ್ದಾರೆ.

    ಈ ಚಿತ್ರದಲ್ಲಿ ಬಾಕ್ಸ್‌ರ್‌ ಆಗಿ ವಿಜಯ್ ಅಭಿನಯಿಸಲಿದ್ದು, ಇದಕ್ಕಾಗಿ ಸದ್ಯ ನಟ ಟ್ರೈನಿಂಗ್ ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ವಿಜಯ್ ನಟನೆಯ ‘ಡಿಯರ್ ಕಾಮ್ರೇಡ್’ ಹಾಗೂ ‘ವರ್ಲ್ಡ್ ಫೇಮಸ್ ಲವ್ವರ್’ ಸಿನಿಮಾ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆಗಿವೆ. ಆದರೆ ಫೈಟರ್ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು, ಈ ಚಿತ್ರವಾದರೂ ವಿಜಯ್‍ಗೆ ಯಶಸ್ಸು ತಂದುಕೊಡುತ್ತಾ ಎಂದು ಕಾದು ನೋಡಬೇಕಿದೆ.