ತಮಿಳು ನಟ ಸೂರ್ಯ (Suriya) ನಟನೆಯ 46ನೇ ಚಿತ್ರದಲ್ಲಿ ವಿಜಯ್ ದೇವರಕೊಂಡ (Vijay Devarakonda) ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ರಾಧಿಕಾ ಪಂಡಿತ್‌ಗೆ ಸಿನಿಮಾ – ಯಶ್ ತಾಯಿ ಹೇಳೋದೇನು?

ಇತ್ತೀಚೆಗೆ ಸೂರ್ಯ ನಟನೆಯ 46ನೇ ಚಿತ್ರಕ್ಕೆ (Suriya 46) ಅದ್ಧೂರಿಯಾಗಿ ಚಾಲನೆ ನೀಡಲಾಗಿತ್ತು. ಈ ಸಿನಿಮಾದಲ್ಲಿ ನಾಯಕಿಯಾಗಿ ‘ಪ್ರೇಮಲು’ ನಟಿ ಮಮಿತಾ ಬೈಜು ನಟಿಸಲಿದ್ದಾರೆ. ಚಿತ್ರದಲ್ಲಿ ವಿಜಯ್ ದೇವರಕೊಂಡ ಕೂಡ ನಟಿಸಲಿದ್ದಾರೆ ಎನ್ನಲಾಗಿದೆ. ಹೀಗೊಂದು ಸುದ್ದಿಯೊಂದು ಟಾಲಿವುಡ್ ಗಲ್ಲಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಅತ್ಯಾಚಾರ ಕೇಸ್ – ನಾಪತ್ತೆಯಾಗಿದ್ದ ನಟ ಮಡೆನೂರು ಮನು ಅರೆಸ್ಟ್

ಚಿತ್ರದಲ್ಲಿ ತಿರುವು ಕೊಡುವ ಪಾತ್ರದಲ್ಲಿ ವಿಜಯ್ ನಟಿಸಲಿದ್ದಾರೆ ಎನ್ನಲಾಗಿದೆ. ನಟನೊಂದಿಗೆ ಚಿತ್ರತಂಡ ಮಾತುಕತೆ ನಡೆಸಿದೆಯಂತೆ. ಆದರೆ ವಿಜಯ್ ದೇವರಕೊಂಡ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆಯಾ ಎಂಬುದನ್ನು ಚಿತ್ರತಂಡವೇ ಅಧಿಕೃತವಾಗಿ ತಿಳಿಸಬೇಕಿದೆ.

ವಿಜಯ್ ಸದ್ಯ `ಕಿಂಗ್‌ಡಮ್’ ಚಿತ್ರದ ರಿಲೀಸ್‌ಗಾಗಿ ಎದುರು ನೋಡ್ತಿದ್ದಾರೆ. ಭಾಗ್ಯಶ್ರೀ ಜೊತೆ ನಟ ರೊಮ್ಯಾನ್ಸ್ ಮಾಡಿದ್ದಾರೆ. ಈ ಚಿತ್ರ ಜುಲೈ 4ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.






ವಿಜಯ್ ದೇವರಕೊಂಡ (Vijay Devarakonda) ಸಹೋದರ ಆನಂದ್ (Anand Devarakonda) ಸಿನಿಮಾಗೆ ರಶ್ಮಿಕಾ ಸಾಥ್ ನೀಡಿದ್ದಾರೆ. ಆನಂದ್ ಮತ್ತು ವೈಷ್ಣವಿ ನಟನೆಯ ಹೊಸ ಸಿನಿಮಾದ ಮುಹೂರ್ತ ಇಂದು (ಮೇ 15) ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಈ ಸಿನಿಮಾಗೆ ರಶ್ಮಿಕಾ ಕ್ಲ್ಯಾಪ್ ಮಾಡಿ ಟೀಮ್‌ಗೆ ವಿಶ್ ಮಾಡಿದ್ದಾರೆ. ಇದನ್ನೂ ಓದಿ:












