ಬಾಲಿವುಡ್‌ನ ನಂಬರ್ ಒನ್ ಶೋ ಕರಣ್ ಜೋಹರ್ ನಿರೂಪಣೆಯ ಶೋನಲ್ಲಿ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಭಾಗವಹಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಎಪಿಸೋಡ್‌ನ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪ್ರೋಮೋದಲ್ಲಿ `ಲೈಗರ್’ ಜೋಡಿ ತಮ್ಮ ಸೆಕ್ಸ್ ಲೈಫ್ ಮತ್ತು ಡೇಟಿಂಗ್ ಕುರಿತು ಮಾತನಾಡಿದ್ದಾರೆ.
ಬಿಟೌನ್‌ನ ಫಿಲ್ಮ್ಂ ಮೇಕರ್ ಕರಣ್ ಜೋಹರ್ ಶೋನಲ್ಲಿ ಒಂದಲ್ಲಾ ಒಂದು ಬ್ರೇಕಿಂಗ್ ನ್ಯೂಸ್ ಕೊಡುವುದರ ಮೂಲಕ ಸೌಂಡ್ ಮಾಡ್ತಿದ್ದಾರೆ. ಇದೀಗ ಈ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಭಾಗವಹಿಸಿದ್ದು, ವಿಜಯ್ ಕೊನೆಯ ಬಾರಿ ಸೆಕ್ಸ್ ಮಾಡಿರುವುದರ ಬಗ್ಗೆ ಕರಣ್ ಕೇಳಿದ್ದಾರೆ. ಜತೆಗೆ ಅನನ್ಯಾ ಡೇಟಿಂಗ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಮಾದೇವನಿಗೆ ಸೋನಲ್ ಮೊಂಥೆರೋ ಜೋಡಿ
View this post on Instagram
`ಕಾಫಿ ವಿತ್ ಕರಣ್’ ಹೊಸ ಸೀಸನ್‌ನಲ್ಲಿ, ವಿಜಯ್ ತಮ್ಮ ಕೊನೆಯ ಬಾರಿಯ ಸೆಕ್ಸ್ ಕಾರಿನಲ್ಲಿ ಮಾಡಿದ್ದೇನೆ ಎಂದು ಶೋನಲ್ಲಿ ರಿವೀಲ್ ಮಾಡಿದ್ದಾರೆ. ನಂತರ ಅನನ್ಯಾ ಪಾಂಡೆಗೆ ಆದಿತ್ಯ ರಾವ್ ಕಪೂರ್ ಜತೆಗಿನ ಡೇಟಿಂಗ್ ವಿಚಾರ ಕೇಳಿದ್ದಾರೆ. ವಿಜಯ್ ಮತ್ತು ಅನನ್ಯಾ ಎಪಿಸೋಡ್ ಪ್ರೋಮೋನೇ ಸಖತ್ ವೈರಲ್ ಆಗುತ್ತಿದ್ದು, ಹೆಚ್ಚಿನ ಅಪ್‌ಡೇಟ್‌ಗೆ ಶೋ ಬರುವವರೆಗೂ ಕಾದುನೋಡಬೇಕಿದೆ.





ವಿಜಯ್ ದೇವರಕೊಂಡ, ಪುರಿ ಜಗನ್ನಾಥ್ ಕಾಂಬಿನೇಷನ್‌ನ ಹೈವೋಲ್ಟೇಜ್ ಕಾಂಬಿನೇಶನ್ `ಲೈಗರ್’ ಸೆಟ್ಟೇರಿದ ದಿನದಿಂದಲೂ ಸಾಕಷ್ಟು ಸುದ್ದಿ ಮಾಡಿತ್ತು. ಪೋಸ್ಟರ್‌ಗಳಿಂದಲೇ ನಿರೀಕ್ಷೆ ಹೆಚ್ಚಿಸಿದ್ದ `ಲೈಗರ್’ ಟ್ರೈಲರ್ ರಿಲೀಸ್ ಆಗಿ, ಈಗ ಸಿನಿಮಾ ಮೇಲಿನ ಕ್ಯೂರಿಯಾಸಿಟಿಯನ್ನು ದುಪ್ಪಟ್ಟು ಮಾಡಿದೆ. ಮಾಸ್ ಲುಕ್‌ನಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದು, ವಿಜಯ್‌ಗೆ ನಾಯಕಿಯಾಗಿ ಬ್ಯೂಟಿ ಕ್ವೀನ್ ಅನನ್ಯಾ ಪಾಂಡೆ ನಟಿಸಿದ್ದಾರೆ. ʻಲೈಗರ್ʼನಲ್ಲಿ ವಿಜಯ್ ರಗಡ್ ಆಗಿ ನಟಿಸಿದ್ದು, ಟ್ರೈಲರ್ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.ಈ ಸಿನಿಮಾ ಮೂಲಕ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬರುತ್ತಿದ್ದಾರೆ. ಇದನ್ನೂ ಓದಿ:













ವಿಜಯ್ ಅವರ ʻಲೈಗರ್ʼ ಚಿತ್ರದ ಅರೆ ನಗ್ನ ಫೋಟೋಗೆ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ. ವಿಜಯ್, ಇನ್ಮುಂದೆ ನಿಮ್ಮ ಹೆಸರು ಲೈಗರ್ ನಿಮಗೆ ನಮ್ಮ ಪ್ರೀತಿ ಮತ್ತು ಬೆಂಬಲವಿದೆ. ನೀವು ಏನು ಮಾಡಬಹುದು ಎಂಬುದನ್ನು ಜಗತ್ತಿಗೆ ತೋರಿಸಿ. ಆಲ್ ದಿ ಬೆಸ್ಟ್ ಎಂದು ಬರೆದುಕೊಂಡಿದ್ದಾರೆ. ಇನ್ನು ರಶ್ಮಿಕಾ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ವಿಜಯ್, ಋಷಿ `ಗೀತ ಗೋವಿಂದಂ’ ಚಿತ್ರದ ಕಾಲದಿಂದಲೂ ನೀವು ನನಗೆ ಸ್ಫೂರ್ತಿಯಾಗಿದ್ದೀರಿ. ಜಗತ್ತು ʻಲೈಗರ್ʼ ಮಿಂಚನ್ನು ನೋಡುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ. ಇದೀಗ ಅವರಿಬ್ಬರ ಪೋಸ್ಟ್ ವೈರಲ್ ಆಗಿದೆ. ಈ ಬಗ್ಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಚರ್ಚೆ ನಡೆಸುತ್ತಿದ್ದಾರೆ.
ನಮ್ಮಿಬ್ಬರ ನಡುವೆ ಏನು ಇಲ್ಲ ಎಂದು ಹೇಳಿಕೊಳ್ಳುವ ಈ ಜೋಡಿ. ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಾ ನಮ್ಮ ನಡುವೆ ಪ್ರೀತಿ ಎಂಬ ರೀತಿಯಲ್ಲಿ ಕಾಣಿಸಿಕೊಳ್ತಿರುತ್ತಾರೆ. ಒಟ್ನಲ್ಲಿ ರಶ್ಮಿಕಾ, ವಿಜಯ್ ವಿಶ್ ಮಾಡಿರುವ ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
