Tag: ವಿಜಯ್ ದಳಪತಿ

  • ವಿಜಯ್ ಪಕ್ಷಕ್ಕೆ ಸೇರಿಕೊಳ್ತಾರಾ ನಟ ಸಮುದ್ರಕನಿ?

    ವಿಜಯ್ ಪಕ್ಷಕ್ಕೆ ಸೇರಿಕೊಳ್ತಾರಾ ನಟ ಸಮುದ್ರಕನಿ?

    ಮ್ಮದೇ ಸ್ವಂತ ಪಕ್ಷ ಕಟ್ಟಿ ರಾಜಕೀಯ ಅಖಾಡಕ್ಕೆ ಇಳಿದಿರುವ ದಳಪತಿ ವಿಜಯ್ (Vijay Thalapathy) ಬಗ್ಗೆ ನಟ ಕಮ್ ನಿರ್ದೇಶಕ ಸಮುದ್ರಕನಿ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯ್ ರಾಜಕೀಯ ಎಂಟ್ರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಅವರ ಪಕ್ಕದಲ್ಲಿ ನಡೆಯಲು ಉತ್ಸುಕನಾಗಿದ್ದೇನೆ ಎಂದು ಸಮುದ್ರಕನಿ (Samuthirakani) ವಿಜಯ್ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಕುಟುಕಿದ ಜಗ್ಗೇಶ್‌ಗೆ ಕಾಲಾಯ ತಸ್ಮೈ ನಮಃ ಎಂದ ವರ್ತೂರು ಸಂತೋಷ್‌

    2 ವಾರಗಳ ಹಿಂದೆ ವಿಜಯ್ ‘ತಮಿಳಿಗ ವೆಟ್ರಿ ಕಳಗಂ’ ಎಂದು ತಮ್ಮ ಪಕ್ಷದ ಹೆಸರನ್ನು ಘೋಷಿಸುವ ಮೂಲಕ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಬಿಟ್ಟು ಜನಸೇವೆ ಮಾಡಲು ನಿರ್ಧರಿಸಿರುವ ವಿಜಯ್‌ಗೆ ತಲೈವಾ ಸೇರಿದಂತೆ ಅನೇಕರು ಅಭಿನಂದನೆ ತಿಳಿಸಿದ್ದಾರೆ. ಈ ಬೆನ್ನಲ್ಲೇ ಸಮುದ್ರಕನಿ ಕೂಡ ವಿಜಯ್ ಬಗ್ಗೆ ಮಾತನಾಡಿದ್ದಾರೆ.

    ವಿಜಯ್ ತುಂಬಾ ಒಳ್ಳೆಯ ವ್ಯಕ್ತಿ. ಅವರ ಕೆಲಸಕ್ಕೆ ಸದಾ ನನ್ನ ಬೆಂಬಲ ಇರುತ್ತದೆ. ಅವರೊಂದಿಗೆ ಸೇರಿ ನಾನು ಕೆಲಸ ಮಾಡಲು ಸಿದ್ಧನಿದ್ದೇನೆ. ಆದರೂ ಅವರು ನನ್ನನ್ನು ಪ್ರಚಾರಕ್ಕೆ ಕರೆಯಲಿಲ್ಲ. ಒಳ್ಳೆಯ ಕೆಲಸಕ್ಕೆ ನಾನು ಮೊದಲು ಹೋಗುತ್ತೇನೆ. ಅವರ ಗೆಲುವಿಗಾಗಿ ನಾನು ನಿಲ್ಲುತ್ತೇನೆ ಎಂದು ಹೇಳಿದ್ದಾರೆ. ಬಳಿಕ ವಿಜಯ್ ಹೊಸ ಹೆಜ್ಜೆಗೆ ಸಮುದ್ರಕನಿ ಶುಭಕೋರಿದ್ದಾರೆ.

    ನನ್ನ ಮಟ್ಟಿಗೆ, ರಾಜಕೀಯವು ಕೇವಲ ಇನ್ನೋಂದು ವೃತ್ತಿಯಲ್ಲ. ಇದು ಜನರಿಗೆ ಮಾಡುವ ಪವಿತ್ರ ಸೇವೆ ಎಂದಿದ್ದಾರೆ ಸಮುದ್ರಕನಿ. ಪಕ್ಷದ ಚಟುವಟಿಕೆಗಳಿಗೆ ಯಾವುದೇ ಅಡ್ಡಿಯಾಗದಂತೆ ನಾನು ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರೈಸಿದ ನಂತರ ಜನರ ಸೇವೆಗಾಗಿ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಬಯಸುತ್ತೇನೆ. ಇದು ತಮಿಳುನಾಡಿನ ಜನತೆಗೆ ನನ್ನ ಕೃತಜ್ಞತೆ ಮತ್ತು ಕರ್ತವ್ಯ ಎಂದು ನಾನು ಪರಿಗಣಿಸುತ್ತೇನೆ ಎಂದು ಸಮುದ್ರಕನಿ ರಾಜಕೀಯಕ್ಕೆ ಬರುವ ಬಗ್ಗೆಯೂ ಮಾತನಾಡಿದ್ದಾರೆ.

    ಇದೀಗ ವಿಜಯ್ ಪರ ಸಮುದ್ರಕನಿ ಮಾತನಾಡುತ್ತಿದ್ದಂತೆ ವಿಜಯ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂದೇ ಸುದ್ದಿಯಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಇದನ್ನೂ ಓದಿ:ನಟಿ ರಶ್ಮಿಕಾ ಸಂಚರಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶ

    ಸಾಕಷ್ಟು ಸಮಯದಿಂದ ವಿಜಯ್ ದಳಪತಿ ಅವರು ರಾಜಕೀಯಕ್ಕೆ ಬರುವ ಬಗ್ಗೆ ಚಾಲ್ತಿಯಲ್ಲಿತ್ತು. ಯಾವ ಪಕ್ಷಕ್ಕೆ ಸೇರಬಹುದು ಎಂದು ಭಾರೀ ಚರ್ಚೆಯಾಗಿತ್ತು. ಇದೀಗ ತಮ್ಮದೇ ಪಕ್ಷ ಕಟ್ಟಿ ಈ ಮೂಲಕ ಜನಸೇವೆ ಮಾಡಲು ವಿಜಯ್ ಮುಂದಾಗಿದ್ದಾರೆ. 2026ರ ವಿಧಾನಸಭಾ ಚುನಾವಣೆಗೆ ವಿಜಯ್ ಪಕ್ಷ ಸ್ಪರ್ಧೆಗೆ ಇಳಿಯಲಿದೆ.

  • ಸಿಎಂ ಆದರೆ ಏನು ಮಾಡ್ತೀರಿ? ವೈರಲ್ ಆಗ್ತಿದೆ ವಿಜಯ್ ಕೊಟ್ಟ ಉತ್ತರ

    ಸಿಎಂ ಆದರೆ ಏನು ಮಾಡ್ತೀರಿ? ವೈರಲ್ ಆಗ್ತಿದೆ ವಿಜಯ್ ಕೊಟ್ಟ ಉತ್ತರ

    ಕಾಲಿವುಡ್ ನಟ ವಿಜಯ್ ದಳಪತಿ (Vijay Thalapathy) ಅವರು ಸಾಕಷ್ಟು ಸಮಯದಿಂದ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಈಗ ‘ತಮಿಳಿಗ ವೆಟ್ರಿ ಕಳಗಂ’ (TVK) ಎಂಬ ಪಕ್ಷ ಸ್ಥಾಪಿಸಿ ವಿಜಯ್ ರಾಜಕೀಯ (Politics) ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಈ ಹಿಂದೆ ಅವರು ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

    ನೀವು ನಿಜ ಜೀವನದಲ್ಲಿ ಮುಖ್ಯಮಂತ್ರಿಯಾದರೆ ಏನಾಗುತ್ತದೆ ಎಂದು ಕೇಳಲಾಗಿತ್ತು. ಈ ಪ್ರಶ್ನೆ ವಿಜಯ್, ಸಿಎಂ ಆದರೆ ʻನಾನು ಎಂದಿಗೂ ನಟಿಸುವುದಿಲ್ಲ’ ಎಂದು ಉತ್ತರಿಸಿದ್ದರು. ರಾಜಕೀಯಕ್ಕೆ ವಿಜಯ್ ಎಂಟ್ರಿ ಕೊಟ್ಟಿರೋ ಬೆನ್ನಲ್ಲೇ ಸಿಎಂ ಸ್ಥಾನದ ಕುರಿತು ನೀಡಿದ್ದ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಇಂಡಿಯಾ ವಿಶ್ವಕಪ್ ಗೆದ್ದರೆ ಬೆತ್ತಲಾಗ್ತೀನಿ ಎಂದು ಚಾಲೆಂಜ್ ಹಾಕಿದ್ದ ಪೂನಂ

    ಸದ್ಯ ‘ತಮಿಳಿಗ ವೆಟ್ರಿ ಕಳಗಂ’ ಪಕ್ಷ ವಿಜಯ್ ಸ್ಥಾಪಿಸಿರುವುದಕ್ಕೆ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಅವರ ಮುಂದಿನ ನಡೆಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

    ಕಳೆದ ನವೆಂಬರ್‌ನಲ್ಲಿ ತ್ರಿಷಾ ಜೊತೆಗಿನ ವಿಜಯ್ ದಳಪತಿ ಸಿನಿಮಾ ರಿಲೀಸ್ ಆದ್ಮೇಲೆ ಹೊಸ ಚಿತ್ರಗಳನ್ನು ವಿಜಯ್ ಒಪ್ಪಿಕೊಂಡಿದ್ದಾರೆ. ವಿಜಯ್ ಹೊಸ ಪಕ್ಷದ ಕೆಲಸದ ಜೊತೆಗೆ ಸಿನಿಮಾ ಮಾಡುವ ಹುಮ್ಮಸಿನಲ್ಲಿದ್ದಾರೆ.

  • Leo ಟ್ರೈಲರ್‌ಗೆ ಮಿಶ್ರ ಪ್ರತಿಕ್ರಿಯೆ- ಸಿನಿಮಾ ಗೆಲುವಿನ ಬಗ್ಗೆ ತಲೆಕೆಡಿಸಿಕೊಂಡ ದಳಪತಿ ಫ್ಯಾನ್ಸ್

    Leo ಟ್ರೈಲರ್‌ಗೆ ಮಿಶ್ರ ಪ್ರತಿಕ್ರಿಯೆ- ಸಿನಿಮಾ ಗೆಲುವಿನ ಬಗ್ಗೆ ತಲೆಕೆಡಿಸಿಕೊಂಡ ದಳಪತಿ ಫ್ಯಾನ್ಸ್

    ಳಪತಿ ವಿಜಯ್ (Vijay Thalapathy) ಫ್ಯಾನ್ಸ್ ಕಂಗಾಲಾಗಿದ್ದಾರೆ. ಇನ್ನೇನು ಬಿಡುಗಡೆ ಹೊಸ್ತಿಲಲ್ಲಿರುವ ಲಿಯೋ (Leo Film) ಸಿನಿಮಾದ ಟ್ರೈಲರ್‌ಗೆ ಸಿಕ್ಕ ಪ್ರತಿಕ್ರಿಯೆಗೆ ಮುಖ ಮುಚ್ಚಿಕೊಂಡಿದ್ದಾರೆ. ನಿರ್ದೇಶಕ ಲೋಕೇಶ್ ಕನಕರಾಜ್ ಕಡೆ ಅನುಮಾನದಿಂದ ನೋಡುತ್ತಿದ್ದಾರೆ. ಹಾಗಿದ್ದರೆ ಲಿಯೋ ಏನಾಗಲಿದೆ ? ಯಾಕೀ ಗೊಂದಲ? ಇಲ್ಲಿದೆ ಮಾಹಿತಿ. ಇದನ್ನೂ ಓದಿ:‘ಜವಾನ್’ ಕಲೆಕ್ಷನ್ 1103.27 ಕೋಟಿ ರೂಪಾಯಿ: ಅಧಿಕೃತ ಘೋಷಣೆ

    ‘ಲಿಯೋ’ ಚಿತ್ರ ವಿಜಯ್ ಹಾಗೂ ಲೋಕೇಶ್ ಕಾಂಬಿನೇಶನ್ ಎರಡನೇ ಸಿನಿಮಾ. ಮಾಸ್ಟರ್‌ನಲ್ಲಿ ಒಂದಾಗಿದ್ದ ಈ ಜೋಡಿ ಲಿಯೋಕ್ಕೆ ಮತ್ತೆ ಕೈ ಜೋಡಿಸಿದೆ. ಆದರೆ ಲಿಯೋ ಟ್ರೈಲರ್ ನೋಡಿ ಖುದ್ದು ಕೆಲವು ಫ್ಯಾನ್ಸ್ ಮುಖ ಸಪ್ಪೆ ಮಾಡಿಕೊಂಡಿದ್ದಾರೆ. ಏನೋ ಹೊಸದನ್ನು ನೋಡುತ್ತೇವೆ ಎಂದಿದ್ದವರಿಗೆ ಮತ್ತದೇ ರಿವೇಂಜ್ ಕತೆ ಬೇಸರ ಮೂಡಿಸಿದೆ. ಟ್ರೈಲರ್ ಹೀಗಿದ್ದರೆ ಇನ್ನು ಸಿನಿಮಾ ಗತಿ ಏನಾಗಬೇಡ? ಅನುಮಾನ ಆಕಾಶಕ್ಕೇರಿದೆ. ಉತ್ತರ ಹೇಳಬೇಕಾದ ಲೋಕೇಶ್ ಇನ್ ಸೈಲೆಂಟ್ ಮೋಡ್‌ನಲ್ಲಿದ್ದಾರೆ.

    ‘ವಿಕ್ರಮ್’ (Vikram) ಸಿನಿಮಾ ಆರು ನೂರು ಕೋಟಿ ಬಾಚಿತ್ತು. ಹೀಗಾಗಿ ವಿಜಯ್ ಸಿನಿಮಾಕ್ಕೂ ಅದೇ ನಿರೀಕ್ಷೆ ಹುಟ್ಟಿಕೊಂಡಿತ್ತು. ಹೊಸದನ್ನು ಹೇಳಲಿದ್ದಾರೆ ಲೋಕೇಶ್ ಎನ್ನುವ ನಿರೀಕ್ಷೆ ಇತ್ತು. ಈಗ ಅದು ಊರಾಚೆ ಬಿದ್ದಿದೆ. ಇದೇ ಅಕ್ಟೋಬರ್ 19ಕ್ಕೆ ಬಿಡುಗಡೆಯಾಗಲಿದೆ. ಭಕ್ತಗಣ ಹೈರಾಣು ಅಂಡ್ ದಿಕ್ಕಾಪಾಲು. ಬೀಸ್ಟ್ (Beast) ಮತ್ತು ವಾರಿಸು (Varisu) ಅಡ್ಡಡ್ಡ ಮಲಗಿದ್ದವು. ಈಗ ಲಿಯೋ ಕೂಡ ಹಾಗಾದರೆ ? ಉತ್ತರ ಇಲ್ಲದ ಪ್ರಶ್ನೆ ಮುಂದಿಟ್ಟುಕೊಂಡಿದೆ ದಳಪತಿ ದಳ. ಏನಾಗಲಿದೆಯೋ ಲಿಯೋ ಸಿನಿಮಾ? ಕಾಯಬೇಕಷ್ಟೇ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Leo ಪೋಸ್ಟರ್‌ ಔಟ್- ರಗಡ್‌ ಲುಕ್‌ನಲ್ಲಿ ಅರ್ಜುನ್ ಸರ್ಜಾ

    Leo ಪೋಸ್ಟರ್‌ ಔಟ್- ರಗಡ್‌ ಲುಕ್‌ನಲ್ಲಿ ಅರ್ಜುನ್ ಸರ್ಜಾ

    ಟ ಅರ್ಜುನ್ ಸರ್ಜಾ (Arjun Sarja) ಬಹುಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ವಿಜಯ್ ದಳಪತಿ (Vijay Thalapathy) ಜೊತೆ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅಬ್ಬರಿಸಲಿದ್ದಾರೆ. ಚಿತ್ರದ ಲುಕ್ ಕೂಡ ರಿವೀಲ್ ಆಗಿದ್ದು, ರಗಡ್ ಆಗಿ ನಟ ಕಾಣಿಸಿಕೊಂಡಿದ್ದಾರೆ.

    ಪಾಸಿಟಿವ್ ಮತ್ತು ನೆಗೆಟಿವ್ ಪಾತ್ರಗಳ ಜೊತೆಗೆ ಯಾವುದೇ ಪಾತ್ರವಾಗಿದ್ದರೂ, ಆ ಪಾತ್ರವೇ ತಾವಾಗಿ ನಟಿಸುವ ಸಹಜ ಅರ್ಜುನ್ ಸರ್ಜಾ ಈಗ ‘ಲಿಯೋ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಹೆರಾಲ್ಡ್ ದಾಸ್’ ಪಾತ್ರದಲ್ಲಿ ನಟ ಜೀವ ತುಂಬಿದ್ದಾರೆ. ಸದ್ಯ ಅನಾವರಣವಾಗಿರುವ ಪೋಸ್ಟರ್‌ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.

    ವಿಜಯ್ ದಳಪತಿ, ತ್ರಿಶಾ ಕೃಷ್ಣನ್ (Thrisha Krishnan) ನಟನೆಯ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಅವರ ರೋಲ್ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ. ಇದನ್ನೂ ಓದಿ:ಗ್ರಾಮಾಯಣಕ್ಕೆ ಎಂಟ್ರಿ ಕೊಟ್ಟ ಲೂಸ್ ಮಾದ ಯೋಗಿ

    ಅಕ್ಟೋಬರ್ 5ಕ್ಕೆ ‘ಲಿಯೋ’ (Leo Film) ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಆಗಲಿದೆ. ಚಿತ್ರದ ಝಲಕ್ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಸಿನಿಮಾ ಯಾವಾಗ ತೆರೆ ಕಾಣಲಿದೆ ಎಂದು ದಳಪತಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಜಯ್ ‘ಲಿಯೋ’ ಸಿನಿಮಾ ಮುಂದೆ ಬರಲಿದೆಯಾ ಸಲಾರ್? ಇಲ್ಲಿದೆ ಅಪ್‌ಡೇಟ್

    ವಿಜಯ್ ‘ಲಿಯೋ’ ಸಿನಿಮಾ ಮುಂದೆ ಬರಲಿದೆಯಾ ಸಲಾರ್? ಇಲ್ಲಿದೆ ಅಪ್‌ಡೇಟ್

    ಲಾರ್ (Salaar) ಬಿಡುಗಡೆ ದಿನ ಮುಂದೆ ಹೋಗಿದ್ದಿನ್ನೂ ಖಚಿತವಾಗಿಲ್ಲ. ಅಷ್ಟರಲ್ಲಿ ಭಾರತೀಯ ಸಿನಿ ರಂಗದಲ್ಲಿ ಅಲ್ಲಕಲ್ಲೋಲ. ಕಾರಣ ಇದು ಬಿಡುಗಡೆಯಾಗುತ್ತದೆ ಎನ್ನುವ ಕಾರಣಕ್ಕೆ ಹಲವಾರು ಸಿನಿಮಾ ಆಚೀಚೆ ಹೋಗಿದ್ದವು. ಈಗ ಎಲ್ಲ ಉಲ್ಟಾ ಪಲ್ಟಾ. ಹೀಗಾಗಿಯೇ ಈಗ ‘ಸಲಾರ್’ ಹಾಗೂ ‘ಲಿಯೋ’ (Leo) ನಡುವೆ ಯುದ್ಧ ನಡೆಯಲಿದೆ ಎನ್ನುವ ಮಾತು ಕೇಳುತ್ತಿದೆ. ಪ್ರಭಾಸ್ (Prabhas) – ದಳಪತಿ ವಿಜಯ್ ಖಡ್ಗ ಹಿಡಿಯಲಿದ್ದಾರೆ ಎನ್ನುವುದು ಹೊಯ್ದಾಡುತ್ತಿದೆ. ಇಬ್ಬರೂ ಒಂದೇ ದಿನ ತೊಡೆ ತಟ್ಟುತ್ತಾರಾ? ಇಲ್ಲಿದೆ ಮಾಹಿತಿ.

    ಸೆ.28 ಈ ದಿನಕ್ಕಾಗಿ ಸಕಲ ಸಿನಿ ಪ್ರೇಮಿಗಳು ಕಾಯುತ್ತಿದ್ದರು. ಪ್ರಭಾಸ್ ಫ್ಯಾನ್ಸ್ ಬಿಡಿ. ಅವರು ಮಹಾ ಹಬ್ಬ ಮಾಡಲು ತುದಿಗಾಲಲ್ಲಿ ನಿಂತಿದ್ದರು. ಬಂದೇ ಬಿಟ್ಟಿತು ದಿನ ಹತ್ತಿರ.ಇದನ್ನೇ ಜಪ ಮಾಡುತ್ತಿದ್ದರು. ಆದರೆ ಸಲಾರ್ ಏಕಾಏಕಿ ಮುಂದೆ ಹೋಗಿದೆ. ಇನ್ಯಾವಾಗ ಬರಲಿದೆ? ಅದಕ್ಕೂ ನಿರ್ಮಾಣ ಸಂಸ್ಥೆಯಿಂದ ಉತ್ತರ ಇಲ್ಲ. ಇದನ್ನೂ ಓದಿ:ಸೆ.24ಕ್ಕೆ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಮದುವೆ ಡೇಟ್ ಫಿಕ್ಸ್

    ಎಲ್ಲ ಅಲ್ಲಲ್ಲೇ ನಿಂತು ಬಿಟ್ಟಿದೆ. ಹೊಸ ಡೇಟ್ ಅನೌನ್ಸ್ಮೆಂಟ್ ಸದ್ಯದಲ್ಲೇ ಆಗಲಿದೆ. ಅಲ್ಲಿವರೆಗೆ ಕಾಯಬೇಕು. ಈಗ ಎದ್ದಿದೆ ನೋಡಿ ಬಿರುಗಾಳಿ. ಗ್ರೇಟ್ ಡೈರೆಕ್ಟರ್ ಲೋಕೇಶ್ ಕನಕರಾಜ್ (Lokesh Kanagaraj) ಸಾರಥ್ಯದ ‘ಲಿಯೋ’ ಅಕ್ಟೋಬರ್ ಮೂರನೇ ವಾರ ಬರಲು ನಿಗದಿಯಾಗಿದೆ. ಈಗ ಸಲಾರ್ ಕೂಡ ಅದೇ ಸಮಯಕ್ಕೆ ಎಂಟ್ರಿ ಕೊಡಲಿದೆಯಾ? ಅನುಮಾನ ಎದ್ದಿದೆ.

    ಸಲಾರ್ ಸಿನಿಮಾ 50%ರಷ್ಟು ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿ ಇದೆ. ಅದು ಮುಗಿಯೋದು ಯಾವಾಗ? ಉತ್ತರ ಖಚಿತವಿಲ್ಲ. ಆದರೂ ಅಕ್ಟೋಬರ್‌ನಲ್ಲಿ ಸಲಾರ್ ಹಾಜರಾಗಲಿದೆ ಅನ್ನೋದು ಸದ್ಯದ ಸಮಾಚಾರ. ಆದರೆ ಮೊದಲೇ ದಳಪತಿ ವಿಜಯ್ (Vijay Thalapathy) ಲಿಯೋ ಆ ದಿನಕ್ಕೆ ಫಿಕ್ಸ್ ಆಗಿದೆ. ಅದರ ಆಸುಪಾಸಿನ ವಾರದಲ್ಲಿಯೇ ಸಲಾರ್ (Salaar) ಬರಲಿದೆಯಾ? ಅಥವಾ ಇನ್ನೊಂದು ದಿನ ನೋಡಿಕೊಳ್ಳಲಿದೆಯಾ? ಅಕಸ್ಮಾತ್ ಹಾಗೇನಾದರೂ ಆದರೆ ವಿಶ್ವವೇ ದಿಕ್ಕೆಟ್ಟು ಹೋಗಲಿದೆ. ಇಬ್ಬರು ಸ್ಟಾರ್ ನಟರ ಸಿನಿಮಾ ಜಟಾಪಟಿಯಲ್ಲಿ ಪ್ರೇಕ್ಷಕ ಪ್ರಭು ಯಾರ ಕೈಹಿಡಿಯಲಿದ್ದಾರೆ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆಟ್ಟ ಸಿನಿಮಾ ಬಗ್ಗೆ ಬಾಯ್ಬಿಟ್ಟ ತಮನ್ನಾ ನೇರ ಮಾತಿಗೆ ವಿಜಯ್ ಫ್ಯಾನ್ಸ್ ಕಿಡಿ

    ಕೆಟ್ಟ ಸಿನಿಮಾ ಬಗ್ಗೆ ಬಾಯ್ಬಿಟ್ಟ ತಮನ್ನಾ ನೇರ ಮಾತಿಗೆ ವಿಜಯ್ ಫ್ಯಾನ್ಸ್ ಕಿಡಿ

    ಸಾಮಾನ್ಯವಾಗಿ ನಟ- ನಟಿಯರು ತಮ್ಮ ಸಿನಿಮಾಗಳ ಗೆಲುವಿನ ಬಗ್ಗೆ ಮಾತನಾಡುತ್ತಾರೆ. ಆದರೆ ಸಿನಿಮಾ ಸೋಲಿನ ಬಗ್ಗೆ ತುಟಿಬಿಚ್ಚಲು ಹಿಂದುಮುಂದು ನೋಡುತ್ತಾರೆ. ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವಂತೆ ತಾವು ನಟಿಸಿದ ಸಿನಿಮಾಗಳೆಲ್ಲಾ ನಮಗೆ ಇಷ್ಟ ಅಂತಲೇ ಹೇಳುತ್ತಾರೆ. ಆದರೆ ಕೆಲವೊಮ್ಮೆ ಮಾತ್ರ ಬಹಳ ದಿನಗಳ ನಂತರ ತಾವು ನಟಿಸಿದ ಕೆಟ್ಟ ಸಿನಿಮಾಗಳ ಪಟ್ಟಿ ಬಿಚ್ಚಿಡುತ್ತಾರೆ. ಇದೀಗ ತಮನ್ನಾ, ತಾವು ನಟಿಸಿದ ಕೆಟ್ಟ ಸಿನಿಮಾ ಇದು ಬೆರಳು ಮಾಡಿ ತೋರಿಸಿದ್ದಾರೆ. ಮಿಲ್ಕಿ ಬ್ಯೂಟಿ ಬಿಟ್ಟ ಬಾಣಕ್ಕೆ ವಿಜಯ್ ದಳಪತಿ (Thalapathy Vijay)  ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ತಮನ್ನಾ (Tamannah Bhatia) ಮತ್ತೆ ಲೈಮ್‌ಲೈಟ್‌ಗೆ ಮರಳಿದ್ದಾರೆ. ಕಾರಣ ರಜನಿಕಾಂತ್ (Rajanikanth) ಜೊತೆಗಿನ ಜೈಲರ್ (Jailer) ಸಿನಿಮಾ. ಕಾವಾಲಾ ಸಾಂಗ್ ಭರ್ಜರಿ ಹಿಟ್ ಆಗಿದೆ. ಸಿನಿಮಾ ಕೂಡ ರಿಲೀಸ್‌ಗೆ ಸಿದ್ಧವಿದೆ. ಈ ಹೊತ್ತಲ್ಲೇ ತಮ್ಮಿಡೀ ಚಿತ್ರಜೀವನದ ಕೆಟ್ಟ ಸಿನಿಮಾ ಯಾವುದು ಅನ್ನೋ ಸುದ್ದಿ ಬಿಚ್ಚಿಟ್ಟು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಏನಿದೆ ತಮನ್ನಾ ಬಿಚ್ಚಿಟ್ಟ ಕಥೆಯಲ್ಲಿ ಇಲ್ಲಿದೆ ಮಾಹಿತಿ. ಇದನ್ನೂ ಓದಿ:ಕಪ್ಪು ಬಿಳಿ ಬಣ್ಣದ ಬಿಕಿನಿ ಧರಿಸಿ ವಿಚಿತ್ರ ಕ್ಯಾಪ್ಷನ್ ಕೊಟ್ಟ ದೀಪಿಕಾ

    ಒಂದೇ ಒಂದು ಸ್ಟೆಪ್ ಭರ್ಜರಿ ಒಂದು ತಿಂಗಳಿಂದ ಟ್ರೆಂಡ್ ಸೃಷ್ಟಿ ಮಾಡಿದೆ. ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಕಾವಾಲಾ (Kaavala Song) ಹಾಡಿಗೆ ತಮನ್ನಾ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಸ್ಟೆಪ್‌ಗೆ ಫಿದಾ ಆದವರೆಷ್ಟೋ ಮಂದಿಯಿದ್ದಾರೆ. ಅಲ್ಲಿಂದ ತಮನ್ನಾ ಚಾರ್ಮ್ ಮತ್ತೆ ಚಾಲ್ತಿಗೆ ಬಂದಿದೆ. ಸಿನಿ ಕರಿಯರ್ ಆರಂಭದಲ್ಲಿ ತಮನ್ನಾಗೆ ಅದೆಷ್ಟು ಸ್ಟಾರ್‌ಡಂ ಇತ್ತೋ ಅದು ಮತ್ತೆ ಮರಳಿದೆ. ಈ ಹೊತ್ತಲ್ಲೇ ತಮಿಳಿನ ವಿಜಯ್ ಫ್ಯಾನ್ಸ್ ಕಣ್ಣು ಕೆಂಪು ಮಾಡಿಕೊಳ್ಳುವಂಥಹ ಮಾತನಾಡಿದ್ದಾರೆ.

    ‘ಜೈಲರ್’ ಸಿನಿಮಾ ರಿಲೀಸ್ ಹೊತ್ತಲ್ಲಿ ಮಾಧ್ಯಮಕ್ಕೆ ಸಂದರ್ಶನ ನೀಡೋದ್ರಲ್ಲಿ ಬ್ಯುಸಿಯಾಗಿದ್ದಾರೆ ತಮನ್ನಾ. ಈ ಹೊತ್ತಲ್ಲಿ ತಮನ್ನಾಗೆ ಕೆರಿಯರ್‌ನಲ್ಲಿ ಕೆಟ್ಟ ಸಿನಿಮಾ ಯಾವುದು ಅನ್ನೋ ಪ್ರಶ್ನೆ ಎದುರಾಗಿದೆ. ಇದೇ ಪ್ರಶ್ನೆಗೆ ತಮನ್ನಾ ಉತ್ತರ ದಳಪತಿ ವಿಜಯ್ ಫ್ಯಾನ್ಸ್ ಗರಂ ಆಗುವಂತೆ ಮಾಡಿದೆ. ಕಾರಣ ತಮನ್ನಾ ಕೆರಿಯರ್‌ನ ಕೆಟ್ಟ ಸಿನಿಮಾ 2010ರ ‘ಸುರ’ (Sura Film) ಎಂಬುದನ್ನ ನೇರವಾಗಿ ಹೇಳಿದ್ದಾರೆ. ಯಾಕಂದ್ರೆ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಒಟ್ನಲ್ಲಿ ಬೋಲ್ಡ್ ಮಾತಿನಿಂದಾಗಿ ತಮನ್ನಾ, ವಿಜಯ್ ಫ್ಯಾನ್ಸ್ ಮುಂದೆ ನಿಷ್ಠುರವಾಗಿದ್ದಾರೆ. ಮುಂದೆ ಒಟ್ಟಿಗೆ ಸಿನಿಮಾ ಮಾಡೋ ಸಂದರ್ಭ ಬಂದಾಗ ಪರಿಸ್ಥಿತಿ ಮಿತಿಮೀರಲೂಬಹುದು ಅಂತಿದ್ದಾರೆ ಸಿನಿಪಂಡಿತರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಶ್ಮೀರದಲ್ಲಿ ವಿಜಯ್‌ ಜೊತೆ ಕಾಣಿಸಿಕೊಂಡ ಸಂಜಯ್‌ ದತ್

    ಕಾಶ್ಮೀರದಲ್ಲಿ ವಿಜಯ್‌ ಜೊತೆ ಕಾಣಿಸಿಕೊಂಡ ಸಂಜಯ್‌ ದತ್

    `ವಾರಿಸು’ ಚಿತ್ರದ ಸಕ್ಸಸ್ ನಂತರ ವಿಜಯ್ ದಳಪತಿ (Vijay Thalapathy) ಇದೀಗ `ಲಿಯೋ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್‌ಗೆ `ಕೆಜಿಎಫ್ 2′ (KGF 2) ಖ್ಯಾತಿಯ ಸಂಜಯ್ ದತ್ (Sanjay Dutt) ಸಾಥ್ ನೀಡಿದ್ದಾರೆ.

    ರಶ್ಮಿಕಾ ಮಂದಣ್ಣ (Rashmika Mandanna) ಜೊತೆ `ವಾರಿಸು’ ಚಿತ್ರದಲ್ಲಿ ರೊಮ್ಯಾನ್ಸ್ ಮಾಡಿದ ಬಳಿಕ ಈಗ `ಲಿಯೋ’ (Leo) ಸಿನಿಮಾವನ್ನು ವಿಜಯ್ ದಳಪತಿ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ವಿಜಯ್ ಆ್ಯಂಡ್ ಟೀಂ ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ವಿಜಯ್ ಜೊತೆ ಸಂಜಯ್ ದತ್ ಕೂಡ ಕಾಣಿಸಿಕೊಂಡಿದ್ದಾರೆ.

    ಲೋಕೇಶ್‌ ಕನಗರಾಜ್‌ ನಿರ್ದೇಶನದ `ಲಿಯೋ’ ಚಿತ್ರದಲ್ಲಿ ಸಂಜಯ್ ದತ್ ಖಳನಾಯಕನಾಗಿ ಅಬ್ಬರಿಸುತ್ತಿದ್ದಾರೆ. `ಕೆಜಿಎಫ್ 2′ ಚಿತ್ರದ ನಂತರ ದಕ್ಷಿಣದ ಸಿನಿಮಾಗಳಿಗೆ ಸಂಜಯ್ ದತ್ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರೆ. ಸೌತ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಮನಸ್ಸು ಮಾಡಿರುವ ಅಧೀರ ಈಗ ವಿಜಯ್‌ಗೆ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

    `ಲಿಯೋ’ ತಮಿಳು ಸಿನಿಮಾ ಶೂಟಿಂಗ್‌ಗಾಗಿ ಸಂಜಯ್ ದತ್ ಕೂಡ ಕಾಶ್ಮೀರಕ್ಕೆ ಬಂದಿಳಿದಿದ್ದಾರೆ. ʻಲಿಯೋʼ ಟೀಂ ಸಂಜಯ್ ದತ್ ಅವರನ್ನ ಅದ್ದೂರಿಯಾಗಿ ಸ್ವಾಗತಿಸಿದೆ. ಬಳಿಕ ವಿಜಯ್- ಸಂಜಯ್  ಭೇಟಿಯಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಖುಷಿಯಿಂದ ಚಿತ್ರತಂಡ ಹೇಳಿಕೊಂಡಿದ್ದಾರೆ. ವಿಜಯ್ ಮತ್ತು ಸಂಜಯ್ ದತ್ ಜೊತೆಗಿನ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಲಿಯೋ ಟೀಂ ಶೇರ್ ಮಾಡಿದೆ.

  • ರಶ್ಮಿಕಾ ಮಂದಣ್ಣ ಎಂಟ್ರಿಯಿಂದ ವಿಜಯ್- ಸಂಗೀತಾ ದಾಂಪತ್ಯದಲ್ಲಿ ಕಲಹ?

    ರಶ್ಮಿಕಾ ಮಂದಣ್ಣ ಎಂಟ್ರಿಯಿಂದ ವಿಜಯ್- ಸಂಗೀತಾ ದಾಂಪತ್ಯದಲ್ಲಿ ಕಲಹ?

    ಕಾಲಿವುಡ್ (Kollywood) ಅಂಗಳದಲ್ಲಿ ಸದ್ಯ ಸೆನ್ಸೆಷನ್ ಕ್ರಿಯೆಟ್ ಮಾಡಿರುವ ವಿಚಾರ ಅಂದ್ರೆ ವಿಜಯ್ ದಳಪತಿ ಮತ್ತು ಸಂಗೀತಾ ದಾಂಪತ್ಯ ಜೀವನದ ಬಗ್ಗೆ ಸದ್ದು ಮಾಡ್ತಿದೆ. ಇಬ್ಬರ ಡಿವೋರ್ಸ್ ವದಂತಿಯ ನಡುವೆ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಸುದ್ದಿಯಲ್ಲಿದ್ದಾರೆ. ವಿಜಯ್ ದಾಂಪತ್ಯ ಕಲಹಕ್ಕೆ ರಶ್ಮಿಕಾ ಕಾರಣ ಎಂಬ ಸುದ್ದಿ ಹರಿದಾಡುತ್ತಿದೆ.

    ತಮಿಳು ನಟ ವಿಜಯ್ ದಳಪತಿ (Vijay) ದಾಂಪತ್ಯ ಚೆನ್ನಾಗಿಲ್ಲ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸಿನಿಮಾ ನಗರಿಯಲ್ಲಿ ಹಾಟ್ ಟಾಪಿಕ್ ಆಗಿದೆ. ಮೂಲಗಳ ಪ್ರಕಾರ, ವಿಜಯ್, ಸಂಗೀತಾ (Sangeetha) ಈಗಾಗಲೇ ಡಿವೋರ್ಸ್ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವ ಬೆನ್ನಲ್ಲೇ ವಿಜಯ್ ಬದುಕಿನ ಈ ಸಮಸ್ಯೆಗೆ ರಶ್ಮಿಕಾ ಮಂದಣ್ಣನೇ ಕಾರಣ ಅಂತಾ ನೆಟ್ಟಿಗರು ದೂರುತ್ತಿದ್ದಾರೆ. ಆಕೆ ಕಾಲಿಟ್ಟ ಕಡೆಯೆಲ್ಲ ಸಮಸ್ಯೆನೇ ಐರೆನ್‌ ಲೆಗ್‌ ನಟಿ ಎಂದು ರಶ್ಮಿಕಾ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

    `ವಾರಿಸು’ (Varisu Film) ಸಿನಿಮಾದಲ್ಲಿ ವಿಜಯ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಸಿನಿಮಾ ಮಧ್ಯೆ ರಶ್ಮಿಕಾ ಬಗೆಗಿನ ಚರ್ಚೆ ಕೂಡ ಜಾಸ್ತಿಯಾಗುತ್ತಿದೆ. 23 ವರ್ಷಗಳ ದಾಂಪತ್ಯಕ್ಕೆ ಬ್ರೇಕ್ ಬೀಳಲು ಕಾರಣವೇನು ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ. 80% ಅಷ್ಟು ಜನರು ರಶ್ಮಿಕಾನೇ ಕಾರಣ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ನೋರಾ ಫತೇಹಿ ಜೊತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ಪಾಕಿಸ್ತಾನ ನಟಿಯ ಜೊತೆ ಆರ್ಯನ್ ಖಾನ್ ಪಾರ್ಟಿ

    ವಿಜಯ್, ಸಂಗೀತಾ ದಾಂಪತ್ಯ ಬದುಕು ಚೆನ್ನಾಗಿತ್ತು. ರಶ್ಮಿಕಾ ಬಂದ ಮೇಲೆ ಹೀಗೆಲ್ಲಾ ಆಗಿದೆ. ಒಟ್ನಲ್ಲಿ ಒಂದಲ್ಲಾ ಒಂದು ವಿವಾದದ ಮೂಲಕ ರಶ್ಮಿಕಾ ಸುದ್ದಿಯಲ್ಲಿರುತ್ತಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೊಲ್ಸ್ ರಾಯಲ್ಸ್‌ಗಾಗಿ ಮತ್ತೊಂದು ವಿವಾದಕ್ಕೆ ಸಿಲುಕಿದ ವಿಜಯ್ ದಳಪತಿ

    ರೊಲ್ಸ್ ರಾಯಲ್ಸ್‌ಗಾಗಿ ಮತ್ತೊಂದು ವಿವಾದಕ್ಕೆ ಸಿಲುಕಿದ ವಿಜಯ್ ದಳಪತಿ

    ಚೆನ್ನೈ: ತಮಿಳು ಸೂಪರ್‌ ಸ್ಟಾರ್ ವಿಜಯ್ ಅವರ ದುಬಾರಿ ಕಾರು ರೋಲ್ಸ್ ರಾಯಲ್ಸ್ ಅವರನ್ನು ಸಂಕಷ್ಟಕ್ಕೆ ದೂಡಿದೆ. ಆಮದು ಮಾಡಿಕೊಂಡಿರುವ ಈ ಕಾರಿನಿಂದಾಗಿ ಅವರು ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ.

    ವಿಜಯ್ ಅವರಿಗೆ ಈ ಹಿಂದೆ ತಮ್ಮ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿಗೆ ಪ್ರವೇಶ ತೆರಿಗೆ ರೂ 1 ಲಕ್ಷ ಪಾವತಿಸಲು ತಮಿಳುನಾಡಿನ ವಾಣಿಜ್ಯ ತೆರಿಗೆ ಇಲಾಖೆಯು ಆದೇಶಿಸಿತ್ತು. ಆದರೆ ಅವರು ಅದನ್ನು ಪಾವತಿಸದಿದ್ದಕ್ಕಾಗಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಹಾಗಾಗಿ ವಿಜಯ್ ಪರ ವಕೀಲರು ಶೇ.400 ಬದಲಿಗೆ ತಿಂಗಳಿಗೆ ಶೇ.2ರಷ್ಟು ದಂಡ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.

    ವಾಣಿಜ್ಯ ತೆರಿಗೆ ಇಲಾಖೆಯು ನಟ ವಿಜಯ್ ಅವರಿಗೆ 2005ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಿಂದ ಆಮದು ಮಾಡಿಕೊಂಡ ತಮ್ಮ ರೋಲ್ಸ್ ರಾಯಲ್ಸ್‌ಗೆ ಪ್ರವೇಶ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿತ್ತು. ಆದರೆ ತೆರಿಗೆಯನ್ನು ವಜಾಗೊಳಿಸುವಂತೆ ವಿಜಯ್ ಪರವಾಗಿ ಮದ್ರಾಸ್ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಮದ್ಯ ಮಾರಾಟ ನಿಷೇಧ

    ರಾಜ್ಯಗಳು ಪ್ರವೇಶ ತೆರಿಗೆಯನ್ನು ಸಂಗ್ರಹಿಸುವ ಅಧಿಕಾರವನ್ನು ಹೊಂದಿವೆ ಎಂದು ತಿಳಿದ ವಿಜಯ್ ಅವರು ಸೆಪ್ಟೆಂಬರ್ 2021 ರಲ್ಲಿ ರೂ 7,98,075 ಪ್ರವೇಶ ತೆರಿಗೆ ಪಾವತಿಸಿದ್ದಾರೆ. ಆದರೆ ವಾಣಿಜ್ಯ ತೆರಿಗೆ ಇಲಾಖೆಯು ಡಿಸೆಂಬರ್ 2005 ಮತ್ತು ಸೆಪ್ಟೆಂಬರ್ 2021ರ ನಡುವೆ ತೆರಿಗೆ ಪಾವತಿಸದಿದ್ದಕ್ಕಾಗಿ ರೂ 30,23,609 ದಂಡವನ್ನು ವಿಧಿಸಿದೆ.

    BRIBE

    ಮಾರ್ಚ್ 14, 2022 ರಂದು ನಡೆದ ವಿಚಾರಣೆಯಲ್ಲಿ, ವಿಜಯ್ ಪರ ವಕೀಲರು ‘ಕಾರನ್ನು ಆಮದು ಮಾಡಿಕೊಂಡ ಸಮಯದಿಂದ ತಿಂಗಳಿಗೆ ಶೇ.2 ರಷ್ಟು ದಂಡವನ್ನು ವಿಧಿಸುತ್ತಾ ಬಂದಿದೆ. ಆ ದಂಡದ ಮೊತ್ತ ಶೇ.400ರಷ್ಟು ಆಗಿದೆ. ಅಲ್ಲದೇ, ತೆರಿಗೆ ಪಾವತಿಯ ವಿಳಂಬಕ್ಕಾಗಿ ಮತ್ತೆ ಮತ್ತೆ ದಂಡ ಹಾಕುತ್ತಿದೆ. ಹಾಗಾಗಿ ಈ ಪ್ರಕರಣವನ್ನು ವಜಾಗೊಳಿಸಬೇಕೆಂದು ವಕೀಲರ ಮನವಿ ಮಾಡಿದ್ದರು. ಇದನ್ನೂ ಓದಿ: ಡ್ರೋಣ್ ಕ್ಯಾಮೆರಾ ಮೂಲಕ ಆರೋಪಿ ಸೆರೆಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸರು..!

    ಭಾರತದಲ್ಲಿನ ಆಮದು ತೆರಿಗೆಗಳು ವಿಶ್ವದಲ್ಲೇ ಅತಿ ದುಬಾರಿ. ಹಾಗಾಗಿ ಜನರು ಯಾವುದೇ ವಿಧಾನದಿಂದ ತೆರಿಗೆ ಕಟ್ಟುವುದನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ, ರೋಲ್ಸ್ ರಾಯಲ್ಸ್ ಹೊರ ದೇಶಗಳಲ್ಲಿ ಕೈಗೆಟುಕುವ ದರದ ಕಾರ್ ಆಗಿದ್ದರೂ ಸಹ, ಭಾರತದಲ್ಲಿ ಸುಮಾರು 5 ಕೋಟಿ ರೂಪಾಯಿಗಳಷ್ಟು ಪಾವತಿಸಬೇಕಾಗುತ್ತದೆ. ಆದ್ದರಿಂದ ಅಂತಹ ವಾಹನಕ್ಕೆ ಲಕ್ಷ ಲಕ್ಷ ಆಮದು ತೆರಿಗೆ ಭರಿಸಬೇಕಾಗುತ್ತದೆ.