Tag: ವಿಜಯ್ ಕಿರಗಂದೂರು

  • 50ನೇ ದಿನಕ್ಕೆ ಕೆಜಿಎಫ್ 2 : ಶಾರುಖ್ ಖಾನ್ ಗೆ ಸಿನಿಮಾ ಮಾಡುತ್ತಾ ಹೊಂಬಾಳೆ ಫಿಲ್ಮ್ಸ್

    50ನೇ ದಿನಕ್ಕೆ ಕೆಜಿಎಫ್ 2 : ಶಾರುಖ್ ಖಾನ್ ಗೆ ಸಿನಿಮಾ ಮಾಡುತ್ತಾ ಹೊಂಬಾಳೆ ಫಿಲ್ಮ್ಸ್

    ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲ್ಸ್ಮ್ ಕಾಂಬಿನೇಷನ್ ನ, ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಇನ್ನೆರಡು ದಿನಗಳಲ್ಲಿ 50 ದಿನ ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಹೊಸ ಸಿನಿಮಾ ಘೋಷಣೆ ಆಗತ್ತಾ? ಅಥವಾ ಯಶ್ ಅವರ ಹೊಸ ಸಿನಿಮಾದ ಬಗ್ಗೆ ಅಪ್ ಡೇಟ್ ಸಿಗತ್ತಾ ಎಂದು ಕಾಯುವಂತಾಗಿತ್ತು. ಆದರೆ, ಹೊಸದೊಂದು ಸುದ್ದಿ ಬಂದಿದೆ ಹೊಂಬಾಳೆ ಅಂಗಳದಿಂದ. ಈಗಾಗಲೇ ಕನ್ನಡ, ತೆಲುಗು ಮತ್ತು ಮಲಯಾಳಂನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವ ಈ ಸಂಸ್ಥೆ, ಸದ್ಯದಲ್ಲೇ ಬಾಲಿವುಡ್ ಗೂ ಕಾಲಿಡಲಿದೆಯಂತೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಅವಮಾನ

    ಮಾಧ್ಯಮವೊಂದರ ಜೊತೆ ಮಾತನಾಡಿರುವ ನಿರ್ಮಾಪಕ ವಿಜಯ್ ಕಿರಗಂದೂರು, ‘ಈಗಾಗಲೇ ಮೂರು ಭಾಷೆಗಳಲ್ಲಿ ನೇರವಾಗಿ ಸಿನಿಮಾ ನಿರ್ಮಾಣ ಮಾಡಿದ್ದೇವೆ. ಬಾಲಿವುಡ್ ನಲ್ಲೂ ಸಿನಿಮಾ ಮಾಡುವ ಮಾತುಕತೆ ನಡೆದಿದೆ. ಅಂದುಕೊಂಡಂತೆ ಆದರೆ, ಮಾರ್ನಾಲ್ಕು ತಿಂಗಳಲ್ಲಿ ಬಾಲಿವುಡ್ ಸಿನಿಮಾ ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ಈಗಾಗಲೇ ಹೊಂಬಾಳೆ ಫಿಲ್ಮಸ್ ನಿರ್ಮಾಣದ ಕೆಜಿಎಫ್ 2 ಸಿನಿಮಾ ಹಿಂದಿಯಲ್ಲೇ ಅತೀ ಹೆಚ್ಚು ಹಣ ಮಾಡಿದೆ. ಕೆಲವೇ ದಿನಗಳಲ್ಲಿ ಕೇವಲ ಬಾಲಿವುಡ್ ನಲ್ಲೇ ಕೆಜಿಎಫ್ 2 ಸಿನಿಮಾ 500 ಕೋಟಿ ಬಾಚಲಿದೆ. ಹೀಗಾಗಿ ಬಾಲಿವುಡ್ ನಲ್ಲಿ ಸಿನಿಮಾ ಮಾಡಲು ಸಂಸ್ಥೆ ಮುಂದಾಗಿದೆ. ನಿರ್ದೇಶಕನಿಗಾಗಿ ಹುಡುಕಾಟ ಕೂಡ ಮಾಡಲಾಗುತ್ತಿದೆಯಂತೆ. ಇದನ್ನೂ ಓದಿ : ನಟ ಚೇತನ್ ಇಂದು ಕೋರ್ಟಿಗೆ ಹಾಜರ್

    ನಿರ್ಮಾಪಕರು ಆಪ್ತರ ಪ್ರಕಾರ ಮುಂದಿನ ದಿನಗಳಲ್ಲಿ ಹೊಂಬಾಳೆ ಫಿಲ್ಮಸ್ ಶಾರುಖ್ ಖಾನ್ ಗಾಗಿ ಸಿನಿಮಾ ಮಾಡಲಿದೆಯಂತೆ. ಈಗಾಗಲೇ ಮಾತುಕತೆ ಕೂಡ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕಾಗಿಯೇ ನಿರ್ದೇಶಕರನ್ನು ಹುಡುಕುತ್ತಿದ್ದಾರಂತೆ. ಅಂದುಕೊಂಡಂತೆ ಆದರೆ, ಬಾಲಿವುಡ್ ನಲ್ಲಿ ಶಾರುಖ್ ಖಾನ್ ನಟನೆಯ ಚಿತ್ರದ ಹೊಂಬಾಳೆ ಮೊದಲ ಬಾಲಿವುಡ್ ಚಿತ್ರವಾಗಲಿದೆ.

  • ಕೆಜಿಎಫ್ 3 ಗ್ಯಾರಂಟಿ : ಅಕ್ಟೋಬರ್ ತಿಂಗಳಿಂದ ಶೂಟಿಂಗ್ ಶುರು ಎಂದಿದೆ ಚಿತ್ರತಂಡ

    ಕೆಜಿಎಫ್ 3 ಗ್ಯಾರಂಟಿ : ಅಕ್ಟೋಬರ್ ತಿಂಗಳಿಂದ ಶೂಟಿಂಗ್ ಶುರು ಎಂದಿದೆ ಚಿತ್ರತಂಡ

    ಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಕೆಜಿಎಫ್ 2’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಇನ್ನೂ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದೆ. ಈ ನಡುವೆ ಕೆಜಿಎಫ್ 3 ಸಿನಿಮಾ ಬರಲಿದೆಯಾ ಎನ್ನುವ ಚರ್ಚೆ ಶುರುವಾಗಿತ್ತು. ನಿರ್ದೇಶಕ ಪ್ರಶಾಂತ್ ನೀಲ್ ಇನ್ನೂ ಎರಡು ಚಿತ್ರಗಳನ್ನು ಒಪ್ಪಿಕೊಂಡಿರುವ ಕಾರಣಕ್ಕಾಗಿ ಕೆಜಿಎಫ್ 3 ಸಿನಿಮಾವನ್ನು ಕೂಡಲೇ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎನ್ನಲಾಗುತ್ತಿತ್ತು. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು

    ಆದರೆ, ಕೆಜಿಎಫ್ 2 ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಅಚ್ಚರಿಯ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿರುವ ಅವರು ‘ಅಕ್ಟೋಬರ್ ಒಳಗೆ ಸಲಾರ್ ಸಿನಿಮಾದ ಶೂಟಿಂಗ್ ಮುಗಿಸಬೇಕೆಂದು ತೀರ್ಮಾನ ಮಾಡಿದ್ದೇವೆ. ಅಂದುಕೊಂಡಂತೆ ಆ ಸಿನಿಮಾದ ಕೆಲಸ ಮುಗಿದರೆ, ಅಕ್ಟೋಬರ್ ನಿಂದಲೇ ಕೆಜಿಎಫ್ 2 ಸಿನಿಮಾದ ಕೆಲಸ ಆರಂಭಿಸಲಿದ್ದೇವೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

    ಕೆಜಿಎಫ್ 2 ಸಿನಿಮಾದಲ್ಲಿ ನಾಯಕ ಬದುಕಿದನಾ ಅಥವಾ ಸತ್ತನಾ ಎನ್ನುವುದು ಅಸ್ಪಷ್ಟ. ಹಾಗಾಗಿ ಯಶ್ ಅವರೇ ಈ ಸಿನಿಮಾದ ನಾಯಕ ಆಗುತ್ತಾರಾ? ಅಥವಾ ಕೆಜಿಎಫ್ 3 ನಲ್ಲಿ ಬೇರೆ ನಾಯಕ ಇರಲಿದ್ದಾರೆ ಎನ್ನುವುದಕ್ಕೆ ಅವರು ಯಾವುದೇ ಸ್ಪಷ್ಟತೆ ನೀಡಿಲ್ಲ. ಆದರೆ, ಸ್ಪೈಡರ್ ಮ್ಯಾನ್, ಹೋಮ್ ಕಮಿಂಗ್ ರೀತಿಯಲ್ಲಿ ಪಾತ್ರಗಳನ್ನು ಬದಲಾಯಿಸಿದರೆ, ಇನ್ನೂ ಹೆಚ್ಚಿನ ಸಂಖ್ಯೆಯ ಜನರಿಗೆ ಸಿನಿಮಾವನ್ನು ತಲುಪಿಸಬಹುದು’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ನಿರ್ಮಾಪಕರು. ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50

    ಈಗಾಗಲೇ ತೆಲುಗಿನ ಖ್ಯಾತ ನಟ ರಾಣಾ ದಗ್ಗುಬಾಟಿಯನ್ನು ನಿರ್ಮಾಪಕರು ಸಂಪರ್ಕಿಸಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಆದರೆ, ಈ ಕುರಿತು ನಿರ್ಮಾಪಕ ವಿಜಯ್ ಕಿರಗಂದೂರು ಯಾವುದೇ ಮಾಹಿತಿಯನ್ನು ನೀಡಿಲ್ಲ. ಒಟ್ಟಿನಲ್ಲಿ ಕೆಜಿಎಫ್ 2 ಗಿಂತಲೂ ಇನ್ನೂ ದೊಡ್ಡದಾಗಿ ಈ ಸಿನಿಮಾ ಇರಲಿದೆ ಎನ್ನುವ ಮಾಹಿತಿಯನ್ನಂತೂ ನೀಡಿದ್ದಾರೆ. ಅಲ್ಲಿಗೆ ಕೆಜಿಎಫ್ 3 ಸಿನಿಮಾ ಲೇಟಾದರೂ, ನಿರ್ಮಾಣವಾಗಲಿದೆ ಎನ್ನುವುದು ಖಚಿತ.

  • ಕೆಜಿಎಫ್ 2 : ಗೋವಾದಲ್ಲಿ ಸಕ್ಸಸ್ ಪಾರ್ಟಿ

    ಕೆಜಿಎಫ್ 2 : ಗೋವಾದಲ್ಲಿ ಸಕ್ಸಸ್ ಪಾರ್ಟಿ

    ಕೆಜಿಎಫ್ 2 ಭರ್ಜರಿ ಯಶಸ್ಸು ಕಂಡಿದೆ. ಹೀಗಾಗಿ ಇಡೀ ಸಿನಿಮಾ ತಂದ ರಿಲ್ಯಾಕ್ಸ್ ಮೂಡ್ ನಲ್ಲಿದೆ. ವಾರದ ಹಿಂದೆಯಷ್ಟೇ ಕುಟುಂಬ ಸಮೇತ ಯಶ್ ಗೋವಾದಲ್ಲಿ ಬೀಡು ಬಿಟ್ಟಿದ್ದರು. ಗೋವಾದಲ್ಲಿ ಪತ್ನಿ ರಾಧಿಕಾ ಪಂಡಿತ್ ಅಜ್ಜಿಯ ಮನೆ ಇರುವ ಕಾರಣಕ್ಕಾಗಿ ಆಗಾಗ್ಗೆ  ಅವರು ಗೋವಾಗೆ ಭೇಟಿ ಕೊಡುತ್ತಾರೆ. ಈ ಬಾರಿ ಗೋವಾದಲ್ಲಿ ಇಡೀ ತಂಡವನ್ನು ಕರೆದುಕೊಂಡು ಹೋಗಿ ಸಕ್ಸಸ್ ಪಾರ್ಟಿ ಮಾಡಿದ್ದಾರೆ ಯಶ್.  ಇದನ್ನೂ ಓದಿ : ಪ್ರಧಾನಿ ಮೋದಿ ಕೈ ಸೇರಿದ ಅನುಪಮ್ ಖೇರ್ ತಾಯಿ ಕೊಟ್ಟ ರುದ್ರಾಕ್ಷಿ

    ಗೋವಾದಲ್ಲಿ ನಡೆದ ಸಕ್ಸಸ್ ಪಾರ್ಟಿಯಲ್ಲಿ ಬಹುತೇಕ ಕೆಜಿಎಫ್ 2 ತಂಡ ಭಾಗಿಯಾಗಿದೆ. ನಟ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಪತ್ನಿ, ನಿರ್ಮಾಪಕ ವಿಜಯ ಕಿರಗಂದೂರು ಮತ್ತು ಪತ್ನಿ, ಸಿನಿಮಾಟೋಗ್ರಾಫರ್ ಭುವನ್,  ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ನಿರ್ದೇಶಕ ಸೂರಿ, ಕಾಸ್ಟ್ಯೂಮ್ ಡಿಸೈನರ್ ಹೀಗೆ ಬಹುತೇಕರು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ : ಬಾಲಿವುಡ್ ಬಾಕ್ಸ್ಆಫೀಸ್‌ನಲ್ಲಿ ಯಶ್ ಮೇನಿಯಾ: 300 ಕೋಟಿ ಬಾಚಿದ `ಕೆಜಿಎಫ್ 2′

    ಗೋವಾದ ಸಮುದ್ರ ತೀರದಲ್ಲಿರುವ ಪ್ರತಿಷ್ಠಿತ ಹೋಟೆಲ್ ನಲ್ಲಿ ಈ ಪಾರ್ಟಿಯನ್ನು ಆಯೋಜನೆ ಮಾಡಿತ್ತು ಚಿತ್ರತಂಡ. ಈ ಹೋಟೆಲ್ ನಲ್ಲಿಯೇ ಕೇಕ್ ಕತ್ತರಿಸಿ ಸಂಭ್ರಮಿಸಿದೆ. ಅಲ್ಲದೇ ಯಶ್ ಅವರ ಕೆನ್ನೆಗೆ ಒಂದು ಕಡೆ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತೊಂದು ಕೆನ್ನೆಗೆ ನಿರ್ದೇಶಕ ಪ್ರಶಾಂತ್ ನೀಲ್ ಮುತ್ತು ಕೊಡುವ ಮೂಲಕ ಪಾರ್ಟಿಯ ಕಳೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಇದನ್ನೂ ಓದಿ:ಸೀಮಂತದ ಸಂಭ್ರಮದಲ್ಲಿ ನಟಿ ಸಂಜನಾ ಗಲ್ರಾನಿ

    ಬಾಲಿವುಡ್ ಸೇರಿದಂತೆ ನಾನಾ ಕಡೆ ಕೆಜಿಎಫ್ 2 ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೇ ದಿನಗಳಲ್ಲೇ ಈ ಸಿನಿಮಾ ಸಾವಿರ ಕೋಟಿ ಕ್ಲಬ್‍ ಗೆ ಸೇರ್ಪಡೆಯಾಗಲಿದೆ. ಅದರಲ್ಲೂ ಬಾಲಿವುಡ್ ನಲ್ಲಿ ಅತೀ ಹೆಚ್ಚು ಹಣ ಗಳಿಸುವುದರ ಮೂಲಕ ಬಾಲಿವುಡ್ ಸಿನಿಮಾಗಳ ಬಹುತೇಕ ದಾಖಲೆಗಳನ್ನು ಈ ಚಿತ್ರ ಮುರಿದಿದೆ.

  • ʻಹೊಂಬಾಳೆ ಫಿಲ್ಮ್ಸ್‌ʼ ಹೊಸ ಸಿನಿಮಾ ಅನೌನ್ಸ್: ಭರ್ಜರಿ ಅವಕಾಶ ಗಿಟ್ಟಿಸಿಕೊಂಡ `ಸೂರರೈ ಪೋಟ್ರು’ ನಿರ್ದೇಶಕಿ

    ʻಹೊಂಬಾಳೆ ಫಿಲ್ಮ್ಸ್‌ʼ ಹೊಸ ಸಿನಿಮಾ ಅನೌನ್ಸ್: ಭರ್ಜರಿ ಅವಕಾಶ ಗಿಟ್ಟಿಸಿಕೊಂಡ `ಸೂರರೈ ಪೋಟ್ರು’ ನಿರ್ದೇಶಕಿ

    ದೇಶಾದ್ಯಂತ ಸಂಚಲನ ಮೂಡಿಸುತ್ತಿರುವ `ಹೊಂಬಾಳೆ ಫಿಲ್ಮ್ಸ್‌ʼ ಸಂಸ್ಥೆ `ಕೆಜಿಎಫ್ ಚಾಪ್ಟರ್ 2′ ಯಶಸ್ಸಿನಿಂದ ಸದ್ಯ ಭಾರೀ ಸುದ್ದಿ ಮಾಡ್ತಿದೆ. ಹೀಗೆ ಒಂದಲ್ಲಾ ಒಂದು ವಿಚಾರವಾಗಿ ಸೌಂಡ್ ಮಾಡ್ತಿರೋ ಹೊಂಬಾಳೆ ಬ್ಯಾನರ್‌ನಿಂದ ನಿರ್ದೇಶಕಿ ಸುಧಾ ಕೊಂಗರ ಅವರಿಗೆ ಚಿತ್ರ ಮಾಡುವ ಅವಕಾಶ ಸಿಕ್ಕಿದೆ. ಈ ಬಗ್ಗೆ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ.

    ಸಿನಿಮಾರಂಗದಲ್ಲಿ ಮೈಲಿಗಲ್ಲು ನಿರ್ಮಾಣ ಮಾಡಿರುವ ಸಂಸ್ಥೆಯಿಂದ ಅನೇಕ ಚಿತ್ರಗಳು ನಿರ್ಮಾಣವಾಗುತ್ತಿದೆ. ಈಗ ಚಿತ್ರ ಕೂಡ ಅನೌನ್ಸ್ ಮಾಡಲಾಗಿದೆ. ಮತ್ತೊಂದು ವಿಶೇಷ ಅಂದ್ರೆ, ಈ ಬಾರಿ ʻಹೊಂಬಾಳೆ ಫಿಲ್ಮ್ಸ್‌ʼ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ದೇಶನ ಮಾಡುವ ಅವಕಾಶವನ್ನು ಕಾಲಿವುಡ್ ಲೇಡಿ ನಿರ್ದೇಶಕಿ ಸುಧಾ ಕೊಂಗರ ಗಿಟ್ಟಿಸಿಕೊಂಡಿದ್ದಾರೆ.

    ನಿರ್ದೇಶಕಿ ಸುಧಾ ಕೊಂಗರ ಅವರು ಮೂಲತಃ ಆಂಧ್ರ ಪ್ರದೇಶದವರಾಗಿದ್ದು, ಅವರು ತಮಿಳು ಸಿನಿಮಾರಂಗದಲ್ಲಿ ಸಾಧನೆ ಮಾಡಿದ್ದಾರೆ. ಡಿಫರೆಂಟ್ ಸಬ್‌ಜೆಕ್ಟ್ಗಳನ್ನ ತೆರೆಯ ಮೇಲೆ ತೋರಿಸುವಲ್ಲಿ ಸೈ ಎನಿಸಿಕೊಂಡಿದ್ದಾರೆ. ಈ ಹಿಂದೆ ಸೂರ್ಯ ನಟನೆಯ `ಸೂರರೈ ಪೋಟ್ರು’ ನಿರ್ದೇಶನ ಮಾಡಿ ಗಮನ ಸೆಳೆದಿದ್ದರು. ಇದನ್ನೂ ಓದಿ:ನನ್ನಿಂದ ತಪ್ಪಾಯ್ತು – ತಂಬಾಕು ಬ್ರ್ಯಾಂಡ್ ಅಂಬಾಸಿಡರ್ ಪಟ್ಟ ತ್ಯಜಿಸಿದ ಅಕ್ಷಯ್

    ಕಾಲಿವುಡ್ ಪ್ರತಿಭಾವಂತ ನಿರ್ದೇಶಕಿ ಸುಧಾ ಕೊಂಗರ ಅವರ ಕೆಲಸ ಗುರುತಿಸಿ ಇದೀಗ ಹೊಂಬಾಳೆ ಸಂಸ್ಥೆಯಡಿ ನಿರ್ದೇಶನ ಮಾಡುವ ಅವಕಾಶವನ್ನು ಕೊಟ್ಟಿದ್ದಾರೆ. ಹಾಗಂತ ಅಧಿಕೃತವಾಗಿ `ಹೊಂಬಾಳೆ ಫಿಲ್ಮ್ಸ್‌ʼ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ. ಸುಧಾ ಕೊಂಗರ ಅವರಿಗೆ `ಹೊಂಬಾಳೆ ಫಿಲ್ಮ್ಸ್‌’ ಮೂಲಕ ವಿಜಯ್ ಕಿರಗಂದೂರು ಸಾಥ್‌ ನೀಡಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

  • ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

    ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

    ಮಂಡ್ಯ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರ ಇಂದು ಮಧ್ಯರಾತ್ರಿ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಚಿತ್ರ ರಿಲೀಸ್‍ಗೂ ಮುನ್ನ ನಿರ್ಮಾಪಕ ವಿಜಯ್ ಕಿರಗಂದೂರು ತವರಿಗೆ ಕೆಜಿಎಫ್ ಟೀಂ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದುಕೊಂಡಿದೆ.

    ಹೊಂಬಾಳೆ ತವರು ಮಂಡ್ಯದ ಕಿರಗಂದೂರಿಗೆ ಮಂಗಳವಾರ ರಾತ್ರಿ ಚಿತ್ರತಂಡ ಭೇಟಿ ಕೊಟ್ಟಿದೆ. ಈ ವೇಳೆ ಟೀಂ ಹಿರಿಯರ ಆಶೀರ್ವಾದ ಪಡೆದುಕೊಂಡಿದೆ. ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ ಕಿರಗಂದೂರು ತವರಿನಲ್ಲಿ ಪೂಜೆ ಸಲ್ಲಿಸಿ ಚಿತ್ರದ ಯಶಸ್ಸಿಗೆ ಕೋರಿದರು. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ಶ್ರೀರಂಗಪಟ್ಟಣದ ನಿಮಿಷಾಂಬ ದೇವಾಲಯಕ್ಕೆ ಚಿತ್ರತಂಡ ತೆರಳಿ ಪೂಜೆ ಸಲ್ಲಿಸಿದೆ. ಹಿರಿಯರ ಮನೆಯಲ್ಲಿ ಕುಟುಂಬದವರೊಂದಿಗೆ ಬೆರೆತು ಕೆಲ ಹೊತ್ತು ಕಳೆದಿದೆ. ಅಲ್ಲದೆ ಹೊಂಬಾಳೆಗೆ ಸ್ಫೂರ್ತಿಯಾಗಿದ್ದ ಹಿರಿಯರು ಪೂರ್ವಜರ ಆಶೀರ್ವಾದವನ್ನು ಕೆಜಿಎಫ್ ಟೀಂ ಪಡೆದುಕೊಂಡಿದೆ. ಈ ವೇಳೆ ವಿಜಯ ಕಿರಗಂದೂರು ಅವರ ಹಿರಿಯ ಸಹೋದರ ಕಿರಗಂದೂರು ಮಂಜುನಾಥ್ ಚಿತ್ರತಂಡಕ್ಕೆ ಶುಭ ಕೋರಿದರು. ಇದನ್ನೂ ಓದಿ: ಯಶ್ ಅಭಿಮಾನಿಗಳಿಗಾಗಿ ಸ್ಪೆಷಲ್ ಶೋ ಡಿಮ್ಯಾಂಡ್: ರಾಕಿಭಾಯ್ ನಿರಂತರ ಪ್ರದರ್ಶನ

    ಇತ್ತೀಚೆಗಷ್ಟೇ ನಟ ಯಶ್ ಹಾಗೂ ವಿಜಯ್ ಕಿರಗಂದೂರು ಅವರು ಚಿತ್ರದ ಯಶಸ್ಸಿಗೆ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಪಡೆದುಕೊಂಡಿದ್ದರು. ಅಲ್ಲದೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಜೊತೆ ಮಾತುಕತೆ ನಡೆಸಿ, ಚಿತ್ರದ ಬಗ್ಗೆ ಮಾಹಿತಿ ನೀಡಿದ್ದರು. ಹಾಗೂ ಖಾವಂದರ ಆಶೀರ್ವಾದ ಪಡೆದುಕೊಂಡು ಬಂದಿದ್ದರು. ಇದನ್ನೂ ಓದಿ: ವಿಶ್ವದಾದ್ಯಂತ ಕೆಜಿಎಫ್ ಅಬ್ಬರಕ್ಕೆ ಮೂರೇ ದಿನ ಬಾಕಿ -ನ್ಯೂಯಾರ್ಕ್‍ನ ಎಲ್‍ಇಡಿ ಸ್ಕ್ರೀನ್‍ನಲ್ಲಿ ಯಶ್ ಟ್ರೇಲರ್

  • ಆರ್‌ಸಿಬಿ ತಂಡದ ಜೊತೆ ಕೈ ಜೋಡಿಸಿದ ಹೊಂಬಾಳೆ ಫಿಲ್ಮ್ಸ್

    ಆರ್‌ಸಿಬಿ ತಂಡದ ಜೊತೆ ಕೈ ಜೋಡಿಸಿದ ಹೊಂಬಾಳೆ ಫಿಲ್ಮ್ಸ್

    ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲು ಸೃಷ್ಠಿಸಿರುವ `ಹೊಂಬಾಳೆ ಫಿಲ್ಮ್ಸ್’ ಹೊಸ ಹೆಜ್ಜೆ ಇಟ್ಟಿದೆ. ಯಶ್ ನಟನೆಯ ಕೆಜಿಎಫ್, ಕೆಜಿಎಫ್ 2, ಪ್ರಭಾಸ್ ನಟನೆಯ `ಸಲಾರ್’ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಹೊಂಬಾಳೆ ಬ್ಯಾನರ್ ಹೊಸ ಬ್ರೇಕಿಂಗ್ ನ್ಯೂಸ್ ಕೊಟ್ಟಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆ ಕೈ ಜೋಡಿಸಿದೆ.

    ಮೊದಲ ಬಾರಿಗೆ ಐಪಿಎಲ್ ಕ್ರಿಕೆಟ್ ಟೀಂ ಜೊತೆ ಸಿನಿಮಾ ನಿರ್ಮಾಣ ಸಂಸ್ಥೆ ಸಾಥ್ ಕೊಟ್ಟಿದೆ. ಈ ಮೂಲಕ ಹೊಸ ರೀತಿಯ ಮನರಂಜನೆ ನೀಡಲು ಹೊಂಬಾಳೆ ಫಿಲ್ಮ್ಸ್‌ ರೂವಾರಿ ವಿಜಯ್ ಕಿರಗಂದೂರು ಪ್ಲ್ಯಾನ್‌ ಮಾಡಿದ್ದಾರೆ.

    ಚಿತ್ರ ನಿರ್ಮಾಣದ ಮೂಲಕ ಸಂಚಲನ ಮೂಡಿಸುತ್ತಿರೋ `ಹೊಂಬಾಳೆ ಫಿಲ್ಮ್ಸ್‌’ ಕ್ರಿಕೆಟ್‌ನಲ್ಲಿಯೂ ಸದ್ದು ಮಾಡಲು ಆರ್‌ಸಿಬಿ ಜೊತೆ ಸೇರಿಕೊಂಡಿದೆ. ಈ ಕುರಿತು ಹೊಂಬಾಳೆ ಫಿಲ್ಮ್ಸ್‌ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಈ ಮುಂಚೆಯೇ ಸೋಷಿಯಲ್ ಮೀಡಿಯಾ ಮೂಲಕ 11.15ಕ್ಕೆ ಅನೌನ್ಸ್‌ ಮೆಂಟ್ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್‌ ಪೋಸ್ಟ್ ಮಾಡಿತ್ತು. ಅದರಂತೆಯೇ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಕೊಟ್ಟಿದ್ದಾರೆ. ಇದನ್ನು ಓದಿ:`ಕೆಜಿಎಫ್ 2′ ನಟಿ ಅರ್ಚನಾ ನಟನೆಯ `ಮ್ಯೂಟ್’ ಟ್ರೇಲರ್ ಮೆಚ್ಚಿದ ರವೀನಾ ಟಂಡನ್

    ಮನರಂಜನೆಯ ಹೊಸ ಯುಗ ಆರಂಭವಾಗುತ್ತದೆ ಅನ್ನೋ ಮೂಲಕ ಆರ್‌ಸಿಬಿ ಜೊತೆ ಕೈ ಜೋಡಿಸಿರುವುದರ ಕುರಿತು ಹೊಂಬಾಳೆ ಫಿಲ್ಮ್ಸ್‌ ಟ್ವಿಟರ್‌ನಲ್ಲಿ ಅಧಿಕೃತವಾಗಿ ಹೇಳಿದ್ದಾರೆ. ಕ್ರೀಡೆ ಮತ್ತು ಮನರಂಜನಾ ಎರಡು ಕ್ಷೇತ್ರದಲ್ಲಿ ಸದ್ದು ಮಾಡಲು ಹೊಂಬಾಳೆ ಫಿಲ್ಮ್ಸ್‌ಸಜ್ಜಾಗಿದೆ.

  • ಹೊಂಬಾಳೆ ಸಮೂಹದ ಆರ್ಥಿಕ ನೆರವು – ಮಂಡ್ಯ ಮೆಡಿಕಲ್ ಕಾಲೇಜ್‍ನಲ್ಲಿ ಅತ್ಯಾಧುನಿಕ ಐಸಿಯು

    ಹೊಂಬಾಳೆ ಸಮೂಹದ ಆರ್ಥಿಕ ನೆರವು – ಮಂಡ್ಯ ಮೆಡಿಕಲ್ ಕಾಲೇಜ್‍ನಲ್ಲಿ ಅತ್ಯಾಧುನಿಕ ಐಸಿಯು

    – ಐಸಿಯು ವೈಶಿಷ್ಟ್ಯಗಳೇನು?

    ಮಂಡ್ಯ: ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿಷ್ಠಿತ ಹೊಂಬಾಳೆ ಸಮೂಹದ ಆರ್ಥಿಕ ನೆರವಿನಿಂದ ಸ್ಥಾಪನೆ ಮಾಡಲಾಗಿರುವ 20 ಹಾಸಿಗೆಗಳ ಅತ್ಯಾಧುನಿಕ ಐಸಿಯು ಘಟಕವನ್ನು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಗುರುವಾರ ಉದ್ಘಾಟನೆ ನೆರೆವೇರಿಸಿದರು.

    ಕಟ್ಟಡ ನಿರ್ಮಾಣ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವಿಜಯ್ ಕಿರಗಂದೂರು ಅವರ ನೇತೃತ್ವದ ಹೊಂಬಾಳೆ ಸಮೂಹವು, ಮಂಡ್ಯ ಜಿಲ್ಲೆಯಲ್ಲಿ ವೈದ್ಯಕೀಯ ಮೂಲಸೌಕರ್ಯಗಳನ್ನು ಒದಗಿಸಲು ಸುಮಾರು 2.35 ಕೋಟ ರೂ. ದೇಣಿಗೆ ನೀಡಿದೆ.

    ಈ ನೆರವಿನ ಮೂಲಕ ಜಿಲ್ಲೆಯ ವೈದ್ಯಕೀಯ ಕಾಲೇಜಿನಲ್ಲಿ 55 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಐಸಿಯು ಸ್ಥಾಪಿಸಲಾಗಿದೆ. ಇನ್ನು ತಲಾ 90 ಲಕ್ಷ ರೂ. ವೆಚ್ಚದಲ್ಲಿ ಪಾಂಡವಪುರ ಮತ್ತು ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಜನರೇಟರ್ ಘಟಕಗಳನ್ನು ಅಳವಡಿಸಲಾಗುತ್ತಿದೆ.

    ಪಾಂಡವಪುರ ಆಸ್ಪತ್ರೆಯ ಆಕ್ಸಿಜನ್ ಘಟಕಕ್ಕೆ ಭೂಮಿ ಪೂಜೆ ನೆರೆವರಿಸಲಾಗಿದೆ. ಕೆ.ಆರ್.ಪೇಟೆ ಆಸ್ಪತ್ರೆಯಲ್ಲಿ ಈಗಾಗಲೇ ಯಂತ್ರಗಳನ್ನು ಅಳವಡಿಸಲಾಗುತ್ತಿದ್ದು, 15 ದಿನಗಳಲ್ಲಿ ಕಾಮಗಾರಿ ಪೂರ್ಣ ವಾಗಲಿದೆ. ಎರಡೂ ಆಮ್ಲಜನಕ ಘಟಕಗಳು ನಿಮಿಷಕ್ಕೆ 500 ಲೀಟರ್ ಆಮ್ಲಜನಕ ಉತ್ಪಾದಿಸಿ ಪೂರೈಕೆ ಮಾಡುವ ಸಾಮರ್ಥ್ಯ ಹೊಂದಿವೆ.

    ಐಸಿಯು ವೈಶಿಷ್ಟ್ಯಗಳೇನು?
    ಹೊಂಬಾಳೆ ಸಮೂಹದ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕಿರಗಂದೂರು ಅವರು ತಮ್ಮ ತವರು ಜಿಲ್ಲೆ ಮಂಡ್ಯದಲ್ಲಿ ಆರೋಗ್ಯ ಮೂಲಭೂತ ಸೌಕರ್ಯ ಹೆಚ್ಚಿಸಲು ಸರ್ಕಾರದ ಜತೆ ಕೈ ಜೋಡಿಸಿ ದೇಣಿಗೆ ನೀಡಿದ್ದಾರೆ.

    ಅವರ ಆಶಯದಂತೆ ನೂತನ ಐಸಿಯುನಲ್ಲಿ ಜಾಗತಿಕ ಗುಣಮಟ್ಟದ ವೆಂಟಿಲೇಟರ್‍ಗಳು, ಮಾನಿಟರ್‍ಗಳನ್ನು ಅಳವಡಿಸಲಾಗಿದೆ. ಮುಖ್ಯವಾಗಿ ರಿಮೋಟ್ ಕಂಟ್ರೋಲ್ ವ್ಯವಸ್ಥೆ ಇದ್ದು, ವೈದ್ಯರು ಯಾವುದೇ ಭಾಗದಲ್ಲಿದ್ದರೂ ರೋಗಿಗೆ ಅತ್ಯುತ್ತಮ ಚಿಕಿತ್ಸೆ ನೀಡಬಹುದು. ಚತುಷ್ಮುಖಿ (four way communication system) ಸಂಪರ್ಕ ಜಾಲದ ಸೌಲಭ್ಯವನ್ನು ಈ ಐಸಿಯು ಹೊಂದಿದೆ. ಮಂಡ್ಯದಲ್ಲಿ ಇದೇ ಮೊದಲಿಗೆ ಇಂಥ ಆಧುನಿಕ ಐಸಿಯು ಸ್ಥಾಪನೆ ಆಗಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ಕಿರಗಂದೂರು ಅವರು, ಕೋವಿಡ್ ಬಂದು ಇಡೀ ಜಗತ್ತಿನ ಆದ್ಯತೆಗಳು ಬದಲಾಗಿವೆ. ಆರೋಗ್ಯ ಎನ್ನುವುದು ಬಹಳ ಮುಖ್ಯ ಎನ್ನುವ ಅರಿವಾಗಿದೆ. ಹೀಗಾಗಿ ಬಡವ-ಬಲ್ಲಿದನೆಂಬ ಬೇಧವಿಲ್ಲದೆ ಪ್ರತಿಯೊಬ್ಬರಿಗೂ ಗುಣಮಟ್ಟದ ಚಿಕಿತ್ಸೆ ಸಿಗಬೇಕು ಎನ್ನುವುದು ನನ್ನ ಕಾಳಜಿ. ಆದ್ದರಿಂದ ನನ್ನ ತವರು ಜಿಲ್ಲೆ ಮಂಡ್ಯದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಒಂದು ಅಳಿಲು ಸೇವೆಯನ್ನು ಸಲ್ಲಿಸಿದ್ದೇನೆ ಎಂದರು.

    ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಶಾಸಕರಾದ ಎಂ.ಶ್ರೀನಿವಾಸ, ಕೆ.ಟಿ.ಶ್ರೀಕಂಠೇಗೌಡ, ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಸಿ.ಪಿ.ಉಮೇಶ್, ಜಿಲ್ಲಾಧಿಕಾರಿ ಅಶ್ವತಿ, ಹೊಂಬಾಳೆ ಸಮೂಹದ ನಿರ್ದೇಶಕ ಚೆಲುವೇಗೌಡ, ವಿಮ್ಸ್ ನಿರ್ದೇಶಕ ಹರೀಶ ಜಿಲ್ಲೆಯ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.

  • ಹೊಂಬಾಳೆ ಸಮೂಹದ ಎಲ್ಲ ಸಿಬ್ಬಂದಿ, ಕುಟುಂಬ ಸದಸ್ಯರಿಗೆ ಉಚಿತ ಕೋವಿಡ್‌ ಲಸಿಕೆ

    ಹೊಂಬಾಳೆ ಸಮೂಹದ ಎಲ್ಲ ಸಿಬ್ಬಂದಿ, ಕುಟುಂಬ ಸದಸ್ಯರಿಗೆ ಉಚಿತ ಕೋವಿಡ್‌ ಲಸಿಕೆ

    ಬೆಂಗಳೂರು: ಕನ್ನಡ ಚಲನಚಿತ್ರ ನಿರ್ಮಾಣ ಹಾಗೂ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರತಿಷ್ಠಿತ ಹೊಂಬಾಳೆ ಸಮೂಹವು ತನ್ನ ಉದ್ಯೋಗಿಗಳು, ನೌಕರರು ಹಾಗೂ ಅವರ ಅವಲಂಬಿತ ಅಂದಾಜು ಐದು ಸಾವಿರ ಮಂದಿಗೆ ಉಚಿತವಾಗಿ ಕೋವಿಡ್‌ ಲಸಿಕೆ ಹಾಕಿಸಲು ನಿರ್ಧರಿಸಿದೆ.

    ತನ್ನೊಂದಿಗೆ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಹೊಂಬಾಳೆ ಸಮೂಹವು ಎಲ್ಲರ ವ್ಯಾಕ್ಸಿನೇಶನ್‌ಗೆ ಆಗುವ ಪೂರ್ಣ ವೆಚ್ಚವನ್ನು ತಾನೇ ಭರಿಸಲಿದೆ.

    ಹೊಂಬಾಳೆ ಫಿಲ್ಮ್‌ ಬ್ಯಾನರ್‌ನಡಿ ಕೆಲಸ ಮಾಡುವ ಎಲ್ಲ ಸದಸ್ಯರು ಹಾಗೂ ಪೂರಕ ಸಿಬ್ಬಂದಿ ಹಾಗೂ ಅವರ ಅವಲಂಬಿತರೆಲ್ಲರಿಗೂ ವ್ಯಾಕ್ಸಿನ್‌ ನೀಡಲಾಗುವುದು. ಜತೆಗೆ ಹೊಂಬಾಳೆ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಲಸಿಕೆ ಲಭ್ಯ ಎಂದು ಹೊಂಬಾಳೆ ಸಮೂಹದ ಪ್ರಕಟಣೆ ತಿಳಿಸಿದೆ.

    ಕೇಂದ್ರ ಸರಕಾರ ಮಾರ್ಗಸೂಚಿಯಂತೆ ಮುಂದಿನ ಹಂತದಲ್ಲಿ ಅವರವರ ವಯೋಮಿತಿ ಆಧಾರದ ಮೇಲೆ ಕೋವಿಡ್‌ ವ್ಯಾಕ್ಸಿನ್‌ ಕೊಡಿಸಲಾಗುವುದು ಮತ್ತು ನಮ್ಮವರ ಆರೋಗ್ಯದ ಜತೆಗೆ ಅವರ ಕುಟುಂಬದ ಆರೋಗ್ಯವೂ ನಮಗೆ ಮುಖ್ಯವಾಗಿದೆ ಎಂದು ಸಂಸ್ಥೆ ಹೇಳಿದೆ.

    https://twitter.com/VKiragandur/status/1374705049268482050

  • ಕೆಜಿಎಫ್-2 ಫಸ್ಟ್ ಲುಕ್ ಬಿಡುಗಡೆ

    ಕೆಜಿಎಫ್-2 ಫಸ್ಟ್ ಲುಕ್ ಬಿಡುಗಡೆ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಸಿನಿಮಾದ ಫಸ್ಟ್ ಲುಕ್ ಇಂದು ಅನಾವರಣಗೊಂಡಿದೆ.

    ಈ ಬಗ್ಗೆ ಚಿತ್ರತಂಡ ಮೊದಲೇ ಸುಳಿವು ನೀಡಿತ್ತು. ಹಾಗಾಗಿ ಅಭಿಮಾನಿಗಳು ಸಿನಿಮಾದ ಫಸ್ಟ್ ಲುಕ್ ನೋಡಲು ತುದಿಗಾಲಲ್ಲಿ ನಿಂತಿದ್ದರು. ಕೆಜಿಎಫ್ ಮೊದಲ ಭಾಗ ಬಿಡುಗಡೆಗೊಂಡು ಇಂದಿಗೆ ಒಂದು ವರ್ಷ ಆಯ್ತು. ಈ ಹಿನ್ನೆಲೆಯಲ್ಲಿಯೇ ಚಿತ್ರತಂಡ ಚಾಪ್ಟರ್-2 ನ ಮೊದಲ ಚಿತ್ರವನ್ನು ರಿವೀಲ್ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.

    ಈ ಹಿಂದೆ ಸಂಜಯ್ ದತ್ ಹುಟ್ಟುಹಬ್ಬದ ನಿಮಿತ್ತ ಚಿತ್ರತಂಡ ಅಧೀರನ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಮುನ್ನಾಭಾಯ್ ಬರ್ತ್ ಡೇ ವಿಶ್ ಮಾಡಿತ್ತು. ಗರುಡನ ಸಂಹಾರದ ಬಳಿಕ ರಾಕಿ ಹೇಗೆ ತನ್ನ ಕೋಟೆಯನ್ನ ಕಟ್ಟುತ್ತಾನೆ, ಬಂಧನದಲ್ಲಿದ್ದ ಎಷ್ಟೋ ಕಾರ್ಮಿಕರನ್ನು ತನ್ನ ಹೇಗೆ ಕಾಪಾಡುತ್ತಾನೆ? ಎಂಬುವುದು ಎರಡನೇ ಭಾಗದಲ್ಲಿ ನೋಡಬಹುದು. ನೂರಾರು ಧ್ವನಿಗಳಿಗೆ ಶಕ್ತಿ ನೀಡಿದ ರಾಕಿ ಭಾಯ್ ಸಾಮ್ರಾಜ್ಯ ಸ್ಥಾಪನೆಯನ್ನು ಫಸ್ಟ್ ಲುಕ್ ತೋರಿಸುತ್ತದೆ.

  • ದಕ್ಷಿಣ ಭಾರತದ ಸೆನ್ಸೇಷನ್ ಕೆಜಿಎಫ್-2ಗೆ ವಿಘ್ನಗಳ ಮೇಲೆ ವಿಘ್ನ

    ದಕ್ಷಿಣ ಭಾರತದ ಸೆನ್ಸೇಷನ್ ಕೆಜಿಎಫ್-2ಗೆ ವಿಘ್ನಗಳ ಮೇಲೆ ವಿಘ್ನ

    – ಕೋರ್ಟ್ ಖಟ್ಲೆ ಬೆನ್ನಲ್ಲೇ ಈಗ ಪ್ರಕೃತಿಯ ಸವಾಲು
    – 2 ತಿಂಗಳಿನಿಂದ ಶೂಟಿಂಗ್ ಸ್ಥಗಿತ ಹಾಳಾಯ್ತು ಸಂಪೂರ್ಣ ಸೆಟ್

    ಕೋಲಾರ: ಕನ್ನಡದ ಬಹು ನಿರೀಕ್ಷಿತ, ಬಹು ಭಾಷಾ ಕೆಜಿಎಫ್-2 ಸಿನಿಮಾ ಸೆಟ್‍ಗೆ ಗಂಡಾಂತರ ಎದುರಾಗಿದೆ. ಕೋಟಿ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಹಣ, ನಿರ್ದೇಶಕ ಪ್ರಶಾಂತ್ ನೀಲ್ ಕ್ರಿಯೇಟಿವಿಟಿ, ನಟ ಯಶ್ ಜೋಷ್ ಜೊತೆ ನೂರಾರು ಕಾರ್ಮಿಕರ ಶ್ರಮದಿಂದ ಕೋಲಾರದ ಕೆಜಿಎಫ್‍ನ ಕೆನಡೀಸ್ ಸೈನೈಡ್ ಗುಡ್ಡದ ಮೇಲೆ ನಿರ್ಮಾಣಗೊಂಡಿದ್ದ ಸೆಟ್ ಸಂಪೂರ್ಣ ಹಾಳಾಗಿದೆ.

    ದಕ್ಷಿಣ ಭಾರತದಲ್ಲೇ ಹೊಸ ಸಂಚಲನ ಸೃಷ್ಟಿಸಿದ್ದ ನಾಯಕ ನಟ ಯಶ್ ಅಭಿನಯಿಸಿರುವ ಕೆಜಿಎಫ್-2 ಸಿನಿಮಾದ ಶೂಟಿಂಗ್ ಕಳೆದ 2 ತಿಂಗಳಿನಿಂದ ಸ್ಥಗಿತಗೊಂಡಿದೆ.

    ಕೋಲಾರದ ಕೆಜಿಎಫ್‍ನ ಕೆನಡೀಸ್ ಸೈನೈಡ್ ಗುಡ್ಡದ ಮೇಲೆ ನಟ ಯಶ್ ಸೇರಿದಂತೆ ಪ್ರಶಾಂತ್ ನೀಲ್ ನೇತೃತ್ವದಲ್ಲಿ ನೂರಾರು ಕಾರ್ಮಿಕರು ದುಬಾರಿ ಸೆಟ್ ನಿರ್ಮಾಣ ಮಾಡಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆದರೆ ಸೈನೈಡ್ ಗುಡ್ಡದ ಮೇಲೆ ಬೃಹತ್, ದುಬಾರಿ ಸೆಟ್ ನಿರ್ಮಾಣ ಮಾಡಿದ್ದರಿಂದ ಪರಿಸರ ಹಾನಿ ಹಾಗೂ ಚಿತ್ರೀಕರಣದಿಂದ ಸ್ಥಳೀಯರಿಗೆ ತೊಂದರೆಯಾದ ಹಿನ್ನೆಲೆ ಸಾಮಾಜಿಕ ಹೋರಾಟಗಾರ ಶ್ರೀನಿವಾಸ್ ಆಗಸ್ಟ್ ತಿಂಗಳಲ್ಲಿ ಕೋರ್ಟ್ ಮೊರೆ ಹೋಗಿದ್ದರು.

    ಅರ್ಜಿಯನ್ನು ಮಾನ್ಯ ಮಾಡಿದ ಕೆಜಿಎಫ್‍ನ ಜೆಎಂಎಫ್‍ಸಿ ನ್ಯಾಯಾಲಯ ಚಿತ್ರೀಕರಣ ಮಾಡದಂತೆ ತಡೆಯಾಜ್ಞೆ ನೀಡಿತ್ತು. ಬಳಿಕ ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿ ಚಿತ್ರೀಕರಣ ಮಾಡುವಂತೆ ಅನುಮತಿ ನೀಡಿದೆ. ಆದರೆ ರೌಡಿ ತಂಗಂ ಕುಟುಂಬ ಚಿತ್ರ ಕಥೆ ನಮ್ಮ ಕುಟುಂಬದ್ದೆ ಆಗಿದ್ದು, ನಮ್ಮ ಅನುಮತಿ ಇಲ್ಲದೆ ಚಿತ್ರೀಕರಣ ಮಾಡುತ್ತಿರುವುದಾಗಿ ಕೆಜಿಎಫ್ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದೆ. 2 ತಿಂಗಳಿನಿಂದ ಚಿತ್ರೀಕರಣ ನಿಲ್ಲಿಸಿರುವ ಚಿತ್ರ ತಂಡ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿಯಾದರೂ ದುಬಾರಿ ಸೆಟ್ ಸಂಪೂರ್ಣ ಹಾಳಾಗಿದೆ. ನರಾಚಿ ಲೋಕ ಮಳೆ ಗಾಳಿಗೆ ಹಾಳಾಗಿದ್ದು, ಚಿತ್ರೀಕರಣ ನಡೆದಿದ್ದೆ ಆದಲ್ಲಿ ಮತ್ತೆ ಹೊಸದಾಗಿ ಸೆಟ್ ನಿರ್ಮಾಣ ಮಾಡಬೇಕಾದ ಸನ್ನಿವೇಶ ಚಿತ್ರ ತಂಡಕ್ಕೆ ಎದುರಾಗಿದೆ. ಇದನ್ನೂ ಓದಿ: ಇರ್ಫಾನ್ ಪಠಾಣ್ ಚಿತ್ರದಲ್ಲಿ ಕೆಜಿಎಫ್ ನಟಿ ಶ್ರೀನಿಧಿ ನಾಯಕಿ

    ತಂಗಂ ತಾಯಿ ಆರೋಪ ಏನು?
    ಕೆಜಿಎಫ್ ಚಾಪ್ಟರ್-1 ಚಿತ್ರದಲ್ಲಿ ಬರುವ ಯಶ್ ಪಾತ್ರ ತಮ್ಮ ಮಗನ ನಿಜ ಜೀವನದ ಪಾತ್ರ ಹೋಲುತ್ತದೆ ಎಂದು ತಂಗಂ ತಾಯಿ ಪೌಳಿ ಕೋರ್ಟ್‍ನಲ್ಲಿ ದಾವೆ ಹೂಡಿದ್ದಾರೆ. ನಮ್ಮ ಕುಟುಂಬದ ಅನುಮತಿ ಪಡೆಯದೆ ಚಿತ್ರದಲ್ಲಿ ನಮ್ಮ ಮಗನ ನಿಜ ಜೀವನದ ಪಾತ್ರ ಬಳಸಿಕೊಳ್ಳಲಾಗಿದೆ. ಕೆಜಿಎಫ್‍ನಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತಿದ್ದ 1990 ರ ದಶಕದಲ್ಲಿ ರೌಡಿಯಾಗಿದ್ದ ತಂಗಂ ನೈಜ ಕಥೆ ಇದಾಗಿದೆ ಎಂಬುದು ತಂಗಂ ಕುಟುಂಬದ ಆರೋಪ.

    ಕೆಜಿಎಫ್ ಚಿತ್ರದಲ್ಲಿ ನಾಯಕ ಯಶ್ ಮುಂಬೈನಲ್ಲಿ ರೌಡಿಯಾಗಿದ್ದು ಸುಪಾರಿ ಪಡೆದು ಕೆಜಿಎಫ್‍ಗೆ ಬರುತ್ತಾನೆ. ತಂಗಂ ಕೆಜಿಎಫ್‍ನಲ್ಲಿ ಕಿಲ್ಲರ್ ರೌಡಿಯಾಗಿದ್ದು ಪೊಲೀಸರ ಕಾಟ ಜಾಸ್ತಿಯಾದ ಮೇಲೆ ಮುಂಬೈನಲ್ಲಿ ತಲೆ ಮರೆಸಿಕೊಳ್ಳುತ್ತಾನೆ. ಮುಂಬೈನಲ್ಲಿ ಕೊಲೆ, ದರೋಡೆ ಇನ್ನಿತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿ ಮತ್ತೆ ಕೆಜಿಎಫ್‍ಗೆ ಬರುತ್ತಾನೆ. ಇದು ಕೆಜಿಎಫ್ ಚಿತ್ರದಲ್ಲಿ ಬರುವ ಯಶ್ ಹಲವು ಸನ್ನಿವೇಶಗಳು ನಮ್ಮ ಮಗನನ್ನೇ ಹೋಲುತ್ತವೆ ಎನ್ನುವುದು ತಂಗಂ ತಾಯಿ ಪೌಳಿ ಆರೋಪ.

    ಚಿತ್ರದಲ್ಲಿ ಯಶ್ ಪೊಲೀಸರಿಗೆ ಬಿಯರ್ ಬಾಟಲ್ ಹೊಡೆಯುವ ಸನ್ನಿವೇಶ ಸೇರಿದಂತೆ ಹಲವು ನೈಜ ಕಥೆಯನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ಕೂಡ ತಂಗಂ ಜೀವನದ ಪಾತ್ರ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ತಂಗಂ ತಾಯಿ ಪೌಳಿ ಕೋರ್ಟ್ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 23ಕ್ಕೆ ವಿಚಾರಣೆಗೆ ಹಾಜರಾಗುವಂತೆ ಚಿತ್ರ ತಂಡಕ್ಕೆ ಕೋರ್ಟ್ ಸಮನ್ಸ್ ನೀಡಿದೆ.

    ಕೆಜಿಎಫ್‍ನಲ್ಲಿ ದರೋಡೆ ಮಾಡಿದ ಚಿನ್ನವನ್ನು ಮುಂಬೈ, ಕೇರಳದಲ್ಲಿ ಮಾರಾಟ ಮಾಡುತ್ತಿದ್ದ ತಂಗಂ ಕುರಿತು 2016ರಲ್ಲಿ ಕೋಲಾರ ತಂಗಂ ಹೆಸರಿನಲ್ಲಿ ಸಿನಿಮಾ ಕೂಡ ಬಂದಿದೆ.

    https://www.youtube.com/watch?v=0ksoizu9lIQ