Tag: ವಿಜಯ್ ಈಶ್ವರ್

  • ಟ್ರೆಂಡಿಂಗ್ ಬಗ್ಗೆಯೇ ಹಾಡು ಮಾಡಿದ ‘ಸೂತ್ರಧಾರಿ’ ಚಂದನ್ ಶೆಟ್ಟಿ

    ಟ್ರೆಂಡಿಂಗ್ ಬಗ್ಗೆಯೇ ಹಾಡು ಮಾಡಿದ ‘ಸೂತ್ರಧಾರಿ’ ಚಂದನ್ ಶೆಟ್ಟಿ

    ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ (Chandan Shetty) ನಾಯಕನಾಗಿ ನಟಿಸುತ್ತಿರುವ ‘ಸೂತ್ರಧಾರಿ’ ಚಿತ್ರದ  ‘ಡ್ಯಾಶ್’ ಸಾಂಗ್ ಈಗಾಗಲೇ ಹದಿನೇಳು ಮಿಲಿಯನ್ ವೀಕ್ಷಣೆಯಾಗಿ ಜನರ ಮನ ಗೆದ್ದಿದೆ. ಈಗ ಸೂತ್ರಧಾರಿ (Sutradhari) ಚಿತ್ರಕ್ಕಾಗಿ ವಿಜಯ್ ಈಶ್ವರ್ ಬರೆದಿರುವ ‘ಟ್ರೆಂಡಿಂಗಲ್ ಬರ್ಬೇಕಂದ್ರೆ ಏನ್ ಮಾಡ್ಬೇಕು’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ‌. ಚಂದನ್ ಶೆಟ್ಟಿ ಈ ಹಾಡಿಗೆ ಸಂಗೀತ ನೀಡಿ, ಹಾಡಿದ್ದಾರೆ. ಮೋಹನ್ ಮಾಸ್ಟರ್ ನೃತ್ಯ ನಿರ್ದೇಶಿಸಿರುವ ಈ ಹಾಡಿಗೆ ಚಂದನ್ ಶೆಟ್ಟಿ ಹಾಗೂ ಅಪೂರ್ವ ಹೆಜ್ಜೆ ಹಾಕಿದ್ದಾರೆ. ಈ ಹಾಡಿನ ಬಗ್ಗೆ ಹಾಡು ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.

    ಕಳೆದ ಡಿಸೆಂಬರ್ ನಲ್ಲಿ ಬಿಡುಗಡೆಯಾದ ನಮ್ಮ ಚಿತ್ರದ ‘ಡ್ಯಾಶ್ ಸಾಂಗ್ ಭರ್ಜರಿ ಯಶಸ್ಸು ಕಂಡಿದೆ. ಈಗ ಈ ಹಾಡು ಬಿಡುಗಡೆಯಾಗಿದೆ. ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ ವೀಕ್ಷಣೆಯಾಗಿದೆ. ಇಂತಹ ಜನಪ್ರಿಯ ಹಾಡು ಬರೆದುಕೊಟ್ಟ ವಿಜಯ್ ಈಶ್ವರ್ (Vijay Eshwar) ಅವರಿಗೆ, ಸಂಗೀತ ನೀಡಿ, ಹಾಡಿ, ಅಭಿನಯಿಸಿರುವ ಚಂದನ್ ಶೆಟ್ಟಿ ಸೇರಿದಂತೆ ಇಡೀ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ. ಇನ್ನೊಂದು ಹಾಡು ಮುಗಿದರೆ, ಚಿತ್ರೀಕರಣ ಮುಕ್ತಾಯವಾಗುತ್ತದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುತ್ತೇನೆ ಎಂದು ನಿರ್ಮಾಪಕ ನವರಸನ್ (Navarasan) ತಿಳಿಸಿದರು‌.

    ಸೂತ್ರಧಾರಿ ಸಿನಿಮಾದ ಡ್ಯಾಶ್ ಹಾಡು ಭರ್ಜರಿ ಹಿಟ್ ಆಗಿರುವ ಹಿನ್ನೆಲೆಯಲ್ಲಿ ಅದನ್ನು ಮೀರಿಸುವ ಮತ್ತೊಂದು ಹಾಡು ಕೊಡುವ ಜವಾಬ್ದಾರಿ ನನ್ನಗಿತ್ತು. ಈಗ ವಿಜಯ್ ಈಶ್ವರ್ ಬರೆದಿರುವ ‘ಏನ್ ಮಾಡ್ಬೇಕು’ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಈ ಹಾಡು ಕೂಡ ಎಲ್ಲರ ಮನ ಗೆಲ್ಲುತ್ತದೆ ಎನ್ನುತ್ತಾರೆ ಚಿತ್ರದ ನಾಯಕ, ಸಂಗೀತ ನಿರ್ದೇಶಕ ಹಾಗೂ ಗಾಯಕ ಚಂದನ್ ಶೆಟ್ಟಿ.

    ಸೂತ್ರಧಾರಿ ಬಗ್ಗೆ ಸಂಪೂರ್ಣ ವಿವರವನ್ನು ನಿರ್ದೇಶಕ ಕಿರಣ್ ಕುಮಾರ್ ನೀಡಿದರು. ನಾಯಕಿ ಅಪೂರ್ವ, ನಟರಾದ ಪ್ರಶಾಂತ್ ನಟನ, ಗಿರೀಶ್, ಗಣೇಶ್ ನಾರಾಯಣ್ ಮುಂತಾದವರು ತಮ್ಮ ಪಾತ್ರದ ಕುರಿತು ಮಾತನಾಡಿದರು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೇದಿತಾ ಚಂದನ್ ಶೆಟ್ಟಿ, ನಿರ್ಮಾಪಕರಾದ ಸಂಜಯ್ ಗೌಡ, ಚೇತನ್ ಗೌಡ, ರಾಜೇಶ್, ಗೋವಿಂದರಾಜು ಹಾಗೂ ನಿರ್ದೇಶಕ ಮಹೇಶ್ ಕುಮಾರ್ ಸೂತ್ರಧಾರಿ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಕ್ಷಿತಾ ಪ್ರೇಮ್ ಸಹೋದರನ ಮತ್ತೊಂದು ಸಿನಿಮಾ: ಪ್ರೇಮ್ ಶಿಷ್ಯನೇ ನಿರ್ದೇಶಕ

    ರಕ್ಷಿತಾ ಪ್ರೇಮ್ ಸಹೋದರನ ಮತ್ತೊಂದು ಸಿನಿಮಾ: ಪ್ರೇಮ್ ಶಿಷ್ಯನೇ ನಿರ್ದೇಶಕ

    ಕ್ ಲವ್ ಯಾ’ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಗ್ರ್ಯಾಂಡ್  ಎಂಟ್ರಿ ಕೊಟ್ಟ ನಟಿ ರಕ್ಷಿತಾ (Rakshita Prem) ಸಹೋದರ ರಾಣಾ ಮೊದಲ ಸಿನಿಮಾದಲ್ಲೇ ಭರವಸೆ ಹುಟ್ಟು ಹಾಕಿದ್ದು ಗೊತ್ತೇ ಇದೆ. ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದ ಲವ್ ಕಹಾನಿಗೆ ಪ್ರೇಕ್ಷಕರು ಮೆಚ್ಚುಗೆ ಮುದ್ರೆ ಜೊತೆಗೆ ರಾಣಾ (Rana) ನಟನೆಯನ್ನು ಮೆಚ್ಚಿ ಕೊಂಡಾಡಿದ್ರು. ನಿರ್ದೇಶಕ ಪ್ರೇಮ್ ಕುಲುಮೆಯಲ್ಲಿ ಪಳಗಿರೋ ರಾಣಾ ಚಂದನವನಕ್ಕೆ ಭರವಸೆಯ ನಟನಾಗೋ ಸಕಲ ಲಕ್ಷಣಗಳನ್ನು ಹೊಂದಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    ಅನುಭವಿ ಕಲಾವಿದನಂತೆ ಮೊದಲ ಸಿನಿಮಾದಲ್ಲೇ ಮಿಂಚಿ ಚಿತ್ರರಸಿಕರಮನಗೆದ್ದ ರಾಣಾ ಈಗೇನು ಮಾಡ್ತಿದ್ದಾರೆ.? ಮುಂದಿನ ಸಿನಿಮಾ ಯಾವ್ದು..? ಯಾರ ನಿರ್ದೇಶನದಲ್ಲಿ ರಾಣಾ ಮುಂದಿನ ಸಿನಿಮಾ (New Movie) ಮೂಡಿಬರಲಿದೆ ಎಂಬೆಲ್ಲ ಪ್ರಶ್ನೆಗಳು ಮೂಡೋದು ಸಹಜ ಅದಕ್ಕೀಗ ಉತ್ತರ ಸಿಕ್ಕಿದೆ. ಹೌದು, ರಾಣಾ ಮುಂದಿನ ಸಿನಿಮಾ ನಿರ್ದೇಶನ ಮಾಡ್ತಿರೋದು ಯುವ ನಿರ್ದೇಶಕ. ಅದು ಬೇರೆ ಯಾರೂ ಅಲ್ಲ ಪ್ರೇಮ್ ನೆಚ್ಚಿನ ಶಿಷ್ಯ. ನಿರ್ದೇಶಕ ಪ್ರೇಮ್ (Jogi Prem) ಜೊತೆಗೆ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ಇರುವ ವಿಜಯ್ ಈಶ್ವರ್ (Vijay Eshwar) ಸ್ವತಂತ್ರ ನಿರ್ದೇಶಕನಾಗಿ ಬಡ್ತಿ ಪಡೆಯಲು ಸಜ್ಜಾಗಿದ್ದು ಮೊದಲ ಸಿನಿಮಾವನ್ನು ರಾಣಾಗೆ ಡೈರೆಕ್ಟ್ ಮಾಡುತ್ತಿದ್ದಾರೆ.

    ವಿಜಯ್ ಈಶ್ವರ್ ಮಾಡಿಕೊಂಡ ಸಬ್ಜೆಕ್ಟ್ ರಾಣಾಗೂ ಇಂಪ್ರೆಸ್ ಮಾಡಿದ್ದು, ವಿಜಯ್ ಜೊತೆ ಕೈ ಜೋಡಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಪ್ರೇಮ್, ರಕ್ಷಿತಾ ಕೂಡ ವಿಜಯ್ ಈಶ್ವರ್ ಹೇಳಿದ ಕಥೆ ಕೇಳಿ ಥ್ರಿಲ್ ಆಗಿದ್ದಾರಂತೆ. ಯಾವ ರೀತಿಯ ಸಬ್ಜೆಕ್ಟ್, ರಾಣಾ ಲುಕ್ ಹೇಗಿರುತ್ತೆ, ಸಿನಿಮಾದ ತಯಾರಿ ಯಾವ ಹಂತದಲ್ಲಿದೆ ಇದೆಲ್ಲದಕ್ಕೂ ಸದ್ಯದಲ್ಲೇ ಉತ್ತರ ಸಿಗಲಿದೆ.

    Live Tv
    [brid partner=56869869 player=32851 video=960834 autoplay=true]