Tag: ವಿಜಯಾನಂದ ಕಾಶಪ್ಪನವರ್

  • ಒಡೆದ ಮನೆಯಾಯ್ತು ಪಂಚಮಸಾಲಿ ಮೀಸಲಾತಿ ಹೋರಾಟ – ಯತ್ನಾಳ್‌, ಶ್ರೀಗಳ ವಿರುದ್ಧ ಕಾಶಪ್ಪನವರ್ ಕಿಡಿ

    ಒಡೆದ ಮನೆಯಾಯ್ತು ಪಂಚಮಸಾಲಿ ಮೀಸಲಾತಿ ಹೋರಾಟ – ಯತ್ನಾಳ್‌, ಶ್ರೀಗಳ ವಿರುದ್ಧ ಕಾಶಪ್ಪನವರ್ ಕಿಡಿ

    ಬಾಗಲಕೋಟೆ: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದಲ್ಲಿ (Panchamasali Lingayats’ Quota Demand) ಈಗ ಬಿರುಕು ಮೂಡಿದೆ. ಪಂಚಮಸಾಲಿ ಪೀಠದ ಶ್ರೀ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ವಿರುದ್ಧ ಅಖಿಲ ಭಾರತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‌ (Vijayanand Kashappanavar) ಕಿಡಿಕಾರಿದ್ದಲ್ಲದೇ ಪ್ರತ್ಯೇಕ ಹೋರಾಟಕ್ಕೆ ತಯಾರಿ‌ ನಡೆಸಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಶ್ರೀ ಪಂಚಮಸಾಲಿ ಜಗದ್ಗುರು ಮಹಾಪೀಠದ ಸಭಾಭವನದಲ್ಲಿ ಪಂಚಮಸಾಲಿ ಸಮಾಜದ ರಾಜ್ಯ ಕಾರ್ಯಕಾರಿಣಿ‌ ಸಭೆ ಬಳಿಕ ಮಾತನಾಡಿದ ಅವರು, ಇಲ್ಲಿಯವರೆಗೆ ಹಿಂದುಳಿದ ಆಯೋಗದ ಸಂಪೂರ್ಣ ವರದಿ ಬಂದಿಲ್ಲ. ಸಂಪೂರ್ಣ ವರದಿ ಬಂದ ಬಳಿಕ 2ಎ ಮೀಸಲಾತಿ ಕುರಿತು ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddarmaiah) ನೀಡಿದರೂ ಕೂಡ ಸ್ವಾಮೀಜಿ ಬಿಜೆಪಿ ಪಕ್ಷದ ಬ್ಯಾನರ್ ಅಡಿಯಲ್ಲಿ ಹೋರಾಟ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಸಿಸೇರಿಯನ್‌ ದುರಂತ: ಮೃತ ಮಹಿಳೆಯರ ಸಂಖ್ಯೆ ನಾಲ್ಕಕ್ಕೆ ಏರಿಕೆ

    ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುವ ಅಧಿವೇಶನದ ವೇಳೆ ಡಿ.10 ರಂದು ಟ್ರ್ಯಾಕ್ಟರ್ ಮೂಲಕ ಮುತ್ತಿಗೆ ಹಾಕಲು ಸ್ವಾಮೀಜಿ ಹಾಗೂ ಯತ್ನಾಳ್‌ ಅವರು ತಯಾರಿ‌ ನಡೆಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷನಾದ ನನ್ನ ಹಾಗೂ ಸಮಾಜದ ಹಿರಿಯರ ಗಮನಕ್ಕೆ ತಂದಿಲ್ಲ. ತಾವೇ ಬಿಜೆಪಿ ಪಕ್ಷದ ಬ್ಯಾನರ್ ಅಡಿಯಲ್ಲಿ ಸಭೆ ಮಾಡುತ್ತಿದ್ದಾರೆ. ಹೀಗಾಗಿ ಸ್ವಾಮೀಜಿಯವರ ನಡೆಯನ್ನು ಖಂಡಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮ ಹೋರಾಟ ವಕ್ಫ್ ವಿರುದ್ಧ, ಯಾವುದೇ ಕುಟುಂಬದ ವಿರುದ್ಧವಲ್ಲ: ಯತ್ನಾಳ್

    2ಎ ಮೀಸಲಾತಿ ಹೋರಾಟ ಪಕ್ಷಾತೀತವಾಗಿ ಇರಬೇಕು. ಆದರೆ ಇವರ ಹೋರಾಟ ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್‌ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ರಾಜ್ಯದ‌ ಪಂಚಮಸಾಲಿ ಸಮಾಜ ನನ್ನ ಬೆನ್ನ ಹಿಂದಿದೆ ಎಂದು ಹೇಳುತ್ತಿದ್ದಾರೆ. ತಾಕತ್ತು ದಮ್ಮು ಇದ್ದರೆ ಸಮಾಜದ ಹೆಸರನ್ನು ಬಳಸದೇ ವೈಯಕ್ತಿಕ ವರ್ಚಸ್ಸಿನ ಮೇಲೆ ಹೋರಾಟ ಮಾಡಲಿ ಎಂದು ಸವಾಲ್ ಎಸೆದರು.

     

    ಈ ಹಿಂದೆ ಯತ್ನಾಳ್‌ ಅವರು ನಮ್ಮ ದಿಕ್ಕು ತಪ್ಪಿಸಿ ಬೆಂಗಳೂರಿನವರೆಗೆ ಪ್ರಜ್ಞಾರಹಿತವಾಗಿ ಪಾದಯಾತ್ರೆ ಮಾಡಿದರು. ಬೆಂಗಳೂರಿನಲ್ಲಿ ಶೀಘ್ರದಲ್ಲಿಯೇ ಪಕ್ಷಾತೀತವಾಗಿ ಪಂಚಮಸಾಲಿ ಸಮಾಜದ ಮುಖಂಡರ ಸಭೆ ಕರೆದು 2ಎ ಮೀಸಲಾತಿ ಹೋರಾಟ ಮುಂದುವರೆಸುತ್ತೇವೆ. ಆದರೆ ಈ ಸಭೆಗೆ ಸ್ವಾಮೀಜಿ ಹಾಗೂ ಯತ್ನಾಳ್‌ ಅವರನ್ನು ಆಹ್ವಾನಿಸುವುದಿಲ್ಲ. ಮಾಜಿ‌ ಸಚಿವ ಮುರಗೇಶ್‌ ನಿರಾಣಿ ಅವರಿಗೆ ಆಹ್ವಾನವಿರುತ್ತದೆ ಎಂದು ಹೇಳಿದರು.

     

  • ಸಿಸಿ ಪಾಟೀಲ್ ಮನೆಯಲ್ಲಿ ದಿನಾಲೂ ಬೊಮ್ಮಾಯಿ ಏನು ಮಾಡುತ್ತಾರೆ ಚೆಕ್ ಮಾಡಿ: ವಿಜಯಾನಂದ ಕಾಶಪ್ಪನವರ್

    ಸಿಸಿ ಪಾಟೀಲ್ ಮನೆಯಲ್ಲಿ ದಿನಾಲೂ ಬೊಮ್ಮಾಯಿ ಏನು ಮಾಡುತ್ತಾರೆ ಚೆಕ್ ಮಾಡಿ: ವಿಜಯಾನಂದ ಕಾಶಪ್ಪನವರ್

    ಬೆಳಗಾವಿ: ಸಿಸಿ ಪಾಟೀಲ್‌ರ (CC Patil) ಮನೆಯಲ್ಲಿ ದಿನಾಲೂ ಬೊಮ್ಮಾಯಿ (Basavaraj Bommai) ಏನು ಮಾಡುತ್ತಾರೆ ಚೆಕ್ ಮಾಡಬೇಕು. ಅಪಹಾಸ್ಯವಾಗಿ ಮಾತನಾಡುವುದು ಯಾವುದೇ ನಾಯಕರಿಗೆ ಗೌರವ ತರುವಂತದಲ್ಲ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ (Vijayananda Kashappanavar) ವಾಗ್ದಾಳಿ ನಡೆಸಿದ್ದಾರೆ.

    ಪಂಚಮಸಾಲಿ (Panchamasali) ಸಮಾಜದಿಂದ 2ಡಿ ಮೀಸಲಾತಿ (2D Reservation) ವಿರೋಧ ವ್ಯಕ್ತವಾಗಿದ್ದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ನೇತೃತ್ವದಲ್ಲಿ ನಗರದ ಗಾಂಧಿಭವನದಲ್ಲಿ ನಡೆದ ಪಂಚಮಸಾಲಿ ಸಮುದಾಯದ ಕಾರ್ಯಕಾರಣಿ ಸಭೆ ತೀವ್ರ ವಿರೋಧ ವ್ಯಕ್ತವಾಗಿದೆ.

    ಸಭೆಯಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಮಾಜಿ ಸಚಿವ ವಿನಯ್ ಕುಲಕರ್ಣಿ, ಮಾಜಿ ಶಾಸಕ ಎಬಿ ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದ್ದು ಸಭೆಯಲ್ಲಿ ಮಾರ್ಚ್ 27 ರಂದು ಸರ್ಕಾರದ ಸುತ್ತೋಲೆ ಬಗ್ಗೆ ಚರ್ಚೆ ಮಾಡಿದರು. ಬಳಿಕ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಯಾವುದೇ ಕಾರಣಕ್ಕೂ ಸರ್ಕಾರದ ಆದೇಶವನ್ನು ನಾವು ಒಪ್ಪೋದಿಲ್ಲ. ಬಿಜೆಪಿ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಇದನ್ನು ನಾವೆಲ್ಲರೂ ಖಂಡಿಸಬೇಕು ಮುಂದೆ ಸರ್ಕಾರ ಬದಲಾಗುತ್ತೆ ನಮಗೆ ನ್ಯಾಯ ಸಿಗುತ್ತದೆ ಎಂದರು. ಇದನ್ನೂ ಓದಿ: ಅತ್ಯಾಚಾರಿಗಳಿಗೆ ಲಡ್ಡು ತಿನ್ನಿಸುತ್ತೀರಿ: ಗೂಂಡಾಗಳನ್ನ ತಲೆಕೆಳಗೆ ನೇತಾಕ್ತೀವಿ ಎಂದಿದ್ದ ಶಾಗೆ ಮಹುವಾ ತಿರುಗೇಟು

    ಕಳೆದ ಎರಡೂವರೆ ವರ್ಷಗಳಿಂದ ಹೋರಾಟ ಮಾಡಿದ್ರೂ ನಮಗೆ ಸೂಕ್ತ ನ್ಯಾಯ ಸಿಕ್ಕಿಲ್ಲ. 2023ರ ಮಾರ್ಚ್ 27 ರಂದು 2 ಸುತ್ತೋಲೆ ಹೊರಡಿಸಿದ್ದಾರೆ, ಇದು ಖಂಡನೀಯ. 2ಡಿ ಮೀಸಲಾತಿಯಲ್ಲಿ 52 ಜಾತಿಗಳಿವೆ. ಎಲ್ಲರಿಗೂ ಸೇರಿಸಿ ಘೋಷಣೆ ಮಾಡಿದ್ದಾರೆ. ಪಂಚಮಸಾಲಿ ಲಿಂಗಾಯತರಿಗೆ ಪ್ರತ್ಯೇಕ ಮೀಸಲಾತಿ ಕೇಳಿದ್ದೇವೆ. ಕೇವಲ 2 ಪರ್ಸೆಂಟ್ ಮೀಸಲಾತಿ ಹೆಚ್ಚಳ ಮಾಡುವ ನಾಟಕ ಮಾಡಿದ್ದಾರೆ. ಮತ್ತೊಬ್ಬರ ಮೀಸಲಾತಿ ಕಸಿದುಕೊಳ್ಳುವಂತಹ ಕೆಟ್ಟವರು ಲಿಂಗಾಯತರಲ್ಲ. ಕೆಲವು ರಾಜಕೀಯ ಕುತಂತ್ರಿಗಳು ನಾಟಕ ಮಾಡಿದ್ದಾರೆ. ವಿಜಯೋತ್ಸವ ಆಚರಣೆ ಮಾಡುತ್ತೇವೆ ಎನ್ನುತ್ತಾರೆ. ನಾವಿದನ್ನು ಒಪ್ಪೋದಿಲ್ಲ. ವಿಜಯೋತ್ಸವ ಮಾಡುವುದಿಲ್ಲ. ಸ್ವಾಮೀಜಿ ದುಃಖದಿಂದ ಕಣ್ಣೀರು ಹಾಕಿದ್ದಾರೆ. ಅವರಿಗೆ ಸಂತೋಷ ಆಗಿಲ್ಲ. ಸ್ವಾಮೀಜಿ ನಮ್ಮ ಜೊತೆ ಇದ್ದಾರೆ. ಮುಂದೆ ನಾವು ಹೋರಾಟ ಮಾಡುತ್ತೇವೆ ಎಂದರು.

    ಕುಲಕರ್ಣಿ, ಕಾಶಪ್ಪನವರ್ ಕುಡಿದು ಸ್ವಾಮೀಜಿ ಬಗ್ಗೆ ಮಾತನಾಡಿದ್ದಾರೆ ಎಂಬ ಸಿಸಿ ಪಾಟೀಲ್ ಹೇಳಿಕೆ ವಿಚಾರಕ್ಕೆ ವಾಗ್ದಾಳಿ ನಡೆಸಿದ ವಿಜಯಾನಂದ ಕಾಶಪ್ಪನವರ್, ಸಿಸಿ ಪಾಟೀಲ್‌ರ ಮನೆಯಲ್ಲಿ ದಿನಾಲೂ ಬೊಮ್ಮಾಯಿ ಏನು ಮಾಡುತ್ತಾರೆ ಚೆಕ್ ಮಾಡಬೇಕು. ಅಪಹಾಸ್ಯವಾಗಿ ಮಾತನಾಡುವುದು ಯಾವುದೇ ನಾಯಕರಿಗೆ ಗೌರವ ತರುವಂತದಲ್ಲ. ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ಚೆಲ್ಲಾಟ ಆಡುತ್ತಿದೆ. ಈ ಮೀಸಲಾತಿ ಚುನಾವಣೆ ಸಲುವಾಗಿ ಮಾಡಿರುವ ಕುತಂತ್ರವಾಗಿದೆ. ನಾವು ವಿಜಯೋತ್ಸವ ಆಚರಣೆ ಮಾಡುವುದಿಲ್ಲ ಇದನ್ನು ತಿರಸ್ಕರಿಸುತ್ತೇವೆ ಎಂದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಮಾನಸಿಕ ಚಿಂತನೆಗೆ ಒಳಗಾಗಿ ನಿಮ್ಮ ಪ್ರಾಣ ಹೋಗಬಾರದು: ಎಚ್‌ಡಿಡಿ ಬಗ್ಗೆ ಎಚ್‌ಡಿಕೆ ಭಾವುಕ

  • ಪಂಚಮಸಾಲಿ ಮುಷ್ಕರ ಅಂತ್ಯ – ಮುಖಂಡರ ಮಧ್ಯೆ ಜಟಾಪಟಿ, ಕಣ್ಣೀರಿಟ್ಟ ಸ್ವಾಮೀಜಿ

    ಪಂಚಮಸಾಲಿ ಮುಷ್ಕರ ಅಂತ್ಯ – ಮುಖಂಡರ ಮಧ್ಯೆ ಜಟಾಪಟಿ, ಕಣ್ಣೀರಿಟ್ಟ ಸ್ವಾಮೀಜಿ

    ಬೆಂಗಳೂರು: ಪಂಚಮಸಾಲಿಗಳಿಗೆ (Panchamasali) ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಸಮಾಧಾನಗೊಂಡಿರುವ ಜಯಮೃತ್ಯುಂಜಯ ಸ್ವಾಮೀಜಿ ಅವರು ಮುಷ್ಕರವನ್ನು ಅಂತ್ಯಗೊಳಿಸಲಾಗಿದೆ ಎಂದು ಘೋಷಿಸಿದರು. ಈ ಘೋಷಣೆ ಹೊರಬಿದ್ದ ಬೆನ್ನಲ್ಲೇ ಪಂಚಮಸಾಲಿ ಸಮುದಾಯದ ಕೆಲ ಮುಖಂಡರು ಹೋರಾಟ ಅಂತ್ಯಗೊಳಿಸಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಈ ವೇಳೆ ಸ್ವಾಮೀಜಿ ಎದುರೇ ಕೆಲ ಮುಖಂಡರ ನಡುವೆ ಜಟಾಪಟಿ ಏರ್ಪಟ್ಟಿತು.

    ಪಂಚಮಸಾಲಿ ಮುಖಂಡರು ಹಾಗೂ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತಿನ ಜಟಾಪಟಿ ನಡೆದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಸಭೆಯಿಂದ ಅರ್ಧಕ್ಕೆ ಹೊರ ನಡೆದ ಪ್ರಸಂಗ ಫ್ರೀಡಂ ಪಾರ್ಕ್‍ನಲ್ಲಿ ಶನಿವಾರ ನಡೆದಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಅನರ್ಹತೆ ಸಂವಿಧಾನಬಾಹಿರ: ಶರದ್ ಪವಾರ್

    ಸರ್ಕಾರ ಶುಕ್ರವಾರ ಮೀಸಲಾತಿ ಪ್ರಕಟಿಸಿದ ಹಿನ್ನಲೆಯಲ್ಲಿ, ಫ್ರೀಡಂ ಪಾರ್ಕ್‍ನಲ್ಲಿ (Freedom Park) ಪಂಚಮಸಾಲಿ ಮುಖಂಡರು ಹಾಗೂ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಕುರಿತಾಗಿ ಸ್ವಾಮೀಜಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪ್ರತಿಭಟನೆ ಕೈಬಿಡಲು ನಿರ್ಧರಿಸಲಾಯಿತು. ಆದರೆ ಇದಕ್ಕೆ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ವಿರೋಧ ವ್ಯಕ್ತಪಡಿಸಿದರು.

    ವಿಜಯಾನಂದ ಕಾಶೆಪ್ಪನವರ್ ಮಾತನಾಡಿ, ನಾವು ಕೇಳಿರುವುದು 15% ಮೀಸಲಾತಿ. ಆದರೆ ಈಗ 7% ನೀಡಲಾಗಿದೆ. ಇದು ಚುನಾವಣಾ ತಂತ್ರ ಆಗಿರಬಹುದು. ನೋಟಿಫಿಕೇಶನ್ ಆಗಲಿ. ಬೇರೆ ಸಮುದಾಯದಿಂದ ಕಿತ್ತುಕೊಂಡು ನಮಗೆ ಮೀಸಲಾತಿ ಕೊಡುವುದು ಬೇಕಾಗಿಲ್ಲ. ಈಗ ಕೇವಲ 2% ಮಾತ್ರ ಮೀಸಲಾತಿ ಸಿಕ್ಕಂತಾಗಿದೆ. ಮುಸ್ಲಿಮರ ಮೀಸಲಾತಿಯನ್ನು ಕಸಿದು ನಮಗೆ ಕೊಟ್ಟಿದ್ದಾರೆ. ಆ ಮೂಲಕ ಮುಸ್ಲಿಮರು ಮತ್ತು ನಮ್ಮ ನಡುವೆ ಜಗಳ ತಂದಿಡುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಈ ವಿಚಾರವಾಗಿ ವಿಜಯಾನಂದ ಹಾಗೂ ಯತ್ನಾಳ್ ನಡುವೆ ವಾಕ್ಸ್‌ಮರ ನಡೆಯಿತು.

    ಕಣ್ಣೀರಿಟ್ಟ ಸ್ವಾಮೀಜಿ
    ಹೋರಾಟ ಅಂತ್ಯಗೊಳಿಸಿ ನಂತರ ಮಾತನಾಡಿದ ಸ್ವಾಮೀಜಿ ಭಾವುಕರಾದರು. ಮಾತನಾಡುತ್ತಾ ಕಣ್ಣೀರಿಟ್ಟರು. ದೇವರು ನಮಗೆ 2% ಮೀಸಲಾತಿಯನ್ನು ಕರುಣಿಸಿದ್ದಾರೆ. ಹೊಟ್ಟೆ ತುಂಬಾ ಊಟ ಸಿಕ್ಕಿಲ್ಲ. ಆದರೆ ಹಸಿದ ಹೊಟ್ಟೆಗೆ ಪ್ರಸಾದ ಸಿಕ್ಕಿದಂತೆ ಆಗಿದೆ. ನೀತಿಸಂಹಿತೆ ಜಾರಿಯಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಮುಂದೆ ಯಾವ ಸರ್ಕಾರ ಆಡಳಿತಕ್ಕೆ ಬರುತ್ತದೆಯೋ ಗೊತ್ತಿಲ್ಲ. ದೊಡ್ಡ ದೊಡ್ಡ ಮಠದವರು ನನಗೆ ಬೆಂಬಲ ಕೊಟ್ಟಿಲ್ಲ. ನಮ್ಮ ಹೋರಾಟದ ಪರಿಣಾಮ ಇಡೀ ಲಿಂಗಾಯಿತ ಸಮುದಾಯಕ್ಕೆ ಅನುಕೂಲವಾಗಿದೆ. ಚುನಾವಣೆ ಮುಗಿದ ನಂತರ ಹೋರಾಟ ಮುಂದುವರೆಸೋಣ ಎಂದರು. ಇದನ್ನೂ ಓದಿ: Congress Candidate List- ಯಾವ್ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್?

  • ಪಾದಯಾತ್ರೆ ಶಾಪದಿಂದ ಬಿಎಸ್‍ವೈ ಅಧಿಕಾರ ಕಳೆದುಕೊಂಡರು: ಕಾಶಪ್ಪನವರ್

    ಪಾದಯಾತ್ರೆ ಶಾಪದಿಂದ ಬಿಎಸ್‍ವೈ ಅಧಿಕಾರ ಕಳೆದುಕೊಂಡರು: ಕಾಶಪ್ಪನವರ್

    ದಾವಣಗೆರೆ: ಪಂಚಮಸಾಲಿ ಸಮಾಜದ ಮೀಸಲಾತಿಗಾಗಿ ಹಮ್ಮಿಕೊಂಡಿದ್ದ ಪಾದಯಾತ್ರೆ ಶಾಪದಿಂದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಶಾಪದ ಹೇಳಿಕೆಯನ್ನು ನೀಡಿದ್ದಾರೆ.

    ದಾವಣಗೆರೆಯಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಸಂದರ್ಭದಲ್ಲಿ ನಾನು ಹೇಳಿಕೆ ನೀಡಿದ್ದೆ 2ಎ ಮೀಸಲಾತಿಗಾಗಿ ಶ್ರೀಗಳಿಗೆ ಪಾದಯಾತ್ರೆ ಮಾಡುವಂತೆ ಮಾಡಿದ್ದರು. ಆದರೂ, ಅವರು ನೀಡಿದ ಮಾತನ್ನು ಉಳಿಸಿಕೊಳ್ಳಲಿಲ್ಲ. ಅದೇ ಕಾರಣಕ್ಕೆ ಶ್ರೀಗಳ ಪಾದಯಾತ್ರೆ ಶಾಪ ಅವರಿಗೆ ತಟ್ಟಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದರೆ ಯಾರಾದ್ರು ಸರಿ ಅವರಿಗೆ ಶಾಪ ತಟ್ಟುತ್ತದೆ ಎಂದು ಕಾಶಪ್ಪನವರ್ ಪರೋಕ್ಷವಾಗಿ ಸಿಎಂ ಬಸವರಾಜ ಬೊಮ್ಮಾಯಿಗೆ ಶಾಪದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ

    ವಚನಾನಂದ ಸ್ವಾಮೀಜಿಗೆ ಟಾಂಗ್ ಕೊಟ್ಟ ಕಾಶಪ್ಪನವರ್, ವಚನಾನಂದ ಸ್ವಾಮೀಜಿ ಸಾಫ್ಟ್ ವೇರ್ ನಾವು ಹಾರ್ಡ್‍ವೇರ್, ಅವರು ಎಸಿರೂಂ ನಲ್ಲಿ ಕೂತು ಹೋರಾಟ ಮಾಡುತ್ತಾರೆ ನಾವು ಬಿಸಿಲಲ್ಲಿ ಹೋರಾಟ ಮಾಡುತ್ತೇವೆ. ಹೋರಾಟಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ ಯಾವಾಗ ಹೋಗುತ್ತಾರೋ ಅವಾಗ ಬಿಳ್ಕೋಡುಗೆ ಕೊಡುತ್ತೇವೆ ಎಂದರು. ಇದನ್ನೂ ಓದಿ: ಮುಂದಿನ ಮುಖ್ಯಮಂತ್ರಿ ಯತ್ನಾಳ್, ನಾನು ಭವಿಷ್ಯ ನುಡಿಯುತ್ತೇನೆ: ಕಾಶಪ್ಪನವರ್

  • ಪಂಚಮಸಾಲಿಗಳು ನಿಜ ಲಿಂಗಾಯತರು: ಜಯಮೃತ್ಯುಂಜಯ ಸ್ವಾಮೀಜಿ

    ಪಂಚಮಸಾಲಿಗಳು ನಿಜ ಲಿಂಗಾಯತರು: ಜಯಮೃತ್ಯುಂಜಯ ಸ್ವಾಮೀಜಿ

    ಚಿತ್ರದುರ್ಗ: ಪಂಚಮಸಾಲಿಗಳು ಒರಿಜಿನಲ್ ಲಿಂಗಾಯತರು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

    ನಗರದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದಿಂದ, 2ಎ ಮೀಸಲಾತಿ ಹಕ್ಕೊತ್ತಾಯಕ್ಕಾಗಿ, ಪ್ರತಿಜ್ಞಾ ಪಂಚಾಯತ್ ಬೃಹತ್ ರಾಜ್ಯ ಅಭಿಯಾನದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದನ್ನೂ ಓದಿ: ದತ್ತಪೀಠದಲ್ಲಿ ಮುಜಾವರ್ ನೇಮಕ ರದ್ದು – ಮತ್ತೆ ಸರ್ಕಾರದ ಅಂಗಳಕ್ಕೆ ಚೆಂಡು

    ಈ ಸಭೆಯಲ್ಲಿ ಮಾತನಾಡಿದ ಅವರು, ನಾಡಿಗೆ ಮೂವರು ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ, ಜೆ.ಹೆಚ್.ಪಾಟೀಲ್, ವೀರೇಂದ್ರ ಪಾಟೀಲ್ ರನ್ನು ನೀಡಿದ ಸಮಾಜ ನಮ್ಮದು. ಅಂತಹ ಸಮಾಜ ಇನ್ನೂ ಹಿಂದೆಯೇ ಉಳಿದಿದೆ. ನಾವು ಮೀಸಲಾತಿಗಾಗಿ ಕ್ರಾಂತಿಯ ಕಿಡಿಗಳಾಗಬೇಕು. ಪಂಚಮಸಾಲಿ ಗುಡುಗಿದರೆ ವಿಧಾನಸೌಧ ನಡುಗುತ್ತದೆ. ಅಷ್ಟ್ಟು ಶಕ್ತಿಯುತವಾದ ಸಮಾಜ ನಮ್ಮದು ಎಂದರು.

    ಪಂಚಮಸಾಲಿಗಳು ಒರಿಜಿನಲ್ ಲಿಂಗಾಯತರು, ನಮ್ಮ ಪಾದಯಾತ್ರೆಯ ಶಕ್ತಿ ಅತ್ಯುತ್ತಮವಾಗಿತ್ತು. ಸಾವಿರಾರು ವರ್ಷಗಳ ಇತಿಹಾಸದ ನಮ್ಮ ಸಮಾಜಕ್ಕೆ 2ಎ ಮೀಸಲಾತಿಬೇಕು. ಮತ್ತೆ ಹೋರಾಟ ಸತ್ಯಾಗ್ರಹ ಮಾಡೋಣ, ಬೃಹತ್ ರಾಜ್ಯ ಅಭಿಯಾನದಲ್ಲಿ ಸಿದ್ದರಾಗಿ ಎಂದು ಪಂಚಮಸಾಲಿಗಳಿಗೆ ಕರೆ ಕೊಟ್ಟರು. ಇದೇ ವೇಳೆ ಮಾತನಾಡಿದ ವಿಜಯಾನಂದ ಕಾಶಪ್ಪನವರ್, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸುವಲ್ಲಿ ಕೆಲವು ಲಿಂಗಾಯತ ಮಠಾಧೀಶರು ಮತ್ತು ಕೆಲವು ರಾಜಕಾರಣಿಗಳು ಹಿನ್ನಡೆ ಮಾಡುತ್ತಿದ್ದಾರೆ. ಆದರೆ 2ಎ ಮೀಸಲಾತಿಗಾಗಿ ಮತ್ತೆ ಬೃಹತ್ ಹೋರಾಟ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನೈತಿಕ ಪೊಲೀಸ್ ಗಿರಿ ವರದಿ ಬೆನ್ನಲ್ಲೇ ಐವರ ಬಂಧನ, ಬಿಡುಗಡೆ

    ಲಿಂಗಾಯತ ಪಂಚಮಸಾಲಿ ಮೀಸಲಾತಿ ಬೇಡಿಕೆಗಾಗಿ ಮತ್ತೆ ಹೋರಾಟ ನಡೆಸಬೇಕಿದೆ. ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರ ಆದೇಶದಂತೆ, ಪಂಚಮಸಾಲಿ ಸಮುದಾಯದವರು ಸಿದ್ದರಾಗಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಮಗೆ ಮೀಸಲಾತಿ ಕೊಟ್ಟೇ ಕೊಡುತ್ತಾರೆ. ಈ ವೇಳೆ ಪಂಚಸೇನೆ ರಾಜ್ಯಾಧ್ಯಕ್ಷ ಬಿ.ಎಸ್.ಪಾಟೀಲ್ ಮಾತನಾಡಿ, ನಮ್ಮ ಹೋರಾಟ ಯಾರನ್ನೋ ಮಂತ್ರಿ, ಶಾಸಕರನ್ನು ಮಾಡಲು ಅಲ್ಲ. ನಮ್ಮ ಸಮಾಜದ ಬಡ ಮಕ್ಕಳಿಗೆ, ಬಡ ಜನರಿಗಾಗಿ, ನಮ್ಮ ಸಮುದಾಯದ ಅಭಿವೃದ್ಧಿಗಾಗಿ ಮೀಸಲಾತಿ ಅಗತ್ಯ, ಅದಕ್ಕಾಗಿ ಎಲ್ಲರೂ ಒಂದಾಗಿ ಬನ್ನಿ ಎಂದರು.

    ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಮಹಡಿ ಶಿವಮೂರ್ತಿ, ಗೌಡ ಲಿಂಗಾಯತ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗೇ ಗೌಡ ಪಾಟೀಲ್, ಪಂಚಮಸಾಲಿ ಸಮಾಜದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಜ್ಯೋತಿ ದೇವೇಂದ್ರಪ್ಪ, ಜಿಪಂ ಮಾಜಿ ಅಧ್ಯಕ್ಷ ಸೌಭಾಗ್ಯ ಬಸವರಾಜನ್, ಪಂಚಮಸಾಲಿ ಸಮಾಜದ ಮಹಿಳಾ ಕಾರ್ಯದರ್ಶಿ ರೀನಾ ವೀರಭದ್ರಪ್ಪ, ಮುಖಂಡರಾದ ಜಿತೇಂದ್ರ ಎನ್ ಹುಲಿಕುಂಟೆ, ವೀರಶೈವ ಯುವ ವೇದಿಕೆ ಜಿಲ್ಲಾಧ್ಯಕ್ಷ ಹೆಚ್ ಎಂ ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.

  • ನಿರಾಣಿಗೆ ಹುಚ್ಚು ಹಿಡಿದಿದೆ, ತಲೆ ಕೆಟ್ಟಿದೆ – ಕಾಶಪ್ಪನವರ್ ಕಿಡಿ

    ನಿರಾಣಿಗೆ ಹುಚ್ಚು ಹಿಡಿದಿದೆ, ತಲೆ ಕೆಟ್ಟಿದೆ – ಕಾಶಪ್ಪನವರ್ ಕಿಡಿ

    ಗದಗ: ಸಮಾಜ ಪೀಠವನ್ನ ಮಾಡಿದೆ. ನಿರಾಣಿಗೆ ಹುಚ್ಚು ಹಿಡಿದಿದೆ, ತಲೆ ಕೆಟ್ಟಿದೆ ಅಧಿಕಾರದ ವ್ಯಾಮೋಹ ಏರಿದೆ. ಹೀಗಾಗಿ ಬೇಕಾ ಬಿಟ್ಟಿ ಮಾತಾಡುತ್ತಿದ್ದಾರೆ ಎಂದು ವಿಜಯಾನಂದ ಕಾಶಪ್ಪನವರ್ ಕಿಡಿಕಾರಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮಖಂಡಿ ಕಾರ್ಯಕ್ರಮಕ್ಕೆ ತಾಕತ್ತಿದ್ರೆ ಕಲ್ಲು ಹೊಡೆಸಲಿ, ಪಂಚಮಸಾಲಿ ಪ್ರತಿಜ್ಞೆ ಅಭಿಯಾನ ಜಮಖಂಡಿಯಲ್ಲಿ ನಡದೇ ನಡೆಯುತ್ತೆ. ಸಮಾಜದ ಒಳಿತಿಗಾಗಿ ಅವರು ಕೆಲಸ ಮಾಡುತ್ತಿಲ್ಲ. ಕೆಲವರು ಮುಖ್ಯಮಂತ್ರಿಯಾಗ್ಬೇಕು, ಮಂತ್ರಿ ಆಗ್ಬೇಕು ಅನ್ನೋ ನಿಟ್ಟಿನಲ್ಲಿದ್ದಾರೆ. ಮೀಸಲಾತಿ ಸಿಗೋವರೆಗೂ ನಾವು ಹೋರಾಟ ನಿಲ್ಲಿಸಲ್ಲ. ಇವರ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ. ಮುಂದೆ ಒಂದು ದಿನ ಸಮಾಜ ಇಂತವರಿಗೆ ತಕ್ಕಪಾಠ ಕಲಿಸಲಿದೆ ಎಂದರು. ಇದನ್ನೂ ಓದಿ: ಬಿಜೆಪಿ ಸರ್ಕಾರದಂತ ದರಿದ್ರ ಸರ್ಕಾರ ಇನ್ನೊಂದಿಲ್ಲ, ದಮ್ಮಯ್ಯ ಅಂತೀನಿ ಕಣ್ರಯ್ಯ ಈ ಸರ್ಕಾರ ಕಿತ್ತು ಬಿಸಾಕಿ: ಸಿದ್ದರಾಮಯ್ಯ

    ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಆರಂಭದಿಂದಲೂ ಕೆಲವರು ಮಾಡುತ್ತಿದ್ದಾರೆ. ಪಂಚಮಸಾಲಿ ಪ್ರತಿಜ್ಞೆ ಅಭಿಯಾನ ಜಮಖಂಡಿಯಲ್ಲಿ ನಡದೇ ನಡೆಯುತ್ತೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಡಿಕೆಶಿ, ಸಿದ್ದರಾಮಯ್ಯ ಇನ್ನು 20 ವರ್ಷ ನಿರುದ್ಯೋಗಿಗಳು: ಕಟೀಲ್

    ಕೂಡಲ ಸಂಗಮ ಪೀಠಕ್ಕೆ ಪರ್ಯಾಯ ಸ್ವಾಮೀಜಿ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಮಾಜದ ಪೀಠವನ್ನು ಯಾರಿಂದಲೂ ಒಡೆಯಲು ಸಾಧ್ಯವಿಲ್ಲ. ಅವರಿಗೆ ತಾಕತ್ ಇದ್ರೆ ಒಡೆದು ತೋರಿಸಲಿ. ಪೀಠ ಬದಲಾಗಲ್ಲ, ಇದೇ ಸ್ವಾಮಿಗಳು ಪೀಠದಲ್ಲಿ ಇರ್ತಾರೆ ಎಂದು ವಿಜಯಾನಂದ ಕಾಶಪ್ಪನವರ್ ತಿಳಿಸಿದರು.

     

  • ಜಯಮೃತ್ಯುಂಜಯ ಸ್ವಾಮೀಜಿ ಶಾಪದಿಂದಲೇ ಯಡಿಯೂರಪ್ಪನವರ ಅಧಿಕಾರ ಹೋಗಿದೆ: ವಿಜಯಾನಂದ ಕಾಶಪ್ಪನವರ್

    ಜಯಮೃತ್ಯುಂಜಯ ಸ್ವಾಮೀಜಿ ಶಾಪದಿಂದಲೇ ಯಡಿಯೂರಪ್ಪನವರ ಅಧಿಕಾರ ಹೋಗಿದೆ: ವಿಜಯಾನಂದ ಕಾಶಪ್ಪನವರ್

    ಕೊಪ್ಪಳ: ಜಯಮೃತ್ಯುಂಜಯ ಸ್ವಾಮೀಜಿ ಶಾಪದಿಂದಲೇ ಮಾಜಿ ಸಿಎಂ ಯಡಿಯೂರಪ್ಪ ಅಧಿಕಾರ ಹೋಗಿದೆ ಎಂದು ಕೊಪ್ಪಳದಲ್ಲಿ ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.

     

    ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡ ಬಗ್ಗೆ ಮಾತನಾಡಿದ ಅವರು, ಜಯಮೃತ್ಯುಂಜಯ ಸ್ವಾಮೀಜಿ ಶಾಪದಿಂದಲೇ ಯಡಿಯೂರಪ್ಪ ಅವರ ಅಧಿಕಾರ ಹೋಗಿದೆ. ಮೀಸಲಾತಿ ಕೊಡ್ತೀನಿ ಎಂದು ಯಡಿಯೂರಪ್ಪ ಅವರು ಮೀಸಲಾತಿ ಕೊಡಲಿಲ್ಲ. ಅದೇ ಕಾರಣಕ್ಕಾಗಿಯೇ ಅವರ ಅಧಿಕಾರ ಹೋಯ್ತು. ಸ್ವಾಮೀಜಿ ಅವರ ಶಾಪವೇ ಯಡಿಯೂರಪ್ಪ ಅವರಿಗೆ ತಟ್ಟಿದೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ:  ನೈಸ್ ರಸ್ತೆಯಲ್ಲಿ ಕಾರು ಪಲ್ಟಿ – ಪಾರ್ಟಿಯಿಂದ ಬರುವಾಗ ಅಪಘಾತ?

    ಸ್ವಾಮೀಜಿಯನ್ನು 712 ಕಿಲೋ ಮೀಟರ್ ನಡೆಸೋ ಅವಶ್ಯಕತೆ ಇತ್ತಾ? ಮೀಸಲಾತಿ ಕೊಡ್ತೀನಿ ಎಂದು ಸುವರ್ಣ ಸೌಧದ ಮುಂದೆ ಮಾತು ಕೊಟ್ಟಿದ್ರು. ಮೀಸಲಾತಿ ಕೊಡಲಾರದಿದ್ದಕ್ಕೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಬಸನಗೌಡ ಪಾಟೀಲ್ ಯತ್ನಾಳ್ ಮೀಸಲಾತಿಗಾಗಿಯೇ ಯಡಿಯೂರಪ್ಪ ಅವರನ್ನು ಬೈದಿದ್ದು. ಅದು ಬಿಟ್ಟು ಯಾವುದೇ ವೈಯಕ್ತಿಕ ಕಾರಣಕ್ಕೆ ಅಲ್ಲ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಭಕ್ತರಿಗೆ ಘಾಸಿಯಾಗಿದೆ, ಸರಿದೂಗಿಸುವ ಪ್ರಯತ್ನ ಮಾಡುತ್ತೇನೆ: ಬೊಮ್ಮಾಯಿ

  • ಮುಂದಿನ ಮುಖ್ಯಮಂತ್ರಿ ಯತ್ನಾಳ್, ನಾನು ಭವಿಷ್ಯ ನುಡಿಯುತ್ತೇನೆ: ಕಾಶಪ್ಪನವರ್

    ಮುಂದಿನ ಮುಖ್ಯಮಂತ್ರಿ ಯತ್ನಾಳ್, ನಾನು ಭವಿಷ್ಯ ನುಡಿಯುತ್ತೇನೆ: ಕಾಶಪ್ಪನವರ್

    ಹಾವೇರಿ: ನಾನು ಭವಿಷ್ಯ ನುಡಿಯುತ್ತೇನೆ ಮುಂದಿನ ಮುಖ್ಯಮಂತ್ರಿ ನಮ್ಮ ಬಸನಗೌಡ ಪಾಟೀಲ್ ಯತ್ನಾಳ್. ಆ ಶಕ್ತಿ ಸಾಮರ್ಥ್ಯ ಅವರಲ್ಲಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.

    ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದಲ್ಲಿ ನಡೆದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾನಗಲ್ ನಲ್ಲಿ ಮುಂದಿನ ಶಾಸಕರು ಯಾರು ಅಂದ್ರೆ ಅದು ಪಂಚಮಸಾಲಿ ಸಮಾಜದವರು ಆಗಿರಬೇಕು. ನೀವು ಮನಸ್ಸು ಮಾಡಿದ್ರೆ ಇಲ್ಲಿಂದ ನಮ್ಮವರು ಒಬ್ಬರು ಶಾಸಕರಾಗೇ ಆಗ್ತಾರೆ. ಶಾಸಕ ಯತ್ನಾಳ್ ಮಂತ್ರಿ ಆಗ್ತಾರೆ, ಮುಖ್ಯಮಂತ್ರಿ ಆಗ್ತಾರೆ ಎಂದು ಅನೇಕರು ಹೊಟ್ಟೆಕಿಚ್ಚು ಪಟ್ಟರು. ನಾವು ಮನಸ್ಸು ಮಾಡಿದ್ದರೆ ಯತ್ನಾಳ್ ಮುಖ್ಯಮಂತ್ರಿ ಆಗಬಹುದಿತ್ತು. ನಮ್ಮ ಸಮಾಜಕ್ಕೆ ಮೊದಲು ಮೀಸಲಾತಿ ಕೊಡಿ, ಆಮೇಲೆ ಮಂತ್ರಿ, ಮುಖ್ಯಮಂತ್ರಿ ಎಂದು ಯತ್ನಾಳ್ ಹೇಳಿದ್ದಾರೆ ಎಂದರು. ಇದನ್ನೂ ಓದಿ: ಬೊಮ್ಮಾಯಿಯವರು ಮಾಜಿ ಮುಖ್ಯಮಂತ್ರಿಗಳಂತೆ ನಮ್ಮ ಸಮಾಜಕ್ಕೆ ಮೋಸ ಮಾಡುವುದಿಲ್ಲ: ಯತ್ನಾಳ್

    ನಮ್ಮ ಜೀವ ಹೋದರೂ ಪರವಾಗಿಲ್ಲ, ಸಮಾಜಕ್ಕೆ ಮೀಸಲಾತಿ ಸಿಗಬೇಕು. ಕೆಲವರು ಇದ್ದಾರೆ. ಅವರು ಮಂತ್ರಿ, ಮುಖ್ಯಮಂತ್ರಿ ಆಗಬೇಕಂತೆ. ಅದಕ್ಕಾಗಿ ಮೂರನೇ ಒಕ್ಕೂಟ ಮಾಡುವುದಕ್ಕೆ ಹೊರಟಿದ್ದಾರೆ. ಸಿದ್ದಲಿಂಗ ಸ್ವಾಮಿಗಳು ಸೇರಿದಂತೆ ಕೆಲವು ಸ್ವಾಮೀಜಿಗಳೆ ನೀವು ದಯವಿಟ್ಟು ಸಮಾಜ ಒಡೆಯೋ ಕೆಲಸ ಮಾಡಬೇಡಿ. ಸಮಾಜ ಒಗ್ಗಟ್ಟಾಗಿದೆ, ಸಮಾಜಕ್ಕೆ ಮೀಸಲಾತಿ ಬೇಕಾಗಿದೆ. ಅದು ಹೇಗೆ ನೀವು ಮತ್ತೊಂದು ಪೀಠ ಮಾಡುತ್ತಿರಿ ನಾನೂ ನೋಡುತ್ತೇನೆ ಎಂದು ಸವಾಲು ಹಾಕಿದರು. ಇದನ್ನೂ ಓದಿ: ನಿರಾಣಿಗೆ ಅಧಿಕಾರದ ವ್ಯಾಮೋಹ ಹೆಚ್ಚಾಗಿದೆ: ವಿಜಯಾನಂದ ಕಾಶಪ್ಪನವರ್

    ನಮ್ಮ ಸಮಾಜಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒಬ್ಬರೆ ಶ್ರೀಗಳು. ಅವರ ನೇತೃತ್ವದಲ್ಲಿ ನಾವು ಮೀಸಲಾತಿ ಪಡೆಯಬೇಕಾಗಿದೆ. ನಮಗೆ ರಾಜಕೀಯ ಮೀಸಲಾತಿ ಬೇಕಾಗಿಲ್ಲ. ನಾನು ಮಂತ್ರಿ, ಮುಖ್ಯಮಂತ್ರಿ ಆಗಬೇಕು ಎಂದು ಹೊರಟಿಲ್ಲ. ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಮೀಸಲಾತಿಯಿಂದ ಅನುಕೂಲ ಆಗುತ್ತದೆ. ಸಂದರ್ಭ ಬಂದರೆ ನಾನು ರಾಜಕೀಯ ಬಿಡುತ್ತೇನೆ, ಆದರೆ ಮೀಸಲಾತಿ ಹೋರಾಟ ಬಿಡುವುದಿಲ್ಲ. ಒಕ್ಕೂಟ ಮಾಡಿಕೊಂಡು ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ ಪುಣ್ಯಾತ್ಮರು ಎಂದು ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.

  • ನಾನು ಖಾಯಂ ಮುಖ್ಯಮಂತ್ರಿ, ಯಾರು ಏನೇ ಅಂದ್ರು ನನ್ನ ಪದವಿಗೆ ಧಕ್ಕೆ ಆಗಲ್ಲ-ಮುಖ್ಯಮಂತ್ರಿ ಚಂದ್ರು

    ನಾನು ಖಾಯಂ ಮುಖ್ಯಮಂತ್ರಿ, ಯಾರು ಏನೇ ಅಂದ್ರು ನನ್ನ ಪದವಿಗೆ ಧಕ್ಕೆ ಆಗಲ್ಲ-ಮುಖ್ಯಮಂತ್ರಿ ಚಂದ್ರು

    ಚಿತ್ರದುರ್ಗ: ನಾನು ಖಾಯಂ ಮುಖ್ಯಮಂತ್ರಿ, ಯಾರು ಏನೇ ಹೇಳಿದ್ರು ನನ್ನ ಪದವಿಗೆ ಧಕ್ಕೆ ಆಗಲ್ಲವೆಂದು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

    ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ವಿಜಯಾನಂದ ಕಾಶಪ್ಪನವರ್ ಬಗ್ಗೆ ಅಪಾರವಾದ ಗೌರವವಿದೆ ಅವರು ಅವರ ಹಕ್ಕನ್ನು ಸರ್ಕಾರದೊಂದಿಗೆ ಕೇಳಬಹುದು. ನಾನು, ಅವರು ಏಕವಚನದಲ್ಲಿ ಮಾತನಾಡಿದರು ಅಗೌರವದಿಂದ ಮಾತನಾಡಿದರೆಂದು ನಾನು ಆ ತಪ್ಪು ಮಾಡುವುದಿಲ್ಲ. ನಾನು ಖಾಯಂ ಮುಖ್ಯಮಂತ್ರಿ, ಯಾರು ಏನೇ ಹೇಳಿದ್ರು ನನ್ನ ಪದವಿಗೆ ಧಕ್ಕೆ ಆಗಲ್ಲ. ಅವರ ಹಕ್ಕು ಅವರು ಕೇಳುತ್ತಿದ್ದಾರೆ. ನಮ್ಮ ಹಕ್ಕು ನಾವು ಕೇಳುತ್ತಿದ್ದೇವೆ. ಕಾಶಪ್ಪನವರ್ ದೊಡ್ಡವರು ಏನು ಹೇಳಿದ್ರು ಆಶೀರ್ವಾದ ಅಂತ ತಿಳಿದುಕೊಳ್ಳುತ್ತೇನೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಮುಖ್ಯಮಂತ್ರಿ ಚಂದ್ರು ಅವನೇನು ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ: ಕಾಶಪ್ಪನವರ್

    ನನಗೆ ಎಲ್ಲಾ ಸಮುದಾಯಗಳ ಬಗ್ಗೆ ಗೌರವವಿದೆ. ತಳ ಸಮುದಾಯಗಳಿಗಾದ ಅನ್ಯಾಯವನ್ನು ಅವರು ಗಮನಿಸಬೇಕಿದೆ. ಮುಂದುವರೆದ ಶ್ರೀಮಂತರೆನಿಸಿರುವ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೆ ನಮಗೆ ಅನ್ಯಾಯವಾಗುತ್ತದೆ. ಹೀಗಾಗಿ ನಮ್ಮ ಅನ್ನ ಬೇರೆಯವರು ತೆಗೆದುಕೊಂಡು ಹೋದರೆ ನಾವು ಎಲ್ಲಿಗೆ ಹೋಗಬೇಕು ಎಂದು ಕಿಡಿಕಾರಿದರು.

    ಸಾಮಾಜಿಕ ಹಾಗೂ ಶೈಕ್ಷಣಿಕ ಮಾನದಂಡದ ಮೇಲೆ ಪಂಚಮಸಾಲಿಗಳಿಗೆ ಮೀಸಲಾತಿ ನೀಡಲು ಆಗುವುದಿಲ್ಲ. ಈ ಬಗ್ಗೆ ಸರ್ಕಾರ ನ್ಯಾಯಯುತವಾಗಿ ಯೋಚಿಸಬೇಕು ಪಂಚಮಸಾಲಿ ಮಾತ್ರ ಅಲ್ಲ 2ಎ ಗೆ ಅರ್ಹತೆ ಇಲ್ಲದವರು ಯಾರೇ ಬಂದರು ವಿರೋಧ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಬಲಿಷ್ಠ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸದಂತೆ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಗ್ರಹ

  • ಮುಖ್ಯಮಂತ್ರಿ ಚಂದ್ರು ಅವನೇನು ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ: ಕಾಶಪ್ಪನವರ್

    ಮುಖ್ಯಮಂತ್ರಿ ಚಂದ್ರು ಅವನೇನು ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ: ಕಾಶಪ್ಪನವರ್

    ಬಾಗಲಕೋಟೆ: ಮೀಸಲಾತಿಗೆ ಅಪಸ್ವರ ಎತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಚಂದ್ರು ಅವನೇನು ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಚಂದ್ರು ಅವನೇನು ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ? ಪಂಚಮಸಾಲಿ ಸಮುದಾಯ ಮೀಸಲಾತಿ ಬೇಡ ಅನ್ನೋದಕ್ಕೆ ಇವರ್ಯಾರು? ನಮಗೆ ಮೀಸಲಾತಿ ಬೇಕಿದೆ, ಇದಕ್ಕಾಗಿಯೇ ರಾಜ್ಯದಲ್ಲಿ ಪಾದಯಾತ್ರೆ ಮಾಡಿದ್ದೇವೆ. 10 ಲಕ್ಷ ಜನ ಸೇರಿಸಿ ಸಮಾವೇಶ ಮಾಡಿ ನ್ಯಾಯ ಕೇಳಿದ್ದೇವೆ. ನಮಗೆ ಮೀಸಲಾತಿ ಬೇಡ ಅನ್ನೋಕೆ ಇವರ್ಯಾರು? ನೀವು ನಿಮ್ಮಷ್ಟಕ್ಕೆ ಹೋರಾಟ ಮಾಡಿ, ಆದರೆ ನಮ್ಮ ತಂಟೆಗೆ ಬಂದರೆ ಸುಮ್ಮನೆ ಕೂರೋಕಾಗಲ್ಲ. ಜನ ಕೇಳ್ತಾರೆ ಅಂತ ಬಾಯಿಗೆ ಬಂದಂತೆ ಮಾತನಾಡೋಕೆ ಇವನ್ಯಾರು? ಮೀಸಲಾತಿ ಬೇಡ ಅನ್ನೋಕೆ ಇವನಿಗೆ ರೈಟ್ಸ್ ಕೊಟ್ಟೋರು ಯಾರು? ಅವರು ಉದ್ದಾರ ಆಗಿರಬಹುದು, ಸಂವಿಧಾನಾತ್ಮಕವಾಗಿ ಹಕ್ಕಿದೆ ಮೀಸಲಾತಿ ಕೇಳುತ್ತೇವೆ. ಅಗಸ್ಟ್ 26ರಿಂದ ಮಲೆ ಮಹದೇಶ್ವರ ಬೆಟ್ಟದಿಂದ ಮತ್ತೇ ಜಾಗೃತಿ ಸಭೆ ಆರಂಭಿಸುತ್ತೇವೆ ಎಂದರು.ಇದನ್ನೂ ಓದಿ: ಬಲಿಷ್ಠ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸದಂತೆ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಗ್ರಹ

    ಬಸನಗೌಡ ಪಾಟೀಲ್ ಯತ್ನಾಳ್ ಸಚಿವ ಸ್ಥಾನ ಕೈ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಿ.ಪಿ ಯೋಗೇಶ್ವರ್‍ಗೆ ಮಂತ್ರಿ ಸ್ಥಾನ ನೀಡಬಾರದು ಎಂದು ಬಿಎಸ್‍ವೈ ಪಟ್ಟು ಹಿಡಿದಿದ್ದರು ಎಂದು ಸುದ್ದಿ ಕೇಳಿ ಬಂತು. ಯತ್ನಾಳ್ ಸಣ್ಣವರಲ್ಲ, ಅವರಿಗೆ ಶಕ್ತಿಯಿದೆ, ತಾಕತ್ತಿದೆ. ಯತ್ನಾಳ್ ಜೊತೆ ಅವರ ಸಮಾಜವಿದೆ. ಅವರೇ ಮುಂದೆ ಮುಖ್ಯಮಂತ್ರಿ ಯಾಕೆ ಆಗಬಾರದು? ಬಿಜೆಪಿ ಪಕ್ಷದ ಬಗ್ಗೆ ನಾನು ಮಾತನಾಡಲ್ಲ. ನಮ್ಮದು ಪಕ್ಷಾತೀತ ಪಂಚಮಸಾಲಿ ಮೀಸಲಾತಿ ಹೋರಾಟ. ನಮ್ಮ ಹೋರಾಟದಲ್ಲಿ ನಾನು ಕಾಂಗ್ರೆಸ್ ಪಕ್ಷದವನಾದರೂ ಕೂಡಾ ಪಕ್ಷ ಬದಿಗೊತ್ತಿ ನಿಂತಿದ್ದೇನೆ. ಯತ್ನಾಳ್, ರಾಜೂಗೌಡರಿಗೆ ಮಂತ್ರಿಸ್ಥಾನ ನೀಡಬೇಕಿತ್ತು. ಆದರೆ ಅದು ಅವರ ವೈಯಕ್ತಿಕ ವಿಚಾರ ಯತ್ನಾಳ್ ಬಿಜೆಪಿಯ ಹಿರಿಯ ಮನುಷ್ಯ. ಅವರ ವಿಷಯದಲ್ಲಿ ಕುತಂತ್ರ ನಡೆಸಿದೆ. ಕುತಂತ್ರ ಇದ್ದೆ ಇರುತ್ತದೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದಕ್ಕೆ ಯತ್ನಾಳ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಯಡಿಯೂರಪ್ಪ ನವರೇ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮಂತ್ರಿಸ್ಥಾನ ಕೊಡಬಾರದು ಎಂದಿದ್ದಾರೆ ಎಂದರು. ಇದನ್ನೂ ಓದಿ: ಬೋವಿ ಸ್ವಾಮೀಜಿ, ನಾರಾಯಣಸ್ವಾಮಿ ನಡುವೆ ತಾರಕಕ್ಕೇರಿದ ಒಳಮೀಸಲಾತಿ ಸಮರ

    ರಾಜಕೀಯ ಪ್ರೇರಿತ ಕೇಸ್:
    ನಿನ್ನೆ ಇಳಕಲ್ ಪಟ್ಟಣಕ್ಕೆ ಮಾಜಿ ಸಚಿವ ವಿನಯ್ ಕುಲಕರ್ಣಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಜಾಮೀನು ಸಿಗುತ್ತೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಸೋಮವಾರ ಸಿಗಬಹುದು ಎಂದುಕೊಂಡಿದ್ವಿ ಆದರೆ ನಿನ್ನೆ ಸಿಕ್ಕಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ವಿನಯ್ ಕುಲಕರ್ಣಿಯವರು ಬೆಂಗಳೂರಿಗೆ ಹೊರಟಿದ್ದರು. ಸ್ನೇಹಿತರಿಂದ ವಿಷಯ ತಿಳಿದು ಮಾರ್ಗಮಧ್ಯೆ ಮನೆಗೆ ಬರಮಾಡಿಕೊಂಡೆ. ಚಹಾ ಕುಡಿದು ಹೋಗಿ ಎಂದು ಮನವಿ ಮಾಡಿದ್ದೆ, ಭೇಟಿ ವೇಳೆ ಯಾವುದೇ ಚರ್ಚೆ ಆಗಿಲ್ಲ. ಅವರೊಬ್ಬರು ಸಮಾಜದ ಮುಖಂಡರು ಸಮಾಜ ಅವರ ಜೊತೆ ಇದೆ ಎಂದು ಅಂದೆ ಸ್ಪಷ್ಟಪಡಿಸಿದ್ದೆ. ಏನೋ ದುರದೃಷ್ಟ ಉದ್ದೇಶ ಪೂರ್ವಕವಾಗಿ ಅವರ ಮೇಲೆ ಪ್ರಕರಣ ಹಾಕಲಾಗಿದೆ. ಸುಮಾರು 10 ತಿಂಗಳ ಕಾಲ ಜೈಲುಶಿಕ್ಷೆ ಅನುಭವಿಸುವ ಪರಿಸ್ಥಿತಿ ಬಂತು. ಅವರಿಗೆ ಅನ್ಯಾಯ ಆಗಿದೆ ಭಗವಂತ ಅವರಿಗೆ ನ್ಯಾಯ ಕೊಡುತ್ತಾನೆ. ನ್ಯಾಯಾಲಯಕ್ಕೆ ನಾವು ಗೌರವ ಕೋಡುತ್ತೇವೆ. ವಿನಯ್ ಕುಲಕರ್ಣಿ ಬಿಡುಗಡೆ ವೇಳೆ ಕೋವಿಡ್ ನಿಯಮ ಉಲ್ಲಂಘನೆಗೆ ಪ್ರಕರಣ ದಾಖಲಾಗಿರುವುದು ರಾಜಕೀಯ ಕುತಂತ್ರ. ಶ್ರೀರಾಮುಲು ಜನ ಸೇರಿಸಿ ಜಾತ್ರೆ ಮಾಡಿದರೆ ಅವರಿಗೆ ಕೇಸ್ ಹಾಕಿದ್ರಾ? ನನ್ನ ಮೇಲೂ ಕೇಸ್ ಹಾಕಿದ್ದಾರೆ. ಸಣ್ಣಪುಟ್ಟ ಕಾರ್ಯಕ್ರಮ ಮಾಡಿದರೆ ಕೇಸ್ ಹಾಕುತ್ತಾರೆ. ಇದು ದ್ವೇಷದ ರಾಜಕೀಯ, ಇವತ್ತು ಅವರು ಮಾಡಿದರೆ ನಾಳೆ ನಾವು ಮಾಡುತ್ತೇವೆ ಎಂದರು.