Tag: ವಿಜಯಲಕ್ಷ್ಮೀ

  • ದರ್ಶನ್ ಬರ್ತ್‌ಡೇ ಸಂಭ್ರಮ – ಪತಿ ಜೊತೆಗಿನ ಫೋಟೊ ಹಂಚಿಕೊಂಡು ವಿಜಯಲಕ್ಷ್ಮೀ ವಿಶ್

    ದರ್ಶನ್ ಬರ್ತ್‌ಡೇ ಸಂಭ್ರಮ – ಪತಿ ಜೊತೆಗಿನ ಫೋಟೊ ಹಂಚಿಕೊಂಡು ವಿಜಯಲಕ್ಷ್ಮೀ ವಿಶ್

    – `ದಾಸ’ನಿಗೆ ಬರ್ತ್‌ಡೇ ವಿಶ್ ಮಾಡಿದ ಧನ್ವೀರ್, ಚಿಕ್ಕಣ್ಣ

    ಬೆಂಗಳೂರು: ನಟ ದರ್ಶನ್ (Darshan) 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪತಿ ದರ್ಶನ್ ಜೊತೆಗಿನ ಫೋಟೊ ಹಂಚಿಕೊಂಡು ಪತ್ನಿ ವಿಜಯಲಕ್ಷ್ಮೀ (Vijayalakshmi) ಬರ್ತ್‌ಡೇ (Birthday) ವಿಶ್ ಮಾಡಿದ್ದಾರೆ.

     

    View this post on Instagram

     

    A post shared by Vijayalakshmi darshan (@viji.darshan)

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿದ್ದ ಸಂದರ್ಭದಿಂದಲೂ ಜೊತೆಯಾಗಿದ್ದ ನಟ ಧನ್ವೀರ್ (Dhanveer) ಸಹ ಶುಭಾಶಯ ತಿಳಿಸಿದ್ದಾರೆ. ಧನ್ವೀರ್ ದರ್ಶನ್ ಜೊತೆಗಿನ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ಸಂತೋಪ ಮತ್ತು ಯಶಸ್ಸು ಸದಾ ನಿಮ್ಮ ಜೊತೆಗಿರಲಿ. ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ. ಹುಟ್ಟುಹಬ್ಬದ ಶುಭಾಶಯಗಳು ಅಣ್ಣ (ಬಾಸ್) #ಉಸಿರಿರುವವರೆಗೂ ಇರ್ತಿವಿ ನಿಮ್ಮಿಂದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ್ಯಕ್ಟರ್ & ಡಾಕ್ಟರ್ – ಮೈಸೂರಲ್ಲಿ ಅದ್ದೂರಿಯಾಗಿ ನಡೆದ ಡಾಲಿ, ಧನ್ಯತಾ ಮದುವೆ

    ನಟ ಚಿಕ್ಕಣ್ಣ ಸಹ ತಮ್ಮ ಇನ್‌ಸ್ಟಾ ಖಾತೆಯಲ್ಲಿ, ಹುಟ್ಟುಹಬ್ಬದ ಶುಭಾಶಯಗಳು ಸರ್ ಎಂದು ಬರೆದುಕೊಂಡು ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Chikku (@chikkanna_official)

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಪ್ರತಿವರ್ಷ ಅಭಿಮಾನಿಗಳೊಂದಿಗೆ ಭರ್ಜರಿಯಾಗಿ ಬರ್ತ್‌ಡೇ ಸೆಲೆಬ್ರೆಟ್ ಮಾಡುತ್ತಿದ್ದ ದರ್ಶನ್, ಈ ಬಾರಿ ಅನಾರೋಗ್ಯದ ಕಾರಣ ಇವೆಲ್ಲದರಿಂದಲೂ ದೂರ ಉಳಿದಿದ್ದಾರೆ. ಇದನ್ನೂ ಓದಿ : ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – ಮೃತರ ಕುಟುಂಬಗಳಿಗೆ ಕೇಂದ್ರದಿಂದ ತಲಾ 10 ಲಕ್ಷ ಪರಿಹಾರ ಘೋಷಣೆ

    ಇದೀಗ ಅಭಿಮಾನಿಗಳಿಂದ ದರ್ಶನ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.

  • ರವಿಪ್ರಕಾಶ್ ಬಂಧನವಾಗೋವರೆಗೆ ಅನ್ನ, ನೀರು ಮುಟ್ಟಲ್ಲ: ವಿಜಯಲಕ್ಷ್ಮಿ ಪಟ್ಟು

    ರವಿಪ್ರಕಾಶ್ ಬಂಧನವಾಗೋವರೆಗೆ ಅನ್ನ, ನೀರು ಮುಟ್ಟಲ್ಲ: ವಿಜಯಲಕ್ಷ್ಮಿ ಪಟ್ಟು

    ಬೆಂಗಳೂರು: ನಟ ರವಿ ಪ್ರಕಾಶ್ ಬಂಧನವಾಗುವವರೆಗೂ ತಾನು ಅನ್ನ, ನೀರು ಮುಟ್ಟಲ್ಲ ಎಂದು ಸ್ಯಾಂಡಲ್‍ವುಡ್ ನಟಿ ವಿಜಯಲಕ್ಷ್ಮಿ ಪಟ್ಟು ಹಿಡಿದಿದ್ದಾರೆ.

    ಈ ಬಗ್ಗೆ ವಿಡಿಯೋ ಮಾಡಿ ಮಾತನಾಡಿರುವ ವಿಜಯಲಕ್ಷ್ಮಿ, “ನನ್ನ ಪ್ರಾಣಕ್ಕೆ ಏನಾದರೂ ಹೆಚ್ಚು ಕಡಿಮೆ ಆದರೆ ಅದಕ್ಕೆ ರವಿಪ್ರಕಾಶ್ ಕಾರಣ ಆಗ್ತಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಯಾರೂ ನನಗೆ ಸಹಾಯ ಮಾಡುತ್ತಿಲ್ಲ. ರವಿಪ್ರಕಾಶ್ ಹೇಳಿಕೆಯಿಂದ ನನ್ನ ಇಪ್ಪತ್ತು ವರ್ಷದ ಸಿನಿಮಾ ಕೆರಿಯರ್‍ಗೆ ಡ್ಯಾಮೇಜ್ ಆಗಿದೆ. ರವಿಪ್ರಕಾಶ್ ಬಂಧನವಾಗುವ ತನಕ ಈ ಕ್ಷಣದಿಂದ ಅನ್ನ, ನೀರು ಕೂಡ ಮುಟ್ಟಲ್ಲ” ಎಂದು ಹೇಳಿದ್ದಾರೆ.

    ಸದ್ಯ ನಟಿ ವಿಜಯಲಕ್ಷ್ಮಿ ನಗರದ ಅಲೋಪೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ:ನಟಿ ವಿಜಯಲಕ್ಷ್ಮಿ ವಿರುದ್ಧ ದೂರು ದಾಖಲಿಸಿದ ನಟ ರವಿಪ್ರಕಾಶ್

    ಏನಿದು ಪ್ರಕರಣ?
    ನಟಿ ವಿಜಯಲಕ್ಷ್ಮಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ವಿಜಯಲಕ್ಷ್ಮಿ ತಮಗೆ ನಟನೊಬ್ಬ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ಕೊಟ್ಟಿದ್ದರು. ನಟ ರವಿಪ್ರಕಾಶ್ ವಿರುದ್ಧ ವಿಜಯಲಕ್ಷ್ಮಿ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರು. ಅಷ್ಟೇ ಅಲ್ಲದೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ರವಿಪ್ರಕಾಶ್ ವಿರುದ್ಧ ದೂರು ನೀಡಿದ್ದರು. ಇದನ್ನೂ ಓದಿ: ಕಣ್ಣೀರು ಹಾಕಿ, ನಮ್ಮ ತಂದೆಯನ್ನು ನೋಡಿದಂತೆ ಆಯ್ತು ಎಂದಿದ್ರು – ಲೈಂಗಿಕ ಕಿರುಕುಳ ಆರೋಪಕ್ಕೆ ನಟ ಸ್ಪಷ್ಟನೆ

    ನಾನು ಕಳೆದ ಕೆಲ ದಿನಗಳಿಂದ ಆನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಯುತ್ತಿದ್ದೇನೆ. ಹಣಕಾಸಿನ ನೆರವು ನೀಡಿ ಎಂದು ಸ್ಯಾಂಡಲ್‍ವುಡ್ ನ ಸ್ಟಾರ್ ನಟರಿಗೆ ಮನವಿ ಮಾಡಿಕೊಂಡಿದ್ದೆ. ಇದನ್ನು ನೋಡಿದ ನಟ ರವಿಪ್ರಕಾಶ್ ಫೆಬ್ರವರಿ 27ರಂದು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ, ಒಂದು ಲಕ್ಷ ನಗದು ಸೇರಿದಂತೆ ಬಟ್ಟೆ, ಊಟ, ತಿಂಡಿ ಸೇರಿದಂತೆ ಅವಶ್ಯಕ ವಸ್ತುಗಳನ್ನು ನೀಡಿದ್ದರು. ಇದಾದ ನಂತರ ಪ್ರತಿದಿನ ಆಸ್ಪತ್ರೆಯ ಐಸಿಯೂಗೆ ಬರೋದು, ಪದೇ ಪದೇ ಫೋನ್, ಮಸೇಜ್ ಮಾಡೋದು ಸೇರಿದಂತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ನಟಿ ದೂರಿನಲ್ಲಿ ಆರೋಪಿಸಿದ್ದರು. ಇದನ್ನೂ ಓದಿ: ನಟಿ ವಿಜಯಲಕ್ಷ್ಮೀಗೆ ನಟನಿಂದ ಲೈಂಗಿಕ ಕಿರುಕುಳ – ದೂರು ದಾಖಲು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಗನ ಅಭಿನಯ ನೋಡಿ ಡಿ-ಬಾಸ್ ಜೋಡಿ ನೀಡಿದ ಪ್ರತಿಕ್ರಿಯೆ ವಿಡಿಯೋ ವೈರಲ್

    ಮಗನ ಅಭಿನಯ ನೋಡಿ ಡಿ-ಬಾಸ್ ಜೋಡಿ ನೀಡಿದ ಪ್ರತಿಕ್ರಿಯೆ ವಿಡಿಯೋ ವೈರಲ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಯಜಮಾನ’ ಚಿತ್ರ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಈ ಚಿತ್ರದಲ್ಲಿ ಮಗನ ಅಭಿನಯ ನೋಡಿ ಡಿ-ಬಾಸ್ ಜೋಡಿ ಮನಸೋತಿದ್ದಾರೆ ಹಾಗೂ ಅವರು ಪ್ರತಿಕ್ರಿಯೆ ನೀಡಿದ ವಿಡಿಯೋ ಈಗ ವೈರಲ್ ಆಗಿದೆ.

    ಯಜಮಾನ ಚಿತ್ರದಲ್ಲಿ ವಿನೀಶ್ ತನ್ನ ತಂದೆ ದರ್ಶನ್ ಅವರ ಜೊತೆ ಎರಡನೇ ಬಾರಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದಾನೆ. ಯಜಮಾನ ಚಿತ್ರದ ಚಿತ್ರೀಕರಣದ ವೇಳೆ ವಿನೀಶ್ ಜೊತೆ ತಾಯಿ ವಿಜಯಲಕ್ಷ್ಮೀ ಕೂಡ ಭೇಟಿ ನೀಡುತ್ತಿದ್ದರು.

    ಈಗ ಯಜಮಾನ ಚಿತ್ರದಲ್ಲಿ ವಿನೀಶ್ ನಟಿಸುತ್ತಿರುವಾಗ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿನೀಶ್ ಕ್ಯಾಮರಾ ಮುಂದೆ ನಟಿಸುತ್ತಿದ್ದರೆ, ದರ್ಶನ್ ಹಾಗೂ ವಿಜಯಲಕ್ಷ್ಮೀ ಅದನ್ನು ನೋಡಿ ಖುಷಿಪಡುತ್ತಿದ್ದಾರೆ.

    ಯಜಮಾನ ಚಿತ್ರ ಬಿಡುಗಡೆ ಆಗುವ ಮುನ್ನವೇ ನರ್ತಕಿ ಚಿತ್ರಮಂದಿರದಲ್ಲಿ ವಿನೀಶ್‍ನ 30 ಅಡಿ ಎತ್ತರದ ಕಟೌಟ್ ಹಾಕಲಾಗಿತ್ತು. ಈ ಚಿತ್ರದಲ್ಲಿ ವಿನೀಶ್ ಒಂದು ವಿಶೇಷ ಹಾಡಿನಲ್ಲಿ ನಟಿಸಿದ್ದಾನೆ. ಈ ಹಾಡಿನಲ್ಲಿ ಅಪ್ಪ- ಮಗ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. `ಐರಾವತ’ ಚಿತ್ರದ ನಂತರ ಯಜಮಾನ ಚಿತ್ರದಲ್ಲಿ ದರ್ಶನ್ ಹಾಗೂ ವಿನೀಶ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಟಿ ವಿಜಯಲಕ್ಷ್ಮಿ ಆಸ್ಪತ್ರೆಗೆ ದಾಖಲು- ಸಹಾಯಕ್ಕಾಗಿ ಚಿತ್ರರಂಗದ ಮೊರೆ

    ನಟಿ ವಿಜಯಲಕ್ಷ್ಮಿ ಆಸ್ಪತ್ರೆಗೆ ದಾಖಲು- ಸಹಾಯಕ್ಕಾಗಿ ಚಿತ್ರರಂಗದ ಮೊರೆ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಟಾಪ್ ನಟಿ ಆಗಿದ್ದ ವಿಜಯಲಕ್ಷ್ಮೀ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ನಟಿ ವಿಜಯಲಕ್ಷ್ಮೀ ತೀವ್ರವಾದ ಸುಸ್ತು ಮತ್ತು ಹೈ ಬಿಪಿಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಗುರುವಾರ ದಾಖಲಾಗಿದ್ದು, ಚಿತ್ರರಂಗದ ಸಹಾಯ ಹಸ್ತ ಚಾಚುತ್ತಿದ್ದಾರೆ.

    ಕಳೆದ ವಾರ ತಾಯಿಗೆ ಹೆಲ್ತ್ ಪ್ರಾಬ್ಲಾಂ ಆಗಿತ್ತು. ಈಗ ಸಡನ್ ಆಗಿ ನನ್ನ ತಂಗಿ ವಿಜಯಲಕ್ಷ್ಮಿ ಹೀಗೆ ಆನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಇದ್ದ ಹಣವೆಲ್ಲ ತಾಯಿಯ ಚಿಕಿತ್ಸೆಗೆ ಖರ್ಚು ಮಾಡಿದ್ದೀವಿ. ಈಗ ನಮಗೆ ಇಂಡಸ್ಟ್ರಿಯ ಸಹಾಯ ಬೇಕಿದೆ ಎಂದು ವಿಜಯಲಕ್ಷ್ಮಿ ಅವರ ತಂಗಿ ಉಷಾದೇವಿ ಪಬ್ಲಿಕ್ ಟಿವಿ ಮುಂದೆ ಕಣ್ಣೀರು ಹಾಕಿದ್ದಾರೆ.

    ಸಾಹಸಸಿಂಹ ವಿಷ್ಣುವರ್ಧನ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಸೇರಿದಂತೆ ಅನೇಕ ಸೂಪರ್ ಸ್ಟಾರ್ ನಟರೊಂದಿಗೆ ನಾಯಕಿಯಾಗಿ ವಿಜಯಲಕ್ಷ್ಮಿ ಅವರು ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತಿಯ ಮಾರ್ಗವನ್ನೇ ಪಾಲಿಸುತ್ತಿರುವ ಚಾಲೆಂಜಿಗ್ ಸ್ಟಾರ್ ಪತ್ನಿ ವಿಜಯಲಕ್ಷ್ಮೀ!

    ಪತಿಯ ಮಾರ್ಗವನ್ನೇ ಪಾಲಿಸುತ್ತಿರುವ ಚಾಲೆಂಜಿಗ್ ಸ್ಟಾರ್ ಪತ್ನಿ ವಿಜಯಲಕ್ಷ್ಮೀ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ತಮ್ಮ ಪತಿಯ ಮಾರ್ಗವನ್ನೇ ಪಾಲಿಸುತ್ತಿದ್ದಾರೆ. ಸದ್ಯ ದರ್ಶನ್ ಪ್ರಾಣಿಪ್ರಿಯರಾಗಿದ್ದು, ವಿಜಯಲಕ್ಷ್ಮೀ ಕೂಡ ಕಪ್ಪು ಬೆಕ್ಕಿನ ಬಗ್ಗೆ ಟ್ವೀಟ್ ಮಾಡಿ ಪ್ರಾಣಿ ಪ್ರೀತಿ ತೋರಿಸಿದ್ದಾರೆ.

    ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ. ಹಾಗೆಯೇ ಅವರ ಪತ್ನಿ ವಿಜಯಲಕ್ಷ್ಮೀಗೆ ಬೆಕ್ಕುಗಳೆಂದರೆ ಇಷ್ಟ. ಅದಕ್ಕೆ ವಿಶೇಷ ಪ್ರೀತಿಯನ್ನು ತೋರಿಸುತ್ತಾರೆ. ಅಲ್ಲದೇ ವಿಜಯಲಕ್ಷ್ಮೀ ತಮ್ಮ ಮನೆಯಲ್ಲಿ ವಿವಿಧ ರೀತಿಯ ಬೆಕ್ಕುಗಳನ್ನು ಸಾಕಿದ್ದಾರೆ.

    ವಿಜಯಲಕ್ಷ್ಮೀ ಕಪ್ಪು ಬೆಕ್ಕಿನ ಫೋಟೋ ಹಾಕಿ “ಕಪ್ಪು ಬೆಕ್ಕು ನಮ್ಮ ದಾರಿಗೆ ಅಡ್ಡ ಬಂದರೆ ಅದನ್ನು ಶುಭಶಕುನ ಎಂದು ಹೇಳುತ್ತಾರೆ. ಆದರೆ ನೀವು ಎಲ್ಲಾದರೂ ಈ ಕಪ್ಪು ಬೆಕ್ಕನ್ನು ಕಂಡರೆ ಅದರ ಜೊತೆ ಪ್ರೀತಿಯಿಂದಿರಿ. ಕಪ್ಪು ಬೆಕ್ಕು ಒಂದು ಒಳ್ಳೆಯ ಪ್ರಾಣಿ, ಅಲ್ಲದೇ ಅದು ಎಲ್ಲರ ಪ್ರೀತಿಗೆ ಅರ್ಹ” ಎಂದು ಟ್ವೀಟ್ ಮಾಡಿದ್ದಾರೆ.

    ಕಪ್ಪು ಬೆಕ್ಕು ಅಡ್ಡ ಬಂದರೆ ಸಾಕಷ್ಟು ಜನ ಆ ಬೆಕ್ಕಿಗೆ ಬೈದು ಸ್ವಲ್ಪ ಹೊತ್ತು ಅಲ್ಲೇ ನಿಂತು ನಂತರ ಮುಂದೆ ಹೋಗುತ್ತಾರೆ. ಹೀಗಿರುವಾಗ ವಿಜಯಲಕ್ಷ್ಮೀ ಕಪ್ಪು ಬೆಕ್ಕಿನ ಬಗ್ಗೆ ಜನರು ಇಟ್ಟಿರುವಂತಹ ನಂಬಿಕೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ.

    ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಇಷ್ಟ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ಸದ್ಯ ದರ್ಶನ್ ಬಳಿ ಏಳೆಂಟು ರೀತಿಯ ನಾಯಿಗಳು, ಪಕ್ಷಿಗಳು, ಕುದುರೆ ಸೇರಿ ಸಾಕಷ್ಟು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಅಲ್ಲದೇ ಮೈಸೂರು ಮೃಗಾಲಯದಲ್ಲಿ ಆನೆ ಹಾಗೂ ಹುಲಿಗಳನ್ನು ದತ್ತು ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ, ಹೆಚ್ ವೈ ಮೇಟಿ ವಿರುದ್ಧ ಸ್ಪರ್ಧೆ ಖಚಿತ: ವಿಜಯಲಕ್ಷ್ಮೀ

    ಸಿಎಂ, ಹೆಚ್ ವೈ ಮೇಟಿ ವಿರುದ್ಧ ಸ್ಪರ್ಧೆ ಖಚಿತ: ವಿಜಯಲಕ್ಷ್ಮೀ

    ಬಾಗಲಕೋಟೆ: ಬಾಗಲಕೋಟೆ ಜೊತೆಗೆ ಬಾದಾಮಿ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧೆಗೆ ಇಳಿಯುವುದಾಗಿ ವಿಜಯಲಕ್ಷ್ಮಿ ಸರೂರ ಇಂಗಿತ ವ್ಯಕ್ತಪಡಿಸಿದರು.

    ಈ ಹಿಂದೆ ಮಾಜಿ ಸಚಿವ ಮೇಟಿ ವಿರುದ್ಧ ಬಾಗಲಕೋಟೆ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ಆದರೆ, ಈಗ ಸಿಎಂ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗುತ್ತಿದ್ದಂತೆ ತಾವು ಕೂಡ ಅಲ್ಲಿಯೂ ಕೂಡ ಸ್ಪರ್ಧಿಸುವುದಾಗಿ ಹೇಳಿರುವ ಅವರು, ಸಿಎಂ ಹಾಗೂ ಮೇಟಿ ವಿರುದ್ಧ ಸ್ಪರ್ಧಿಸದಂತೆ ಕೆಲವರು ಬೆದರಿಕೆ ನೀಡಿದ್ದಾರೆ. ಯಾವುದೇ ಆಸೆ-ಆಮಿಷ ಹಾಗೂ ಬೆದರಿಕೆಗೆ ಒಳಗಾಗದೆ ಚುನಾವಣೆ ಎದುರಿಸುತ್ತೇನೆ ಎಂದು ವಿಜಯಲಕ್ಷ್ಮೀ ತಿಳಿಸಿದ್ದಾರೆ. ಇದನ್ನೂ ಓದಿ: ಮೇಟಿ ವರ್ಸಸ್ ವಿಜಯಲಕ್ಷ್ಮೀ-ರಂಗೇರುತ್ತಿದೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರ

    ಸಿಎಂ ವಿರುದ್ಧ ಸ್ಪರ್ಧಿಸಲು ಯಾವುದೇ ಪಕ್ಷಗಳು ನನಗೆ ಪ್ರೇರೆಪಣೆ ನೀಡಿಲ್ಲ. ಬಾದಾಮಿ ಮತಕ್ಷೇತ್ರದ ಕುರುಬ ಸಮುದಾಯದ ಜನರ ಒತ್ತಾಯವಿದೆ ಎಂದು ಹೇಳಿಕೆ ನೀಡಿದ್ದಾರೆ.

  • ಮೇಟಿ ವರ್ಸಸ್ ವಿಜಯಲಕ್ಷ್ಮೀ-ರಂಗೇರುತ್ತಿದೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರ

    ಮೇಟಿ ವರ್ಸಸ್ ವಿಜಯಲಕ್ಷ್ಮೀ-ರಂಗೇರುತ್ತಿದೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರ

    ಬಾಗಲಕೋಟೆ: ಶಾಸಕ ಹೆಚ್ ವೈ ಮೇಟಿ ವಿರುದ್ಧ ವಿಜಯಲಕ್ಷ್ಮೀ ಸರೂರು ಚುನಾವಣಾ ಅಖಾಡಕ್ಕೆ ಸಿದ್ಧರಾಗಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ ಹೆಚ್ ವೈ ಮೇಟಿಗೆ ಟಾಂಗ್ ಕೊಡಲು ಮುಂದಾಗಿದ್ದಾರೆ.

    ಪಕ್ಷೇತರವಾಗಿ ಚುನಾವಣೆಗೆ ನಿಲ್ಲೋಕೆ ಮುಂದಾಗಿದ್ದು, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯೋದಿಲ್ಲ. ಯಾವುದೇ ಆಸೆ ಆಮಿಷಗಳಿಗೂ ಮಣಿಯೋದಿಲ್ಲ ಸ್ಪರ್ಧೆ ಖಚಿತ. ನಾನು ಸಾಕಷ್ಟು ನೊಂದಿದ್ದೇನೆ. ನನ್ನಂತೆ ನೊಂದ ಮಹಿಳೆಯರ ಪರ ಕೆಲಸ ಮಾಡುತ್ತೇನೆ. ಜನರಿಂದಲೇ ಸಹಾಯ ಕೇಳಿ ಕಾಲುಬಿದ್ದು ಮತ ಕೇಳುತ್ತೇನೆ ಎಂದು ವಿಜಯಲಕ್ಷ್ಮೀ ಸರೂರು ತಿಳಿಸಿದ್ದಾರೆ.

    ಹೆಚ್ ವೈ ಮೇಟಿ ಮತ್ತು ವಿಜಯಲಕ್ಷ್ಮೀ ಸರೂರ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಮ್ಮ ಸಮುದಾಯದ ಜನತೆ ನನ್ನ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ. ಇನ್ನು ಮೇಟಿ ಅವರನ್ನು ಸೋಲಿಸಲು ಇತರೆ ಪ್ರಬಲ ಪಕ್ಷದವರು ವಿಜಯಲಕ್ಷ್ಮೀ ಸರೂರ ಬೆನ್ನಿಗೆ ನಿಂತಿದ್ದಾರೆ ಎನ್ನಲಾಗುತ್ತಿದೆ. ವಿಜಯಲಕ್ಷ್ಮೀ ಸರೂರಗೆ ಎಮ್ ಇ ಪಿ ಪಕ್ಷದಿಂದ ಆಫರ್ ಬಂದಿದೆಯಂತೆ. ಆದರೆ ನಾನು ಸದ್ಯಕ್ಕೆ ನಿರ್ಧಾರ ಕೈಗೊಂಡಿಲ್ಲ. ಪಕ್ಷೇತರ ಸ್ಪರ್ಧೆ ವಿಚಾರ ಮಾತ್ರ ಇದೆ. ಮೇಟಿಯವರನ್ನು ಸೋಲಿಸೋದೆ ನನ್ನ ಗುರಿ ಎಂದಿದ್ದಾರೆ.

  • ಎಚ್ ವೈ ಮೇಟಿ ರಾಸಲೀಲೆ ಪ್ರಕರಣದ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ!

    ಎಚ್ ವೈ ಮೇಟಿ ರಾಸಲೀಲೆ ಪ್ರಕರಣದ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ!

    ಬಾಗಲಕೋಟೆ: ಮಾಜಿ ಸಚಿವ ಎಚ್ ವೈ ಮೇಟಿ ರಾಸಲೀಲೆ ಪ್ರಕರಣದ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

    ಸಂತ್ರಸ್ಥ ಮಹಿಳೆ ವಿಜಯಲಕ್ಷ್ಮಿ ಮನೆಯಲ್ಲಿರುವಾಗ ನಿದ್ರೆ ಮಾತ್ರ ಸೇವಿಸಿ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು 108 ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ವಿಜಯಲಕ್ಷ್ಮಿ ಸ್ಪಂದಿಸಿದ್ದಾರಾದ್ರೂ, ಆತ್ಮಹತ್ಯೆ ಯತ್ನಕ್ಕೆ ಕಾರಣ ಮಾತ್ರ ತಿಳಿದುಬಂದಿಲ್ಲ.

    ಘಟನೆ ಕುರಿತಂತೆ ಸಂತ್ರಸ್ತೆ ಸಂಬಂಧಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮೇಟಿ ರಾಸಲೀಲೆ ಪ್ರಕರಣದಿಂದ ಸಾಕಾಗಿ ಹೋಗಿದೆ. ಪ್ರಕರಣದಿಂದ ನಾವು ಜೀವಂತ ಹೆಣವಾಗಿದ್ದೇವೆ. ಅವಳಿಗೆ ಜೀವಬೆದರಿಕೆ ಇರೋದು ನಿಜ. ಆದರೆ ಯಾರಿಂದ ಅಂತ ಗೊತ್ತಿಲ್ಲ. ಅದಕ್ಕಾಗಿಯೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಯಾರಿಂದ ಜೀವಬೆದರಿಕೆ ಅಂತ ಆಕೆಯೇ ಉತ್ತರಿಸಬೇಕು. ಈ ಪ್ರಕರಣ ಮತ್ತು ಇವಳಿಂದ ಕುಟುಂಬದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಮೇಟಿ ನಮಗೆ ಮಾವನಾಗಬೇಕು ಇವಳು ಸೊಸೆಯಾಗಬೇಕು ಅಂತ ಹೇಳಿದ್ದಾರೆ.

    ಇದನ್ನೂ ಓದಿ: ಎಚ್.ವೈ ಮೇಟಿ ರಾಸಲೀಲೆ ಕೇಸ್: ಪ್ರಕರಣದ ಸಂತ್ರಸ್ತೆಯಿಂದ ಹೊಸ ಬಾಂಬ್

    ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಂತ್ರಸ್ತೆ, 15 ದಿನಗಳ ಹಿಂದೆ ಮೇಟಿ ಬೆಂಬಲಿಗರಿಂದ ಜೀವಬೆದರಿಕೆ ಕರೆ ಬಂದಿತ್ತು. ಇದರಿಂದ ಡಿಪ್ರೆಷನಗೆ ಒಳಗಾಗಿದ್ದೆ. ಆದುದರಿಂದ ಹೀಗೆ ಜೀವ ಕಳೆದುಕೊಳ್ಳೊದಕ್ಕಿಂತ ನಾನೇ ಸಾಯೋದು ಮೇಲು ಎಂದು ತೀರ್ಮಾನಿಸಿದೆ. ಆದ್ದರಿಂದ ಆತ್ಮಹತ್ಯೆಗೆ ಯತ್ನ ಮಾಡಿದ್ದೇನೆ ಅಂತ ಹೇಳಿದ್ರು. ಆದ್ರೆ ಅವರು ಮೇಟಿ ಬೆಂಬಲಿಗರ ಹೆಸರು ಹೇಳಲು ನಿರಾಕರಿಸಿದ್ದಾರೆ.

    https://www.youtube.com/watch?v=hc-doDLDtB4

  • 5 ಗಂಟೆಗಳಲ್ಲಿ 67 ಹಾಡುಗಳನ್ನ ವೀಣೆಯಲ್ಲಿ ನುಡಿಸಿ ವಿಶ್ವ ದಾಖಲೆ ನಿರ್ಮಿಸಿದ ಅಂಧ ಗಾಯಕಿ

    5 ಗಂಟೆಗಳಲ್ಲಿ 67 ಹಾಡುಗಳನ್ನ ವೀಣೆಯಲ್ಲಿ ನುಡಿಸಿ ವಿಶ್ವ ದಾಖಲೆ ನಿರ್ಮಿಸಿದ ಅಂಧ ಗಾಯಕಿ

    ಕೊಚ್ಚಿ: 5 ಗಂಟೆಗಳ ಕಾಲ ಸತತವಾಗಿ ವೀಣೆಯಲ್ಲಿ 67 ಹಾಡುಗಳನ್ನ ನುಡಿಸುವ ಮೂಲಕ ದಕ್ಷಿಣದ ಪ್ರಸಿದ್ಧ ಗಾಯಕಿ ವೈಕೋಮ್ ವಿಜಯಲಕ್ಷ್ಮೀ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ಭಾನುವಾರದಂದು ಕೊಚ್ಚಿಯಲ್ಲಿ ನಡೆದ ಸಂಗೀತ ಗೋಷ್ಠಿಯಲ್ಲಿ ದೃಷ್ಟಿಹೀನರಾದ ವಿಜಯಲಕ್ಷ್ಮೀ, ಈ ಹಿಂದೆ ನಿರ್ಮಿಸಲಾಗಿದ್ದ 51 ಹಾಡಿನ ದಾಖಲೆಯನ್ನು ಮುರಿದಿದ್ದಾರೆ. ಮೊದಲಿಗೆ 52 ಹಾಡುಗಳನ್ನ ನುಡಿಸಬೇಕು ಎಂದುಕೊಂಡಿದ್ದ ವಿಜಯಲಕ್ಷ್ಮೀ ಮಲಯಾಳಂ, ತಮಿಳು ಹಾಗೂ ಹಿಂದಿಯ ಹಾಡುಗಳು, 12 ಕೀರ್ತನೆಗಳು ಸೇರಿದಂತೆ ನಿರಂತರವಾಗಿ 67 ಹಾಡುಗಳನ್ನ ನುಡಿಸಿದ್ರು.

    ಒಟ್ಟು 67 ಹಾಡುಗಳನ್ನು ವಿಜಯಲಕ್ಷ್ಮೀ ಒಂದು ತಂತಿಯಿರುವ ಗಾಯತ್ರಿ ವೀಣೆ/ಏಕ ತಂತಿ ವೀಣೆಯಲ್ಲಿ ನುಡಿಸಿದ್ದು ಮತ್ತೊಂದು ವಿಶೇಷ. ಈ ಅಪರೂಪದ ಸಂಗೀತವಾದ್ಯವನ್ನು ನುಡಿಸುವಲ್ಲಿ ಪರಿಣಿತರಾಗಿರೋ ವಿಜಯಲಕ್ಷ್ಮೀ 5 ವರ್ಷಗಳ ಹಿಂದೆ ಗಾಯಕಿಯಾಗಿ ಮೊದಲ ಹಾಡನ್ನ ಹಾಡಿದ್ರು.

    ಗಾಯತ್ರಿ ವೀಣೆ: ವಿಜಯಲಕ್ಷ್ಮೀ ಅವರ ಅಭಿಮಾನಿಯೊಬ್ಬರು ಅವರಿಗೆ ಗಾಯತ್ರಿ ತಂಬೂರಿಯನ್ನ ಉಡುಗೊರೆಯಾಗಿ ನೀಡಿದ್ದರು. ಅದನ್ನ ಅವರ ತಂದೆಯ ಜೊತೆ ಸೇರಿ ಮರುವಿನ್ಯಾಸಗೊಳಿಸಿ ಏಕ ತಂತಿ ವಾದ್ಯವನ್ನಾಗಿ ಮಾಡಿದ್ರು. ವಯೋಲಿನ್ ಪರಿಣತರಾದ ಕುನ್ನಕ್ಕುಡಿ ವೈದ್ಯನಾಥನ್ ಅವರು ಒಮ್ಮೆ ವಿಜಯಲಕ್ಷ್ಮೀ ಅವರ ಈ ಹೊಸ ವಾದ್ಯದಿಂದ ಸಂಗೀತ ಕೇಳಿ ಇದಕ್ಕೆ ಗಾಯತ್ರಿ ವೀಣೆ ಎಂಬ ಹೆಸರು ಕೊಟ್ಟರು.

    ಮದುವೆ ರದ್ದು: ವಿಜಯಲಕ್ಷ್ಮೀ ಅವರ ಭಾವಿ ಪತಿ ಆಕೆಗೆ ಕಚೇರಿಗಳಲ್ಲಿ ಪ್ರದರ್ಶನ ನೀಡುವುದನ್ನು ನಿಲ್ಲಿಸಿ ಯಾವುದಾದ್ರೂ ಕಾಲೇಜಿನಲ್ಲಿ ಸಂಗೀತ ಶಿಕ್ಷಕಿಯಾಗು ಎಂದು ಹೇಳಿದ್ದರಿಂದ ಎರಡು ವಾರಗಳ ಹಿಂದೆ ವಿಜಯಲಕ್ಷ್ಮೀ ಸಂಗೀತಕ್ಕಾಗಿ ತಮ್ಮ ಮದುವೆಯನ್ನೇ ರದ್ದು ಮಾಡಿದ್ದಾರೆ. ಸಂಗೀತ ನನ್ನ ಬದುಕು. ನನ್ನ ವಿಕಲತೆಯನ್ನು ತೊಂದರೆ ಅಂತ ನಾನೆಂದೂ ಭಾವಿಸಿಲ್ಲ ಅಂತಾರೆ ವಿಜಯಲಕ್ಷ್ಮೀ.

    ವಿಜಯಲಕ್ಷ್ಮೀ ಅವರು ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಹಾಡಿದ್ದಾರೆ.