Tag: ವಿಜಯಪ್ರಕಾಶ್‌

  • ವಿಜಯ್ ಪ್ರಕಾಶ್ ಧ್ವನಿಯಲ್ಲಿ ‘ಕಡಲತೀರದ ಭಾರ್ಗವ’ ಸಿನಿಮಾ ಸಾಂಗ್

    ವಿಜಯ್ ಪ್ರಕಾಶ್ ಧ್ವನಿಯಲ್ಲಿ ‘ಕಡಲತೀರದ ಭಾರ್ಗವ’ ಸಿನಿಮಾ ಸಾಂಗ್

    ಶೀರ್ಷಿಕೆಯ ಮೂಲಕವೇ ಮನೆಮಾತಾಗಿರುವ  ‘ಕಡಲ ತೀರದ ಭಾರ್ಗವ’ ಚಿತ್ರಕ್ಕಾಗಿ ಖ್ಯಾತ ಸಾಹಿತಿ ಡಾ.ವಿ‌.ನಾಗೇಂದ್ರ ಪ್ರಸಾದ್ ಬರೆದಿರುವ ‘ಸಮಯವೇ’ ಎಂಬ ಹಾಡು ಇತ್ತೀಚಿಗೆ ಬಿಡುಗಡೆಯಾಗಿದೆ. ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿ ಈ ಹಾಡನ್ನು ಕೇಳುವುದೆ ಆನಂದ. ಕರಾವಳಿಯ ಅದ್ಭುತ ಪರಿಸರ ಈ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಇತ್ತೀಚೆಗೆ ಈ ಹಾಡು ಬಿಡುಗಡೆ ಸಮಾರಂಭ ಹಾಗೂ ಪತ್ರಿಕಾಗೋಷ್ಠಿ ನೆರವೇರಿತು.

    “ಕಡಲ ತೀರದ ಭಾರ್ಗವ” ಎಂದು ಹಿರಿಯ ಸಾಹಿತಿ ಶಿವರಾಮ ಕಾರಂತರನ್ನು ಕರೆಯುತ್ತಾರೆ‌. ಅದರೆ ನಮ್ಮ ಚಿತ್ರದ ಕಥೆ ಅವರ ಬಗ್ಗೆ ಅಲ್ಲ. ಚಿತ್ರದಲ್ಲಿ ನಾಯಕನ ಹೆಸರು ಭಾರ್ಗವ ಎಂದು. ನಾನು ಕಡಲತೀರವನ್ನು  ಮನುಷ್ಯನ ಮನಸ್ಸಿಗೆ ಹೋಲಿಸುತ್ತೇನೆ. ಪಟೇಲ್ ವರುಣ್ ರಾಜು ಭಾರ್ಗವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭರತ್ ಗೌಡ ನಾಯಕನಾಗಿ, ಶೃತಿ ಪ್ರಕಾಶ್ ನಾಯಕಿಯಾಗಿ ನಟಿಸಿದ್ದಾರೆ. ಅನಿಲ್ ಸಿ.ಜೆ ಸಂಗೀತ ನೀಡಿರುವ ಆರು ಹಾಡುಗಳ ಪೈಕಿ ಮೂರು ಹಾಡುಗಳು ಈಗಾಗಲೇ ಬಿಡುಗಡೆಯಾಗಿ, ಜನಪ್ರಿಯವಾಗಿದೆ. ಫೆಬ್ರವರಿ 13 ಟ್ರೇಲರ್ ಬರಲಿದೆ. ಅದೇ ದಿವಸ ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತೇವೆ ಎಂದರು ನಿರ್ದೇಶಕ ಪನ್ನಗ ಸೋಮಶೇಖರ್. ಇದನ್ನೂ ಓದಿ: ಸುದೀಪ್ ಕಾಂಗ್ರೆಸ್ ಸೇರಿದರೆ ಸ್ವಾಗತ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

    ಮದವೆ ಮಾಡಿ ನೋಡು. ಮನೆ ಕಟ್ಟಿ ನೋಡು ‌ಎಂದು ಹೇಳುತ್ತಾರೆ. ಹಾಗೆ ಸಿನಿಮಾ ಮಾಡುವುದು ಸಹ ಅಷ್ಟು ಸುಲಭವಲ್ಲ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿ, ನಾನು ಹಾಗೂ ವರುಣ್ ಪಟೇಲ್ ರಾಜು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಜೊತೆಗೆ ನಾಯಕನಾಗೂ ಅಭಿನಯಿಸಿದ್ದೇನೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ – ನಾಯಕ ಭರತ್ ಗೌಡ.

    ಕೊರೋನ ಪೂರ್ವದಲ್ಲಿ ಚಿತ್ರಗಳು ಬಿಡುಗಡೆಯಾಗುತ್ತಿದ್ದ ರೀತಿಗೂ ಹಾಗೂ ಈಗಿನ ರೀತಿಗೂ  ಬದಲಾವಣೆ ಇದೆ. ಈಗ ವಾರಕ್ಕೆ ಸಾಕಷ್ಟು ಚಿತ್ರಗಳು ಬರುತ್ತಿದೆ. ಅದರ ನಡುವೆ ನಮ್ಮ ಚಿತ್ರವನ್ನು ನೋಡಲು ಚಿತ್ರಮಂದಿರಕ್ಕೆ ಜನರು ಬರುವ ಪ್ರಯತ್ನ ಮಾಡಬೇಕು. ಆ ನಿಟ್ಟಿನಲ್ಲಿ ಪ್ರಚಾರ ಆರಂಭಿಸಿದ್ದೇವೆ. ಉತ್ತಮ ಕಂಟೆಂಟ್ ವುಳ್ಳ ಚಿತ್ರ ಮಾಡಿದ್ದೇವೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲ ಬೇಕು ಎನ್ನುತ್ತಾರೆ ನಿರ್ಮಾಪಕ ಹಾಗೂ ಭಾರ್ಗವ ಪಾತ್ರಧಾರಿ ಪಟೇಲ್ ವರುಣ್ ರಾಜು. ಚಿತ್ರದ ಹಾಡುಗಳ ಬಗ್ಗೆ ಅನಿಲ್ ಸಿ ಜೆ ಮಾಹಿತಿ ನೀಡಿದರು. ಅನೇಕ ಕಲಾವಿದರು ಹಾಗೂ ತಂತ್ರಜ್ಞರು “ಕಡಲ ತೀರದ ಭಾರ್ಗವ” ಸಿನಿಮಾ ಬಗ್ಗೆ ಮಾತನಾಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಿವನ ಮುಡಿಗೆ ಸಿದ್ಧಶ್ರೀ ಪ್ರಶಸ್ತಿಯ ಗರಿ – ಪಂರ್ಜುಲಿ ದೈವಕ್ಕೆ ಅರ್ಪಿಸಿದ ರಿಷಬ್

    ಶಿವನ ಮುಡಿಗೆ ಸಿದ್ಧಶ್ರೀ ಪ್ರಶಸ್ತಿಯ ಗರಿ – ಪಂರ್ಜುಲಿ ದೈವಕ್ಕೆ ಅರ್ಪಿಸಿದ ರಿಷಬ್

    ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಶ್ರೀಕ್ಷೇತ್ರ ಜಿಡಗಾ ಸಿದ್ಧರಾಮ ಶಿವಯೋಗಿಗಳ ಪುಣ್ಯ ಭೂಮಿ ನೆಲದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ (Rishab Shetty) ಮುಗಳಖೋಡ ಮಠದಿಂದ ಕೊಡಮಾಡುವ ರಾಷ್ಟ್ರೀಯ ಸಿದ್ಧಶ್ರೀ ಪ್ರಶಸ್ತಿ (Siddha Shree Award) ನೀಡಿ ಗೌರವಿಸಲಾಯಿತು.

    ರಾಷ್ಟ್ರೀಯ ಸಿದ್ಧಶ್ರೀ ಪ್ರಶಸ್ತಿಯು 1 ಲಕ್ಷ ನಗದು, ಎರಡು ತೋಲ ಚಿನ್ನ, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿವೆ. ಇದನ್ನೂ ಓದಿ: `ಕಾಂತಾರ’ ವರಾಹ ರೂಪಂ ಹಾಡಿನ ವಿವಾದಕ್ಕೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ

    ಇಂದು ಸಂಜೆ ಜಿಡಗಾ ನವಕಲ್ಯಾಣ ಮಂಟಪದ ಆವರಣದಲ್ಲಿ ನಡೆದ 38ನೇ ಗುರುವಂದಮಾ ಕಾರ್ಯಕ್ರಮದಲ್ಲಿ ಮಠದ ಪೂಜ್ಯ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಮಠಾಧೀಶರು ಪ್ರಶಸ್ತಿ ನೀಡಿ ಗೌರವಿಸಿದರು.

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಿಷಬ್ ಶೆಟ್ಟಿ (Rishab Shetty), ಸಿದ್ಧಶ್ರೀ ನನ್ನ ನಟನೆಯ ಕಾಂತಾರ ಸಿನೆಮಾಕ್ಕೆ ಸಿಗುತ್ತಿರುವ ಮೊದಲ ಪ್ರಶಸ್ತಿ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಿದೆ. ಈ ಪ್ರಶಸ್ತಿಯನ್ನು ನನಗೆ ಪ್ರೇರಣೆ ನೀಡಿದ ಪಂಜುರ್ಲಿ ದೈವ, ಶ್ರೀ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪಸ್ವಾಮಿ, ದೈವ ನರ್ತಕರ ಕುಟುಂಬಕ್ಕೆ ಅಪ9ಣೆ ಮಾಡುತ್ತೆನೆ. ವಿಶೇಷವಾಗಿ ಕನ್ನಡ ನಾಡಿನ ಮೇರುನಟ ದಿ. ಡಾ.ಪುನೀತ್ ರಾಜಕುಮಾರ್ ಹಾಗೂ ಕನ್ನಡ ಜನತೆಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

    ನಾನು ಮೊದಲು ಬಣ್ಣ ಹಚ್ಚಿದ್ದು ಯಕ್ಷಗಾನದ (Yakshagana) ಮೂಲಕ. ಕರ್ನಾಟಕದ ಭಾವನೆ, ನಂಬಿಕೆ ಒಳಗೊಂಡ ನಮ್ಮ ಮಣ್ಣಿನ ಕಥೆ ನಿಮಗೆಲ್ಲಾ ಇಷ್ಟವಾಗಿದ್ದು ನನಗೆ ಹೆಮ್ಮೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸ್ಟಾರ್ ನಟಿಯರಿಗೆ ಸೆಡ್ಡು ಹೊಡೆದು ತೆಲುಗಿನ 7 ಚಿತ್ರಗಳಿಗೆ ಸಹಿ ಹಾಕಿದ ಶ್ರೀಲೀಲಾ

    ಇದೇ ವೇಳೆ `ನಿಮ್ಮ ಆಚರಣೆ, ಆಡಂಬರ ಹೀಗೆ ನಡದರೇ, ಬಂದು ಮಾಡಸತಿನಿ. ನಿನ್ನ ಅಪ್ಪನಿಗೆ ಹುಟ್ಟಿದ್ರೆ ಬಂದ್ ಮಾಡ್ಸಿ ನೋಡಾ..’ ಅನ್ನೋ ಕಾಂತಾರ (Kantara) ಸಿನಿಮಾದ (Cinema) ಡೈಲಾಗ್ ಹೊಡೆದು ಅಭಿಮಾನಿಗಳನ್ನ ರಂಜಿಸಿದ್ರು.

    ನಿರೂಪಕಿ ಅನುಶ್ರೀ ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು. ಖ್ಯಾತ ಗಾಯಕ ವಿಜಯ ಪ್ರಕಾಶ್ (Vijayaprakash) ತಂಡದಿಂದ ಸ್ವರ ಸಂಗೀತ ಕಾರ್ಯಕ್ರಮ ನಡೆಯಿತು.

    Live Tv
    [brid partner=56869869 player=32851 video=960834 autoplay=true]