ವಿಜಯಪುರ: ಬಸವನ ಬಾಗೇವಾಡಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಪಟ್ಟಣದ ಲಕ್ಷ್ಮೀ ನಗರ, ರಾಯಣ್ಣ ವೃತ್ತದ ಬಳಿಯ 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಸಿದೆ. ಮಳೆಯಿಂದಾಗಿ ಮನೆಯಲ್ಲಿದ್ದ ಧಾನ್ಯಗಳು ನೀರುಪಾಲಾಗಿವೆ.
ಮನೆಗೆ ನೀರು ನುಗ್ಗಿ ಮನೆಯಲ್ಲಿದ್ದ ಸಾಮಗ್ರಿಗಳು ನೀರು ಪಾಲಾಗಿದ್ದು, ಮಹಿಳೆ ಕಣ್ಣೀರು ಹಾಕಿದ್ದಾಳೆ. ಇತ್ತ ಕೆರೆ ಪಕ್ಕದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ವೃದ್ಧೆ ಪರದಾಡಿದ್ದಾಳೆ. ಯುವಕನೊಬ್ಬ ವೃದ್ಧೆಯನ್ನ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಬಿಟ್ಟ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದೆ.
ಭಾನುವಾರ ತಡರಾತ್ರಿ ಮನೆಯಲ್ಲಿ ಮಲಗಿದ್ದಾಗ ಅವಘಡ ಸಂಭವಿಸಿದೆ. ಮಳೆಯಿಂದಾಗಿ ಮನೆ ಸೋರುತ್ತಿದ್ದ ವೇಳೆ ಮನೆಯಿಂದ ಎದ್ದು ಹೊರ ಬಂದು ಪತಿ ಹಾಗೂ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಆದರೆ ಗೃಹಿಣಿ ಸಂಗೀತಾ ಮೇಲೆ ಮೇಲ್ಛಾವಣಿ ಬಿದ್ದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತದನಂತರ ಸ್ಥಳೀಯರು ಮಣ್ಣಲ್ಲಿ ಮುಚ್ಚಿಹೋಗಿದ್ದ ಸಂಗೀತಾ ಮೃತದೇಹವನ್ನು ಹೊರತೆಗೆದಿದ್ದಾರೆ. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇಯಲ್ಲಿ ಕಾರುಗಳ ನಡುವೆ ಅಪಘಾತ – ಇಬ್ಬರು ಸಾವು, ನಾಲ್ವರು ಗಂಭೀರ
ವಿಜಯಪುರ: ಈರುಳ್ಳಿ (Onion) ದರ ದಿಢೀರ್ ಕುಸಿತ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಗೆ ಈರುಳ್ಳಿ ಸುರಿದು ರೈತ (Farmer) ಹೊರಳಾಡಿದ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ.
ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದ ರೈತ ನಂದಪ್ಪ ರಾಷ್ಟ್ರೀಯ ಹೆದ್ದಾರಿಗೆ ಈರುಳ್ಳಿ ಸುರಿದು ಹೊರಳಾಡಿ ಗೋಳಾಡಿದ್ದಾರೆ. ರೈತರಾದ ನಂದಪ್ಪ ಗುಡ್ಡದ, ಮಲ್ಲಿಕಾರ್ಜುನ ಗೋಲಗೊಂಡ ಎಂಬವರಿಗೆ ಈರುಳ್ಳಿ ಸೇರಿದ್ದು, ಕ್ವಿಂಟಾಲ್‌ಗೆ 250 ರೂ. ದರ ನಿಗದಿಗೆ ಆಕ್ರೋಶ ವ್ಯಕ್ತಪಡಿಸಿ ಈ ರೀತಿ ಮಾಡಿದ್ದಾರೆ. ಇದನ್ನೂ ಓದಿ: Nelamangala | ಕೆಲಸ ಸಿಗದಿದ್ದಕ್ಕೆ ಮನನೊಂದು ಯುವಕ ನೇಣಿಗೆ ಶರಣು
– ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಿಸಿದ್ರೆ ಮಹಾರಾಷ್ಟ್ರಕ್ಕೆ ಯಾವುದೇ ಬಾಧಕ ಇಲ್ಲ
ವಿಜಯಪುರ: ಜಿಲ್ಲೆಯಲ್ಲಿ ರಸ್ತೆ, ರೈಲು, ವಾಯುಮಾರ್ಗ ಸೇರಿ ಎಲ್ಲವೂ ಅಭಿವೃದ್ಧಿಯಾಗಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಮಾಹಿತಿ ನೀಡಿದರು.
ಜಿಲ್ಲಾಸ್ಪತ್ರೆಯಲ್ಲಿ ಇಂದಿರಾ ಕ್ಯಾಂಟೀನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಹುಬ್ಬಳ್ಳಿಯಿಂದ (Hubballi) ನೇರವಾಗಿ ವಿಜಯಪುರಕ್ಕೆ ರೈಲು ಬೇಕು. ಸದ್ಯಕ್ಕೆ ಹುಬ್ಬಳ್ಳಿಯಿಂದ ಗದಗಕ್ಕೆ (Gadag) ಹೋಗಿ ಅಲ್ಲಿಂದ ವಿಜಯಪುರಕ್ಕೆ ಸಂಚರಿಸುತ್ತದೆ. ಹೀಗಾಗಿ ಬಹಳ ಸಮಯ ತೆಗೆದುಕೊಳ್ಳುತ್ತದೆ. ಈಗಾಗಲೇ ಗದಗಕ್ಕೆ ಸಾಕಷ್ಟು ರೈಲುಗಳಿವೆ. ಹೀಗಾಗಿ ನೇರವಾಗಿ ರೈಲು ಬೇಕು. ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ (V Somanna) ಅವರಿಗೆ ಈ ಬಗ್ಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.ಇದನ್ನೂ ಓದಿ: ರಾಜಕಾರಣಿ ಜೊತೆ ಎಂಗೇಜ್‌ಮೆಂಟ್ ಆಗ್ತಿದ್ದಾರೆ ರಿಂಕು ಸಿಂಗ್ – ಕ್ರಿಕೆಟಿಗನ ಕೈ ಹಿಡಿಯೋ ಚೆಲುವೆ ಯಾರು?
ವಿಮಾನ ನಿಲ್ದಾಣದ ಪರಿಸ್ಥಿತಿ ಸ್ವಲ್ಪ ನಾಜುಕಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಇಸಿಯು ತೆಗೆದುಕೊಳ್ಳದೆ ಕೆಲಸ ಮಾಡಿದ್ದೇವೆ. ಈಗ ಮತ್ತೆ ಅಪೀಲ್ ಹೋಗಲು ಅಡ್ವಕೇಟ್ ಜನರಲ್‌ಗೆ ಹೇಳಿದ್ದೇನೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ಸಹಕಾರ ನೀಡುತ್ತದೆ. ಒಟ್ಟಿನಲ್ಲಿ ವಿಜಯಪುರಕ್ಕೆ ರೈಲು, ರಸ್ತೆ, ವಾಯುಮಾರ್ಗ ಎಲ್ಲವೂ ಅಭಿವೃದ್ಧಿ ಆಗಲಿದೆ ಎಂದರು.
ಇನ್ನೂ ಇದೇ ವೇಳೆ ಆಲಮಟ್ಟಿ ಜಲಾಶಯದ (Almatti Reservoir) ಎತ್ತರ ಹೆಚ್ಚಳದ ವಿಚಾರವಾಗಿ, ಆಲಮಟ್ಟಿ ಜಲಾಶಯ 1 ಮೀ. ಎತ್ತರ ಮಾಡಿದ್ರೂ ಅಷ್ಟೆ, 10 ಮೀ. ಹೆಚ್ಚಿಗೆ ಮಾಡಿದರೂ ಅಷ್ಟೇ ಏನು ಸಮಸ್ಯೆಯಿಲ್ಲ. ಈ ಕುರಿತು ಟೆಕ್ನಿಕಲ್ ಟೀಂ ಜೊತೆ ಚರ್ಚೆ ಮಾಡಿ, ತೀರ್ಮಾನ ಮಾಡುತ್ತೇವೆ. ಇನ್ನೂ ಎತ್ತರ ಹೆಚ್ಚಿಸುವುದರಿಂದ ಮಹಾರಾಷ್ಟ್ರಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಈ ಮೊದಲೇ ವರದಿಗಳು ಬಂದಿವೆ. ಇದರ ಬಗ್ಗೆ ಎಲ್ಲ ಪರಿಶೀಲನೆ ಆಗಿದೆ. ಎಲ್ಲ ಆತಂಕಗಳು ಸುಳ್ಳು ಎಂದು ಹೇಳಿದರು.ಇದನ್ನೂ ಓದಿ: ಗೆಳೆಯ ಲಾಟರಿಯಲ್ಲಿ ಗೆದ್ದ 30 ಕೋಟಿ ರೂ. ಕದ್ದು ಪ್ರಿಯಕರನೊಂದಿಗೆ ಪರಾರಿಯಾದ ಕೇಡಿ ಲೇಡಿ!
ಬೆಂಗಳೂರು: ರಾಜಧಾನಿಯಿಂದ ವಿಜಯಪುರ ಮತ್ತು ಬಾಗಲಕೋಟೆಗೆ ಈಗಿರುವ 15 ಗಂಟೆಗಳ ಪ್ರಯಾಣದ ಅವಧಿಯನ್ನು 10 ಗಂಟೆಗಳಿಗೆ ಇಳಿಸುವ ಸಂಬಂಧ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ (M B Patil), ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ. ಸೋಮಣ್ಣ (V Somanna) ಅವರೊಂದಿಗೆ ಶನಿವಾರ ದೂರವಾಣಿ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸಚಿವರು, ಈಗ ವಿಜಯಪುರ (Vijayapura), ಬಾಗಲಕೋಟೆಗೆ ಹೋಗುವ ರೈಲುಗಳು ಹುಬ್ಬಳ್ಳಿ ಮತ್ತು ಗದಗದಲ್ಲಿ ಇಂಜಿನ್ ಬದಲಿಸಿಕೊಳ್ಳಲು ಗಂಟೆಗಟ್ಟಲೆ ನಿಲ್ಲಬೇಕಾಗಿದೆ. 2 ಕಡೆ ಬೈಪಾಸ್ ಮೂಲಕ ರೈಲುಗಳನ್ನು ಸಾಗಿಹೋಗುವ ವ್ಯವಸ್ಥೆ ಆಗಬೇಕು. ಇದರಿಂದ ಗದಗ ಭಾಗದ ಜನತೆಗೂ ಅನುಕೂಲವಾಗುತ್ತದೆ. ಅಕಸ್ಮಾತ್ ಈಗಾಗಲೇ ಓಡುತ್ತಿರುವ ರೈಲುಗಳನ್ನು ಬೈಪಾಸ್ ಮೂಲಕ ಓಡಿಸುವುದು ಅಸಾಧ್ಯವಾದರೆ, ಹೊಸ ರೈಲುಗಳ ಸೇವೆಯನ್ನಾದರೂ ಆರಂಭಿಸಬೇಕು ಎಂದು ಕೋರಿದ್ದಾರೆ. ಇದನ್ನೂ ಓದಿ: ಮೊಬೈಲ್ ಬಳಕೆದಾರರ ಸೇರ್ಪಡೆ: ಏಪ್ರಿಲ್ ತಿಂಗಳಲ್ಲಿ ಕರ್ನಾಟಕದಲ್ಲಿ ರಿಲಯನ್ಸ್ Jio ನಂ.1
ಕೇಂದ್ರ ಸಚಿವ ಸೋಮಣ್ಣ ಅವರು ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸದ್ಯದಲ್ಲೇ ತಾವು ದೆಹಲಿಗೆ ಹೋಗುತ್ತಿದ್ದು, ಈ ಸಂದರ್ಭದಲ್ಲಿ ಸಚಿವರನ್ನೂ ಹಾಗೂ ರೈಲ್ವೆ ಅಧಿಕಾರಿಗಳನ್ನೂ ಕಂಡು ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಡಿಸಿ, ಸಿಇಓಗಳ ಸಭೆಗೆ ತಡವಾಗಿ ಬಂದ ಡಿಸಿಎಂ, ಸಚಿವರು – ಸಿಎಂ ಸಿದ್ದರಾಮಯ್ಯ ಗರಂ
ನೈರುತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮಾ ಅವರೊಂದಿಗೂ ಸಚಿವರು ಮಾತನಾಡಿದರು. ಈ ಭಾಗದಲ್ಲಿ ಬಾಕಿ ಇರುವ ರೈಲ್ವೆ ಹಳಿ ವಿದ್ಯುದೀಕರಣ ಜುಲೈ ಹೊತ್ತಿಗೆ ಮುಗಿಯಲಿದೆ ಎಂದು ಶರ್ಮ ಹೇಳಿದ್ದಾರೆ. ಇದಾದ ಮೇಲೆ ಬೆಂಗಳೂರಿನಿಂದ ವಿಜಯಪುರ ಮತ್ತು ಬಾಗಲಕೋಟೆ ನಡುವಿನ ರೈಲು ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆ ಆಗಲಿದೆ ಎಂದು ಹೇಳಿದ್ದಾರೆಂದು ತಿಳಿಸಿದ್ದಾರೆ.
ವಿಜಯಪುರ (Vijayapura) ಜಿಲ್ಲೆಯ ಚಡಚಣ ತಾಲೂಕಿನ ಹಿಂಗಣಿ ಬ್ಯಾರೇಜ್‌ನ ಐದು ಗೇಟ್‌ಗಳ ಪೈಕಿ ಎರಡು ಗೇಟ್ ಮಾತ್ರ ಓಪನ್ ಮಾಡಿದ್ದು, ರೈತರಿಗೆ ಸಂಕಷ್ಟ ತಂದೊದಗಿದೆ. ಪರಿಣಾಮ ಭೀಮಾ ನದಿಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿ, ನೂರಾರು ಪಂಪಸೆಟ್‌ಗಳು ಮುಳುಗಿ ಹೋಗಿವೆ. ಕೆಲ ಪಂಪಸೆಟ್ ಬೋರ್ಡ್ಗಳು ನೀರಲ್ಲಿ ಕೊಚ್ಚಿಹೋಗಿ ರೈತರಿಗೆ ನಷ್ಟವಾಗಿದೆ.
ಈ ಕುರಿತಂತೆ ಮಹಾರಾಷ್ಟ್ರ ಅಧಿಕಾರಿಗಳು ಹಿಂಗಣಿ ಬ್ಯಾರೇಜ್ ಅಧಿಕಾರಿಗಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದರು. ಆದರೂ ಹಿಂಗಣಿ ಬ್ಯಾರೇಜ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಪಂಪಸೆಟ್‌ಗಳು ನೀರಲ್ಲಿ ಮುಳುಗಿದ ಮೇಲೆ ಎಚ್ಚೆತ್ತ ಅಧಿಕಾರಿಗಳು ಐದು ಗೇಟ್‌ಗಳನ್ನು ಓಪನ್ ಮಾಡಿದ್ದಾರೆ.ಇದನ್ನೂ ಓದಿ: ಸದ್ಯಕ್ಕಿಲ್ಲ ಯೆಲ್ಲೊ ಲೈನ್ ಮೆಟ್ರೋ – ಸಿಗ್ನಲಿಂಗ್ ಸಮಸ್ಯೆಯಿಂದ ದಿನಾಂಕ ಮುಂದೂಡಿದ BMRCL
ವಿಜಯಪುರ: ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ (Dance) ಮಾಡುವ ಸಂದರ್ಭ ಹೃದಯಾಘಾತಕ್ಕೊಳಗಾಗಿ (Heart Attack) ಯುವಕ ಸಾವನ್ನಪ್ಪಿದ ಘಟನೆ ವಿಜಯಪುರ (Vijayapura) ನಗರದ ಚಪ್ಪರಬಂದ ಕಾಲೋನಿಯಲ್ಲಿ ನಡೆದಿದೆ.
ವಿಜಯಪುರ: ಹೌದು, ನಾವು ನ್ಯಾಷನಲ್ ಹೆರಾಲ್ಡ್‌ಗೆ (National Herald) ದೇಣಿಗೆ ಕೊಟ್ಟಿದ್ದೇವೆ. ಅದರಲ್ಲಿ ತಪ್ಪೇನಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಸಮರ್ಥಿಸಿಕೊಂಡರು.
ರನ್ಯಾ ರಾವ್ ಚಿನ್ನದ ವಿಚಾರ ಹೇಳಿದ್ದು ಕಾಂಗ್ರೆಸ್ ನಾಯಕ ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಮೆಂಟ್ಲು. ಪಾಪ ಮೆಂಟ್ಲು ಹೆಚ್ಚು ಕಡಿಮೆ ಆಗಿರಬೇಕು. ಕುಮಾರಸ್ವಾಮಿಗೆ ತಲೆ ಸರಿ ಇಲ್ಲ. ಸುಳ್ಳಿಗೆ ಮತ್ತೊಂದು ಹೆಸರೇ ಕುಮಾರಸ್ವಾಮಿ ಎಂದು ಹೆಚ್ಡಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಮನಗರ ವಿಚಾರದ ಬಗ್ಗೆ ಮಾತನಾಡಿ, ಅದು ಬೆಂಗಳೂರು ಜಿಲ್ಲೆ. ರಾಮನಗರ ಚೇಂಜ್ ಮಾಡ್ತಿಲ್ಲ. ರಾಮನಗರ ರಾಮನಗರವಾಗಿಯೇ ಇರುತ್ತೆ. ಇವರ‍್ಯಾಕೆ ಹಾಸನದಿಂದ ಬಂದ್ರು? ಹಾಸನದಿಂದಲೇ ರಾಜಕಾರಣ ಮಾಡಬೇಕಿತ್ತಲ್ಲ. ಇವರ ಹೆಸರನ್ನು ಮೊದಲು ಚೇಂಜ್ ಮಾಡಿಕೊಳ್ಳಲಿ. ಹೆಚ್.ಡಿ.ಕುಮಾರಸ್ವಾಮಿ ಎನ್ನುವ ಹೆಸರನ್ನು ಬದಲಾಯಿಸಿಕೊಳ್ಳಲಿ. ಅವರ ತಂದೆ ಹಸರು, ಅವರ ಊರ ಹೆಸರನ್ನು ಯಾಕೆ ಇಟ್ಕೊಂಡಿದ್ದಾರೆ? ನಾವು ಬೆಂಗಳೂರು ರೀ. ನಾವು ನಮ್ಮ ಬೆಂಗಳೂರು ಜಿಲ್ಲೆಯವರು. ನಮಗೆ ನಮ್ಮದೇ ಆದ ಆಸೆ ಎಲ್ಲಾ ಇರುತ್ತೆ. ಮದ್ರಾಸ್‌ನ ಚೆನ್ನೈ ಯಾಕ್ ಮಾಡಿದ್ರು? ಗುಲಬರ್ಗಾ ಕಲಬುರಗಿ ಯಾಕ್ ಮಾಡಿದ್ರು? ಬೆಂಗಳೂರು ಜಿಲ್ಲೆ ಅಂತಾ ಮಾಡಿದ್ರೆ ಅವರಿಗೇನು ತೊಂದರೆ. ಮುಂದೆ ಏನ್ ಮಾಡ್ತೀವಿ ಎಂದು ನೋಡಲಿ ಎಂದು ಸವಾಲ್ ಹಾಕಿದರು. ಇದನ್ನೂ ಓದಿ: ರಾಮನಗರ ಹೆಸರು ಬದಲಾವಣೆ – ತಮ್ಮ ಭೂಮಿಗಳ ಬೆಲೆ ಹೆಚ್ಚಿಸುವ ಷಡ್ಯಂತ್ರದ ಭಾಗ: ಹೆಚ್‌ಡಿಕೆ ಕೆಂಡ
ರಿಯಲ್ ಎಸ್ಟೇಟ್ ಡೆವೆಲಪ್ಮೆಂಟ್‌ಗಾಗಿ ಮಾಡಿದ್ದು ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿ, ಹೌದ್ರಿ ಅದಕ್ಕಾಗಿಯೇ ಮಾಡಿದ್ದು. ನಮ್ಮ ಬೆಂಗಳೂರು, ನಮ್ಮ ಹಳ್ಳಿಯವರು ಅಭಿವೃದ್ಧಿ ಆಗಬೇಕು. ಎಲ್ಲರ ಆಸ್ತಿಗಳ ಬೆಲೆ ಹೆಚ್ಚಾಗಬೇಕು. ರೈತರ ಬದುಕು ಒಳ್ಳೆಯದಾಗಬೇಕು, ಉದ್ಯೋಗ ಸಿಗಬೇಕು. ಹೊರ ದೇಶದಿಂದ ಬಂದು ಬಂಡವಾಳ ಹಾಕಬೇಕು ಎಂದು ಹೆಚ್‌ಡಿಕೆಗೆ ಟಾಂಗ್ ಕೊಟ್ಟರು.
ವಿಜಯಪುರ: ಟಿಯುವಿ ಕಾರು, ಕಂಟೇನರ್ ಹಾಗೂ ಖಾಸಗಿ ಬಸ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ಬಸವನ ಬಾಗೇವಾಡಿ (Basavana Bagewadi) ತಾಲೂಕಿನ ಮನಗೂಳಿ ಪಟ್ಟಣದ ಬಳಿ ಎನ್‌ಹೆಚ್ 50ರಲ್ಲಿ ನಡೆದಿದೆ.
ಭೀಕರ ಅಪಘಾತದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಹಾಗೂ ಖಾಸಗಿ ಬಸ್‌ನಲ್ಲಿದ್ದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಬಸ್‌ನಲ್ಲಿದ್ದ ಇತರರಿಗೆ ಗಾಯಗಳಾಗಿವೆ. ಅಲ್ಲದೇ ಕಂಟೇನರ್ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಇದನ್ನೂ ಓದಿ: ಮನೆಯ ಒಳಗಡೆ ನುಗ್ಗಿ ಅಪರಿಚಿತ ವ್ಯಕ್ತಿಯಿಂದ ಲಷ್ಕರ್ ಉಗ್ರನಿಗೆ ಗುಂಡೇಟು!
ವಿಜಯಪುರ: ಆಪರೇಷನ್ ಸಿಂಧೂರದ(OPeration Sindoor) ಬಗ್ಗೆ ಟೀಕೆ ಮಾಡುವವರಿಗೆ ಗುಂಡು ಹೊಡಿಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ(K S Eshwarappa) ಕಿಡಿಕಾರಿದರು.
ವಿಜಯಪುರದಲ್ಲಿ(Vijayapura) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ(Priyank Kharge), ಸಂತೋಷ್ ಲಾಡ್, ಕೊತ್ತೂರು ಮಂಜುನಾಥ್, ದಿನೇಶ್ ಗುಂಡೂರಾವ್‌ಗೆ ಗುಂಡು ಹೊಡೆಯಬೇಕು. ಇವರಿಗೆಲ್ಲಾ ಗುಂಡು ಹಾಕಿದರೆ ಮಾತ್ರ ಸರಿ ಹೋಗುತ್ತದೆ. ಇವರೆಲ್ಲಾ ದೇಶದ್ರೋಹಿಗಳು, ಇಂತಹ ದೇಶದ್ರೋಹಿಗಳಿಗೆ ಗುಂಡು ಹಾಕಬೇಕು. ಎಷ್ಟು ವಿಮಾನ ಪತನ ಆದವು ಎಂದು ಯುದ್ಧದ ಬಗ್ಗೆ ಸಾಕ್ಷಿ ಕೇಳ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಾಧನಾ ಸಮಾವೇಶಕ್ಕೆ ಮಳೆಯ ಭೀತಿ
ಜೂನಿಯರ್ ಕಾಂಗ್ರೆಸ್(Congress) ನಾಯಕರು ಮಾತ್ರ ಟೀಕೆ ಮಾಡುತ್ತಿದ್ದಾರೆ. ಸೀನಿಯರ್ ಖರ್ಗೆ ವಿಧಿ ಇಲ್ಲದೆ ಅಲ್ಲೊಂದು ಇಲ್ಲೊಂದು ಮಾತನಾಡುತ್ತಾರೆ. ಆದ್ರೆ ಪಾಕಿಸ್ತಾನ ಪರವಾಗಿ ಮರಿ ಖರ್ಗೆ ಇದ್ದಾರೆ. ಹರಿಪ್ರಸಾದ್, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್ ಅವರಂತಹ ಕೆಲವರಿಗೆ ಮಾತ್ರ ಎಲ್ಲಿ ಇದ್ದೇವೆ. ಏನು ಮಾಡುತ್ತಿದ್ದೇವೆ. ಕಾಂಗ್ರೆಸ್ ನಾಯಕರು ಹೌದೋ, ಅಲ್ವೋ ಎಂದೇ ಗೊತ್ತಾಗುತ್ತಿಲ್ಲ. ಇವರ ಬಗ್ಗೆ ಕಾಂಗ್ರೆಸ್‌ನವರಿಂದಲೇ ಟೀಕೆ ಕೇಳಿಬರುತ್ತಿದೆ ಎಂದರು. ಇದನ್ನೂ ಓದಿ: ಹೊಸೂರು ರಸ್ತೆಯಲ್ಲಿ ‘ಸ್ವಿಮ್ಮಿಂಗ್ ಪೂಲ್’ – ವಾಹನ ಸಂಚಾರ ಬಂದ್
ಪ್ರೂಫ್ ಕೇಳೋಕೆ ಪ್ರಿಯಾಂಕ್ ಹಾಗೂ ಲಾಡ್ ಯಾರು? ಇವರಿಗೆ ಆಪರೇಷನ್ ಸಿಂಧೂರದ ಬಗ್ಗೆ ಏನು ಪ್ರೂಫ್ ಕೊಡಬೇಕು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು, ಎಲ್ಲಾ ಪಕ್ಷದ ಸಭೆಗೆ ಹೋಗಿದ್ದಾರೆ. ಅವರನ್ನೇ ಕೇಳಲಿ ಇವರು. ಅವರು ಸಾಕ್ಷಿ ಕೊಟ್ಟೇ ಕೊಡ್ತಾರೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: Belagavi | 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – ಅಪ್ರಾಪ್ತ ಸೇರಿ ಇಬ್ಬರ ಬಂಧನ
ಕಾಂಗ್ರೆಸ್ ಸಾಧನಾ ಸಮಾವೇಶ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿಯ ರಸ್ತೆಯ ಒಂದು ಗುಂಡಿ ಕೂಡ ಮುಚ್ಚಿಲ್ಲ. ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಇಂತಹದ್ರಲ್ಲಿ ಸಾಧನಾ ಸಮಾವೇಶ ಮಾಡೋದು ಸರಿಯಲ್ಲ ಎಂದು ಕಿಡಿಕಾರಿದರು.
ಬಜೆಟ್‌ನಲ್ಲಿ ಜಾತಿ ಜನಗಣತಿ ಮಾಡೇ ಬಿಡ್ತೇವೆ ಅಂತಾ ಹೇಳಿದ್ರು. ಇವರಿಗೆ ಸಿಎಂ ಸ್ಥಾನ ಉಳಿಸಿಕೊಳ್ಳಬೇಕು ಅಷ್ಟೇ. ಇವರಿಗೆ ಯಾವ ಜಾತಿ ಜನಗಣತಿ ಬೇಡ. ಸಿಎಂ ಸ್ಥಾನ ಉಳಿಸಿಕೊಳ್ಳಲು ಲಿಂಗಾಯತರನ್ನ ಉಳಿಸಿಕೊಳ್ಳಬೇಕು ಅಂತಾ ಮಾಡ್ತಿದ್ದಾರೆ. ಬೇರೆ ಏನು ಸಾಧನೆ ಇದೆ ಇವರದು ಎಂದು ವಾಗ್ದಾಳಿ ನಡೆಸಿದರು.