Tag: ವಿಜಯಪುರ

  • ಧರ್ಮಸ್ಥಳ ಕೇಸ್‌ನಲ್ಲಿ ರಾಜಕೀಯ ಬೇಡ, ವರದಿ ಬರುವವರೆಗೆ ಕಾಯೋಣ – ಶಿವಾನಂದ ಪಾಟೀಲ್

    ಧರ್ಮಸ್ಥಳ ಕೇಸ್‌ನಲ್ಲಿ ರಾಜಕೀಯ ಬೇಡ, ವರದಿ ಬರುವವರೆಗೆ ಕಾಯೋಣ – ಶಿವಾನಂದ ಪಾಟೀಲ್

    ವಿಜಯಪುರ: ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ವರದಿ ಬರುವವರೆಗೆ ಕಾಯೋಣ ಎಂದು ಶಾಸಕ ಶಿವಾನಂದ ಪಾಟೀಲ್ (Shivanand Patil) ಹೇಳಿದರು.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ (Dharmasthala) ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ, ಆ ದೇವರ ಹೆಸರಿನಲ್ಲಿ ಏನು ಆಗಿಲ್ಲ ಎಂದು ಸಾಬೀತಾದರೆ ನಾವು ಸಂತೋಷಪಡುತ್ತೇವೆ. ಕೋರ್ಟ್ ಆದೇಶದ ಮೇಲೆ ತನಿಖೆ ಆಗುತ್ತಿದೆ. ಈಗ್ಯಾಕೆ ಅದರಲ್ಲಿ ರಾಜಕೀಯ ಮಾಡೋದು. ವರದಿ ಬರುತ್ತೆ, ಕಾಯೋಣ ಎಂದು ಬಿಜೆಪಿಗರಿಗೆ ಟಾಂಗ್ ಕೊಟ್ಟರು.

    ನಾವು ಪ್ರಮೋದಾದೇವಿ ರಾಜಮನೆತನದ ಬಗ್ಗೆ ಯಾವತ್ತು ವಿರೋಧ ಮಾಡಿಲ್ಲ. ಯಾರೂ ಕೂಡ ವಿರೋಧ ಮಾಡಬಾರದು. ಯಾಕಂದ್ರೆ ಪ್ರಮೋದಾದೇವಿ ಅವರ ಕೊಡುಗೆ ಇಡಿ ರಾಜ್ಯಕ್ಕೆ ಮಾದರಿಯಾಗಿದೆ. ಅದನ್ನು ಇಡೀ ದೇಶ ಅನುಕರಣೆ ಮಾಡಿದೆ ಎಂದರು.

  • `ಮಹಾ’ ಮಳೆಯಬ್ಬರಕ್ಕೆ ಅಪಾಯ ಮಟ್ಟ ಮೀರಿದ ಕೃಷ್ಣೆ – ಆಲಮಟ್ಟಿ ಜಲಾಶಯಕ್ಕೆ 2.45 ಲಕ್ಷ ಕ್ಯೂಸೆಕ್ ಒಳಹರಿವು

    `ಮಹಾ’ ಮಳೆಯಬ್ಬರಕ್ಕೆ ಅಪಾಯ ಮಟ್ಟ ಮೀರಿದ ಕೃಷ್ಣೆ – ಆಲಮಟ್ಟಿ ಜಲಾಶಯಕ್ಕೆ 2.45 ಲಕ್ಷ ಕ್ಯೂಸೆಕ್ ಒಳಹರಿವು

    – 36 ಗೇಟ್‌ಗಳಿಂದ ನಾರಾಯಣಪುರ ಡ್ಯಾಂಗೆ 2.50 ಲಕ್ಷ ಕ್ಯೂಸೆಕ್ ರಿಲೀಸ್

    ವಿಜಯಪುರ: ಮಹಾರಾಷ್ಟ್ರದಲ್ಲಿ  ಮಳೆಯಬ್ಬರ ಜೋರಾಗಿರುವ ಹಿನ್ನೆಲೆ ಕೃಷ್ಣಾ ನದಿ (Krishna River) ಅಪಾಯಮಟ್ಟ ಮೀರಿ ಹರಿಯುತ್ತಿದೆ.

    ಧಾರಾಕಾರ ಮಳೆಯಾದ ಹಿನ್ನೆಲೆ ವಿಜಯಪುರ (Vijayapura) ಜಿಲ್ಲೆಯ ನಿಡಗುಂದಿಯಲ್ಲಿರುವ ಆಲಮಟ್ಟಿ ಜಲಾಶಯಕ್ಕೆ (Alamatti Dam) ಒಳಹರಿವು ಹೆಚ್ಚಾಗಿದ್ದು, 2,45,000 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಸುರಕ್ಷತಾ ದೃಷ್ಟಿಯಿಂದ 26 ಗೇಟ್‌ಗಳ ಮೂಲಕ ನಾರಾಯಣಪುರ ಜಲಾಶಯಕ್ಕೆ (Narayanapur Dam) 2,50,000 ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ.ಇದನ್ನೂ ಓದಿ: ಆ.25 ರಿಂದ ಅಮೆರಿಕಗೆ ಅಂಚೆ ಸೇವೆ ಸ್ಥಗಿತಗೊಳಿಸಿದ ಭಾರತ

    ಇನ್ನೂ ನಾರಾಯಣಪುರ ಜಲಾಶಯದಿಂದಲೂ (Narayanapur Dam) ಭಾರೀ ಪ್ರಮಾಣದಲ್ಲಿ ಕೃಷ್ಣಾ ನದಿಗೆ ನೀರನ್ನ ಹರಿಬಿಡಲಾಗುತ್ತಿದ್ದು, ರಾಯಚೂರಿನ ದೇವದುರ್ಗದ ಐತಿಹಾಸಿಕ ಕೊಪ್ಪರ ಲಕ್ಷ್ಮೀ ನರಸಿಂಹ ದೇವಾಲಯ ಸಂಪೂರ್ಣ ಜಲಾವೃತವಾಗಿದೆ.

    ನೂರಾರು ವರ್ಷಗಳ ಇತಿಹಾಸವಿರುವ ಲಕ್ಷ್ಮೀ ನರಸಿಂಹ ದೇವಾಲಯ ಸುತ್ತಲೂ ನೀರು ಆವರಿಸಿದೆ. ದೇವಾಲಯ ಬಳಿ ರಭಸವಾಗಿ ನೀರು ಹರಿಯುತ್ತಿದ್ದು, ಭಕ್ತರು ದೇವಾಲಯ ಬಳಿ ಸುಳಿಯದಂತಾಗಿದೆ. ಅರ್ಚಕರು ಪೂಜೆ ಮಾಡಲು ಹರಸಾಹಸ ಪಡುತ್ತಿದ್ದಾರೆ. ಕೃಷ್ಣಾ ನದಿಗೆ ಇನ್ನೂ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದರೆ ದೇವಾಲಯ ಮುಳುಗಡೆಯಾಗಲಿದೆ. ಈಗಾಗಲೇ ದೇವದುರ್ಗ ಗಡ್ಡೆಗೂಳಿ ಬಸವೇಶ್ವರ ದೇವಾಲಯ ಮುಳುಗಡೆಯಾಗಿದೆ.ಇದನ್ನೂ ಓದಿ: ಶ್ರೀಲಂಕಾದ ಬೀಚ್‌ನಲ್ಲಿ ಗೋಲ್ಡ್‌ ಫಿಶ್‌ನಂತೆ ಕಂಗೊಳಿಸಿದ ಸೋನು!

  • ಕೃಷ್ಣಾ ನದಿಯಲ್ಲಿ ಎತ್ತಿನ ಮೈ ತೊಳೆಯುತ್ತಿದ್ದ ರೈತನನ್ನು ಎಳೆದೊಯ್ದ ಮೊಸಳೆ

    ಕೃಷ್ಣಾ ನದಿಯಲ್ಲಿ ಎತ್ತಿನ ಮೈ ತೊಳೆಯುತ್ತಿದ್ದ ರೈತನನ್ನು ಎಳೆದೊಯ್ದ ಮೊಸಳೆ

    ವಿಜಯಪುರ: ಅಮವಾಸ್ಯೆ ಹಿನ್ನೆಲೆ ಎತ್ತಿನ ಮೈ ತೊಳೆಯಲು ಕೃಷ್ಣಾ ನದಿ (Krishna River) ತೀರಕ್ಕೆ ಹೋಗಿದ್ದ ರೈತನನ್ನು ಮೊಸಳೆ ಎಳೆದೊಯ್ದಿರುವ ಘಟನೆ ಮುದ್ದೇಬಿಹಾಳದ (Muddebihal) ತಂಗಡಗಿ ಗ್ರಾ.ಪಂ ವ್ಯಾಪ್ತಿಯ ಕುಂಚಗನೂರ ಗ್ರಾಮದಲ್ಲಿ ನಡೆದಿದೆ

    ಕುಂಚಗನೂರ ಗ್ರಾಮದ ಕಾಶೀನಾಥ ಹಣಮಂತ ಕಂಬಳಿ (38) ಮೊಸಳೆ ದಾಳಿಗೆ ಒಳಗಾದ ರೈತ. ಕಾಶಿನಾಥನನ್ನು ಮೊಸಳೆ ಹೊತ್ತೊಯ್ದಿದ್ದನ್ನು ನೋಡಿರುವುದಾಗಿ ಕುಂಚಗನೂರ ಗ್ರಾಮದ ಧರೆಪ್ಪ ಬಟಕುರ್ಕಿ ಅವರು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಧರ್ಮ ವಿಜಯ – ಧರ್ಮಸ್ಥಳ ದೇಗುಲದಿಂದ ಶಿವ ರುದ್ರತಾಂಡವದ ಫೋಟೋ ಅಪ್ಲೋಡ್‌ 

    ಶನಿವಾರ (ಆ.23) ಅಮವಾಸ್ಯೆಯ ಹಿನ್ನೆಲೆ ಕಾಶೀನಾಥ ಅವರು ಎತ್ತುಗಳ ಮೈ ತೊಳೆಯಲು ಕೃಷ್ಣಾ ನದಿ ತೀರಕ್ಕೆ ತೆರಳಿದ್ದರು. ಈ ವೇಳೆ ರೈತನನ್ನು ಮೊಸಳೆ ಎಳದುಕೊಂಡು ಹೋಗಿದೆ. ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ನಾಪತ್ತೆಯಾದ ರೈತನನ್ನು ಹುಡುಕುತ್ತಿದ್ದಾರೆ. ಕೂಡಲಸಂಗಮದಿಂದ ಬೋಟ್ ತರಿಸಿ ಶೋಧ ನಡೆಸಲಾಗುತ್ತಿದೆ.ಇದನ್ನೂ ಓದಿ: ಅಂಕೋಲದಲ್ಲಿ ಕೇಣಿ ವಾಣಿಜ್ಯ ಬಂದರು ಯೋಜನೆ; ಹೇಗಿದೆ ನೀಲ ನಕ್ಷೆ – ಸಾಧಕ ಬಾಧಕಗಳೇನು?

  • ವಿಜಯಪುರ | 27 ರೌಡಿಶೀಟರ್‌ಗಳ ಗಡಿಪಾರಿಗೆ ಜಿಲ್ಲಾ ಪೊಲೀಸ್ ಸಜ್ಜು

    ವಿಜಯಪುರ | 27 ರೌಡಿಶೀಟರ್‌ಗಳ ಗಡಿಪಾರಿಗೆ ಜಿಲ್ಲಾ ಪೊಲೀಸ್ ಸಜ್ಜು

    ವಿಜಯಪುರ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 27 ರೌಡಿಶೀಟರ್‌ಗಳ ಗಡಿಪಾರಿಗೆ ಜಿಲ್ಲಾ ಪೊಲೀಸ್ ಇಲಾಖೆ ಸಜ್ಜಾಗಿದೆ.

    ಜಿಲ್ಲೆಯಲ್ಲಿ ಒಟ್ಟು 1,212 ರೌಡಿಶೀಟರ್‌ಗಳಿದ್ದು, 400ಕ್ಕೂ ಹೆಚ್ಚು ಗುಂಡಾಗಳಿದ್ದಾರೆ. ಆ ಪೈಕಿ ಸದ್ಯ 27 ರೌಡಿಶೀಟರ್‌ಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಉಪವಿಭಾಗ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ.ಇದನ್ನೂ ಓದಿ: ರಾಗಿಣಿ ಎಂಎಂಎಸ್-3ಗೆ ಮಿಲ್ಕಿ ಬ್ಯೂಟಿ ನಾಯಕಿ..!?

    27 ರೌಡಿಶೀಟರ್‌ಗಳ ಪೈಕಿ ಸದ್ಯ 8 ರೌಡಿಶೀಟರ್‌ಗಳನ್ನ ಗಡಿಪಾರು ಮಾಡುವಂತೆ ಉಪವಿಭಾಗ ಅಧಿಕಾರಿಗಳು ಆದೇಶ ಹೊರಡಿಸಿದ್ದು, ಇನ್ನುಳಿದ 19 ರೌಡಿಶೀಟರ್‌ಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗಾಗಿ ರೌಡಿಶೀಟರ್‌ಗಳ ಗಡಿಪಾರು ಆದೇಶ ಮಾಡಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಸ್ಪಷ್ಟಪಡಿಸಿದ್ದಾರೆ.

  • ಮುಸ್ಲಿಂ ಯುವತಿಯರನ್ನ ಮದ್ವೆಯಾದ್ರೆ 5 ಲಕ್ಷ ಹಣ – ಹೇಳಿಕೆ ಖಂಡಿಸಿ ಯತ್ನಾಳ್ ಕಾರ್‌ಗೆ ಘೇರಾವ್ ಹಾಕಲು ಯತ್ನ

    ಮುಸ್ಲಿಂ ಯುವತಿಯರನ್ನ ಮದ್ವೆಯಾದ್ರೆ 5 ಲಕ್ಷ ಹಣ – ಹೇಳಿಕೆ ಖಂಡಿಸಿ ಯತ್ನಾಳ್ ಕಾರ್‌ಗೆ ಘೇರಾವ್ ಹಾಕಲು ಯತ್ನ

    – ಯುವಕರನ್ನು ವಶಕ್ಕೆ ಪಡೆದ ಪೊಲೀಸರು

    ವಿಜಯಪುರ: ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ. ಕೊಡುವುದಾಗಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಯುವಕರ ತಂಡವೊಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರ ಕಾರಿಗೆ ಘೇರಾವ್ ಹಾಕಲು ಯತ್ನಿಸಿದ ಘಟನೆ ನಡೆದಿದೆ.ಇದನ್ನೂ ಓದಿ: Ramanagara | ರಸ್ತೆಯಲ್ಲಿ ವೀಲ್ಹಿಂಗ್ ಮಾಡಿ ವಾಹನ ಸವಾರರಿಗೆ ತೊಂದರೆ – ನಾಲ್ವರ ಬಂಧನ

    ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಬೆಂಗಾವಲು ಕಾರುಗಳೊಂದಿಗೆ ಹೋಗುತ್ತಿದ್ದಾಗ ಕೆಲ ಯುವಕರು ಯತ್ನಾಳ್ ಕಾರಿನ ಎದುರಿಗೆ ಬಂದು ಸುತ್ತವರಿಯಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಇತ್ತೀಚಿಗೆ ಕೊಪ್ಪಳದಲ್ಲಿ ಹಿಂದೂ ಯುವಕನ ಕೊಲೆಯಾಗಿತ್ತು. ಈ ವೇಳೆ ಯತ್ನಾಳ್ ಅವರು ಮುಸ್ಲಿಂ ಯುವತಿಯರನ್ನ ಹಿಂದೂ ಯುವಕರು ಮದುವೆ ಆದರೆ 5 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದ್ದರು. ಈ ಮೂಲಕ ಹಿಂದೂಗಳನ್ನ ಕೊಲೆ ಮಾಡುವ ಮನಸ್ಥಿತಿಯುಳ್ಳ ಮುಸ್ಲಿಮರಿಗೆ ಉತ್ತರ ನೀಡಬೇಕಿದೆ ಎಂದು ತಿಳಿಸಿದ್ದರು. ಯತ್ನಾಳ್ ನೀಡಿದ್ದ ಈ ಹೇಳಿಕೆ ಖಂಡಿಸಿ ಯುವಕರು ಘೇರಾವ್ ಹಾಕಲು ಯತ್ನಿಸಿದ್ದಾರೆ.ಇದನ್ನೂ ಓದಿ: ಬುರುಡೆ ಕೇಸ್‌ ಹಿಂದೆ ಕೈ ಸಂಸದ ಶಶಿಕಾಂತ್‌ ಸೆಂಥಿಲ್‌ ಇದ್ದಾರೆ: ಯಶ್‌ಪಾಲ್‌ ಸುವರ್ಣ

  • ಮುಸ್ಲಿಂ ಯುವತಿಯರ ಮದುವೆಯಾದ್ರೆ 5 ಲಕ್ಷ ಘೋಷಣೆ ಹೇಳಿಕೆ – ಯತ್ನಾಳ್ ವಿರುದ್ಧ ಎಫ್‌ಐಆರ್

    ಮುಸ್ಲಿಂ ಯುವತಿಯರ ಮದುವೆಯಾದ್ರೆ 5 ಲಕ್ಷ ಘೋಷಣೆ ಹೇಳಿಕೆ – ಯತ್ನಾಳ್ ವಿರುದ್ಧ ಎಫ್‌ಐಆರ್

    ವಿಜಯಪುರ/ಕಲಬುರಗಿ: ಮುಸ್ಲಿಂ ಯುವತಿಯರ ಮದುವೆಯಾದ್ರೆ 5 ಲಕ್ಷ ರೂ. ನೀಡಲಾಗುವುದು ಎಂದು ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಿರುದ್ಧ ಎಫ್‌ಐಆರ್ ದಾಖಲಾಗಿದೆ.

    ಯತ್ನಾಳ್ ವಿರುದ್ಧ ವಿಜಯಪುರ ಹಾಗೂ ಕಲಬುರಗಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮುಸ್ಲಿಂ ಹುಡುಗಿ ಪ್ರೀತಿಸಿ ಹಿಂದೂ ಹುಡುಗ ಮದುವೆ ಆದರೆ, 5 ಲಕ್ಷ ನಗದು ಘೋಷಣೆಯನ್ನ ಯತ್ನಾಳ್ ಮಾಡಿದ್ದಾರೆ. ಕೊಪ್ಪಳದಲ್ಲಿ ಈ ರೀತಿ ಹೇಳಿಕೆ ನೀಡಿದ್ದ ಶಾಸಕರ ವಿರುದ್ಧ ವಿಜಯಪುರ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಮೈನುದ್ದೀನ ಬೀಳಗಿ ದೂರು ಕೊಟ್ಟಿದ್ದರು. ಇದನ್ನೂ ಓದಿ: ಮುಸ್ಲಿಂ ಯುವತಿಯರನ್ನ ಮದ್ವೆಯಾದ್ರೆ 5 ಲಕ್ಷ: ಯತ್ನಾಳ್‌ ಘೋಷಣೆ

    ಧರ್ಮದ ವಿರುದ್ಧ ಅವಹೇಳನ ಹಾಗೂ ಪ್ರಚೋದನಕಾರಿ ಹೇಳಿಕೆ ಖಂಡಿಸಿ ಬೀಳಗಿ ಕೇಸ್ ನೀಡಿದ್ದಾರೆ. ಈ ದೂರನ್ನು ಗುರುವಾರ ಕೊಪ್ಪಳಕ್ಕೆ ವರ್ಗಾಯಿಸಲಾಗಿದೆ. ಇದರ ಜೊತೆಗೆ ಯತ್ನಾಳ್ ಮೇಲೆ ಕಲಬುರ್ಗಿಯಲ್ಲೂ ದೂರು ದಾಖಲಾಗಿದ್ದು, ಅದನ್ನ ವಿಜಯಪುರ ಗಾಂಧಿಚೌಕ್ ಪೊಲಿಸ್ ಠಾಣೆಗೆ ಕಳಿಸಲಾಗಿದೆ. ಈ ದೂರನ್ನು ಕೂಡ ಕೊಪ್ಪಳಕ್ಕೆ ಕಳಿಸುವ ಸಾಧ್ಯತೆ ಇದೆ.

    ಖಿದ್ಮತ್ ಎ ಮಿಲ್ಲತ್ ಕಮಿಟಿ ಅಧ್ಯಕ್ಷ ಜುನೈದ್ ಖುರೇಶಿ ಎಂಬವರು ಯತ್ನಾಳ್ ವಿರುದ್ಧ ಕಲಬುರಗಿಯಲ್ಲಿ ದೂರು ಕೊಟ್ಟಿದ್ದರು. ಇದನ್ನೂ ಓದಿ: ಜಾಮೀನು ರದ್ದು – ಪತ್ನಿ ಮನೆಯಲ್ಲಿದ್ದ ದರ್ಶನ್‌ ಅರೆಸ್ಟ್‌

  • ಆಟವಾಡುತ್ತಾ ಬಾವಿಗೆ ಬಿದ್ದ 8ರ ಬಾಲಕಿ ಸಾವು

    ಆಟವಾಡುತ್ತಾ ಬಾವಿಗೆ ಬಿದ್ದ 8ರ ಬಾಲಕಿ ಸಾವು

    ವಿಜಯಪುರ: ಆಟವಾಡಲು ಹೋಗಿ ಬಾಲಕಿಯೋರ್ವಳು ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ಇಂಡಿ (Indi) ತಾಲೂಕಿನ ಧನಸಿಂಗ್ ತಾಂಡಾದಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ:ಧರ್ಮಸ್ಥಳ ನಿಗೂಢ ಶವ ಕೇಸಲ್ಲಿ ಮಾನವ ಹಕ್ಕುಗಳ ಆಯೋಗ ಎಂಟ್ರಿ

    ಅರ್ಚನಾ ದೀಪಕ್ ರಾಠೋಡ (8) ಮೃತ ಬಾಲಕಿ. ಸೋಮವಾರ ಸಂಜೆ ಬಾಲಕಿ ತನ್ನ ತಾಯಿಯೊಂದಿಗೆ ಕುರಿ ಮೇಯಿಸಲು ಹೋಗಿದ್ದಳು. ಈ ವೇಳೆ ಆಟವಾಡುತ್ತಿದ್ದ ಬಾಲಕಿ ಆಯಾತಪ್ಪಿ ಬಾವಿಗೆ ಬಿದ್ದಿದ್ದಾಳೆ.

    ಬಾಲಕಿ ಬಾವಿಗೆ ಬಿದ್ದಿರುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಸಿ ಸದ್ಯ ಬಾಲಕಿಯ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಈ ಕುರಿತು ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಭಾರತದ ಮೇಲೆ 50% ಸುಂಕ ವಿಧಿಸಿದ್ದು, ರಷ್ಯಾಗೆ ದೊಡ್ಡ ಹೊಡೆತ ಕೊಟ್ಟಿದೆ: ಟ್ರಂಪ್‌

     

  • ಬರ್ತ್‌ಡೇಗಾಗಿ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಹೋಟೆಲ್‌ಗೆ ಕರೆದೊಯ್ದು ಮೋಜು, ಮಸ್ತಿ – ವಾರ್ಡನ್, ಅಡುಗೆ ಕೆಲಸದಾಕೆಗೆ ನೋಟಿಸ್

    ಬರ್ತ್‌ಡೇಗಾಗಿ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಹೋಟೆಲ್‌ಗೆ ಕರೆದೊಯ್ದು ಮೋಜು, ಮಸ್ತಿ – ವಾರ್ಡನ್, ಅಡುಗೆ ಕೆಲಸದಾಕೆಗೆ ನೋಟಿಸ್

    ವಿಜಯಪುರ: ಬರ್ತ್‌ಡೇಗಾಗಿ ಹಾಸ್ಟೆಲ್‌ನ ವಾರ್ಡನ್ ಹಾಗೂ ಅಡುಗೆ ಕೆಲಸದಾಕೆ ಅಲ್ಲಿನ ವಿದ್ಯಾರ್ಥಿನಿಯರನ್ನು ಹೋಟೆಲ್‌ಗೆ ಕರೆದೊಯ್ದು ಪಾರ್ಟಿ ಮಾಡಿಸಿದ್ದರು. ಇದರ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆ (Department of Social Welfare) ಉಪನಿರ್ದೇಶಕರು ಎಚ್ಚೆತ್ತುಕೊಂಡು ಇಬ್ಬರಿಗೂ ನೋಟಿಸ್ ನೀಡಿದ್ದಾರೆ.

    ಬಡ ಪೋಷಕರು ಎಲ್ಲರಂತೆ ನಮ್ಮ ಮಕ್ಕಳು ವಿದ್ಯಾವಂತರಾಗಬೇಕು ಅಂತಾ ಕನಸು ಕಂಡಿರುತ್ತಾರೆ. ಆದ್ರ‍್ರೆ ದೊಡ್ಡ ನಗರಗಳಲ್ಲಿ ಶಾಲೆ, ಕಾಲೇಜುಗಳಿಗೆ ಫೀ ಕಟ್ಟಿ, ವಸತಿ ಸೌಲಭ್ಯ ಒದಗಿಸಲು ಸಾಧ್ಯವಾಗದೆ ಪರದಾಡುತ್ತಾರೆ. ಇಂತಹ ಬಡ ಪಾಲಕರ ಅನುಕೂಲಕ್ಕಾಗಿಯೇ ಸರ್ಕಾರ ವಸತಿ ನಿಲಯಗಳನ್ನು ನಿರ್ಮಿಸಿರುತ್ತದೆ. ಆದರೆ ಈ ವಸತಿ ಶಾಲೆಯ ಸಿಬ್ಬಂದಿ ಅಲ್ಲಿನ ನಿಯಮಗಳನ್ನು ಗಾಳಿಗೆ ತೂರಿ, ಬಡ ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯುವಂತಹ ಕೆಲಸ ಮಾಡುತ್ತಿದ್ದಾರೆ.ಇದನ್ನೂ ಓದಿ: ನಾಳೆಯಿಂದ 2 ದಿನ `ವಿದ್ಯಾಮಂದಿರʼ – ನಿಮ್ಮ PG ಶಿಕ್ಷಣ ಕನಸು ನನಸಾಗಿಸಲು ಬನ್ನಿ

    ವಿಜಯಪುರ ನಗರದ ರಾಜಕುಮಾರ್ ಲೇಔಟ್‌ನಲ್ಲಿರುವ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ. ಈ ಹಾಸ್ಟೆಲ್ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿದೆ. ಈ ವಸತಿ ನಿಲಯದ ವಾರ್ಡನ್ ಶಕುಂತಲಾ ರಜಪೂತ್, ಯಾವುದೇ ಅನುಮತಿ ಪಡೆಯದೇ ಅಲ್ಲಿನ ವಿದ್ಯಾರ್ಥಿನಿಯರನ್ನು ಹುಟ್ಟುಹಬ್ಬದ ಪಾರ್ಟಿಗೆ ಕೊಂಡೊಯ್ದಿದ್ದಾರೆ.

    ಕಳೆದ ಶನಿವಾರ ಈ ವಸತಿ ನಿಲಯದ ಅಡುಗೆಕೆಲಸದಾಕೆ ರಿಜ್ವಾನ್ ಮುಲ್ಲಾಳ ಹುಟ್ಟುಹಬ್ಬ ಇತ್ತು. ಹೀಗಾಗಿ ಬರ್ತ್‌ಡೇ ಆಚರಣೆಗೆಂದು ರಾತ್ರಿ 7 ಗಂಟೆಗೆ ಹೋಟಲ್‌ವೊಂದಕ್ಕೆ ವಿದ್ಯಾರ್ಥಿನಿಯರನ್ನ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳೊಂದಿಗೆ ಮೋಜು ಮಸ್ತಿ ಮಾಡಿ, ಕುಣಿದು ಕುಪ್ಪಳಿಸಿ ಪಾರ್ಟಿ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈ ಮೂಲಕ ವಸತಿ ನಿಲಯದ ವಾರ್ಡನ್ ಹಾಗೂ ಅಡುಗೆ ಕೆಲಸದಾಕೆ ಹಾಸ್ಟೆಲ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಹಾಸ್ಟೆಲ್‌ನಿಂದ ಹೊರಗೆ ಹೋಗಿದ್ದಾಗ ಯಾವುದಾದ್ರೂ ಅವಘಡ ಸಂಭವಿಸಿದ್ದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸ್ತಿದ್ದಾರೆ.

    ಇನ್ನೂ ಈ ಅಡುಗೆ ಕೆಲಸದಾಕೆ ಈ ಹಿಂದೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ವಸತಿ ನಿಲಯದಲ್ಲೂ ಇದೆ ರೀತಿ ಹುಟ್ಟುಹಬ್ಬ ಆಚರಿಸಿ ಅಮಾನತು ಆಗಿದ್ದಳಂತೆ. ಇದೀಗ ಮತ್ತೆ ಅಂತಹದೇ ತಪ್ಪು ಮಾಡಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಮಾಹಿತಿ ತಿಳಿದ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಎಚ್ಚೆತ್ತುಕೊಂಡಿದ್ದು, ವಾರ್ಡನ್ ಹಾಗೂ ಅಡುಗೆ ಕೆಲಸದಾಕೆಗೆ ನೋಟಿಸ್ ನೀಡಿದ್ದಾರೆ. 3 ದಿನದಲ್ಲಿ ನೋಟಿಸ್‌ಗೆ ಉತ್ತರಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ಮಹೇಶ್‌ ಶೆಟ್ಟಿ ತಿಮರೋಡಿ, ಮಟ್ಟಣ್ಣನವರ್, ಪುನೀತ್‌ ಕೆರೆಹಳ್ಳಿ ವಿರುದ್ಧ ಎಫ್‌ಐಆರ್‌ ದಾಖಲು

  • ವಿಜಯಪುರ | ಮಳೆಯಬ್ಬರಕ್ಕೆ ಮೈದುಂಬಿದ ಡೋಣಿ ನದಿ – ಸಾತಿಹಾಳ ಸೇತುವೆ ಜಲಾವೃತ

    ವಿಜಯಪುರ | ಮಳೆಯಬ್ಬರಕ್ಕೆ ಮೈದುಂಬಿದ ಡೋಣಿ ನದಿ – ಸಾತಿಹಾಳ ಸೇತುವೆ ಜಲಾವೃತ

    ವಿಜಯಪುರ: ಜಿಲ್ಲೆಯಲ್ಲಿ ಕಳೆದೆರೆಡು ದಿನಗಳಿಂದ ಸುರಿದ ಭಾರೀ ಮಳೆಗೆ ಡೋಣಿ ನದಿ (Doni River) ಮೈದುಂಬಿ ಹರಿಯುತ್ತಿದ್ದು, ಸಾತಿಹಾಳ ಸೇತುವೆ (Satihal Bridge) ಸಂಪೂರ್ಣವಾಗಿ ಜಲಾವೃತಗೊಂಡಿದೆ.ಇದನ್ನೂ ಓದಿ: ಕ್ಯಾಬಿನೆಟ್‌ನಲ್ಲಿ ನ್ಯಾ.ನಾಗಮೋಹನ್ ದಾಸ್ ವರದಿ ಮಂಡನೆ – ಆ.16ಕ್ಕೆ ವಿಶೇಷ ಸಂಪುಟ ಸಭೆ

    ಎರಡು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿದ್ದ ಮಳೆ ಇದೀಗ ಕಡಿಮೆಯಾಗಿದೆ. ಮಳೆ ನಿಂತರೂ ಕೂಡ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನಲ್ಲಿ ಹರಿಯುವ ಡೋಣಿ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಪರಿಣಾಮ ಡೋಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಸಾತಿಹಾಳ ಸೇತುವೆ ಜಲಾವೃತಗೊಂಡಿದೆ. ಹೀಗಾಗಿ ಬಸವನಬಾಗೇವಾಡಿ – ಸಾತಿಹಾಳ – ದೇವರಹಿಪ್ಪರಗಿ ಮಾರ್ಗದ ಸಂಪರ್ಕ ಕಡಿತಗೊಂಡಿದೆ.

    ಸೇತುವೆ ಜಲಾವೃತಗೊಂಡಿದ್ದರೂ ಜನರು ಅಪಾಯವನ್ನು ಲೆಕ್ಕಿಸದೇ ಸೇತುವೆ ಮೇಲೆ ಓಡಾಟ ನಡೆಸಿದ್ದಾರೆ. ಸೇತುವೆ ಮೇಲೆ ಹೊರಟಾಗ ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.ಇದನ್ನೂ ಓದಿ:ಬೆಂಗಳೂರಿನಲ್ಲಿ ದೆಹಲಿ ನಂತರದ ದೊಡ್ಡ ಮೆಟ್ರೋ ಸಂಚಾರ ಜಾಲ: ತೇಜಸ್ವಿ ಸೂರ್ಯ

  • ವಿಜಯಪುರ | ನಿರಂತರ ಮಳೆಗೆ ಸರ್ಕಾರಿ ಶಾಲೆ ಜಲಾವೃತ – ವಿದ್ಯಾರ್ಥಿಗಳ ಪರದಾಟ

    ವಿಜಯಪುರ | ನಿರಂತರ ಮಳೆಗೆ ಸರ್ಕಾರಿ ಶಾಲೆ ಜಲಾವೃತ – ವಿದ್ಯಾರ್ಥಿಗಳ ಪರದಾಟ

    ವಿಜಯಪುರ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸರ್ಕಾರಿ ಶಾಲೆಯೊಂದು ಜಲಾವೃತಗೊಂಡಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ.ಇದನ್ನೂ ಓದಿ: ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ

    ಮಂಗಳವಾರ ರಾತ್ರಿಯಿಂದ ಶುರುವಾದ ಮಳೆ ನಿರಂತರವಾಗಿ 12 ಗಂಟೆಗಳ ಕಾಲ ಸುರಿದಿದೆ. ಪರಿಣಾಮ ವಿಜಯಪುರ (Vijayapura) ಜಿಲ್ಲೆಯ ತಿಕೋಟ ಗ್ರಾಮದ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯೊಂದು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಶಾಲಾ ಆವರಣ ಕೆರೆಯಂತಾಗಿದ್ದು, ಕೊಠಡಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ನೀರು ಹೊರಹಾಕಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ನೀರಿನ ಪ್ರಮಾಣದಲ್ಲಿ ಇಳಿಮುಖ ಕಂಡಿದೆ.

    ಇನ್ನೂ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಕೆಲವೆಡೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಮೆಕ್ಕೆಜೋಳ, ಜೋಳ, ಶೇಂಗಾ ಬೆಳೆಯುವ ರೈತರಿಗೆ ಸದ್ಯ ಮಳೆಯ ಅವಶ್ಯಕತೆ ಇತ್ತು. ಕೂಡ್ಲಿಗಿ ಹಾಗೂ ಸುತ್ತಮುತ್ತಲು ಭಾರೀ ಮಳೆ ಸುರಿದ ಪರಿಣಾಮ ದೊಡ್ಡ ಕೆರೆ ಕೋಡಿ ಬಿದ್ದಿದೆ. ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಆಗಸ್ಟ್ ತಿಂಗಳಲ್ಲಿ ಕೆರೆ ಕೋಡಿ ಬಿದ್ದಿರೋದ್ರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.ಇದನ್ನೂ ಓದಿ: ದೇವಭೂಮಿಯಲ್ಲಿ ಮೇಘಸ್ಫೋಟ – ಧರಾಲಿಯಲ್ಲಿ ಈವರೆಗೆ ಐವರ ಸಾವು ದೃಢ; 150 ಜನರ ರಕ್ಷಣೆ