Tag: ವಿಜಯಪುರ

  • ಸ್ವತಃ ಬಿಜೆಪಿಯವರೇ ಹಲಾಲ್‌ ಕಟ್‌ ಮಾಡಿ ಕಮಿಷನ್‌ ಹೊಡೆಯುತ್ತಿದ್ದಾರೆ – ಓವೈಸಿ ಆರೋಪ

    ಸ್ವತಃ ಬಿಜೆಪಿಯವರೇ ಹಲಾಲ್‌ ಕಟ್‌ ಮಾಡಿ ಕಮಿಷನ್‌ ಹೊಡೆಯುತ್ತಿದ್ದಾರೆ – ಓವೈಸಿ ಆರೋಪ

    ವಿಜಯಪುರ: ಮುಸ್ಲಿಮರ ಗಡ್ಡ, ಊಟ, ಟೋಪಿಗೆ ತೊಂದರೆ ಇದೆ ಎಂದು ಬಿಜೆಪಿ ಆಡಳಿತದ ವಿರುದ್ಧ ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್‌ ಓವೈಸಿ (Asaduddin Owaisi) ಕಿಡಿಕಾರಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಸಬ್ ಕಾ ವಿಕಾಸ್, ಸಬ್ ಕಾ ಸಾಥ್ ಬರೀ ಬಿಜೆಪಿ ಮಾತಿನಲ್ಲೇ ಇದೆ. ಬಿಜೆಪಿ ಮುಸ್ಲಿಮರ ವಿರುದ್ಧ ಇದೆ. ಬಿಜೆಪಿ (BJP) ಹಲಾಲ್ ಕಟ್ ಮಾಡಿ ತಮ್ಮ ಕಮಿಷನ್ ಮಾಡಿಕೊಳ್ಳುತ್ತಿದೆ. ಹಲಾಲ್ (Halal Cut) ವಿಚಾರದಲ್ಲಿ ಬಿಜೆಪಿ ಕಮಿಷನ್ ಮಾಡುತ್ತಿದೆ. ಬಿಜೆಪಿ ಕಮಿಷನ್‌ ಬಗ್ಗೆ ವೀಡಿಯೋಗಳಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನಮಗೆ ಅಧಿಕಾರ ಬೇಕಿಲ್ಲ ಅಂದ್ರು ರಾಹುಲ್- ಶಾಕ್ ಕೊಟ್ಟ ಡಿಕೆಶಿ

    ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal)  ವಿರುದ್ಧ ಕಿಡಿಕಾರಿದ ಓವೈಸಿ, ನಾವು ಪಾಕಿಸ್ತಾನದ ಹೆಸರು ಕೂಡ ಹೇಳುವುದಿಲ್ಲ. ಆದರೆ ಶಾಸಕ ಯತ್ನಾಳ್ ಪದೇಪದೆ ಪಾಕಿಸ್ತಾನದ ಹೆಸರು ಉಲ್ಲೇಖ ಮಾಡುತ್ತಾರೆ. ಪಾಕಿಸ್ತಾನ ಮೇಲೆ ಅವರಿಗೆ ಪ್ರೀತಿ ಇದೆ. ಪಾಕಿಸ್ತಾನ ಮೇಲೆ ಪ್ರೀತಿ ಯಾಕೆ ಇದೆ ಎಂಬುದು ಅವರಿಗೆ ಗೊತ್ತು, ನನಗೆ ಗೊತ್ತಿಲ್ಲ. ಪ್ರಧಾನಿ ಮೋದಿ ಯತ್ನಾಳ್‌ಗೆ ಹೇಳಿ‌ಕೊಟ್ಟಿರಬಹುದು. ಪದೇಪದೆ ಪಾಕಿಸ್ತಾನ ಹೆಸರು ಹೇಳು ಎಂದು ಪ್ರಧಾನಿ ಹೇಳಿದ್ದಕ್ಕೆ ಯತ್ನಾಳ್ ಹೇಳ್ತಿದ್ದಾರೆ ಎಂದು ಟೀಕಿಸಿದ್ದಾರೆ.

    ಹಿಜಬ್ ಕುರಿತು ಸುಪ್ರೀಂ ಕೋರ್ಟ್ (Supreme Court) ತೀರ್ಪು ವಿಚಾರವಾಗಿ ಮಾತನಾಡಿ, ಹಿಜಬ್ (Hijab) ಪರ ತೀರ್ಪು ಬಂದಿದ್ದು ಸಂತಸ ತಂದಿದೆ. ತೀರ್ಪಿನಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಹಿಜಬ್ ಪರ ತೀರ್ಪು ಬಂದಿದ್ದು ನಮ್ಗೆ ದೊಡ್ಡ ತೀರ್ಪು ಆಗಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೆಲವು ಮುಸ್ಲಿಮರು ಶಿವಮೊಗ್ಗವನ್ನು ಹಾಳು ಮಾಡ್ತಿದ್ದಾರೆ: ಕೆ.ಎಸ್ ಈಶ್ವರಪ್ಪ

    Live Tv
    [brid partner=56869869 player=32851 video=960834 autoplay=true]

  • ಹಳಿ ತಪ್ಪಿದ ಗೂಡ್ಸ್ ರೈಲು- 6 ರೈಲುಗಳ ಸಂಚಾರ ರದ್ದು

    ಹಳಿ ತಪ್ಪಿದ ಗೂಡ್ಸ್ ರೈಲು- 6 ರೈಲುಗಳ ಸಂಚಾರ ರದ್ದು

    ವಿಜಯಪುರ: ಗೂಡ್ಸ್ ರೈಲು ಹಳಿ ತಪ್ಪಿ ಬೋಗಿಗಳು ಉರುಳಿ ಬಿದ್ದ ಘಟನೆ ವಿಜಪುರದಲ್ಲಿ ನಡೆದಿದೆ. ಗೂಡ್ಸ್ ಗಾಡಿ ಆದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ.

    ಗೂಡ್ಸ್ ರೈಲಿನ ಬೋಗಿಗಳು ಕಟ್ ಆಗಿ 6 ಬೋಗಿಗಳು ಉರುಳಿ ಬಿದ್ದಿವೆ. ಚಲಿಸುತ್ತಿದ್ದ ವೇಳೆ ಏಕಾಏಕಿ ರೈಲ್ವೆಯ ಆರು ಬೋಗಿಗಳು ಕಟ್ ಆಗಿ ಅನಾಹುತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ, ಯಾವುದೇ ಪ್ರಾಣ ಹಾನಿಯಾಗಿಲ್ಲ. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಮುಳವಾಡ ರೈಲು ನಿಲ್ದಾಣದ ಬಳಿ ಘಟನೆ ನಡೆದಿದೆ. ಇದನ್ನೂ ಓದಿ: ಸ್ವಾಮೀಜಿ ಆತ್ಮಹತ್ಯೆ ಪ್ರಕರಣ- ಮೂರು ಪುಟಗಳ ಡೆತ್‍ನೋಟ್ ಪತ್ತೆ

    6 ಬೋಗಿಗಳು ಟ್ರ್ಯಾಕ್‍ನಿಂದ ಕಟ್ ಆಗಿ ಹೊರಗಡೆಗೆ ಬಿದ್ದಿವೆ. ಸ್ಥಳಕ್ಕೆ ವಿಜಯಪುರ ರೈಲ್ವೆ ಪೊಲೀಸರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನಾಹುತ ಹಿನ್ನೆಲೆ ಸೊಲ್ಲಾಪುರ ಹಾಗೂ ವಿಜಯಪುರ ಮಾರ್ಗದಿಂದ ಹುಬ್ಬಳ್ಳಿ ಮಾರ್ಗಕ್ಕೆ ಹೋಗಬೇಕಿದ್ದ ಆರು ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ರೈಲ್ವೆ ಇಲಾಖೆ ಅಧಿಕಾರಿಗಳಿಂದ ಇಂದು ಸಂಚರಿಸಬೇಕಿದ್ದ 6 ರೈಲು ಕ್ಯಾನ್ಸಲ್ ಮಾಡಿರುವ ಕುರಿತು ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ದೀಪಾವಳಿ ಎಂದರೆ ಭಯೋತ್ಪಾದನೆಯ ಅಂತ್ಯದ ಹಬ್ಬ: ಮೋದಿ

    Live Tv
    [brid partner=56869869 player=32851 video=960834 autoplay=true]

  • ನಟ ಚೇತನ್‌ ಒಬ್ಬ ನಾಲಾಯಕ್, ಮುಸ್ಲಿಂ ಏಜೆಂಟ್‌: ಯತ್ನಾಳ್

    ನಟ ಚೇತನ್‌ ಒಬ್ಬ ನಾಲಾಯಕ್, ಮುಸ್ಲಿಂ ಏಜೆಂಟ್‌: ಯತ್ನಾಳ್

    ವಿಜಯಪುರ: ನಟ ಚೇತನ್‌(Actor Chethan) ಒಬ್ಬ ನಾಲಾಯಕ್, ಮುಸ್ಲಿಂ ಏಜೆಂಟ್‌ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್(Basanagouda Patil Yatnal) ಕಿಡಿ ಕಾರಿದ್ದಾರೆ.

    ಕಾಂತಾರ ಸಿನಿಮಾದಲ್ಲಿ ಬರುವ ದೈವಾರಾಧನೆ, ಹಿಂದೂ ಸಂಸ್ಕೃತಿಯ ವಿಚಾರಕ್ಕೆ ಸಂಬಂಧಿಸಿದಂತೆ ಚೇತನ್‌ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಟ ಚೇತನ ಸಾಬ್ರ (ಮುಸ್ಲಿಂ) ಏಜೆಂಟ್ ಆಗಿದ್ದಾನೆ. ಮುಸ್ಲಿಮರು ದುಡ್ಡು ಕೊಟ್ಟು ಇಂತಹ ಅಯೋಗ್ಯ ಕೆಲಸ ಮಾಡಿಸುತ್ತಾರೆ. ಅಂಬೇಡ್ಕರ್‌ ಜಯಂತಿ ವೇಳೆ ನಾಟಕ ಮಾಡಲು ವಿಜಯಪುರಕ್ಕೂ ಅವನು ಬಂದಿದ್ದ ಎಂದರು. ಇದನ್ನೂ ಓದಿ: ಕಾಂತಾರ ಕಾಂಟ್ರವರ್ಸಿ: ನಟ ಚೇತನ್ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲು

    ದೈವಾರಾಧನೆ ಸಂಸ್ಕೃತಿಯ ಭಾಗವಾಗಿದೆ. ಹಿಂದೂ ವಿರೋಧಿ ಮಾತನಾಡಿದವರು ಏನೇನು ಆಗಿ ಹೋಗಿದ್ದಾರೆ. ನಮ್ಮ ಆರಾಧನೆ ಬಗ್ಗೆ ಮಾತನಾಡುವವರಿಗೆ ದೇವರು ಶಿಕ್ಷೆ ನೀಡುತ್ತಾನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: 5 ವರ್ಷದಲ್ಲಿ 166 ಕ್ರಿಮಿನಲ್‌ಗಳ ಎನ್‌ಕೌಂಟರ್‌, 4453 ಮಂದಿಗೆ ಗಾಯ: ಯೋಗಿ ಆದಿತ್ಯನಾಥ್‌

    ಹಿಂದುತ್ವದ ಹೆಸರು ಹೇಳಿ ರಾತ್ರಿ ಹಿಂದೂ ವಿರೋಧಿ ಕೆಲಸ ಮಾಡುತ್ತಾರೆ. ಅಂತಹವರು ವಿಜಯಪುರದಲ್ಲೂ ಕೆಲವರಿದ್ದಾರೆ. ಹಿಂದೂ ವಿರೋಧಿ ಮಾತನಾಡಿದರೆ ಶಹಬ್ಬಾಸ್‌ ಎನ್ನುತ್ತಾರೆ ಎಂದು ಹೇಳಿದರು.

    ನಾನು ಯಾರನ್ನು ಬಿಡಲ್ಲ, ಅಬ್ಬರಿಸುತ್ತೇನೆ. ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ  ಅಬ್ಬರಿಸಲು ಸಮಯ ಇಲ್ಲ. ನಾನು ಯಾರ ಮನೆಗೂ ಹೋಗಿ ನಿಂತಿಲ್ಲ ಎಂದರು.

    Live Tv
    [brid partner=56869869 player=32851 video=960834 autoplay=true]

  • ಲಾರಿ, ಕಾರ್ ನಡುವೆ ಮುಖಾಮುಖಿ ಡಿಕ್ಕಿ – ಬಿಜೆಪಿ ಮುಖಂಡನಿಗೆ ಗಾಯ

    ಲಾರಿ, ಕಾರ್ ನಡುವೆ ಮುಖಾಮುಖಿ ಡಿಕ್ಕಿ – ಬಿಜೆಪಿ ಮುಖಂಡನಿಗೆ ಗಾಯ

    ವಿಜಯಪುರ: ಲಾರಿ (Lorry) ಹಾಗೂ ಕಾರ್ (Car) ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬಿಜೆಪಿ (BJP) ಮುಖಂಡರೊಬ್ಬರು ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಬೆನ್ನಿಹಳ್ಳದ ಬಳಿ ನಡೆದಿದೆ.

    ಲಾರಿ ಹಾಗೂ ಕಾರ್ ನಡುವೆ ಮೂಖಾಮುಖಿ ಡಿಕ್ಕಿಯಾದ ಪರಿಣಾಮ ಕಾರ್‌ನಲ್ಲಿದ್ದ ಬಿಜೆಪಿ ಮುಖಂಡ ಅಪ್ಪುಗೌಡ ಪಾಟೀಲ್ (Appugowda Patil Managuli) ಮನಗೂಳಿಗೆ ಗಾಯಗಳಾಗಿವೆ. ಗಾಯಾಳು ಅಪ್ಪುಗೌಡರನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ವ್ಯರ್ಥವಾಯ್ತು 10 ಕೋಟಿ ಕೋವಿಶೀಲ್ಡ್ ಡೋಸ್

    ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಕೊಲ್ಹಾರ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ನಾನು ಬದುಕಲು ಅರ್ಹನಲ್ಲ- ಮಂಡ್ಯದ ರೇಪ್ ಆರೋಪಿಗೆ ಈಗ ಪಶ್ಚಾತ್ತಾಪ

    Live Tv
    [brid partner=56869869 player=32851 video=960834 autoplay=true]

  • ಆರ್‌ಎಸ್‌ಎಸ್, ಬಿಜೆಪಿ ಬ್ರಿಟಿಷರ ಜೊತೆಗೆ ಶಾಮೀಲಾಗಿದ್ರು: ರಾಮಲಿಂಗಾ ರೆಡ್ಡಿ

    ಆರ್‌ಎಸ್‌ಎಸ್, ಬಿಜೆಪಿ ಬ್ರಿಟಿಷರ ಜೊತೆಗೆ ಶಾಮೀಲಾಗಿದ್ರು: ರಾಮಲಿಂಗಾ ರೆಡ್ಡಿ

    ವಿಜಯಪುರ: ಸ್ವಾತಂತ್ರ‍್ಯ ಹೋರಾಟದಲ್ಲಿ (Freedom Fight) ಆರ್‌ಎಸ್‌ಎಸ್ (RSS), ವಿಹೆಚ್‌ಪಿ (VHP) ಹಾಗೂ ಬಿಜೆಪಿ (BJP) ಭಾಗಿಯಾಗಿರಲಿಲ್ಲ. ಅವರು ಬ್ರಿಟಿಷರ (British) ಜೊತೆಗೆ ಶಾಮೀಲಾಗಿದ್ದರು. ಆದರೂ ಅವರು ತಮ್ಮನ್ನು ತಾವು ಸ್ವಾತಂತ್ರ್ಯ ಹೋರಾಟಗಾರರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ವಾಗ್ದಾಳಿ ನಡೆಸಿದ್ದಾರೆ.

    ವಿಜಯಪುರದಲ್ಲಿ ಮಾತನಾಡಿದ ರಾಮಲಿಂಗಾ ರೆಡ್ಡಿ, ಸ್ವಾತಂತ್ರ‍್ಯ ಹೋರಾಟದಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು. ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸದೇ ತಾವೇ ಆರ್‌ಎಸ್‌ಎಸ್, ಬಿಜೆಪಿಯವರು ಸ್ವಾತಂತ್ರ‍್ಯ ಹೋರಾಟಗಾರರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳಿಕೊಂಡು ರಾಜಕೀಯ ಮಾಡುತ್ತಿರುವುದರೊಂದಿಗೆ, ದೇಶವನ್ನು ಛಿದ್ರ ಛಿದ್ರ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ರಾಯಚೂರು ಏಮ್ಸ್ ಹೋರಾಟಗಾರರಿಂದ ಶಾಸಕನ ಮನೆಗೆ ಮುತ್ತಿಗೆ

    ಬಿಜೆಪಿ ಭಾರತೀಯ ಜನತಾ ಪಕ್ಷ ಎನ್ನುವ ಬದಲಿಗೆ ಬುರುಡೆ ಜನರ ಪಕ್ಷ ಹೆಸರು ಬದಲಾಯಿಸಿಕೊಳ್ಳಬೇಕು. ಅವರು ಸುಳ್ಳು ಹೇಳಿ ಜನರನ್ನು ತಪ್ಪು ದಾರಿಗೆ ತರುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ ಎಂದರು.

    ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನೆಲೆ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಪರ ರಾಮಲಿಂಗಾ ರೆಡ್ಡಿ ಬ್ಯಾಟ್ ಬೀಸಿ, ನಾವು ಕರ್ನಾಟಕದವರು ಎಂದರು. ರಾಹುಲ್ ಗಾಂಧಿ ಮಾತಿನಂತೆ ಚುನಾವಣೆ ಆಗುತ್ತಿದೆ. ಶಶಿ ತರೂರು, ಖರ್ಗೆ ಮಧ್ಯೆ ಚುನಾವಣೆ ಆಗುತ್ತಿದೆ. ಯಾರು ಗೆಲ್ಲುತ್ತಾರೆ ನೋಡೋಣ ಎಂದರು. ಇದನ್ನೂ ಓದಿ: ಹಾಸನದಲ್ಲಿ ಭೀಕರ ರಸ್ತೆ ಅಪಘಾತ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

    Live Tv
    [brid partner=56869869 player=32851 video=960834 autoplay=true]

  • ವಿಜಯಪುರದಲ್ಲಿ ಮತ್ತೆ ಭೂಕಂಪ – ಬೆಚ್ಚಿಬಿದ್ದ ಜನತೆ

    ವಿಜಯಪುರ: ಐತಿಹಾಸಿಕ ಜಿಲ್ಲೆಯಲ್ಲಿ ಮತ್ತೆ ಭೂಕಂಪದ Earthquake) ಆತಂಕ ಶುರುವಾಗಿದೆ. ಪದೇ ಪದೇ ಭೂಕಂಪನ ಆಗುತ್ತಿರುವುದಕ್ಕೆ ಜನ ಬೆಚ್ಚಿಬಿದ್ದಿದ್ದಾರೆ.

    ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲೆ ನಿರಂತರ ಮಳೆ ಸುರಿಯುತ್ತಿದೆ. ಈ ನಡುವೆ ಬುಧವಾರ ರಾತ್ರಿ 11:42ಕ್ಕೆ ಹಾಗೂ ಗುರುವಾರ ಬೆಳಗ್ಗೆ 6:19ಕ್ಕೆ ನಗರದ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಒಂದೇ ರಾತ್ರಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ಇದನ್ನೂ ಓದಿ: 1 ತಿಂಗಳೊಳಗೆ ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್‍ಗಳ ಸಂಚಾರ: KSRTC ಅಧ್ಯಕ್ಷ ಎಂ.ಚಂದ್ರಪ್ಪ

    ನಗರದ ರೈಲ್ವೆಸ್ಟೇಷನ್ ಏರಿಯಾ, ರಂಭಾಪುರ ಬಡಾವಣೆ, ಬಸವೇಶ್ವರ ನಗರ, ಗೋಳಗುಮ್ಮಟ ಏರಿಯಾ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದೆ. ಪದೇ ಪದೇ ಈ ರೀತಿ ಭೂಮಿ ಕಂಪಿಸುತ್ತಿರುವುದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ 80 ಸ್ಥಾನ ಗಳಿಸಿದ್ರೆ ನನ್ನ ಬೆರಳು ಕತ್ತರಿಸಿ ಕೊಡುತ್ತೇನೆ: ಶಿವನಗೌಡ ನಾಯಕ

    ಈ ವಿಚಾರವಾಗಿ ಇತ್ತೀಚೆಗಷ್ಟೇ ವಿಧಾನ ಪರಿಷತ್‍ನಲ್ಲು ಮಾತನಾಡಿದ ಸುನೀಲಗೌಡ ಪಾಟೀಲ (Sunil Gowda Basanagowda Patil) ಅವರು, ಜಿಲ್ಲೆಯಲ್ಲಿ ಈವರೆಗೆ ಸುಮಾರು 52 ದಾರಿ ಭೂಕಂಪನವಾಗಿದೆ. ಮನೆಯ ಹೊರಗಡೆ ಮಲಗಬೇಕೆಂದರೆ ಮಳೆ ಇರುತ್ತದೆ. ಮನೆ ಒಳಗಡೆ ಕುಳಿತುಕೊಳ್ಳಬೇಕೆಂದರೆ ಭೂಕಂಪನದ ಭೀತಿಯಿದೆ. ಈ ಕುರಿತು ಜಿಲ್ಲಾಡಳಿತ ಮತ್ತು ಗಣಿ ಭೂವಿಜ್ಞಾನ ಇಲಾಖೆ ಸ್ಪಷ್ಟ ತಾಂತ್ರಿಕ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ತಜ್ಞರನ್ನು ಕರೆಯಿಸಿ ಭೂಕಂಪನಕ್ಕೆ ಕಾರಣ ಕುರಿತು ಅಧ್ಯಯನ ನಡೆಸಬೇಕು. ಈ ಮೂಲಕ ಜನರಲ್ಲಿರುವ ಭಯವನ್ನು ಹೊಗಲಾಡಿಸಬೇಕು ಎಂದು ಒತ್ತಾಯಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ದೇಶದಲ್ಲಿ ನಿಜವಾದ ಅಲ್ಪಸಂಖ್ಯಾತರು ಬ್ರಾಹ್ಮಣರು: ಯತ್ನಾಳ್

    ದೇಶದಲ್ಲಿ ನಿಜವಾದ ಅಲ್ಪಸಂಖ್ಯಾತರು ಬ್ರಾಹ್ಮಣರು: ಯತ್ನಾಳ್

    ವಿಜಯಪುರ: ಈ ದೇಶದಲ್ಲಿ ನಿಜವಾದ ಅಲ್ಪಸಂಖ್ಯಾ ತರು ಅಂದ್ರೆ ಬ್ರಾಹ್ಮಣರು. ಅವರನ್ನ ಅಲ್ಪಸಂಖ್ಯಾತರ ಪಟ್ಟಿಗೆ ಸೇರಿಸಬೇಕು ಅಂತಾ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (BasanaGauda Patil Yatnal) ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬ್ರಾಹ್ಮಣರು ಕೇವಲ ಶೇಕಡಾ 2 ರಿಂದ 3 ರಷ್ಟಿದ್ದಾರೆ. ನಿಜವಾದ ಅಲ್ಪ ಸಂಖ್ಯಾತರು ಬ್ರಾಹ್ಮಣರು. ಅಲ್ಪ ಸಂಖ್ಯಾತ ಪಟ್ಟಿಯಲ್ಲಿ ಬ್ರಾಹ್ಮಣ (Brahmins) ರನ್ನ ಸೇರಿಸಬೇಕು, ಇದು ನನ್ನ ವಾದ ಎಂದರು.

    ಮುಸ್ಲಿಮರು ಅಲ್ಪ ಸಂಖ್ಯಾತರು ಅಲ್ಲವೇ ಅಲ್ಲಾ. ಒಂದು ಜನಾಂಗದಷ್ಟಿರುವ ಮುಸ್ಲಿಂ ಹೇಗೆ ಅಲ್ಪ ಸಂಖ್ಯಾತರಾಗ್ತಾರೆ. ದೇಶದ್ರೋಹಿ ಕೆಲಸ ಮಾಡೋದು, ಪಾಕಿಸ್ತಾನ (Pakistan) ದ ಪರ ಮಾತನಾಡೋದು ಈಗ ಮೀಸಲಾತಿ ಬೇಕು ಅಂದ್ರೆ ಹೇಗೆ ಎಂದು ವಾಗ್ದಾಳಿ ನಡೆಸಿದರು.

    ಬಹಳ ಸೌಲಭ್ಯ ಬೇಕಿದ್ದರೆ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಕಿಡಿ ಕಾರಿದರು.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯ ವಿರುದ್ಧ ಪೋಸ್ಟ್‌ ಮಾಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅಮಾನತು

    ಸಿದ್ದರಾಮಯ್ಯ ವಿರುದ್ಧ ಪೋಸ್ಟ್‌ ಮಾಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅಮಾನತು

    ವಿಜಯಪುರ: ಸಿದ್ದರಾಮಯ್ಯ (Siddaramaiah) ವಿರುದ್ಧ ಪೋಸ್ಟ್‌ ಮಾಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅಮಾನತು ಮಾಡಲಾಗಿದೆ. ವಿಜಯಪುರ (Vijayapura) ಗ್ರಾಮಾಂತರ ಠಾಣೆ ಕಾನ್ಸ್‌ಟೇಬಲ್ ರಾಜಶೇಖರ ಖಾನಾಪುರ ಅಮಾನತು ಆದ ಕಾನ್ಸ್‌ಟೇಬಲ್.

    ಅಮಾನತು ಮಾಡಿ ವಿಜಯಪುರ ಎಸ್‌ಪಿ ಎಚ್.ಡಿ.ಆನಂದಕುಮಾರ್ ಆದೇಶ ಹೊರಡಿಸಿದ್ದಾರೆ. ʻಪೊಲೀಸರನ್ನು ಬೈಯುವ ನೀನು ಪೊಲೀಸ್ ಎಸ್ಕಾರ್ಟ್ ಇಲ್ಲದೆ ಮನೆಗೆ ಹೋಗುʼ ಎಂದು ಪೇದೆ ರಾಜಶೇಖರ ಪೋಸ್ಟ್ ಮಾಡಿದ್ದ. ಇದನ್ನೂ ಓದಿ: BJP ಹಿಂದೂ-ಮುಸ್ಲಿಂ, ದಲಿತ-ಬ್ರಾಹ್ಮಣರ ನಡುವೆ ಜಗಳ ತಂದಿಡುತ್ತಿದೆ: ಸುರ್ಜೇವಾಲಾ ಕಿಡಿ

    ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಭಾರಿ ವೈರಲ್ ಆಗಿತ್ತು. ಪೇದೆಯ ಪೋಸ್ಟ್ ವಿರುದ್ಧ ಕುರುಬ ಸಮುದಾಯ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರು.

    ಪೇದೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಅಭಿಮಾನಿಗಳು ಆಗ್ರಹಿಸಿದ್ದರು. ಪರಿಣಾಮವಾಗಿ ಪೇದೆಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ಕುಂಭ ಕಳಶ ಹೊತ್ತು ಮಹಿಳೆಯರೊಂದಿಗೆ ಹೆಜ್ಜೆ ಹಾಕಿದ ಶಶಿಕಲಾ ಜೊಲ್ಲೆ

    Live Tv
    [brid partner=56869869 player=32851 video=960834 autoplay=true]

  • SIMI ಸಂಘಟನೆ ಹುಟ್ಟಿಕೊಂಡಿದ್ದೇ ವಿಜಯಪುರದಿಂದ: ಯತ್ನಾಳ್

    SIMI ಸಂಘಟನೆ ಹುಟ್ಟಿಕೊಂಡಿದ್ದೇ ವಿಜಯಪುರದಿಂದ: ಯತ್ನಾಳ್

    ವಿಜಯಪುರ: ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (SIMI)ಯ ಮತ್ತೊಂದು ಪ್ರತಿರೂಪ ಪಿಎಫ್‍ಐ. ಸಿಮಿ ಸಂಘಟನೆ ಹುಟ್ಟಿಕೊಂಡಿದ್ದೇ ವಿಜಯಪುರದಿಂದ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದಾರೆ.

    ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಮುಖಂಡರು, ಕಾರ್ಯಕರ್ತರ ಬಂಧನ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶಾಸಕರು, ಪಿಎಫ್‍ಐ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬ್ಯಾನ್ ಮಾಡಬೇಕು. ಎರಡು ದೇಶ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ.

    ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಯವರಿಗೆ ಸಾರ್ವಜನಿಕ ಪ್ರದೇಶದಲ್ಲಿ ಬಾಂಬ್ ಹಾಕುವಂತಹ ಪ್ರಯತ್ನ ಮಾಡಿದ್ರು. ಅನೇಕ ಗಂಭೀರ ಆರೋಪಗಳು ದೇಶದಲ್ಲಿ ಸಾಕಷ್ಟು ಚರ್ಚೆಗೊಳಪಟ್ಪಿದ್ದವು. ಕೇಂದ್ರ ಸರ್ಕಾರ ಅತ್ಯಂತ ದೃಢ ನಿಲುವು ತಗೊಂಡಿದೆ ಎಂದರು. ಇದನ್ನೂ ಓದಿ: PFI, SDPI ಬೆಳೆಯಲು ಕಾರಣವೇ ಸಿದ್ದರಾಮಯ್ಯ: ನಳಿನ್ ಕುಮಾರ್ ಕಟೀಲ್

    ಇಡೀ ದೇಶದ ಇತಿಹಾಸದಲ್ಲಿ ಒಂದೇ ರಾತ್ರಿ 200 ಕಡೆಗಳಲ್ಲಿ ದಾಳಿ ಮಾಡಿದಾಗ ವಿದೇಶಿ ಹಣ (Foreign Money) ದ ದಾಖಲೆ ಸಿಕ್ಕಿವೆ. ಎರಡು ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಅನ್ನೋದು ದೇಶಭಕ್ತರ ಆಗ್ರಹವಿದೆ. ಪ್ರಧಾನಿ, ಗೃಹಮಂತ್ರಿಗಳು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ನಿಶ್ಚಿತವಾಗಿ ಶೀಘ್ರದಲ್ಲೇ ಪಿಎಫ್‍ಐ, ಎಸ್‍ಡಿಪಿಐ ಸಂಘಟನೆಗಳು ಬ್ಯಾನ್ ಆಗುತ್ತವೆ ಅನ್ನೋ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

    ಸಿಮಿ ದೇಶ ವಿರೋಧಿ ಚಟುವಟಿಕೆ ಮೊದಲು ಆರಂಭವಾಗಿದ್ದೇ ವಿಜಯಪುರದಲ್ಲಿ. ಅದು ಇಡೀ ದೇಶದಲ್ಲಿ ಬೆಳೆದು ಸಿಮಿ ಆಗಿತ್ತು. ನಂತರ ಪಿಎಫ್‍ಐ ಆಗಿ ಪರಿವರ್ತನೆ ಆಗಿದೆ. ಯಾರೇ ಇದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    Live Tv
    [brid partner=56869869 player=32851 video=960834 autoplay=true]

  • PFI, SDPI ಬೆಳೆಯಲು ಕಾರಣವೇ ಸಿದ್ದರಾಮಯ್ಯ: ನಳಿನ್ ಕುಮಾರ್ ಕಟೀಲ್

    PFI, SDPI ಬೆಳೆಯಲು ಕಾರಣವೇ ಸಿದ್ದರಾಮಯ್ಯ: ನಳಿನ್ ಕುಮಾರ್ ಕಟೀಲ್

    ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯರಿಂದಲೇ ಪರಿಸ್ಥಿತಿ ಗಂಭೀರವಾಗಿದೆ ಎಂದು ವಿಜಯಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ರಾಜ್ಯದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)ಹಾಗೂ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಬೆಳೆಯಲು ಕಾರಣವೇ ಸಿದ್ದರಾಮಯ್ಯ. ಸಿದ್ದರಾಮಯ್ಯ (Siddaramaiah) ಅವಧಿಯಲ್ಲೆ ದೇಶ ವಿರೋಧಿ ಸಂಘಟನೆಗಳು ಬೆಳೆದಿವೆ. ನಮ್ಮ ಸರ್ಕಾರ ಈಗ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ. ದೇಶಾದ್ಯಂತ ರಾಷ್ಟ್ರೀಯ ತನಿಖಾ ದಳ (NIA) ದಾಳಿ ನಡೆಸಿದೆ. ಅತಿ ಹೆಚ್ಚು ನಮ್ಮ ರಾಜ್ಯದವರನ್ನೇ ಬಂಧಿಸಿದ್ದಾರೆ ಎಂದರು.

    ಪಿಎಫ್‍ಐ ನಿಷೇಧಕ್ಕೆ ದೇಶಭಕ್ತರ ಬೇಡಿಕೆ ಇದೆ. ಅದಕ್ಕೆ ಸಾಕ್ಷ್ಯಾಧಾರಗಳ ಸಂಗ್ರಹ ನಡೆಯುತ್ತಿದೆ. ನಮ್ಮ ಸರ್ಕಾರ (BJP Government) ಕಟ್ಟುನಿಟ್ಟಿನ ಕ್ರಮದ ಜೊತೆಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯಾದ್ಯಂತ PFI, SDPI ಕಾರ್ಯಕರ್ತರಿಗೆ ಪೊಲೀಸ್ ಶಾಕ್‌ – 40ಕ್ಕೂ ಹೆಚ್ಚು ಮಂದಿ ವಶಕ್ಕೆ

    ಪಿಎಫ್‍ಐ ಮೇಲೆ ದಾಳಿ ರಾಜಕೀಯ ಪ್ರೇರಿತ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲದಕ್ಕೂ ರಾಜಕೀಯ (Political) ಪ್ರೇರಿತ ಎನ್ನುತ್ತಾರೆ. ಭಯೋತ್ಪಾದನೆಗೆ ರಾಜಕೀಯ ಪ್ರೇರಣೆ ನೀಡಿದವರು ಯಾರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ದಸರಾ ವೇಳೆ RSS, BJP ನಾಯಕರ ಮೇಲೆ ದಾಳಿಗೆ PFI ಸಂಚು

    Live Tv
    [brid partner=56869869 player=32851 video=960834 autoplay=true]