Tag: ವಿಜಯಪುರ

  • ಚುನಾವಣಾ ಆಯೋಗ ಸೂಚನೆ – ಮತದಾರರ ಪಟ್ಟಿ ಪರಿಷ್ಕರಣೆ ಶುರು

    ಚುನಾವಣಾ ಆಯೋಗ ಸೂಚನೆ – ಮತದಾರರ ಪಟ್ಟಿ ಪರಿಷ್ಕರಣೆ ಶುರು

    ವಿಜಯಪುರ: ಚುನಾವಣಾ ಆಯೋಗದ (Election Commission) ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಣೆ (Voter List Verification) ಕಾರ್ಯ ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ಶನಿವಾರ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ್ ಅವರು ನಗರದ ವಿವಿಧ ಮತಗಟ್ಟೆ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ವಿಜಯಪುರ ನಗರದ ಮತಗಟ್ಟೆ ಸಂಖ್ಯೆ 153 ಹಾಗೂ ಮತಗಟ್ಟೆ ಸಂಖ್ಯೆ 119ರ ಸ್ವತಂತ್ರ ಕಾಲೋನಿ, ಖಾಜಾನಗರ, ಗುಂಡಬಾವಡಿ ಪ್ರದೇಶದ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ಸಜ್ಜಾದ ಹರಿಪ್ರಿಯಾ – ಸೂಪರ್‌ ಜೋಡಿ ಅಂದ್ರು ಫ್ಯಾನ್ಸ್‌

    ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ತಮ್ಮ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಹೊಸ ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ, ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವುದು ಹಾಗೂ ವಿಳಾಸದ ಬದಲಾವಣೆಗಳಿದ್ದರೆ ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು. ಪ್ರಸ್ತುತ ಕಾಯ್ದೆಯಲ್ಲಿ ಜನವರಿ 1, ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1 ಅನ್ನು ನಾಲ್ಕು ಅರ್ಹತಾ ದಿನಾಂಕಗಳೆಂದು ನಿಗದಿಪಡಿಸಲಾಗಿದೆ. ಅರ್ಹ ಯುವ ಮತದಾರರು (Voters) ತಮ್ಮ ಹೆಸರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.  

    ಮತಗಟ್ಟೆ ಅಧಿಕಾರಿಗಳು ಸಹ ಯಾವುದೇ ಮತದಾರ ಮತದಾನದಿಂದ ವಂಚಿತವಾಗದಂತೆ ಜವಾಬ್ದಾರಿಯಿಂದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕೈಗೊಳ್ಳುವಂತೆ ಸಲಹೆ ನೀಡಿದರು. ಇದನ್ನೂ ಓದಿ: ಒಕ್ಕಲು ಮಕ್ಕಳು ಒಕ್ಕಲುತನ ಮೀರಿ ಉದ್ಯಮಿಗಳಾಗಲು ಶ್ರಮಿಸಬೇಕು – ಸಿ.ಎನ್.ಅಶ್ವಥ್ ನಾರಾಯಣ ಕರೆ

    ದೋಷಗಳಿಲ್ಲದೇ ಮತದಾರ ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚನೆ ನೀಡಿದ ಅವರು, ಮತದಾರ ಲಿಂಗಾನುಪಾತ ಹಾಗೂ 18 ವರ್ಷದ ಯುವ ಮತದಾರರು ಮತದಾರರ ಪಟ್ಟಿಯ ಅನುಪಾತ ಕುರಿತು ಮತಗಟ್ಟೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.

    ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದಾದರೂ ಗೊಂದಲ, ಸಮಸ್ಯೆಗಳಿದ್ದಲ್ಲಿ ಜಿಲ್ಲಾ ದೂರು ನಿರ್ವಹಣಾ ಕೇಂದ್ರದ ಟೋಲ್ ಫ್ರೀ ಸಂಖ್ಯೆ 1950ಕ್ಕೆ ಸಂಪರ್ಕಿಸುವಂತೆ ಮಾಹಿತಿ ನೀಡಿದರು.

    ಈ ಸಂದರ್ಭದಲ್ಲಿ ವಿಜಯಪುರ ತಹಶೀಲ್ದಾರ ಸಿದರಾಯ ಭೋಸಗಿ ಸೇರಿದಂತೆ, ಮತಗಟ್ಟೆ ಅಧಿಕಾರಿಗಳು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಅಜ್ಞಾತ ಸಖಿ ಸಹವಾಸ, ಲಕ್ಷ ಲಕ್ಷ ಗೋತ – ಬಣ್ಣದ ಮಾತಿನಿಂದ 41 ಲಕ್ಷ ಪೀಕಿದ ಮಾಯಾಂಗನೆ!

    ಅಜ್ಞಾತ ಸಖಿ ಸಹವಾಸ, ಲಕ್ಷ ಲಕ್ಷ ಗೋತ – ಬಣ್ಣದ ಮಾತಿನಿಂದ 41 ಲಕ್ಷ ಪೀಕಿದ ಮಾಯಾಂಗನೆ!

    ವಿಜಯಪುರ: ಇತ್ತಿಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ (Social Media) ಸದುಪಯೋಗದ ಬದಲು ದುರುಪಯೋಗವೇ ಹೆಚ್ಚಾಗುತ್ತಿದೆ. ಇನ್ನು ಕೆಲವರಂತು ಇದನ್ನೇ ಬಂಡವಾಳ ಮಾಡಿಕೊಂಡು ಹೊಸ ಹೊಸ ವಿನೂತನ ಹಣ ದೋಚಿ ಪರಾರಿಯಾಗುವ ಸುದ್ದಿಗಳು ಬಂದಿವೆ. ಇಷ್ಟಾದ್ರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಬೆಳದಿಂಗಳ ಬಾಲೆಯ ಬಲೆಗೆ ಬಿದ್ದು ಅಮಾಯಕನೋರ್ವ ಲಕ್ಷ ಲಕ್ಷ ಕಳೆದುಕೊಂಡು ಕಂಗಾಲಾದಿದ್ದಾನೆ.

    ಮೂಲತಃ ವಿಜಯಪುರ ಜಿಲ್ಲೆಯ ಅಲಮೇಲ ತಾಲೂಕಿನ ಬಗಲೂರ ಗ್ರಾಮದ ಪರಮೇಶ್ವರ್ (Parameshwar) ಹಿಪ್ಪರಗಿ. ಇವರು ಸದ್ಯ ತೆಲಾಂಗಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿ. ತನ್ನ ಸ್ವಗ್ರಾಮದಲ್ಲಿದ್ದಾಗ ಕಳೆದ ಜೂನ್ 29 ರಂದು ಮಂಜುಳಾ ಕೆ.ಆರ್ ಎಂಬ ಫೇಸ್ ಬುಕ್ (Facebook) ಅಕೌಂಟ್‍ನಿಂದ ಫ್ರೇಂಡ್ ರಿಕ್ವೆಸ್ಟ್ ಬಂದಿದೆ. ಅದನ್ನ ಪರಮೇಶ್ವರ್ ಕನ್ ಫರ್ಮ ಮಾಡ್ತಿದಂತೆ ಆ ಕಡೆಯಿಂದ ಯುವತಿ ಮೆಸೆಂಜರ್‍ನಲ್ಲಿ ಹಾಯ್ ಅಂತಾ ಸಂದೇಶ ಕಳಿಸಿ ಪರಮೇಶ್ವರನನ್ನ ಖೆಡ್ಡಾಕ್ಕೆ ಕೆಡವಿದ್ದಾಳೆ. ನಂತರ ಪ್ರತಿ ದಿನ ಮೆಸೇಜ್ ಮಾಡುವ ಮೂಲಕ ಅಜ್ಞಾತ ಸಖಿಯೊಂದಿಗೆ ಪರಮೇಶ್ವರ್ ಸಲುಗೆ ಬೆಳಸಿಕೊಂಡಿದ್ದಾನೆ.

    BRIBE

    ಅಕ್ಟೋಬರ್ 14 ರಂದು ತಾಯಿ ಆರೋಗ್ಯ ಸರಿಯಿಲ್ಲ 700 ರೂ ಫೋನ್ ಪೇ ಮಾಡಲು ಸಂದೇಶ ಬಂದಿದೆ. ಆಗ ಪರಮೇಶ್ವರ 2000 ರೂ ಹಾಕಿದ್ದಾನೆ. ನಂತರ ಒಂದು ವಾರದ ಕಳೆದ ಮೇಲೆ ತಾಯಿ ಮೃತಳಾಗಿದ್ದಾಳೆ ಅಂತಾ 2000 ರೂ. ಕಳಿಸಲು ಸಂದೇಶ ಬಂದಿದೆ. ಆಗಲೂ ಕೂಡ ಪರಮೇಶ್ವರ್ 2000 ರೂ ಹಾಕಿದ್ದಾನೆ. ಅದೇ ರೀತಿ ಬೆಳದಿಂಗಳ ಬಾಲೆ ಕೇಳಿದಷ್ಟು, ಕೇಳಿದಾಗೆಲ್ಲ ಪರಮೇಶ್ವರ ಹಣ ಹಾಕಿದ್ದಾನೆ. ಕೆಲ ದಿನಗಳ ನಂತರ ಮಂಜುಳಾ ಕರೆ ಮಾಡಿ ಪರಮೇಶ್ವರ್‍ಗೆ ತಾನು ಐಎಎಸ್ (IAS) ಪರೀಕ್ಷೆ ಪಾಸ್ ಆಗಿದ್ದೇನೆ. ಡಿಸಿ ಪೋಸ್ಟ್ ಸಿಗುತ್ತದೆ. ಸದ್ಯ ಹಾಸನದಲ್ಲಿದ್ದೇನೆ ನನ್ನನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಬೆಂಗಳೂರಿಗೆ ಹೋಗಬೇಕಿದ್ದು, ಖರ್ಚಿಗೆ ಹಣವಿಲ್ಲ. ಹಣಕಾಸಿನ ಸಹಾಯ ಮಾಡಿದ್ರೆ ಮದುವೆ ಆಗುತ್ತೇನೆ ಅಂತಾ ಬುರುಡೆ ಬಿಟ್ಟಿದ್ದಾಳೆ. ಇದನ್ನೂ ಓದಿ: ಚಿಲುಮೆ ಅಕ್ರಮ ಪ್ರಕರಣ – ಪ್ರಮುಖ ಆರೋಪಿ ರವಿಕುಮಾರ್ ಬಂಧನ

    ಇದನ್ನ ನಂಬಿ ದುರಾಸೆಗೆ ಬಿದ್ದ ಪರಮೇಶ್ವರ್ 50 ಸಾವಿರ ರೂ ಹಾಕಿದ್ದಾನೆ. ಮತ್ತೆ ಕೆಲ ದಿನಗಳ ನಂತರ ಮತ್ತಷ್ಟು ಸಲುಗೆಯಿಂದ, ಪ್ರೀತಿಯಿಂದ ಮಾತನಾಡಿ ಹಂತ, ಹಂತವಾಗಿ ಅಷ್ಟಿಷ್ಟಲ್ಲ ಬರೋಬ್ಬರಿ 41.26 ಲಕ್ಷ ಪೀಕಿದ್ದಾಳೆ. ನಂತರ ತನ್ನ ಕಿಸೆ ಖಾಲಿ ಆಗಿದೆ ಅಂತಾ ಪರಮೆಶ್ವರ್ ಮಂಜುಳಾಗೆ ಹೇಳಿದ್ದಾನೆ. ಆಗ ಪಾಪ ಸ್ವಲ್ಪ ಖರ್ಚಿಗೆ ಇರ್ಲಿ ಅಂತಾ ಪರಮೇಶ್ವರ್‍ಗೆ ಮಂಜುಳಾ 2.21 ಲಕ್ಷ ರೂ ಹಾಕಿದ್ದಾಳೆ. ತದನಂತರ ಮಂಜುಳಾ ಮತ್ತೆ ಹಣಕ್ಕೆ ಪರಮೇಸ್ವರ್‍ಗೆ ಬೇಡಿಕೆ ಇಟ್ಟಿದ್ದಾಳೆ. ಈ ವೇಳೆ ಬೆಳದಿಂಗಳ ಬಾಲೆಯ ಮೇಲೆ ಸಂಶಯ ಬಂದು ಪರಮೇಶ್ವರ್ ನವೆಂಬರ್ 15ರಂದು ವಿಜಯಪುರದ ಸಿಇಎನ್ ಪೋಲಿಸ್ ಠಾಣೆಯಲ್ಲಿ ಮಂಜುಳಾ ವಿರುದ್ಧ ವಂಚನೆ ಕೇಸ್ ದಾಖಲಿಸಿದ್ದಾನೆ. ಸದ್ಯ ಸಿಂದಗಿ ಪೊಲಿಸ್ ಠಾಣೆಗೆ ಕೇಸ್ ವರ್ಗಾವಣೆ ಆಗಿದ್ದು, ಮಹಾ ವಂಚಕಿ ಬೆಳದಿಂಗಳ ಬಾಲೆ ಮಂಜುಳಾಗಾಗಿ ಬಲೆ ಬೀಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗೋಳಗುಮ್ಮಟದ ಮೇಲಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

    ಗೋಳಗುಮ್ಮಟದ ಮೇಲಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

    ವಿಜಯಪುರ: ಗೋಳಗುಮ್ಮಟ (Gol Gumbaz) ವೀಕ್ಷಣೆಗೆ ಹೋಗಿದ್ದ ವ್ಯಕ್ತಿಯೊಬ್ಬ (Man) ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ.

    ಸಲೀಂ ತಿಕೋಟ್ಕರ್ (55) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಸಲೀಂ ತಿಕ್ಕೋಟ್ಕರ್ ವಿಶ್ವ ವಿಖ್ಯಾತ ಗೋಳಗುಮ್ಮಟದ ವೀಕ್ಷಿಸಲೆಂದು ಬಂದಿದ್ದ. ಎಲ್ಲರ ಜೊತೆ ಸಲೀಂ ಸರತಿ ಸಾಲಿನಲ್ಲಿ ನಿಂತು ಅಂತಸ್ತಿನ ಮೇಲ್ಭಾಗಕ್ಕೆ ಹೋಗಿದ್ದಾನೆ. ಈ ವೇಳೆ ಗೋಳಗುಮ್ಮಟದ ಅಂತಸ್ತಿನ ಮೇಲಿನಿಂದ ಆವರಣದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಇನ್ಮುಂದೆ ವಿದ್ಯುತ್‌ ಬಿಲ್ ಕಟ್ಟದೇ ಇದ್ದರೆ ಸಂಪರ್ಕವೇ ಕಡಿತ

    crime

    ಘಟನೆಯು ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ವಿಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಲೀಂ ಆತ್ಮಹತ್ಯೆ ಹಿಂದಿನ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಪ್ರತಿಪಕ್ಷಗಳಿಗೆ ಕೇಸರಿ ಬಣ್ಣ ಎಂದರೆ ಏಕೆ ತಲೆ ಕೆಡುತ್ತೆ?: ಚಕ್ರವರ್ತಿ ಸೂಲಿಬೆಲೆ

    Live Tv
    [brid partner=56869869 player=32851 video=960834 autoplay=true]

  • ಡ್ಯಾನ್ಸ್ ಮಾಡ್ಬೇಕು ಸಾಂಗ್ ಹಾಕಿ ಅಂದಿದ್ದೆ ತಪ್ಪಾ? – ದಲಿತ ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

    ಡ್ಯಾನ್ಸ್ ಮಾಡ್ಬೇಕು ಸಾಂಗ್ ಹಾಕಿ ಅಂದಿದ್ದೆ ತಪ್ಪಾ? – ದಲಿತ ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

    ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಯುವನೋರ್ವನನ್ನು ಕಂಬಕ್ಕೆ ಕಟ್ಟಿ ನೂರಾರು ಜನರು ಹಲ್ಲೆ ನಡೆಸಿರುವ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ.

    ಜಿಲ್ಲೆಯ ವಿಜಯಪುರ ತಾಲೂಕಿನ ಡೊಮ್ಮನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ದಲಿತ ಯುವಕ ಹಾಡು ಹಾಕಿ ಅಂದಿದ್ದೇ ಈ ಗಲಾಟೆಗೆ ಕಾರಣ ಎನ್ನಲಾಗುತ್ತಿದೆ. ಶುಕ್ರವಾರ ಗ್ರಾಮದಲ್ಲಿ ಉರುಸು ನಡೆಯುತ್ತಿತ್ತು. ಕೆಲ ಯುವಕರು ಟ್ರ್ಯಾಕ್ಟರ್‌ನಲ್ಲಿ ಹಾಡುಗಳನ್ನು ಹಾಕಿ ನೃತ್ಯ ಮಾಡುತ್ತಿದ್ದರು. ಈ ವೇಳೆ ಅದೇ ಗ್ರಾಮದ ದಲಿತ ಯುವಕ ಸಾಗರ್ ಕೂಡ ಹೋಗಿ ನೃತ್ಯ ಮಾಡಿದ್ದಾನೆ. ಆಗ ಟ್ರ್ಯಾಕ್ಟರ್‌ನಲ್ಲಿದ್ದ ಸಂಜು ಬಿರಾದಾರ ಹಾಡನ್ನು ಬಂದ್ ಮಾಡಿದ್ದಾನೆ. ನಂತರ ಸಾಗರ್ ಹಾಡು ಹಾಕಿ ನಾನು ನೃತ್ಯ ಮಾಡಬೇಕು ಎಂದು ಕೇಳಿದ್ದಕ್ಕೆ ಸಂಜು ಒಪ್ಪಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಕೊನೆಗೆ ಸಾಗರ್ ಮೇಲೆ ಹಲ್ಲೆ ಮಾಡಿ ಕಳುಹಿಸಿದ್ದಾರೆ.

    ಮನೆಗೆ ಬಂದ ಸಾಗರ್ ಈ ವಿಷಯವನ್ನು ತನ್ನ ತಮ್ಮನೊಂದಿಗೆ ಹಂಚಿಕೊಂಡಿದ್ದಾನೆ. ಬಳಿಕ ಸಾಗರ್ ತಮ್ಮ ಸಂಜು ಆ್ಯಂಡ್ ಗ್ಯಾಂಗ್ ಜೊತೆಗೆ ಜಗಳವಾಡಿದ್ದಾನೆ. ಇವನೊಂದಿಗೂ ಜಗಳವಾಡಿ, ನಂತರ ಮನೆಯಲ್ಲಿದ್ದ ಸಾಗರ್‌ ಅನ್ನು ಗ್ರಾಮದ ಕೆಲವರು ಹೊರಗೆ ಎಳೆದುಕೊಂಡು ಬಂದು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಕಾಸರಗೋಡಿನ ದಂತ ವೈದ್ಯನ ಸಾವಿನ ಹಿಂದೆ ಲ್ಯಾಂಡ್ ಜಿಹಾದ್ ಸದ್ದು!

    ಮನೆಯಲ್ಲಿದ್ದ ಸಾಗರ್‌ನನ್ನು ಕರೆದುಕೊಂಡು ಹೋಗಲು ಗ್ರಾಮಸ್ಥರು ಬಂದಾಗ ತಾಯಿ ಸಂಗೀತಾ ತಡೆದಿದ್ದಾರೆ. ಅಲ್ಲದೇ ತಪ್ಪಾಗಿದೆ ಬಿಟ್ಟುಬಿಡಿ, ಇನ್ನೊಂದು ಬಾರಿ ಈ ರೀತಿ ಮಾಡಲ್ಲ ಅಂತಾ ಕೈ, ಕಾಲು ಮುಗಿದರು ಬಿಟ್ಟಿಲ್ಲ. ಅಲ್ಲದೇ ಕಂಬಕ್ಕೆ ಕಟ್ಟಿ ಹಲ್ಲೆ ಮಾಡುವಾಗಲೂ ಕೂಡ ಕುಟುಂಬಸ್ಥರು ಮತ್ತು ಸಾಗರ್ ಕೂಡ ತಪ್ಪಾಗಿದೆ ಬಿಡಿ ಅಂತ ಕೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಜಗ್ಗದ ಗ್ರಾಮಸ್ಥರು ಸಾಗರ್ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದನ್ನೂ ಓದಿ: ನಾವು ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿ ಸ್ಟೇಡಿಯಂನ ಹೆಸರು ಬದಲಾಯಿಸುತ್ತೇವೆ – ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

    ಒಂದು ವೇಳೆ ಸಾಗರ್ ತಪ್ಪು ಮಾಡಿದ್ದರೆ ಪೋಲಿಸರಿಗೆ ವಿಷಯ ತಿಳಿಸಿ ದೂರು ಸಲ್ಲಿಸಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡುವುದು ಎಷ್ಟು ಸರಿ ಎಂದು ಕುಟುಂಸ್ಥರು ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ಇದರ ಬಗ್ಗೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸಾಗರ್ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು 14 ಜನರ ಮೇಲೆ ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಜಿಲ್ಲಾಸ್ಪತ್ರೆಗೆ ದಾಖಲಾಗಿ ಸಾಗರ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಒಟ್ಟಾರೆ ಒಂದು ಹಾಡಿನ ವಿಷಯಕ್ಕೆ ಇಷ್ಟೊಂದು ರಾದ್ಧಾಂತ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಸಾಗರ್ ಕುಟುಂಬಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ. ಇದನ್ನೂ ಓದಿ: ಸಹೋದರ ಮೊಬೈಲ್ ಪಾಸ್‌ವರ್ಡ್ ಬದಲಾಯಿಸಿದ್ದಕ್ಕೆ ಯುವತಿ ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

  • ಕಡಿಮೆ ಅಂಕ ಬಂದಿದ್ದಕ್ಕೆ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

    ಕಡಿಮೆ ಅಂಕ ಬಂದಿದ್ದಕ್ಕೆ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

    ವಿಜಯಪುರ: ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಮನನೊಂದು ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾದ ಘಟನೆ ವಿಜಯಪುರ (Vijayapura) ಜಿಲ್ಲೆಯ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ.

    POLICE JEEP

    ಪಟ್ಟಣದ ನೇಕಾರ ಕಾಲೋನಿಯ ಕೀರ್ತನಾ ಮಧುಕರ(21)ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಬಿಎಲ್‍ಡಿಇ ನರ್ಸಿಂಗ್ ಕಾಲೇಜ್‍ನಲ್ಲಿ ಎರಡನೇ ವರ್ಷದ ನರ್ಸಿಂಗ್ ನಲ್ಲಿ ಓದುತ್ತಿದ್ದಳು. ಪರೀಕ್ಷೆಯ ಫಲಿತಾಂಶ ಬಂದಾಗ ನಿರೀಕ್ಷೆಯಷ್ಟು ಅಂಕಗಳು ಬಂದಿರಲಿಲ್ಲ.  ಇದನ್ನೂ ಓದಿ: ಕೊಯಮತ್ತೂರು ಕಾರು ಸ್ಫೋಟ ಪ್ರಕರಣ – 45ಕ್ಕೂ ಹೆಚ್ಚು ಕಡೆ NIA ದಾಳಿ

    ಈ ವಿಚಾರದಿಂದ ಮನನೊಂದಿದ್ದ ಕೀರ್ತನಾ ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: CRPF ನನ್ನ ಮೇಲೆ ಜೈಲಿನಲ್ಲಿ ಹಲ್ಲೆ ನಡೆಸಿದೆ – ಸುಕೇಶ್ ಚಂದ್ರಶೇಖರ್ ಆರೋಪ

    Live Tv
    [brid partner=56869869 player=32851 video=960834 autoplay=true]

  • ರಾಹುಲ್ ಗಾಂಧಿ ವಿದೇಶಿ ತಳಿ, ಜಾರಕಿಹೊಳಿಯನ್ನು ಉಚ್ಛಾಟಿಸಿ: ಯತ್ನಾಳ್

    ರಾಹುಲ್ ಗಾಂಧಿ ವಿದೇಶಿ ತಳಿ, ಜಾರಕಿಹೊಳಿಯನ್ನು ಉಚ್ಛಾಟಿಸಿ: ಯತ್ನಾಳ್

    ವಿಜಯಪುರ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ವಿದೇಶಿ ತಳಿ. ಅವರು ವಿದೇಶದಲ್ಲಿ ತಯಾರಾದ ವಸ್ತು. ರಾಹುಲ್ ಖಂಡಿತವಾಗಿಯೂ ಭಾರತೀಯನಲ್ಲ ಎಂದು ಬಿಜೆಪಿ (BJP) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವ್ಯಂಗ್ಯವಾಡಿದ್ದಾರೆ.

    ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ರಾಹುಲ್ ಗಾಂಧಿ ಅವರು ಭಾರತೀಯನಲ್ಲ. ಅವರು ಹಿಂದೂ ಧರ್ಮಕ್ಕೂ ಸೇರಿಲ್ಲ. ಅದೊಂದು ಕಂಪ್ಲೀಟ್ ಆಗಿ ಬೇರೆಯೇ ತಳಿಯಾಗಿದೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ಹಿಂದೂ (Hindu) ಎಂಬ ಪದ ಅಶ್ಲೀಲ ಎಂದು ಹೇಳಿಕೆ ನೀಡಿದ್ದ ಶಾಸಕ ಸತೀಶ್ ಜಾರಕಿಹೊಳಿ (Satish Jarkiholi) ವಿರುದ್ಧ ಗುಡುಗಿದ ಯತ್ನಾಳ್, ಸಾವಿರಾರು ವರ್ಷದ ಸನಾತನ ಧರ್ಮ ಹಿಂದೂ ಧರ್ಮ ಆಗಿದೆ. ಜಾರಕಿಹೊಳಿ ಮಾತ್ರವಲ್ಲದೇ ರಾಹುಲ್, ದಿಗ್ವಿಜಯ ಸಿಂಗ್, ಸಿದ್ದರಾಮಯ್ಯ ಕೂಡಾ ಇದೇ ರೀತಿ ಮಾತನಾಡಿದ್ದಾರೆ. ಇವರೆಲ್ಲರೂ ಮುಸ್ಲಿಂ ಪರ ಮಾತನಾಡುತ್ತಾರೆ ಎಂದರು. ಇದನ್ನೂ ಓದಿ: ನನ್ನ ತೇಜೋವಧೆ ಆಗ್ತಿದೆ – ವಿವಾದಿತ ಹೇಳಿಕೆಯನ್ನು ಹಿಂಪಡೆದ ಸತೀಶ್ ಜಾರಕಿಹೊಳಿ

    ಇಂತಹ ಕೀಳುಮಟ್ಟದ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿಗೆ ನಾಚಿಕೆ ಆಗ್ಬೇಕು. ಯಾರೋ ಬರೆದಿದ್ದನ್ನು ಹೇಳಿರುವುದು ಖಂಡನೀಯ. ಅವರು ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಶಾಸಕ ಜಾರಕಿಹೊಳಿಯನ್ನು ತಕ್ಷಣವೇ ಕಾಂಗ್ರೆಸ್‌ನಿಂದ ಉಚ್ಛಾಟನೆ ಮಾಡಬೇಕು ಎಂದು ಕಿಡಿ ಕಾರಿದರು.

    ಜಾರಕಿಹೊಳಿ ದೊಡ್ಡ ಸಿದ್ಧಾಂತ ಶಿಖಾಮಣಿಯಾ? ಸುಮ್ಮನೆ ಬಾಯಿ ಮುಚ್ಕೊಂಡು ಕುಳಿತುಕೊಂಡರೆ ಒಳ್ಳೆಯದು. ಚುನಾವಣೆಯಲ್ಲಿ ನಿಜವಾದ ಹಿಂದೂ ಧರ್ಮದವರು ಏನು ಅನ್ನೊದು ತೋರಿಸುತ್ತಾರೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಧರ್ಮ, ಜಾತಿ ಬಿಟ್ಟರೆ ಬಿಜೆಪಿ- ಕಾಂಗ್ರೆಸ್‌ಗೆ ಬೇರೆ ವಿಷಯ ಇಲ್ಲ: ಕುಮಾರಸ್ವಾಮಿ

    Live Tv
    [brid partner=56869869 player=32851 video=960834 autoplay=true]

  • ವೋಟ್ ಹಾಕದಿದ್ದಕ್ಕೆ ಮತದಾರನ ಮೇಲೆ ಹಲ್ಲೆ- ಆರೋಪ

    ವೋಟ್ ಹಾಕದಿದ್ದಕ್ಕೆ ಮತದಾರನ ಮೇಲೆ ಹಲ್ಲೆ- ಆರೋಪ

    ವಿಜಯಪುರ: ಪಾಲಿಕೆ ಚುನಾವಣೆಯಲ್ಲಿ (Election) ಬಿಜೆಪಿ (BJP) ಅಭ್ಯರ್ಥಿಗೆ ಮತ (Vote) ನೀಡದ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ವಿಜಯಪುರದಲ್ಲಿ ಕೇಳಿ ಬರುತ್ತಿದೆ.

    ವಿಜಯಪುರ (Vijayapura) ದರ್ಗಾರ ಜೈಲು ರಸ್ತೆಯಲ್ಲಿ ಈ ಘಟನೆ ನಡೆದಿದೆ. ದೇವಕಾಂತ್ ಬಿಜ್ಜರಗಿ ಹಲ್ಲೆಗೊಳಗಾದ ವ್ಯಕ್ತಿ. ಘಟನೆ ನಡೆದು ಎರಡು ದಿನವಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಾರ್ಡ್ ನಂಬರ್ 2ರಲ್ಲಿ ಬಿಜೆಪಿ ಅಭ್ಯರ್ಥಿ ರಾಹುಲ್ ಔರಂಗಾಬಾದ್ ಸೋಲು ಹಿನ್ನೆಲೆಯಲ್ಲಿ ದೇವಕಾಂತ್ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ. ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಹಾಗೂ ಬೆಂಬಲಿಗರು ಸೇರಿ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ದೇವಕಾಂತ್ ಆರೋಪಿಸಿದರು. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ ಹೊಡೆದು ಬೈಕ್‌ ಸವಾರ ಸಾವು – ಅಪಘಾತ ಜಾಗದಲ್ಲಿ ಬಿದ್ದಿತ್ತು ಮದ್ಯದ ಬಾಟಲಿಗಳು

    ಸದ್ಯ ಜಿಲ್ಲಾಸ್ಪತ್ರೆಯಲ್ಲಿ ದೇವಕಾಂತ್ ಬಿಜ್ಜರಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದರ್ಶ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಟ್ಯಾಟೂ ಹಾಕಿಸಿಕೊಂಡವರು 6 ತಿಂಗಳು ರಕ್ತದಾನ ಮಾಡ್ಬೇಡಿ – ವೈದ್ಯರ ಎಚ್ಚರಿಕೆ

    Live Tv
    [brid partner=56869869 player=32851 video=960834 autoplay=true]

  • ವಿಜಯಪುರ ನಗರಪಾಲಿಕೆ ಚುನಾವಣೆ – ಬಿಜೆಪಿಗೆ ಸಿಂಹಪಾಲು

    ವಿಜಯಪುರ ನಗರಪಾಲಿಕೆ ಚುನಾವಣೆ – ಬಿಜೆಪಿಗೆ ಸಿಂಹಪಾಲು

    ವಿಜಯಪುರ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ವಿಜಯಪುರ ಮಹಾನಗರ ಪಾಲಿಕೆ (Vijayapura City Corporation) ಚುನಾವಣೆಯಲ್ಲಿ ಬಿಜೆಪಿಯ (BJP) ಅತಿ ಹೆಚ್ಚು 17 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

    ನಗರಪಾಲಿಕೆಯ (Vijayapura City Corporation) 35 ವಾರ್ಡ್‌ಗಳ ಪೈಕಿ ಕಾಂಗ್ರೆಸ್ (Congress) 10, ಪಕ್ಷೇತರ 5, ಎಐಎಂಐಎಂ (AIMIM) 2, ಜೆಡಿಎಸ್ (JDS) 1 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ. ಬಹುಮತಕ್ಕೆ 1 ಸ್ಥಾನ ಕೊರತೆ ಇರುವ ಹಿನ್ನೆಲೆಯಲ್ಲಿ ಬಿಜೆಪಿ (BJP) ಪಕ್ಷೇತರರ ಜೊತೆ ಅಧಿಕಾರಕ್ಕೆ ಏರುವ ಸಾಧ್ಯತೆಯಿದೆ. ಇದನ್ನೂ ಓದಿ: ಶಾಸಕ ಶಿವನಗೌಡ ನಾಯಕ್‍ರಿಂದ ಜೆಡಿಎಸ್ ಅಭ್ಯರ್ಥಿಗೆ ಜೀವ ಬೆದರಿಕೆ: ಎಸ್‍ಪಿಗೆ ದೂರು

    ವಿಜಯಪುರದ (Vijayapura) ಒಟ್ಟು 35 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ (Elections) ವಾರ್ಡ್ ಸಂಖ್ಯೆ 3, 5, 6, 7, 9, 10, 11, 12, 13, 14, 15, 21, 22, 26, 29, 32, 35 ಸೇರಿ ಒಟ್ಟು 17 ವಾರ್ಡ್‌ಗಳಲ್ಲಿ ಬಿಜೆಪಿ (BJP) ಭರ್ಜರಿ ಜಯ ಸಾಧಿಸಿದೆ. ಇನ್ನೂ 1, 16, 18, 20, 23, 27, 30, 31, 33, 34 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದ್ದು, 10 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. 2, 8, 17, 19, 24 ವಾರ್ಡ್‌ಗಳಲ್ಲಿ ಪಕ್ಷೇತರ, ವಾರ್ಡ್ 4ರಲ್ಲಿ ಜೆಡಿಎಸ್ (JDS) ಹಾಗೂ ವಾರ್ಡ್ 28, 25ರಲ್ಲಿ ಐಎಂಐಎಂ ಪಕ್ಷದ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ. ಇದನ್ನೂ ಓದಿ: ಪೊಲೀಸ್ ಹುದ್ದೆಗೆ 70-80 ಲಕ್ಷ ಹಣ – ಹೇಳಿಕೆ ನನ್ನದಲ್ಲವೆಂದು ಉಲ್ಟಾ ಹೊಡೆದ MTB

    ಸೋಮವಾರ ಬೆಳಿಗ್ಗೆ 8 ಗಂಟೆಗೆ ನಗರ ಪ್ರೌಢಶಾಲೆ ಆವರಣದಲ್ಲಿ ಆರಂಭವಾದ ಮತ ಎಣಿಕೆ ಕಾರ್ಯ ಮಧ್ಯಾಹ್ನ 3.30ರ ವೇಳೆಗೆ ಮುಕ್ತಾಯಗೊಂಡಿತು. 7 ಕೊಠಡಿಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಮತ ಎಣಿಕೆ ಕಾರ್ಯಕ್ಕೆ 179 ಸಿಬ್ಬಂದಿಯನ್ನ ನೇಮಕ ಮಾಡಲಾಗಿತ್ತು. 35 ಮತ ಎಣಿಕೆ ಮೇಲ್ವಿಚಾರಕರು, 35 ಮತ ಎಣಿಕೆ ಸಹಾಯಕರು, 7 ಮತ ಎಣಿಕೆ ಡಾಟಾ ಎಂಟ್ರಿ ಮೇಲ್ವಿಚಾರಕರು, 7 ಕಂಪ್ಯೂಟರ್ ಆಪರೇಟರ್ಸ್ ಹಾಗೂ ವಿದ್ಯುನ್ಮಾನ ಮತಯಂತ್ರಗಳನ್ನು ಸಾಗಿಸಲು 60 ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿತ್ತು. ಚುನಾವಣಾಧಿಕಾರಿಯಾಗಿ ಡಾ.ವಿಜಯಮಹಾಂತೇಶ ದಾನಮ್ಮ ಕಾರ್ಯ ನಿರ್ವಹಿಸಿದರು.

    ಬಿಗಿ ಪೊಲೀಸ್ (Police) ಬಂದೋಬಸ್ತ್: ಪಾಲಿಕೆ ಚುನಾವಣೆ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. 3 ಡಿವೈಎಸ್‌ಪಿ, 8 ಸಿಪಿಐ, 32 ಪಿಎಸ್‌ಐ, 35 ಎಎಸ್‌ಐ, 76 ಮುಖ್ಯ ಪೊಲೀಸ್ ಪೇದೆ, 128 ಪೊಲೀಸ್ ಪೇದೆ, 17 ಮಹಿಳಾ ಪೇದೆ, 4 ಐಆರ್‌ಬಿ ಹಾಗೂ 6 ಡಿಎಆರ್ ತುಕಡಿಗಳನ್ನ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ತಾಯಿಯೊಂದಿಗೆ ಮಲಗಿದ್ದಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ವ್ಯಕ್ತಿಯ ಕೊಲೆ!

    ತಾಯಿಯೊಂದಿಗೆ ಮಲಗಿದ್ದಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ವ್ಯಕ್ತಿಯ ಕೊಲೆ!

    ವಿಜಯಪುರ: ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ವಿಜಯಪುರ (Vijayapura) ದಲ್ಲಿ ನಡೆದಿದೆ.

    ತುಕಾರಾಮ ಚವ್ಹಾಣ ಕೊಲೆಯಾದ ವ್ಯಕ್ತಿ. ಈ ಘಟನೆ ವಿಜಯಪುರ ಜಿಲ್ಲೆಯ ಚಡಚಣದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

    45 ವರ್ಷದ ತಂಗೆವ್ವ ಹಾಗೂ 60 ವರ್ಷದ ತುಕಾರಾಮ ಮಧ್ಯೆ ಹತ್ತು ವರ್ಷಗಳಿಂದ ಅನೈತಿಕ ಸಂಬಂಧ (Illicit Relationship) ನಡೆಯುತ್ತಿತ್ತು. ನಡುಮಟ್ಟದ ಹಳ್ಳದಾಟಿ ಬಂದು ನಿನ್ನೆ ತಡರಾತ್ರಿ ತಂಗೆವ್ವ ಜೊತೆ ಮನೆ ಹಿಂದೆ ತುಕರಾಮ ಮಲಗಿದ್ದನು. ಈ ವೇಳೆ ತಂಗೆವ್ವ ಮಕ್ಕಳಾದ ಸದಾಶಿವ ಬಂಗಾರತಳಿ, ಸಿದ್ದು ಬಂಗಾರತಳಿ ಹಾಗೂ ಚಿಕ್ಕು ಬಂಗಾರತಳಿಯು ತುಕಾರಾಮನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ತುಕರಾಮ ತಲೆಗೆ ಕೊಡಲಿಯಿಂದ ಹೊಡೆದು ಕೊಲೆಗೈಯಲಾಗಿದೆ. ಬಳಿಕ ತಾಯಿಯೊಂದಿಗೆ ಮೂವರು ಆರೋಪಿಗಳು ಪರಾರಿಯಾಗಿದ್ರು. ಇದೀಗ ಮಹಾರಾಷ್ಟ್ರದ ಕೊಲ್ಲಾಪುರ ಬಳಿ ಸದಾಶಿವ ಬಂಗಾರತಳಿ ಚಿಕ್ಕು ಬಂಗಾರತಳಿ, ಸಿದ್ದು ಬಂಗಾರತಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಹಿಳೆಗೆ ಜಸ್ಟ್ ಮೆಸೇಜ್ ಮಾಡಿದ್ದಕ್ಕೆ ಟೈಲರ್ ಹತ್ಯೆ – ಐವರು ಅರೆಸ್ಟ್

    ಚಡಚಣ ಪೊಲೀಸ್ ಠಾಣೆ ಪಿಎಸ್‍ಐ ಸಂಜಯ್ ತಿಪ್ಪಾರೆಡ್ಡಿ ನೇತೃತ್ವದಲ್ಲಿ ಮೂವರು ಆರೋಪಿಗನ್ನು ಬಂಧಿಸಲಾಗಿದೆ. ಆದರೆ ತಲೆಮರೆಸಿಕೊಂಡಿರೋ ತಂಗೆವ್ವ ಬಂಗಾರತಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    ಈ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸಾವು

    ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸಾವು

    ವಿಜಯಪುರ: ಬೆಳ್ಳಂಬೆಳಗ್ಗೆ ಕಬ್ಬು (sugar kane) ಸಾಗಿಸುತ್ತಿದ್ದ ಟ್ಯಾಕ್ಟರ್‌ಗೆ ಹಿಂಬದಿಯಿಂದ ಕ್ರೂಸರ್ (Cruiser) ಡಿಕ್ಕಿ ಹೊಡೆದ ಪರಿಣಾಮ ಕ್ರೂಸರ್‌ನಲ್ಲಿದ್ದ ಬೆಳಗಾವಿ (Belagavi) ಜಿಲ್ಲೆಯ ಅಥಣಿ ಮೂಲದ ದಂಪತಿ ಮೃತಪಟ್ಟಿದ್ದಾರೆ.

    ಇತರೆ ಒಂಬತ್ತು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನ ಮಹಾರಾಷ್ಟ್ರದ (Maharastra) ಸೊಲ್ಲಾಪುರಕ್ಕೆ ರವಾನೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಧೂಳಖೇಡ್ ಬಳಿಯ ಎನ್‌ಎಚ್ 50 ರಲ್ಲಿ ಘಟನೆ ಸಂಭವಿಸಿದೆ. ಭಯ್ಯಾಜಿ ಶಿಂಧೆ (50), ಸುಮಿತ್ರಾ ಶಿಂಧೆ (45) ಮೃತ ದಂಪತಿ. ಇದನ್ನೂ ಓದಿ: ಅಪ್ಪು ಗಂಧದಗುಡಿ ರಿಲೀಸ್‍ಗೆ ಕೌಂಟ್‍ಡೌನ್- ಮೊದಲ ಬಾರಿಗೆ ಅಶ್ವಿನಿ ವಿಶೇಷ ಸಂದರ್ಶನ

    ಬೆಳಗಾವಿ (Belagavi) ಜಿಲ್ಲೆಯ ಅಥಣಿ ಮೂಲದ ಇವರೆಲ್ಲಾ ಕ್ರೂಸರ್‌ನಲ್ಲಿ ಮಹಾರಾಷ್ಟ್ರದ ಅಕ್ಕಲಕೋಟ ಬಳಿಯ ಸ್ವಾಮಿ ಸಮರ್ಥ ಕ್ಷೇತ್ರಕ್ಕೆ ತೆರಳುತ್ತಿದ್ದರು. ಆಗ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಝಳಕಿ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]