ಮೃತರು ಕೂಲಿ ಕಾರ್ಮಿಕರಾಗಿದ್ದು, ಮುದ್ದೇಬಿಹಾಳದ ಚಿಕನ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು (Police) ಹಾಗೂ ಸ್ಥಳೀಯರು ಕಾಲುವೆಯಿಂದ ಶವ ಹೊರಕ್ಕೆ ತೆಗೆದಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ. ಇದನ್ನೂ ಓದಿ: ಟಿಕೆಟ್ ಗೊಂದಲ ನಿವಾರಣೆಗೆ ಅಖಾಡಕ್ಕಿಳಿದ ಕುಮಾರಸ್ವಾಮಿ – ತಿಂಗಳಾಂತ್ಯಕ್ಕೆ ಹಾಸನದಲ್ಲಿ ಸಭೆ
Live Tv
[brid partner=56869869 player=32851 video=960834 autoplay=true]
ವಿಜಯಪುರ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Election) ಬಿಜೆಪಿ (BJP) ಅಭ್ಯರ್ಥಿಯಾಗಲು ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಜಯಪುರ: ಮೂರು ಮಕ್ಕಳನ್ನು ನೀರಿನ ಸಂಪ್‌ಗೆ ಎಸೆದು ಮಹಿಳೆಯೊಬ್ಬಳು (Woman) ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ನಡೆದಿದೆ.
ವಿಜಯಪುರ (Vijayapura) ಜಿಲ್ಲೆಯ ತಿಕೋಟಾ ತಾಲೂಕಿನ ವಿಠಲವಾಡಿ ತಾಂಡಾದಲ್ಲಿ ಘಟನೆ ನಡೆದಿದೆ. ಜಾಲಗೇರಿ ಗ್ರಾಮದ ಬಳಿಯ ವಿಠಲವಾಡಿ ತಾಂಡಾದ ಗೀತಾ ರಾಮು ಚೌವ್ಹಾಣ (32), ಸೃಷ್ಟಿ (6), ಸಮರ್ಥ (4), ಕಿಶನ್ (3) ಮೃತ ದುರ್ದೈವಿಗಳಾಗಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.
ಶನಿವಾರ ರಾತ್ರಿ ಪತಿಯೊಂದಿಗೆ ಗೀತಾ ಜಗಳ ಮಾಡಿದ್ದಳಂತೆ. ಇದಾದ ಬಳಿಕ ಪತಿ ರಾಮು ಮಲಗಿದ್ದ ವೇಳೆ ಮೂವರು ಮಕ್ಕಳನ್ನು ನೀರಿನ ಸಂಪ್‌ಗೆ ಎಸೆದ ತಾಯಿ, ಬಳಿಕ ಸಂಪ್‌ನಲ್ಲಿ ತಾನೂ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಪೆರುವಿನಲ್ಲಿ ಭೀಕರ ಬಸ್ ಅಪಘಾತಕ್ಕೆ 24 ಮಂದಿ ಬಲಿ
ವಿಜಯಪುರ: ಯಡಿಯೂರಪ್ಪ (BS Yediyurappa) ಅವರಿಗೆ ಕಲ್ಲು ಹೊಡೆದರೆ ಪೆಟ್ಟು ಬೀಳೋದು ಬಿಜೆಪಿ (BJP) ಮೇಲೆಯೇ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಬಿಎಸ್‌ವೈ ಪುತ್ರ ಬಿ.ವೈ ವಿಜಯೇಂದ್ರ (BY Vijayendra) ಎಚ್ಚರಿಕೆ ನೀಡಿದ್ದಾರೆ.
`ಯಡ್ಡಿಯೂರಪ್ಪ ಹಿರಿಯರು ಅವರ ಬಗ್ಗೆ ಮಾತನಾಡಲ್ಲ’ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿಕೆಗೆ ವಿಜಯಪುರದಲ್ಲಿ, `ಪಬ್ಲಿಕ್ ಟಿವಿ’ಯೊಂದಿಗೆ (Public TV) ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕೆಲ ಬಿಜೆಪಿ ಹಾಲಿ ಶಾಸಕರಿಗೆ ಬಿಗ್ ಶಾಕ್- ಆಪರೇಷನ್ ‘ಯು-ಜಿ’ ಮಾಡೆಲ್ ಜಾರಿ?
ಹಿರಿಯರಾದಂತಹ ಯತ್ನಾಳ್ ಅವರ ಹೇಳಿಕೆಯನ್ನ ನಾನು ಗಮನಿಸಿದ್ದೇನೆ. ಇದು ಉತ್ತಮ ಬೆಳವಣಿಗೆ ಎಂದು ಭಾವಿಸಬಹುದು. ಪಕ್ಷದ ಹಿತದೃಷ್ಟಿಯಿಂದ ಯಡ್ಡಿಯೂರಪ್ಪ ಅವರಿಗೆ ಕಲ್ಲು ಹೊಡೆದ್ರೆ ಅದರ ಪೆಟ್ಟು ಬೀಳೋದು ಬಿಜೆಪಿ ಮೇಲೆಯೇ ಎಂದಿದ್ದಾರೆ. ಇದನ್ನೂ ಓದಿ: Special- ನಟಿ ಶ್ರುತಿ ಕುಟುಂಬದ ಮೂರನೇ ತಲೆಮಾರು ಸಿನಿ ರಂಗಕ್ಕೆ ಎಂಟ್ರಿ
ಈಗಲಾದರೂ ಅರ್ಥ ಮಾಡಿಕೊಂಡು ಯತ್ನಾಳ್ ಅವರು ಹೇಳಿಕೆ ಕೊಟ್ಟಿರುವುದನ್ನ ಸ್ವಾಗತ ಮಾಡುತ್ತೇನೆ. ಏನೇ ಸಮಸ್ಯೆ ಇದ್ದರೂ, ಏನೇ ಗೊಂದಲಗಳು ಇದ್ದರೂ ಅವುಗಳನ್ನ ಕುಳಿತು ಚರ್ಚೆ ಮಾಡಿ ಪರಿಹಾರ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಅಂದರೆ ಇತರಹದ ಸಮಸ್ಯೆಗಳನ್ನ ಸರಿಮಾಡಿಕೊಂಡು ಮುಂದೆ ಹೋಗಬೇಕಾಗುತ್ತದೆ. ಬರುವ ದಿನದಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
Live Tv
[brid partner=56869869 player=32851 video=960834 autoplay=true]
ವಿಜಯಪುರ: ಯಡಿಯೂರಪ್ಪ ಬಗ್ಗೆ ನನ್ನನ್ನು ಇನ್ಮೇಲೆ ಏನು ಕೇಳಬೇಡಿ. ಯಡಿಯೂರಪ್ಪ ಬಗ್ಗೆ ನಾನು ಏನು ಪ್ರತಿಕ್ರಿಯೆ ನೀಡಲ್ಲ ಎಂದು ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಹಿರಿಯರು, ಅವರ ಬಗ್ಗೆ ಮಾತನಾಡಬೇಡಿ. ಜೊತೆಗೆ ಚಿಲ್ಲರೆ ನಾಯಕರ ಬಗ್ಗೆ ಕೂಡ ಪ್ರತಿಕ್ರಿಯಿಸಬೇಡಿ ಎಂದು ಹೈಕಮಾಂಡ್ ನನಗೆ ಹೇಳಿದೆ. ಈ ಹಿನ್ನೆಲೆಯಲ್ಲಿ ನಾನು ನಮ್ಮ ಪಕ್ಷದ ಯಾವ ನಾಯಕರ ಬಗ್ಗೆಯೂ ಮಾತನಾಡಲ್ಲ. ಇನ್ಮೇಲೆ ಏನಿದ್ರೂ ವಿರೋಧಿ ಪಕ್ಷದವರ ವಿರುದ್ಧ ಮಾತ್ರ ಮಾತನಾಡುತ್ತೇನೆ ಎಂದು ತಿಳಿಸಿದರು.
ನನಗೆ ಯಾವುದೇ ನೋಟಿಸ್ ಬಂದಿಲ್ಲ. ನಿಮ್ಮ ಬಳಿ ಇದ್ರೆ ತೋರಿಸಿ. ಬಿಜೆಪಿ ರಾಜ್ಯಾಧ್ಯಕ್ಷರು ನೋಟಿಸ್ ನೀಡಿದ್ದೇನೆ ಎಂದು ಹೇಳಿಲ್ಲ ಎಂದ ಅವರು, ಹೈಕಮಾಂಡ್ ಮುಂದೆ ನಿಮಗೆ ಉತ್ತಮ ಭವಿಷ್ಯ ಇದೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಸಿಹಿ ಸುದ್ದಿ ಬರಲಿದೆ ಎಂದ ನುಡಿದರು.
ವಿಜಯಪುರದಲ್ಲಿ (Vijayapura) ನಡೆದ ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಕಾರ್ಯಕ್ರಮಕ್ಕೆ ನಾನು ಬರಲು ಆಗಲ್ಲ ಎಂದು ನಡ್ಡಾ ಅವರಿಗೆ ಹೇಳಿದ್ದೆ. ಅವರ ಪರವಾನಿಗೆ ಪಡಿದೆ ನಾನು ಗೈರಾಗಿದ್ದೇನೆ ಎಂದರು.
ಡಿಕೆಶಿ (DK Shivakumar) ಬಳಿ ಇನ್ನಷ್ಟು ಸಿಡಿ ಇವೆ. ಅದನ್ನ ತನಿಖೆಗೆ ಸಿಬಿಐಗೆ ಒಪ್ಪಿಸಬೇಕು ಎಂಬ ರಮೇಶ್ ಜಾರಕಿಹೊಳಿ (Ramesh Jarakiholi) ಹೇಳಿಕೆಗೆ ಬೆಂಬಲ ನೀಡಿದ ಅವರು, ರಾಜಕಾರಣಿ, ಅಧಿಕಾರಿಗಳನ್ನು ಬ್ಲಾಕ್‌ಮೇಲ್ ಮಾಡುವ ಗುಂಪು ಬೆಂಗಳೂರಿನಲ್ಲಿದೆ. ಬೆಂಗಳೂರಿನಲ್ಲಿ ಒಂದು ಗುಂಪು ಕೆಲಸ ಮಾಡುತ್ತಿದೆ. ಬ್ಲಾಕ್ ಮೇಲ್ ಮಾಡುವುದೇ ಅವರ ದಂಧೆ, ಯಾವುದೇ ಪಕ್ಷದವರಿದ್ದರು ಬಣ್ಣ ಬಯಲಾಗುತ್ತದೆ. ಸಿಡಿ ಕೇಸ್ ಸಿಬಿಐಗೆ ಕೊಡಿ, ಬಣ್ಣ ಬಯಲಾಗುತ್ತೆ. ಜಾರಕಿಹೊಳಿ ಹೇಳಿದಂತೆ ಸಿಬಿಐ ತನಿಖೆ ನಡೆಯಲಿ. ಇದ್ರಲ್ಲಿ ಇನ್ನಷ್ಟು ರಾಜಕಾರಣಿಗಳ ಬಣ್ಣ ಬಯಲಾಗುತ್ತದೆ ಎಂದು ಒತ್ತಾಯಿಸಿದರು.
Live Tv
[brid partner=56869869 player=32851 video=960834 autoplay=true]
ವಿಜಯಪುರ: ಸೈನ್ಸ್ (Science) ಓದಲು ಇಷ್ಟವಿಲ್ಲದ ಕಾರಣ ವಿದ್ಯಾರ್ಥಿನಿ (Student) ನೇಣಿಗೆ ಶರಣಾದ ಘಟನೆ ವಿಜಯಪುರ (Vijayapura) ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಖಾಸಗಿ ಕಾಲೇಜಿನಲ್ಲಿ ನಡೆದಿದೆ.
ಪದ್ಮಾವತಿ ಸಂಜಯ ಮೇಟಿ (17) ನೇಣಿಗೆ ಶರಣಾದ ಪ್ರಥಮ ಪಿಯುಸಿ (PUC) ವಿದ್ಯಾರ್ಥಿನಿ. ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಕೋಲ ಮಾಪುರ ಮೂಲದ ಪದ್ಮಾವತಿ, ಡೆತ್‍ನೋಟ್ ಬರೆದಿಟ್ಟು ವಸತಿ ನಿಲಯದ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾಳೆ.
ಡೆತ್‍ನೋಟ್‍ನಲ್ಲಿ ನನ್ನ ಸಾವಿಗೆ ನಾನೇ ಕಾರಣ. ನನಗೆ ಸೈನ್ಸ್ ಓದಲು ಇಷ್ಟವಿಲ್ಲ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬರಲಿದೆ ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದಿಟ್ಟು ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ವಿಜಯಪುರ: ಕಾಂಗ್ರೆಸ್ (Congress) ಪಕ್ಷವನ್ನು ಜನರು ನಂಬುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದ ನಿಡೋಣಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿಗೆ ಕಾಂಗ್ರೆಸ್ ಪ್ರತ್ಯೇಕ ಪ್ರಣಾಳಿಕೆ ಘೊಷಣೆ ಮಾಡಿದೆ. ಅವರು ಈಗ ಒಂದೊಂದು ಏರಿಯಾಗೆ ಒಂದೊಂದು ಪ್ರಣಾಳಿಕೆ ಮಾಡಿಕೊಂಡು ಹೊರಟಿದ್ದಾರೆ. 5 ವರ್ಷದ ಆಡಳಿತದಲ್ಲಿ ಏನು ಕೊಟ್ಟಿದ್ದೇವೆ, ಏನು ಕೊಡುತ್ತೇವೆ ಅನ್ನೋದನ್ನ ಹೇಳಬೇಕಲ್ಲ. ಪ್ರಣಾಳಿಕೆ ಮಾಡೋದು ಬೇರೆ. 5 ಮತ್ತು 2 ಕಾಂಗ್ರೆಸ್ ಪಕ್ಷದ ಏನು ಕೊಟ್ಟಿದೆ ಎಂದು ಹೆಚ್‍ಡಿಕೆ ಪ್ರಶ್ನಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ (BJP) ರಾಜ್ಯದ ಅರ್ಥಿಕವಾಗಿ ಏನು ಹೊರೆ ಹೊರೆಸಿದ್ದಾರೆ, ಹದಗೆಡೆಸಿದ್ದಾರೆ ಅದನ್ನ ಸರಿ ಪಡಿಸೋದು ಹೇಗೆ ಅಂತಾ ಯೋಚಿಸಿದ್ದಾರೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಕಿಡಿ ಕಾರಿದರು. ಇದನ್ನೂ ಓದಿ: ಅಜ್ಮೀರ್ ದರ್ಗಾಗೆ ರೆಡ್ಡಿ ಭೇಟಿ – ಕಾಂಗ್ರೆಸ್ ಪಾಳಯಕ್ಕೆ ಮರ್ಮಾಘಾತ
ಇಲ್ಲಿ ಘೋಷಣೆ ಮಾಡೋದು ಬೇರೆ. ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ ಕೊಡುವುದಾದರೆ 120 ವರ್ಷ ಕಾಂಗ್ರೆಸ್ ಪಕ್ಷ ಅಂತಾರೆ. ಬೇರೆ ಯಾವ ಪಕ್ಷಕ್ಕೂ ಅವರಿಗೆ ಇರುವಷ್ಟು ಅನುಭವ ಇಲ್ಲ. ಹಾಗಾದ್ರೆ ಆವಾಗ ಯಾಕೆ ಮಾಡಲಿಲ್ಲ. ಈಗೇಕೆ ಮಾಡ್ತಿದ್ದಾರೆ. ಹೀಗಾಗಿನೇ ಜನರು ಕಾಂಗ್ರೆಸ್ ಪಕ್ಷವನ್ನ ನಂಬುವ ಪರಿಸ್ಥಿತಿಯಲ್ಲಿಲ್ಲ ಎಂದರು.
Live Tv
[brid partner=56869869 player=32851 video=960834 autoplay=true]
ಹೃದಯಾಘಾತದಿಂದ ಶಿವಾನಂದ್ ಪಾಟೀಲ್ ಸೋಮಜಾಳ (54) ಶುಕ್ರವಾರ ರಾತ್ರಿ ನಿಧನ ಹೊಂದಿದ್ದಾರೆ. ನಾಗಠಾಣ ಮತಕ್ಷೇತ್ರ (Nagthan Assembly Constituency) ದಲ್ಲಿ ನಡೆದ ಪಕ್ಷದ ಪಂಚರತ್ನ ಕಾರ್ಯಕ್ರಮದಲ್ಲಿ ಹೆಚ್‍ಡಿಕೆಯೊಂದಿಗೆ ಶಿವಾನಂದ್ ಭಾಗಿಯಾಗಿದ್ದರು. ನಂತರ ಸಂಜೆ ಸಿಂದಗಿ ಪಟ್ಟಣಕ್ಕೆ ತೆರಳಿದ್ದರು. ರಾತ್ರಿ 9 ರ ವೇಳೆ ಅಸ್ವಸ್ಥಗೊಂಡ ಶಿವಾನಂದ್ ಪಾಟೀಲ್ ಸೋಮಜಾಳ, ಸಿಂದಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ತೀವ್ರ ಹೃದಯಾಘಾತದಿಂದ ಶಿವಾನಂದ್ ಕೊನೆಯುಸಿರೆಳೆದರು. ಶಿವಾನಂದ್ 16 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾ ಗಿದ್ದರು. ಇತ್ತೀಚಿನ ವರ್ಷಗಳಲ್ಲಿ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಸೋಮಜಾಳ ಗ್ರಾಮದ ಮೂಲದವರಾಗಿರುವ ಇವರು, ಪತ್ನಿ ವಿಶಾಲಾಕ್ಷಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ. ಇದನ್ನೂ ಓದಿ: ಹಂತಕರಿಂದ ಹತ್ಯೆಗೀಡಾದ ಜಲೀಲ್ ಕುಟುಂಬಕ್ಕೆ 1 ಲಕ್ಷ ರೂ. ಚೆಕ್ ವಿತರಿಸಿದ ಪ್ರಿಯಾಂಕ್ ಖರ್ಗೆ
ಹೆಚ್‍ಡಿಕೆ ಕಂಬನಿ: ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ್ ಪಾಟೀಲ್ ಸೋಮಜಾಳ ಹೃದಯಾಘಾತದಿಂದ ಅಕಾಲಿಕ ನಿಧನ ಹೊಂದಿದ್ದಾರೆ. ಈ ಹಿನ್ನೆಲೆ ಟ್ವೀಟ್ ಮಾಡಿ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಸಂತಾಪ ಸೂಚಿಸಿದ್ದಾರೆ. ಶಿವಾನಂದ್ ಸೋಮಜಾಳ ಅಕಾಲಿಕ ಮರಣ ನನಗೆ ಆಘಾತ ತಂದಿದೆ.
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) January 20, 2023
ಜನವರಿ 18 ರಂದು ಪೂರ್ತಿ ದಿನ ಸಿಂದಗಿ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ದೇವರ ಹಿಪ್ಪರಗಿ ಕ್ಷೇತ್ರಕ್ಕೆ ಬೀಳ್ಕೊಟ್ಟಿದ್ದರು. ಸೇನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದ ಅವರು, ಸಮಾಜ ಸೇವೆಯ ಅದಮ್ಯ ಹಂಬಲ ಹೊಂದಿದ್ದರು. ಪರಿಚಯವಾದ ಅಲ್ಪಕಾಲದಲ್ಲೆ ಆತ್ಮೀಯರಾಗಿದ್ದರು ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ವಿಜಯಪುರ: ಪ್ರೇಮಿಗಳಿಬ್ಬರು (Lovers) ನೇಣಿಗೆ ಶರಣಾದ ಘಟನೆ ವಿಜಯಪುರ (Vijayapura) ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಜೈನಾಪೂರ ಗ್ರಾಮದಲ್ಲಿ ನಡೆದಿದೆ.
ರಾಕೇಶ್ ಅಂಗಡಿ (23) ಹಾಗೂ ಸಾವಿತ್ರಿ ಅಂಬಲಿ (19) ಮೃತ ಪ್ರೇಮಿಗಳು. ಜೈನಾಪೂರ ಗ್ರಾಮದ ಹೊರವಲಯದ ತೋಟವೊಂದರಲ್ಲಿ ನೇಣು ಹಾಕಿಕೊಂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಕೇಶ್ ಮತ್ತು ಸಾವಿತ್ರಿ ಮಂಗಳವಾರ ಮನೆಯಿಂದ ಹೊರ ಹೋಗಿದ್ದರಂತೆ ಆ ಬಳಿಕ ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇಬ್ಬರೂ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇದೀಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
Live Tv
[brid partner=56869869 player=32851 video=960834 autoplay=true]
ವಿಜಯಪುರ: ನಗರ ಮತಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (BasanaGauda Patil Yatnal) ಕೇವಲ ರಾಜ್ಯದಲದಲೇ ಅಲ್ಲಾ ದೇಶದಲ್ಲಿಯೇ ಬಿಜೆಪಿ ರೆಬಲ್ ಶಾಸಕ ಅಂತಾ ಪ್ರಸಿದ್ಧಿ ಪಡೆದಿದ್ದಾರೆ. ಯತ್ನಾಳ್ ರನ್ನ ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿತ್ತು. ತದನಂತರ ಕಳೆದ ಬಾರಿ ವಿಧಾನಸಭೆ ಚುನಾವಣೆ (Vidhanasabha Elections) ಯಲ್ಲಿ ಯಡಿಯೂರಪ್ಪನವರೇ ಬಿಜೆಪಿ ಹೈಕಮಾಂಡ್ (BJP Highcommand) ನ ಸೂಚನೆಯಂತೆ ಯತ್ನಾಳ್‍ರನ್ನ ಬಿಜೆಪಿಗೆ ಮರಳಿ ಕರೆತಂದಿದ್ದರು. ನಂತರ ಕೆಲ ದಿನಗಳು ಇಬ್ಬರ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ ಯಡಿಯೂರಪ್ಪ ಸಿಎಂ ಆದ 6 ತಿಂಗಳಲ್ಲಿ ಯತ್ನಾಳ್-ಯಡಿಯೂರಪ್ಪ ಸಂಬಂಧ ಹಳಸಿ ಹೋಯ್ತು. ಮುಂದೆ ಯಡಿಯೂರಪ್ಪ-ಯತ್ನಾಳ್ ಹಾವು ಮುಂಗುಸಿಯಂತಾದ್ರು.
ಇದರ ಮಧ್ಯೆ ಶುರುವಾಗಿದ್ದು, ಲಿಂಗಾಯತ ಪಂಚಮಸಾಲಿ ಮೀಸಲಾತಿ (Lingayat Panchamasali Reservation) ಹೋರಾಟ. ಇದನ್ನ ಮೊದಲು ಮುರಗೇಶ್ ನಿರಾಣಿ ಪ್ರಾರಂಭಿಸಿದಾದರೂ, ನಂತರ ಈ ಹೋರಾಟವನ್ನ ಕೈಗೆತ್ತಿಕೊಂಡಿದ್ದು ಯತ್ನಾಳ್. ಯತ್ನಾಳ್ ಇದರ ಮುಂದಾಳತ್ವ ವಹಿಸುತ್ತಿದಂತೆ ಯಡಿಯೂರಪ್ಪ, ವಿಜಯೇಂದ್ರ (B Y Vijayedra) ಮತ್ತು ಮುರುಗೇಶ್ ನಿರಾಣಿ ಹೋರಾಟದ ದಿಕ್ಕು ಬದಲಿಸಲು ನಾನಾ ಕಸರತ್ತುಗಳನ್ನು ನಡೆಸಿದರು. ಅಲ್ಲದೆ ಹೋರಾಟ ಕ್ರೆಡಿಟ್ ಯತ್ನಾಳ್‍ಗೆ ಸಿಗದಂತೆ ಇದುವರೆಗೂ ಕಾದುಕೊಂಡು ಹೊರಟಿದ್ದಾರೆ. ಇದರಿಂದ ಯಡಿಯೂರಪ್ಪ ಶಿಷ್ಯ ಮುರುಗೇಶ್ ನಿರಾಣಿ (Murugesh Nirani) ಮತ್ತು ಯತ್ನಾಳ್ ಟಾಕ್‍ವಾರ್ ಹೆಚ್ಚಾಗಿದ್ದು, ಮುಂಬರುವ ಚುನಾವಣೆಯಲ್ಲಿ ಯತ್ನಾಳ್‍ಗೆ ಟಿಕೆಟ್ ಸಿಕ್ಕರೆ ತಾನೇ ಬಿಜೆಪಿಯಲ್ಲೆ ಇರೊಲ್ಲ ಎಂದು ಹೇಳುವ ಮೂಲಕ ನಿರಾಣಿ ಬೆಂಬಲಿಗರ ತಲೆ ಕೆಡೆಸಿದ್ರು.
ವಿಜಯಪುರ ಶಾಸಕನ ಕಾರ್ ಡ್ರೈವರ್ ಕೊಲೆಯಾಗಿದೆ ಅನ್ನೋ ನಿರಾಣಿ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ಸಿಎಂಗೆ ಪತ್ರ ಬರೆದಿರೋ ಯತ್ನಾಳ್, 24 ಗಂಟೆ ಒಳಗಾಗಿ ನಿರಾಣಿ ಹೇಳಿಕೆ, ಕೊಲೆ ಆರೋಪದ ಸಿಬಿಐ ತನಿಖೆಗೆ ಆದೇಶ ಕೊಡಬೇಕು ಅಂತ ಆಗ್ರಹಿಸಿದ್ದಾರೆ. ಆರೋಪ ಸುಳ್ಳಾದರೆ ಸಚಿವರನ್ನ ಸಂಪುಟದಿಂದ ತೆಗೆದು ಹಾಕಬೇಕು ಎಂದು ಯತ್ನಾಳ್ ಒತ್ತಾಯಿಸಿದ್ದಾರೆ. ಆದರೆ ನಿರಾಣಿ ಪರವಾಗಿ ಸಹೋದರ ಸಂಗಮೇಶ್ (Sangamesh) ಟ್ವೀಟ್ ಮಾಡಿದ್ದು, ಶಿಖಂಡಿ ಬಸ್ಯಾ ನಡುಬೀದಿಯಲ್ಲಿ ಬೆತ್ತಲಾಗುವ ಕಾಲ ಬಂದಿದೆ. ಬಾಯಿ ಹರುಕನಂತೆ ಮಾತನಾಡುವ ನಾಮರ್ಧ, ನಿನ್ನದೇ ಭಾಷೆಯಲ್ಲಿಯೇ ಉತ್ತರ ನೀಡುತ್ತೇನೆ. ನೇರ ಕಾದಾಟಕ್ಕೆ ಬಂದರೆ ನಿನ್ನ ತಾಕತ್ತು ತಿಳಿಯುತ್ತದೆ. ರಾಜಕೀಯ ಮರುಜನ್ಮ ಕೊಟ್ಟವರಿಗೆ ರಾಜಕೀಯ ಮರಣ ಶಾಸನ ಬರೆಯುವುದು ಗೊತ್ತಿದೆ ಅಂದಿದ್ದಾರೆ.
ಯತ್ನಾಳ್ ಮತ್ತು ನಿರಾಣಿಯ ವಾಕ್ಸಮರದ ಹಿಂದೆ ಕಾಣದ ಕೈಗಳು ಭಾರೀ ಕೆಲಸ ಮಾಡುತ್ತಿವೆ. ಇದರಲ್ಲಿ ಯತ್ನಾಳ್ ಮತ್ತು ಟೀಂ ಮೇಲುಗೈ ಸಾಧಿಸುತ್ತಾ ಅಥವಾ ನಿರಾಣಿ ಮತ್ತು ಟೀಂ ಮೇಲುಗೈ ಸಾಧಿಸುತ್ತಾ ಎಂಬುದು ಭಾರಿ ಕುತೂಹಲ ಮೂಡಿಸಿದೆ.
Live Tv
[brid partner=56869869 player=32851 video=960834 autoplay=true]