Tag: ವಿಜಯಪುರ

  • ವನ್ಯಜೀವಿಗಳ ಅಂಗಾಂಗಳ ಅಕ್ರಮ ಸಾಗಾಟ ಆರೋಪಿಗಳ ಬಂಧನ

    ವನ್ಯಜೀವಿಗಳ ಅಂಗಾಂಗಳ ಅಕ್ರಮ ಸಾಗಾಟ ಆರೋಪಿಗಳ ಬಂಧನ

    ವಿಜಯಪುರ: ಅಕ್ರಮವಾಗಿ ವನ್ಯಜೀವಿಗಳ (Wild Animals) ಅಂಗಾಂಗಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಂದಗಿ (Sindagi) ತಾಲ್ಲೂಕಿನ ಬಾಗಲೂರ (Bagalur) ಬಳಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಮಹಾರಾಷ್ಟ್ರದ (Maharashtra) ಅಸವಲದಾರಾ ಗ್ರಾಮದ ಪವನ್ ಹಾಗೂ ಭೋಸಲೆ ಎಂದು ತಿಳಿದುಬಂದಿದೆ. ಆರೋಪಿಗಳಿಂದ ಕೃಷ್ಣಮೃಗದ ಕೊಂಬು, ತಲೆಬುರುಡೆ, ಚರ್ಮಗಳು ಹಾಗೂ ವಿವಿಧ ಜಾತಿಯ ವನ್ಯ ಪ್ರಾಣಿಗಳ ಅಂಗಾಂಗಗಳನ್ನು ವಶ ಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ನಕಲಿ ಔಷಧಗಳ ಹಾವಳಿ- 18 ಫಾರ್ಮಾ ಕಂಪನಿಗಳ ಪರವಾನಗಿ ರದ್ದು

    ಆರೋಪಿಗಳ ಬಳಿ ಏನೆಲ್ಲ ಇತ್ತು?
    807 ಉಡದ ಶಿಶ್ನಗಳು, 116 ಇಂದ್ರಜಾಲಗಳು, 2 ಕಾಡು ಬೆಕ್ಕಿನ ಪಾದಗಳು, 2 ಕಾಡು ಬೆಕ್ಕು ಉಗುರುಗಳು, 3 ಕರಡಿಯ ಉಗುರುಗಳು, 28 ನೀರು ಪಕ್ಷಿಗಳ ಕಾಲುಗಳು, 2 ಉಡದ ಕಾಲುಗಳು, 73 ಗೂಬೆಯ ಪುಕ್ಕಗಳು, 4 ಕರಡಿಯ ಹಲ್ಲುಗಳು, 32 ಮುಂಗಸಿಯ ಕಾಲುಗಳು, 7 ಮುಂಗುಸಿಯ ದವಡೆಗಳು, 16 ಮುಂಗುಸಿಯ ಚರ್ಮದಿಂದ ಮಾಡಿದ ಉಂಡೆಗಳು, 26 ಕಾಡು ಹಂದಿಯ ಹಲ್ಲುಗಳು, 3 ಅಪರಿಚಿತ ಕಾಡು ಪ್ರಾಣಿಯ ಉಗುರುಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಸಂಬಂಧ ಸಿಂದಗಿ ಸಿಐಡಿ ಅರಣ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಕೇಸ್‌ – ಗ್ಯಾಂಗ್‌ ಸ್ಟಾರ್‌ ಅತಿಕ್‌ ಪುತ್ರ ಎನ್‌ಕೌಂಟರ್‌ಗೆ ಬಲಿ

  • ರಥಕ್ಕೆ ಕಳಸ ಕಟ್ಟುತ್ತಿದ್ದಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವು – ಜಾತ್ರೆ ಮುಂದೂಡಿದ ಗ್ರಾಮಸ್ಥರು

    ರಥಕ್ಕೆ ಕಳಸ ಕಟ್ಟುತ್ತಿದ್ದಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವು – ಜಾತ್ರೆ ಮುಂದೂಡಿದ ಗ್ರಾಮಸ್ಥರು

    ವಿಜಯಪುರ: ರಥದ (Ratha) ಮೇಲಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ನಡೆದಿದೆ.

    ಗುರುವಾರ ಸಂಜೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಶ್ರೀ ಗೋಲ್ಲಾಳೇಶ್ವರ ರಥದ ಮೇಲಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾರೆ. ಗೋಲಗೇರಿ ಗ್ರಾಮದ ಮುದಕಪ್ಪ ಕಾಚಾಪುರ ಸಾವನ್ನಪ್ಪಿದ ದುರ್ದೈವಿ. ರಥಕ್ಕೆ ಕಳಸ ಕಟ್ಟಿ, ಛತ್ರಿ ಕಟ್ಟುತ್ತಿದ್ದಾಗ ಅವರು ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ.

    ಮುದಕಪ್ಪ 15 ವರ್ಷಗಳಿಂದ ರಥಕ್ಕೆ ಕಳಸ ಕಟ್ಟುವ ಕೆಲಸ ಮಾಡುತ್ತಿದ್ದರು. ಮುದಕಪ್ಪ ಕಳಸ ಕಟ್ಟುತ್ತಿದ್ದಾಗಲೇ ಬಿದ್ದು ಸಾವನ್ನಪ್ಪಿರುವ ಹಿನ್ನೆಲೆ ಊರಿನ ಜಾತ್ರೆಯನ್ನು ಗ್ರಾಮಸ್ಥರು ಮುಂದೂಡಿದ್ದಾರೆ. ಇದನ್ನೂ ಓದಿ: ಧ್ರುವನಾರಾಯಣ ಪತ್ನಿ ವೀಣಾ ನಿಧನ

  • ರಥೋತ್ಸವ ವೇಳೆ ರಥದ ಚಕ್ರಕ್ಕೆ ಸಿಲುಕಿ ಯುವಕ ಸಾವು

    ರಥೋತ್ಸವ ವೇಳೆ ರಥದ ಚಕ್ರಕ್ಕೆ ಸಿಲುಕಿ ಯುವಕ ಸಾವು

    ವಿಜಯಪುರ: ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಯುವಕ ಸಾವನ್ನಪ್ಪಿದ ಘಟನೆ ವಿಜಯಪುರ (Vijayapura) ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ ಘಟನೆ ನಡೆದಿದೆ.

    ಪವಾಡ ಬಸವೇಶ್ವರ ಜಾತ್ರೆ ಅಂಗವಾಗಿ ರಥೋತ್ಸವ ಹಮ್ಮಿಕೊಳ್ಳಲಾಗಿತ್ತು. ರಥೋತ್ಸವ ನಡೆಯುತ್ತಿದ್ದ ವೇಳೆ ಚಕ್ರಕ್ಕೆ ಸಿಲುಕಿ ಯುವಕ ಬಸವರಾಜ್ ಸಾವಿಗೀಡಾಗಿದ್ದಾನೆ.

    ಬಸವರಾಜ್‍ಗೆ ಗಂಭೀರ ಗಾಯಗಳಾಗಿದ್ದವು. ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಬಸವರಾಜ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದ್ದಾನೆ. ಇದನ್ನೂ ಓದಿ: ಕಾಂಗ್ರೆಸ್-ಬಿಜೆಪಿ ಘರ್ಷಣೆ, 15 ಕಾರು ಜಖಂ – ಸುರಪುರದಲ್ಲಿ ಶನಿವಾರದವರೆಗೆ ನಿಷೇಧಾಜ್ಞೆ ಜಾರಿ

    ಬಸವರಾಜ್ ಎರಡೂ ಕಾಲುಗಳ ಮೇಲೆ ರಥದ ಕಲ್ಲಿನ ಚಕ್ರಗಳು ಹಾದಿದ್ದವು. ಕಾರಣ ತೀವ್ರವಾಗಿ ಬಸವರಾಜ್ ಗಾಯಗೊಂಡಿದ್ದ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಕೆಲಸಕ್ಕೆ ಗುಡ್ ಬೈ ರಾಜಕೀಯಕ್ಕೆ ಜೈ ಎಂದ ಸರ್ಕಾರಿ ಅಧಿಕಾರಿ

    ಕೆಲಸಕ್ಕೆ ಗುಡ್ ಬೈ ರಾಜಕೀಯಕ್ಕೆ ಜೈ ಎಂದ ಸರ್ಕಾರಿ ಅಧಿಕಾರಿ

    ವಿಜಯಪುರ: ಸರ್ಕಾರಿ ಕೆಲಸಕ್ಕೆ ಗುಡ್ ಬೈ ಹೇಳಿ ಜಿಲ್ಲೆಯ ಅಧಿಕಾರಿಯೊಬ್ಬರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಲೋಕಾಯುಕ್ತ (Lokayukta) ಇಲಾಖೆಯಲ್ಲಿ ಸಿಪಿಐ ಆಗಿದ್ದ ಮಾಜಿ ಅಧಿಕಾರಿ ಮಹೀಂದ್ರ ಕುಮಾರ್ ನಾಯಕ್ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದರಾಗಿದ್ದಾರೆ.

    ಜಿಲ್ಲೆಯ ನಾಗಠಾಣ (Nagathan) ಮೀಸಲು ಮತಕ್ಷೇತ್ರದಿಂದ ಮಹೀಂದ್ರ ಕುಮಾರ್ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಬಿಜೆಪಿ (BJP) ಪಕ್ಷದ ಆಕಾಂಕ್ಷಿಯಾಗಿರುವ ಅವರು ಟಿಕೆಟ್‍ಗಾಗಿ ಕಾದಿದ್ದಾರೆ. ಈ ಮೊದಲು ಬಾಗಲಕೋಟೆ (Bagalakote) ಜಿಲ್ಲೆಯ ಲೊಕಾಯುಕ್ತ ಸಿಪಿಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಮಾನಸಿಕ ಚಿಂತನೆಗೆ ಒಳಗಾಗಿ ನಿಮ್ಮ ಪ್ರಾಣ ಹೋಗಬಾರದು: ಎಚ್‌ಡಿಡಿ ಬಗ್ಗೆ ಎಚ್‌ಡಿಕೆ ಭಾವುಕ

    ತಮ್ಮ ಹುದ್ದೆಗೆ ಮಹೀಂದ್ರ ಕುಮಾರ್ ಮಾರ್ಚ್ ತಿಂಗಳಲ್ಲೇ ರಾಜೀನಾಮೆ ನೀಡಿದ್ದರು. ಆದರೆ ರಾಜೀನಾಮೆ ಅಂಗೀಕಾರವಾಗಿರಲಿಲ್ಲ. ಕಳೆದ 20 ದಿನಗಳ ಹಿಂದೆಯಷ್ಟೆ ಇವರನ್ನು ಬೆಂಗಳೂರು (Bengaluru) ಲೋಕಾಯುಕ್ತ ಡಿಜಿಪಿ ಕೇಂದ್ರ ಕಛೇರಿಗೆ ವರ್ಗಾಯಿಸಲಾಗಿತ್ತು. ಮಾ.31 ರಂದು ರಾಜೀನಾಮೆ ಅಂಗೀಕಾರವಾಗಿದೆ. ಇದೀಗ ಸಕ್ರಿಯ ರಾಜಕಾರಣಕ್ಕೆ ಮಾಜಿ ಪೊಲೀಸ್ ಅಧಿಕಾರಿ ಎಂಟ್ರಿ ಆಗಿದ್ದಾರೆ.

    ನಾಗಠಾಣ ಮತಕ್ಷೇತ್ರದಿಂದ ಮಾಜಿ ಸಚಿವ ಬಿಜೆಪಿ ಪ್ರಭಾವಿ ನಾಯಕ ಗೋವಿಂದ ಕಾರಜೋಳ ಪುತ್ರ ಗೋಪಾಲ ಕಾರಜೋಳ ಕೂಡ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಬಿಜೆಪಿ ಟಿಕೆಟ್ ಯಾರಿಗಾದರೂ ಸಿಗಲಿ, ಕೆಲಸ ಮಾಡುವುದಾಗಿ ಮಹೀಂದ್ರ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಅಳೆದುತೂಗಿ ಹೈಕಮಾಂಡ್‌ಗೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಶಿಫಾರಸು ಮಾಡ್ತೇವೆ: ಜೋಶಿ

  • ಡಿಕೆಶಿ ಹಾಗೂ ಸಿದ್ದರಾಮಯ್ಯ ಪ್ರಚೋದನೆ ಕೆಲಸ ಮಾಡುತ್ತಿದ್ದಾರೆ: ಕಾರಜೋಳ ಕಿಡಿ

    ಡಿಕೆಶಿ ಹಾಗೂ ಸಿದ್ದರಾಮಯ್ಯ ಪ್ರಚೋದನೆ ಕೆಲಸ ಮಾಡುತ್ತಿದ್ದಾರೆ: ಕಾರಜೋಳ ಕಿಡಿ

    ವಿಜಯಪುರ: ಡಿಕೆಶಿ (D.K.Shivakumar) ಹಾಗೂ ಸಿದ್ದರಾಮಯ್ಯನವರಿಗೆ (Siddaramaiah) ಹೇಳಿಕೊಳ್ಳಲು ವಿಷಯವಿಲ್ಲ. ಹಾಗಾಗಿ ಅವರು ಇಂತಹ ಪ್ರಚೋದನೆ ಕೆಲಸ ಮಾಡುತ್ತಿದ್ದಾರೆ. ಇಂತಹದ್ದನ್ನೆಲ್ಲಾ ಅವರು ಬಿಡಬೇಕು ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ (Govind Karjol) ವಾಗ್ದಾಳಿ ನಡೆಸಿದ್ದಾರೆ.

    ವಿಜಯಪುರದಲ್ಲಿ (Vijayapura) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ (Reservation) ವಿಚಾರದಲ್ಲಿ ಯಡಿಯೂರಪ್ಪನವರ (B.S.Yediyurappa) ಮನೆ ಮೇಲೆ ಕಲ್ಲುತೂರಾಟ ವಿಚಾರವಾಗಿ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಸರ್ಕಾರ ಐದು ವರ್ಷ ಅಧಿಕಾರದಲ್ಲಿ ಇದ್ದಾಗ ಇಂತಹ ಯೋಜನೆಗಳನ್ನು ಯಾಕೆ ಮಾಡಲಿಲ್ಲ? ಅವರ ಪ್ರಣಾಳಿಕೆಯಲ್ಲಿ ಇದು ಇತ್ತು. ಅವರೇ ಯಾಕೆ ಮಾಡಲಿಲ್ಲ? ನಾವು ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನು ಕೊಟ್ಟಿದ್ದೇವೆ. ನಮ್ಮ ಸರ್ಕಾರದ ಬಾಗಿಲು ಓಪನ್ ಇದೆ. ಯಾರ ಪ್ರಚೋದನೆಗೂ ಒಳಗಾಗದೆ ಸಿಎಂ ಜೊತೆ ಚರ್ಚೆ ಮಾಡಿ ಎಂದರು. ಇದನ್ನೂ ಓದಿ: Karnataka Election 2023- ಮೇ 10 ರಂದು ಮತದಾನ, ಮೇ 13ಕ್ಕೆ ಫಲಿತಾಂಶ 

    ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದತಿ ಮಾಡುವ ವಿಚಾರದ ಕುರಿತು ಮಾತನಾಡಿದ ಅವರು, ಅದನ್ನು ಜನರೇ ತೀರ್ಮಾನ ಮಾಡುತ್ತಾರೆ. ಅವರು ಹಗಲು ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಅವರು ಎಂದೂ ಅಧಿಕಾರಕ್ಕೆ ಬರುವುದಿಲ್ಲವೆಂದು ಇವತ್ತೇ ಬರೆದುಕೊಡುತ್ತೇನೆ. ಈ ರೀತಿಯಾದ ಗಿಮಿಕ್ ಮಾಡುವುದರಿಂದ ಅಧಿಕಾರಕ್ಕೆ ಬರಲಾಗುವುದಿಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಪ್ರಕರಣ- ಬೆಳಗಾವಿ ಹಿಂಡಲಗಾ ಜೈಲಿನ ಕೈದಿ ವಶಕ್ಕೆ

    ರಾಹುಲ್ ಗಾಂಧಿ (Rahul Gandhi) ಸಾವರ್ಕರ್ ಅಲ್ಲ ಎಂಬ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಸಾವರ್ಕರ್ ಅಲ್ಲಾ ಎಂದು ರಾಹುಲ್ ಗಾಂಧಿ ಹೇಳಿದ್ದನ್ನು ಈ ದೇಶದ ಪ್ರಜೆಗಳು ಲೆಕ್ಕಕ್ಕೆ ಇಟ್ಟಿಲ್ಲ. ಹೀಗಾಗಿ ಅವರು ಏನೇ ಹೇಳಿದರೂ ಅದು ಲೆಕ್ಕಕ್ಕಿಲ್ಲ. ಅದು ಗಾಳಿ ಸುದ್ದಿ ಅಷ್ಟೇ ಎಂದರು. ಇದನ್ನೂ ಓದಿ: ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯ- ಕೋಟ್ಯಂತರ ರೂ. ಸಂಗ್ರಹ 

    ನಾಳೆಯೇ ಸಿಎಂ ಅವರನ್ನು ಕರೆಸಿ ವಿಜಯಪುರದ ವಿಮಾನ ನಿಲ್ದಾಣ ಟರ್ಮಿನಲ್ ಬಿಲ್ಡಿಂಗ್ ಓಪನ್ ಮಾಡಬೇಕು ಎಂದುಕೊಂಡಿದ್ದೆವು. ವಿಮಾನ ಕಂಪನಿ ಮಾಲೀಕರ ಒಪ್ಪಂದ ಕಾರ್ಯಕ್ಕೂ ಅನುಕೂಲ ಅಗಿತ್ತು. ಸಿಎಂ ಅವರು ಕೂಡಾ ಬರುತ್ತೇನೆ ಎಂದು ಒಪ್ಪಿಕೊಂಡಿದ್ದರು. ಆದರೆ ಇಂದು ನೀತಿ ಸಂಹಿತೆ ಜಾರಿಯಾದರೆ ಉದ್ಘಾಟನೆ ಮಾಡಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ನರೇಗಾ ಬಿಲ್ ಪಾವತಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ತಾಂತ್ರಿಕ ಸಹಾಯಕ ವಜಾ

  • ಮುಸ್ಲಿಮರು 3 ಕಡೆ ಲಾಭ ಪಡೆಯುತ್ತಿದ್ದಾರೆ; ಮೀಸಲಾತಿ ಇವರಪ್ಪನ ಮನೆಯದ್ದಾ – ಯತ್ನಾಳ್‌ ಪ್ರಶ್ನೆ

    ಮುಸ್ಲಿಮರು 3 ಕಡೆ ಲಾಭ ಪಡೆಯುತ್ತಿದ್ದಾರೆ; ಮೀಸಲಾತಿ ಇವರಪ್ಪನ ಮನೆಯದ್ದಾ – ಯತ್ನಾಳ್‌ ಪ್ರಶ್ನೆ

    ವಿಜಯಪುರ: ಮುಸ್ಲಿಮರು ಮೂರು ಕಡೆಗಳಲ್ಲಿ ಲಾಭ ಪಡೆಯುತ್ತಿದ್ದಾರೆ. ಒಂದೇ ಕಡೆ ಲಾಭ ಸಿಗಬೇಕು. ಮೀಸಲಾತಿ (Muslim Reservation) ಇವರಪ್ಪನ ಮನೆಯದಾ ಎಂದು ಮೀಸಲಾತಿ ಕಡಿತ ವಿಚಾರಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ಪ್ರತಿಕ್ರಿಯಿಸಿದರು.

    ವಿಜಯಪುರದಲ್ಲಿ (Vijayapura) ಮಾತನಾಡಿದ ಅವರು, ದಲಿತರಿಗೆ ಇನ್ನು 2 ಪರ್ಸೆಂಟ್ ಮೀಸಲಾತಿ ಹೆಚ್ಚು ಮಾಡ್ತೀವಿ. ದಲಿತರಿಗೆ ಈಗ 17 ಮಾಡಿದ್ದೇವೆ, ಮುಂದೆ ನರೇಂದ್ರ ಮೋದಿ ಅವರು 21 ಪರ್ಸೆಂಟ್ ಮಾಡ್ತಾರೆ ಎಂದರು. ಇದನ್ನೂ ಓದಿ: ಮುಸ್ಲಿಮರಿಗೆ 2ಬಿ ಮೀಸಲಾತಿ ರದ್ದು: ರಾಜ್ಯಪಾಲರಿಗೆ ದೂರು ನೀಡಲು ಎಎಪಿ ನಿರ್ಧಾರ

    ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮೀಸಲಾತಿ ರದ್ದು ಮಾಡ್ತೀವಿ ಎಂದ ಡಿಕೆಶಿ ಹೇಳಿಕೆಗೆ ಟಾಂಗ್ ನೀಡಿದ ಅವರು, ಐತಿಹಾಸಿಕ ನಿರ್ಣಯದಿಂದ ಕಾಂಗ್ರೆಸ್ ಕಂಗಾಲಾಗಿದೆ. ಕಾಂಗ್ರೆಸ್ ಥರಥರ ಎಂದು ಅಲುಗಾಡಿ ಹೋಗಿದೆ. ಡಿಕೆಶಿಗೆ ತಾಕತ್ತಿದ್ದರೆ ಮೀಸಲಾತಿ ರದ್ದು ಮಾಡ್ತೀವಿ ಎಂದು ಚುನಾವಣೆಯಲ್ಲಿ ಹೇಳಲಿ. ಮೀಸಲಾತಿ ರದ್ದು ಮಾಡ್ತೀವಿ ಎಂದ್ರೆ ಕಾಂಗ್ರೆಸ್ ಡೆಪಾಜಿಟ್ ರದ್ದಾಗುತ್ತೆ ಎಂದು ಕುಟುಕಿದರು.

    ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, 5 ವರ್ಷ ಸಿಎಂ ಆಗಿದ್ದವರಿಗೆ ಈ ಪರಿಸ್ಥಿತಿ ಬರಬಾರದಿತ್ತು. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರನ್ನ ಸಿಎಂ ಮಾಡಲ್ಲ. ಸಿದ್ದರಾಮಯ್ಯರನ್ನ ಬಲಿಪಶು ಮಾಡಲಿದ್ದಾರೆ. ಸಿದ್ದರಾಮಯ್ಯ ಸಮುದಾಯದವರು ಕಾಂಗ್ರೆಸ್ ಬೆಂಬಲಿಸಬಾರದು. ನಾಳೆ ಗೂಂಡಾನನ್ನ (ಡಿಕೆಶಿಯನ್ನ) ಸಿಎಂ ಮಾಡಿದ್ರೆ ನಾವು, ನೀವು ಸೇರಿಯೇ ಸಾಯ್ತೇವೆ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಚಾಟಿ ಬೀಸಿದರು. ಇದನ್ನೂ ಓದಿ: ಮೈಸೂರಿನ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೊರಟಾಗ ದೊಡ್ಡಗೌಡ್ರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಪತ್ನಿ

    ಅತಿಯಾದ ಮುಸ್ಲಿಂ ತುಷ್ಟೀಕರಣವೇ ಸಿದ್ದರಾಮಯ್ಯ ಈ ಸ್ಥಿತಿಗೆ ಕಾರಣ. ಸಿದ್ದರಾಮಯ್ಯ ಒನ್ ಸೈಡ್ ಹೋಗಿದ್ದಾರೆ. ಎಲ್ಲ ಜನಾಂಗಗಳನ್ನ ಪ್ರೀತಿ ಮಾಡಬೇಕು. ಒಂದೇ ಜನಾಂಗವನ್ನ ತಲೆ ಮೇಲೆ ಕೂರಿಸಿಕೊಂಡ್ರೆ, ಉಳಿದವರು ಬುದ್ಧಿ ಕಲಿಸುತ್ತಾರೆ ಎಂದು ಟಾಂಗ್‌ ಕೊಟ್ಟರು.

    ವರುಣಾ ಕೂಡ ಸಿದ್ದರಾಮಯ್ಯಗೆ ಅಷ್ಟು ಸುಲಭ ಇಲ್ಲ. ವರುಣಾದಲ್ಲೂ ಸಿದ್ದರಾಮಯ್ಯ ಗೆಲ್ಲೋದು ಕಷ್ಟ. ಸೋಶಿಯಲ್ ಇಂಜಿನಿಯರಿಂಗ್ ಅಷ್ಟು ಸರಿ ಇಲ್ಲ. ಮೊದಲು ಜನ ಮುಗ್ದರಿದ್ದರು. ವೋಟು ಹಾಕ್ತಿದ್ರು, ಈಗ ಯಾರು ಏನು ಮಾಡಿದ್ದಾರೆ ಅನ್ನೋ ಲಿಸ್ಟ್ ಜನರ ಬಳಿ ಇದೆ ಎಂದರು.

  • ವಿಜಯಪುರ ಲಾಡ್ಜ್‌ನಲ್ಲಿ ಎರಡು ಶವ ಪತ್ತೆ: ಸ್ಥಳಕ್ಕೆ ಎಸ್ಪಿ ಭೇಟಿ

    ವಿಜಯಪುರ ಲಾಡ್ಜ್‌ನಲ್ಲಿ ಎರಡು ಶವ ಪತ್ತೆ: ಸ್ಥಳಕ್ಕೆ ಎಸ್ಪಿ ಭೇಟಿ

    ವಿಜಯಪುರ: ಯುವಕನೊಬ್ಬ ತನ್ನ ಜೊತೆಗಾರನನ್ನು ಚಾಕುವಿಂದ ಹತ್ಯೆ ಮಾಡಿ ನಂತರ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ (Vijayapura) ನಗರದ ರಾಜಧಾನಿ ಲಾಡ್ಜ್‌ನಲ್ಲಿ (Rajadhani lodge) ನಡೆದಿದೆ.

    ಬಳ್ಳಾರಿ (Ballari)  ಜಿಲ್ಲೆಯ ಹಗರಿಬೊಮ್ಮನಹಳ್ಳಿ (Hagaribommanhalli) ತಾಲೂಕಿನ ಕೃಷ್ಣಪುರ ತಂಡಾ ನಿವಾಸಿ ಸಿ.ಇಂದ್ರಕುಮಾರ ಕೊಲೆಯಾಗಿದ್ದು, ಇತನನ್ನು ಕೊಲೆ ಮಾಡಿದ ಇನೊಬ್ಬ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ. ಇದನ್ನೂ ಓದಿ: ಚುನಾವಣೆಗಾಗಿ ಹಣ ಹಂಚುವ, ಆಮಿಷ ಒಡ್ಡುವವರ ಬಗ್ಗೆ ಮಾಹಿತಿ ನೀಡಿ – ಕಂಟ್ರೋಲ್‌ ರೂಂ ತೆರೆದ ಐಟಿ

    ಇಂದ್ರಕುಮಾರ ಮಾ.22 ರಂದು ಆಧಾರ್ ಕಾರ್ಡ್ ತೋರಿಸಿ ಲಾಡ್ಜ್‌ನಲ್ಲಿ ರೂಮ್ ನಂ 114ನ್ನು ಪಡೆದುಕೊಂಡಿದ್ದ. ಇನ್ನೊಬ್ಬ ವ್ಯಕ್ತಿ ಯಾವಾಗ ರೂಮ್‍ಗೆ ಬಂದಿದ್ದಾನೆ ಎನ್ನುವುದು ಲಾಡ್ಜ್ ಸಿಬ್ಬಂದಿಗೆ ಮಾಹಿತಿ ಇಲ್ಲ.

    ಎರಡು ದಿನ ರೂಮ್ ಬಾಗಿಲು ಸಹ ತೆರೆದಿರಲಿಲ್ಲ. ಶುಕ್ರವಾರ ಕೊಠಡಿಯಿಂದ ಕೆಟ್ಟ ವಾಸನೆ ಬರಲು ಆರಂಭಿಸಿದೆ. ಬೆಳಗ್ಗೆ 10ಗಂಟೆ ಸುಮಾರಿಗೆ ಲಾಡ್ಜ್ ಸಿಬ್ಬಂದಿ ಇನ್ನೊಂದು ಕೀ ಬಳಸಿ ರೂಮ್ ಬಾಗಿಲು ತೆಗೆದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.

    ರೂಮ್‍ನಲ್ಲಿ ಬೈಕ್ ಕೀ ಪತ್ತೆಯಾಗಿದ್ದು, ಬೈಕ್ ವಿಜಯಪುರ ತಾಲೂಕಿನ ಅರಕೇರಿ ನಿವಾಸಿಯೊಬ್ಬರ ಹೆಸರಿನಲ್ಲಿ ರಿಜಿಸ್ಟರ್ ಆಗಿದೆ. ಸ್ಥಳಕ್ಕೆ ಖುದ್ದು ಎಸ್ಪಿ ಆನಂದಕುಮಾರ ಭೇಟಿ ನೀಡಿ ಪ್ರಕರಣದ ಮಾಹಿತಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಪರೇಷನ್ ಕಮಲ ಪ್ರಕ್ರಿಯೆ ಗಿನ್ನಿಸ್ ರೆಕಾರ್ಡ್- ಹೆಚ್‍ಡಿಕೆ

  • ಕೇಂದ್ರ ಸಚಿವೆ ಪ್ರಯಾಣಿಸುತ್ತಿದ್ದ ಕಾರು ಅಪಘಾತ

    ಕೇಂದ್ರ ಸಚಿವೆ ಪ್ರಯಾಣಿಸುತ್ತಿದ್ದ ಕಾರು ಅಪಘಾತ

    ವಿಜಯಪುರ: ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ (Sadhwi Niranjan Jyoti) ಪ್ರಯಾಣ ಮಾಡುತ್ತಿದ್ದ ಕಾರು ವಿಜಯಪುರದ (Vijayapura) ಜುಮನಾಳ ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ.

    ವಿಜಯಪುರ‌-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಘಟನೆ ನಡೆದಿದೆ. ಕೇಂದ್ರ ಸಚಿವೆ ಪ್ರಯಾಣ ಮಾಡುತ್ತಿದ್ದ ಕಾರು ಹಾಗೂ ಕ್ಯಾಂಟರ್ ಮಧ್ಯೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಕೇಂದ್ರ ಸಚಿವರಿಗೆ ಹಾಗೂ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಕರ್ನಾಟಕದ 865 ಹಳ್ಳಿಗಳಿಗೆ ಮಹಾರಾಷ್ಟ್ರದಿಂದ 54 ಕೋಟಿ ಹಣ ಬಿಡುಗಡೆಗೆ ಆದೇಶ – ಇದು ಸ್ವಾಭಿಮಾನಕ್ಕೆ ಧಕ್ಕೆ ಎಂದ ಡಿಕೆಶಿ

    ಗಾಯಗೊಂಡ ಕೇಂದ್ರ‌‌ ಸಚಿವೆ ಸಾಧ್ವಿ ನಿರಂಜನಾ‌ ಜ್ಯೋತಿ ಹಾಗೂ ಕಾರು ಚಾಲಕನನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಯಾರಿಗೂ ಗಂಭೀರ ಗಾಯವಾಗಿಲ್ಲ ಎಂದು ಪೊಲೀಸರ ಮಾಹಿತಿ ನೀಡಿದ್ದಾರೆ.

    ವಿಜಯಪುರ ನಗರದಲ್ಲಿ ಗುರುವಾರ (ಮಾ.16) ನಡೆದ ಬಿಜೆಪಿ ಮಹಿಳಾ ಸಮಾವೇಶ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಸಾಧ್ವಿ ಅವರು ಭಾಗಿಯಾಗಿದ್ದರು. ಕಾರ್ಯಕ್ರಮಗಳ ಬಳಿಕ ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮ‌ ಎನ್‌ಹೆಚ್ 50ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರ ಭೇಟಿ ನೀಡಿ ಟ್ರಾಫಿಕ್‌ ಜಾಮ್‌ ಕ್ಲಿಯರ್‌ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: 5, 8ನೇ ತರಗತಿ ಬೋರ್ಡ್‌ ಪರೀಕ್ಷೆ ವೇಳಾಪಟ್ಟಿ ಪ್ರಕಟ

    ಸ್ಕ್ಯಾನಿಂಗ್ ಮುಗಿಸಿ ಹೊರಬಂದ ಸಾಧ್ವಿ ನಿರಂಜನಾ ಜ್ಯೋತಿ ಅವರು ʼಪಬ್ಲಿಕ್‌ ಟಿವಿʼಗೆ ಸ್ಪಷ್ಟನೆ ನೀಡಿ, ದೇವರ ದಯೆಯಿಂದ ಯಾವುದೇ ಹೆಚ್ಚಿನ ಹಾನಿ ಆಗಿಲ್ಲ. ಅಪಾಘಾತದಲ್ಲಿ ತಲೆ ಮತ್ತು ಕಾಲಿಗೆ ಸ್ವಲ್ಪ ಪೆಟ್ಟಾಗಿದೆ. ಬಲಗಾಲು ಹಾಗೂ ತಲೆಯ ಸಿಟಿ ಸ್ಕ್ಯಾನಿಂಗ್ ಮಾಡಿದ್ದಾರೆ. ಯಾವುದೇ ಗಂಭೀರ ಪೆಟ್ಟು ಆಗಿಲ್ಲ. ಡ್ರೈವರ್ ತಲೆಗೆ ಗಾಯ, ಕಾಲಿಗೆ ಏಟಾಗಿದೆ. ವಾಹನ ಚಾಲಕನ ನಿಯಂತ್ರಣದಿಂದ ಟ್ಯಾಂಕರ್ ಕೆಳಗೆ ನಾವು ಸಿಕ್ಕಿ ಹಾಕಿಕೊಳ್ಳುವುದು ತಪ್ಪಿದಂತಾಗಿದೆ. ಯಾರು ಕೂಡ ಗಾಬರಿ ಪಡುವ ಅವಶ್ಯಕತೆ ಇಲ್ಲ. ನಾನು ಚೆನ್ನಾಗಿದ್ದೇನೆ. ನಡೆಯಲು ಸಾಧ್ಯವಾಗುತ್ತಿದೆ. ಸಣ್ಣ ಪುಟ್ಟ ಪೆಟ್ಟು ಬಿದ್ದು ಗಾಯ ಅಗಿದೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.

  • ಕಾಂಗ್ರೆಸ್, ಜೆಡಿಎಸ್‌ನಲ್ಲಿ ಲೀಡರ್‌ಶಿಪ್ ಡಿಎನ್‌ಎ ಮೂಲಕ ಬರುತ್ತದೆ: ಸಿ.ಟಿ ರವಿ

    ಕಾಂಗ್ರೆಸ್, ಜೆಡಿಎಸ್‌ನಲ್ಲಿ ಲೀಡರ್‌ಶಿಪ್ ಡಿಎನ್‌ಎ ಮೂಲಕ ಬರುತ್ತದೆ: ಸಿ.ಟಿ ರವಿ

    ವಿಜಯಪುರ: ಕಾಂಗ್ರೆಸ್ (Congress)  ಮತ್ತು ಜೆಡಿಎಸ್‌ನಲ್ಲಿ (JDS) ಲೀಡರ್‌ಶಿಪ್ ಡಿಎನ್‌ಎ ಮೂಲಕ ಬರುತ್ತದೆ. ಈ ಎರಡೂ ಪಕ್ಷದಲ್ಲೂ ಅನುವಂಶೀಯ ನಾಯಕತ್ವವಿದೆ. ಈ ಎರಡೂ ಪಕ್ಷಗಳಿಗೂ ಪ್ರಜಾಪ್ರಭುತ್ವದ (Democracy) ಮೇಲೆ ನಂಬಿಕೆ ಇಲ್ಲ. ಆದರೆ ಬಿಜೆಪಿಗೆ (BJP) ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿದೆ ಎಂದು ಶಾಸಕ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಹೇಳಿದರು.

    ವಿಜಯಪುರ (Vijayapura) ಜಿಲ್ಲೆಯ ನಿಡಗುಂದಿಯಲ್ಲಿ ಸೋಮವಾರ ಬಿಜೆಪಿ ವಿಜಯಸಂಕಲ್ಪ ಯಾತ್ರೆ (Vijaya Sankalpa Yatra) ಕೈಗೊಂಡಿದ್ದು, ಯಾತ್ರೆಗೂ ಮುನ್ನ ಬಿಜೆಪಿ ನಾಯಕರ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಬಿಜೆಪಿ ಪಕ್ಷವು ಜನ ಸಾಮಾನ್ಯರ ನೇತೃತ್ವದಿಂದ ಬೆಳೆದು ಬಂದಿದ್ದು, ನೀತಿಗೆ ಅಂಟಿಕೊಂಡಿದೆ. ರಾಜೀವ್ ಗಾಂಧಿ (Rajiv Gandhi) ಇದ್ದ ಸಂದರ್ಭದಲ್ಲಿ ಕಳ್ಳರೆಲ್ಲಾ ಕಾಂಗ್ರೆಸ್ ಪಕ್ಷದಲ್ಲೇ ಇದ್ದರು. ಇದು ರಾಜೀವ್ ಗಾಂಧಿಯವರಿಗೂ ಗೊತ್ತಿತ್ತು. ನಮಗೆ ನಿಯತ್ತಿದೆ. ನಾವು ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಇಟ್ಟುಕೊಂಡು ಮತಗಳನ್ನು ಕೇಳುತ್ತೇವೆ. ಪ್ರಣಾಳಿಕೆಯಲ್ಲಿ ಹೇಳದೇ ಇರುವಂತಹ ಯೋಜನೆಗಳನ್ನು ನಾವು ಕೊಟ್ಟಿದ್ದೇವೆ. ಅಲ್ಲದೇ ಅದರ ಕೆಲಸಗಳನ್ನು ಯಾರಿಗೂ ಹೇಳದೆ ಮಾಡಿ ತೋರಿಸಿದ್ದೇವೆ ಎಂದರು. ಇದನ್ನೂ ಓದಿ: ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ಸ್ಫೋಟ 

    ಇದೇ ವೇಳೆ ಮಾಜಿ ಸಚಿವ ಎಂ.ಬಿ ಪಾಟೀಲ್ (M.B.Patil) ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಹಿಂದೆ ಕೆರೆ ತುಂಬುವ ಯೋಜನೆಯನ್ನು ನಿಮ್ಮದೇ ಸರ್ಕಾರ ತಿರಸ್ಕಾರ ಮಾಡಿತ್ತು. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೀರಾವರಿ ಸಚಿವರಾಗಿದ್ದಾಗ ಕೆರೆ ತುಂಬುವ ಯೋಜನೆಗೆ ಅನುಮತಿ ನೀಡಿರಲಿಲ್ಲ. ಬಿಜೆಪಿ ಸರ್ಕಾರ ಕೆರೆ ತುಂಬುವ ಯೋಜನೆಯನ್ನು ಜಾರಿಗೆ ತಂದಿದೆ. ಇದೀಗ ನೀವೂ ಅದೇ ಯೋಜನೆಯ ಹೆಸರಿನಲ್ಲಿ ಫೋಟೋ ಹಾಕಿಕೊಳ್ಳುತ್ತೀರಿ ಎಂದು ಹೇಳಿದರು. ಇದನ್ನೂ ಓದಿ: Special- ‘ಆಸ್ಕರ್’ ಪ್ರಶಸ್ತಿ ಪಡೆದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರದ ವಿಶೇಷತೆ ಏನು?

    ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಗ್ಯಾರೆಂಟಿ ಕಾರ್ಡ್ ವಿತರಣೆ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ವಾರೆಂಟ್ ಅವಧಿ ಮುಗಿದಿದೆ. ಇನ್ನು ವಾರೆಂಟಿ ಕಾರ್ಡ್ ನೀಡಿ ಏನು ಪ್ರಯೋಜನ? ಎಲ್ಲಾ ಕಡೆಯೂ ಕಾಂಗ್ರೆಸ್ ಪಕ್ಷ ತಿರಸ್ಕಾರಕ್ಕೆ ಒಳಗಾಗುತ್ತಿದೆ. ಇಷ್ಟಕ್ಕೂ ನೀವು ಕೊಡುತ್ತಿರುವುದು ಫಾಲ್ಸ್ ಕಾರ್ಡ್ ಎಂಬುವುದು ಜನರಿಗೆ ಗೊತ್ತಿದೆ. ನೀವು ಅಧಿಕಾರದಲ್ಲಿ ಇದ್ದ ಸಂದರ್ಭ ಇದನ್ನು ಅನುಷ್ಠಾನಕ್ಕೆ ತಂದಿದ್ದರೆ ಅದೊಂದು ಮಾದರಿಯಾಗುತ್ತಿತ್ತು. ನೀವು ಈ ಗ್ಯಾರೆಂಟಿ ಕಾರ್ಡ್ ಕೊಟ್ಟಿದ್ದರೆ ಅದು ಸತ್ಯದ ಮಾತಾಗುತ್ತಿತ್ತು. ಈ ಫಾಲ್ಸ್ ಕಾರ್ಡ್‌ಗೆ ಮೂರು ಕಾಸಿನ ಕಿಮ್ಮತ್ತು ಕೂಡಾ ಇಲ್ಲ. ಹಾಗಾಗಿ ಫಾಲ್ಸ್ ಕಾರ್ಡ್ ವಿರುದ್ಧ ನಾವು ರಿಪೋರ್ಟ್ ಕಾರ್ಡ್ ಕೊಡುತ್ತೇವೆ. ಕೆಲಸ ಮಾಡಿರುವುದನ್ನು ಜನರ ಮುಂದೆ ಇಟ್ಟು ಮತ ಕೇಳುತ್ತೇವೆ ಎಂದು ಕಿಡಿಕಾರಿದರು. ಇದನ್ನೂ ಓದಿ: `ಕಾಂತಾರ 2’ಗೆ ಚಾಲನೆ ಸಿಗುವ ಮುನ್ನವೇ ಹೊಸ ಸಿನಿಮಾ ನಿರ್ಮಾಣದತ್ತ ರಿಷಬ್ ಶೆಟ್ಟಿ 

    ಸಿದ್ದರಾಮಯ್ಯ (Siddaramaiah) ಏನು ಹೇಳುತ್ತಾರೋ ಅದು ಉಲ್ಟಾ ಆಗುತ್ತದೆ. ಈ ಹಿಂದೆ ಮೋದಿ ಪ್ರಧಾನಿ ಆಗುವುದಿಲ್ಲ ಎಂದಿದ್ದರು, ಆದರೆ ಮೋದಿ (Narendra Modi) ಪ್ರಧಾನಿಯಾದರು. ಯಡಿಯೂರಪ್ಪ (Yediyurappa) ಸಿಎಂ ಆಗುವುದಿಲ್ಲ ಎಂದರು, ಆದರೆ ಯಡಿಯೂರಪ್ಪ ಸಿಎಂ ಆದರು. ಹೀಗಾಗಿ ಇನ್ನುಮುಂದೆ ಸಿದ್ದರಾಮಯ್ಯನವರು ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಪ್ರಚಾರ ಮಾಡಬೇಕು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ರಾಜಕೀಯದಿಂದ ದೂರವಿರಲು ಕಾರಣರಾದ ಆ ವ್ಯಕ್ತಿ ಬಗ್ಗೆ ಬಹಿರಂಗಪಡಿಸಿದ ರಜನಿಕಾಂತ್

    ಮಂಡ್ಯದಲ್ಲಿ ಉರಿಗೌಡ ನಂಜೇಗೌಡ ಮಹಾದ್ವಾರ ತೆರವು ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಹಾದ್ವಾರ ತೆರವು ಮಾಡಿದ್ದು ಅಕ್ಷಮ್ಯ ಅಪರಾಧ. ದೊಡ್ಡ ನಂಜೇಗೌಡ ಹಾಗೂ ಉರಿಗೌಡ ಅವರು ಟಿಪ್ಪುವನ್ನು ಹತ್ಯೆ ಮಾಡಿದರು. ಯಾಕೆ ಹತ್ಯೆ ಮಾಡಿದರು ಎಂಬ ಸತ್ಯ ಹೊರಬರಬೇಕಾಗಿದೆ. ಅವರಿಗೆ ಇತಿಹಾಸದಲ್ಲಿ ಯಾವ ಗೌರವ ಸಿಗಬೇಕಾಗಿತ್ತೋ ಆ ಗೌರವ ಸಿಕ್ಕಿರಲಿಲ್ಲ. ಅವರಿಗೆ ಮತ್ತೆ ಆ ಗೌರವ ಸಿಗಬೇಕು. ಅದಕ್ಕಾಗಿ ಆ ದ್ವಾರ ಹಾಕಿದ್ದು ಸರಿಯಾಗಿದೆ. ಆ ದ್ವಾರವನ್ನು ತೆರವು ಮಾಡಿದ್ದು ತಪ್ಪು. ಜನರ ಮೂಲಕ ಶಾಶ್ವತವಾಗಿ ಆ ದ್ವಾರವನ್ನು ನಿರ್ಮಾಣ ಮಾಡಲು ಬೇಕಾದ ಶಕ್ತಿಯನ್ನು ನಾವು ಮಂಡ್ಯ(Mandya) ಜನರಿಗೆ ನೀಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ದೆಹಲಿ ಶಾಸಕರ ಸಂಬಳ ಭರ್ಜರಿ ಹೆಚ್ಚಳ

  • ಪರೀಕ್ಷಾ ಕೇಂದ್ರದಲ್ಲಿ ಎಡವಟ್ಟು- ಮೊಬೈಲ್ ಕೊಂಡೊಯ್ದು ಸೆಲ್ಫಿ ಕ್ಲಿಕ್ಕಿಸಿದ ಮೇಲ್ವಿಚಾರಕಿ

    ಪರೀಕ್ಷಾ ಕೇಂದ್ರದಲ್ಲಿ ಎಡವಟ್ಟು- ಮೊಬೈಲ್ ಕೊಂಡೊಯ್ದು ಸೆಲ್ಫಿ ಕ್ಲಿಕ್ಕಿಸಿದ ಮೇಲ್ವಿಚಾರಕಿ

    ವಿಜಯಪುರ: ಪಿಯು ಪರೀಕ್ಷಾ (PUC Exam) ಕೇಂದ್ರದಲ್ಲಿ ವಿಶೇಷ ಮೇಲ್ವಿಚಾರಕಿ (Invigilator) ಎಡವಟ್ಟು ಮಾಡಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಕೊಂಡೊಯ್ದು, ಸೆಲ್ಫಿ ಕ್ಲಿಕ್ಕಿಸಿ (Selfie) ಎಡವಟ್ಟು ಮಾಡಿದ್ದಾರೆ.

    ವಿಜಯಪುರ (Vijayapura) ಜಿಲ್ಲೆ ಸಿಂದಗಿ ತಾಲೂಕಿನ ದೇವಣಗಾಂವ ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಕಿ ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಸಿಂದಗಿ ಸಮಾಜ ಕಲ್ಯಾಣ ಇಲಾಖೆ ಎಡಿ ನಿರ್ಮಲಾ ಭೂಸಗೊಂಡ ಪರೀಕ್ಷೆ ಮೇಲ್ವಿಚಾರಣೆ ವೇಳೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೆಂಟಲ್ ಹಾಸ್ಪಿಟಲ್ ಕ್ಯಾಂಡಿಡೇಟ್ ಬಗ್ಗೆ ನಾನು ಮಾತನಾಡಲು ಹೋಗಲ್ಲ: ಡಿಕೆಶಿ

    ದೇವಣಗಾಂವ ಪರೀಕ್ಷಾ ಕೇಂದ್ರದಲ್ಲಿ ನಿರ್ಮಲಾ ಸ್ಪೆಷಲ್ ಅಬ್ಸರ್ವರ್ ಆಗಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದ ವೇಳೆ ಸ್ಮಾರ್ಟ್ಪೋನ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ನಂತರ ವಾಟ್ಸಪ್ ಗ್ರೂಪ್‌ಗಳಲ್ಲಿ ಶೇರ್ ಮಾಡಿದ್ದಾರೆ.

    ನಿರ್ಮಲಾ ಕ್ಲಿಕ್ಕಿಸಿರುವ ಸೆಲ್ಫಿ ಸಮಾಜ ಕಲ್ಯಾಣ ಇಲಾಖೆ ಗ್ರೂಪ್‌ಗೂ ಶೇರ್ ಮಾಡಲಾಗಿದೆ. ಮೇಲ್ವಿಚಾರಕಿ ಪರೀಕ್ಷಾ ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆ ಅವರಿಗೆ ನೋಟಿಸ್ ಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ: ನೂರು ಸಿಡಿ ಬರಲಿ, ನಾನು ಗಟ್ಟಿ ಇದ್ದೇನೆ: ಡಿಕೆಶಿಗೆ ಜಾರಕಿಹೊಳಿ ಟಾಂಗ್