Tag: ವಿಜಯಪುರ

  • ಕರ್ತವ್ಯ ಲೋಪ ಆರೋಪ – ವಿಜಯಪುರ ಡಿಡಿಪಿಐ ಅಮಾನತು

    ಕರ್ತವ್ಯ ಲೋಪ ಆರೋಪ – ವಿಜಯಪುರ ಡಿಡಿಪಿಐ ಅಮಾನತು

    ವಿಜಯಪುರ: ಕರ್ತವ್ಯ ನಿರ್ಲಕ್ಷ್ಯ (Neglect of Duty) ಆರೋಪ ಹಿನ್ನೆಲೆ ವಿಜಯಪುರ (Vijayapura) ಡಿಡಿಪಿಐ (DDPI) ಹಾಗೂ ವಿಜಯಪುರ ಡಯಟ್‌ನ ಹಿರಿಯ ಉಪನ್ಯಾಸಕರಿಬ್ಬರನ್ನು ಅಮಾನತು (Suspend) ಮಾಡಲಾಗಿದೆ.

    ಐಇಡಿಎಸ್‌ಎಸ್ ಯೋಜನೆ ಅನುಷ್ಠಾನ ಮಾಡುವಲ್ಲಿ ಗಂಭೀರ ಕರ್ತವ್ಯ ನಿರ್ಲಕ್ಷ್ಯ ಆರೋಪ ಹಿನ್ನೆಲೆ ಅಮಾನತು ಮಾಡಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಆದೇಶ ಹೊಡಿಸಲಾಗಿದೆ. ವಿಜಯಪುರ ಡಿಡಿಪಿಐ ಎನ್‌ಹೆಚ್ ನಾಗೂರ, ವಿಜಯಪುರ ಡಯಟ್ ಹಿರಿಯ ಉಪನ್ಯಾಸಕರಾದ ಎಸ್‌ಎ ಮುಜಾವರ, ಎಎಸ್ ಹತ್ತಳ್ಳಿ ಅಮಾನತು ಆದ ಅಧಿಕಾರಿಗಳು. ಇದನ್ನೂ ಓದಿ: ಹನುಮಧ್ವಜ ಇಳಿಸಿದಂತೆಯೇ ನಿಮ್ಮನ್ನು ಹಿಂದೂಗಳು ಕುರ್ಚಿಯಿಂದ ಇಳಿಸುವ ದಿನ ದೂರವಿಲ್ಲ: ಸಿಎಂಗೆ ಆರ್.ಅಶೋಕ್ ಠಕ್ಕರ್

    2009-10 ಹಾಗೂ 2011-12 ರಲ್ಲಿ ಐಇಡಿಎಸ್‌ಎಸ್ ಯೋಜನೆ ಅನುದಾನ ದುರುಪಯೋಗ ಮಾಡಿರೋ ಆರೋಪ ಇವರ ಮೇಲೆ ಇದೆ. ಇವರು ಸ್ವಯಂ ಸೇವಾ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲು ಶಿಫಾರಸು ಮಾಡಿದ್ದಾರೆ. ಇದನ್ನೂ ಓದಿ: ದೇವಾಲಯದ ಆವರಣದಲ್ಲಿ ಮಾಂಸಾಹಾರ ಸೇವನೆ – ಇದು ಪಿಕ್ನಿಕ್‌ ಸ್ಪಾಟ್‌ ಅಲ್ಲ ಎಂದು ಕೋರ್ಟ್‌ ಗರಂ

    ನಿಯಮ ಬಾಹಿರವಾಗಿ ಅಸ್ತಿತ್ವದಲ್ಲಿ ಇರದ ಎನ್‌ಜಿಓಗಳಿಗೆ ಹಣ ಬಿಡುಗಡೆ ಮಾಡಿರೋ ಆರೋಪ ಇದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಅವರಿಂದ ಅಮಾನತು ಆದೇಶ ಮಾಡಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪರಿಂದ ಅಮಾನತು ಆದೇಶ ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಪಿಜಿಗಳಿಗೆ ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ – ಐಡಿ ಕಾರ್ಡ್ ವಿತರಣೆಗೆ ಚಿಂತನೆ
  • ವಿಜಯಪುರದಲ್ಲಿ ಎರಡು ಬಾರಿ ಭೂಕಂಪನ – ಆತಂಕದಲ್ಲಿ ಜನರು

    ವಿಜಯಪುರದಲ್ಲಿ ಎರಡು ಬಾರಿ ಭೂಕಂಪನ – ಆತಂಕದಲ್ಲಿ ಜನರು

    ವಿಜಯಪುರ: ಐತಿಹಾಸಿಕ ಜಿಲ್ಲೆ ವಿಜಯಪುರದಲ್ಲಿ (Vijayapura) ಭೂಕಂಪನದ (Earthquake) ಅನುಭವ ಆಗಿದೆ. ಭಾನುವಾರ ತಡರಾತ್ರಿ ಎರಡು ಬಾರಿ ಭೂಕಂಪನ ಸಂಭವಿಸಿದೆ.

    ವಿಜಯಪುರ ನಗರ ಮತ್ತು ಬಸವನಬಾಗೇವಾಡಿ (Basavana Bagewadi) ತಾಲೂಕಿನ ಮನಗೂಳಿಯಲ್ಲಿ ಭೂಮಿ ಕಂಪಿಸಿದೆ. ಭಾನುವಾರ ರಾತ್ರಿ 12:22 ಹಾಗೂ ರಾತ್ರಿ 1:20ಕ್ಕೆ ಭೂಮಿ ಕಂಪಿಸಿದ ಅನುಭವ ಆಗಿದೆ. ಇದನ್ನೂ ಓದಿ: ವೇಣೂರಿನಲ್ಲಿ ಪಟಾಕಿ ಗೋಡೌನ್ ಸ್ಫೋಟ – ಮೂವರು ಕಾರ್ಮಿಕರ ದಾರುಣ ಸಾವು

    2.9 ತೀವ್ರತೆಯಲ್ಲಿ ಭೂಕಂಪನ ಆಗಿದ್ದು, ಭೂಮಿಯ 5 ಕಿ.ಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ. ಆ್ಯಪ್‌ಗಳಲ್ಲೂ ಭೂಕಂಪನ ದಾಖಲಾಗಿದೆ. ಇದರಿಂದ ವಿಜಯಪುರದ ಜನರಲ್ಲಿ ಆತಂಕ ಮನೆಮಾಡಿದೆ. ಇದನ್ನೂ ಓದಿ: ಶಾಲಾ ಬಸ್-ಟ್ರ್ಯಾಕ್ಟರ್‌ ನಡುವೆ ಭೀಕರ ಅಪಘಾತ – ನಾಲ್ವರು ವಿದ್ಯಾರ್ಥಿಗಳ ದುರ್ಮರಣ

  • ಸಂಸದ ರಮೇಶ್ ಜಿಗಜಿಣಗಿಗೆ ಎದೆನೋವು – ಖಾಸಗಿ ಆಸ್ಪತ್ರೆಗೆ ದಾಖಲು

    ಸಂಸದ ರಮೇಶ್ ಜಿಗಜಿಣಗಿಗೆ ಎದೆನೋವು – ಖಾಸಗಿ ಆಸ್ಪತ್ರೆಗೆ ದಾಖಲು

    ಬಾಗಲಕೋಟೆ: ವಿಜಯಪುರದ ಸಂಸದ ರಮೇಶ್ ಜಿಗಜಿಣಗಿಯವರಿಗೆ (Ramesh Jigajinagi) ಎದೆನೋವು ಕಾಣಿಸಿಕೊಂಡಿದ್ದು, ಅವರನ್ನು ಕೂಡಲೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ವಿಜಯಪುರದಿಂದ (Vijaypur) ಬಾಗಲಕೋಟೆ (Bagalkot) ಮಾರ್ಗದಲ್ಲಿ ಕಾರಿನಲ್ಲಿ ಬರುತ್ತಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ತುರ್ತು ಚಿಕಿತ್ಸಾ ವಾರ್ಡ್‍ನಲ್ಲಿ ಆಕ್ಸಿಜನ್ ಅಳವಡಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ನಂದಿಬೆಟ್ಟದಲ್ಲಿ ಆತ್ಮಹತ್ಯೆ – ಒಂದೂವರೆ ತಿಂಗಳ ಬಳಿಕ ಶವ ಪತ್ತೆ

    ಈ ಬಗ್ಗೆ ಆಸ್ಪತ್ರೆಯ ವೈದ್ಯ ಡಾ.ಸುಭಾಷ್ ಪಾಟೀಲ್ ಪ್ರತಿಕ್ರಿಯಿಸಿದ್ದು, ರಮೇಶ್ ಜಿಗಜಿಣಗಿ ಅವರು ಮದ್ಯಾಹ್ನ 3:30ಕ್ಕೆ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಅವರ ಉಸಿರಾಟದಲ್ಲಿ ಏರುಪೇರಾಗಿತ್ತು. ಅಕ್ಸಿಜನ್ ಲೇವಲ್ ಕಮ್ಮಿ ಆಗಿತ್ತು. ಅಲ್ಲದೇ ಹೃದಯ ಬಡಿತದಲ್ಲಿ ವ್ಯತ್ಯಾಸ ಉಂಟಾಗಿತ್ತು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.

    ಜಿಗಜಿಣಗಿಯವರಿಗೆ ಯಾವುದೇ ಗಂಭೀರ ಸಮಸ್ಯೆ ಇಲ್ಲ, ಹೃದಯಾಘಾತ ಆಗಿಲ್ಲ. ಇಲ್ಲಿ ಬಂದ ಮೇಲೆ ಅಕ್ಸಿಜನ್ ಕೊಟ್ಟು, ಸಿಟಿ ಸ್ಕ್ಯಾನ್ ಹಾಗೂ ಇಸಿಜಿ ಮಾಡಿ ತಪಾಸಣೆ ಮಾಡಲಾಗಿದೆ. ಪುಪ್ಪಸದಲ್ಲಿ ಸ್ವಲ್ಪ ಪ್ರಮಾಣ ವಾಟರ್ ಕಂಟೆಂಟ್ ಸ್ಟೋರ್ ಆಗಿತ್ತು. ಮೊದಲಿನಿಂದಲೂ ಅವರಿಗೆ ಈ ಸಮಸ್ಯೆ ಇತ್ತು. ಚಿಕಿತ್ಸೆ ಕೊಟ್ಟ ಮೇಲೆ ಎಲ್ಲಾ ನಾರ್ಮಲ್ ಆಗಿದ್ದಾರೆ. ಯಾವುದೇ ಭಯಪಡುವ ಅಗತ್ಯವಿಲ್ಲ. ಎರಡು ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: 9ನೇ ಬಾರಿಗೆ ಬಿಹಾರ ಸಿಎಂ ಆಗಿ ನಿತೀಶ್‌ ಕುಮಾರ್‌ ಪ್ರಮಾಣ ವಚನ ಸ್ವೀಕಾರ

  • ಯತ್ನಾಳ್ ಮಾಲೀಕತ್ವದ ಸಕ್ಕರೆ ಕಾರ್ಖಾನೆಗೆ ನೋಟಿಸ್; ಕೇಸ್ ದಾಖಲಿಸಿ ಕ್ರಮಕ್ಕೆ ಸೂಚನೆ!

    ಯತ್ನಾಳ್ ಮಾಲೀಕತ್ವದ ಸಕ್ಕರೆ ಕಾರ್ಖಾನೆಗೆ ನೋಟಿಸ್; ಕೇಸ್ ದಾಖಲಿಸಿ ಕ್ರಮಕ್ಕೆ ಸೂಚನೆ!

    – ಕಾರ್ಖಾನೆಗೆ ಕೂಡಲೇ ವಿದ್ಯುತ್ ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಆದೇಶ
    – ಸರ್ಕಾರದ ವಿರುದ್ಧ ಶಾಸಕ ಯತ್ನಾಳ್ ಕೆಂಡಾಮಂಡಲ

    ಬೆಂಗಳೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಮಾಲೀಕತ್ವದ ಕಲಬುರಗಿಯ ಸಿದ್ಧಶ್ತೀ ಸೌಹಾರ್ದ ಸಹಕಾರ ಸಕ್ಕರೆ ಕಾರ್ಖಾನೆಗೆ ನೋಟಿಸ್ ನೀಡಲಾಗಿದೆ. ಕಾಯ್ದೆ ಉಲ್ಲಂಘನೆ ಆರೋಪದ ಹಿನ್ನೆಲೆ ಮಾಲಿನ್ಯ ನಿಯಂತ್ರಣ ಮಂಡಳಿ (Pollution Control Board) ನೋಟೀಸ್ ಜಾರಿಗೊಳಿಸಿದೆ.

    ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ವಿಭಾಗದ ಅಧಿಕಾರಿಗಳು ಕಾರ್ಖಾನೆಗೆ (Factory) ಭೇಟಿ ನೀಡಿದಾಗ ಅನುಮತಿ ಪಡೆಯದೇ ಬಾಯ್ಲರ್, ಡಿಸ್ಟಲರಿ ಘಟಕಗಳನ್ನು ಆರಂಭಿಸಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿರುವ ಆರೋಪದಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

    ಅಲ್ಲದೇ ಪರಿಸರ ಮಾಲಿನ್ಯ ಉಂಟಾಗುತ್ತಿರುವ ಕಾರಣಕ್ಕಾಗಿಯೇ ಕಳೆದ ವರ್ಷ ಕೇಂದ್ರ ಪರಿಸರ ಸಚಿವಾಲಯವು ಸಕ್ಕರೆ ಕಾರ್ಖಾನೆಗೆ 1.58 ಕೋಟಿ ರೂ. ದಂಡ ವಿಧಿಸಿತ್ತು ಎಂಬುದಾಗಿಯೂ ನೋಟೀಸ್‌ನಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: 7 ಶಾಸಕರನ್ನ ಖರೀದಿಸಲು ಬಿಜೆಪಿಯಿಂದ ತಲಾ 25 ಕೋಟಿ ರೂ. ಆಫರ್‌ – ಕೇಜ್ರಿವಾಲ್‌ ಹೊಸ ಬಾಂಬ್‌

    ಕಳೆದ ವಾರ ಪರಿಸರ ಸಚಿವ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಕೆಎಸ್‌ಪಿಸಿಬಿ ಸಭೆ ನಡೆಸಿತ್ತು. ಸಭೆಯಲ್ಲಿ ಕಾರ್ಖಾನೆ ವಿರುದ್ಧ ಸಾಕಷ್ಟು ಆರೋಪ ಕೇಳಿಬಂದಿತ್ತು. ತ್ಯಾಜ್ಯ ನೀರು ಘಟಕ ಪೂರ್ಣಗೊಳಿಸಿಲ್ಲ, ತ್ಯಾಜ್ಯ ನೀರು ಶುದ್ಧೀಕರಣ ಮಾಡುತ್ತಿಲ್ಲ, ಮಳೆ ನೀರು ಕೊಯ್ಲು ಆಳವಡಿಸಿಲ್ಲ ಎಂಬ ಆರೋಪಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿ ಕಾರ್ಖಾನೆಯ ವಿರುದ್ಧ ಕ್ರಮಕ್ಕೆ ಸೂಚಿಸಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಂತ ಎ. ತಮ್ಮಯ್ಯ ನೋಟಿಸ್ ಜಾರಿಗೊಳಿಸಿದ್ದಾರೆ.

    ಕಾರ್ಖಾನೆಗೆ ಕರೆಂಟ್ ಕಟ್‌ಗೆ ಸೂಚನೆ:
    ಯತ್ನಾಳ್ ಮಾಲೀಕತ್ವದ ಕಾರ್ಖಾನೆಗೆ ವಿದ್ಯುತ್ ಸ್ಥಗಿತಗೊಳಿಸುವಂತೆ ಗುಲಬರ್ಗಾ ವಿದ್ಯುತ್ ಸರಬರಾಜು ಸಂಸ್ಥೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದೆ. ತಕ್ಷಣದಿಂದಲೇ ಇಡೀ ಕಾರ್ಖಾನೆಗೆ ವಿದ್ಯುತ್ ಸ್ಥಗಿತಗೊಳಿಸುವಂತೆ ಎಂಡಿಗೆ ಸೂಚನೆ ನೀಡಿದೆ. ಇದನ್ನೂ ಓದಿ: ಎಂಜಿ ರೋಡ್- ಬೈಯಪ್ಪನಹಳ್ಳಿ ಮೆಟ್ರೋ ಸಂಚಾರದಲ್ಲಿ ತಾತ್ಕಾಲಿಕ ಸ್ಥಗಿತ- ಪ್ರಯಾಣಿಕರ ಪರದಾಟ

    ಯತ್ನಾಳ್ ಎಕ್ಸ್ ಖಾತೆಯಲ್ಲಿ ಏನಿದೆ?
    ನೋಟಿಸ್ ಜಾರಿಗೊಳಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ್ ಕೆಂಡಾಮಂಡಲವಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿ ಎದುರಿಸಲಾಗದೆ ನಮ್ಮ ಎಥನಾಲ್ ಕಾರ್ಖಾನೆಗೆ ನೋಟಿಸ್ ಕೊಡಿಸಿದೆ. ರೈತರಿಗೆ ನೆರವಾಗಲು ಹಾಗೂ ಹಿಂದುಳಿದ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಕಾರ್ಖಾನೆ ಸ್ಥಾಪಿಸಲಾಗಿದೆ. ಕಾನೂನು ರೀತಿಯ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಲಾಗುತ್ತದೆ. ಈ ನೋಟಿಸ್, ಆದೇಶಗಳಿಗೆ ಹೆದರುವ ಜಾಯಮಾನ ನನ್ನದಲ್ಲ ಕಾಂಗ್ರೆಸ್ ಆಡಳಿತದ ವಿರುದ್ಧ ಹೋರಾಟ ಮಾಡಲು ಶಕ್ತಿ ಇಮ್ಮಡಿಯಾಗಿದೆ.

    ರಾಜಕೀಯ ಒತ್ತಡಕ್ಕೆ ಮಣಿದು ಕಾರ್ಖಾನೆ ಮುಚ್ಚಿಸಿರೋದ್ರಿಂದ ಇವರು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಕಾರ್ಖಾನೆ ತೆರೆಯುವುದು ನಿಶ್ಚಿತ. ಈ ನಿಟ್ಟಿನಲ್ಲಿ ಕಾನೂನು ಹೋರಾಟ ನಟಡಸುತ್ತೇನೆ. `ಕೈ’ಲಾಗದವರ ಕೊನೆಯ ಅಸ್ತçವೇ ಅಪಪ್ರಚಾರ ಎಂಬುದು ಗೊತ್ತಿರುವ ವಿಷಯ. ಬಡವರಿಗೆ, ದೀನ-ದಲಿತರಿಗೆ, ಪಕ್ಷದ ಕಾರ್ಯಕರ್ತರಿಗೆ ಸಹಾನೂಭೂತಿಯಿಂದ ಕಾಣುತ್ತ ಬಂದಿರುವ ನಾನು, ನನ್ನ ಮಿತಿಯಲ್ಲಿ ನನ್ನದೇ ಕಾರ್ಖಾನೆಗಳಲ್ಲಿ ನೂರಾರು ಜನರಿಗೆ ಉದ್ಯೋಗ ಸೃಷ್ಟಿಸಿದ್ದೇನೆ. ಜಿಲ್ಲೆಯ ಆರ್ಥಿಕತೆಯನ್ನು ಸುಧಾರಿಸಲು ನನ್ನ ಅಳಿಲು ಸೇವೆಯೂ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜ. 31 ರೊಳಗೆ ಇಡಿ ಮುಂದೆ ಹಾಜರಾಗಿ- ಜಾರ್ಖಂಡ್ ಸಿಎಂಗೆ ಇಡಿ 10ನೇ ಸಮನ್ಸ್‌

  • ಜೈಲಿನಲ್ಲಿ ಶ್ರೀರಾಮೋತ್ಸವ ಆಚರಿಸಿದ್ದಕ್ಕೆ ಹಿಂದೂ ಕೈದಿಗಳ ಮೇಲೆ ಹಲ್ಲೆ ಆರೋಪ!

    ಜೈಲಿನಲ್ಲಿ ಶ್ರೀರಾಮೋತ್ಸವ ಆಚರಿಸಿದ್ದಕ್ಕೆ ಹಿಂದೂ ಕೈದಿಗಳ ಮೇಲೆ ಹಲ್ಲೆ ಆರೋಪ!

    – ಖುದ್ದು ಜೈಲರ್ ಸಮ್ಮುಖದಲ್ಲೇ ಮುಸ್ಲಿಂ ಕೈದಿಗಳಿಂದ ಹಲ್ಲೆ ನಡೆಸಿರುವ ಆರೋಪ
    – ಹಿಂದೂ ಸಂಘಟನೆಗಳಿಂದ ಕ್ರಮಕ್ಕೆ ಒತ್ತಾಯ

    ವಿಜಯಪುರ: ಇದೇ ಜನವರಿ 22ರಂದು ಅಯೋಧ್ಯೆ ಶ್ರೀರಾಮಮಂದಿರದಲ್ಲಿ (Ram Mandir) ಬಾಲಕ ರಾಮನ ಪ್ರಾಣಪ್ರತಿಷ್ಠೆ ನೆರವೇರಿತು. ಇದೇ ಸಮಯಕ್ಕೆ ಶ್ರೀರಾಮನ ಭಕ್ತರು ದೇಶಾದ್ಯಂತ ವಿಶೇಷ ಪೂಜೆ-ಪುನಸ್ಕಾರಗಳನ್ನ ನೆರವೇರಿಸಿದ್ದರು.

    ಅದರಂತೆ ವಿಜಯಪುರದ ಜೈಲಿನಲ್ಲಿಯೂ (Vijaypura Jail) ಕೆಲ ಕೈದಿಗಳು ಜೈಲಿನಲ್ಲಿ ರಾಮೋತ್ಸವ ಆಚರಣೆ ಮಾಡಿದ್ದರು. ಇದನ್ನು ಸಹಿಸದ ಕೆಲವು ಅಧಿಕಾರಿಗಳು ಮುಸ್ಲಿಂ ಖೈದಿಗಳಿಂದ ಹಿಂದೂ ಕೈದಿಗಳ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ವಿಜಯಪುರದ ಕೇಂದ್ರ ಕಾರಾಗೃಹದ ದರ್ಗಾ ಜೈಲ್‌ನಲ್ಲಿ ಘಟನೆ ನಡೆದಿದ್ದು, ಜೈಲಿನಲ್ಲಿ ರಾಮೋತ್ಸವ ಆಚರಿಸಿದ್ದಕ್ಕಾಗಿ ಹಿಂದೂ ಕೈದಿಗಳ (Prisoners) ಮೇಲೆ ಹಲ್ಲೆ ಮಾಡಿಸಿದ್ದಾರೆ ಎನ್ನಲಾಗಿದೆ.

    ಜ.22ರಂದು ಪ್ರಾಣಪ್ರತಿಷ್ಠೆ ಸಮಯಕ್ಕೆ ಜೈಲಿನಲ್ಲಿದ್ದ ಮಹಾರಾಷ್ಟ್ರ ಮೂಲದ ಪರಮೇಶ್ವರ ಜಾಧವ (ದೇವಾ), ರಮೇಶ ದಳವಿ, ಪ್ರದೀಪ ಮಾನೆ ಎಂಬ ಹಿಂದೂ ಕೈದಿಗಳು ಸೆಲ್‌ನಲ್ಲೇ ಶ್ರೀರಾಮೋತ್ಸವ ಆಚರಣೆ ಮಾಡಿದ್ದರು. ಇದರಿಂದ ಕೋಪಗೊಂಡ ಜೈಲರ್ ತನ್ನ ಕಚೇರಿಗೆ ಕರೆಸಿ ಮುಸ್ಲಿಂ ಕೈದಿಗಳಿಂದ ಹಲ್ಲೆ ಮಾಡಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಜೈಲ್‌ನಲ್ಲಿರುವ ಶೇಖ್ ಅಹ್ಮದ್ ಹಾಗೂ ಸಹಚರರಿಂದ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಈ ಹಲ್ಲೆಗೆ ಜೈಲಿನಲ್ಲಿರುವ ಇತರ ಮುಸ್ಲಿಂ ಅಧಿಕಾರಿಗಳೂ ಸಾಥ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಆರೋಪ ಮಾಡಿರುವ ವೀಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಜೈಲರ್ ನಡೆಯನ್ನು ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಸಂಬಂಧ ಪಟ್ಟ ಅಧಿಕಾರಿ ಹಾಗೂ ಹಲ್ಲೆ ನಡೆಸಿದ ಇತರ ಕೈದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ.

  • ಗಣರಾಜ್ಯೋತ್ಸವದ ವೇಳೆ ಗಾಳಿಯಲ್ಲಿ ಗುಂಡು – ಗ್ರಾ.ಪಂ ಅಧ್ಯಕ್ಷೆಗೆ ಗುಂಡೇಟು

    ಗಣರಾಜ್ಯೋತ್ಸವದ ವೇಳೆ ಗಾಳಿಯಲ್ಲಿ ಗುಂಡು – ಗ್ರಾ.ಪಂ ಅಧ್ಯಕ್ಷೆಗೆ ಗುಂಡೇಟು

    ವಿಜಯಪುರ: ವ್ಯಕ್ತಿಯೊಬ್ಬ ಗಣರಾಜ್ಯೋತ್ಸವ (Republic Day 2024) ಆಚರಣೆ ವೇಳೆ ಶೋಕಿಗಾಗಿ ಗಾಳಿಯಲ್ಲಿ ಹಾರಿಸಿದ ಗುಂಡು, ಗ್ರಾಮ ಪಂಚಾಯಿತಿ (Gram Panchayat) ಅಧ್ಯಕ್ಷೆಗೆ ತಗುಲಿದ ಘಟನೆ ಇಂಡಿ ತಾಲೂಕಿನ ಹಿರೆರೂಗಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಮಲ್ಲು ಗಿನ್ನಿ ಎಂಬಾತ ಗುಂಡು ಹಾರಿಸಿದ ವ್ಯಕ್ತಿಯಾಗಿದ್ದಾನೆ. ಈತ ಧ್ವಜಾರೋಹಣದ ವೇಳೆ ಗ್ರಾಪಂ ಎದುರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಈ ವೇಳೆ ಒಂದು ಗುಂಡು ಗ್ರಾಪಂ ಅಧ್ಯಕ್ಷೆಯಾದ ಸೋಮವ್ವ (50) ಎಂಬವರ ತೊಡೆಗೆ ತಗುಲಿದೆ. ಇದನ್ನೂ ಓದಿ: ಶಂಕಿತ ಉಗ್ರನ ಜೊತೆ ಭಟ್ಕಳದ ವಿಚ್ಛೇದಿತ ಮಹಿಳೆ ಲಿಂಕ್‌ – ಲವ್‌ ಕಹಾನಿ ಶುರುವಾಗಿದ್ದೇ ರೋಚಕ!

    ಗುಂಡೇಟಿನಿಂದ ಗಾಯಗೊಂಡ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಚಾರವಾಗಿ ಮಹಿಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದನ್ನೂ ಓದಿ: ಪ್ರೇಯಸಿಯ ಜೊತೆ ಸೇರಿ ಪತ್ನಿಯ ಹತ್ಯೆ- 19 ದಿನಗಳ ಬಳಿಕ ಕೆರೆಯಲ್ಲಿ ಶವ ಪತ್ತೆ

  • ಸ್ವಂತ ಮನೆಯಿಂದ ಹೊರಗೆ ಹಾಕಿದಾಗ ಯಾಕೆ ಬಂದ್ರಿ: ಶೆಟ್ಟರ್‌ಗೆ ಎಂಬಿ ಪಾಟೀಲ್ ಪ್ರಶ್ನೆ

    ಸ್ವಂತ ಮನೆಯಿಂದ ಹೊರಗೆ ಹಾಕಿದಾಗ ಯಾಕೆ ಬಂದ್ರಿ: ಶೆಟ್ಟರ್‌ಗೆ ಎಂಬಿ ಪಾಟೀಲ್ ಪ್ರಶ್ನೆ

    ವಿಜಯಪುರ: ಸ್ವಂತ ಮನೆಯಿಂದ ಹೊರಗೆ ಹಾಕಿದಾಗ ನಿಮಗೆ ಅನ್ಯಾಯ, ಅಪಮಾನ ಆದಾಗ ಯಾಕೆ ಬಿಟ್ಟು ಬಂದ್ರಿ? ಇದನ್ನು ನಾನು ಹೇಳಬೇಕಿಲ್ಲ, ಅವರೇ ಬಿಜೆಪಿಯಿಂದ ಅನ್ಯಾಯ, ಅಪಮಾನ ಆಗಿದೆ ಅಂದಿದ್ರು. ಮೊನ್ನೆಯವರಿಗೆ ಬಿಜೆಪಿ ಅನ್ಯಾಯದ ಬಗ್ಗೆ ಹೇಳುತ್ತಾ ಬಂದಿದ್ರು ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಕಿಡಿಕಾರಿದರು.

    ಬಿಜೆಪಿ ಸ್ವಂತ ಮನೆಗೆ ಮರಳಿದೆ ಎಂದು ಜಗದೀಶ್ ಶೆಟ್ಟರ್ (Jagadish Shettar) ಹೇಳಿಕೆಗೆ ಪ್ರತಿಕ್ರಿಯಿಸಿ, ಮಾಜಿ ಮುಖ್ಯಮಂತ್ರಿ ಆಗಿದ್ದವರಿಗೆ ಬಿಜೆಪಿ ಒಂದು ಎಂಎಲ್‍ಎ ಟಿಕೆಟ್ ಕೊಡಲಿಲ್ಲ. ನನ್ನ ಮಂತ್ರಿ ಮಾಡಬೇಡಿ ಎಂಎಲ್‍ಎ ಟಿಕೆಟ್ ಕೊಡಿ ಅಂದಿದ್ರು. ಎಂಎಲ್‍ಎ ಟಿಕೆಟ್ ಕೊಡದಿದ್ದಾಗ ನಾವು ಕರೆದು ಎಂಎಲ್‍ಎ ಟಿಕೆಟ್ ಕೊಟ್ಟೆವು. ಸೋತ ಮೇಲೆ ಅವರ ಗೌರವಕ್ಕೆ ತಕ್ಕಂತೆ ಚಿಂತಕರ ಚಾವಡಿ, ಎಂಎಲ್‍ಸಿ ಸ್ಥಾನ ಕೊಟ್ಟಿದ್ದೆವು. ಜಗದೀಶ್ ಶೆಟ್ಟರ್ ಲೋಕಸಭೆಗೆ ಬಯಿಸಿದ್ರೆ ಮುಂದೆ ಟಿಕೆಟ್ ಕನ್ಸಿಡರ್ ಮಾಡುವುದಾಗಿತ್ತು. ಇಷ್ಟೆಲ್ಲಾ ಗೌರವ ಕೊಟ್ಟ ಮೇಲೆ ಬಂದು ವಾಪಸ್ ಹೋಗಿರುವುದು ಅವರ ಘನತೆಗೆ ಶೋಭೆ ತರುವಂತಹದ್ದಲ್ಲ ಎಂದರು.

    ಮರಳಿ ಬಿಜೆಪಿ ಸೇರ್ಪಡೆಯಾಗಿ ಜಗದೀಶ್ ಶೆಟ್ಟರ್ ಸಣ್ಣವರಾಗಿದ್ದಾರೆ. ಅವರ ವ್ಯಕ್ತಿತ್ವಕ್ಕೆ ಚ್ಯುತಿ ಬರುತ್ತಿದೆ, ನಮಗೇನೂ ಹಾನಿ ಆಗಲ್ಲ. ಇದರಿಂದ ಜಗದೀಶ್ ಶೆಟ್ಟರ್ ವ್ಯಕ್ತಿತ್ವಕ್ಕೆ ಬಹುದೊಡ್ಡ ಪೆಟ್ಟು ಬಿದ್ದಿದೆ. ಅವರ ಘನತೆಗೆ ಈ ಕೆಲಸ ಮಾಡುವಂತದ್ದಲ್ಲ. ಬಿಜೆಪಿಗೆ ವಾಪಸ್ ಹೋಗಿದ್ದಕ್ಕೆ ಜಗದೀಶ್ ಶೆಟ್ಟರ್ ಕಾರಣ ಏನು ಹೇಳ್ತಿದ್ದಾರೆ. ಬಿಜೆಪಿ ಕಾರ್ಯಕಾರಿಣಿ ಒತ್ತಡದಿಂದ ಮತ್ತೆ ಬಿಜೆಪಿಗೆ (BJP) ಸೇರ್ಪಡೆ ಎಂದಿರುವ ಜಗದೀಶ್ ಶೆಟ್ಟರ್ ಹೇಳಿಕೆಗೆ ಏನು ಒತ್ತಡ ಇತ್ತು. ಆಗ ಯಾಕೆ ಕಾಂಗ್ರೆಸ್‍ಗೆ ಬಂದ್ರಿ, ನಿಮಗೆ ಯಾಕೆ ಟಿಕೆಟ್ ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಶೆಟ್ಟರ್, ಜೋಶಿ ಒಂದು ನಾಣ್ಯದ ಎರಡು ಮುಖದ ರೀತಿ ಕೆಲಸ ಮಾಡಿದ್ದಾರೆ: ವಿ ಸೋಮಣ್ಣ

    ಜಗದೀಶ್ ಶೆಟ್ಟರ್‍ಗೆ ಬಿಜೆಪಿಯಿಂದ ಇಡಿ, ಐಟಿ ಅಸ್ತ್ರ ಬಳಸಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದನ್ನು ಅವರನ್ನೇ ಕೇಳಬೇಕು, ಐಟಿ, ಇಡಿ ಆಗಿದ್ರೆ ನಾನು ಹೇಗೆ ಹೇಳಲಿ. ಅವರಿಗೆ ಏನು ಆಮಿಷ ಒಡ್ಡಿದ್ದಾರೆ ಅನ್ನೋದು ಹೇಳಬೇಕಲ್ಲ. ಬಿಜೆಪಿಗೆ ವಾಪಸ್ ಜಗದೀಶ್ ಶೆಟ್ಟರ್ ಹೋಗಿದ್ದರಿಂದ ಲಾಭ ನಷ್ಟ ಏನಿಲ್ಲ ಯಥಾ ಸ್ಥಿತಿ ಮುಂದುವರಿಯುತ್ತೆ. ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳಿರುವುದು ಅವರ ವ್ಯಕ್ತಿತ್ವಕ್ಕೆ ಕಳಂಕ, ಚ್ಯುತಿ ಬರುವಂತಾಗಿದೆ ಅಂತ ಬಹಳ ಸ್ಪಷ್ಟವಾಗಿ ಹೇಳುವೆ ಎಂದರು.

  • ಮನೆ ಮನೆಗೆ ಶ್ರೀರಾಮ ಮಂದಿರ ಮಂತ್ರಾಕ್ಷತೆ ಹಂಚುವ ವೇಳೆ ಹಲ್ಲೆ; ಆರೋಪ

    ಮನೆ ಮನೆಗೆ ಶ್ರೀರಾಮ ಮಂದಿರ ಮಂತ್ರಾಕ್ಷತೆ ಹಂಚುವ ವೇಳೆ ಹಲ್ಲೆ; ಆರೋಪ

    ವಿಜಯಪುರ: ಮನೆ ಮನೆಗೆ ಶ್ರೀರಾಮಮಂದಿರ (Ram Mandir) ಮಂತ್ರಾಕ್ಷತೆ ಹಂಚುವ ವೇಳೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಮನೆ ಮನೆಗೆ ಮಂತ್ರಾಕ್ಷತೆ ಹಂಚಿಕೆ ಕಾರ್ಯ ವಿಜಯಪುರದಲ್ಲಿ ನಡೆದಿತ್ತು.

    ವಿಜಯಪುರ (Vijayapura) ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಮಂತ್ರಾಕ್ಷತೆ (Mantrakshate) ಹಂಚುವ ವೇಳೆ ಹಿಂದೂ ಸಮಾಜದ ಯುವಕರ ಮೇಲೆ ಹಲ್ಲೆ ನಡೆದ ಆರೋಪ ಕೇಳಿಬಂದಿದೆ. ಮಂತ್ರಾಕ್ಷತೆ ಹಂಚುತ್ತಿದ್ದ ಹಿಂದೂಗಳ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಪಟ್ಟಣದ ವಾರ್ಡ್ ನಂಬರ್ 8 ರಲ್ಲಿ ಘಟನೆ ನಡೆದಿದೆ. ಈ ವಾರ್ಡ್‌ನಲ್ಲಿ ಮುಸ್ಲಿಮರು ಅಧಿಕವಾಗಿದ್ದಾರೆ. ಈ ಏರಿಯಾದಲ್ಲಿ ಘೋಷಣೆ ಕೂಗದಂತೆ ಗಲಾಟೆ ನಡೆದಿತ್ತು‌ ಎನ್ನಲಾಗಿದೆ. ಇದನ್ನೂ ಓದಿ: ರಾಮಲಲ್ಲಾ ವಿಗ್ರಹ ಕೆತ್ತನೆಗೆ ಬಳಸಿರುವ ಕಪ್ಪು ಶಿಲೆ ಸಿಕ್ಕ ಜಾಗದಲ್ಲೇ ರಾಮಮಂದಿರ – ಜ.22 ಕ್ಕೆ ಭೂಮಿಪೂಜೆ

    ಕಾರಣ ಆರ್‌ಎಸ್‌ಎಸ್, ವಿಹೆಚ್‌ಪಿ, ಹಿಂದೂ ಜಾಗರಣ ವೇದಿಕೆ, ಭಜರಂಗ ದಳ ಸೇರಿದಂತೆ ಇತರೆ ಹಿಂದೂ ಸಂಘಟನೆಗಳು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೇ ಘಟನೆ ಖಂಡಿಸಿ ಇಂದು ದೇವರಹಿಪ್ಪರಗಿ ಆಗಮಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ದೇವರಹಿಪ್ಪರಗಿ ಪಟ್ಟಣದಲ್ಲಿ ಜಾಥಾ ಮಾಡಿದ್ದಾರೆ.

    ಶ್ರೀರಾಮ ಮಂತ್ರಾಕ್ಷತೆ, ಶ್ರೀರಾಮ ಮಂತ್ರ ಜಪ ಮಾಡುತ್ತಾ ಜಾಥಾದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು. ಈ ಮೂಲಕ ಹಿಂದೂ ಸಮಾಜದ ಯುವಕರಲ್ಲಿ ಧೈರ್ಯ ತುಂಬಲು ಹಿಂದೂಪರ ಸಂಘಟನೆಗಳು ಮುಂದಾದವು. ಹಿಂದೂ ಯುವಕರ ಮೇಲಿನ ಹಲ್ಲೆ ಕುರಿತು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಕೂಡ ನಡೆದಿದೆ. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಕಠಿಣ ವ್ರತ – ಪ್ರತಿದಿನ 1 ಗಂಟೆ ವಿಶೇಷ ಮಂತ್ರ ಪಠಣ

    ಹಿಂದೂ-ಮುಸ್ಲಿಂ ಸಮಾಜದ ಮುಖಂಡರನ್ನು ಕರೆದು ಪೊಲೀಸರು ಸಭೆ ನಡೆಸಿದ್ದಾರೆ. ಯಾವುದೇ ಶಾಂತಿ ಸುವ್ಯವಸ್ಥೆ ಧಕ್ಕೆಗೆ ಅವಕಾಶ ನೀಡಲ್ಲ ಎಂದು ಉಭಯ ಸಮಾಜದ ಮುಖಂಡರು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಗಲಾಟೆಯಾಗಿರುವ ವಾರ್ಡ್ ನಂಬರ್ 8 ರಲ್ಲಿ ಹಿಂದೂ ಕಾರ್ಯಕರ್ತರು ಮಂತ್ರಾಕ್ಷತೆ ವಿತರಣೆ ಮಾಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.

  • 13 ಸಾವಿರ ಅಡಿ ಎತ್ತರದಲ್ಲಿ ಹಾರಾಡಿದ ರಾಮಮಂದಿರದ ಬ್ಯಾನರ್

    13 ಸಾವಿರ ಅಡಿ ಎತ್ತರದಲ್ಲಿ ಹಾರಾಡಿದ ರಾಮಮಂದಿರದ ಬ್ಯಾನರ್

    – ಸ್ಕೈ ಡೈವಿಂಗ್‍ನಲ್ಲಿ ಮೊಳಗಿತು ಜೈ ಶ್ರೀರಾಮ್

    ವಿಜಯಪುರ: ಅಯೋಧ್ಯೆಯ ರಾಮಮಂದಿರದಲ್ಲಿ (Ram Mandir) ಬಾಲರಾಮನ ಪ್ರಾಣಪ್ರತಿಷ್ಠೆಗೆ (Prana Pratishtha) ದಿನಗಣನೆ ಆರಂಭವಾಗಿದೆ. ಈ ಸಮಯದಲ್ಲಿ ಕೋಟ್ಯಂತರ ಶ್ರೀರಾಮನ ಭಕ್ತರು ದೇಶ ವಿದೇಶಗಳ ನೆಲದಲ್ಲಿ ನಾನಾ ರೀತಿಯಲ್ಲಿ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಬ್ಯಾಂಕಾಕ್‍ನ (Bangkok) ಖೋಯಾಯ್ ಎಂಬಲ್ಲಿ ನಗರದ ವ್ಯಕ್ತಿಯೊಬ್ಬರು ಸೇರಿದಂತೆ ನಾಲ್ವರ ತಂಡ, 13 ಸಾವಿರ ಅಡಿ ಎತ್ತರದಿಂದ ಸ್ಕೈಡೈವಿಂಗ್ (Skydiving) ಮಾಡುವಾಗ ರಾಮಮಂದಿರ, ಜೈ ಶ್ರೀರಾಮ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಬ್ಯಾನರ್ ಹಿಡಿದು, ಜೈಶ್ರೀರಾಮ್ ಘೋಷಣೆ ಕೂಗಿ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.

    ನಮೋ ಸ್ಕೈಡೈವರ್ಸ್ ಎಂಬ ಈ ನಾಲ್ವರ ತಂಡ ಈ ಸಾಹಸ ಮಾಡಿದ್ದಾರೆ. ನಗರದ ರಾಮನ ಪರಮ ಭಕ್ತರಾದ ಉದ್ಯಮಿ ರಾಜಶೇಖರ ಮುತ್ತಿನಪೆಂಡಿಮಠ ಈ ಸಾಹಸ ಮೆರೆದಿದ್ದು, ಇವರ ಜೊತೆ ಇವರ ಸ್ನೇಹಿತರಾದ ಬೆಂಗಳೂರಿನ ರಾಹುಲ್ ಡಾಕ್ರೆ, ಅನುಭವ ಅಗರವಾಲ್ ಹಾಗೂ ಮಹಾರಾಷ್ಟ್ರದ ಹಿಮಾನಶೂ ಸಾಬಳೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠೆ ದಿನ ಶಾಸಕ ಅಭಯ ಪಾಟೀಲ್‌ ಕಡೆಯಿಂದ 5 ಲಕ್ಷ ಲಾಡು ವಿತರಣೆ

    ರಾಮ ಭಕ್ತರ 500 ವರ್ಷಗಳ ಕನಸು ನನಸಾಗುತ್ತಿರುವ ಈ ಸಮಯದಲ್ಲಿ, ದೇಶದೆಲ್ಲೆಡೆ ರಾಮನ ಭಕ್ತರು ನಾನಾ ರೀತಿಯಲ್ಲಿ ಭಕ್ತಿ ಪ್ರದರ್ಶಿಸುತ್ತಿದ್ದಾರೆ. ಬೆಂಗಳೂರಿನ ಮಾಲ್‍ಗಳಲ್ಲಿ ರಾಮನ ರಂಗೋಲಿ ಬಿಡಿಸಿದ್ದು ಸುದ್ದಿಯಾಗಿತ್ತು. ಅದೇ ರೀತಿ ನಮೋ ಸ್ಕೈಡೈವರ್ಸ್ ತಂಡ ಕೂಡ ವಿಶೇಷ ಸಾಧನೆ ಮಾಡಿ ರಾಮನ ಭಕ್ತರ ಮನಸ್ಸನ್ನು ಗೆದ್ದಿದ್ದಾರೆ.

    ರಾಮನಿಗೆ, ರಾಮ ಭಕ್ತಿಗೆ ವ್ಯಾಪ್ತಿಯ ಮಿತಿಯಿಲ್ಲ. ಹಾಗಾಗಿ ಆಗಸದಲ್ಲೂ ಶ್ರೀ ರಾಮನ ಹೆಸರು ಹಾರಬೇಕು ಎಂದು ವಿಭಿನ್ನ ಪ್ರಯತ್ನವನ್ನು ನಮೋ ಸ್ಕೈ ಡೈವರ್ಸ್ ತಂಡ ಮಾಡಿದೆ. ಇದನ್ನೂ ಓದಿ: Ayodhya Ram Mandir: ರಾಮನೂರಿನಲ್ಲಿ ತಲೆಎತ್ತಲಿದೆ ದೇಶದ ಮೊದಲ 7 ಸ್ಟಾರ್‌ ಸಸ್ಯಹಾರಿ ಹೋಟೆಲ್‌

  • ಅಂಗನವಾಡಿ ಕಾರ್ಯಕರ್ತೆಯಿಂದ ಮತಾಂತರಕ್ಕೆ ಯತ್ನ ಆರೋಪ – ರೊಚ್ಚಿಗೆದ್ದ ಗ್ರಾಮಸ್ಥರು

    ಅಂಗನವಾಡಿ ಕಾರ್ಯಕರ್ತೆಯಿಂದ ಮತಾಂತರಕ್ಕೆ ಯತ್ನ ಆರೋಪ – ರೊಚ್ಚಿಗೆದ್ದ ಗ್ರಾಮಸ್ಥರು

    ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಪ್ಪಲದಿನ್ನಿ ತಾಂಡಾದಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು (Anganwadi Worker) ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ವಿಜಯಲಕ್ಷ್ಮಿ ಅಶೋಕ್ ಕುಮಾರ್ ಉಪ್ಪಲದಿನ್ನಿ ತಾಂಡಾದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಈಕೆ ಕೆಲಸ ವೇಳೆ ತಾಂಡಾದ ಜನರ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದಾಳೆ ಎಂದು ಗ್ರಾಮಸ್ಥರಿಂದ ಆರೋಪ ಕೇಳಿಬಂದಿದೆ. ಇದರಿಂದ ರೊಚ್ಚಿಗೆದ್ದು ಗಲಾಟೆ ನಡೆಸಿರುವ ಗ್ರಾಮಸ್ಥರು ವಿಜಯಲಕ್ಷ್ಮಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಯುವನಿಧಿ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

    ಗ್ರಾಮಸ್ಥರಿಂದ ವ್ಯಾಪಕವಾಗಿ ದೂರು ಕೇಳಿಬಂದ ನಂತರ ತಹಶೀಲ್ದಾರರು ಹಾಗೂ ಪೊಲೀಸ್‌ ಅಧಿಕಾರಿಗಳು (Police Officers) ತಾಂಡಾದಲ್ಲೇ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಗ್ರಾಮಸ್ಥರು, ಈಕೆ ಮತಾಂತರಕ್ಕೆ ಯತ್ನಿಸುತ್ತಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ. ಇದರಿಂದ ಮತ್ತಷ್ಟು ಸಿಟ್ಟಾದ ಕಾರ್ಯಕರ್ತೆ ವಿಜಯಲಕ್ಷ್ಮಿ, ಮತಾಂತರ ನನ್ನ ವೈಯಕ್ತಿಕ ವಿಚಾರ ಎಂದು ಮುಖಂಡರ ವಿರುದ್ಧವೇ ವಾಗ್ವಾದಕ್ಕಿಳಿದಿದ್ದಾಳೆ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಕೆ ಹಾಕಿದ್ದಾಳೆ.

    ಅಷ್ಟೇ ಅಲ್ಲದೇ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ತಾಂಡಾದ ಮುಖಂಡರ ವಿರುದ್ಧವೇ ವಿಜಯಲಕ್ಷ್ಮಿ ದೂರು ನೀಡಿದ್ದಾಳೆ. ಅದಕ್ಕೆ ಪ್ರತಿಯಾಗಿ ತಾಂಡಾದ ಮುಖಂಡರು ಸಹ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: Ayodhya Ram Mandir: ರಾಮಮಂದಿರಕ್ಕೆ 4 ಮಾರ್ಗ – ರಾಮನೂರಿಗೆ ಬರುವ ಭಕ್ತರಿಗಿದು ಮೋಕ್ಷದ ಹಾದಿ

    ಸದ್ಯ ತಾಂಡಾದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಶಾಂತಿ ಕಾಪಾಡಲು ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.