Tag: ವಿಜಯಪುರ

  • ನಡು ರಸ್ತೆಯಲ್ಲೇ ಹೊತ್ತಿ ಉರಿದ ಸ್ಪಿರಿಟ್ ಟ್ಯಾಂಕರ್ – ತಪ್ಪಿದ ಭಾರೀ ದುರಂತ

    ನಡು ರಸ್ತೆಯಲ್ಲೇ ಹೊತ್ತಿ ಉರಿದ ಸ್ಪಿರಿಟ್ ಟ್ಯಾಂಕರ್ – ತಪ್ಪಿದ ಭಾರೀ ದುರಂತ

    ವಿಜಯಪುರ: ನಡು ರಸ್ತೆಯಲ್ಲೇ ಉರುಳಿ ಬಿದ್ದ ಸ್ಪಿರಿಟ್ ತುಂಬಿದ ಟ್ಯಾಂಕರ್ ಧಗ ಧಗನೆ ಹೊತ್ತಿ ಉರಿದಿರುವ (Spirit Tanker Fire) ಘಟನೆ ವಿಜಯಪುರದಲ್ಲಿ ನಡೆದಿದ್ದು, ಭಾರೀ ಅನಾಹುತ ತಪ್ಪಿದೆ.

    ವಿಜಯಪುರ (Vijaypura) ಜಿಲ್ಲೆಯ ಸಿಂದಗಿ ಪಟ್ಟಣದ ಹೊರಭಾಗದ ಕಲಬುರಗಿ ಬೈ ಪಾಸ್‌ ಬಳಿ ಚಾಲಕನ ನಿಯಂತ್ರಣ ತಪ್ಪಿದ್ದರಿಂದಾಗಿ ಟ್ಯಾಂಕರ್‌ ಉರುಳಿಬಿದ್ದಿದೆ. ರಸ್ತೆ ಪಕ್ಕದಲ್ಲಿ ಉರುಳಿ ಬೀಳುತ್ತಲೇ ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದನ್ನೂ ಓದಿ: ವಾಣಿಜ್ಯೋದ್ಯಮಿ ಪಲ್ಲವಿ ಡೆಂಪೊಗೆ ಟಿಕೆಟ್‌ – ಗೋವಾ ಇತಿಹಾಸದಲ್ಲೇ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಮೊದಲ ಮಹಿಳೆ

    ಟ್ಯಾಂಕರ್ ಉರುಳಿ ಬೀಳುತ್ತಲೇ ಚಾಲಕ ಕ್ಲೀನರ್ ಎಸ್ಕೇಪ್ ಆಗಿದ್ದಾರೆ. ಬೆಂಕಿಯ ಕೆನ್ನಾಲಿಗೆ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿಯ ಹರಸಾಹಸ ಪಟ್ಟಿದ್ದಾರೆ. ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆ ಬಳಿಕ ರಸ್ತೆಯಲ್ಲೇ ನಿಂತಿದ್ದ ಸ್ಥಳೀಯರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದಾರೆ.

    ಸಿಂದಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ‘ಕರ್ನಾಟಕ Love’s ಕೇರಳ’ ವೆಬ್ ಸಿರೀಸ್: ಬಸ್ ಮೆಕಾನಿಕಲ್ ಹೀರೋ

  • ವಿಜಯಪುರ ಕೋಲ್ಡ್ ಬ್ಲಡ್ ಮರ್ಡರ್ ಕೇಸ್ – 1 ವರ್ಷದ ಬಳಿಕ ಪ್ರಕರಣ ಭೇದಿಸಿದ ಪೊಲೀಸರು

    ವಿಜಯಪುರ ಕೋಲ್ಡ್ ಬ್ಲಡ್ ಮರ್ಡರ್ ಕೇಸ್ – 1 ವರ್ಷದ ಬಳಿಕ ಪ್ರಕರಣ ಭೇದಿಸಿದ ಪೊಲೀಸರು

    – ಫೇಸ್‌ಬುಕ್ ಪ್ರಿಯಕರನನ್ನ ಪತ್ತೆಹಚ್ಚಿದ ತನಿಖೆ ಹಾದಿಯೇ ರೋಚಕ!

    ವಿಜಯಪುರ: ಒಂದು ವರ್ಷದ ಹಳೆಯ ಕೋಲ್ಡ್ ಬ್ಲಡ್ ಮರ್ಡರ್ ಕೇಸ್ (Cold Blood Murder Case) ಅನ್ನು ಭೇದಿಸುವಲ್ಲಿ ವಿಜಯಪುರ ಪೊಲೀಸರು (Vijayapura Police) ಯಶಸ್ವಿಯಾಗಿದ್ದಾರೆ.

    ಒಂದು ವರ್ಷದ ಹಿಂದೆ ನಡೆದಿದ್ದ ತಾಯಿ ಮಗನ ಡಬಲ್ ಮರ್ಡರ್ ಪ್ರಕರಣ ಬೇಧಿಸಿ, ಕೊಲೆಗೆ ಕಾರಣನಾದ ಆರೋಪಿಯನ್ನ (Accused) ಬಂಧಿಸಿದ್ದಾರೆ. ಇದನ್ನೂ ಓದಿ: ಇಡಿ ಕಸ್ಟಡಿಯಲ್ಲಿದ್ದುಕೊಂಡೇ ಮೊದಲ ಸರ್ಕಾರಿ ಆದೇಶ ಹೊರಡಿಸಿದ ಕೇಜ್ರಿವಾಲ್‌ – ಆದೇಶದಲ್ಲಿ ಏನಿದೆ?

    ಏನಿದು ಕೇಸ್?
    ಮೈಸೂರು (Mysuru) ಮೂಲದ ಶೃತಿ ಹಾಗೂ ಆಕೆಯ 13 ವರ್ಷದ ಮಗ ರೋಹನ್ ಒಂದು ವರ್ಷದ ಹಿಂದೆ ಹತ್ಯೆಯಾಗಿದ್ದರು. 2023ರ ಮಾರ್ಚ್ 13 ರಂದು ಕೊಲೆ ನಡೆದಿತ್ತು. ವಿಜಯಪುರದ ಸಾಗರ್ ನಾಯಕ್ ಎಂಬಾತನಿಂದ ಕೊಲೆ ನಡೆದಿತ್ತು. ಸಾಗರ್ ಇಬ್ಬರನ್ನೂ ಕ್ರೂರವಾಗಿ ಕೊಂದು ಎರಡೂ ಶವಗಳನ್ನ ಆಕೆಯದ್ದೇ ಲಗೇಜ್‌ ಬ್ಯಾಗ್‌ನಲ್ಲಿ ತುಂಬಿ ಮಹಾರಾಷ್ಟ್ರ ಗಡಿಯ ಸಿದ್ದಾಪುರ ಗ್ರಾಮದ ಹೊರವಲಯದ ಬಾವಿಗೆ ಬಿಸಾಡಿದ್ದ. ಇದನ್ನೂ ಓದಿ: ಸೋನು ಕಾನೂನುಬಾಹಿರ ದತ್ತು ಪ್ರಕರಣ- ಪೊಲೀಸರಿಂದ ಸ್ಥಳ ಮಹಜರು

    ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಗೆಳತಿ:
    ಕೊಲೆ ಆರೋಪಿ ಸಾಗರ್ ಮೈಸೂರಿನಲ್ಲಿದ್ದಾಗ ಫೇಸ್‌ಬುಕ್ ಮೂಲಕ ಶೃತಿಯ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು, 13 ವರ್ಷದ ಮಗ ಇರೋ ಆಂಟಿ ಬಲೆಗೆ ಬಿದ್ದಿದ್ದ ಸಾಗರ್. ಬಳಿಕ ಆಕೆಯ ನಡತೆ ಮೇಲೆ ಸಂಶಯಗೊಂಡು ಆಕೆಯನ್ನ ಬಿಟ್ಟು ವಿಜಯಪುರಕ್ಕೆ ಬಂದಿದ್ದ. ಶೃತಿ ಸಹ ಸಾಗರ್‌ನನ್ನ ಹುಡುಕಿಕೊಂಡು 2023ರ ಮಾರ್ಚ್ 13 ರಂದು ಮಗ ರೋಹಿತ್‌ನೊಂದಿಗೆ ಲಗೇಜ್ ಸಮೇತ ವಿಜಯಪುರಕ್ಕೆ ಬಂದಿದ್ದಳು. ಆಗ ನಗರದ ಸಿಂದಗಿ ರಸ್ತೆಯ ಫೋರ್‌ವೇ ಲಾಡ್ಜ್ವೊಂದರಲ್ಲಿ ಶೃತಿ ಹಾಗೂ ಆಕೆಯ ಮಗನನ್ನ ಸಾಗರ್ ಉಳಿಸಿದ್ದ. ನಂತರ ಲಾಡ್ಜ್‌ನಲ್ಲಿ ಗಲಾಟೆಯಾಗಿ ಅಲ್ಲೇ ಶೃತಿಯನ್ನ ಕುತ್ತಿಗೆ ಹಿಸುಕಿ ಕೊಂದು ಹಾಕಿದ್ದ.

    ಕೊಲೆಗೆ ಬಾಲಕ ಸಾಕ್ಷಿಯಾಗುತ್ತಾನೆ ಅಂತಾ ರೋಹಿತ್‌ನನ್ನೂ ಕೊಲೆ ಮಾಡಿದ್ದ. ನಂತರ ಶೃತಿ ಮೈಸೂರಿನಿಂದ ತಂದಿದ್ದ ಲಗೇಜ್ ಬ್ಯಾಗ್ ನಲ್ಲಿಯೇ ಅವರ ಶವಗಳನ್ನ ಪ್ಯಾಕ್ ಮಾಡಿ ಸಿದ್ದಾಪುರ ಬಾವಿಯಲ್ಲಿ ಬಿಸಾಡಿದ್ದ. ಇದಾದ ಒಂದು ವಾರದ ಬಳಿಕ ಬ್ಯಾಗ್‌ಗಳು ಮೇಲಕ್ಕೆ ತೇಲಿ ಬಂದಿದ್ದವು. ಈ ಬ್ಯಾಗ್‌ಗಳನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ತಾಯಿ-ಮಗನ ಶವ ಪತ್ತೆಯಾಗಿತ್ತು. ಶವಗಳು ಕೊಳೆತ ಸ್ಥಿತಿಯಲ್ಲಿದ್ದ ಕಾರಣ ಗುರುತು ಪತ್ತೆಯಾಗಿರಲಿಲ್ಲ. ಸಣ್ಣ ಸುಳಿವೂ ಇಲ್ಲದೇ ಪ್ರಕರಣ ಬಾಕಿ ಉಳಿದಿತ್ತು.

    ಕಳೆದ ಫೆಬ್ರವರಿಯಲ್ಲಿ ಶೃತಿ ಸಂಬಂಧಿಕರು ಮೈಸೂರಿನಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಮೈಸೂರಿನ ಮಿಸ್ಸಿಂಗ್ ಕೇಸ್ ಹಾಗೂ ವಿಜಯಪುರದ ಡಬಲ್ ಮರ್ಡರ್ ಕೇಸ್‌ನಲ್ಲಿ ಸಿಕ್ಕ ವಸ್ತುಗಳಿಗೆ ಸಾಮ್ಯತೆ ಕಂಡುಬಂದಿತ್ತು. ಬಳಿಕ ಪ್ರಕರಣ ಕೈಗೆತ್ತಿಕೊಂಡ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಆರೋಪಿ ಸಾಗರ್‌ನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕಾವೇರಿ ನೀರಿನಲ್ಲಿ ಕಾರು ವಾಶ್‌: ಮಾಲೀಕರಿಗೆ 5 ಸಾವಿರ ದಂಡ ವಿಧಿಸಿದ ಜಲಮಂಡಳಿ

  • ಸಿಇಎನ್ ಪೊಲೀಸರ ಭರ್ಜರಿ ಬೇಟೆ – 2.93 ಕೋಟಿ ರೂ. ನಗದು ಜಪ್ತಿ

    ಸಿಇಎನ್ ಪೊಲೀಸರ ಭರ್ಜರಿ ಬೇಟೆ – 2.93 ಕೋಟಿ ರೂ. ನಗದು ಜಪ್ತಿ

    – ಇಬ್ಬರು ವಶಕ್ಕೆ, ಟೊಯೊಟಾ ಕಾರು, ಮೊಬೈಲ್ ಜಪ್ತಿ

    ವಿಜಯಪುರ: ಚುನಾವಣಾ ನೀತಿ ಸಂಹಿತೆ (Code of Election Conduct) ಜಾರಿ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದಾರೆ. ವಿಜಯಪುರದಲ್ಲಿ (Vijayapura) ಸಿಇಎನ್ ಪೊಲೀಸರು (CEN Police) ಭರ್ಜರಿ ಬೇಟೆ ಆಡಿ ಒಂದಲ್ಲ, ಎರಡಲ್ಲ ಬರೋಬ್ಬರಿ 2.93 ಕೋಟಿ ರೂ. ನಗದನ್ನು ಜಪ್ತಿ ಮಾಡಿದ್ದಾರೆ.

    ಲೋಕಸಭಾ ಚುನಾವಣೆ (Lok Sabha Electon) ಹಿನ್ನೆಲೆ ಹೈದರಾಬಾದ್‌ನಿಂದ (Hyderabad) ಹುಬ್ಬಳ್ಳಿಗೆ ಟೊಯೊಟಾ ಕಾರಿನಲ್ಲಿ ಹಣ ಸಾಗಿಸಲಾಗುತ್ತಿತ್ತು. ಈ ವೇಳೆ ವಿಜಯಪುರ ನಗರದ ಸಿಂದಗಿ ಬೈಪಾಸ್ ಬಳಿ ತಪಾಸಣೆ ನಡೆಸಿ ನಗದನ್ನು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಹನುಮಾನ್‌ ಚಾಲೀಸಾ ಕೇಸ್‌ – ಹಲ್ಲೆಗೆ ಒಳಗಾದ ಅಂಗಡಿ ಮಾಲೀಕನನ್ನೇ ವಶಕ್ಕೆ ಪಡೆದ ಪೊಲೀಸರು

    ಅಲ್ಲದೇ ಬಾಲಾಜಿ ನಿಕ್ಕಂ, ಸಚಿನ್ ಮೋಯಿತೆ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರಿಂದ 2.93 ಕೋಟಿ ರೂ. ನಗದು, ಟೊಯೊಟಾ ಕಾರು, ಎರಡು ಮೊಬೈಲ್ ಜಪ್ತಿಗೈದಿದ್ದಾರೆ. ಈ ಕುರಿತು ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಿಶ್ಚಿತಾರ್ಥದ ಬಳಿಕ ಮದುವೆಗೆ ನಕಾರ – ವಿಷ ಕುಡಿಸಿ ಯುವತಿಯ ಹತ್ಯೆಗೈದ ಮಾವ

  • ಅಪೇಕ್ಷೆ ತಪ್ಪಲ್ಲ, ಅವಮಾನ ಮಾಡಿ ಟಿಕೆಟ್ ಕೇಳಬಾರದು- ಸಿಟಿ ರವಿ ವಿರುದ್ಧ ಶೋಭಾ ಕಿಡಿ

    ಅಪೇಕ್ಷೆ ತಪ್ಪಲ್ಲ, ಅವಮಾನ ಮಾಡಿ ಟಿಕೆಟ್ ಕೇಳಬಾರದು- ಸಿಟಿ ರವಿ ವಿರುದ್ಧ ಶೋಭಾ ಕಿಡಿ

    ವಿಜಯಪುರ: ಸಿ.ಟಿ ರವಿ ಟಿಕೆಟ್ ಅಪೇಕ್ಷೆ ತಪ್ಪಲ್ಲ, ಆದರೆ ಅವಮಾನ ಮಾಡಿ ಟಿಕೆಟ್ ಕೇಳಬಾರದು. ಸೋಲನ್ನು ಇನ್ನೊಬ್ಬರ ಮೇಲೆ ಹೊರಿಸಬಾರದು. ಕಾರ್ಯಕರ್ತರು ನನ್ನ ವಿರೋಧ ಮಾಡ್ತಿಲ್ಲ. ಒಂದು ಗುಂಪು ಮಾತ್ರ ವಿರೋಧ ಮಾಡ್ತಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದರು.

    ಟಿಕೆಟ್ ಗೊಂದಲ ವಿಚಾರದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಟಿಕೆಟ್ ವಿಚಾರದಲ್ಲಿ ಗೊಂದಲ ಇರೋದು ನಿಜ. ನಮ್ಮದು ಸಂಘ ಪರಿವಾರ ಗಟ್ಟಿ ಇರುವ ಜಿಲ್ಲೆ. ಯಾರಿಗೆ ಟಿಕೆಟ್ ಕೊಟ್ಟರು ಗೆಲ್ಲಬಹುದು. ಹೀಗಾಗಿ ಬೇರೆಯವರು ಟಿಕೆಟ್ ಕೇಳ್ತಿದ್ದಾರೆ. ನನಗೆ ಎರಡು ಬಾರಿ ಟಿಕೆಟ್ ಕೊಟ್ಟಿದ್ದಾರೆ. ಇನ್ನೊಬ್ಬರಿಗೆ ಅವಮಾನ ಮಾಡಿ ಟಿಕೆಟ್ ಕೇಳಬಾರದು. ಅದು ನನ್ನ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ತಮ್ಮ ವಿರೋಧಿಗಳ ವಿರುದ್ಧ ಕಿಡಿಕಾರಿದರು.

    ಟಿಕೆಟ್ ತೆಗೆದುಕೊಳ್ಳಲು ನನ್ನ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ. ವ್ಯವಸ್ಥಿತವಾಗಿ ಒಂದು ಗುಂಪು ವಿರೋಧ ಮಾಡ್ತಿದೆ. ಇದರಿಂದ ನಾನು ವಿಚಲಿತಳಾಗಿಲ್ಲ. ಸಿ.ಟಿ ರವಿ (CT Ravi) ಅವರು ಟಿಕೆಟ್ ಗೆ ಅಪೇಕ್ಷೆ ಪಟ್ಟರೂ ತಪ್ಪಲ್ಲ. ಸಿ.ಟಿ ರವಿ ಟಿಕೆಟ್ ಕೇಳಿರೋದು ನಿಜ. ಕಾರ್ಯಕರ್ತರು ನನ್ನ ವಿರೋಧ ಮಾಡ್ತಿಲ್ಲ, ಒಂದು ಗುಂಪು ವಿರೋಧ ಮಾಡ್ತಿದೆ ಎಂದು ಇದೇ ವೇಳೆ ಶೋಭಾ ಕರಂದ್ಲಾಜೆ ಬೇಸರ ಹೊರಹಾಕಿದರು.

    ಈ ಬಾರಿ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಬಿಜೆಪಿ (BJP) ಗೆಲ್ಲಲಿದೆ. ಮತದಾರರು ಮೋದಿಯವರನ್ನ (Narendra Modi) ಗೆಲ್ಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳ್ತೇವೆ. ನಮ್ಮ ಕ್ಷೇತ್ರದಲ್ಲಿ ಕೂಡ ಅಭಿವೃದ್ಧಿ ಆಧಾರದ ಮೇಲೆ ವೋಟು ಕೇಳುತ್ತೇವೆ. ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ ಎಂದರು.

    ಕಳೆದ ವಿಧಾನಸಭೆ ಚುನಾವಣೆಯಲ್ಲಿ (Vidhanasabha Elections) ಸ್ವಪಕ್ಷೀಯರ ವಿರುದ್ಧ ತಾವು ಕೆಲಸ ಮಾಡಿದ್ದೀರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಹೆತ್ತತಾಯಿಗೆ ದ್ರೋಹ ಮಾಡಲ್ಲ, ನಾನು ಹಿಂದೆ ಯಾರಿಗೂ ವಿರೋಧ ಮಾಡಿಲ್ಲ. ತಮ್ಮ ಸೋಲನ್ನ ಇನ್ನೊಬ್ಬರ ಮೇಲೆ ಹೊರಿಸಬಾರದು ಎಂದು ಪರೋಕ್ಷವಾಗಿ ಸಿ.ಟಿ ರವಿ ವಿರುದ್ಧ ಕಿಡಿಕಾರಿದರು. ಅಲ್ಲದೆ ಆ ರೀತಿ ನಾನು ಮಾಡಿದ್ರೆ ಅದು ತಾಯಿಗೆ ಮಾಡಿದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬ್ಯಾಡಗಿಯಲ್ಲಿ ಮೆಣಸಿನಕಾಯಿ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರದ ವಿರುದ್ಧ ಶೋಭಾ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಕೃಷಿಕರನ್ನ ಮರೆತಿದೆ. ಬ್ಯಾಡಗಿ ಮೆಣಸಿನಕಾಯಿ, ಈರುಳ್ಳಿ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ಗ್ಯಾರಂಟಿ ಕೊಟ್ಟು ಸರ್ಕಾರ ರೈತರಿಗೆ ಅನ್ಯಾಯ ಮಾಡ್ತಿದೆ. ರಾಜ್ಯ ಪ್ರಪೋಸಲ್ ಕಳಿಸಬೇಕು ಕಳಿಸ್ತಿಲ್ಲ. ಕೇಂದ್ರ ರೈತರ ಬೆನ್ನೆಲುಬಾಗಿ ನಿಲ್ಲಲು ರೆಡಿ ಇದೆ. ನಾವು ಕೋಲ್ಡ್ ಸ್ಟೋರೆಜ್ ಮಾಡಿಕೊಳ್ಳಲು ಒಂದು ಲಕ್ಷ ಕೋಟಿ ಇಟ್ಟಿದ್ದೇವೆ. ಇದಕ್ಕಾಗಿ ಯಾರು ಪ್ರಪೋಸಲ್ ಸಲ್ಲಿಕೆ ಮಾಡಿದ್ದಾರೆ? ರಾಜ್ಯದಿಂದ ಪ್ರಪೋಸಲ್ ಬರ್ತಿಲ್ಲ. ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ಆಸಕ್ತಿ ಇಲ್ಲ. ಕೇವಲ ಗ್ಯಾರಂಟಿಗಳ ಬೆನ್ನು ಬಿದ್ದಿದ್ದಾರೆ. ಸಿಎಂಗೆ ಆಸಕ್ತಿ ಇದೆಯಾ? ಡಿಸಿಎಂಗೆ ಆಸಕ್ತಿ ಇದೆಯಾ? ಇದು ರಾಜ್ಯ ಸರ್ಕಾರದ ವೈಫಲ್ಯ ಇದೆ ಎಂದು ಕಿಡಿಕಾರಿದರು.

    ಬೆಂಗಳೂರಲ್ಲಿ ಕುಡಿಯೋಕೆ ನೀರಿಲ್ಲ. ತಮಿಳುನಾಡಿಗೆ (Tamilnadu) ನೀರು ಬಿಟ್ಟ ಪರಿಣಾಮ ಇದು. ಸಿಎಂ ಜೊತೆಗೆ ಮೀಟಿಂಗ್ ಗೆ ನಾವು ಹೋಗಿದ್ವಿ. ಅಲ್ಲಿ ಮೀಟಿಂಗಲ್ಲಿ ಪಾಲ್ಗೊಳ್ಳುತ್ತಾರೆ. ಇಲ್ಲಿ ಬಂದು ನೀರು ಬಿಡ್ತಾರೆ. ನಮ್ಮ ಜಲಾಶಯದಲ್ಲಿ ನೀರಿಲ್ಲ ತಮಿಳುನಾಡಿಗೆ ಬಿಟ್ಟರು. ಮೀಟಿಂಗ್ ನಡೆಯುತ್ತಿರುವಾಗಲೇ ತಮಿಳುನಾಡಿಗೆ ನೀರು ಹರಿದು ಹೋಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಶೋಭಾ ವಾಗ್ದಾಳಿ ನಡೆಸಿದರು.

  • ರಾಮನ ಹೆಸರು ಇರೋದಕ್ಕೆ ರಾಮೇಶ್ವರಂ ಹೋಟೆಲ್ ಟಾರ್ಗೆಟ್ ಮಾಡಿದ್ದಾರೆ: ಯತ್ನಾಳ್

    ರಾಮನ ಹೆಸರು ಇರೋದಕ್ಕೆ ರಾಮೇಶ್ವರಂ ಹೋಟೆಲ್ ಟಾರ್ಗೆಟ್ ಮಾಡಿದ್ದಾರೆ: ಯತ್ನಾಳ್

    – ಭಯೋತ್ಪಾದಕರಿಗೆ ಕರ್ನಾಟಕ ಸುರಕ್ಷಿತ ತಾಣ ಅನ್ನಿಸಿದೆ ಎಂದ ಶಾಸಕ

    ವಿಜಯಪುರ: ರಾಮನ (Lard Rama) ಹೆಸರು ಇರೋದಕ್ಕೆ ರಾಮೇಶ್ವರಂ ಹೋಟೆಲ್‌ನ ಟಾರ್ಗೆಟ್ ಮಾಡಿದ್ದಾರೆ, ಅದು ಶುಕ್ರವಾರವೇ ಬಾಂಬ್ ಸ್ಫೋಟ ಮಾಡಿದ್ದಾರೆ. ಇದೆಲ್ಲವನ್ನ ಗಮನಿಸಿದ್ರೆ ಉದ್ದೇಶಪೂರ್ವಕವಾಗಿಯೇ ನಡೆಸಿರುವ ಕೃತ್ಯ ಅನ್ನಿಸುತ್ತೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ವಾಗ್ದಾಳಿ ನಡೆಸಿದ್ದಾರೆ.

    ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ (Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮನ ಹೆಸರು ಇರುವ ರಾಮೇಶ್ವರಂ ಹೋಟೆಲ್‌ನ ಟಾರ್ಗೆಟ್ ಮಾಡಿದ್ದಾರೆ. ಶುಕ್ರವಾರವೇ ಈ ಕೃತ್ಯ ಎಸಗಿದ್ದಾರೆ. ರಾಮಮಂದಿರ ನಿರ್ಮಾಣ ಆದ ಮೇಲೆ ಎಲ್ಲಾದರೂ ತಮ್ಮ ಅಸ್ತಿತ್ವ ತೋರಿಸಬೇಕು ಅಂತ ಕೆಲ ಸಂಘಟನೆಗಳು ಉದ್ದೇಶಪೂರ್ವಕವಾಗಿ ಇಂತಹ ಕೆಲಸ ಮಾಡ್ತಿದ್ದಾರೆ. ಅವರೆಲ್ಲರಿಗೂ ವಿನಾಶ ಕಾಲ ಬಂದಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಸಾರ್ವಜನಿಕರ ದರ್ಶನಕ್ಕೆ ತೆರೆದ ಅಬುಧಾಬಿ ಹಿಂದೂ ದೇವಾಲಯ- ಡ್ರೆಸ್‌ ಕೋಡ್‌, ಟೈಮಿಂಗ್ಸ್‌ ವಿವರ ಇಲ್ಲಿದೆ 

    ಸಿಎಂ ರಾಜೀನಾಮೆಗೆ ಆಗ್ರಹ:
    ಈ ಹಿಂದೆ ಯಾರೋ ಒಬ್ಬರು ಬ್ರ್ಯಾಡ್‌ ಬೆಂಗಳೂರು ಮಾಡ್ತೀನಿ ಅಂತ ಹೇಳ್ದಾಗ, ಬಾಂಬ್ ಬೆಂಗಳೂರು ಮಾಡ್ತಾರೆ ಅಂತ ಹೇಳಿದ್ದೆ. ಈಗ ಅದು ನಿಜವಾಗುತ್ತಿದೆ. ಸಿದ್ದರಾಮಯ್ಯ (Siddaramaiah) ಅವರೇ ಭಯೋತ್ಪಾದನೆ ನಿಲ್ಲಿಸಲು ಆಗದಿದ್ದರೆ, ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಕೇವಲ ಗ್ಯಾರಂಟಿ, ಗ್ಯಾರಂಟಿ ಅಂದು, ಜನರ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಭಯೋತ್ಪಾದಕರು ಇಲ್ಲಿ ಮಾಡೋದೇನಿಲ್ಲ, ಇಲ್ಲೇ ಭಯೋತ್ಪಾದರನ್ನ ಸೃಷ್ಟಿಸಿದ್ದಾರೆ: ಸೂಲಿಬೆಲೆ

    ಇನ್ನೂ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿ, ಭಯೋತ್ಪಾದಕರಿಗೆ ಕರ್ನಾಟಕ ಅತ್ಯಂತ ಸುರಕ್ಷಿತ ತಾಣ ಅಂತ ಅನ್ನಿಸಿದೆ. ಘೋಷಣೆ ಕೂಗಿದ್ದವನ ಪರೀಕ್ಷೆಗೆ ಕಳುಹಿಸುವ ಅವಶ್ಯಕತೆಯಿಲ್ಲ ಅಂತ ಆವಾಗಲೆ ಹೇಳಿದ್ದೆ. ಏಕೆಂದರೆ ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ಬಿತ್ತರಿಸಿದ್ದರು. ಈಗ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿದ್ದರೂ ಬಹಿರಂಗಪಡಿಸಿಲ್ಲ. ಈಗ ಬಾಂಬ್ ಬ್ಲಾಸ್ಟ್ ಪ್ರಕರಣ ನೋಡಿದ್ರೆ ಈ ರಾಜ್ಯದಲ್ಲಿ ಭಯೋತ್ಪಾದನೆ ಚಟುವಟಿಗೆ ಇಂಬು ಕೊಡ್ತಾ ಇದೆ ಅನ್ನೋದು ಸ್ಪಷ್ಟವಾಗ್ತಿದೆ. ಇದನ್ನ ಮಾಡಿದ್ದು ಯಾರೋ ಹಿಂದೂ ಅಲ್ಲ, ಮುಸ್ಲಿಂ ವ್ಯಕ್ತಿಯೇ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

  • ಪಬ್ಲಿಕ್‌ ಟಿವಿ ಇಂಪ್ಯಾಕ್ಟ್- ವಸತಿ ಶಾಲೆಯ ಘೋಷವಾಕ್ಯ ಯಥಾಸ್ಥಿತಿ

    ಪಬ್ಲಿಕ್‌ ಟಿವಿ ಇಂಪ್ಯಾಕ್ಟ್- ವಸತಿ ಶಾಲೆಯ ಘೋಷವಾಕ್ಯ ಯಥಾಸ್ಥಿತಿ

    ವಿಜಯಪುರ: ವಸತಿ ಶಾಲೆಯ ಘೋಷವಾಕ್ಯ ಸಂಬಂಧ ಪಬ್ಲಿಕ್ ಟಿವಿಯಲ್ಲಿ ವರದಿಯಾದ ಬಳಿಕ ಬರಹವನ್ನು ಮೊದಲಿನಂತೆಯೇ ಬದಲಾವಣೆ ಮಾಡಲಾಗಿದೆ.

    ಈ ಕುರಿತು ಶಾಲೆಯ ಪ್ರಿನ್ಸಿಪಾಲ್ ದುಂಡಪ್ಪ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಮುಖ್ಯ ಕಾರ್ಯದರ್ಶಿಗಳ ಮೌಖಿಕ ಸೂಚನೆಯಂತೆ ಘೋಷವಾಕ್ಯ ಬದಲಾಯಿಸಿದ್ದೆವು. ಪಬ್ಲಿಕ್ ಟಿವಿಯಲ್ಲಿ ವರದಿಯಾದ ಬಳಿಕ ಘೋಷವಾಕ್ಯ ಮೊದಲಿನಂತೆಯೇ ಬದಲಾವಣೆ ಮಾಡಿದ್ದೇವೆ ಎಂದರು. ಇದನ್ನೂ ಓದಿ: ವಿಧಾನಸೌಧದಲ್ಲೇ ಶಾಸಕರಿಗೆ ಮಧ್ಯಾಹ್ನದ ಬಿಸಿಯೂಟ- ಖಾದರ್ ಘೋಷಣೆ

    ಆಗಿದ್ದೇನು..?: ವಿಜಯಪುರ (Vijayapur) ಜಿ. ಮುದ್ದೇಬಿಹಾಳ ತಾ. ಘಾಳಪೂಜೆ ಮೊರಾರ್ಜಿ ವಸತಿ ಶಾಲೆಯ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ‘ಜ್ಞಾನ ದೇಗುಲವಿದು ಕೈಮುಗಿದು ಬಳಗೆ ಬಾ’ ಎಂಬ ಸಾಲುಗಳ ಬದಲಾಗಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸಿ ಶಾಲೆಯ ಪ್ರವೇಶ ದ್ವಾರದಲ್ಲಿ ಬರೆಯಲಾಗಿದೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

    ಕೇವಲ ವಿಜಯಪುರ ಮಾತ್ರವಲ್ಲ, ರಾಯಚೂರು ಜಿಲ್ಲೆಯ 36 ವಸತಿ ಶಾಲೆಗ ಪೈಕಿ ಬಹುತೇಕ ಕಡೆಗಳಲ್ಲಿ ಕುವೆಂಪು ವಾಕ್ಯವನ್ನ ಬದಲಾಯಿಸಿ ಬರೆಯಲಾಗಿದೆ. ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆ, ಮಸ್ಕಿ, ಲಿಂಗಸುಗೂರಿನ ಅಡವಿಬಾವಿ ಸೇರಿ ಜಿಲ್ಲೆಯ ಹಲವೆಡೆ ವಾಕ್ಯ ಬದಲಾವಣೆ ಮಾಡಲಾಗಿದೆ.

  • ಕುವೆಂಪು ಬರಹ ಬದಲಾವಣೆ ವಿಚಾರ- ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸ್ಪಷ್ಟನೆ

    ಕುವೆಂಪು ಬರಹ ಬದಲಾವಣೆ ವಿಚಾರ- ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸ್ಪಷ್ಟನೆ

    ವಿಜಯಪುರ: ರಾಷ್ಟ್ರಕವಿ ಕುವೆಂಪು (Kuvempu) ಅವರ ಬರಹ ಬದಲಾಯಿಸಿರುವ ಕುರಿತು ರಾಜ್ಯಾದ್ಯಂತ ಆಕ್ರೋಶ ಎದ್ದ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆ (Social Welfare Department) ಡಿಡಿ ಪುಂಡಲೀಕ ಮಾನವರ ಸ್ಪಷ್ಟನೆ ನೀಡಿದ್ದಾರೆ.

    ಈ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯೆ ನಿಡಿದ ಅವರು, ನನಗೆ ಯಾವುದೇ ಲಿಖಿತ ಆದೇಶ ಬಂದಿಲ್ಲ. ವಸತಿ ಶಾಲೆಯ ಪ್ರಾಂಶುಪಾಲರ ಟೆಲಿಗ್ರಾಮ ಗ್ರೂಪ್‍ನಲ್ಲಿ ಹಾಕಿದ್ದಾರೆ. ಅದನ್ನ ಆಧರಿಸಿ ಎರಡು ವಸತಿ ಶಾಲೆಯಲ್ಲಿ ಬದಲಾಯಿಸಲಾಗಿದೆ ಎಂದರು. ಇದನ್ನೂ ಓದಿ: ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು- ಚರ್ಚೆಗೆ ಗ್ರಾಸವಾಯ್ತು ವಸತಿ ಶಾಲೆಗಳಲ್ಲಿನ ಬರಹ

    ಒಟ್ಟು 23 ವಸತಿ ಶಾಲೆಯಲ್ಲಿ ಎರಡು ವಸತಿ ಶಾಲೆಯಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ. ನಮ್ಮ ಪ್ರಿನ್ಸಿಪಾಲ್ ಸೆಕ್ರೆಟ್ರಿ ಮಣಿವಣ್ಣನ್ ಅವರ ಟೆಲಿಗ್ರಾಮ ಮೆಸೇಜ್‍ನ ಆದೇಶದ ಮೇಲೆ ಬದಲಿಸಲಾಗಿದೆ. ಇದರ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಳ್ಳುತ್ತೇನೆ. ಶಾಲೆಯಲ್ಲಿ ಸಮಸ್ಯೆಗಳ ಬಗ್ಗೆ ಪ್ರಶ್ನಿಸುವ ಹಕ್ಕಿದೆ ಎನ್ನುವ ಹಿನ್ನೆಲೆ ಈ ರೀತಿ ಬದಲಾವಣೆ ಮಾಡಲಾಗಿದೆ ಎಮದು ಅವರು ಸ್ಪಷ್ಟಪಡಿಸಿದರು.

    ಆಗಿದ್ದೇನು..?; ವಿಜಯಪುರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (Vijayapur School Tagline) ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ‘ಜ್ಞಾನ ದೇಗುಲವಿದು ಕೈಮುಗಿದು ಬಳಗೆ ಬಾ’ ಎಂಬ ಸಾಲುಗಳ ಬದಲಾಗಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸಿ ಶಾಲೆಯ ಪ್ರವೇಶ ದ್ವಾರದಲ್ಲಿ ಬರೆಯಲಾಗಿದೆ. ಇದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು- ಚರ್ಚೆಗೆ ಗ್ರಾಸವಾಯ್ತು ವಸತಿ ಶಾಲೆಗಳಲ್ಲಿನ ಬರಹ

    ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು- ಚರ್ಚೆಗೆ ಗ್ರಾಸವಾಯ್ತು ವಸತಿ ಶಾಲೆಗಳಲ್ಲಿನ ಬರಹ

    ವಿಜಯಪುರ: ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (Morarji Residential School) ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಬರಹವನ್ನು ಬದಲಿಸಿ ಹಾಕಿ ವಿವಾದಕ್ಕೀಡಾದ ಘಟನೆ ನಡೆದಿದೆ.

    ಕುವೆಂಪು ಅವರ ‘ಜ್ಞಾನ ದೇಗುಲವಿದು ಕೈಮುಗಿದು ಬಳಗೆ ಬಾ’ ಎಂಬ ಸಾಲುಗಳ ಬದಲಾಗಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸಿ ಶಾಲೆಯ ಪ್ರವೇಶ ದ್ವಾರದಲ್ಲಿ ಬರೆಯಲಾಗಿದೆ. ಮೊರಾರ್ಜಿ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪೋಷಕರು ಧೈರ್ಯವಾಗಿ ಪ್ರಶ್ನೆ ಮಾಡಲಿ ಎಂದ ಉದ್ದೇಶದಿಂದ ಬರೆಯಲಾಗಿದೆ ಎನ್ನಲಾಗಿದೆ.

    ಈ ಕುರಿತು ವಿಜಯಪುರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುಂಡಲೀಕ ಮಾನವರ ಪ್ರತಿಕ್ರಿಯಿಸಿ, ಸರ್ಕಾರದ ಸುತ್ತೋಲೆ ಪ್ರಕಾರ ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ ಎಂದು ಬರಹ ಬದಲಾವಣೆ ಮಾಡಲಾಗಿದೆ. ಮೊರಾರ್ಜಿ ವಸತಿ ಶಾಲಾ ವಿದ್ಯಾರ್ಥಿಗಳ ಪೆÇೀಷಕರು ಧೈರ್ಯವಾಗಿ ಪ್ರಶ್ನೆ ಮಾಡಲಿ. ಮಕ್ಕಳ ಶಿಕ್ಷಣ ವಸತಿ ಊಟ ಸೇರಿದಂತೆ ವಸತಿ ಶಾಲೆಯ ಎಲ್ಲಾ ವಿಚಾರಗಳ ಕುರಿತು ಪ್ರಶ್ನೆ ಮಾಡಲಿ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಲಿ ಪೋಷಕರು ಧೈರ್ಯವಾಗಿ ಮಾತನಾಡಲಿ ಎನ್ನುವ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಘಾಳಪೂಜಿ ಗ್ರಾಮದಲ್ಲಿ ಹಾಗೂ ಇತರ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ದ್ವಾರದಲ್ಲಿ ಬದಲಾಗಿರೋ ಬರಹ ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.  ಇದನ್ನೂ ಓದಿ: ಏ.13ರಿಂದ 23ರ ವರೆಗೆ ವಿಶ್ವವಿಖ್ಯಾತ ಬೆಂಗಳೂರು ಕರಗ

  • ಪತ್ನಿಯ ಶೀಲ ಶಂಕಿಸಿ ಬರ್ಬರ ಹತ್ಯೆ

    ಪತ್ನಿಯ ಶೀಲ ಶಂಕಿಸಿ ಬರ್ಬರ ಹತ್ಯೆ

    ವಿಜಯಪುರ: ವ್ಯಕ್ತಿಯೊಬ್ಬ ಪತ್ನಿಯ (Wife) ಶೀಲ ಶಂಕಿಸಿ ಬರ್ಬರ ಹತ್ಯೆಗೈದ ಘಟನೆ ತಿಕೋಟ ತಾಲೂಕಿನ ಹುಬನೂರು ತಾಂಡಾ -2 ರಲ್ಲಿ ಘಟನೆ ನಡೆದಿದೆ.

    ರೇಶ್ಮಾ ರಾಠೋಡ್ (25) ಹತ್ಯೆಯಾದ ಮಹಿಳೆ ಎಂದು ತಿಳಿದು ಬಂದಿದೆ. ಅಶೋಕ್ ರಾಠೋಡ್ (33) ಪತ್ನಿಯನ್ನು ಹತ್ಯೆಗೈದ ಆರೋಪಿಯಾಗಿದ್ದಾನೆ. ಪತ್ನಿಯ ಶೀಲ ಶಂಕಿಸಿ ಹತ್ಯೆಗೈದಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಮನೆ ಮೇಲೆ ವಿದ್ಯುತ್ ಕಂಬ ಉರುಳಿಸಿ ಪುಂಡಾಟ ಮೆರೆದ ಕಾಡಾನೆ – ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

    ಆರೋಪಿ ಕುಡಿದು ಬಂದು ಮನೆಯಲ್ಲಿ ಪತ್ನಿಗೆ ನಿತ್ಯ ಕಿರುಕುಳ ಕೊಡುತ್ತಿದ್ದ. ಇದರಿಂದ ಬೇಸತ್ತು ಮಹಿಳೆ ತನ್ನ ತವರು ಮನೆಗೆ ಹೋಗಿದ್ದಳು. ಇದರಿಂದ ಸಿಟ್ಟಿಗೆದ್ದ ಆರೋಪಿ ಮಹಿಳೆಯ ಮೇಲೆ ಸಲಾಕೆಯಿಂದ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. 11 ವರ್ಷಗಳ ಹಿಂದೆ ಇವರಿಬ್ಬರ ಮದುವೆಯಾಗಿತ್ತು. ದಂಪತಿಗೆ ಮೂವರು ಮಕ್ಕಳು ಸಹ ಇದ್ದಾರೆ.

    ಈ ಸಂಬಂಧ ವಿಜಯಪುರ (Vijapur) ಗ್ರಾಮೀಣ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಯುಪಿ ಟೈಂ ಬಾಂಬ್ ಪ್ರಕರಣ – ಮುಂಗಡವಾಗಿ 10 ಸಾವಿರ ನೀಡಿದ್ದ ಮಹಿಳೆ ಅರೆಸ್ಟ್

  • ಮೆದುಳು ಜ್ವರಕ್ಕೆ ಬಾಲಕ ಬಲಿ

    ಮೆದುಳು ಜ್ವರಕ್ಕೆ ಬಾಲಕ ಬಲಿ

    ವಿಜಯಪುರ: ಮೆದುಳು ಜ್ವರಕ್ಕೆ (Brain Fever) ಬಾಲಕ ಬಲಿಯಾದ ಘಟನೆ ನಡೆದಿದೆ. ವಿಜಯಪುರ ನಗರದ ಗೋಳಗುಮ್ಮಟ ಏರಿಯಾದಲ್ಲಿ ಘಟನೆ ನಡೆದಿದೆ.

    ಮೃತ ಬಾಲಕನನ್ನು ರಜಿತ್ ಮಿಥುನ್ ಅಳ್ಳಿಮೋರೆ (10) ಎಂದು ಗುರುತಿಸಲಾಗಿದೆ. ಈತ ಗೋಳಗುಮ್ಮಟ ಬಡವಾಣೆ ನಿವಾಸಿ. ಇದನ್ನೂ ಓದಿ: ಈಶ್ವರಪ್ಪ ಸ್ವಲ್ಪ ಉಗ್ರವಾದಿ, ಆದ್ರೆ ಗುಂಡು ಹಾರಿಸುವಷ್ಟು ಉಗ್ರರಲ್ಲ: ಸದಾನಂದ ಗೌಡ

    ಕಳೆದ ವಾರದ ಹಿಂದೆ ರಜಿತ್ ತೀವ್ರ ಜ್ವರದಿಂದ ಬಳಲುತ್ತಿದ್ದ. ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಗೆ ರಜಿತ್ ನನ್ನ ದಾಖಲಿಸಲಾಗಿತ್ತು. ಜ್ವರ ನೆತ್ತಿಗೆ ಏರಿ ಮೆದುಳಲ್ಲಿ ಕಾಣಿಸಿಕೊಂಡ ಬಾವು ಬಂದಿತ್ತು. ಕಾರಣ ಚಿಕಿತ್ಸೆ ಫಲಿಸದೆ ಬಾಲಕನಿಂದು ಸಾವನ್ನಪ್ಪಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಮೆದುಳು ಜ್ವರದ ಲಕ್ಷಣಗಳು
    * ಜ್ವರ, ತಲೆನೋವು
    * ಮಗುವಿನ ತಲೆಯಲ್ಲಿ ಮೃದುವಾದ ಗುಳ್ಳೆಗಳು ಏಳುವುದು
    * ಬೆಳಕಿಗೆ ಕಣ್ಣು ತೆರೆಯಲು ಸಾಧ್ಯವಾಗದಿರುವುದು
    * ಕುತ್ತಿಗೆ ಬಿಗಿಯಾಗುವುದು
    * ಕೋಮಾವಸ್ಥೆ
    * ತ್ವಚೆಯಲ್ಲಿ ಗುಳ್ಳೆಗಳು
    * ಹಸಿವು ಇಲ್ಲದಿರುವುದು
    * ಮಾತನಾಡುವಾಗ ತೊದಲುವುದು
    * ಮೈಯಲ್ಲಿ ನಡುಕ