Tag: ವಿಜಯಪುರ

  • ನವಜಾತ ಗಂಡು ಶಿಶುವನ್ನು ಚರಂಡಿಗೆ ಎಸೆದು ಪಾಪಿ ತಾಯಿ ಎಸ್ಕೇಪ್!‌

    ನವಜಾತ ಗಂಡು ಶಿಶುವನ್ನು ಚರಂಡಿಗೆ ಎಸೆದು ಪಾಪಿ ತಾಯಿ ಎಸ್ಕೇಪ್!‌

    ವಿಜಯಪುರ: ಮಕ್ಕಳಿಲ್ಲವೆಂದು ಎಷ್ಟೋ ಮಂದಿ ಕೊರಗುತ್ತಾರೆ. ಈ ನಡುವೆ ಮಹಿಳೆಯೊಬ್ಬಳು ನವಜಾತ ಶಿಶುವನ್ನು ಚರಂಡಿಗೆ ಎಸೆದು ಹೋಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

    ವಿಜಯಪುರ (Vijayapura) ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಲಕೊಪ್ಪರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಮಕ್ಕಳ ದಾರುಣ ಸಾವು

    ಮಹಿಳೆ ಮೃತಪಟ್ಟ ನವಜಾತ ಶಿಶುವನ್ನು ಪ್ಲಾಸ್ಟಿಲ್ ಹಾಳೆಯಲ್ಲಿ ಸುತ್ತಿ ಚರಂಡಿಗೆ ಎಸೆದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾಳೆ. ಇತ್ತ ಶಿಶುವನ್ನು ಗಮನಿಸಿದ ಗ್ರಾಮಸ್ಥರು ಚರಂಡಿಯಿಂದ ಗಂಡು ಮಗುವನ್ನು ಮೇಲಕ್ಕೆತ್ತಿದ್ದಾರೆ. ಅಲ್ಲದೇ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ದೌಡಾಯಿಸಿದ ಮುದ್ದೇಬಿಹಾಳ ಪೊಲೀಸರು ತಾಯಿಗಾಗಿ ಶೋಧ ನಡೆಸಿದ್ದಾರೆ.

  • ಪ್ರೀತಿಸಿ ಮದುವೆಯಾಗಿದ್ದ ನವಜೋಡಿ ನೇಣಿಗೆ ಶರಣು

    ಪ್ರೀತಿಸಿ ಮದುವೆಯಾಗಿದ್ದ ನವಜೋಡಿ ನೇಣಿಗೆ ಶರಣು

    ವಿಜಯಪುರ: ನಾಲ್ಕು ತಿಂಗಳ ಹಿಂದಷ್ಟೇ ಪ್ರೀತಿಸಿ (Love) ಮದುವೆಯಾಗಿದ್ದ ನವ ವಿವಾಹಿತ ಜೋಡಿ (Couple) ನೇಣಿಗೆ ಶರಣಾದ (Suicide) ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ.

    ಮನೋಜ್ ಕುಮಾರ್ ಪೋಳ (30), ರಾಖಿ (23) ನೇಣಿಗೆ ಶರಣಾದ ದಂಪತಿ. ವಿಜಯಪುರ ನಗರದ ಹೊರ ಭಾಗದ ಶ್ರೀ ಸಿದ್ದೇಶ್ವರ ಬಡಾವಣೆಯ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಕಳೆದ 4 ತಿಂಗಳ ಹಿಂದೆ ಜೋಡಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಸೋಮವಾರ ತಡರಾತ್ರಿ ಊಟ ಮಾಡಿದ ಬಳಿಕ ನವ ವಿವಾಹಿತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೋಜ್ ಕುಮಾರ್ ಹಾಗೂ ರಾಖಿ ಇಬ್ಬರೇ ಮನೆಯಲ್ಲಿದ್ದ ವೇಳೆ ಘಟನೆ ನಡೆದಿದೆ. ಇದನ್ನೂ ಓದಿ: ಇವತ್ತೂ ಭಾರತಕ್ಕೆ ಬರಲ್ಲ ಪ್ರಜ್ವಲ್ ರೇವಣ್ಣ

    ಮನೋಜ್ ಕುಮಾರ್ ತಾಯಿ ಭಾರತಿ ಮಗಳ ಊರಿಗೆ ಹೋಗಿದ್ದರು. ಇಂದು ಬೆಳಗ್ಗೆ ವಾಪಸ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರ ತನಿಖೆ ಬಳಿಕ ಪತಿ-ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರ ಕುರಿತ ಮಾಹಿತಿ ತಿಳಿದು ಬರಲಿದೆ. ಇದನ್ನೂ ಓದಿ: ತಿಮಿಂಗಿಲದ ಬಗ್ಗೆ ಹೆಚ್‌ಡಿಕೆ ಮಾಹಿತಿ ಕೊಡಲಿ: ಪರಮೇಶ್ವರ್‌

  • ರಣಬಿಸಿಲಿಗೆ ಮೀನುಗಳ ಮಾರಣಹೋಮ; ಲಕ್ಷಾಂತರ ರೂ. ನಷ್ಟ – ರೈತನ ಕಣ್ಣೀರು

    ರಣಬಿಸಿಲಿಗೆ ಮೀನುಗಳ ಮಾರಣಹೋಮ; ಲಕ್ಷಾಂತರ ರೂ. ನಷ್ಟ – ರೈತನ ಕಣ್ಣೀರು

    ವಿಜಯಪುರ: ಜಿಲ್ಲೆಯಲ್ಲಿ (Vijayapur) 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು ಜನ, ಜಾನುವಾರುಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇನ್ನೂ ಜಿಲ್ಲೆಯ ಮಧಬಾವಿ ತಾಂಡಾದಲ್ಲಿ ರಣಬಿಸಿಲಿಗೆ ಇಂಜಿನಿಯರ್ ಒಬ್ಬರು ಸಾಕಿದ್ದ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ಲಕ್ಷಾಂತರ ರೂ.ಗಳ ನಷ್ಟದಿಂದ ರೈತರು ಕಂಗಾಲಾಗಿದ್ದಾರೆ.

    ಬೆಂಗಳೂರಿನ (Bengaluru) ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿರುವ ವಿಜಯಕುಮಾರ್ ಎಂಬವರು ತಾಂಡದಲ್ಲಿ ಮೀನು ಸಾಕಣೆ ಮಾಡಿದ್ದರು. ಸುಮಾರು 20 ಲಕ್ಷ ರೂ.ಗೂ ಅಧಿಕ ಹಣ ಖರ್ಚು ಮಾಡಿ 17 ಸಾವಿರ ಸ್ನೇಕ್ ಹೆಡ್ ಮುರೆಲ್ ತಳಿಯ ಮೀನನ್ನು (Snakehead murrel Fish) ಸಾಕಿದ್ದರು. ಇನ್ನೇನೂ ಎರಡು ದಿನಗಳಲ್ಲಿ ಮೀನುಗಳು 30-40 ಲಕ್ಷ ರೂ.ಗಳಿಗೆ ಹೈದ್ರಾಬಾದ್‍ಗೆ ಮಾರಾಟ ಆಗಬೇಕಿತ್ತು. ಅಷ್ಟರಲ್ಲಿ ಮೀನುಗಳ ಮಾರಣ ಹೋಮವೇ ನಡೆದಿದೆ.

    ಈ ಮೀನುಗಳಿಗೆ ಪ್ರತಿ ತಿಂಗಳು 2 ಲಕ್ಷ ರೂ.ಗಳಷ್ಟು ಆಹಾರ ಹಾಕಿ ಬೆಳೆಸಲಾಗಿತ್ತು. ಮಾರುಕಟ್ಟೆಯಲ್ಲಿ ಕೆಜಿಗೆ 700 ರಿಂದ 800 ರೂ. ಬೆಲೆ ಬಾಳುವ ಮೀನುಗಳು ಇನ್ನೇನು ಕೊನೆಯ ಕ್ಷಣದಲ್ಲಿ ಸಾವನ್ನಪ್ಪಿವೆ ಎಂದು ರೈತ (Farmer) ವಿಜಯಕುಮಾರ್ ಹಾಗೂ ಮಿತ್ರರು ಕಣ್ಣಿರು ಹಾಕುತ್ತಿದ್ದಾರೆ.

    ಕಳೆದ ವರ್ಷ ಮೀನು ಕೃಷಿ ಮಾಡಿ ವಿಜಯಕುಮಾರ್ ಯಶಸ್ವಿಯಾಗಿದ್ದರು. ಈ ಹಿನ್ನೆಲೆ ಮೀನುಗಾರಿಕೆ ಇಲಾಖೆಯಿಂದ  (Department of Fisheries) ಅವರಿಗೆ ಸನ್ಮಾನಿಸಲಾಗಿತ್ತು. ಈ ಬಾರಿಯೂ ಒಳ್ಳೆಯ ಇಳುವರಿ ಬಂದಿತ್ತು. ಆದರೆ ಬಿಸಿಲಿನ ತಾಪಕ್ಕೆ ಮೀನುಗಳು ಸಾವನ್ನಪ್ಪಿದ್ದು, ಸರ್ಕಾರದ ಸಹಾಯಕ್ಕೆ ಅವರು ಕೈಚಾಚಿದ್ದಾರೆ.

    ಪ್ರತಿನಿತ್ಯ ವಿಜಯಪುರದಲ್ಲಿ ಉಷ್ಣಾಂಶ ದಾಖಲೆ ಪ್ರಮಾಣದಲ್ಲಿ ಏರುತ್ತಿದ್ದು, 40 ರಿಂದ 44 ಡಿಗ್ರಿ ವರೆಗೂ ತಾಪಮಾನ ದಾಖಲಾಗಿತ್ತಿದೆ. ಇದರಿಂದ ಜಿಲ್ಲೆಯ ಜನರ ನಿದ್ದೆ ಹದೆಗೆಟ್ಟು ಹೋಗಿದೆ. ಜನರ ಆರೋಗ್ಯದ ಮೇಲೂ ನಾನಾ ದುಷ್ಪರಿಣಾಮಗಳು ಬೀರುತ್ತಿವೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

  • ವಿಜಯಪುರದಲ್ಲಿ ಗರ್ಭಿಣಿಯ ಮರ್ಯಾದೆಗೇಡು ಹತ್ಯೆ; ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆ

    ವಿಜಯಪುರದಲ್ಲಿ ಗರ್ಭಿಣಿಯ ಮರ್ಯಾದೆಗೇಡು ಹತ್ಯೆ; ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆ

    ವಿಜಯಪುರ: ಗರ್ಭಿಣಿಯನ್ನು ಮರ್ಯಾದೆಗೇಡು ಹತ್ಯೆ (Indecent Killing) ಮಾಡಿದ್ದ ಇಬ್ಬರು ಆರೋಪಿಗಳಿಗೆ ವಿಜಯಪುರ (Vijayapura) ಜಿಲ್ಲೆಯ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

    ಇಬ್ರಾಹಿಂಸಾಬ್ ಅತ್ತಾರ, ಅಕ್ಬರಸಾಬ್ ಅತ್ತಾರ ಗಲ್ಲು ಶಿಕ್ಷೆಗೆ ಒಳಗಾದವರು. ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ. ರಮಜಾನಭೀ ಅತ್ತಾರ, ದಾವಲಭೀ ಜಮಾದಾರ್, ಅಜಮಾ ದಖನಿ, ಜಿಲಾನಿ‌ ದಖನಿ, ಅಬ್ದುಲ್ ಖಾದರ್ ದಖನಿ, ದಾವಲಭಿ ಧನ್ನೂರಗೆ ಜೀವಾವಧಿ‌ ಶಿಕ್ಷೆಗೆ ಒಳಗಾದವರು. ಇವರಿಗೆ 4.19 ಲಕ್ಷ ರೂ. ದಂಡ ವಿಧಿಸಿ ನ್ಯಾಯಾದೀಶರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ಮನೆ ದೇವರು ಈಶ್ವರನ ಪ್ರಸಾದ ತಂದ ಅರ್ಚಕ

    ಕಳೆದ 2017 ರಲ್ಲಿ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಾಳಾಗುಂಡಕನಾಳ ಗ್ರಾಮದಲ್ಲಿ ಗರ್ಭಿಣಿಯ ಮರ್ಯಾದೆಗೇಡು ಹತ್ಯೆ ನಡೆದಿತ್ತು. ಈ ಸುದ್ದಿಯನ್ನು ‘ಪಬ್ಲಿಕ್‌ ಟಿವಿ’ ಎಳೆ ಎಳೆಯಾಗಿ ಬಿತ್ತರಿಸಿತ್ತು. ಪಬ್ಲಿಕ್‌ ಟಿವಿ ವರದಿ ಬೆನ್ನಲ್ಲೇ ತಾಳಿಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನತ್ತಿದ ತಾಳಿಕೋಟೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದರು.

    ಏನಿದು ಪ್ರಕರಣ?
    ಹಾಳಗುಂಡಕನಾಳ ಗ್ರಾಮದ ಬಾನು ಬೇಗಂ ಅತ್ತಾರ್ ಹಾಗೂ ಸಾಹೇಬಣ್ಣ ಕೊಣ್ಣೂರ ಎಂಬವರು 2017 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇದು ಬಾನುಬೇಗಂ ಮನೆಯವರ ಕೆಂಗಣ್ಣಿಗೆ ಗುರಿಯಾಗಿತ್ತು. ಮದುವೆಯಾದ ಬಳಿಕ ಬೇರೆ ನಗರದಲ್ಲಿ ಬಾನುಬೇಗಂ ಹಾಗೂ ಸಾಹೇಬಣ್ಣ ವಾಸವಿದ್ದರು. ಈ ವೇಳೆ ಬಾನುಬೇಗಂ ಗರ್ಭಿಣಿಯಾದ ಕಾರಣ ಹೆರಿಗೆಗಾಗಿ ಗಂಡನ ಮನೆಗೆ ಬಂದಿದ್ದಳು. ಇದನ್ನೇ ಕಾಯುತ್ತಿದ್ದ ಆಕೆಯ ಪೋಷಕರು ಬಾನುಬೇಗಂ ಹಾಗೂ ಸಾಹೇಬಣ್ಣರನ್ನ ಕೊಲೆ ಮಾಡಲು ಮುಂದಾಗಿದ್ದರು. ಇದನ್ನೂ ಓದಿ: ನಿಜ್ಜರ್‌ ಹತ್ಯೆ ಕೇಸ್‌ – ಬಂಧಿತ ಮೂವರು ಆರೋಪಿಗಳು ಭಾರತ ಮೂಲದವರು; ಫೋಟೋ ರಿಲೀಸ್‌

    ಪತಿ ಮತ್ತು ಪತ್ನಿ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಗೊಳಗಾಗಿ ಬಾನುಬೇಗಂ ಮೂರ್ಚೆ ಹೋಗಿದ್ದಳು. ಮೂರ್ಚೆ ಹೋದ ಗರ್ಭಿಣಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲಾಗಿತ್ತು. ಈ ವೇಳೆ ಹಲ್ಲೆಕೋರರಿಂದ ಸಾಹೇಬಣ್ಣನನ್ನು ರಕ್ಷಣೆ ಮಾಡಲಾಗಿತ್ತು. ಬಾನುಬೇಗಂ ತಂದೆ-ತಾಯಿ ಹಾಗೂ ಅವರ ಸಂಬಂಧಿಕರು ಈ ಕೃತ್ಯ ಎಸಗಿದ್ದರು. ಈ ಪ್ರಕರಣ ಕುರಿತು ತನಿಖೆ ನಡೆಸಿ ತಾಳಿಕೋಟೆ ಪೊಲೀಸರು ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದರು. ಸುದೀರ್ಘವಾದ ವಿವಾದ ಆಲಿಸಿದ ನ್ಯಾಯಾಧೀಶ ಸತೀಶ್ ಎಲ್.ಪಿ ಅವರಿಂದ ಆದೇಶ ಹೊರಬಿದ್ದಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ಎಸ್ ಲೋಕೂರ ವಾದ ಮಂಡಿಸಿದ್ದರು.

  • ಮೋದಿ ಸರ್ಕಾರ ಕೋಟ್ಯಧಿಪತಿಗಳಿಗೆ ಕೊಟ್ಟ ಹಣವನ್ನು ರೈತರಿಗೆ ಹಂಚಲು ಯೋಚಿಸಿದ್ದೇವೆ: ರಾಗಾ

    ಮೋದಿ ಸರ್ಕಾರ ಕೋಟ್ಯಧಿಪತಿಗಳಿಗೆ ಕೊಟ್ಟ ಹಣವನ್ನು ರೈತರಿಗೆ ಹಂಚಲು ಯೋಚಿಸಿದ್ದೇವೆ: ರಾಗಾ

    ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರು ಕೋಟ್ಯಧಿಪತಿಗಳಿಗೆ ಕೊಟ್ಟಿರುವ ಹಣವನ್ನು ತಂದು ರೈತರಿಗೆ (Farmers) ಹಂಚಲು ಯೋಚಿಸಿದ್ದೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಹೇಳಿದ್ದಾರೆ.

    ವಿಜಯಪುರದಲ್ಲಿಂದು (Vijayapura) ಕಾಂಗ್ರೆಸ್ ಅಭ್ಯರ್ಥಿ ಚುನಾವಣಾ ಪ್ರಚಾರ ನಡೆಸಿದ ರಾಹುಲ್ ಗಾಂಧಿ, ಕೈ ಅಭ್ಯರ್ಥಿ ರಾಜು ಅಲಗೂರ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ (BJP) ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

    ಮೋದಿ ಸರ್ಕಾರ (Modi Govt.) ಕಳೆದ 10 ವರ್ಷಗಳಲ್ಲಿ 20 ಮಂದಿ ಶ್ರೀಮಂತರನ್ನ ಮಾತ್ರ ಬೆಳೆಸಿದೆ. ಅದಾನಿ ಅವರಿಗೆ ಭಾರತದ ದೊಡ್ಡ ದೊಡ್ಡ ಯೋಜನೆಗಳನ್ನ ಕೊಟ್ಟಿದ್ದಾರೆ. ಬಡವರಿಗೆ ಏನು ಕೊಟ್ಟಿದ್ದಾರೆ? ಆದ್ರೆ‌ ನಮ್ಮ ಕಾಂಗ್ರೆಸ್‌ ಸರ್ಕಾರ ಕರ್ನಾಟಕದಲ್ಲಿ ಬಡವರಿಗಾಗಿ 5 ಗ್ಯಾರಂಟಿಗಳನ್ನು ಕೊಟ್ಟಿದೆ. ಆದರಿಂದ ಸಾಕಷ್ಟು ಉಪಯೋಗ ಆಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ 38.23% ಮತದಾನ-ಬೆಂಗಳೂರು ನಗರದಲ್ಲಿ ಅತಿ ಕಡಿಮೆ, ದಕ್ಷಿಣ ಕನ್ನಡದಲ್ಲಿ ಗರಿಷ್ಠ

    ನಮ್ಮ ಸರ್ಕಾರ ಈಗ ಕೋಟ್ಯಧಿಪತಿಗಳನ್ನು ಲಕ್ಷಾಧಿಪತಿಗಳಾಗಿ ಮಾಡಲು ಹೊರಟಿದೆ. ಎಷ್ಟು ಹಣ ಮೋದಿ ಅವರು ಈ ಕೋಟ್ಯಧಿಪತಿಗಳಿಗೆ ಕೊಟ್ಟಿದ್ದಾರೋ ಅದನ್ನ ರೈತರಿಗೆ ಕೊಡಲು ಯೋಚಿಸಿದ್ದೇವೆ. ಈಗಾಗಲೇ ಕರ್ನಾಟಕದಲ್ಲಿ ಮಹಿಳೆಯರಿಗೆ 2,000 ರೂ. ಸಿಗುತ್ತಿದೆ. ಈ ಚುನಾವಣೆಯ ನಂತರ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುತ್ತೆ. ಅಧಿಕಾರಕ್ಕೆ ಬಂದ ನಂತರ ಪ್ರತಿಯೊಬ್ಬರ ಪಟ್ಟಿ ರೆಡಿ ಮಾಡ್ತೀವಿ. ಪ್ರತಿ ಬಡ ಕುಟುಂಬದಿಂದ ಓರ್ವ ಮಹಿಳೆಯನ್ನ ಆಯ್ಕೆ ಮಾಡುತ್ತೇವೆ. ಆ ಮಹಿಳೆಗೆ ವಾರ್ಷಿಕವಾಗಿ 1 ಲಕ್ಷ ರೂ. ಕೊಡ್ತೇವೆ. ಇದರ ಜೊತೆಗೆ ಕರ್ನಾಟಕ ಸರ್ಕಾರ ಮಹಿಳೆಯರಿಗೆ 24 ಸಾವಿರ ರೂ. ಕೊಡುವುದನ್ನು ಮುಂದುವರಿಸುತ್ತದೆ. ಪ್ರತಿ ತಿಂಗಳು 1ನೇ ತಾರೀಕಿನಂದು ತಮ್ಮ ಅಕೌಂಟ್ ಚೆಕ್ ಮಾಡಿದ್ರೆ ಅದರಲ್ಲಿ 10,500 ರೂ. ಇರುತ್ತೆ ಎಂದು ಭರವಸೆ ನೀಡಿದ್ದಾರೆ.

    ಬಡವರು ಆರ್ಥಿಕವಾಗಿ ಸಬಲರಾಗುವವರೆಗೂ ಅವರಿಗೆ ಹಣ ಕೊಡುತ್ತೇವೆ. ಮೋದಿಯವರು ಕೋಟ್ಯಾಧೀಶರಿಗೆ ಕೆಲಸ ಕೊಟ್ಟು, ಬಡವರಿಗೆ ಅನ್ಯಾಯ ಮಾಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಿದೆ. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡುತ್ತೇವೆ. ಅಂಗನವಾಡಿ ಕಾರ್ಯಕರ್ತೆಯರ ವೇತನ ಡಬಲ್ ಮಾಡುತ್ತೇವೆ. ಅಗ್ನಿವೀರ್ ಯೋಜನೆಯನ್ನು ರದ್ದುಮಾಡುತ್ತೇವೆ ಎಂದು ಗ್ಯಾರಂಟಿ ನೀಡಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಇಬ್ಬರು ಉಗ್ರರ ಹತೈಗೈದ ಸೇನೆ

    ಪ್ರಧಾನಿ ಮೋದಿಗೆ ಈಗಾಗಲೇ ಭಯ ಶುರುವಾಗಿದೆ. ಅದಕ್ಕಾಗಿ ಅವರು ಬೇರೆ-ಬೇರೆ ವಿಚಾರ ಮಾತನಾಡ್ತಾರೆ. ಒಮ್ಮೆ ಚೀನಾ ಮತ್ತೊಮ್ಮೆ ಪಾಕಿಸ್ತಾನದ ಬಗ್ಗೆ ಮಾತನಾಡಿ ದಿಕ್ಕು ತಪ್ಪಿಸುತ್ತಾರೆ. ಭಾರತದಲ್ಲಿ ಎದುರಿಸಬೇಕಾದ ಸವಾಲುಗಳು ಅನೇಕ ಇವೆ. ಬಡತನ, ನಿರುದ್ಯೋಗ, ಬೆಲೆ ಏರಿಕೆಯಂತಹ ಸವಾಲುಗಳು ನಮ್ಮ ಮುಂದಿವೆ. ಕಳೆದ 10 ವರ್ಷಗಳಲ್ಲಿ ಬಡವರನ್ನು ಉದ್ಧಾರ ಮಾಡಿದ್ದೇವೆ ಎಂದು ಹೇಳುವ ಮೋದಿ ಬಡವರಿಂದಲೇ ಹಣ ಕಸಿದುಕೊಂಡಿದ್ದಾರೆ. ಆದ್ದರಿಂದಲೇ ಭಾರತದ ಶೇ.1 ರಷ್ಟು ಜನರ ಬಳಿ ಇವತ್ತು 40% ಸಂಪತ್ತು ತುಂಬಿದೆ ಎಂದು ಕಿಡಿ ಕಾರಿದ್ದಾರೆ.

  • ವಿಜಯಪುರದಲ್ಲಿ ಸಿಡಿಲು ಬಡಿದು ಇಬ್ಬರ ದುರ್ಮರಣ

    ವಿಜಯಪುರದಲ್ಲಿ ಸಿಡಿಲು ಬಡಿದು ಇಬ್ಬರ ದುರ್ಮರಣ

    ವಿಜಯಪುರ: ಸಿಡಿಲು (Lightning) ಬಡಿದು ಇಬ್ಬರು ಸಾವನ್ನಪ್ಪಿದ ಘಟನೆ ವಿಜಯಪುರ (Vijayapura) ಜಿಲ್ಲೆಯ ಇಂಡಿ (Indi) ತಾಲೂಕಿನಲ್ಲಿ ನಡೆದಿದೆ.

    ಇಂಡಿ ಪಟ್ಟಣದಲ್ಲಿ ಭೀರಪ್ಪ ಅವರಾದಿ (15) ಎಂಬ ಬಾಲಕ ಸಿಡಿಲಿಗೆ ಬಲಿಯಾಗಿದ್ದಾನೆ. ಇನ್ನೂ ಇಂಡಿ ತಾಲೂಕಿನ ಮಸಳಿ ಬಿಕೆ ಗ್ರಾಮದಲ್ಲಿ ಸೋಮಶೇಖರ್ ಕಾಶಿನಾಥ ಪಟ್ಟಣಶೆಟ್ಟಿ (45) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಲೋಕ ಸಮರದಲ್ಲಿ ಒಕ್ಕಲಿಗ ಜಟಾಪಟಿ – ಏನಿದು ಫೋನ್‌ ಟ್ಯಾಪ್‌ ಕೇಸ್‌?

    ರಾಜ್ಯದಲ್ಲಿ ತೀವ್ರ ಬೇಸಿಗೆಯ ನಡುವೆಯೂ, ಹಲವು ಜಿಲ್ಲೆಗಳಲ್ಲಿ ವರುಣ ತಂಪೆರೆದಿದ್ದಾನೆ. ಶಿವಮೊಗ್ಗ, ಮಡಿಕೇರಿ, ಚಿಕ್ಕಮಗಳೂರು, ವಿಜಯಪುರ ಸೇರಿದಂತೆ ಕಲಬುರಗಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಳೆಯಾಗಿದೆ. ವಿಜಯಪುರ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ವಿಜಯಪುರ ನಗರ, ತಿಕೋಟ ತಾಲೂಕಿನ ಘೋಣಸಗಿ, ಬಾಬಾನಗರ, ಹುಬನೂರು, ಸೋಮದೇವರಹಟ್ಟಿ, ಬಿಜ್ಜರಗಿ, ಕಳ್ಳಕವಟಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಾಳಿ ಸಹಿತ ಹಗುರ ಮಳೆಯಾಗಿದೆ. ಇದನ್ನೂ ಓದಿ: ರಾಜ್ಯದ ಹಲವೆಡೆ ಮಳೆ – ಬಿಸಿಲಿನಿಂದ ಕಂಗೆಟ್ಟ ಜನಕ್ಕೆ ತಂಪೆರೆದ ವರುಣ

  • ಸರ್ಕಾರ ಎಲ್ಲಾ ಪ್ರಜೆಗಳನ್ನು ಸಮಾನವಾಗಿ ಕಾಣಬೇಕು: ಪೇಜಾವರ ಶ್ರೀ

    ಸರ್ಕಾರ ಎಲ್ಲಾ ಪ್ರಜೆಗಳನ್ನು ಸಮಾನವಾಗಿ ಕಾಣಬೇಕು: ಪೇಜಾವರ ಶ್ರೀ

    – ಹನುಮಾನ್ ಚಾಲಿಸಾ ಹಾಕಿದ್ದ ಮುಖೇಶ್ ಮೇಲೆ ಕೇಸ್ ವಿಚಾರಕ್ಕೆ ಶ್ರೀ ಪ್ರತಿಕ್ರಿಯೆ
    – ರಾಮನವಮಿಗೆ ಅಯೋಧ್ಯೆಗೆ ಬರಬೇಡಿ ಎಂದು ಮನವಿ

    ವಿಜಯಪುರ: ಸರ್ಕಾರ ಒಂದು ಕೋಮಿನ ಅಥವಾ ಗುಂಪಿನ ಸ್ವತ್ತಲ್ಲ. ಸರ್ಕಾರ ಎಲ್ಲಾ ಪ್ರಜೆಗಳನ್ನು ಸಮಾನವಾಗಿ ಕಾಣಬೇಕು. ಇದು ಅಧಿಕಾರದಲ್ಲಿದ್ದವರ ಕರ್ತವ್ಯವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಪೇಜಾವರ ಶ್ರೀಗಳು (Sri Vishwaprasanna Tirtha Swamiji) ಅಸಮಾಧಾನ ಹೊರಹಾಕಿದ್ದಾರೆ.

    ವಿಜಯಪುರದಲ್ಲಿ (Vijayapura) ಮಾತನಾಡಿದ ಅವರು, ನಗರ್ತ್‍ಪೇಟೆಯಲ್ಲಿ (Nagartha Pete Attack Case) ಹನುಮಾನ್ ಚಾಲಿಸಾ (Hanuman Chalisa) ಹಾಕಿ ಹಲ್ಲೆಗೊಳಗಾದ ಮುಖೇಶ್ ಮೇಲೆ ಕೇಸ್ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ದುಷ್ಕೃತ್ಯಗಳಿಗೆ ಕೈ ಹಾಕಬಾರದು. ಎಲ್ಲಾ ಸಮಾಜಗಳನ್ನು ಒಟ್ಟಾಗಿ ಕೊಂಡೊಯ್ಯುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಮಾಡಿರುವ ಅನ್ಯಾಯ ಹೇಳಿದರೆ ಸಿದ್ದರಾಮಯ್ಯಗೆ ದುರಹಂಕಾರ ಅಂತಾರೆ: ಬಿಜೆಪಿ ವಿರುದ್ಧ ಸಿಎಂ ಗುಡುಗು

    ರಾಮನವಮಿಗೆ ಅಯೋಧ್ಯೆ ರಾಮಮಂದಿರಕ್ಕೆ ಬರಬೇಡಿ
    ರಾಮನವಮಿ ದಿನದಂದು ಅಯೋಧ್ಯೆಗೆ ಭಕ್ತರು ಬರಬೇಡಿ. ತಮ್ಮ ತಮ್ಮ ಊರುಗಳಲ್ಲಿ ರಾಮನವಮಿ ಆಚರಿಸಿ. ಆ ದಿನ ಅಯೋಧ್ಯೆಗೆ ಭಕ್ತರು ಬಂದಲ್ಲಿ ದರ್ಶನಕ್ಕೆ ತೊಂದರೆಯಾಗಲಿದೆ. ತಮ್ಮ ಊರಿನ ಮಂದಿರ, ಮನೆಗಳಲ್ಲೇ ರಾಮನವಮಿ ಆಚರಿಸಿ ಎಂದು ಶ್ರೀಗಳು ಸಲಹೆ ಕೊಟ್ಟಿದ್ದಾರೆ.

    ಈಗಲೇ ಪ್ರತಿ ಗಂಟಗೆ ರಾಮಮಂದಿರದಲ್ಲಿ 15 ಸಾವಿರ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ನಿತ್ಯ ಲಕ್ಷಾಂತರ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ರಾಮನವಮಿಗೆ ಇನ್ನಷ್ಟು ಭಕ್ತರು ಆಗಮಿಸಿದಲ್ಲಿ ತೊಂದರೆ ಉಂಟಾಗಲಿದೆ ಎಂದು ಅವರು ಈ ಮುನ್ನೆಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಭರ್ಜರಿ ಬೇಟೆ – 5.60 ಕೋಟಿ ರೂ. ಹಣ, 3 ಕೆಜಿ ಚಿನ್ನ, 103 ಕೆಜಿ ಬೆಳ್ಳಿ ಜಪ್ತಿ

  • ಕೊಳವೆ ಬಾವಿಗೆ ಬಿದ್ದು ಸಾವುಗೆದ್ದ ಸಾತ್ವಿಕ್ ಕ್ಷೇಮ-  ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಕೊಳವೆ ಬಾವಿಗೆ ಬಿದ್ದು ಸಾವುಗೆದ್ದ ಸಾತ್ವಿಕ್ ಕ್ಷೇಮ- ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್

    ವಿಜಯಪುರ: ಕೊಳವೆ ಬಾವಿಗೆ ಬಿದ್ದು ಸಾವು ಗೆದ್ದ 2 ವರ್ಷದ ಪುಟ್ಟ ಕಂದಮ್ಮ ಸಾತ್ವಿಕ್ (Sathwik) ಕ್ಷೇಮವಾಗಿದ್ದು, ಶೀಘ್ರವೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾನೆ.

    ಈ ಸಂಬಂಧ ಜಿಲ್ಲಾಧಿಕಾರಿ ಭೂಬಾಲನ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮಗು ಅರೋಗ್ಯವಾಗಿದ್ದಾನೆ. ಸಣ್ಣ-ಪುಟ್ಟ ಗಾಯ ಬಿಟ್ಟರೆ ಯಾವುದೇ ಗಾಯಗಳು ಇಲ್ಲ. ಘಟನೆ ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿನ ಚಿಕಿತ್ಸೆಗೆ ಮಗು ಸಂದ್ಪಿಸಿದೆ. ಮಗು ಚಟುವಟಿಕೆಯಿಂದ ಕೂಡಿದೆ. ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ. ನಾಳೆ ಒಂದು ದಿನ ನೋಡಿಕೊಂಡು ಮಗುವನ್ನ ಡಿಸ್ಚಾರ್ಜ್ ಮಾಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.

    ಸಾತ್ವಿಕ್‍ಗೆ ಮರು ನಾಮಕರಣ: ಮಗನ ಆರೋಗ್ಯದ ಕುರಿತು ತಂದೆ ಸತೀಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮಗ ಸಂಪೂರ್ಣ ಆರೋಗ್ಯದಿಂದ ಇದ್ದಾನೆ. ನಿನ್ನೆ ಎಂಆರ್‍ಐ ಸೇರಿದಂತೆ ಎಲ್ಲಾ ತಪಾಸಣೆ ನಡೆಸಿದ್ದಾರೆ. ಎಲ್ಲವೂ ಸಾಮಾನ್ಯವಾಗಿದೆ ಅಂತಾ ವೈದ್ಯರು ಹೇಳಿದ್ದಾರೆ. ನಮ್ಮ ಮಗನನ್ನ ಉಳಿಸಿಕೊಟ್ಟ ಸಂಪೂರ್ಣ ಜಿಲ್ಲಾಡಳಿತಕ್ಕೆ ಧನ್ಯವಾದಗಳು ಎಂದರು. ಇದನ್ನೂ ಓದಿ: ಕೊಳವೆ ಬಾವಿ ದುರಂತ- ಸಾವು ಗೆದ್ದ ಸಾತ್ವಿಕ್‌

    ಲಚ್ಯಾಣ ಗ್ರಾಮದ ಆರಾಧ್ಯ ದೈವ ಸಿದ್ಧಲಿಂಗ ಮಹಾರಾಜರ ಕೃಪೆಯಿಂದಲೇ ನಮ್ಮ ಮಗ ಮರಳಿದ್ದಾನೆ. ಕಾರಣ ಸಿದ್ಧಲಿಂಗ ಮುತ್ಯಾನ ಹೆಸರನ್ನ ಸಾತ್ವಿಕ್ ಗೆ ಮರು ನಾಮಕರಣ ಮಾಡಲಿದ್ದೇವೆ. ಇದೇ ತಿಂಗಳ 28 ರಂದು ಸಿದ್ಧಲಿಂಗ ಮಹರಾಜರ ಜಾತ್ರಾ ಮಹೋತ್ಸವ ಇದೆ. ಆಗ ಸಾತ್ವಿಕ್ ಮರುನಾಮಕರಣ ಕಾರ್ಯ ಮಾಡಲಿದ್ದೇವೆ. ಸಮಸ್ತ ಕುಟುಂಬಸ್ಥರು, ಸಂಬಂಧಿಕರು, ಗ್ರಾಮಸ್ಥರು ಮರುನಾಮಕರಣ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

    ಸಾತ್ವಿಕ್ ತಪಾಸಣೆಗೆ ಬಂದ ಜಿಲ್ಲಾ ಸರ್ಜನ್ ಶಿವಾನಂದ ಮಾಸ್ತಿಹೊಳಿ ಪ್ರತಿಕ್ರಿಯಿಸಿ, ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಸಾತ್ವಿಕ್‍ಗೆ ಚಿಕಿತ್ಸೆ ನಡೆಯುತ್ತಿದ್ದು, ನಿನ್ನೆಯಿಂದಲೆ ತಪಾಸಣೆ ಕಾರ್ಯ ನಡೆದಿದೆ. ಸಾತ್ವಿಕ್ ನನ್ನ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದ್ದು, ಸಂಪೂರ್ಣ ಆರೋಗ್ಯವಾಗಿದ್ದಾನೆ. ಎರಡು ದಿನ ನಿಗಾದಲ್ಲಿ ಇಡಲಾಗಿದೆ. ಸದ್ಯ ವೈದ್ಯರ ತಂಡದಿಂದ ನಡೆಯುತ್ತಿರುವ ತಪಾಸಣೆ ಕಾರ್ಯ ನಡೆಸುತ್ತಿದೆ ಎಂದಿದ್ದಾರೆ.

    ಉಪ್ಪಿಟ್ಟು ಅಂದ್ರೆ ಇಷ್ಟ: ಸಾತ್ವಿಕ್ ಆರೋಗ್ಯವಾಗಿದ್ದಾನೆ, ಭಯಪಡುವ ಅವಶ್ಯಕತೆ ಇಲ್ಲ. ಆತನಿಗೆ ಉಪ್ಪಿಟ್ಟು ಅಂದ್ರೆ ಇಷ್ಟ. ಹೀಗಾಗಿ ಬೆಳಗ್ಗೆ ಉಪ್ಪಿಟ್ಟು, ರಾಗಿ ಗಂಜಿ ಸೇವಿಸಿದ್ದಾನೆ. ಸದ್ಯ ಯಾವುದೇ ತೊಂದರೆ ಇಲ್ಲ. ಏನೇ ಹೆಚ್ಚು ಕಮ್ಮಿ ಆಗುವುದಿದ್ದರೆ 48 ಗಂಟೆ ಒಳಗೆ ಆಗುತ್ತೆ. ಕಾರಣ 48 ಗಂಟೆ ನಿಗಾದಲ್ಲಿ ಇಟ್ಟಿದ್ದೇವೆ ಅಷ್ಟೆ. ಮಗುವಿನ ಆರೋಗ್ಯ ಸ್ಥಿತಿ ನೋಡಿ ಡಿಸ್ಚಾರ್ಜ್ ಮಾಡುತ್ತೇವೆ. ಇದೊಂದು ವಿಸ್ಮಯ ಅಂತಾನೆ ಹೇಳಬೇಕು. ಈ ರೀತಿ 16 ತಿಂಗಳ ಮಗು ಯಾವುದೆ ತೊಂದರೆ ಇಲ್ಲದೆ ಬದುಕುಳಿದಿದ್ದು ದೇವರ ಕೃಪೆ ಅಂತಾನೇ ಹೇಳಬೇಕು ಎಂದು ಅವರು ತಿಳಿಸಿದರು.

  • ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ – ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆ

    ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ – ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆ

    ವಿಜಯಪುರ: ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟದಲ್ಲಿ ಕೊಳವೆ ಬಾವಿಗೆ (Borewell) ಬಿದ್ದ 2 ವರ್ಷದ ಸಾತ್ವಿಕ್‌ ರಕ್ಷಣೆಗಾಗಿ ಅಹೋರಾತ್ರಿಯಿಂದಲೇ ಕಾರ್ಯಾಚರಣೆ ನಡೆಯುತ್ತಿದ್ದು, ಕ್ಯಾಮೆರಾದಲ್ಲಿ ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆಯಾಗಿದೆ.

    400 ಅಡಿ ಆಳದ ಕೊಳವೆ ಬಾವಿ ಇದಾಗಿದ್ದು ಕಳೆದ 13 ಗಂಟೆಯಿಂದ ಮಗುವಿನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬೆಳಗಾವಿ, ಕಲಬುರಗಿಯಿಂದ ಎಸ್‌ಡಿಆರ್‌ಎಫ್‌ (NDRF), ಹೈದರಾಬಾದ್‌ನಿಂದ ಎನ್‌ಡಿಆರ್‌ಎಫ್‌ (NDRF) ತಂಡ ರಾತ್ರಿಯೇ ಸ್ಥಳಕ್ಕೆ ಬಂದಿದೆ. ಸ್ಥಳೀಯ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಜೊತೆಗೂಡಿದ್ದು ರಕ್ಷಣಾ ಕಾರ್ಯಾಚರಣೆ ವೇಗವಾಗಿ ನಡೆಸುತ್ತಿದೆ.

     

    20 ಅಡಿ ಆಳದಲ್ಲಿ ಬಾಲಕ ಸಿಲುಕಿದ್ದು ಕೊಳವೆಬಾವಿ ಪಕ್ಕದಲ್ಲಿ ಸಮಾನಾಂತರವಾಗಿ 2 ಜೆಸಿಬಿ ಬಳಸಿ ಗುಂಡಿಯನ್ನು ತೋಡಿ ಮಣ್ಣನ್ನು ಹೊರತೆಗೆದು ಮಗುವಿರುವ ಸ್ಥಳದ ಬಳಿಗೆ ರಕ್ಷಣಾ ತಂಡ ಸಮೀಪಿಸುತ್ತಿದೆ. ಇನ್ನೊಂದು ಅಡಿ ಕೊರೆದರೆ ಮಗುವಿನ ಬಳಿಗೆ ರಕ್ಷಣಾ ತಂಡ ತಲುಪಲಿದೆ. ಕೊಳವೆ ಬಾವಿಗೆ ಕ್ಯಾಮೆರಾ ಇಳಿಬಿಟ್ಟು ಬಾಲಕನ ಚಲನವಲನ ಗಮನಿಸಲಾಗುತ್ತಿದೆ.  ಜಿಲ್ಲಾಡಳಿತ ಪೈಪ್‌ ಮೂಲಕ ಆಕ್ಸಿಜನ್‌ ಕಳುಹಿಸಿದ್ದು, ಕ್ಯಾಮೆರಾದಲ್ಲಿ ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆಯಾಗಿದ್ದರಿಂದ ಬಿರುಸಿನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಬಂದ ದಾರಿಗಿಲ್ಲ ಸುಂಕ – ಅಮಿತ್‌ ಶಾರನ್ನು ಭೇಟಿಯಾಗದೇ ಬರಿಗೈಯಲ್ಲಿ ಈಶ್ವರಪ್ಪ ವಾಪಸ್‌

    ಕಾರ್ಯಾಚರಣೆಗೆ ಬಂಡೆ ಕಲ್ಲುಗಳು ಅಡ್ಡಿಯಾಗುತ್ತಿದ್ದು, ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್ ಪಿ ಋಷಿಕೇಶ ಸೋನಾವಣೆ, ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು ಸ್ಥಳದಲ್ಲೇ ಬೀಡು ಬಿಟ್ಟು ಕಾರ್ಯಾಚರಣೆ ಗಮನಿಸುತ್ತಿದ್ದಾರೆ.

    ಸತೀಶ್-ಪೂಜಾ ದಂಪತಿಗೆ ನಾಲ್ಕು ಎಕರೆ ಜಮೀನಿದ್ದು, ನಿಂಬೆ ಮತ್ತು ಕಬ್ಬಿಗೆ ನೀರಿನ ಕೊರತೆ ಎದುರಾಗಿದ್ದ ಹಿನ್ನೆಲೆಯಲ್ಲಿ ಮೊನ್ನೆಯಷ್ಟೇ ಕೊಳವೆ ಬಾವಿ ಕೊರೆಸಿದ್ದರು. ನೀರು ಸಿಕ್ಕಿದ ಹಿನ್ನೆಲೆಯಲ್ಲಿ ಅದನ್ನು ಹಾಗೆಯೇ ಬಿಟ್ಟಿದ್ದರು.

     

  • ವಿಜಯಪುರದಲ್ಲಿ ಮಳೆ, ಬಿರುಗಾಳಿಗೆ ನೆಲಕಚ್ಚಿದ ಬೆಳೆ – ದ್ರಾಕ್ಷಿ, ಬಾಳೆ ಬೆಳೆಗಾರರು ಕಂಗಾಲು

    ವಿಜಯಪುರದಲ್ಲಿ ಮಳೆ, ಬಿರುಗಾಳಿಗೆ ನೆಲಕಚ್ಚಿದ ಬೆಳೆ – ದ್ರಾಕ್ಷಿ, ಬಾಳೆ ಬೆಳೆಗಾರರು ಕಂಗಾಲು

    ವಿಜಯಪುರ: ಶನಿವಾರ ರಾತ್ರಿ ವಿಜಯಪುರ ಜಿಲ್ಲೆಯ ಕೆಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ.

    ಇಂಡಿ ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ಬೀಸಿದ ಭಾರೀ ಗಾಳಿಗೆ ವಿದ್ಯುತ್‌ ಕಂಬಗಳು, ಮರಗಳು ಮುರಿದು‌ ಬಿದ್ದಿವೆ. ಇದನ್ನೂ ಓದಿ: ಎಂ ಚಂದ್ರಪ್ಪ ಜೊತೆಗಿನ ಎಂಎಲ್‌ಸಿ ರವಿಕುಮಾರ್ ಸಂಧಾನ ಸಭೆ ವಿಫಲ

    ಹಳಗುಣಕಿ ಗ್ರಾಮದ ವಿಶ್ಚನಾಥ ಪಾಟೀಲ್ ಅವರ ದ್ರಾಕ್ಷಿ ತೋಟಕ್ಕೆ ಹಾನಿಯಾಗಿದೆ. ದ್ರಾಕ್ಷಿ ಸಾಲುಗಳ ಮೇಲೆ ವಿದ್ಯುತ್ ಕಂಬಗಳು ಮರ ಬಿದ್ದ ಪರಿಣಾಮ‌ ದ್ರಾಕ್ಷಿ ಬೆಳೆಗಳು ನಾಶವಾಗಿವೆ. ತೋಟಗಾರಿಕಾ ಇಲಾಖೆ ಸೂಕ್ತ ಪರಿಹಾರ ನೀಡಬೇಕೆಂದು ವಿಶ್ವನಾಥ ಪಾಟೀಲ್ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅವಧಿ ಮೀರಿ ಪಾರ್ಟಿ ಕೇಸ್ – ನಟ ದರ್ಶನ್ ಸೇರಿ 8 ಮಂದಿಗೆ ರಿಲೀಫ್

    ಬೊಮ್ಮನಳ್ಳಿ ಗ್ರಾಮದಲ್ಲಿ ಮುರುಗೆಪ್ಪ ಚೌಗುಲಾ ಎಂಬವರು ಬೆಳೆದಿದ್ದ ಒಂದು ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು ಧರೆಗುರುಗಳಿವೆ. ಸುಮಾರು 2 ಲಕ್ಷ ರೂ. ಹಾನಿಯಾಗಿದೆ. ಇಳುವರಿ ಕಟಾವು ಹಂತಕ್ಕೆ ಬಂದಿದ್ದ ಬಾಳೆ ಗಿಡಗಳು ಮುರಿದು ಬಿದ್ದಿದೆ.