Tag: ವಿಜಯಪುರ

  • ಹಿಂದೂಗಳ ಶ್ರದ್ಧೆಗೆ ಭಂಗ, ಜಗನ್ ಮೋಹನ್ ರೆಡ್ಡಿಯನ್ನು ಬಂಧಿಸಬೇಕು: ಈಶ್ವರಪ್ಪ ಆಗ್ರಹ

    ಹಿಂದೂಗಳ ಶ್ರದ್ಧೆಗೆ ಭಂಗ, ಜಗನ್ ಮೋಹನ್ ರೆಡ್ಡಿಯನ್ನು ಬಂಧಿಸಬೇಕು: ಈಶ್ವರಪ್ಪ ಆಗ್ರಹ

    ವಿಜಯಪುರ: ಜಗನ್ ಮೋಹನ್ ರೆಡ್ಡಿ (Jagan Mohan Reddy) ಅವರು ಸಿಎಂ ಆದ ಸಂದರ್ಭದಲ್ಲಿ ಇಡೀ ಪ್ರಪಂಚಕ್ಕೆ ಮಾಡಿದ್ದು ಮೋಸ. ಜಗನ್ ಮೋಹನ್ ರೆಡ್ಡಿಯನ್ನು ಬಂಧಿಸುವ ಕೆಲಸವಾಗಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ( K S Eshwarappa) ವಿಜಯಪುರದಲ್ಲಿ (Vijayapura) ಹೇಳಿದರು.

    ತಿರುಪತಿ ಲಡ್ಡುವಿನಲ್ಲಿ ಪ್ರಾಣಿಕೊಬ್ಬು ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿದೇಶಿ ಕ್ರಿಸ್ಚಿಯನ್ ಮಷಿನರಿಗಳಿಂದ ಈ ತರಹ ನಡೆದಿದೆ. ಹಿಂದುತ್ವ ಪ್ರತಿಪಾದಕರಿಗೆ, ಹಿಂದೂಗಳ ಶ್ರದ್ಧೆಗೆ ಭಂಗ ತರುವ ಕೆಲಸ ಮಾಡಿದ್ದಾರೆ. ಈಗಲೂ ನಾವು ಮಾಡಿಲ್ಲ ಎಂದು ಹೇಳುತ್ತಾರೆ. ಲ್ಯಾಬ್ ರಿಪೋರ್ಟ್ ಬಗ್ಗೆ ಇವರಿಗೆ ನಂಬಿಕೆ ಇಲ್ಲವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಆಡಳಿತ ಯಂತ್ರದ ಮೇಲೆ ಹದ್ದಿನ ಕಣ್ಣು – ಅನಗತ್ಯ ಸಿಬ್ಬಂದಿಗೆ ಗೇಟ್‌ಪಾಸ್‌ ಕೊಡಲು ಸರ್ಕಾರ ಪ್ಲ್ಯಾನ್!‌

    ನಮ್ಮ ಶ್ರದ್ಧೆ ಹಾಗೂ ಶ್ರದ್ಧಾಕೇಂದ್ರಕ್ಕೆ ಅಪಮಾನ ಮಾಡುವವರಿಗೆ ಇದು ಅಂತ್ಯವಾಗಬೇಕು. ಇದರಲ್ಲಿ ವಿದೇಶಿ ಸಂಚಿದೆ, ಈ ಪ್ರಕರಣ ಸಿಬಿಐಗೆ (CBI) ತನಿಖೆಗೆ ಕೊಡಬೇಕು. ದೇವರ ದಯೆಯಿಂದ ಇಡೀ ದೇಶದ ಎಲ್ಲ ಪಕ್ಷದ ನಾಯಕರು ಇದನ್ನು ಖಂಡಿಸಿದ್ದಾರೆ. ಇದು ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದು ಹೇಳಿದ್ದಾರೆ. ತಿರುಪತಿ ತಿಮ್ಮಪ್ಪನ ಬಗ್ಗೆ ಇರುವ ಶ್ರದ್ಧೆಯಿಂದ ಎಲ್ಲರೂ ಇದನ್ನು ಖಂಡಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: Quad Summit | ಮೋದಿ ದ್ವಿಪಕ್ಷೀಯ ಮಾತುಕತೆ – MQ-9B ಡ್ರೋನ್ ಖರೀದಿ, ರಕ್ಷಣಾತ್ಮಕ ವಿಚಾರಗಳ ಕುರಿತು ಚರ್ಚೆ

    ಬಿಜೆಪಿ (BJP) ಪಕ್ಷ ನನ್ನ ತಾಯಿ ಇದ್ದ ಹಾಗೆ. ಆ ತಾಯಿ ಬಿಟ್ಟು ನಾನು ಬೇರೆ ಯಾವ ಪಕ್ಷಕ್ಕೂ ಹೋಗಲ್ಲ. ಈ ಪಕ್ಷದಲ್ಲಿ ಶುದ್ಧೀಕರಣವಾಗಲಿ ಎಂಬ ಕಾರಣಕ್ಕೆ ನಾನು ಪಕ್ಷದಿಂದ ದೂರ ಇದ್ದೇನೆ. ಇವತ್ತಲ್ಲ ನಾಳೆ ಈ ವಿಚಾರವಾಗಿ ಹೈಕಮಾಂಡ್‌ನವರು ಚಿಂತಿಸಿ ಮಾತನಾಡುವ ನಂಬಿಕೆ ಇದೆ. ಆಗ ನಾನು ಕೂಡಾ ಬಿಜೆಪಿಗೆ ಸೇರುವ ವಿಚಾರವಾಗಿ ತೀರ್ಮಾನ ಮಾಡುವೆ ಎಂದರು. ಇದನ್ನೂ ಓದಿ: ನಾಗಮಂಗಲ ಗಲಭೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್‌ – ಚಿಕ್ಕಬಳ್ಳಾಪುರದಲ್ಲಿ ಗಣೇಶ ವಿಸರ್ಜನೆಗೆ 600 ಪೊಲೀಸರ ಭದ್ರತೆ

    ಈಶ್ವರಪ್ಪನವರನ್ನು ಬಿಜೆಪಿಗೆ ಕರೆ ತಂದು ಸಿಎಂ ಮಾಡುತ್ತೇವೆ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯತ್ನಾಳ್ ಓರ್ವ ಹಿಂದುತ್ವದ ಹುಲಿ. ಅವರ ಪ್ರೀತಿಯ ಮಾತಿಗೆ ನಾನು ಅಭಿನಂದಿಸುವೆ. ಬಿಜೆಪಿಯಲ್ಲಿನ ಅವ್ಯವಸ್ಥೆಯಿಂದ ನಾನು ಪಕ್ಷ ಬಿಟ್ಟೆ. ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕಾರಣ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ನಾನು ಬಿಜೆಪಿ ಬಿಟ್ಟೆ ಎಂದು ತಿಳಿಸಿದರು. ಇದನ್ನೂ ಓದಿ: 2ನೇ ಬಾರಿಗೆ ತುಂಗಭದ್ರಾ ಜಲಾಶಯ ಭರ್ತಿ – ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ

    ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಪೋಲಿಸ್‌ನವರು ರಾಷ್ಟ್ರದೋಹಿ ಚಟುವಟಿಕೆಗಳ ವಿರುದ್ಧ ಎಪ್‌ಐಆರ್ ಹಾಕಿದ್ದು ಅಭಿನಂದನಾರ್ಹ. ದಾವಣಗೆರೆ ಎಸ್ಪಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲದೇ ಪೊಲೀಸ್ ಇಲಾಖೆಯ ಬಗ್ಗೆ ಭಯ ಹುಟ್ಟಿಸಿದ್ದಕ್ಕೆ ಅಭಿನಂದನೆಗಳು. ಮಾನ್ಯ ಗೃಹ ಸಚಿವರು ಇಂತಹ ಪೋಲಿಸರಿಗೆ ಬೆಂಬಲ, ಪ್ರಶಸ್ತಿ ಕೊಡಬೇಕು. ಗಲಭೆ ಮಾಡಲು ಬಿಡಲ್ಲ ಎಂದು ದಾವಣಗೆರೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಅಭಿನಂದನೆ. ಇಡೀ ರಾಜ್ಯದಲ್ಲಿ ಈ ತರಹ ಪೋಲಿಸರು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಕಾರವಾರದಲ್ಲಿ ಬೆಳ್ಳಂಬೆಳಗ್ಗೆ ಹರಿದ ನೆತ್ತರು – ಉದ್ಯಮಿಯ ಬರ್ಬರ ಹತ್ಯೆ, ಮಚ್ಚಿನೇಟಿಂದ ಪತ್ನಿ ಗಂಭೀರ

  • ಕುಡಿದ ನಶೆಯಲ್ಲಿ ಆಸ್ಪತ್ರೆಗೆ ಬಂದು ವೈದ್ಯ ರಂಪಾಟ – ನಶೆಯಲ್ಲೇ ರೋಗಿಗಳಿಗೆ ಚಿಕಿತ್ಸೆ

    ಕುಡಿದ ನಶೆಯಲ್ಲಿ ಆಸ್ಪತ್ರೆಗೆ ಬಂದು ವೈದ್ಯ ರಂಪಾಟ – ನಶೆಯಲ್ಲೇ ರೋಗಿಗಳಿಗೆ ಚಿಕಿತ್ಸೆ

    ವಿಜಯಪುರ: ಕುಡಿದ ನಶೆಯಲ್ಲಿ ಆಸ್ಪತ್ರೆಗೆ ಬಂದು ವೈದ್ಯನೊಬ್ಬ ರಂಪಾಟ ಮಾಡಿರುವ ಘಟನೆ ಜಿಲ್ಲೆಯ ಚಡಚಣ (Chadachana) ತಾಲೂಕಿನ ಶಿರನಾಳ (Shiranala) ಆಯುಷ್ ಆರೋಗ್ಯ ಮಂದಿರದಲ್ಲಿ ನಡೆದಿದೆ.ಇದನ್ನೂ ಓದಿ: ಮುಡಾ, ವಾಲ್ಮೀಕಿ ಹಗರಣದಲ್ಲಿ ಸರ್ಕಾರ ಮುಳುಗಿ ಹೋಗಿದೆ: ಜಗದೀಶ ಶೆಟ್ಟರ್

    ಶಿರನಾಳ ಗ್ರಾಮದ ಆಯುಷ್ ಆರೋಗ್ಯ ಮಂದಿರದಲ್ಲಿ ಹೆಲ್ತ್ ಇನ್ಸ್‌ಪೆಕ್ಟರ್‌ ಆಫೀಸರ್ (Health Inspector Officer) ಹುದ್ದೆಯಲ್ಲಿರುವ ನಾರಾಯಣ ರಾಠೋಡ ಕುಡಿದ ನಶೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರಂಪಾಟ ಮಾಡಿದ್ದಾನೆ. ಆಸ್ಪತ್ರೆಯ ಕಿಟಕಿ, ಗಾಜು ಪುಡಿ ಪುಡಿ ಮಾಡಿ ಧ್ವಂಸ ಮಾಡಿದ್ದಾನೆ. ಆಸ್ಪತ್ರೆಯ ಟೇಬಲ್, ಕುರ್ಚಿಗಳೆಲ್ಲ ಪುಡಿಪುಡಿಯಾಗಿವೆ. ಅಷ್ಟಲ್ಲದೇ ನಶೆಯಲ್ಲೇ ರೋಗಿಗಳಿಗೆ ಚಿಕಿತ್ಸೆ ಕೂಡ ನೀಡಿದ್ದಾನೆ. ವೈದ್ಯನ ಅವತಾರ ಕಂಡು ಗ್ರಾಮದ ಜನ ಹಿಡೀ ಶಾಪ ಹಾಕಿದ್ದಾರೆ.

    ಕುಡಿತದ ಕಾರಣದಿಂದ ಮೂರು ತಿಂಗಳ ಹಿಂದೆ ನಾರಾಯಣ ರಾಠೋಡನನ್ನ ಅಮಾನತು ಮಾಡಲಾಗಿತ್ತು. ಬರಡೋಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದಾಗ ಮಹಿಳಾ ರೋಗಿಗಳು ಬಂದರೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದ ಹಿನ್ನೆಲೆ ಅಮಾನತು ಮಾಡಲಾಗಿತ್ತು.ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡ ‘ಲಕ್ಷ್ಮಿ ಬಾರಮ್ಮ’ ನಟಿಯರು

    ವಾರದ ಹಿಂದಷ್ಟೇ ಮತ್ತೇ ಕರ್ತವ್ಯಕ್ಕೆ ಹಾಜರಾಗಿದ್ದ ವೈದ್ಯ ಇದೀಗ ಮತ್ತೆ ಅದೇ ರೀತಿ ರಂಪಾಟ ಮಾಡಿದ್ದಾನೆ. ಸದ್ಯ ವೈದ್ಯನ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು, ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.

  • ಕುಡಿದ ನಶೆಯಲ್ಲಿ ಗೆಳೆಯನ ಹತ್ಯೆಗೈದ ಸ್ನೇಹಿತ

    ಕುಡಿದ ನಶೆಯಲ್ಲಿ ಗೆಳೆಯನ ಹತ್ಯೆಗೈದ ಸ್ನೇಹಿತ

    ವಿಜಯಪುರ: ಕುಡಿದ ನಶೆಯಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳೆಯನನ್ನೇ ಹತ್ಯೆಗೈದ ಘಟನೆ ವಿಜಯಪುರ (Vijayapura) ನಗರದ ಮಹಾನಗರ ಪಾಲಿಕೆಯ ಬಳಿ ನಡೆದಿದೆ.

    ಸಮೀರ ಬಡಿಗರ್ (35) ಹತ್ಯೆಯಾಗಿರುವ ದುರ್ದೈವಿ. ಗೆಳೆಯ ವಿನಯ ಎಂಬಾತನಿಂದ ಹತ್ಯೆ ನಡೆದಿದೆ. ಕುಡಿದ ನಶೆಯಲ್ಲಿ ಸಮೀರ ದೇಹಕ್ಕೆ ಏಳಕ್ಕಿಂತ ಹೆಚ್ಚು ಬಾರಿ ಚಾಕುವಿನಿಂದ ಹಲ್ಲೆಗೈದು ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: ದೀಪಾವಳಿಯೊಳಗೆ ಕಾಂಗ್ರೆಸ್‌ ಸರ್ಕಾರ ಢಮಾರ್‌: ಸಿಟಿ ರವಿ

    ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ‘ಡಿ’ ಗ್ಯಾಂಗ್‌ಗೆ ಜೈಲೇ ಗತಿ – ಮತ್ತೆ 3 ದಿನ ನ್ಯಾಯಾಂಗ ಬಂಧನ ವಿಸ್ತರಣೆ

  • ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಯುವಕ ದುರ್ಮರಣ

    ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಯುವಕ ದುರ್ಮರಣ

    ವಿಜಯಪುರ: ಜಾತ್ರಾ ರಥೋತ್ಸವದ (Rathotsava) ವೇಳೆ ರಥದ ಚಕ್ರಕ್ಕೆ ಸಿಲುಕಿ ಯುವಕ (Youth) ಸಾವನ್ನಪ್ಪಿದ ಘಟನೆ ವಿಜಯಪುರ (Vijayapura) ಜಿಲ್ಲೆಯ ದೇವರಹಿಪ್ಪರಗಿ (Devara Hipparagi) ತಾಲೂಕಿನ ಬಿಬಿ ಇಂಗಳಗಿ ಗ್ರಾಮದಲ್ಲಿ ನಡೆದಿದೆ.

    ದೇವೇಂದ್ರ ಬಡಿಗೇರ್ (24) ಮೃತ ದುರ್ದೈವಿ. ಘನ ಗುರುಸಿದ್ದೇಶ್ವರ ದೇವರ ಜಾತ್ರೆಯಲ್ಲಿ ಅವಘಡ ಸಂಭವಿಸಿದ್ದು, ದುರಂತದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಎನ್‌ಆರ್‌ಸಿಗೆ ಅರ್ಜಿ ಸಲ್ಲಿಸದಿದ್ರೆ ಆಧಾರ್‌ ಕಾರ್ಡ್‌ ಇಲ್ಲ: ಅಸ್ಸಾಂ ಸಿಎಂ ಘೋಷಣೆ

    ರಥವನ್ನು ಎಳೆಯುವ ವೇಳೆ ಯುವಕ ಆಯತಪ್ಪಿ ಚಕ್ರದ ಅಡಿಗೆ ಸಿಲುಕಿದ್ದಾನೆ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ದೇವೇಂದ್ರ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಗಲಾಟೆ; 2 ಗುಂಪಿನ ನಡುವೆ ಮಾರಾಮಾರಿ

  • ಪಾದಚಾರಿಗಳ ಮೇಲೆ ಹರಿದ ಬೈಕ್ – ನಾಲ್ವರು ಸಾವು

    ಪಾದಚಾರಿಗಳ ಮೇಲೆ ಹರಿದ ಬೈಕ್ – ನಾಲ್ವರು ಸಾವು

    – ವಿಜಯಪುರದಲ್ಲಿ ಜಾತ್ರೆಗೆ ಹೋಗಿದ್ದ ಯುವಕರು ಮಸಣಕ್ಕೆ

    ವಿಜಯಪುರ: ಜಾತ್ರೆಗೆಂದು ಬಂದ ಯುವಕರು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೂತ್ರ ವಿಸರ್ಜನೆಗೆಂದು ರಸ್ತೆ ದಾಟುತ್ತಿದ್ದ ಯುವಕರ ಮೇಲೆ ಬೈಕ್ ಹರಿದು ಅಪಘಾತ ಸಂಭವಿಸಿದೆ.

    ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಅಪಘಾತದಲ್ಲಿ ಇಬ್ಬರು ಪಾದಚಾರಿಗಳು ಹಾಗೂ ಬೈಕ್ ಸವಾರರಿಬ್ಬರು ಸೇರಿ ಒಟ್ಟು ನಾಲ್ವರು ಯುವಕರ ಮೃತಪಟ್ಟಿದ್ದಾರೆ.

    ಮೂವರಿಗೆ ಗಂಭೀರ ಗಾಯಗಳಾಗಿವೆ. ನಿನ್ನೆ ರಾತ್ರಿ 11 ಗಂಟೆಗೆ ಘಟನೆ ನಡೆದಿದೆ. ಸ್ಥಳದಲ್ಲಿ ಮೂವರು ಸಾವನ್ನಪ್ಪಿದ್ದು, ಇನ್ನೋರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದಾನೆ. ಅನಿಲ ಖೈನೂರ (23), ಚೌಡಕಿ (22), ಕುಮಾರ ಪ್ಯಾಟಿ (18), ರಾಯಪ್ಪ ಬಾಗೇವಾಡಿ (24) ಮೃತ ದುರ್ದೈವಿಗಳಾಗಿದ್ದಾರೆ.

    ಶಾಹಿದ ಹುನಗುಂದ, ಪ್ರಶಾಂತ ಕುರುಬಗೌಡರ, ಹನಮಂತ ಕರುಬಗೌಡರಗೆ ಗಂಭಿರ ಗಾಯಗಳಾಗಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಚಿವರ ಜೊತೆ ಕಂಪನಿಯ ನಿಯೋಗದ ಭೇಟಿ; ವಿಜಯಪುರ ಜಿಲ್ಲೆಯಲ್ಲಿ ಕೆನಡಾದ ವಿಟೆರಾದಿಂದ 250 ಕೋಟಿ ಹೂಡಿಕೆ: ಎಂ.ಬಿ.ಪಾಟೀಲ್

    ಸಚಿವರ ಜೊತೆ ಕಂಪನಿಯ ನಿಯೋಗದ ಭೇಟಿ; ವಿಜಯಪುರ ಜಿಲ್ಲೆಯಲ್ಲಿ ಕೆನಡಾದ ವಿಟೆರಾದಿಂದ 250 ಕೋಟಿ ಹೂಡಿಕೆ: ಎಂ.ಬಿ.ಪಾಟೀಲ್

    ಬೆಂಗಳೂರು: ವಿಜಯಪುರ (Vijayapura) ಜಿಲ್ಲೆಯಲ್ಲಿ ಕೃಷಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಕೆನಡಾದ ಕೃಷಿ ಉತ್ಪನ್ನ ತಯಾರಿಕಾ ಪ್ರಮುಖ ಕಂಪನಿಯಾಗಿರುವ ವಿಟೆರಾ (Viterra Canada) 250 ಕೋಟಿ ರೂ. ಮೊತ್ತದ ಬಂಡವಾಳ ಹೂಡಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ (M.B.Patil) ತಿಳಿಸಿದ್ದಾರೆ.

    ವಿಟೆರಾ ಕಂಪನಿಯ ಪ್ರತಿನಿಧಿಗಳ ಜತೆ ಸಚಿವರು ಇಲ್ಲಿನ ಖನಿಜ ಭವನದಲ್ಲಿ ನಡೆಸಿದ ಸಭೆಯಲ್ಲಿ‌ ಈ ಬಂಡವಾಳ ಹೂಡಿಕೆ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ನಿವೇಶನ ಲೂಟಿ ಮಾಡುತ್ತಿರುವುದು ನಾನಾ ನೀವಾ? – ಎಂ.ಬಿ.ಪಾಟೀಲರ ಸೈಟ್ ಅಕ್ರಮ ಸದ್ಯದಲ್ಲೇ ಬಯಲು: ಛಲವಾದಿ ನಾರಾಯಣಸ್ವಾಮಿ

    ವಿಜಯಪುರ ಜಿಲ್ಲೆಯ ಕೃಷಿ ಸಮುದಾಯದ ಬಳಕೆಗೆ ಅತ್ಯಾಧುನಿಕ ಶೈತ್ಯಾಗಾರಗಳನ್ನು ನಿರ್ಮಿಸಿ ರೈತರು ಸುಗ್ಗಿಯ ನಂತರ ಎದುರಿಸುವ ನಷ್ಟ ತಗ್ಗಿಸಲು ಮತ್ತು ಕೃಷಿ ಉತ್ಪನ್ನಗಳ ಉತ್ಪಾದನೆ, ಪೂರೈಕೆ ಹಾಗೂ ಮಾರಾಟ ಪ್ರಕ್ರಿಯೆಯಲ್ಲಿ ದಕ್ಷತೆ ತರಲು ವಿಟೆರಾ ನೆರವಾಗಲಿದೆ. ವಿಟೆರಾ ಕಂಪನಿಯು ಸುಧಾರಿತ ಉತ್ಪಾದನಾ ತಂತ್ರಜ್ಞಾನ ಬಳಸಲಿದೆ. ರಾಜ್ಯದಲ್ಲಿ ಕೆನಡಾದ ಆಧುನಿಕ ಕೃಷಿ ತಂತ್ರಜ್ಞಾನ ಬಳಕೆ ಹಾಗೂ ಈ ಬಂಡವಾಳ ಹೂಡಿಕೆಯಿಂದ ಕೃಷಿ ಕ್ಷೇತ್ರದ ಉತ್ಪಾದನೆ ಹೆಚ್ಚಲಿದ್ದು, ಅದರಿಂದ ರಾಜ್ಯದ ಒಟ್ಟಾರೆ ಆರ್ಥಿಕತೆಗೂ ಉತ್ತೇಜನ ದೊರೆಯಲಿದೆ ಎಂದು ಸಚಿವರು ಹೇಳಿದ್ದಾರೆ.

    ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ ಹಾಗೂ ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಚನ್ನಪಟ್ಟಣದ ಅಭ್ಯರ್ಥಿ ನಾನೇ: ಡಿ.ಕೆ.ಶಿವಕುಮಾರ್

  • ನಾನು ಯಾವುದೇ ಹೊಂದಾಣಿಕೆಗೆ ಒಪ್ಪಲ್ಲ: ಯತ್ನಾಳ್

    ನಾನು ಯಾವುದೇ ಹೊಂದಾಣಿಕೆಗೆ ಒಪ್ಪಲ್ಲ: ಯತ್ನಾಳ್

    ವಿಜಯಪುರ: ನಾನು ಯಾವುದೇ ಹೊಂದಾಣಿಕೆಗೆ ಒಪ್ಪಲ್ಲ. ಇಬ್ಬರ ಮಧ್ಯೆ ಒಪ್ಪಂದದ ಬಗ್ಗೆ ನನ್ನ ಜೊತೆ ಯಾರು ಮಾತನಾಡಿಲ್ಲ. ಒಬ್ಬೊಬ್ಬರೇ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ ಎಂದು ನಾವೆಲ್ಲರು ನಿರ್ಧರಿಸಿದ್ದೇವೆ. ಏನೇ ಇದ್ದರು ಎಲ್ಲರೂ ಸೇರಿ ಮಾತುಕತೆ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ( Basanagouda Patil Yatnal ) ಹೇಳಿದ್ದಾರೆ.

    ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಡಿಕೆಶಿಯವರು ವಿಜಯೇಂದ್ರ ಶಾಸಕನಾಗಿ ಅಯ್ಕೆ ಆಗಲು ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಈ ಹೊಂದಾಣಿಕೆ ಬಗ್ಗೆ ನಾನು ಮುಂಚೆಯೇ ಹೇಳಿದ್ದೇನೆ. ಈಗ ಡಿಕೆಶಿ (DK Shivakumar) ಬಹಿರಂಗವಾಗಿ ಹೇಳಿದ್ದಾರೆ. ಇಂತಹ ಹೊಂದಾಣಿಕೆಗಾರರ ಜೊತೆ ನನ್ನ ಹೊಂದಾಣಿಕೆ ಇಲ್ಲ. ಸಂಘದವರು, ಹೈಕಮಾಂಡ್ ಮಧ್ಯಸ್ಥಿಕೆ ವಹಿಸಿದರೆ ಅವರ ಜೊತೆ ಮಾತುಕತೆ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಬ್ರೂಸ್ಲಿ ಅಭಿಮಾನಿಯ ಸಾಹಸ – ಹಲ್ಲಿನಿಂದ 1 ಟನ್ ತೂಕದ ಕಾರು ಎಳೆದ ಯುವಕ

    ಉತ್ತರ ಕರ್ನಾಟಕದಲ್ಲಿ ಬಿಜೆಪಿಯ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ನಾವು ಪಾದಯಾತ್ರೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಅದಕ್ಕೆ ಪಾಟೀಲ ಅವರು ಬರುವವರಿದ್ದರು. ಅವರಿಗೆ ಡೆಂಗ್ಯೂ ಬಂದ ಕಾರಣ ಬರಲಿಲ್ಲ.  ಇನ್ನು ಹಲವರು ಬರುವವರಿದ್ದಾರೆ, ಮುಂದಿನ ದಿನಗಳಲ್ಲಿ ಯಾರೆಲ್ಲಾ ಬರುತ್ತಾರೆ ನೋಡಿ ಎಂದರು. ನಮ್ಮ ಬಿಜೆಪಿಯವರು ನಿಷ್ಠಾವಂತರು. ಇದು ಬಿಜೆಪಿ(BJP) ಬಂಡಾಯ ಎಂದು ಮಾಧ್ಯಮದವರು ಸುದ್ದಿ ಮಾಡಬೇಡಿ. ಕೈ ಮುಗಿದು ಹೇಳುತಿದ್ದೇನೆ ಎಂದರು. ಇದನ್ನೂ ಓದಿ:  12 ವರ್ಷಗಳಲ್ಲೇ ಬೆಂಗ್ಳೂರು ಮೆಟ್ರೋದಲ್ಲಿ ದಾಖಲೆ ಪ್ರಯಾಣ

    ಹೈಕಮಾಂಡ್ ಅನುಮತಿ ಪಡೆದು ನಾವು ಪಾದಯಾತ್ರೆ ಮಾಡುತ್ತೇವೆ. ಬಿಜೆಪಿ(BJP) ಸಂವಿಧಾನ ವಿರೋಧಿ ಇದೆ, ಬಿಜೆಪಿಗೆ ಬಹುಮತ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ. ಮೀಸಲಾತಿ ಬದಲಾವಣೆ ಮಾಡುತ್ತಾರೆ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದ್ದಾರೆ. ಇದರಿಂದ ನಮಗೆ 240 ಸೀಟ್‌ಗಳು ಬಂದಿವೆ. ಜನರ ಮನಸ್ಸಲ್ಲಿ ಇರುವ ತಪ್ಪು ಭಾವನೆಯನ್ನು ಹೋಗಲಾಡಿಸಲು ನಾವು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ನೀರಜ್‌ ಚೋಪ್ರಾ – ಮನು ಭಾಕರ್‌ ಮದುವೆ ವದಂತಿ: ಎಲ್ಲವೂ ಆಧಾರ ರಹಿತ ಎಂದ ಮನು ಭಾಕರ್‌

    ಸಿಎಂ ಸಿದ್ದರಾಮಯ್ಯ(CM Siddaramaiha) ಅವರು 187 ಕೋಟಿ ರೂ. ಅಲ್ಲ 82 ಕೋಟಿ ರೂ. ಮಾತ್ರ ಭ್ರಷ್ಟಾಚಾರ ಆಗಿದೆ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ. 82 ಕೋಟಿ ರೂ. ಅದು ದಲಿತರ ಹಣ ಅಲ್ವಾ? ಎಂದು ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ಆನೇಕಲ್‍ನಲ್ಲಿ ವಿದ್ಯುತ್ ಶಾಕ್‍ಗೆ ಯುವ ಇಂಜಿನಿಯರ್ ಬಲಿ

    ಸಿಎಂ ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣವನ್ನ ದೋಚಿದ್ದಾರೆ. ನಮ್ಮ ಪಕ್ಷ ಆಡಳಿತದಲ್ಲಿದ್ದಾಗ ದಲಿತರಿಗೆ, ಹಿಂದುಳಿದವರಿಗೆ ಸೇರಿದ ಹಣವನ್ನ ಸದುಪಯೋಗ ಮಾಡಿತ್ತೇ? ಇದರೆಲ್ಲದರ ಬಗ್ಗೆ ಪಾದಯಾತ್ರೆ ಮಾಡಿ ಜನರಿಗೆ ಮಾಹಿತಿ ನೀಡಿ ಅರಿವು ಮೂಡಿಸುತ್ತೇವೆ. ಇದು ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತದೆ. ಇದಕ್ಕೆ ಯಾರು ಬೇಕಾದರೂ ಬರಬಹುದು ಎಂದರು. ಇದನ್ನೂ ಓದಿ:  ವೈದ್ಯೆ ಅತ್ಯಾಚಾರ, ಕೊಲೆ ಖಂಡಿಸಿ ರೊಚ್ಚಿಗೆದ್ದ ಪ್ರತಿಭಟನಾಕಾರರು – ಆಸ್ಪತ್ರೆಗೆ ನುಗ್ಗಿ ದಾಂಧಲೆ

    ದೇವೇಗೌಡರ ಪತ್ನಿ ಹೆಸರಲ್ಲಿ ಕೆರೆ ಒತ್ತುವರಿ ವಿಚಾರ 1974 ರಲ್ಲಿ ನಡೆದಿದೆ. ಆದರೆ ಈಗ ಅದು ಹೊರಬಂದಿದೆ. ಇಷ್ಟು ದಿನ ಏನು ಮಾಡುತ್ತಿದ್ದರು? ಯಡ್ಡಿಯೂರಪ್ಪ (Yediyurappa) ಸರ್ಕಾರ ಇತ್ತು, ಕಾಂಗ್ರೆಸ್ ಸರ್ಕಾರ ಇತ್ತು ಆಗ ಯಾಕೆ ಇದನ್ನ ತನಿಖೆ ಮಾಡಿಸಲಿಲ್ಲ? ತನಿಖೆ ಮಾಡಿಸಿ ತಪ್ಪಿದ್ದರೆ ಶಿಕ್ಷೆ ಕೊಡಬೇಕಿತ್ತು. ಆಗ ಸುಮ್ಮನಿದ್ದು ಈಗ ಸಿಎಂ ವಿಚಾರ ಹೊರ ಬಂತು ಎಂದು ಇದನೆಲ್ಲ ಬಹಿರಂಗ ಮಾಡುತ್ತಿದ್ದಾರೆ. ಅವರ ತಪ್ಪುಗಳನ್ನು ಇವರು ಮುಚ್ಚುವುದು, ಇವರ ತಪ್ಪುಗಳನ್ನು ಅವರು ಮುಚ್ಚುವುದು. ಎಲ್ಲರೂ ಇದೆ ರೀತಿ ಹೊಂದಾಣಿಕೆ ಮಾಡುತ್ತಾ ಬಂದಿದ್ದಾರೆ. ಇದೇ ಹೊಂದಾಣಿಕೆ ಎಂದು ನಾನು ಹೇಳುತ್ತಿರುವುದು ಎಂದು ತಿಳಿಸಿದರು. ಇದನ್ನೂ ಓದಿ: ಚನ್ನಪಟ್ಟಣ ಕೈವಶಕ್ಕೆ ಡಿಸಿಎಂ ರಣತಂತ್ರ; ಒಂದೇ ವೇದಿಕೆಯಲ್ಲಿ ಡಿಕೆಶಿ-ಸಿಪಿವೈ ಸಮಾಗಮ

  • ಮಹಾರಾಷ್ಟ್ರದಿಂದ 1.20 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ – ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ

    ಮಹಾರಾಷ್ಟ್ರದಿಂದ 1.20 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ – ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ

    ವಿಜಯಪುರ: ಮಹಾರಾಷ್ಟ್ರದಲ್ಲಿ (Maharashtra) ಭಾರೀ ಮಳೆ (Heavy Rain) ಮುಂದುವರೆದಿದ್ದು ಉಜನಿ ಹಾಗೂ ವೀರ್ ಜಲಾಶಯಗಳಿಂದ ಭೀಮಾನದಿಗೆ (Bhima River) ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ.

    ಮಹಾರಾಷ್ಟ್ರದಿಂದ ಒಟ್ಟು 1,20,000 ಕ್ಯೂಸೆಕ್ ನೀರು ಭೀಮಾ ನದಿಗೆ ಹರಿಸಿದ್ದರಿಂದ ವಿಜಯಪುರ (Vijayapura) ಜಿಲ್ಲೆಯಲ್ಲಿ ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಚಡಚಣ ತಾಲೂಕಿನಲ್ಲಿ ಭೀಮಾನದಿಗೆ ಅಡ್ಡಲಾಗಿ ಕಟ್ಟಿರುವ ಉಮರಾಣಿ- ಲವಗಿ ಬ್ಯಾರೇಜ್ ಮುಳುಗಡೆಯಾಗಿದೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಕ್ಷಿಪ್ರಕ್ರಾಂತಿ – ಹಿಂದೂ ದೇವಸ್ಥಾನಗಳ ಮೇಲೆ ಪುಂಡರ ದಾಳಿ

     

    ಭಾರೀ ನೀರು ಹರಿಯುತ್ತಿರುವುದರಿಂದ ಜಿಲ್ಲೆಯ ಭೀಮಾ ನದಿ ಪಾತ್ರದ ಜನರಲ್ಲಿ ಆತಂಕ ಶುರುವಾಗಿದೆ. ಚಡಚಣ, ಇಂಡಿ, ಆಲಮೇಲ, ಸಿಂದಗಿ ತಾಲೂಕುಗಳಲ್ಲಿ ಪ್ರವಾಹದ ಭೀತಿ ಶುರುವಾಗಿದೆ.

  • ಖರ್ಗೆಗೆ ಒಂದು ಕಡೆ ಲ್ಯಾಂಡ್‌ ಅಲಾಟ್‌ ಆಗಿದೆಯಂತೆ: ರಮೇಶ್‌ ಜಿಗಜಿಣಗಿ ಹೊಸ ಬಾಂಬ್‌

    ಖರ್ಗೆಗೆ ಒಂದು ಕಡೆ ಲ್ಯಾಂಡ್‌ ಅಲಾಟ್‌ ಆಗಿದೆಯಂತೆ: ರಮೇಶ್‌ ಜಿಗಜಿಣಗಿ ಹೊಸ ಬಾಂಬ್‌

    ವಿಜಯಪುರ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಎಲ್ಲೋ ಒಂದು ಕಡೆ ಲ್ಯಾಂಡ್‌ ಅಲಾಟ್‌ ಆಗಿದೆಯಂತೆ. ನನ್ನ ಕಡೆ ರೆಕಾರ್ಡ್‌ ಇಲ್ಲ ಎಂದು ಸಂಸದ ರಮೇಶ್‌ ಜಿಗಜಿಣಗಿ (Ramesh Jigajinagi) ಹೊಸ ಬಾಂಬ್‌ ಸಿಡಿಸಿದ್ದಾರೆ.

    ಮುಡಾ ಹಗರಣ (MUDA Scam) ವಿಚಾರದ ಬಗ್ಗೆ ಮಾತನಾಡುವ ವೇಳೆ, ಇನ್ನೊಂದು ವಿಷಯ ನನಗೆ ರಾತ್ರಿ ಗೊತ್ತಾಗಿದೆ. ಸನ್ಮಾನ್ಯ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೇಲೆ ಗ್ರೇಟ್ ಅಪವಾದ ಬಂದಿದೆ. ನನ್ನ ಕಡೆ ರೆಕಾರ್ಡ್‌ ಇಲ್ಲ. ಅವರಿಗೆ ಎಲ್ಲೋ ಒಂದು ಲ್ಯಾಂಡ್ ಅಲಾಟ್ ಆಗಿದೆಯಂತೆ. ಶಿವಮೊಗ್ಗ ಜಿಲ್ಲೆಯಲ್ಲಿ 60 ಎಕರೆ ಅಲಾಟ್ ಆಗಿದೆಯಂತೆ ಎಂದಿದ್ದಾರೆ. ಇದನ್ನೂ ಓದಿ: ಮುಡಾ ಭ್ರಷ್ಟಾಚಾರ ಪ್ರಕರಣ – ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು

    ಇದು ಒಂದೇ ಹಗರಣನಾ? ಇನ್ನು ಎಷ್ಟು ಇದಾವೆ ಬಿಚ್ಚಲಾ? ಇನ್ನೂ ಇವೆ, ಸಂದರ್ಭ ಬರ್ಲಿ ಹೇಳ್ತೀನಿ. ಸಿದ್ದರಾಮಣ್ಣಂದು ನನಗೆ ಗೊತ್ತಿಲ್ಲ. ಸಚಿವ ಮಹದೇವಪ್ಪ ಹೇಳಿಕೆ ನೋಡಿದ್ದೇನೆ. ಅದು ಬೇರೆ ಲ್ಯಾಂಡ್ ಇದೆ ಅಂತಾ ಹೇಳಿದ್ದಾರೆ ಎಂದು ಟಾಂಗ್‌ ಕೊಟ್ಟಿದ್ದಾರೆ.

    ಕೇಂದ್ರ ಸಚಿವ ಸ್ಥಾನ ವಿಚಾರವಾಗಿ ಬಿಜೆಪಿ ಹೈಕಮಾಂಡ್‌ ವಿರುದ್ಧ ಅಸಮಾಧಾನ ಹೊರಹಾಕಿದ ಅವರು, ನನಗೆ ಮಂತ್ರಿ ಕೊಡುವ ಅವಶ್ಯಕತೆ ಇಲ್ಲ. ನನಗೆ ಅವಶ್ಯಕತೆ ಇರೋದು ಜನರದ್ದು. ಆದರೆ ಜನರು ನಾನು ಮರಳಿ ಬಂದ ಮೇಲೆ ಥೂ ಥೂ ಅಂತಾ ಉಗುಳಿದರು. ನಾವು ಮೊದಲೆ ಹೇಳಿದ್ದೆವು. ನಿಮಗೆ ದಲಿತರಿಗೆ ಈ ಬಿಜೆಪಿ ಪಕ್ಷ ವಿರೋಧಿ ಇದೆ ಅಂತಾ. ನನಗೋಸ್ಕರ ಅಲ್ಲ ಜನರ ಒತ್ತಡಕ್ಕಾಗಿ ಬೇಕಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೂರಜ್‌ ರೇವಣ್ಣ ಜಾಮೀನು ಅರ್ಜಿ ವಜಾ

    ಇದು ಎಂತಹ ಅನ್ಯಾಯ ಒಬ್ಬ ದಲಿತ ಮನುಷ್ಯನಿಗೆ. ದಕ್ಷಿಣ ಭಾರತದಲ್ಲಿ ನಾನೊಬ್ಬನೆ ದಲಿತ ಗೆದ್ದು ಬಂದಿದ್ದೇನೆ. ಏಳು ಚುನಾವಣೆಯಲ್ಲಿ ಆಯ್ಕೆ ಆಗಿ ಬಂದಿದ್ದೇನೆ. ಎಲ್ಲ ಮೇಲ್ವರ್ಗದ ಜಾತಿಯವರು ಸಚಿವರಾಗಿದ್ದಾರೆ. ದಲಿತರೇನು ಬಿಜೆಪಿಗೆ ಸಪೋರ್ಟ್‌ ಮಾಡಿಲ್ವಾ? ನನಗೆ ತುಂಬಾ ಅದರ ಬಗ್ಗೆ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  • ಬಬಲೇಶ್ವರ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟ

    ಬಬಲೇಶ್ವರ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟ

    ವಿಜಯಪುರ: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ (Nandi Cooperative Sugar Factory) ಮತ್ತೆ ಬಾಯ್ಲರ್ (Boiler) ಸ್ಫೋಟಗೊಂಡಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ಲ್ಲಿರೋ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಘಟನೆ ನಡೆದಿದೆ.

    ಅದೃಷ್ಟವಶಾತ್ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಸುಕಿನ ಜಾವ ಟೀ‌ ಕುಡಿಯಲು 15 ಕಾರ್ಮಿಕರು ತೆರಳಿದ್ದ ವೇಳೆ ಬಾಯ್ಲರ್ ಬ್ಲಾಸ್ಟ್ ಆಗಿದೆ. ಕೂದಲೆಳೆ ಅಂತರದಲ್ಲಿ ಕಾರ್ಮಿಕರು ಪಾರಾಗಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಇದನ್ನೂ ಓದಿ: 24 ಗಂಟೆಯಲ್ಲಿ ಟಿಬಿ ಡ್ಯಾಂಗೆ ಬಂತು 4 ಟಿಎಂಸಿ ನೀರು

    ಮುಂದಿನ ಅವಧಿಗೆ  ಕಬ್ಬು ನುರಿಸಲು ಕಾರ್ಖಾನೆ ಸಿದ್ದತೆ ಮಾಡುವ ವೇಳೆ ಬಾಯ್ಲರ್ ಬ್ಲಾಸ್ಟ್ ಆಗಿದೆ. ಈ‌ ಹಿಂದೆ 2023 ರ ಮಾರ್ಚ್ 4 ರಂದು ಕೂಡ ಬಾಯ್ಲರ್ ಬ್ಲಾಸ್ಟ್ ಆಗಿತ್ತು.

    ಈ ವೇಳೆ ಓರ್ವ ಕಾರ್ಮಿಕ ಮೃತಪಟ್ಟು ಇತರೇ ನಾಲ್ವರು ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದ್ದವು. ಕಳಪೆ ಬಾಯ್ಲರ್ ನಿರ್ಮಾಣವೇ ಅವಘಢಕ್ಕೆ ಕಾರಣವೆಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ಇದನ್ನೂ ಓದಿ: ಆಟ ಆಡೋ ಮಕ್ಕಳೆಲ್ಲ ಮದ್ಯ ವ್ಯಸನಿಗಳಾಗಿದ್ದಾರೆ, ಬಾರ್ ಬಂದ್ ಮಾಡ್ಸಿ – ಸಚಿವರ ಬಳಿ ಮಹಿಳೆಯ ಅಳಲು