Tag: ವಿಜಯಪುರ

  • ವಿಜಯಪುರದಲ್ಲಿ ರೈತರಿಗೆ ನೀಡಿರೋ ನೋಟಿಸ್ ವಾಪಸ್ ಪಡೆಯುತ್ತೇವೆ: ಸಿಎಂ ಘೋಷಣೆ

    ವಿಜಯಪುರದಲ್ಲಿ ರೈತರಿಗೆ ನೀಡಿರೋ ನೋಟಿಸ್ ವಾಪಸ್ ಪಡೆಯುತ್ತೇವೆ: ಸಿಎಂ ಘೋಷಣೆ

    – ಯಾವುದೇ ರೈತರನ್ನ ಒಕ್ಕಲೆಬ್ಬಿಸೋದಿಲ್ಲ ಎಂದ ಸಿದ್ದರಾಮಯ್ಯ

    ಬೆಂಗಳೂರು: ವಿಜಯಪುರದಲ್ಲಿ (Vijayapura) ರೈತರ ಜಮೀನಿಗೆ ವಕ್ಫ್ ಬೋರ್ಡ್ (Waqf Board) ಕೊಟ್ಟಿರುವ ನೋಟಿಸನ್ನು ವಾಪಸ್ ಪಡೆಯೋದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದ್ದಾರೆ.

    ವಿಜಯಪುರದಲ್ಲಿ ರೈತರ ಜಮೀನಿಗೆ ವಕ್ಫ್ ಬೋರ್ಡ್ ಕೊಟ್ಟಿರುವ ನೋಟಿಸ್ ವಿಚಾರವಾಗಿ ಕೊನೆಗೂ ಸಿಎಂ ಸಿದ್ದರಾಮಯ್ಯ ಮೌನ ಮುರಿದಿದ್ದು, ಮೊದಲ ಬಾರಿಗೆ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾವುದೇ ರೈತರನ್ನ ಸರ್ಕಾರ ಒಕ್ಕಲು ಎಬ್ಬಿಸಲ್ಲ. ಸೋಮವಾರ ಮೂರು ಜನ ಸಚಿವರು ಸುದ್ದಿಗೋಷ್ಠಿ ಮಾಡಿ ಮಾತನಾಡಿದ್ದಾರೆ. ವಿಜಯಪುರದಲ್ಲಿ ಯಾವುದೇ ರೈತರನ್ನು ಒಕ್ಕಲೆಬ್ಬಿಸೋದಿಲ್ಲ. ರೈತರಿಗೆ ನೋಟಿಸ್ ಕೊಟ್ಟಿದ್ದರೆ ಅದನ್ನು ವಾಪಸ್ ಪಡೆಯುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ: ಸಿಎಂ

    ಇನ್ನು ಯಾದಗಿರಿ ಮತ್ತು ಧಾರವಾಡದಲ್ಲಿ ರೈತರಿಗೆ ನೋಟಿಸ್ ಕೊಟ್ಟಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ನೋಡುತ್ತೇನೆ. ಕಂದಾಯ ಸಚಿವರಿಗೆ ಅದನ್ನು ಪರಿಶೀಲಿಸಲು ತಿಳಿಸುತ್ತೇನೆ ಎಂದರು. ಇದನ್ನೂ ಓದಿ: ಜಾತಿಗಣತಿಯನ್ನ ಈ ಸರ್ಕಾರ ಯಾಕೆ ಬಿಡುಗಡೆ ಮಾಡ್ತಿಲ್ಲ: ಕುಮಾರಸ್ವಾಮಿ ಪ್ರಶ್ನೆ

  • Waqf Row| ಬಿಜೆಪಿ ಅವಧಿಯಲ್ಲಿ ರೈತರಿಗೆ ನೋಟಿಸ್‌ – ಕಾಂಗ್ರೆಸ್‌ ದಾಖಲೆ ಬಿಡುಗಡೆ

    Waqf Row| ಬಿಜೆಪಿ ಅವಧಿಯಲ್ಲಿ ರೈತರಿಗೆ ನೋಟಿಸ್‌ – ಕಾಂಗ್ರೆಸ್‌ ದಾಖಲೆ ಬಿಡುಗಡೆ

    ವಿಜಯಪುರ: ವಕ್ಫ್‌ ವಿಚಾರದಲ್ಲಿ (Waqf Row) ಕಾಂಗ್ರೆಸ್‌ ಈಗ ಬಿಜೆಪಿ ವಿರುದ್ಧ ಮುಗಿಬಿದ್ದಿದೆ. ಸಿಎಂ ಬೊಮ್ಮಾಯಿ (CM Basavaraj Bommai) ಅವಧಿಯಲ್ಲಿ ರೈತರಿಗೆ ನೀಡಿದ್ದ ನೋಟಿಸ್‌ ಬಿಡುಗಡೆ ಮಾಡಿ ತಿರುಗೇಟು ನೀಡಿದ್ದಾರೆ.

    ವಿಜಯಪುರ (Vijayapura) ನಗರದ ಮಹಲ್ ಬಾಗಾಯತ್ ಹಳ್ಳಿಯ 10 ರೈತರಿಗೆ 2022 ರ ಸೆಪ್ಟೆಂಬರ್‌ ಮತ್ತು ನವೆಂಬರ್‌ ತಿಂಗಳಿನಲ್ಲಿ ನೀಡಲಾಗಿದ್ದ ವಕ್ಫ್‌ ನೋಟಿಸ್‌ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಸಿಂದಗಿ ವಿರಕ್ತ ಮಠದ 1.28 ಎಕರೆ ಜಾಗ ಈಗ ವಕ್ಫ್‌ ಆಸ್ತಿ!

    ಆನಂದ ಹಡಪದ್, ಅಶೋಕ ಬಣ್ಣದ, ಬಡೈಲ್ ಲಾಹೋರಿ, ಗೋವಿಂದ ಲಿಂಗಸಾ, ಗಿರಮಲ್ಲ ಚನ್ನಾಳ, ಸಂಜಯಕುಮಾರ್ ಜೈನ್, ಮಹಾವೀರ ಶಂಕರಲಾಲ್, ರವಿ ಮಾದರ್, ಬಸಪ್ಪ ಬಣಾರಿ, ಮಾಲಿಂಗಯ್ಯ ಹಿರೇಮಠ ಎಂಬುವರಿಗೆ ಬಸವರಾಜ್ ಬೊಮ್ಮಾಯಿ ಸಿಎಂ‌ ಇದ್ದಾಗ ನೋಟಿಸ್‌ ನೀಡಲಾಗಿತ್ತು. ಇದನ್ನೂ ಓದಿ: ಸಿಂದಗಿ ವಿರಕ್ತ ಮಠದ 1.28 ಎಕರೆ ಜಾಗ ಈಗ ವಕ್ಫ್‌ ಆಸ್ತಿ!

    ಬಿಜೆಪಿ ನಾಯಕರು ರಾಜಕೀಯಕ್ಕಾಗಿ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮಾಜಿ ಶಾಸಕ ರಾಜು ಆಲಗೂರ್ ಕಿಡಿಕಾರಿದ್ದಾರೆ.

     

  • ಸಿಂದಗಿ ವಿರಕ್ತ ಮಠದ 1.28 ಎಕರೆ ಜಾಗ ಈಗ ವಕ್ಫ್‌ ಆಸ್ತಿ!

    ಸಿಂದಗಿ ವಿರಕ್ತ ಮಠದ 1.28 ಎಕರೆ ಜಾಗ ಈಗ ವಕ್ಫ್‌ ಆಸ್ತಿ!

    ವಿಜಯಪುರ: ಸಿಂದಗಿ (Sindagi) ಪಟ್ಟಣದ ವಿರಕ್ತ ಮಠದ (Virakta Mutt) ಆಸ್ತಿ ಇದೀಗ ವಕ್ಫ್ ಆಸ್ತಿಯಾಗಿದೆ. ಸರ್ವೆ ನಂ 1020 ರ ಅಸ್ತಿಯಲ್ಲಿ ಕಬರಸ್ಥಾನ ವಕ್ಫ್ ಬೋರ್ಡ್‌ (Waqf Board) ಎಂದು ನೋಂದಣಿಯಾಗಿದೆ.

    ಸಿದ್ದಲಿಂಗ ಸ್ವಾಮಿಜಿಗಳು ಈ ಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂ 11 ಖಾಲಿ ಇತ್ತು. 2018 – 2019 ರಲ್ಲಿ ವಕ್ಫ್ ಬೋರ್ಡ್‌ ಎಂದು ಸೇರ್ಪಡೆಯಾಗಿದೆ.  ಇದನ್ನೂ ಓದಿ: ವಿಜಯಪುರ ಆಯ್ತು ಈಗ ಯಾದಗಿರಿಯ 1440 ರೈತರಿಗೆ ವಕ್ಫ್‌ ಬಿಗ್ ಶಾಕ್!

    ವಕ್ಫ್ ಬೋರ್ಡ್‌ಗೆ 1.28 ಎಕರೆ ಆಸ್ತಿಯನ್ನು ಸೇರಿಸಿದ್ದಕ್ಕೆ ಮಠದ ಭಕ್ತರ ತೀವ್ರ ವಿರೋಧ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. 13ನೇ ಶತಮಾನದಲ್ಲಿ ಸ್ಥಾಪನೆಯಾಗಿರುವ ಮಠ ಖಬರಸ್ಥಾನ ವಕ್ಫ್ ಬೋರ್ಡ್‌ ಆಗಿದ್ದು ಹೇಗೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇದೆ ರೀತಿ ಸಿಂದಗಿ ತಾಲೂಕಿನಲ್ಲಿ ಅನೇಕ ಹಿಂದೂ ಮಠಗಳು ಆಸ್ತಿ ವಕ್ಫ್ ಬೋರ್ಡ್‌ ಸೇರಿದೆ ಎಂಬ ಶಂಕೆಯನ್ನು ಭಕ್ತರು ವ್ಯಕ್ತಪಡಿಸಿದ್ದಾರೆ. ವಕ್ಫ್‌ ಬೋರ್ಡ್‌ಗೆ ಸೇರ್ಪಡೆಯಾದ ವಿಚಾರ ತಿಳಿದು ಭಕ್ತರು ಈಗ ಮಠದ ಮುಂದೆ ಜಮಾಯಿಸುತ್ತಿದ್ದಾರೆ.

  • 1974 ಮುಂಚಿನ ದಾಖಲೆ ಇದ್ದರೆ ರೈತರು ಟಾಸ್ಕ್‌ ಫೋರ್ಸ್‌ಗೆ ತಂದುಕೊಡಿ – ಎಂ.ಬಿ ಪಾಟೀಲ್‌

    1974 ಮುಂಚಿನ ದಾಖಲೆ ಇದ್ದರೆ ರೈತರು ಟಾಸ್ಕ್‌ ಫೋರ್ಸ್‌ಗೆ ತಂದುಕೊಡಿ – ಎಂ.ಬಿ ಪಾಟೀಲ್‌

    – 1997 ರಲ್ಲಿ ಹಳೇ ನೊಟೀಫಿಕೇಶನ್ ಕೈ ಬಿಡಲಾಗಿದೆ
    – ದಾಖಲೆ ಇದ್ದರೆ ಜಮೀನು ಸಿಕ್ಕೇ ಸಿಗುತ್ತೆ

    ಬೆಂಗಳೂರು: ವಕ್ಫ್‌ ಆಸ್ತಿ ಪರಿಶೀಲಿಸಲು ಡಿಸಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ. ಎಸಿಗಳು, ತಹಶಿಲ್ದಾರರು, ವಕ್ಫ್ ಬೋರ್ಡ್ (Waqf Board) ಅಧಿಕಾರಿಗಳು ಟಾಸ್ಕ್ ಫೋರ್ಸ್‌ನಲ್ಲಿ ಇರುತ್ತಾರೆ. 1974 ಮುಂಚೆ ಯಾವುದೇ ದಾಖಲಾತಿ ಇದ್ದರೇ ರೈತರು ಟಾಸ್ಕ್ ಫೋರ್ಸ್‌ಗೆ ತಂದುಕೊಡಬಹುದು. ದಾಖಲಾತಿ ಇದ್ದರೆ ಅವರಿಗೆ ಜಮೀನು ಸಿಕ್ಕೇ ಸಿಗುತ್ತದೆ. ಮಂಜೂರು ಆಗಿರೋ ಜಮೀನು ಯಾರಿಂದಲೂ ವಾಪಸ್ ಪಡೆಯಲ್ಲ ಎಂದು ಸಚಿವ ಎಂ.ಬಿ ಪಾಟೀಲ್‌ (MB Patil) ಹೇಳಿದ್ದಾರೆ.

    ರೈತರ ಜಮೀನಿಗೆ (Farmers Land) ವಕ್ಫ್ ಬೋರ್ಡ್‌ನಿಂದ ನೊಟೀಸ್ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ವಿಧಾನಸೌಧದಲ್ಲಿ ಸಚಿವತ್ರಯರಾದ ಎಂ.ಬಿ ಪಾಟೀಲ್, ಕೃಷ್ಣಭೈರೇಗೌಡ, ಜಮೀರ್ ಅಹಮದ್‌ ಸುದ್ದಿಗೋಷ್ಠಿ ನಡೆಸಿದರು. ಇದನ್ನೂ ಓದಿ: Raichur | ವಕ್ಫ್ ಆಸ್ತಿ ಒತ್ತುವರಿ ಮಾಡಿ ಲೇಔಟ್ ನಿರ್ಮಾಣ ಆರೋಪ – ಸೈಟ್ ಮಾ ರಾಟ ತಡೆಯುವಂತೆ ಆಗ್ರಹ

    ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಂ.ಬಿ ಪಾಟೀಲ್‌, ಸುಮಾರು 700 ಎಕರೆ ಮಾತ್ರ ವಕ್ಫ್ ಆಸ್ತಿ ಇದೆ, 124 ನೊಟೀಸ್ ಕೊಟ್ಟಿದ್ದೇವೆ. ಆದರೆ ಇಂಡಿಯ 41 ಪ್ರಾಪರ್ಟಿಗೆ ತಹಶಿಲ್ದಾರರು ನೊಟೀಸ್ ನೀಡಿಲ್ಲ. ಈ ಬಗ್ಗೆ ಎಸಿ ಕ್ರಮ ತೆಗೆದುಕೊಳ್ಳುತ್ತಾರೆ. ನೊಟೀಸ್ ನೀಡದ ತಹಶೀಲ್ದಾರ್‌ ವಿರುದ್ಧ ಕ್ರಮಕ್ಕೆ ಇಂದಿನ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿದ್ದೇವೆ. ತಹಶೀಲ್ದಾರ್‌ ಮೇಲೆ ಕ್ರಮಕ್ಕೆ ಕಾನೂನು ಮಂತ್ರಿಗಳು ಸಲಹೆ ಕೊಟ್ಡಿದ್ದಾರೆ. ತಹಶೀಲ್ದಾರ್‌ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ಹೊನವಾಡ ವಿವಾದ ನೊಟಿಫಿಕೇಶನ್ ತಪ್ಪು ಆಗಿದೆ, ಹೊನವಾಡದಲ್ಲಿ ಯಾರಿಗೂ ನೊಟೀಸ್ ಹೋಗಿಲ್ಲ. ಯಾರ ಹೆಸರಿನಲ್ಲಿ ಇದೆಯೋ ಅವರ ಹೆಸರಿನಲ್ಲೇ ಇದೆ. ಸುಮಾರು 10 ಎಕರೆ ಮಾತ್ರ ವಕ್ಫ್ ಆಸ್ತಿ ಇರೋದು. 1974 ದಾಖಲಾತಿ ಇಟ್ಟುಕೊಂಡು ವಿವಾದ ಮಾಡ್ತಿದ್ದಾರೆ. 1997 ರಲ್ಲಿ ಹಳೇ ನೊಟೀಫಿಕೇಶನ್ ಕೈ ಬಿಡಲಾಗಿದೆ. ಇದರ ಬಗ್ಗೆ ಯಾರು ಮಾತಾಡುತ್ತಿಲ್ಲ ಎಂದಿದ್ದಾರೆ.

    1.12 ಲಕ್ಷ ಎಕರೆ ಭೂಮಿಯನ್ನ ವಕ್ಫ್‌ಗೆ ದಾನ ಮಾಡಿದ್ದಾರೆ:
    ಸಚಿವ ಜಮೀರ್‌ ಮಾತನಾಡಿ, ಅನೇಕ ದಿನಗಳಿಂದ ವಕ್ಫ್ ಅದಾಲತ್ ಮಾಡಿದ್ದೆ. ಸರ್ಕಾರದ ಒಂದು ಇಂಚು ಜಾಗವನ್ನ ನಾವು ಪಡೆದಿಲ್ಲ. ದಾನಿಗಳು 1.12 ಲಕ್ಷ ಎಕರೆ ವಕ್ಫ್ಗೆ ದಾನ ಮಾಡಿದ್ದಾರೆ. ಇದರಲ್ಲಿ ಉಳಿದಿರೋದು ಕೇವಲ 23 ಸಾವಿರ ಎಕರೆ. ಹೀಗಾಗಿ ಈ ಜಾಗ ಉಳಿದುಕೊಳ್ಳಲು ವಕ್ಫ್ ಅದಾಲತ್ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದಾನಿಗಳು 1.12 ಲಕ್ಷ ಎಕರೆ ಭೂಮಿಯನ್ನ ವಕ್ಫ್‌ಗೆ ದಾನ ಮಾಡಿದ್ದಾರೆ: ಜಮೀರ್

    ನಾನು ತೇಜಸ್ವಿಸೂರ್ಯ ಅವರನ್ನು ಬುದ್ಧಿವಂತ ಅಂದುಕೊಂಡಿದ್ದೆ. ನಾನು ರೈತರ ಮಗ. ಅವರಿಗೆ ಎಷ್ಟು ಕಾಳಜಿ ಇದೆಯೋ ನಮಗೂ ಹೆಚ್ಚು ಕಾಳಜಿ ಇದೆ. ನಾವು ರೈತರ ಮಕ್ಕಳು. ನಾವು ರೈತರ ಒಂದು ಇಂಚು ಜಾಗ ಪಡೆಯಲ್ಲ. ವಿಜಯಪುರದಲ್ಲಿ ನಡೆದ ಮೀಟಿಂಗ್‌ಗೆ ಯತ್ನಾಳ್ ಅವರನ್ನು ಕರೆದಿದ್ದೆ. ಯತ್ನಾಳ್ ಅವರು ಬಂದಿಲ್ಲ. ಅನ್ಯಾಯ ಆಗಿದ್ದರೆ ಅವರು ಸಭೆಗೆ ಬರಬೇಕಿತ್ತು. ಆದರೆ ಬಂದಿರಲಿಲ್ಲ. ವಿಜಯಪುರದಲ್ಲಿ ಅದಾಲತ್ ಮಾಡಿದ್ದು ವಕ್ಫ್ನ ಆಸ್ತಿ ದಾಖಲಾತಿ ಮಾಡಬೇಕು ಅಂತ. 1,200 ಎಕರೆ ರೈತರ ಜಮೀನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡುತ್ತಾರೆ. ತೇಜಸ್ವಿಸೂರ್ಯ ಮಾಹಿತಿ ತೆಗೆದುಕೊಂಡು ಆರೋಪ ಮಾಡಬೇಕು ಎಂದು ಕಿಡಿಕಾರಿದ್ದಾರೆ.

  • ದಾನಿಗಳು 1.12 ಲಕ್ಷ ಎಕರೆ ಭೂಮಿಯನ್ನ ವಕ್ಫ್‌ಗೆ ದಾನ ಮಾಡಿದ್ದಾರೆ: ಜಮೀರ್

    ದಾನಿಗಳು 1.12 ಲಕ್ಷ ಎಕರೆ ಭೂಮಿಯನ್ನ ವಕ್ಫ್‌ಗೆ ದಾನ ಮಾಡಿದ್ದಾರೆ: ಜಮೀರ್

    – ತೇಜಸ್ವಿ ಸೂರ್ಯ ಬುದ್ಧಿವಂತ ಅಂದುಕೊಂಡಿದ್ದೆ

    ಬೆಂಗಳೂರು: ಅನೇಕ ದಿನಗಳಿಂದ ವಕ್ಫ್ ಅದಾಲತ್ (Waqf Adalat) ಮಾಡಿದ್ದೆ. ಸರ್ಕಾರದ ಒಂದು ಇಂಚು ಜಾಗವನ್ನ ನಾವು ಪಡೆದಿಲ್ಲ. ದಾನಿಗಳು 1.12 ಲಕ್ಷ ಎಕರೆ ವಕ್ಫ್‌ಗೆ ದಾನ ಮಾಡಿದ್ದಾರೆ. ಇದರಲ್ಲಿ ಉಳಿದಿರೋದು ಕೇವಲ 23 ಸಾವಿರ ಎಕರೆ. ಹೀಗಾಗಿ ಈ ಜಾಗ ಉಳಿದುಕೊಳ್ಳಲು ವಕ್ಫ್ ಅದಾಲತ್ ಮಾಡಿದ್ದೇನೆ ಎಂದು ಸಚಿವ ಜಮೀರ್ ಅಹ್ಮದ್ (Zameer Ahmed Khan) ಹೇಳಿದ್ದಾರೆ.

    ವಿಜಯಪುರ (Vijayapura) ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ವಿಚಾರ ವಿವಾದ ದೊಡ್ಡದಾಗುತ್ತಲೇ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ತೇಜಸ್ವಿಸೂರ್ಯ ಅವರನ್ನು ಬುದ್ಧಿವಂತ ಅಂದುಕೊಂಡಿದ್ದೆ. ನಾನು ರೈತರ ಮಗ. ಅವರಿಗೆ ಎಷ್ಟು ಕಾಳಜಿ ಇದೆಯೋ ನಮಗೂ ಹೆಚ್ಚು ಕಾಳಜಿ ಇದೆ. ನಾವು ರೈತರ ಮಕ್ಕಳು. ನಾವು ರೈತರ ಒಂದು ಇಂಚು ಜಾಗ ಪಡೆಯಲ್ಲ ಎಂದರು. ಇದನ್ನೂ ಓದಿ: ಭರ್ತಿಯಾದ ಕೆರೆಕಟ್ಟೆಗಳಿಂದ ಅವಾಂತರ – ಕೈಗೆಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಲ್ಲಿ ಚಿತ್ರದುರ್ಗ ರೈತರು

    ವಿಜಯಪುರದಲ್ಲಿ ನಡೆದ ಮೀಟಿಂಗ್‌ಗೆ ಯತ್ನಾಳ್ ಅವರನ್ನು ಕರೆದಿದ್ದೆ. ಯತ್ನಾಳ್ ಅವರು ಬಂದಿಲ್ಲ. ಅನ್ಯಾಯ ಆಗಿದ್ದರೆ ಅವರು ಸಭೆಗೆ ಬರಬೇಕಿತ್ತು. ಆದರೆ ಬಂದಿರಲಿಲ್ಲ. ವಿಜಯಪುರದಲ್ಲಿ ಅದಾಲತ್ ಮಾಡಿದ್ದು ವಕ್ಫ್ನ ಆಸ್ತಿ ದಾಖಲಾತಿ ಮಾಡಬೇಕು ಅಂತ. 1,200 ಎಕರೆ ರೈತರ ಜಮೀನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡುತ್ತಾರೆ. ತೇಜಸ್ವಿಸೂರ್ಯ ಮಾಹಿತಿ ತೆಗೆದುಕೊಂಡು ಆರೋಪ ಮಾಡಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ: ದರ್ಶನ್‌ಗೆ ಇವತ್ತೂ ಸಿಗಲಿಲ್ಲ ಜಾಮೀನು – ಮಂಗಳವಾರಕ್ಕೆ ವಿಚಾರಣೆ ಮುಂದೂಡಿಕೆ

    ಯತ್ನಾಳ್ ಮತ್ತು ತೇಜಸ್ವಿಸೂರ್ಯ ವಕ್ಫ್ ಆಸ್ತಿ ಬಗ್ಗೆ ಮಾತಾಡೋದು ಬಿಡಲಿ. ಮುಜರಾಯಿಯಲ್ಲಿ ಒಟ್ಟು 36 ಸಾವಿರ ಎಕರೆ ಇದೆ. ಇದರಲ್ಲಿ ಸುಮಾರು 740 ಎಕರೆ ಒತ್ತುವರಿ ಆಗಿದೆ. ಇದರ ಬಗ್ಗೆ ಯತ್ನಾಳ್, ತೇಜಸ್ವಿಸೂರ್ಯ ಮಾತನಾಡಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ, ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ಮನೆ ಮೇಲೂ ಇಡಿ ದಾಳಿ!

  • ಇದು ವಿಜಯೇಂದ್ರನ ಟೀಂ – ಬಿಜೆಪಿ ವಕ್ಫ್ ತಂಡಕ್ಕೆ ಯತ್ನಾಳ್ ಬಹಿಷ್ಕಾರ

    ಇದು ವಿಜಯೇಂದ್ರನ ಟೀಂ – ಬಿಜೆಪಿ ವಕ್ಫ್ ತಂಡಕ್ಕೆ ಯತ್ನಾಳ್ ಬಹಿಷ್ಕಾರ

    ವಿಜಯಪುರ: ಇದು ವಿಜಯೇಂದ್ರನ ತಂಡ. ಇದಕ್ಕೆ ನಮ್ಮ ಬಹಿಷ್ಕಾರ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ಕಿಡಿಕಾರಿದ್ದಾರೆ.

    ಜಿಲ್ಲೆಯಲ್ಲಿ ವಕ್ಫ್ ದಂಗಲ್ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಅಹವಾಲು ಸ್ವೀಕರಿಸಲು ಬಿಜೆಪಿಯಿಂದ ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಹಾಲಿ ಸಂಸದ, ಶಾಸಕ ನಾನು ಇದ್ದೇನೆ. ನಮ್ಮನ್ನ ಹೊರಗಿಟ್ಟು ತಂಡ ರಚಿಸಿದ್ದಾರೆ. ಇದು ವಿಜಯೇಂದ್ರನ ತಂಡಕ್ಕೆ ನಾನು ಬಹಿಷ್ಕಾರ ಹಾಕಿದ್ದೇನೆ. ವಕ್ಫ್ ವಿರುದ್ಧ ಮೊದಲು ಹೋರಾಟ ಪ್ರಾರಂಭಿಸಿದ್ದೇ ನಾನು. ವಿಜಯೇಂದ್ರ ನನ್ನನ್ನು ತುಳಿಯಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

    ರೈತರ ಅಹವಾಲು ಆಲಿಸಲು ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ ಹಾಗೂ ಶಾಸಕರ ಸೇರಿ ರಚನೆ ಮಾಡಿದೆ. ತಂಡ ನಾಳೆಯೇ (ಅ.29) ಜಿಲ್ಲೆಯಲ್ಲಿ ಪ್ರವಾಸ ಮಾಡಿ ಅಹವಾಲು ಆಲಿಸಲಿದ್ದಾರೆ. ಸಂಸದ ಗೋವಿಂದ ಕಾರಜೋಳ, ಶಾಸಕ ಹರೀಶ್ ಪೂಂಜಾ, ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಎಂಎಲ್‌ಸಿ ಅರುಣ್ ಶಹಾಪುರ ಹಾಗೂ ಮುಖಂಡ ಕಲ್ಮರುಡಪ್ಪ ಸೇರಿದಂತೆ ಹಲವು ಶಾಸಕರನ್ನು ತಂಡ ಒಳಗೊಂಡಿದೆ. ಆದರೆ ವಿಜಯಪುರ ನಗರ ಶಾಸಕನಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಂಸದ ರಮೇಶ್ ಜಿಗಜಿಣಗಿಗೆ ತಂದಡಲ್ಲಿ ಸ್ಥಾನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ನಾಲ್ಕೇ ತಿಂಗಳಿಗೆ ಪಾಕ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಗ್ಯಾರಿ ಗುಡ್‌ಬೈ

    ಇದು ವಿಜಯೇಂದ್ರ ಟೀಮ್. ಎಲ್ಲಾ ಮುಗಿದ ಮೇಲೆ ಟೀಂ ಮಾಡಿದ್ದಾರೆ. ಇದು ಕಾಟಾಚಾರಕ್ಕೆ ಮಾಡಿದ ಟೀಂ ಹಾಗಾಗಿ ನಾನು ಹಾಗೂ ಲೋಕಸಭಾ ಸದಸ್ಯರು ಬಿಜೆಪಿ ತಂಡಕ್ಕೆ ಬಹಿಷ್ಕಾರ ಹಾಕಿದ್ದೇವೆ. ಹಿಂದೆ ಯಡಿಯೂರಪ್ಪ ಸಿಎಂ ಇದ್ದಾಗ ಜಮೀರ್ ಅಹ್ಮದ್ ಖಾನ್‌ಗೆ 1,000 ಕೋಟಿ ರೂ. ಅನುದಾನ ನೀಡಿದ್ದರು. ಇದನ್ನು ನಾನು ಪ್ರಸ್ತಾಪಿಸಿ ವಿರೋಧ ಮಾಡಿದ್ದಕ್ಕೆ ಅದನ್ನು ವಾಪಸ್ ಪಡೆದರು. ಪಬ್ಲಿಕ್ ಟಿವಿಯಲ್ಲಿ ರಂಗನಾಥ್ ಅವರು ಇದರ ಬಗ್ಗೆ ಪ್ರಸ್ತಾಪಿಸಿದ ಮೇಲೆ ಹಿಂಪಡೆದರು. ಪೂಜ್ಯ ತಂದೆಯವರು ಕಿರಿಯ ಮಗ ಜಮೀರ್‌ಗೆ ಸಾವಿರ ಕೋಟಿ ರೂ. ಅನುದಾನ ನೀಡಿದ್ದರು. ರೂಪಾಯಿ ಅನುದಾನ ನೀಡಲು ಏನಾದರೂ ತೆಗೆದುಕೊಂಡಿರಬೇಕಲ್ಲ ಎಂದು ಕುಟುಕಿದರು.

    ಇದೇ ವೇಳೆ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ ಅವರು, ವಿಜಯೇಂದ್ರ ಇಂತಹ ವ್ಯವಹಾರಗಳನ್ನು ಬಿಡಬೇಕು. ಇಲ್ಲಿ ನಾನು ಶಾಸಕ ಹಾಗೂ ನಮ್ಮ ಲೋಕಸಭಾ ಸದಸ್ಯರಿದ್ದಾರೆ. ನಮ್ಮಿಬ್ಬರನ್ನ ಬಿಟ್ಟು ಸಮಿತಿ ಮಾಡಲಾಗಿದೆ. ಇದು ನಿಜವಾಗಿ ಹೋರಾಟ ಮಾಡುವವರನ್ನು ತುಳಿದಂತಾಗುತ್ತದೆ. ಪೂಜ್ಯ ತಂದೆಯವರು ಅದನ್ನೇ ಮಾಡಿದರು ಪೂಜ್ಯ ತಂದೆಯವರ ಮಗನೂ ಅದನ್ನೇ ಮಾಡುತ್ತಿದ್ದಾರೆ. ವಕ್ಫ್ ವಿಚಾರವಾಗಿ ಈ ಹಿಂದೆ ವಿಧಾನಸಭೆಯಲ್ಲಿ ನಾನೇ ಮಾತನಾಡಿದೆ. ನಾನು ವಿಧಾನಸಭೆಯಲ್ಲಿ ಮಾತನಾಡಿದ್ದರ ಕುರಿತು ದಾಖಲೆ ಇದೆ. ಸಹಿ ಮಾಡಿದ್ದ ಯಾರೊಬ್ಬರೂ ವಿಧಾನಸಭೆಯಲ್ಲಿ ವಕ್ಫ್ ಬಗ್ಗೆ ಮಾತನಾಡಲು ಮುಂದೆ ಬಂದಿರಲಿಲ್ಲ. ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರು ನನ್ನನ್ನು ಕರೆಯಿಸಿ ವಕ್ಫ್ ಕುರಿತು ಮಾತನಾಡಲು ಹೇಳಿದರು. ಯಾರು ಮಾತನಾಡಲು ಸಿದ್ಧರಿರಲ್ಲ, ಅಧ್ಯಯನ ಮಾಡಿಲ್ಲ. ನೀವೇ ಮಾತನಾಡಿ ಎಂದು ಹೇಳಿದ್ದಕ್ಕೆ ನಾನು ದಾಖಲೆಗೆ ಸಹಿ ಮಾಡಿ ಮಾತನಾಡಿದೆ. ನಾನು ರಾಜ್ಯದಲ್ಲಿ ವಕ್ಫ್ ಕುರಿತು ಹೋರಾಟ ಆರಂಭಿಸಿದ್ದೆ. ವಕ್ಫ್ ಆಸ್ತಿ ಕುರಿತು ರಾಜ್ಯದಲ್ಲಿ ಹಾಗೂ ದೇಶದಲ್ಲಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ವಿಜಯಪುರದಲ್ಲಿ 11,000 ಎಕರೆ ವಕ್ಫ್ ಆಸ್ತಿ ಎಂದು ಹೇಳಿದ್ದ ಸಚಿವರು ಈಗ 16,000 ಎಕರೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

    ಇದೇ ಮುಂಬರುವ ನ.3ರ ಒಳಗೆ ರೈತರ ಪಹಣಿಯಲ್ಲಿ ವಕ್ಫ್ ಎಂದು ನಮದಾಗಿದ್ದನ್ನು ತೆಗೆಯಬೇಕು. ಇಲ್ಲವಾದರೆ ಉಗ್ರ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್‌ಗೆ ಎಚ್ಚರಿಕೆ ನೀಡುತ್ತೇನೆ. ವಕ್ಫ್ ವಿಚಾರದಲ್ಲಿ ಡಿಸಿ ನೇತೃತ್ವದ ಟಾಸ್ಕಪೋರ್ಸ್ ರಚನೆ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವರ ಕ್ರಮಕ್ಕೆ ಸ್ವಾಗತ. ಆದರೆ ನ.3ರ ಒಳಗೆ ರೈತರ ಪಹಣಿಯಲ್ಲಿದ್ದ ವಕ್ಫ್ ಎಂದು ನಮೂದಾಗಿರುವುದನ್ನು ತೆಗೆಯಬೇಕು. ವಿಜಯಪುರದಲ್ಲಿ ಡಿಸಿ ಆಫೀಸ್ ಸೇರಿದಂತೆ ಹಲವಾರು ಸರ್ಕಾರಿ ಕಚೇರಿಗಳು ವಕ್ಫ್ ಎಂದು ಆಗಿವೆ. ಇವೆಲ್ಲ ತೆರವು ಆಗಬೇಕು. ವಕ್ಫ್ ಎಂದು ನಮೂದಾಗಿರುವುದನ್ನು ತೆಗೆಯದಿದ್ದರೆ, ಏನಾದರೂ ಅನಾಹುತವಾದರೆ ಅದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಜಮೀರ್ ಅಹ್ಮದ್ ಖಾನ್ ಹೊಣೆ ಎಂದು ಎಚ್ಚರಿಕೆ ನೀಡಿದರು.ಇದನ್ನೂ ಓದಿ: Tourism| ಕೇಂದ್ರದ ಯೋಜನೆಯಡಿ ಆಲಮಟ್ಟಿ, ಹರಕಲ್ ಗ್ರಾಮಗಳ ಅಭಿವೃದ್ಧಿ

  • ವಕ್ಫ್‌ ಆಸ್ತಿ ವಿವಾದ | 1964-1974ರ ದಾಖಲೆ ಪರಿಶೀಲಿಸಿ ಕ್ರಮವಹಿಸಲು ಟಾಸ್ಕ್ ಫೋರ್ಸ್ ರಚನೆ

    ವಕ್ಫ್‌ ಆಸ್ತಿ ವಿವಾದ | 1964-1974ರ ದಾಖಲೆ ಪರಿಶೀಲಿಸಿ ಕ್ರಮವಹಿಸಲು ಟಾಸ್ಕ್ ಫೋರ್ಸ್ ರಚನೆ

    – ವಿಜಯಪುರದಲ್ಲಿ ರೈತರ ಒಂದಿಷ್ಟೂ ಜಮೀನು ವಕ್ಫ್‌ಗೆ ಸೇರಿಸಿಲ್ಲ; ಎಂ.ಬಿ ಪಾಟೀಲ್‌ ಸ್ಪಷ್ಟನೆ

    ವಿಜಯಪುರ: ಜಿಲ್ಲೆಯ ವಕ್ಫ್ ಆಸ್ತಿಗೆ (Waqf Property) ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್‌ ಸಮಿತಿಯೊಂದನ್ನು ರಚಿಸಿ, 1964 ರಿಂದ 1974ರ ವರೆಗಿನ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ವಹಿಸುವಂತೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್‌ (MB Patil) ಸೂಚಿಸಿದರು.

    ನಗರದ ಸೋಲಾಪುರ ರಸ್ತೆಯಲ್ಲಿರುವ ಸಚಿವರ ಗೃಹ ಕಚೇರಿಯಲ್ಲಿ ಜಿಲ್ಲೆಯ ವಿವಿಧ ತಹಶೀಲ್ದಾರರು, ವಕ್ಫ್ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಿದರು. ಬಳಿಕ ಮಾತನಾಡಿದ ಎಂ.ಬಿ ಪಾಟೀಲ್‌, ವಿಜಯಪುರ (Vijayapura) ಜಿಲ್ಲೆಯಾದ್ಯಂತ ರೈತರು (Farmers) ಸೇರಿದಂತೆ ಖಾಸಗಿ ಜಮೀನುಗಳ ಪೈಕಿ ಒಂದು ಎಕರೆಯೂ ಸಹ ವಕ್ಫ್‌ಗೆ ಸೇರಿಸಿಲ್ಲ. 1974ರ ಗೆಜೆಟ್ ನೋಟಿಫಿಕೇಶನ್ ಪ್ರಕಾರ ವಕ್ಫ್ ಆಸ್ತಿ ಮಾತ್ರ ಇಂದೀಕರಣ ಮಾಡಲಾಗುತ್ತಿದ್ದು, ಈ ಕುರಿತು ಅನವಶ್ಯಕವಾಗಿ ಗೊಂದಲ ಸೃಷ್ಟಿಸಲಾಗುತ್ತಿದೆ. ಎಲ್ಲ ಗೊಂದಲಕ್ಕೆ ಅಂತ್ಯ ಹಾಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಸಮಿತಿ ರಚಿಸಿಕೊಂಡು 1964 ರಿಂದ 1974ರ ವರೆಗಿನ ದಾಖಲೆ ಪರಿಶೀಲಿಸಿ ಅಗತ್ಯ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    1974ರಲ್ಲಿ ಹೊರಡಿಸಲಾದ ಗೆಜೆಟ್ ನೋಟಿಫಿಕೇಶನ್‍ನಲ್ಲಿ ನಗರದಲ್ಲಿರುವ ಖಾಜಾ ಅಮೀನ ದರ್ಗಾ ಸರ್ವೇ ನಂಬರ್ ಹೊನವಾಡ ಗ್ರಾಮದ ಆಸ್ತಿ ಎಂದು ನಮೂದಾಗಿರುವುದರಿಂದ ವಕ್ಫ್ ಮಂಡಳಿಯಿಂದ ಮತ್ತೇ 1977ರಲ್ಲಿ ಮತ್ತೆ ಬದಲಾವಣೆ ಮಾಡಿ ಸರಿಪಡಿಸಲಾಗಿದೆ. ಹೊನವಾಡ ಗ್ರಾಮದ ಯಾರಿಗೂ ನೋಟಿಸ್ ಈವರೆಗೆ ಜಾರಿ ಮಾಡಿರುವುದಿಲ್ಲ, ಸಂಬಂಧಿಸಿದ ರೈತರ-ಮಾಲೀಕರ ಹೆಸರಿನಲ್ಲಿಯೇ ಜಮೀನುಗಳು ಇವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಈ ವೇಳೆ ಗೆಜೆಟ್ ನೋಟಿಫಿಕೇಶನ್‍ಗಿಂತ ಮುಂಚಿತವಾಗಿ 1964 ರಿಂದ 1974ರ ವರೆಗಿನ ದಾಖಲೆಗಳನ್ನು ಪರಿಶೀಲಿಸಿ ಸರಿಪಡಿಸಿ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

    ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಈವರೆಗೆ ಮಾತ್ರ 124 ನೋಟಿಸ್ ನೀಡಲಾಗಿದೆ. ಇಂಡಿ ತಾಲೂಕಿಗೆ ಸಂಬಂಧಿಸಿದಂತೆ ತಹಶೀಲ್ದಾರರು ನೋಟಿಸ್ ನೀಡದೆಯೇ 41 ಆಸ್ತಿಗಳ ಇಂದೀಕರಣ ಕುರಿತು ಉಪವಿಭಾಗಾಧಿಕಾರಿಗಳು ಸ್ವಯಂಪ್ರೇರಿತ ಪ್ರಕರಣವೆಂದು ಪರಿಗಣಿಸಿ ಅಗತ್ಯ ಕ್ರಮ ವಹಿಸಬೇಕು. ಸಿಂದಗಿಯ ವಿರಕ್ತಮಠದ ಆಸ್ತಿ ಸರ್ವೇ ನಂ.1029 ಬದಲಿಗೆ 1020 ಆಗಿದ್ದು, ಈ ಕುರಿತು ಅಗತ್ಯ ಕ್ರಮ ವಹಿಸಿ ಸರಿಪಡಿಸುವಂತೆ ಅವರು ಸೂಚನೆ ನೀಡಿದರು.

    ಯಾರೂ ತಮ್ಮ ಆಸ್ತಿ- ಜಮೀನುಗಳ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ ವಕ್ಫ್ ಇಲಾಖೆಯ ಆಸ್ತಿಗಳ ಇಂದೀಕರಣ ಮಾತ್ರ ಮಾಡಲಾಗುತ್ತಿರುವ ಕುರಿತು ಜನರಲ್ಲಿ ತಿಳುವಳಿಕೆ ಮೂಡಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ ವಿಜಯಪುರ ತಹಶೀಲ್ದಾರ ಪ್ರಶಾಂತ ಚನಗೊಂಡ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ವಕ್ಫ್ ಇಲಾಖೆ ಅಧಿಕಾರಿ ಶ್ರೀಮತಿ ತಬಸ್ಸುಮ್ ಎಂ. ಮೊಹಸೀನ್ ಜಮಖಂಡಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

  • ಮೊನ್ನೆ 11 ಸಾವಿರ ಅಂದಿದ್ರು, ಈಗ 15 ಸಾವಿರ ಎಕ್ರೆಗೆ ಏರಿಕೆಯಾಗಿದೆ: ಜಮೀರ್ ವಿರುದ್ಧ ಯತ್ನಾಳ್ ಕಿಡಿ

    ಮೊನ್ನೆ 11 ಸಾವಿರ ಅಂದಿದ್ರು, ಈಗ 15 ಸಾವಿರ ಎಕ್ರೆಗೆ ಏರಿಕೆಯಾಗಿದೆ: ಜಮೀರ್ ವಿರುದ್ಧ ಯತ್ನಾಳ್ ಕಿಡಿ

    – ಕೋಮು ಗಲಭೆ ಎಬ್ಬಿಸಲು ಈ ರೀತಿ ಮಾಡ್ತಿದ್ದಾರೆ

    ವಿಜಯಪುರ: ಮೊನ್ನೆ 11 ಸಾವಿರ ಎಕ್ರೆ ವಕ್ಫ್ ಜಾಗ ಇದೆ ಎಂದಿದ್ದರು. ಈಗ ಇದು 15 ಸಾವಿರ ಎಕ್ರೆಗೆ ಏರಿಕೆಯಾಗಿದೆ. ಹೀಗೆ ಬಿಟ್ಟರೆ ದೇವಸ್ಥಾನ, ವಿಧಾನಸೌಧ ನಮ್ಮದು ಎನ್ನುತ್ತಾರೆ ಎಂದು ವಿಜಯಪುರದ (Vijayapura) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದ್ದಾರೆ.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಪಹಣಿಯಲ್ಲಿ ವಕ್ಫ್ ಹೆಸರು ವಿಚಾರವಾಗಿ ಸಚಿವ ಜಮೀರ್ ಅಹ್ಮದ್, ಎಂ.ಬಿ ಪಾಟೀಲ್ ಕೋಮು ಗಲಭೆ ಎಬ್ಬಿಸಲು ಈ ರೀತಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮತ್ತೊಂದು ಪಾಕಿಸ್ತಾನ ನಿರ್ಮಾಣ ಮಾಡುವಂತೆ ವಕ್ಫ್ ಕೆಲಸ ಮಾಡ್ತಿದೆ. ರಾಜ್ಯದಲ್ಲಿ ಎಲ್ಲವೂ ವಕ್ಫ್ ಆಸ್ತಿ ಎಂದು ಹೇಳುತ್ತಾರೆ. ಹಾಗಾದರೆ ಹಿಂದೂಗಳು ಎಲ್ಲಿಗೆ ಹೋಗಬೇಕು? ಹೊನವಾಡದಲ್ಲಿ 1200 ಎಕರೆ ವಕ್ಫ್ ಬೋರ್ಡ್‌ಗೆ ಸೇರ್ಪಡೆಯಾಗಿದೆ. ಇವರು ಕೇವಲ 11 ಎಕರೆ ಎನ್ನುತ್ತಾರೆ. ಯಾಕೆ ಸುಳ್ಳು ಹೇಳುತ್ತಿದ್ದೀರಾ? ಅಲ್ಪಸಂಖ್ಯಾತರ ಮತ ಓಲೈಕೆ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ಬರೆದಿದ್ದರಿಂದ ಗೊಂದಲ ಸೃಷ್ಟಿಯಾಗಿದೆ – ಎಂ.ಬಿ ಪಾಟೀಲ್ ಸ್ಪಷ್ಟನೆ

    ನಾವು ರೈತರ ಜೊತೆ ಇದ್ದೇವೆ, ರೈತರಿಗಾಗಿ ಉಚಿತ ಕಾನೂನು ಹೋರಾಟ ಮಾಡುತ್ತೇವೆ. ರಾಜ್ಯದ ಯಾವುದೇ ಮೂಲೆಯಲ್ಲಿ ರೈತರ ಜಮೀನಲ್ಲಿ ವಕ್ಫ್ ಬೋರ್ಡ ಹೆಸರು ಇದ್ದರೂ ಅವರು ನಮ್ಮ ಬಳಿ ಬರಲಿ. ನಮ್ಮ ಶಾಸಕರ ಕಛೇರಿಗೆ ಬಂದು ದಾಖಲಾತಿ ನೀಡಿದರೆ ಅವರ ಪರವಾಗಿ ನಾವು ಕಾನೂನು ಹೋರಾಟ ಮಾಡುತ್ತೇವೆ. ರೈತರು ಆತಂಕ ಪಡಬಾರದು, ಕಾನೂನು ಹೋರಾಟ ಮಾಡೋಣ. ಯಾರಿಗಾದರೂ ನೋಟಿಸ್ ಬಂದರೆ ನಮ್ಮ ಕಛೇರಿಗೆ ಸಂಪರ್ಕ ಮಾಡಿ. ವಿಜಯಪುರ ಜಿಲ್ಲೆ ಮಾತ್ರವಲ್ಲ ಬೇರೆ ಜಿಲ್ಲೆಯ ರೈತರು ಸಹ ನಮ್ಮ ಕಛೇರಿಗೆ ಸಂಪರ್ಕ ಮಾಡಬಹುದು ಎಂದು ಭರವಸೆ ನೀಡಿದರು.

    ವಕ್ಫ್ ಮಂಡಳಿಯವರು ದೇವಸ್ಥಾನಕ್ಕೆ ಕೂಡಾ ನೋಟಿಸ್ ನೀಡುತ್ತಿದ್ದಾರೆ. ದೇಶದಲ್ಲಿ ವಕ್ಫ್ ಕಾನೂನು ವಿರುದ್ಧ ಹೋರಾಟ ಮಾಡಲಾಗುವುದು. ನೋಟಿಸ್ ನೀಡಿದ್ದರ ಬಗ್ಗೆ ಕಾನೂನು ಹೋರಾಟಕ್ಕೆ ವಕೀಲರ ತಂಡ ಮಾಡುತ್ತೇವೆ. ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರಿಗೆ ಜಾಗೃತಿ ಮೂಡಿಸುತ್ತೇವೆ. ಸಚಿವ ಜಮೀರ್ ಪ್ರವಾಸ ಮಾಡಿದ ಜಿಲ್ಲೆಗಳಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಜಿಲ್ಲೆಯಲ್ಲಿ ವಕ್ಫ್ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಯಾವುದೇ ವಕ್ಫ್ ಆಸ್ತಿ ಆಗಿಲ್ಲ ಎನ್ನುತ್ತಾರೆ. ವಕ್ಫ್ ಕಾನೂನು ನೆಹರು ಮಾಡಿರುವ ದೊಡ್ಡ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಾನು ಹೋದಲ್ಲಿ ಎಲ್ಲಾ ನನ್ನ ಮೇಲೆ ಕೇಸ್ ಹಾಕುತ್ತಾರೆ. ನನ್ನ ಮೇಲೆ, ಸಿಟಿ ರವಿ, ಪ್ರತಾಪ್ ಸಿಂಹ, ಸೂಲಿಬೆಲೆ ಮೇಲೆ ಕೇಸ್ ಮಾಡುತ್ತಿದ್ದಾರೆ. ಪಾಪ ಪೊಲೀಸರು ಸರ್ಕಾರ ಹೇಳಿದಂತೆ ಮಾಡುತ್ತಾರೆ. ನನ್ನ ಮೇಲೆ 100 ಕೇಸ್ ಹಾಕಿದರೂ ನಾನು ಯಾವುದಕ್ಕೂ ಹೆದರಲ್ಲ. ಮುಂದೆ ನಮ್ಮ ಸರ್ಕಾರ ಬರುತ್ತೆ. ಆಗ ನಮಗೂ ಮಾಡಲು ಬರುತ್ತೆ ಎಂದು ಎಚ್ಚರಿಕೆ ನೀಡಿದರು.ಇದನ್ನೂ ಓದಿ: ಸ್ವೀಟಿ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್- 2 ಸಿನಿಮಾಗಳ ಶೂಟಿಂಗ್ ಮುಗಿಸಿದ ನಟಿ

  • ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ಬರೆದಿದ್ದರಿಂದ ಗೊಂದಲ ಸೃಷ್ಟಿಯಾಗಿದೆ – ಎಂ.ಬಿ ಪಾಟೀಲ್ ಸ್ಪಷ್ಟನೆ

    ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ಬರೆದಿದ್ದರಿಂದ ಗೊಂದಲ ಸೃಷ್ಟಿಯಾಗಿದೆ – ಎಂ.ಬಿ ಪಾಟೀಲ್ ಸ್ಪಷ್ಟನೆ

    ವಿಜಯಪುರ: ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ಬರೆದಿದ್ದರಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ (MB Patil) ಸ್ಪಷ್ಟನೆ ನೀಡಿದ್ದಾರೆ.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ರೈತರ ಅಸ್ತಿಯಲ್ಲಿ ವಕ್ಫ್ ಬೋರ್ಡ್ ಸೇರ್ಪಡೆ ವಿಚಾರವಾಗಿ ಯಾರು ಭಯಪಡುವ ವಿಚಾರ ಇಲ್ಲ. ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ಬರೆದಿದ್ದರಿಂದ ಗೊಂದಲ ಸೃಷ್ಟಿಯಾಗಿದೆ. ಹೊನವಾಡ ಗ್ರಾಮದಲ್ಲಿ ಕೇವಲ 10 ಎಕರೆ ಮಾತ್ರ ವಕ್ಫ್ ಆಸ್ತಿ ಇದೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ಮತ್ತೆ ಮಾತನಾಡುತ್ತೇನೆ ಎಂದು ತಿಳಿಸಿದರು.ಇದನ್ನೂ ಓದಿ: ಸ್ವೀಟಿ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್- 2 ಸಿನಿಮಾಗಳ ಶೂಟಿಂಗ್ ಮುಗಿಸಿದ ನಟಿ

    ವಕ್ಫ್ ಆಸ್ತಿಗಳ ಬಗ್ಗೆ ಜಿಲ್ಲೆಯಲ್ಲಿ ಬಹಳಷ್ಟು ಗೊಂದಲ ಸೃಷ್ಟಿ ಮಾಡಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರ ಮಾಧ್ಯಮಗಳಲ್ಲಿ ಬರುತ್ತಿದೆ. ಹೊನವಾಡ ಗ್ರಾಮದಲ್ಲಿ 1200 ಎಕರೆ ರೈತರ ಭೂಮಿ ವಕ್ಫ ಆಗಿದೆ ಎಂದು ಸುದ್ದಿ ಹಬ್ಬಿಸಲಾಗಿದೆ. ಹೊನವಾಡದಲ್ಲಿ ಯಾವುದೇ ರೈತನಿಗೆ ನೋಟಿಸ್ ನೀಡಿಲ್ಲ. ಗೆಜೆಟ್‌ನಲ್ಲಿ ಗೊಂದಲ ಉಂಟಾಗಿ ಈ ರೀತಿಯಾಗಿದೆ. 10 ಎಕರೆ ಮಾತ್ರ ವಕ್ಫ್ ಆಸ್ತಿ ಹೊನವಾಡದಲ್ಲಿದೆ. 124 ನೋಟಿಸ್ ಜಿಲ್ಲೆಯಲ್ಲಿ ನೀಡಲಾಗಿದೆ. 433 ರೈತರಿಗೆ ನೋಟಿಸ್ ನೀಡಲಾಗಿದೆ. ಚಡಚಣ, ಇಂಡಿ ತಹಶೀಲ್ದಾರರ್ ನೋಟಿಸ್ ನೀಡದೇ ಸರ್ವೇ ನಂಬರ್ ಹಾಕಿದ್ದಾರೆ. ಎಸಿ ಅವರು ಈ ಬಗ್ಗೆ ತನಿಖೆ ಮಾಡುತ್ತಾರೆ ಎಂದರು.

    ವಿಜಯಪುರದಲ್ಲಿ ಒಟ್ಟು 14,201 ಎಕರೆ ಆಸ್ತಿಯಿದೆ. 12,083 ಎಕರೆಯಲ್ಲಿ 70% ಮುಸ್ಲಿಂರ ಆಸ್ತಿಯಿದೆ. ಹಿಂದೂಗಳಿಗೆ 30% ಜಾಗ ಮಾರಾಟ ಮಾಡಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಯರಗಲ್ ಗ್ರಾಮದಲ್ಲಿ ಸರ್ವೇನಂಬರ್ 138ನಲ್ಲಿ 13 ಎಕರೆ 1974ರಲ್ಲಿ ಗೆಜೆಟ್ ನೋಟಿಪಿಕೇಷನ್ ಮಾಡಲಾಗಿದೆ. ಇದನ್ನ ವಕ್ಫ್ ಮಂಡಳಿಯವರು ಸರಿ ಪಡಿಸುತ್ತಿದ್ದಾರೆ. 1 ಎಕರೆ 36 ಗುಂಟೆಯಿರುವ ಗುರುಲಿಂಗ ವಿರಕ್ತಮಠ ಆಸ್ತಿ ಬಗ್ಗೆ ಮಾಹಿತಿ ತಪ್ಪಾಗಿದೆ. 1029 ಬದಲಾಗಿ 1020 ಆಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಮಾಡಲಾಗಿದೆ. 1974ರ ಮೊದಲು ಏನಾದರೂ ಬದಲಾಗಿದೆ ಎಂದು ಚೆಕ್ ಮಾಡುತ್ತಾರೆ ಎಂದು ತಿಳಿಸಿದರು.ಇದನ್ನೂ ಓದಿ: ಬೇಲೆಕೇರಿ ಅದಿರು ಲೂಟಿಯಾಗಿದ್ದು ಬಿಜೆಪಿ ಟೈಂನಲ್ಲಿ: ಹೊಸ ಬಾಂಬ್‌ ಸಿಡಿಸಿದ ಹೆಚ್‌.ಕೆ.ಪಾಟೀಲ್‌

  • PUBLiC TV Impact | ಮನ್ ಕಿ ಬಾತ್‌ನಲ್ಲಿ ವಿಜಯಪುರದ ಯುವಕನ ಪ್ರಕರಣ ಪ್ರಸ್ತಾಪಿಸಿದ ಪ್ರಧಾನಿ

    PUBLiC TV Impact | ಮನ್ ಕಿ ಬಾತ್‌ನಲ್ಲಿ ವಿಜಯಪುರದ ಯುವಕನ ಪ್ರಕರಣ ಪ್ರಸ್ತಾಪಿಸಿದ ಪ್ರಧಾನಿ

    ವಿಜಯಪುರ: ಜಿಲ್ಲೆಯ ಸಂತೋಷ್ ಎಂಬುವವರಿಗೆ ಮುಂಬೈನಿಂದ ಕರೆ ಮಾಡಿ ಬ್ಲ್ಯಾಕ್‌ಮೇಲ್‌ ಮಾಡಿ, ಹೆದರಿಸಿರುವ ಸುದ್ದಿಯನ್ನು ನಿಮ್ಮ `ಪಬ್ಲಿಕ್ ಟಿವಿ’ (PUBLiC TV) ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಈ ಸುದ್ದಿ ಪ್ರಧಾನಿ ಮೋದಿಯವರಿಗೆ ತಲುಪಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ (PM Narendra Modi) ಇಂದು (ಅ.27) ಮನ್ ಕಿ ಬಾತ್‌ನಲ್ಲಿ (Maan Ki Baat) ಮಾತನಾಡಿದರು.

    ಪ್ರಧಾನಿ ಮೋದಿ ಇಂದು ಮನ್ ಕಿ ಬಾತ್‌ನ 115ನೇ ಸಂಚಿಕೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ (Cyber Crime) ಪ್ರಕರಣ ಹಿನ್ನೆಲೆ ದೇಶದ ಜನರಿಗೆ ಜಾಗೃತ ಮೂಡಿಸಿದರು.ಇದನ್ನೂ ಓದಿ: ನಿಮ್ಮ ಪಾದಗಳಿಗೆ ಶಿರಸಾವಹಿಸಿ ಬೇಡಿಕೊಳ್ತೀನಿ, ಒಂದೇ ಒಂದು ಅವಕಾಶ ಕೊಡಿ: ನಿಖಿಲ್

    ವಿಜಯಪುರದ (Vijayapura) ನಿವಾಸಿ ಸಂತೋಷ್ ಎಂಬುವವರಿಗೆ ಮುಂಬೈನಿಂದ ಕರೆ ಮಾಡಿ, ನಾವು ಮುಂಬೈ ಕ್ರೈಂ ಬ್ರ್ಯಾಂಚ್‌ ಪೊಲೀಸರು ಎಂದು ಹೇಳಿ ಬ್ಲ್ಯಾಕ್‌ಮೇಲ್‌ ಮಾಡಿ, ಹೆದರಿಸಿದ್ದರು. ಇದರ ಸಂಪೂರ್ಣ ದೃಶ್ಯವನ್ನು ಸಂತೋಷ್ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಈ ಕುರಿತು ವಿಸ್ತೃತ ವರದಿಯನ್ನು ಪಬ್ಲಿಕ್ ಟಿವಿ ಬಿತ್ತರಿಸಿತ್ತು. ಈ ಸುದ್ದಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು, ಪ್ರಧಾನಿ ಮೋದಿಯವರೆಗೆ ತಲುಪಿದೆ. ಇಂದು ಪ್ರಧಾನಿ ಮೋದಿ ಈ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದರು.

    11 ಗಂಟೆಗೆ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸಂತೋಷ್ ಅವರ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದರು. ಸಂತೋಷ್ ಸೆರೆ ಹಿಡಿದಿದ್ದ ಸಂಪೂರ್ಣ ವಿಡಿಯೋವನ್ನು ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯಿತು. ಮೋದಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಿಸಿದರು. ಇದರಿಂದ ಖುಷಿಯನ್ನು ವ್ಯಕ್ತಪಡಿಸಿದ ಸಂತೋಷ, ಇದೆಲ್ಲ ಸಾಧ್ಯವಾಗಿದ್ದು ಪಬ್ಲಿಕ್ ಟಿವಿಯಿಂದ ಎಂದು ಅಭಿನಂದನೆ ಸಲ್ಲಿಸಿದ್ದಾರೆ.ಇದನ್ನೂ ಓದಿ: ಕಿಚ್ಚನ ಅನುಪಸ್ಥಿತಿಯಲ್ಲಿ ನಡೆಯಿತು ಎಲಿಮಿನೇಷನ್ ಪ್ರಕ್ರಿಯೆ- ಮಾನಸಾ ಔಟ್?