Tag: ವಿಜಯಪುರ

  • ಹಿಂದೂಗಳನ್ನು ಟಾರ್ಗೆಟ್ ಮಾಡಿ ಬಿಪಿಎಲ್ ಕಾರ್ಡ್ ರದ್ದು – ಯತ್ನಾಳ್ ಕಿಡಿ

    ಹಿಂದೂಗಳನ್ನು ಟಾರ್ಗೆಟ್ ಮಾಡಿ ಬಿಪಿಎಲ್ ಕಾರ್ಡ್ ರದ್ದು – ಯತ್ನಾಳ್ ಕಿಡಿ

    ವಿಜಯಪುರ: ಹಿಂದೂಗಳನ್ನು ಟಾರ್ಗೆಟ್ ಮಾಡಿ ಬಿಪಿಎಲ್ ಕಾರ್ಡ್ (BPL Card) ರದ್ದು ಮಾಡಲಾಗಿದೆ ಎಂದು ವಿಜಯಪುರ (Vijayapura) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ರೇಷನ್ ಕಾರ್ಡ್ ರದ್ದು ಮಾಡುತ್ತಿದೆ. ಅವರನ್ನು ಟಾರ್ಗೆಟ್ ಮಾಡಿಯೇ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದ್ದಾರೆ. ಇದೇ ವಿಷಯವಿಟ್ಟುಕೊಂಡು ಅಧಿವೇಶನದಲ್ಲಿ ಇದರ ವಿರುದ್ಧ ಹೋರಾಟ ಮಾಡಲಿದ್ದೇವೆ. ಸಿದ್ದರಾಮಯ್ಯ ಹಿಂದೂಗಳ ವೋಟು ಬೇಡ ಎಂದಿದ್ದಾರೆ. ಅದಕ್ಕೆ ಹಿಂದೂಗಳ ರೇಷನ್ ಕಡಿತವಾಗುತ್ತಿದೆ ಎಂದು ನನಗೂ ಮಾಹಿತಿ ಬಂದಿದೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ನಬಾರ್ಡ್ ಸಾಲದ ಮೊತ್ತ ಹೆಚ್ಚಿಸುವಂತೆ ಕೇಂದ್ರ ಹಣಕಾಸು ಸಚಿವರಿಗೆ ಮನವಿ: ಸಿದ್ದರಾಮಯ್ಯ

    ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ ಪ್ರಸ್ತಾಪವಾಗುತ್ತಿದೆ. ರದ್ದಾದ ಗ್ರಾಹಕರ ಯಾದಿ ತೆಗೆದುಕೊಳ್ಳುತ್ತೇವೆ. ಇದನ್ನು ಇಟ್ಟುಕೊಂಡು ಅಧಿವೇಶನದಲ್ಲಿ ಧರಣಿ ಮಾಡುತ್ತೇವೆ. ಹಿಂದೂಗಳಿಗೆ ರೇಷನ್ ಕಾರ್ಡನಲ್ಲಿ ಅನ್ಯಾಯವಾಗಬಾರದು ಎಂದು ಆಗ್ರಹಿಸಿದರು.

    ಕಾಂಗ್ರೆಸ್ ಹಿಂದೂಗಳನ್ನ ಟಾರ್ಗೆಟ್ ಮಾಡುತ್ತಿದೆ. ಯಾರಿಗೆ ಅನ್ಯಾಯವಾಗಿದೆ ಅವರ ಪರ ಸದನದಲ್ಲಿ ಧ್ವನಿ ನಾವು ಎತ್ತುತ್ತೇವೆ. ಮೊದಲು ಮಾಹಿತಿ ಪಡೆಯುತ್ತೇವೆ. ಪ್ಯಾನ್ ಕಾರ್ಡ್ ಅಪ್ಲಿಕೇಶನ್ ಹಾಕಿದವರ ರೇಷನ್ ಕಾರ್ಡ್ ರದ್ದಾಗಿವೆ. ಇವರ ಟಾರ್ಗೆಟ್ ಹಿಂದೂಗಳಾಗಿದ್ದಾರೆ. ವೋಟು ಹಾಕಿಲ್ಲ ಎಂದು ಹಿಂದೂಗಳನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಹಿಂದೂಗಳನ್ನು ತುಳಿಯಬೇಕೆಂದು ಹೀಗೆ ಮಾಡುತ್ತಿದ್ದಾರೆ ಎಂದರು.ಇದನ್ನೂ ಓದಿ: ವಿಕ್ರಂಗೌಡ ಹತ್ಯೆ | ನಕ್ಸಲ್ ಚಟುವಟಿಕೆ ನಿಗ್ರಹಿಸಲು ಎನ್‌ಕೌಂಟರ್: ಸಿದ್ದರಾಮಯ್ಯ

     

  • ವಿಜಯಪುರದಲ್ಲಿ ವಕ್ಫ್ ಬಳಿಕ ಬಿಪಿಎಲ್ ದಂಗಲ್ – 4 ಸಾವಿರಕ್ಕೂ ಅಧಿಕ ಕಾರ್ಡ್ ರದ್ದು

    ವಿಜಯಪುರದಲ್ಲಿ ವಕ್ಫ್ ಬಳಿಕ ಬಿಪಿಎಲ್ ದಂಗಲ್ – 4 ಸಾವಿರಕ್ಕೂ ಅಧಿಕ ಕಾರ್ಡ್ ರದ್ದು

    ವಿಜಯಪುರ: ಜಿಲ್ಲೆಯಲ್ಲಿ ವಕ್ಫ್ ದಂಗಲ್ ಕಿಚ್ಚು ಹತ್ತಿ ರಾಜ್ಯಾದ್ಯಂತ ವ್ಯಾಪಿಸಿತ್ತು. ಇದೀಗ ಜಿಲ್ಲೆಯಲ್ಲಿ ಬಿಪಿಎಲ್ (BPL) ದಂಗಲ್ ಶುರುವಾಗಿದೆ. ರಾಜ್ಯ ಸರ್ಕಾರ ಮತ್ತೊಂದು ಯಡವಟ್ಟು ಮಾಡಿ, ಬಡಜನರ ಕೆಂಗಣ್ಣಿಗೆ ಗುರಿಯಾಗಿದೆ.

    ವಿಜಯಪುರದಲ್ಲಿ (Vijayapura) ವಕ್ಫ್ ದಂಗಲ್ ಮುಗಿಯುವ ಮುನ್ನವೇ ಬಿಪಿಎಲ್ ಕಾರ್ಡ್ ಸಮಸ್ಯೆ ಶುರುವಾಗಿದೆ. ಜಿಲ್ಲೆಯಲ್ಲಿ ಒಟ್ಟು 4,359 ಬಿಪಿಎಲ್ ಕಾರ್ಡ್ ರದ್ದಾಗಿವೆ. ಐಟಿ ರಿಟರ್ನ್ ಮಾಡಿದ 1,932 ಜನರು ಸೇರಿದಂತೆ ಸರ್ಕಾರಿ ನೌಕರರ 1,71,012 ರೂ. ಗಿಂತ ಹೆಚ್ಚು ಆದಾಯ ಹೊಂದಿರುವ 2,256 ಜನರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಆದರೆ ಇದರಲ್ಲಿ ಕೆಲ ಬಡ ಜನರ ಬಿಪಿಎಲ್ ಕಾರ್ಡ್‌ಗಳು ರದ್ದಾಗಿವೆ. ಇದನ್ನೂ ಓದಿ: ಉಡುಪಿಯ ಕಬ್ಬಿನಾಲೆಯಲ್ಲಿ ಎನ್‌ಕೌಂಟರ್‌ – ನಕ್ಸಲ್‌ ನಾಯಕ ವಿಕ್ರಂ ಗೌಡ ಹತ್ಯೆ

    ನಗರದ ಜಾಡರ ಓಣಿಯ ಮುಸ್ಲಿಂ ಬಡ ಕುಟುಂಬ ಅನವರಬೀ ಗಿರಗಾವ ಎಂಬುವವರ ಬಿಪಿಎಲ್ ಕಾರ್ಡ್ ರದ್ದಾಗಿದೆ. ಅನವರಬೀ ಅವರ ಪತಿ ಹಾಸಿಂಸಾಬ ಗಿರಗಾವ ಕಳೆದ 7 ವರ್ಷ ಹಿಂದೆ ತೀರಿ ಹೋಗಿದ್ದಾರೆ. ಸದ್ಯ ಅನವರಬೀ ಮಗ ಮೋತಿಲಾಲ ಸೇರಿದಂತೆ 7 ಜನರು ಕುಟುಂಬಸ್ಥರು ಇದ್ದಾರೆ. ಅನವರಬೀ ಮಗ ಮೋತಿಲಾಲ ಬಟ್ಟೆ ಅಂಗಡಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಾನೆ.

    ಮನೆಯಲ್ಲಿ ಉಳಿದರ‍್ಯಾರು ಕೆಲಸ ಮಾಡಲ್ಲ. ಬಿಪಿಎಲ್ ಕಾರ್ಡ್‌ನ ರೇಷನ್‌ನಿಂದ, ಗೃಹಲಕ್ಷ್ಮಿಯ ಹಣದಿಂದ ಬಡ ಕುಟುಂಬ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಆದರೆ 15 ವರ್ಷದ ಕೆಳಗೆ ಅನವರಬೀ ಅವರ ಪತಿ ಹಾಸಿಂಸಾಬ ಮಾರುಕಟ್ಟೆಯ ರಸ್ತೆ ಬದಿ ಬಟ್ಟೆ ವ್ಯಾಪರ ಮಾಡುತ್ತಿದ್ದರಂತೆ. ಯಾರೋ ಹೇಳಿದ್ದಕ್ಕೆ ಜಿಎಸ್‌ಟಿ ಕಟ್ಟಿದ್ದರಂತೆ. ಈಗ ಜಿಎಸ್‌ಟಿ ಕಟ್ಟಿದ ಆಧಾರದ ಮೇಲೆ ಇವರ ಬಿಪಿಎಲ್ ಕಾರ್ಡ ರದ್ದಾಗಿದೆ ಎಂದು ಹೇಳಿದ್ದಾರೆ.

    ಮನೆಗೆ ಬಂದು ಸರಿಯಾಗಿ ಪರಿಶೀಲನೆ ಮಾಡದೆ ಏಕಾಏಕಿ ನಮ್ಮ ಕಾರ್ಡ್ ರದ್ದು ಮಾಡಿರುವುದು ವಿಪರ್ಯಾಸ. ಬಿಪಿಎಲ್ ಕಾರ್ಡ್ ರೇಷನ್ ನಂಬಿ ಬದುಕುತ್ತಿದ್ದ ಜನರು ಮುಂದೆ ಜೀವನ ಸಾಗಿಸುವುದು ಕಷ್ಟ ಎಂದು ರಾಜ್ಯ ಸರ್ಕಾರಕ್ಕೆ ಶಾಪ ಹಾಕುವಂತಾಗಿದೆ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ: 19-11-2024

  • ʻಸಿಎಂ ಲಫಂಗʼ ಹೇಳಿಕೆ ಹಿಂಪಡೆಯುತ್ತೇವೆ – ಅಭಿನವ ಸಂಗನಬಸವ ಶ್ರೀ

    ʻಸಿಎಂ ಲಫಂಗʼ ಹೇಳಿಕೆ ಹಿಂಪಡೆಯುತ್ತೇವೆ – ಅಭಿನವ ಸಂಗನಬಸವ ಶ್ರೀ

    ವಿಜಯಪುರ: ಸಿಎಂ ಸಿದ್ದರಾಮಯ್ಯ (Siddaramaiah) ಲಫಂಗ ಇದ್ದಾನೆ, ಮೀಸಲಾತಿ ನೀಡಲ್ಲ ಎಂದು ಸಿಎಂ ವಿರುದ್ಧ ವಿಜಯಪುರ (Vijayapura) ಜಿಲ್ಲೆಯ ಮನಗೂಳಿಯ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ  ಬುಧವಾರ ಕಾರ್ಯಕ್ರಮವೊಂದರಲ್ಲಿ ಏಕವಚನದಲ್ಲೆ ವಾಗ್ದಾಳಿ ನಡೆಸಿದ್ದರು. ಅವರ ಸ್ಥಾನಕ್ಕೆ ನಾನು ಬಳಸಿದ ಶಬ್ದ ಒಳ್ಳೆಯದಲ್ಲ. ಆಶಿರ್ವಚನದ ವೇಳೆ ಬಳಸಿದ ಎರಡು ಪದಗಳನ್ನು ಹಿಂದೆ ಪಡೆಯುತ್ತೇನೆ ಎಂದು ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ.

    ಸಿಎಂ ವಿರುದ್ಧದ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ (Abhinava Sanganabasava Shivacharya Swamiji), ನಾವು ನೋವು ಆಗುವಂತಹ ಮಾತುಗಳನ್ನ ಆಡಿದ್ದೇವೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಅದಕ್ಕಾಗಿ ನಾನು ಆಶಿರ್ವಚನದ ವೇಳೆ ಬಳಸಿದ ಎರಡು ಪದಗಳನ್ನು ಹಿಂದೆ ಪಡೆಯುತ್ತೇನೆ. ಅವರ ಸ್ಥಾನಕ್ಕೆ ನಾನು ಬಳಸಿದ ಶಬ್ದ ಒಳ್ಳೆಯದಲ್ಲ. ಕಾರಣ ನಾನು ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಬಕಾರಿ ಸಚಿವರ ಖಾತೆ ಬದಲಿಸುವಂತೆ ಆಗ್ರಹಿಸಿ ನ.20ಕ್ಕೆ ರಾಜ್ಯಾದ್ಯಂತ ಬಾರ್ ಬಂದ್

    ಬುಧವಾರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದ ಕಾರ್ಯಕ್ರಮವೊಂದರಲ್ಲಿ ಜಿಲ್ಲೆಯ ಮನಗೂಳಿಯ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯಸ್ವಾಮೀಜಿ ಪಂಚಮಸಾಲಿ 2ಎ ಮೀಸಲಾತಿ ವಿಚಾರದಲ್ಲಿ ಸಿಎಂ ವಿರುದ್ಧ ಆಶಿರ್ವಚನದ ವೇಳೆ ಸಿದ್ದರಾಮಯ್ಯ ಲಫಂಗ ಇದ್ದಾನೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕೂಡಲಸಂಗಮ ಜಯಮೃತ್ಯುಂಜಯ ಶ್ರೀಗಳ ಹೆಗಲ ಮೇಲೆ ಸಿದ್ದರಾಮಯ್ಯ ಕೈ ಹಾಕ್ತಾನೆ. ನಾನೇ ಆಗಿದ್ರೇ ಅವರ ಕಪಾಳಕ್ಕೆ ಹೊಡೆಯುತ್ತಿದ್ದೆ. ಸಿಎಂ ಆದಾಗ ಗದ್ದಲ ಮಾಡುತ್ತಾರೆ. ಪಂಚಮಸಾಲಿ 2ಎ ಮೀಸಲಾತಿಯಲ್ಲಿ ನಾಟಕ ಮಾಡಿಕೊಂಡು ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಮೀಸಲಾತಿ ನೀಡಲ್ಲ ಎಂದು ಕಿಡಿಕಾರಿದ್ದರು. ಇದೀಗ ಸ್ವಾಮೀಜಿ ಸಿಎಂ ವಿರುದ್ಧ ಬಳಸಿದ ಎರಡು ಪದ ಹಿಂಪಡೆಯುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿ| ರಾಶಿ ರಾಶಿ ಗೋವಾ ಮದ್ಯ ಬಾಟಲಿಗಳು ವಶ

  • ಎಪಿಎಂಸಿ ಹೊರಗೆ ಯುವಕನ ಶವ ಪತ್ತೆ – ಅನೈತಿಕ ಸಂಬಂಧಕ್ಕೆ ಬಲಿಯಾದ ಶಂಕೆ!

    ಎಪಿಎಂಸಿ ಹೊರಗೆ ಯುವಕನ ಶವ ಪತ್ತೆ – ಅನೈತಿಕ ಸಂಬಂಧಕ್ಕೆ ಬಲಿಯಾದ ಶಂಕೆ!

    ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ (Basavana Bagewadi) ಪಟ್ಟಣದ ಎಪಿಎಂಸಿ ಹೊರಭಾಗದಲ್ಲಿ ಯುವಕನ ಶವ ಪತ್ತೆಯಾಗಿದ್ದು, ಕೊಲೆಯ ಭಯಾನಕ ವಿಡಿಯೋ ವೈರಲಾಗಿದೆ.

    ಮೃತ ಯುವಕನನ್ನು ಬಸವನ ಬಾಗೇವಾಡಿ ನಿವಾಸಿ ಸುನೀಲ ಭಜಂತ್ರಿ (23) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ – ತಾಯಿ, ಮಗಳಿಗೆ ಗಂಭೀರ ಗಾಯ

    ಭಾನುವಾರ (ನ.10) ಯುವಕ ಹಾಗೂ ಇತರರು ಸೇರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಬಳಿಕ ಯುವಕನ ಕುತ್ತಿಗೆಗೆ ಹಗ್ಗ ಹಾಕಿ ಕುತ್ತಿಗೆಯನ್ನು ತುಳಿದು ಕೊಲೆ ಮಾಡಿದ್ದಾರೆ. ಕೊಲೆಗೂ ಮುನ್ನ ಎಣ್ಣೆ ಪಾರ್ಟಿ ಮಾಡುವಾಗ, ಸಾಯುವ ಮೊದಲು ವಿಡಿಯೋ ಮಾಡಿದ್ದಾರೆ. ಜೊತೆಗೆ ಸತ್ತ ಬಳಿಕ ವಿಡಿಯೋ ಮಾಡಿದ್ದು, ವೈರಲ್ ಆಗಿದೆ.

    ಅನೈತಿಕ ಸಂಬಂಧ ಹೊಂದಿದ್ದರಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ವಿಡಿಯೋ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಬಸವನ ಬಾಗೇವಾಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ಬೀದಿ ನಾಯಿ ಜೊತೆ ಅಸಭ್ಯ ವರ್ತನೆ – ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

  • ಜೆಪಿಸಿ ಸಮಿತಿಯಿಂದ ಭರವಸೆ – ಯತ್ನಾಳ್, ಕರಂದ್ಲಾಜೆ ಅಹೋರಾತ್ರಿ ಪ್ರತಿಭಟನೆ ಅಂತ್ಯ

    ಜೆಪಿಸಿ ಸಮಿತಿಯಿಂದ ಭರವಸೆ – ಯತ್ನಾಳ್, ಕರಂದ್ಲಾಜೆ ಅಹೋರಾತ್ರಿ ಪ್ರತಿಭಟನೆ ಅಂತ್ಯ

    ವಿಜಯಪುರ: ನಗರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ನೇತೃತ್ವದಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಪ್ರತಿಭಟನೆ ನಾಲ್ಕು ದಿನಗಳ ಬಳಿಕ ಅಂತ್ಯಗೊಂಡಿದೆ.

    ವಕ್ಫ್ ವಿವಾದವನ್ನು ಖಂಡಿಸಿ ಯತ್ನಾಳ್, ಶೋಭಾ ಕರಂದ್ಲಾಜೆ (Shobha Karandlaje) ಅವರು ಬೆಂಬಲಿಗರ ಜೊತೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು. ಇಂದು ಕೇಂದ್ರದ ಜೆಪಿಸಿ ಕಮಿಟಿ ಜಿಲ್ಲೆಗೆ ಬಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೋರಾಟವನ್ನು ಅಂತ್ಯಗೊಳಿಸಲಾಯಿತು.ಇದನ್ನೂ ಓದಿ: ಸಂಸತ್‌ನಲ್ಲಿ ಯಾಸಿನ್‌ ಬಗ್ಗೆ ಚರ್ಚಿಸಿ: ರಾಹುಲ್‌ಗೆ ಪತ್ನಿ ಮುಶಾಲ್ ಹುಸೈನ್ ಪತ್ರ

    ವಿಜಯಪುರ (Vijayapura) ಜಿಲ್ಲೆಯಲ್ಲಿ ವಕ್ಫ್ ಅದಾಲತ್ ನಡೆಸಿದ್ದ ಸಚಿವ ಜಮೀರ್ ಅಹ್ಮದ್ ವಕ್ಫ್ ಆಸ್ತಿ ವಶಪಡಿಸಕೊಳ್ಳಲು ಡಿಸಿ ಅವರಿಗೆ ಮೌಖಿಕ ಆದೇಶ ನೀಡಿ ತೆರಳಿದ್ದರು. ಬಳಿಕ ರೈತರ ಪಹಣಿಯಲ್ಲಿ ರಾತ್ರೋರಾತ್ರಿ ವಕ್ಫ್ ಆಸ್ತಿ ಸೇರ್ಪಡೆಯಾಗಿತ್ತು. ಇದರಿಂದ ರೊಚ್ಚಿಗೆದ್ದ ರೈತರು ಅಹೋರಾತ್ರಿ ಹೋರಾಟವನ್ನು ಡಿಸಿ ಕಚೇರಿ ಮುಂಭಾಗ ಆರಂಭಿಸಿದ್ದರು.

    ಆದರೆ ಕಳೆದ ಒಂದು ತಿಂಗಳ ಹಿಂದೆ ರೈತರಿಗೆ ನೋಟಿಸ್ ನೀಡಿದ್ದ ಪಹಣಿಯನ್ನು ಮಾತ್ರ ರಾಜ್ಯ ಸರ್ಕಾರ ವಾಪಸ್ ಪಡೆದಿತ್ತು. ಇದರಿಂದ ರೈತ ಸಂಘಟನೆಗಳು ಪ್ರತಿಭಟನೆ ವಾಪಸ್ ಪಡೆದಿದ್ದರು. ಆದರೆ ಕಳೆದ ನಾಲ್ಕು ದಿನಗಳ ಹಿಂದೆ ಭಾರತ್ ಕಿಸಾನ್ ಸಂಘದ ನೇತೃತ್ವದಲ್ಲಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜೀ ಸಾನಿಧ್ಯದಲ್ಲಿ ಹಲವಾರು ಮಠಾಧೀಶರು ಸೇರಿ ಬೃಹತ್ ರ‍್ಯಾಲಿ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆಗ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಪ್ರಾರಂಭಿಸಲಾಗಿತ್ತು.ಇದನ್ನೂ ಓದಿ: ಎಲೆಕ್ಷನ್ ವಿಕ್ಟರಿ ಫೋಟೋ ಸೆಷನ್‌ನಲ್ಲಿ ಕಾಣಿಸಿಕೊಂಡ ಮಸ್ಕ್ – ಟ್ರಂಪ್ ಪತ್ನಿ ಮೆಲಾನಿಯಾ ಮಿಸ್ಸಿಂಗ್

    ನಾಲ್ಕನೇ ದಿನ ಇಂದು (ನ.7) ವಿಜಯಪುರಕ್ಕೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಂಬಿಕಾ ಪಾಲ್, ಸಂಸದ ತೇಜಸ್ವಿ ಸೂರ್ಯ ತಂಡ ಭೇಟಿ ನೀಡಿ ರೈತರ, ಮಠಾಧೀಶರ, ಹೋರಾಟಗಾರ ಅಹವಾಲು ಕೇಳಿ ಮನವಿ ಸ್ವೀಕರಿಸಿದರು.

    ಜಗದಂಬಿಕಾ ಪಾಲ್ (Jagadambika Pal) ಮಾತನಾಡಿ, ವಿಜಯಪುರದ ವಕ್ಫ್ ಹೋರಾಟದಿಂದ ವಕ್ಫ್ನ ಸಮಸ್ಯೆಗಳು ಗಮನಕ್ಕೆ ಬಂದಿವೆ. ಇದನ್ನು ಜೆಪಿಸಿ ಸಭೆಯಲ್ಲಿ ಇಟ್ಟು, ಡಿಸಿ ಅವರನ್ನು ಅಲ್ಲಿಗೆ ಕರೆಸುತ್ತೇವೆ. ರೈತರ ಮನವಿಗಳನ್ನು ಸಮಿತಿ ಪರಿಗಣಿಸುತ್ತದೆ. ವಕ್ಫ್ ಕಾಯ್ದೆ ತಿದ್ದುಪಡಿಗೆ ತರುತ್ತೇವೆ ಎಂದು ಪ್ರತಿಭಟನೆಯನ್ನು ಕೈಬಿಡಲು ಮನವಿ ಮಾಡಿದರು.

    ಇದೆ ವೇಳೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣ ಮಾಡಬೇಕು. ರಾಷ್ಟ್ರೀಯ ಸ್ವತ್ತು ಎಂದು ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.

    ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ರೈತರ ಉತಾರಿಯ ಯಾವುದೇ ಕಲಂನಲ್ಲಿ ವಕ್ಫ್ ಎಂದು ನಮೂದಾಗಬಾರದು. ವಕ್ಫ್ ಅದಾಲತ್ ರದ್ದು ಮಾಡಿ, ಇದನ್ನು ಎಲ್ಲಿಯೂ ನಡೆಸಬಾರದು ಎಂದು ಆಗ್ರಹಿಸಿದರು. 1974ರ ಹಾಗೂ ನಂತರದ ಎಲ್ಲ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಬೇಕು ಎಂದು ಹೀಗೆ ಹಲವು ಬೇಡಿಕೆಗಳನ್ನು ಜಿಪಿಸಿ ಮುಂದೆ ಮನವಿ ಮಾಡಿದರು.ಇದನ್ನೂ ಓದಿ: ಕೋಲ್ಕತ್ತಾ ರೇಪ್‌ ಕೇಸ್‌ – ಬಂಗಾಳದಿಂದ ಬೇರೆ ರಾಜ್ಯಕ್ಕೆ ಕೇಸ್‌ ವರ್ಗಾಯಿಸಲು ಸುಪ್ರೀಂ ನಕಾರ

    ಒಟ್ಟಿನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ವಕ್ಫ್ ದಂಗಲ್ ದೆಹಲಿಗೂ ತಲುಪಿದ್ದು, ಜೆಪಿಸಿ ಕಮಿಟಿ ಜಿಲ್ಲೆಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು. ಈ ವಿಚಾರವಾಗಿ ವಕ್ಫ್ ಕಾಯ್ದೆಯಲ್ಲಿ ಅಮೂಲಾಗ್ರ ಬದಲಾವಣೆ ಜೆಪಿಸಿ ಕಮಿಟಿ ತರುತ್ತಾ ಎಂಬುವುದನ್ನು ಕಾದುನೋಡಬೇಕಿದೆ.

  • ಭಾರತದ ವಕ್ಫ್ ಆಸ್ತಿ ಪಾಕಿಸ್ತಾನದಷ್ಟಿದೆ: ಯತ್ನಾಳ್

    ಭಾರತದ ವಕ್ಫ್ ಆಸ್ತಿ ಪಾಕಿಸ್ತಾನದಷ್ಟಿದೆ: ಯತ್ನಾಳ್

    – ಜಮೀರ್ ಅಶ್ವಮೇಧ ಕುದುರೆಯನ್ನ ನಾನು ತಡೆದಿದ್ದೇನೆ
    – ನಾವು ಜಾತಿ ಎಂದು ಹೋದರೆ ಕಡಿದು ಹಾಕುತ್ತಾರೆ

    ವಿಜಯಪುರ: ಭಾರತದಲ್ಲಿ ಈಗಲೇ ಒಂದು ಪಾಕಿಸ್ತಾನ ನಿರ್ಮಾಣ ಆಗಿದೆ. ಭಾರತದ ವಕ್ಫ್ ಆಸ್ತಿ ಪಾಕಿಸ್ತಾನದಷ್ಟಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ( Basanagouda Patil Yatnal) ಹೇಳಿಕೆ ನೀಡಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಇನ್ನೊಂದು ಪಾಕಿಸ್ತಾನ ನಿರ್ಮಾಣ ಆಗಿದೆ. ದಿನದಿಂದ ದಿನಕ್ಕೆ ಆಸ್ತಿ ವಕ್ಫ್ ಪಾಲಾಗುತ್ತಿದೆ. ನಾಲಾಯಕ್ ಕಾಂಗ್ರೆಸ್ ಮಾಡಿದ ಕಾನೂನು ಇದಾಗಿದೆ. ವಕ್ಫ್ ವಿರುದ್ಧ ದೊಡ್ಡ ಸಂಗ್ರಾಮ ಆಗಬೇಕಿದೆ. ದೆಹಲಿಯಲ್ಲಿ ಮೌಲ್ವಿ ಚಂದ್ರಬಾಬು ನಾಯ್ಡು, ನಿತೇಶ್‌ಗೆ ಧಮ್ಕಿ ಹಾಕಿದ್ದಾನೆ. ಬಿಲ್‌ಗೆ ಬೆಂಬಲ ನೀಡಿದರೆ 5 ಲಕ್ಷ ಜನ ಸೇರಿಸುತ್ತೇನೆ ಎಂದಿದ್ದಾನೆ ಎಂದು ಹೇಳಿದರು. ಇದನ್ನೂ ಓದಿ: ಎಸ್‌ಡಿಎ ರುದ್ರಣ್ಣ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಬೇಕು: ಅರವಿಂದ ಬೆಲ್ಲದ್‌

    ಅಂದು ಕುಂಕುಮ ಹಚ್ಚದ ಸಿಎಂ ಈಗ ಕುಂಕುಮ ಹಚ್ಚಿಕೊಳ್ಳುತ್ತಿದ್ದಾನೆ. ಚಾಮುಂಡೇಶ್ವರಿ ಬಳಿ ಹೋಗಿ ಈಗ ಕುಂಕುಮ ಹಚ್ಚಿ ಎನ್ನುತ್ತಿದ್ದಾನೆ. ವಿಜಯಪುರದ ವಾಗ್ದೇವಿ ದೇಗುಲದ ಒಳಗೆ ಸಿಎಂ ಹೋಗಲಿಲ್ಲ. ವಾಗ್ದೇವಿ ಶಾಪದಿಂದಲೇ ಮುಡಾದಲ್ಲಿ ಸಿಎಂ ಸಿಕ್ಕಿಹಾಕಿಕೊಂಡಿದ್ದಾನೆ. ಆದರೆ ವಿಜಯಪುದಲ್ಲಿ ಮತಾಂಧ ಮೌಲ್ವಿ ಮನೆಗೆ ಹಲ್ಲು ಕಿರಿಯುತ್ತಾ ಹೋಗುತ್ತಾನೆ ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಶಿವಮೊಗ್ಗ | ಎಟಿಎಂ, ಬ್ಯಾಂಕ್‍ಗಳಿಗೆ ಭದ್ರತಾ ಸಿಬ್ಬಂದಿ ನೇಮಕಕ್ಕೆ ಎಸ್‍ಪಿ ಸೂಚನೆ

    2029ಕ್ಕೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡಲಿದ್ದಾರೆ. ಅದಕ್ಕೆ ನಾವು ಎಚ್ಚೆತ್ತುಕೊಳ್ಳಬೇಕಿದೆ. ನಾವು ಜಾತಿ ಎಂದು ಹೋದರೆ ಕಡಿದು ಹಾಕುತ್ತಾರೆ. ಬಾಂಗ್ಲಾದಲ್ಲಿ ಏನಾಗುತ್ತಿದೆ ಅದಕ್ಕೆ ನಾವು ಎಚ್ಚೆತ್ತುಕೊಳ್ಳಬೇಕಿದೆ. ಈಗ ಹೋರಾಟ ಶುರುವಾಗಿದೆ, ಮುಂದೆ ಹೋರಾಟ ದೊಡ್ಡದಾಗಬೇಕು ಎಂದರು.

    ಕಾಂಗ್ರೆಸ್‌ನಲ್ಲೆ ಶಾಸಕರು ಜಮೀರ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಜಮೀರ್ ಪ್ರವಾಸ ತಡೆಯಿರಿ ಎನ್ನುತ್ತಿದ್ದಾರೆ. ಜಮೀರ್ ನನಗೆ ನಿಮ್ಮ ಅಪ್ಪನ ಆಸ್ತಿಯಾ ಎಂದಿದ್ದ, ನಾ ಇದು ನಿಮ್ಮ ಅಪ್ಪಂದ ಎಂದು ಕೇಳಿದ್ದೆ. ಜಮೀರ್ ಅಶ್ವಮೇಧವನ್ನು ಕಲಬುರ್ಗಿ, ಬೀದರ್‌ನಲ್ಲಿ ಯಾರು ತಡೆಯಲಿಲ್ಲ. ನಾನು ಜಮೀರ್ ಅಶ್ವಮೇಧ ಕುದುರೆಯನ್ನ ವಿಜಯಪುರದಲ್ಲಿ ತಡೆದಿದ್ದೇನೆ ಎಂದು ಹರಿಹಾಯ್ದರು. ಇದನ್ನೂ ಓದಿ: ಬೀದರ್ | ಈಗ ಸರ್ಕಾರಿ ಆಸ್ಪತ್ರೆಯೂ ವಕ್ಫ್ ಆಸ್ತಿ!

  • ನಿಮ್ಮದೇ ಲೋಕಾಯುಕ್ತ, ನಿಮ್ಮ ಅಧಿಕಾರಿಗಳು ನಿಮ್ಮನ್ನು ಹೇಗೆ ಅಪರಾಧಿ ಮಾಡೋಕೆ ಆಗುತ್ತೆ – ಶೋಭಾ

    ನಿಮ್ಮದೇ ಲೋಕಾಯುಕ್ತ, ನಿಮ್ಮ ಅಧಿಕಾರಿಗಳು ನಿಮ್ಮನ್ನು ಹೇಗೆ ಅಪರಾಧಿ ಮಾಡೋಕೆ ಆಗುತ್ತೆ – ಶೋಭಾ

    ವಿಜಯಪುರ: ನಿಮ್ಮದೇ ಲೋಕಾಯುಕ್ತ, ನಿಮ್ಮ ಅಧಿಕಾರಿಗಳು ನಿಮ್ಮನ್ನು ಹೇಗೆ ಅಪರಾಧಿ ಮಾಡಲು ಸಾಧ್ಯ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಪ್ರಶ್ನಿಸಿದರು.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಲೋಕಾಯುಕ್ತದಿಂದ ಸಿಎಂ ವಿಚಾರಣೆ ವಿಚಾರವಾಗಿ ಮಾತನಾಡಿದ ಅವರು, 2013ರಲ್ಲಿ ಲೋಕಾಯುಕ್ತ ಬಂದ್ ಮಾಡಿದ್ಯಾಕೆ? ನಿಮ್ಮ ಮೇಲಿನ ಕೇಸ್ ಮುಚ್ಚಿ ಹಾಕುವ ಸಲುವಾಗಿ ಲೋಕಾಯುಕ್ತವನ್ನು ಮುಚ್ಚಿ ಹಾಕಿದ್ದೀರಿ. ಲೋಕಾಯುಕ್ತದಿಂದ ನ್ಯಾಯ ಸಿಗಲು ಸಾಧ್ಯವಿಲ್ಲ. ವಿಚಾರಣೆ ಮಾಡುವವರು, ಮಾಹಿತಿ ಪಡೆಯುವವರು ಎಲ್ಲರೂ ನಿಮ್ಮವರೆ. ಕೆಲ ಫೈಲ್‌ಗಳನ್ನು ಸುಡಲಾಗಿದೆ. ಕೆಲ ಫೈಲ್ ತಿದ್ದುಪಡಿಯಾಗಿವೆ. ಮುಡಾದಲ್ಲಿ ಸಾವಿರ ಕೋಟಿ ರೂ. ಅವ್ಯವಹಾರ ಎಂದು ಮಾಹಿತಿ ಇದೆ. ನಿಮ್ಮದೇ ಲೋಕಾಯುಕ್ತ, ನಿಮ್ಮ ಅಧಿಕಾರಿಗಳು ನಿಮ್ಮನ್ನ ಹೇಗೆ ಅಪರಾಧಿ ಮಾಡೋಕಾಗುತ್ತದೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

    ಸಿಎಂ ಸಿದ್ದರಾಮಯ್ಯನವರೇ (CM Siddaramaiah) ಮೊದಲು ರಾಜೀನಾಮೆ ನೀಡಿ, ರಾಜೀನಾಮೆ ಕೊಟ್ಟು ನೀವು ವಿಚಾರಣೆಯನ್ನು ಎದುರಿಸಿ, ಇಡಿ ಎದುರು ಫೈಲ್ ಕಳೆದು ಹೋಗಿದೆ ಎಂದಿದ್ದಾರೆ. ಇನ್ನೂ ಬೈರತಿ ಮೇಲೆ, ಸಿಎಂ, ಸಿಎಂ ಪತ್ನಿ ಮೇಲೆ ಕ್ರಮವಾಗಬೇಕು. ನೀವು ನಿರಪರಾಧಿ ಅಲ್ಲ. ರಾಜೀನಾಮೆ ಕೊಡಿ ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಪ್ರಧಾನಿ ಮೋದಿ, ಅವರ ಶಿಷ್ಯಂದಿರಿಗೆ ಅಭಿವೃದ್ದಿ ಬೇಕಿಲ್ಲ: ಬೋಸರಾಜು

    ಮುಡಾ ಕೇಸ್ ಸಿಬಿಐಗೆ ಕೊಡಬೇಕು. ಅಪರಾಧಿ ಅಲ್ಲ ಎಂದರೆ ಸತ್ಯ ಹೊರಗೆ ಬರುತ್ತದೆ. ಸಿಬಿಐ ಎದುರು ವಿಚಾರಣೆ ಎದುರಿಸಿ, ಅದು ವಕ್ಫ್ ನೋಟಿಸ್ ಕೊಟ್ಟಂತೆ ಅಲ್ಲಾ. ಡಿಜಿಟಲೀಕರಣಕ್ಕೆ 300 ಕೋಟಿ ರೂ. ಕೊಟ್ಟಿದ್ದು ಸರಿ ಇದೆ. ಆದರೆ ಆ ಹಣವನ್ನು ವಕ್ಫ್ ಆಸ್ತಿ ಮಾರಾಟ ಮಾಡಿ ಪಡೆದುಕೊಂಡಿದ್ದಾರೆ. ವಕ್ಫ್ ಆಸ್ತಿ ಮುಸ್ಲಿಂ ಮುಖಂಡರ ಪಾಲಾಗಿದೆ. ಖರ್ಗೆ ಕುಟುಂಬ, ಹ್ಯಾರಿಸ್, ಜಮೀರ್ ಕುಟುಂಬದ ಹೆಸರಿದೆ. ಇದೆ ಕಾರಣಕ್ಕೆ ಈ ವಿಚಾರಗಳು ಬರುತ್ತಿವೆ. ವಿಜಯಪುರದಲ್ಲಿ (Vijayapura) ರೈತರಿಗೆ ನೋಟಿಸ್ ಕೊಟ್ಟಂತೆ ದೇಶದೆಲ್ಲೆಡೆ ಕೊಟ್ಟಿದ್ದೀರಿ. ನಿಮ್ಮ ಟ್ರಿಬ್ಯುನಲ್ ಎದುರು ನಾವು ಕೈಕಟ್ಟಿ ನಿಲ್ಲಬೇಕು. 5 ಲಕ್ಷ ಎಕರೆ ಇದ್ದದ್ದು, 9.5 ಲಕ್ಷ ಎಕರೆ ಆಗಿದೆ, ಅದು ಹೇಗೆ? ಯಾವ ಅಲ್ಲಾನ ಭಕ್ತ ದಾನ ಕೊಟ್ಟ ಹೇಳಿ ಎಂದು ಪ್ರಶ್ನಿಸಿದ್ದಾರೆ.

    ಇದೇ ವೇಳೆ ಬೆಳಗಾವಿಯಲ್ಲಿ ತಹಶೀಲ್ದಾರ್ ಕಚೇರಿ ಅಧಿಕಾರಿ ಆತ್ಮಹತ್ಯೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ಪದೇ ಪದೇ ಅಧಿಕಾರಿಗಳ ಆತ್ಮಹತ್ಯೆ ನಡೆಯುತ್ತಿವೆ. ತಮ್ಮ ಸುತ್ತಮುತ್ತ ಕಮೀಷನ್ ಏಜೆಂಟರನ್ನು ಇಟ್ಟುಕೊಂಡಿದ್ದಾರೆ. ಬಹಳ ಜನ ಅಧಿಕಾರಿಗಳು ಬಲಿಯಾಗಿದ್ದಾರೆ. ಕೆಲವರು ಸಹವಾಸವೇ ಬೇಡ ಎಂದು ಕೆಲಸವನ್ನೇ ಬಿಟ್ಟು ಹೋಗ್ತಿದ್ದಾರೆ. ರಾಜ್ಯದಲ್ಲಿ ತಹಶೀಲ್ದಾರ್ ಕಚೇರಿಗಳು, ಕಮೀಷನ್ ಏಜೆಂಟರ್ ಕಚೇರಿಯಾಗಿವೆ. ನೀವೇ ಕಚೇರಿಗಳನ್ನ ಕಮೀಷನ್ ಕಚೇರಿ ಮಾಡಿದ್ದೀರಿ. ಹೆಬ್ಬಾಳ್ಕರ್ ತಪ್ಪು ಮಾಡಿ ಹೀಗೆ ಹೇಳಿಕೊಳ್ಳುತ್ತಿದ್ದಾರೆ. ಈಗ ನನಗೆ ಸಂಬAಧ ಇಲ್ಲ ಎನ್ನುತ್ತಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅವರ ಪಿಎ ಮಂಪರು ಪರೀಕ್ಷೆ ಆಗಬೇಕು ಎಂದು ಹೇಳಿದರು.ಇದನ್ನೂ ಓದಿ: ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ಜಯ ನಿಶ್ಚಿತ: ಎಂಡಿ ಲಕ್ಷ್ಮೀನಾರಾಯಣ

  • ಪಂಚ ಗ್ಯಾರಂಟಿಯಿಂದ ಸಚಿವರಿಗೆ ಎಲ್ಲಿ ಹಣ ತಿನ್ನಬೇಕು ಅನ್ನೋದು ಗೊತ್ತಾಗುತ್ತಿಲ್ಲ- ಯತ್ನಾಳ್ ವ್ಯಂಗ್ಯ

    ಪಂಚ ಗ್ಯಾರಂಟಿಯಿಂದ ಸಚಿವರಿಗೆ ಎಲ್ಲಿ ಹಣ ತಿನ್ನಬೇಕು ಅನ್ನೋದು ಗೊತ್ತಾಗುತ್ತಿಲ್ಲ- ಯತ್ನಾಳ್ ವ್ಯಂಗ್ಯ

    ವಿಜಯಪುರ: ಪಂಚ ಗ್ಯಾರಂಟಿಯಿಂದ (Guarantees) ಸಚಿವರಿಗೆ ಎಲ್ಲಿ ಹಣ ತಿನ್ನಬೇಕು ಅನ್ನೋದು ಗೊತ್ತಾಗುತ್ತಿಲ್ಲ. ಗ್ಯಾರಂಟಿ ಕೊಟ್ಟ ಮೇಲೆ ಕಾಂಗ್ರೆಸ್ ಸರ್ಕಾರದ್ದೆ ಗ್ಯಾರಂಟಿ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ (Basanagouda Patil Yatnal) ಯತ್ನಾಳ್ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ತಿಮ್ಮಾಪುರ್ ವರ್ಗಾವಣೆ ಭ್ರಷ್ಟಾಚಾರ ವಿಚಾರವಾಗಿ, ಕಾಂಗ್ರೆಸ್ ಸರ್ಕಾರ (Congress Governmnet) ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಾಡಿದೆ. ಪಂಚ ಗ್ಯಾರಂಟಿಯಿಂದ ಸಚಿವರಿಗೆ ಎಲ್ಲಿ ಹಣ ತಿನ್ನಬೇಕು ಎಂದು ಗೊತ್ತಾಗುತ್ತಿಲ್ಲ. ಅಬಕಾರಿ ಇಲಾಖೆ ಹೊರತಾಗಿ ಸಚಿವರಿಗೆ ಮತ್ತೊಂದು ಸೋರ್ಸ್ ಇಲ್ಲ. ಅಬಕಾರಿ ಇಲಾಖೆಯ (Departmnet Of Excise) ವರ್ಗಾವಣೆಯಲ್ಲಿ ದೊಡ್ಡ ಉದ್ಯೋಗ ಹುಟ್ಟಿಕೊಂಡಿದೆ. ಏಕೆಂದರೆ ಅವರಿಗೆ ಗ್ಯಾರಂಟಿ ಇಲ್ಲ. ಗ್ಯಾರಂಟಿ ಕೊಟ್ಟ ಮೇಲೆ ಅವರ ಸರ್ಕಾರದ್ದೆ ಗ್ಯಾರಂಟಿ ಇಲ್ಲ ಎಂದು ಹೇಳಿದರು.ಇದನ್ನೂ ಓದಿ: Kamala, you’re fired – ಮಧ್ಯರಾತ್ರಿ 2:15 ಕ್ಕೆ ಕೊನೆಯ ಪ್ರಚಾರದಲ್ಲಿ ಗುಡುಗಿದ ಟ್ರಂಪ್‌

    ಸಿಎಂ ಸಿದ್ದರಾಮಯಯ್ಯಗೆ (CM Siddaramaiah) ಎಷ್ಟು ದಿನ ಮುಂದುವರೆಯುತ್ತೇನೆ ಎನ್ನುವ ಗ್ಯಾರಂಟಿ ಇಲ್ಲ, ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಏನೂ ಸಿಗುತ್ತಿಲ್ಲ ಹೀಗಾಗಿ ಹತಾಶರಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದರಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಶೇ.90 ರಷ್ಟು ಭ್ರಷ್ಟಾಚಾರ ಇದೆ. ಆಗ ನಮ್ಮದು ಶೇ.40 ರಷ್ಟು ಭ್ರಷ್ಟಾಚಾರ ಇದೆ ಎಂದು ಹೇಳುತ್ತಿದ್ದರು. ಜೊತೆಗೆ ಬಿಜೆಪಿ ಮೇಲೆ ಪೇಸಿಎಂ ಎಂದು ಆರೋಪ ಮಾಡುತ್ತಿದ್ದರು. ಆದರೆ ಯಾಕೆ ತನಿಖೆ ಮಾಡಲಿಲ್ಲ? ತನಿಖೆ ಮಾಡಿ ಸಾಬೀತು ಮಾಡುವುದಕ್ಕೆ ಆಗಲಿಲ್ಲ ಎಂದು ಪ್ರಶ್ನಿಸಿದರು.

    ಬೆಂಗಳೂರಲ್ಲಿ ಜಾಗಗಳ ಎನ್‌ಎ ಮಾಡಲು ಭ್ರಷ್ಟಾಚಾರ ಮಾಡಿದ್ದಾರೆ. ಎನ್‌ಎ ಮಾಡಲು ಡಿಕೆಶಿಗೆ ಹಣ ಕೊಡಬೇಕು. ಚದರ ಅಡಿಗೆ 75 ರಿಂದ 100 ರೂ. ಕೊಡಬೇಕು. ಡಿಕೆಶಿ (DCM DK Shivakumar) ಕ್ಯಾಲ್ಕುಲೇಟರ್ ತೆಗೆದುಕೊಂಡು ಕೂತಿರುತ್ತಾನೆ ಎಂದು ಆರೋಪಿಸಿದ್ದಾರೆ.

    ಇದೇ ವೇಳೆ ತಹಶಿಲ್ದಾರ್ ಕಚೇರಿ ಎಸ್‌ಡಿಎ ಆತ್ಮಹತ್ಯೆಯಲ್ಲಿ ಹೆಬ್ಬಾಳ್ಕರ್ (Lakshmi Hebbalkar) ಪಿಎ ಹೆಸರು ಬರೆದಿಟ್ಟ ವಿಚಾರವಾಗಿ ಮಾತನಾಡಿ, ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಬಹಳಷ್ಟು ದೂರುಗಳಿವೆ. ಭ್ರಷ್ಟಾಚಾರದ ತುತ್ತ ತುದಿಯಲ್ಲಿದ್ದಾರೆ. ಹಿಂದೆ ಮಾಡಿದ ಪಾಪದ ಫಲ ಈಗ ಕಾಡುತ್ತಿದೆ. ಈಶ್ವರಪ್ಪ ರಾಜೀನಾಮೆ ಕೊಡುವಂತೆ ಮಾಡಿದ ಪಾಪದ ಕೊಡ ತುಂಬಿ ಈಗ ಬೆನ್ನು ಹತ್ತಿದೆ. ಬೆಳಗಾವಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಐದಾರು ಸಾವಿರ ರೂ. ಕೆಲಸಕ್ಕೂ ಲಂಚ ಕೊಡಬೇಕಿದೆ. ಪಿಎ ಹೆಸರು ಬರೆದಿರುವುದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಹೊಣೆ. ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Pushpa 2: ಅಲ್ಲು ಅರ್ಜುನ್‌ ಜೊತೆ ಶ್ರೀಲೀಲಾ ಡ್ಯಾನ್ಸ್?‌

  • ರೈತರ ಜಮೀನಿಗೆ ವಕ್ಫ್ ನೋಟಿಸ್ – ಸಿಎಂ ಮುಂದೆ 6 ಬೇಡಿಕೆಯಿಟ್ಟ ಶೋಭಾ ಕರಂದ್ಲಾಜೆ

    ರೈತರ ಜಮೀನಿಗೆ ವಕ್ಫ್ ನೋಟಿಸ್ – ಸಿಎಂ ಮುಂದೆ 6 ಬೇಡಿಕೆಯಿಟ್ಟ ಶೋಭಾ ಕರಂದ್ಲಾಜೆ

    ಬೆಂಗಳೂರು/ವಿಜಯರಪುರ: ಕರ್ನಾಟಕದ ವಿಜಯಪುರ (Vijayapura) ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ವಕ್ಫ್ ಹೆಸರಲ್ಲಿ ರೈತರಿಗೆ ಕೊಟ್ಟ ನೋಟಿಸ್‌ಗಳನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಆರು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು (Shoba Karandlaje) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಆಗ್ರಹಿಸಿದ್ದಾರೆ.

    ವಕ್ಫ್ ಹೆಸರಲ್ಲಿ ರೈತರಿಗೆ ಕೊಟ್ಟ ನೋಟಿಸ್‌ಗಳನ್ನು ತಕ್ಷಣ ವಾಪಸ್ ಪಡೆಯಬೇಕು, ರೈತರು ಮತ್ತು ಮಠ ಮಂದಿರಗಳ ಪಹಣಿಯಲ್ಲಿ ವಕ್ಫ್ ಎಂದು ನಮೂದಿಸಿದನ್ನು ತಗೆದು ಹಾಕಿ, ಮೂಲ ಭೂಮಾಲೀಕರ ಹೆಸರನ್ನು ಮತ್ತೆ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಬಿಷ್ಣೋಯ್ ಹೆಸರಲ್ಲಿ ಸಲ್ಮಾನ್‌ ಖಾನ್‌ಗೆ ಬೆದರಿಕೆ – ತುಮಕೂರಲ್ಲಿ ಆರೋಪಿ ಅರೆಸ್ಟ್‌

    ಕರ್ನಾಟಕ (Karanataka) ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ವಕ್ಫ್ ಇಲಾಖೆ ವತಿಯಿಂದ, ಜಮೀನನ್ನು ಅತಿಕ್ರಮಣ ಮಾಡುವುದು ಮತ್ತು ರೈತರಿಗೆ ನೋಟಿಸ್ ಕೊಡುವುದು ಆರಂಭವಾಗಿದೆ. ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಸಲುವಾಗಿ ಜೆ.ಪಿ.ಸಿ ನೇಮಕ ಮಾಡಿದ್ದಾರೆ. ನಂತರ ಕರ್ನಾಟಕ ರಾಜ್ಯದಲ್ಲಿ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್‌ರವರು ವಕ್ಫ್ ಅದಾಲತ್‌ನ್ನು ತರಾತುರಿಯಲ್ಲಿ ನಡೆಸಿದ್ದಾರೆ. ಈ ಮೂಲಕ ಕಂದಾಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸಾವಿರಾರು ರೈತರ ಜಮೀನು, ಮಠಗಳು, ದೇವಸ್ಥಾನಗಳು ಮತ್ತು ಪುರಾತತ್ವ ಇಲಾಖೆಯ ಜಾಗಗಳಿಗೆ ನೋಟಿಸ್‌ಗಳನ್ನು ಜಾರಿ ಮಾಡಿ, ಹಲವಾರು ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿಯೆಂದು (Waqf Property) ನಮೂದಾಗಿದೆ.

    ವಿಜಯಪುರ ಜಿಲ್ಲೆಯಲ್ಲಿ 15 ಸಾವಿರ ಎಕರೆಗಿಂತಲೂ ಹೆಚ್ಚು ರೈತರ ಜಮೀನನ್ನು ವಕ್ಫ್ ಆಸ್ತಿಯೆಂದು ನಮೂದಿಸಲಾಗಿದೆ. ವಿಜಯಪುರದ ಜಿಲ್ಲಾಧಿಕಾರಿ ಕಚೇರಿ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಜಿಲ್ಲಾಸ್ಪತ್ರೆ, ಸಿಂದಗಿಯ ವಿರಕ್ತ ಮಠ, ಸೋಮೇಶ್ವರ ದೇವಸ್ಥಾನ ರಾಜ್ಯದ ಇತರೆ ಭಾಗಗಳಲ್ಲಿ ಕುರುಬರ ಆರಾಧ್ಯದೈವ ಭೀರದೇವರ ದೇವಸ್ಥಾನ, ಮಂಡ್ಯದ ಚಿಕ್ಕಮ್ಮ ದೇವಸ್ಥಾನ, ಹಾವೇರಿಯ ಆಂಜನೇಯ ದೇವಸ್ಥಾನ, ಕೊಪ್ಪಳದ ಅಂಜನಾದ್ರಿ ಬೆಟ್ಟ, ಹಂಪಿಯ ಹಲವಾರು ಪ್ರದೇಶಗಳು, ಕಲಬುರಗಿ, ಯಾದಗಿರಿ, ಬೀದರನ ಹಲವಾರು ಪ್ರಸಿದ್ಧ ಸ್ಥಳಗಳನ್ನು ವಕ್ಫ್ ಆಸ್ತಿ ಎಂದು ಘೋಷಿಸಿರುವುದು ಖಂಡನೀಯ ಎಂದಿದ್ದಾರೆ.

    ನಿಮ್ಮ ಸಚಿವ ಸಂಪುಟದ ಸಹೋದ್ಯೋಗಿ ಜಮೀರ್ ಅಹ್ಮದ್ ಖಾನ್‌ರವರು (Zameer Ahmed Khan) ಮತಾಂಧ ಭಾಷಣಗಳನ್ನು ಮಾಡುತ್ತಾ, ಅಲ್ಲಾನ ಸಲುವಾಗಿ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆಂದು ಸಾರ್ವಜನಿಕವಾಗಿ ಹೇಳುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳಿಗೆ ಧಮ್ಕಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಚಾಲುಕ್ಯರು, ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನಗಳನ್ನು, 12ನೇ ಶತಮಾನದಲ್ಲಿ ಕಿತ್ತೂರು ರಾಣಿ ಚನ್ನಮ್ಮರವರು ಮಠಗಳಿಗೆ ದಾನ ಕೊಟ್ಟಿದ್ದ ಜಮೀನು ವಕ್ಫ್ ಆಸ್ತಿಯಾಗಲು ಹೇಗೆ ಸಾಧ್ಯ? ಇದರ ಹಿಂದೆ ಇರುವ ಹುನ್ನಾರವೇನು? ಎಂದು ಪ್ರಶ್ನಿಸಿದ್ದಾರೆ.

    ಸಿಎಂ ಮುಂದಿಟ್ಟ ಆರು ಬೇಡಿಕೆಗಳು ಯಾವವು?

    • ಕರ್ನಾಟಕದ ವಿಜಯಪುರ ಜಿಲ್ಲೆ ಸೇರಿ ಬೇರೆ ಬೇರೆ ಜಿಲ್ಲೆಗಳಲ್ಲಿ ವಕ್ಫ್ ಹೆಸರಲ್ಲಿ ರೈತರಿಗೆ ಕೊಟ್ಟ ನೋಟಿಸ್‌ಗಳನ್ನು ತಕ್ಷಣ ವಾಪಸ್ ಪಡೆಯಬೇಕು.
    • ರೈತರು ಮತ್ತು ಮಠ ಮಂದಿರಗಳ ಪಹಣಿಯಲ್ಲಿ ವಕ್ಫ್ ಎಂದು ನಮೂದಿಸಿರುವುದನ್ನು ತೆಗೆದು ಹಾಕಿ, ಮೂಲ ಭೂಮಾಲೀಕರ ಹೆಸರನ್ನು ಮತ್ತೆ ಸೇರ್ಪಡೆ ಮಾಡಬೇಕು. 1974ರ ರಾಜ್ಯ ಪತ್ರ ಮತ್ತು ನಂತರದ ಸಂಬಂಧಿತ ಎಲ್ಲ ರಾಜ್ಯ ಪತ್ರಗಳನ್ನು ರದ್ದುಪಡಿಸಬೇಕು.
    • ಕಾನೂನು ಬಾಹಿರವಾಗಿ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿರುವುದನ್ನು ಪರಿಶೀಲಿಸಿ, ಕರ್ನಾಟಕ ಭೂ ಕಂದಾಯ ಅಧಿನಿಯಮದಂತೆ, ಸದರಿ ನಮೂದನ್ನು ತೆಗೆದು ಹಾಕಲು ತ್ವರಿತವಾಗಿ ಕ್ರಮವಹಿಸಲು ಕಂದಾಯ ಇಲಾಖೆಗೆ ಸೂಚನೆ ನೀಡಬೇಕು.
    • ಮುಂದುವರೆದು, ನಿಯಮಬಾಹಿರವಾಗಿ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲು ಮೌಖಿಕ ಆದೇಶ ನೀಡಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ಕೈಬಿಡಬೇಕು. ಸಚಿವರ ಮೌಖಿಕ ಆದೇಶ ಪಾಲಿಸಿ ಕಾನೂನು ಬಾಹಿರವಾಗಿ ರೈತರ ಜಮೀನುಗಳ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು.
    • ದಿಶಾಂಕ್ ಆಪ್‌ಲ್ಲಿ ತಪ್ಪು ನಮೂದುಗಳನ್ನು ರದ್ದು ಮಾಡಿ, ಸಾರ್ವಜನಿಕರು ಮತ್ತು ಅಧಿಕಾರಿಗಳು ಪರಿಶೀಲನೆ ಮಾಡಿದ ತರುವಾಯ ಜನರಿಗೆ ನಿಖರ ಮಾಹಿತಿ ನೀಡಬೇಕು ಹಾಗೂ ದಿಶಾಂಕ್ ಆಪ್ ಮತ್ತು ಭೂಮಿ ತಂತ್ರಾಂಶದ ಸರ್ವರ್ ನಿಷ್ಕ್ರಿಯ ಆಗಿರುವುದನ್ನು ತಕ್ಷಣ ಸರಿ ಮಾಡಬೇಕು.
    • ವಕ್ಫ್ ಜಮೀನಿನಲ್ಲಿ ಆದ ಅಕ್ರಮದ ಬಗ್ಗೆ, ಅನ್ನರ ಮಾಣಿಪ್ಪಾಡಿ ವರದಿ ನೀಡಿದ್ದಾರೆ. ಈ ವರದಿಯಲ್ಲಿ ಕಂಡು ಬಂದ ಅಕ್ರಮಗಳ ಬಗ್ಗೆ ತನಿಖೆಯಾಗಬೇಕು. ಈ ಬಗ್ಗೆ ತಕ್ಷಣ ಅವಶ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಯಾವ ಕ್ಷೇತ್ರವೂ ರಾಜಕಾರಣಿಗಳ ಭದ್ರಕೋಟೆ ಅಲ್ಲ, ಜನರ ಭದ್ರಕೋಟೆ: ಮಹದೇವಪ್ಪ

  • ದೇಶವನ್ನು ಕಾಡುತ್ತಿದೆ ಡಿಜಿಟಲ್‌ ಅರೆಸ್ಟ್‌ ಎಂಬ ʻಭೂತʼ – ಪ್ರಧಾನಿ ನೀಡಿದ ಎಚ್ಚರಿಕೆ ಸಂದೇಶವೇನು? ಕೇಂದ್ರದ ಮಾರ್ಗಸೂಚಿ ಏನು?

    ದೇಶವನ್ನು ಕಾಡುತ್ತಿದೆ ಡಿಜಿಟಲ್‌ ಅರೆಸ್ಟ್‌ ಎಂಬ ʻಭೂತʼ – ಪ್ರಧಾನಿ ನೀಡಿದ ಎಚ್ಚರಿಕೆ ಸಂದೇಶವೇನು? ಕೇಂದ್ರದ ಮಾರ್ಗಸೂಚಿ ಏನು?

    ತಂತ್ರಜ್ಞಾನ ಬೆಳೆದಂತೆ, ಡಿಜಿಟಲ್ ವಹಿವಾಟು ಹೆಚ್ಚುತ್ತಿದ್ದಂತೆ ಆನ್‌ಲೈನ್ ವಂಚನೆಯೂ ಹೆಚ್ಚಾಗುತ್ತಿದೆ. ವಂಚಕರು ನೇರವಾಗಿ ಬ್ಯಾಂಕ್‌ ಖಾತೆಗೆ (Bank Account) ಕನ್ನ ಇಡಲು ಶುರು ಮಾಡಿದ್ದಾರೆ. ಗಾಯಕರು, ಚಿತ್ರ ನಟರು, ಅಷ್ಟೇ ಯಾಕೆ ನಮ್ಮ ಪ್ರಧಾನಿ ಮೋದಿ ಹೆಸರಿನಲ್ಲೂ ವಂಚನೆ ಮಾಡೋದಕ್ಕೆ ಶುರು ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಬಿಡುಗಡೆಯಾದ ವಿಶ್ವ ಸೈಬರ್‌ ಅಪರಾಧ ಸೂಚ್ಯಂಕವು ಭಾರತ ಜಾಗತಿಕ ಮಟ್ಟದಲ್ಲಿ 10ನೇ ಸ್ಥಾನದಲ್ಲಿದೆ ಎಂಬುದನ್ನು ತೋಓರಿಸಿದೆ. ಸೈಬರ್‌ ಅಪರಾಧದ ಮೂಲ ಹಾಗೂ ಯಾವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಸೈಬರ್‌ ಅಪರಾಧಗಳು ಘಟಿಸುತ್ತವೆ ಎಂಬುದನ್ನು ಪತ್ತೆ ಹಚ್ಚಲು ಆಕ್ಸ್‌ಫರ್ಡ್‌ ವಿವಿ, ನ್ಯೂ ಸೌತ್‌ ವೇಲ್ಸ್‌ ವಿವಿ, ಮೊನಾಶ್‌ ವಿವಿ ಹಾಗೂ ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಯಾದ ಸೈನ್ಸ್‌ ಪೊ ನಡೆಸಿದ ಅಧ್ಯಯನ ಇದಾಗಿದೆ. ಇದೀಗ ಡಿಜಿಟಲ್‌ ಅರೆಸ್ಟ್‌, ಇತರ ಸೈಬರ್‌ ವಂಚನೆ ಮುನ್ನೆಲೆಗೆ ಬಂದಿದ್ದಕ್ಕೆ ಕಾರಣವೂ ಇದೆ.

    ಇತ್ತೀಚೆಗೆ ಡಿಜಿಟಲ್ ಅರೆಸ್ಟ್ ಮತ್ತು ಇತರ ಸೈಬರ್ ವಂಚನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ತಮ್ಮ ʻಮನದ ಮಾತು’ ಬಾನುಲಿ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿರುವುದು ಎಷ್ಟು ಗಂಭೀರ ಎಂಬುದನ್ನು ಸೂಚಿಸುತ್ತದೆ. 2 ವರ್ಷಗಳ ಹಿಂದೆ ಡಿಜಿಟಲ್ ಅರೆಸ್ಟ್ ನಮಗೆ ಗೊತ್ತೇ ಇಲ್ಲದ ಮತ್ತು ನಂಬಲು ಕೂಡ ಸಾಧ್ಯವಿಲ್ಲದ ಸಂಗತಿಯಾಗಿತ್ತು. ಆದರೆ ಈಗ, ಡಿಜಿಟಲ್ ಅರೆಸ್ಟ್ ಎಂಬುದು ನಿಜಜೀವನದ ದೊಡ್ಡ ಬೆದರಿಕೆಯಾಗಿದೆ. ಪ್ರಧಾನಿಯೇ ಎಚ್ಚರಿಕೆ ನೀಡುವಷ್ಟು ಗಂಭೀರವೂ ಆಗಿದೆ. ವಂಚಕರು ಪೊಲೀಸ್, ಸಿಬಿಐ, ಡ್ರಗ್ಸ್ ತಡೆ ಘಟಕ ಮತ್ತು ಕೆಲವೊಮ್ಮೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕಾರಿಗಳ ಹೆಸರು ಹೇಳಿಕೊಂಡು ವಂಚಿಸಲು ಯತ್ನಿಸುತ್ತಾರೆ. ಅವರು ಒಡ್ಡುವ ಮಾನಸಿಕ ಒತ್ತಡ ಎಷ್ಟಿರುತ್ತದೆ ಎಂದರೆ ಸಂತ್ರಸ್ತರು ದಿಗಿಲುಗೊಳ್ಳುತ್ತಾರೆ ಎಂದು ಪ್ರಧಾನಿ ಹೇಳಿದ್ದಾರೆ. ಭಾರತ ಮಾತ್ರವಲ್ಲದೇ ಇಡೀ ವಿಶ್ವದ ವಿವಿಧ ರಾಷ್ಟ್ರಗಳಲ್ಲೂ ಇಂತಹ ಸೈಬರ್‌ ಅಪರಾಧ ನಡೆಯುತ್ತಿದೆ.

    ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜನರು ಡಿಜಿಟಲ್ ಅರೆಸ್ಟ್‌ನಿಂದಾಗಿ (Digital Arrest) ಸುಮಾರು 120 ಕೋಟಿ ರೂ. ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಡಿಜಿಟಲ್ ಅರೆಸ್ಟ್ ಮಾತ್ರವಲ್ಲ, ‘ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ’ (ಕೆವೈಸಿ) ಪರಿಷ್ಕರಣೆ, ಬ್ಯಾಂಕ್ ಖಾತೆ, ಷೇರು ವಹಿವಾಟು, ಹೂಡಿಕೆ ಇತ್ಯಾದಿ ಹೆಸರಿನಲ್ಲಿ ಕೂಡ ವಂಚನೆ ನಡೆಯುತ್ತಿದೆ. ವಿದ್ಯಾವಂತರು ಮತ್ತು ತಿಳಿವಳಿಕೆಯುಳ್ಳವರು ಸಹ ಸೈಬರ್ ವಂಚನೆಯ ಸಂತ್ರಸ್ತರಾಗಿದ್ದಾರೆ. ಕೈಗಾರಿಕೋದ್ಯಮಿಯೊಬ್ಬರನ್ನು ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸಿ 7 ಕೋಟಿ ರೂ. ದೋಚಿದ ಘಟನೆಯೂ ನಡೆದಿದೆ. ಜಾಗೃತಿ ಕೊರತೆಯ ಕಾರಣದಿಂದ ಜನರು ವಂಚಕರ ಬಲೆಗೆ ಬೀಳುತ್ತಾರೆ. ಸರ್ಕಾರದ ಕೆಲವು ಸಂಸ್ಥೆಗಳ ಕುರಿತು ಇರುವ ಭಯದಿಂದಾಗಿ ಈ ಸಂಸ್ಥೆಗಳ ಪ್ರತಿನಿಧಿಗಳ ಹೆಸರಿನಲ್ಲಿ ಕರೆ ಮಾಡಿದ ವಂಚಕರಿಗೆ ಜನರು ಪ್ರಶ್ನಿಸದೆಯೇ ಶರಣಾಗಿಬಿಡುತ್ತಾರೆ. ಯಾವೆಲ್ಲ ರೀತಿಯ ಸೈಬರ್‌ ವಂಚನೆಗಳಿಂದ ಜನ ಮೋಸ ಹೋಗುತ್ತಿದ್ದಾರೆ ಎಂಬುದನ್ನು ನೋಡೋಣ… ಅದಕ್ಕೂ ಮುನ್ನ ಡಿಜಿಟಲ್‌ ಅರೆಸ್ಟ್‌ ಎಂದರೇನು ಅನ್ನೋ ಬಗ್ಗೆ ತಿಳಿಯೋಣ…

    ಡಿಜಿಟಲ್ ಅರೆಸ್ಟ್ ಎಂದರೇನು?

    ಡಿಜಿಟಲ್ ಅರೆಸ್ಟ್‌ ಸೈಬರ್ ವಂಚನೆಯ ಹೊಸ ವಿಧಾನವಾಗಿದೆ. ಇದರಲ್ಲಿ ವಂಚಕರು ಕಾನೂನು ಅಧಿಕಾರಿಗಳಂತೆ ಪೋಸ್ ನೀಡುತ್ತಾರೆ ಮತ್ತು ಆಡಿಯೊ ಅಥವಾ ವೀಡಿಯೊ ಕರೆಗಳಲ್ಲಿ ಜನರನ್ನು ಬೆದರಿಸುತ್ತಾರೆ. ಬಂಧನದ ಸುಳ್ಳು ನೆಪದಲ್ಲಿ ಡಿಜಿಟಲ್ ಒತ್ತೆಯಾಳುಗಳನ್ನಾಗಿ ಮಾಡಿ ಹಣ ಪೀಕುತ್ತಾರೆ.

    ಪ್ರಧಾನಿ ತಲುಪಿದ ʻಪಬ್ಲಿಕ್‌ ಟಿವಿʼ ವರದಿ

    ಜಿಲ್ಲೆಯ ಸಂತೋಷ್ ಎಂಬುವವರಿಗೆ ಮುಂಬೈನಿಂದ ಕರೆ ಮಾಡಿ ಬ್ಲ್ಯಾಕ್‌ಮೇಲ್‌ ಮಾಡಿ, ಹೆದರಿಸಿರುವ ಸುದ್ದಿಯನ್ನು ನಿಮ್ಮ `ಪಬ್ಲಿಕ್ ಟಿವಿ’ ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಈ ಸುದ್ದಿ ಪ್ರಧಾನಿ ಮೋದಿಯವರಿಗೆ ತಲುಪಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಕಳೆದ ಅಕ್ಟೋಬರ್‌ 27ರಂದು ನಡೆದ ಮನ್ ಕಿ ಬಾತ್‌ನಲ್ಲಿ ಮಾತನಾಡಿದ್ದರು. ಪ್ರಧಾನಿ ಮೋದಿ ಮನ್ ಕಿ ಬಾತ್‌ನ 115ನೇ ಸಂಚಿಕೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ, ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ ಹಿನ್ನೆಲೆ ದೇಶದ ಜನರಿಗೆ ಜಾಗೃತಿ ಮೂಡಿಸಿದರು. ವಿಜಯಪುರದ ನಿವಾಸಿ ಸಂತೋಷ್ ಎಂಬುವವರಿಗೆ ಮುಂಬೈನಿಂದ ಕರೆ ಮಾಡಿ, ನಾವು ಮುಂಬೈ ಕ್ರೈಂ ಬ್ರ್ಯಾಂಚ್‌ ಪೊಲೀಸರು ಎಂದು ಹೇಳಿ ಬ್ಲ್ಯಾಕ್‌ಮೇಲ್‌ ಮಾಡಿ, ಹೆದರಿಸಿದ್ದರು. ಇದರ ಸಂಪೂರ್ಣ ದೃಶ್ಯವನ್ನು ಸಂತೋಷ್ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಈ ಕುರಿತು ವಿಸ್ತೃತ ವರದಿಯನ್ನು ಪಬ್ಲಿಕ್ ಟಿವಿ ಬಿತ್ತರಿಸಿತ್ತು. ಈ ಸುದ್ದಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು, ಪ್ರಧಾನಿ ಮೋದಿಯವರೆಗೆ ತಲುಪಿತ್ತು. ಇದೇ ಪ್ರಕರಣವನ್ನು ಪ್ರಧಾನಿ ಮೋದಿ ಇತ್ತೀಚೆಗೆ ಉಲ್ಲೇಖಿಸಿ ಮಾತನಾಡಿದರು. ಅಲ್ಲದೇ ಬೆಳಗ್ಗೆ 11 ಗಂಟೆಗೆ ಆರಂಭವಾದ ʻಮೋದಿ ಮನ್ ಕಿ ಬಾತ್ʼನಲ್ಲಿ ಸಂತೋಷ್ ಸೆರೆ ಹಿಡಿದಿದ್ದ ಸಂಪೂರ್ಣ ವಿಡಿಯೋವನ್ನು ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯಿತು.

    3.25 ಲಕ್ಷ ನಕಲಿ ಬ್ಯಾಂಕ್‌ ಖಾತೆ ಸ್ಥಗಿತಕ್ಕೆ ಆದೇಶ

    ಡಿಜಿಟಲ್ ಅರೆಸ್ಟ್‌ಗೆ ಸಂಬಂಧಿಸಿದ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಇವುಗಳ ತನಿಖೆಗಾಗಿ ಕೇಂದ್ರ ಗೃಹ ಸಚಿವಾಲಯವು ಈಗಾಲೇ ಉನ್ನತ ಮಟ್ಟದ ಸಮಿತಿ ರಚಿಸಿದೆ. ಮೂಲಗಳ ಪ್ರಕಾರ, ಸಮಿತಿಯು ಗೃಹ ಸಚಿವಾಲಯದ ಆಂತರಿಕ ಭದ್ರತಾ ಕಾರ್ಯದರ್ಶಿಯ ಮೇಲ್ವಿಚಾರಣೆಯಲ್ಲಿರಲಿದೆ. ಪ್ರಸಕ್ತ ವರ್ಷದಲ್ಲಿ ಈವರೆಗೂ 6,000ಕ್ಕೂ ಹೆಚ್ಚು ಡಿಜಿಟಲ್ ಅರೆಸ್ಟ್‌ ದೂರುಗಳು ದಾಖಲಾಗಿವೆ. ಹಗರಣಕ್ಕೆ ಸಂಬಂಧಿಸಿದಂತೆ 6 ಲಕ್ಷ ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಿದೆ. ಸೈಬರ್ ಅಪರಾಧ ಸಮನ್ವಯ ಕೇಂದ್ರವು ಕನಿಷ್ಠ 709 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ. ಸೈಬರ್ ವಂಚನೆಗೆ ಸಂಬಂಧಿಸಿದ 3.25 ಲಕ್ಷ ನಕಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಮೋಸ ಹೋಗದಿರಲು ಈ ಅಂಶ ಗಮನಿಸಬೇಕು

    * ಕರೆ ಮಾಡಿ ಹಣ ಅಕ್ರಮ ವರ್ಗಾವಣೆ, ಡ್ರಗ್ ಕಳ್ಳಸಾಗಣೆಯಂತಹ ಆರೋಪ ಮಾಡಿದ ಸಂದರ್ಭದಲ್ಲಿ ಆತಂಕ ಗೊಳ್ಳಬೇಡಿ. ನಿಮ್ಮ ಭಯ ಮತ್ತು ಆತುರವನ್ನೇ ವಂಚಕರು ಬಂಡವಾಳವಾಗಿ ಮಾಡಿಕೊಳ್ಳುತ್ತಾರೆ.
    * ಫೋನ್ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ವೈಯಕ್ತಿಕ ಮಾಹಿತಿ, ಬ್ಯಾಂಕ್ ಮಾಹಿತಿಯನ್ನು ಹಂಚಿಕೊಳ್ಳಬೇಡಿ
    * ವಂಚಕರಿಗೆ ಪ್ರತಿಕ್ರಿಯಿಸುವ ಮುನ್ನ ತಾಳ್ಮೆಯಿಂದ ಯೋಚಿಸಿ. ಒತ್ತಡದಲ್ಲಿದ್ದಾಗ ಹಣ ವರ್ಗಾವಣೆ ಮಾಡಬೇಡಿ. ತನಿಖಾ ಸಂಸ್ಥೆಗಳು ತಕ್ಷಣ ಹಣ ವರ್ಗಾವಣೆ ಮಾಡುವಂತೆ ಎಂದಿಗೂ ಒತ್ತಡ ಹೇರುವುದಿಲ್ಲ. ಫೋನ್ ಅಥವಾ ಆನ್‌ಲೈನ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟಲ್ಲಿ ಬಹುತೇಕ ಅದು ಆನ್‌ಲೈನ್ ವಂಚನೆಯೇ ಆಗಿರುತ್ತದೆ
    * ಆನ್‌ಲೈನ್ ವಂಚನೆಯ ಅನುಮಾನ ಬಂದರೆ, ಸಂಬಂಧಿತ ಸಂಸ್ಥೆಗಳನ್ನು ಸಂಪರ್ಕಿಸಿ ಪರಿಶೀಲಿಸಿ ಎಚ್ಚರಿಕೆಯಿಂದ ಇರುವುದು ಆನ್‌ಲೈನ್‌ ವಂಚನೆಯಿಂದ ಪಾರಾಗುವ ಪ್ರಮುಖ ʻಅಸ್ತ್ರʼ.

    ಯಾವ ರೀತಿ ವಂಚನೆ ನಡೆಯುತ್ತೆ?

    * ಆನ್‌ಲೈನ್ ಡೇಟಿಂಗ್ ಆ್ಯಪ್‌ಗಳ ಮೂಲಕ ಪರಿಚಯಿಸಿಕೊಂಡು ಭಾವನಾತ್ಮಕವಾಗಿ ಕಟ್ಟಿಹಾಕಿ, ವೈದ್ಯಕೀಯ ಚಿಕಿತ್ಸೆ ಮತ್ತಿತರ ನೆಪಗಳನ್ನು ಮುಂದಿಟ್ಟುಕೊಂಡು ಹಣ ಪಡೆದು ವಂಚಿಸುತ್ತಾರೆ.
    * ದೊಡ್ಡ ದೊಡ್ಡ ಸ್ಯಾಲರಿ ಆಫರ್‌ಗಳನ್ನು ತೋರಿಸಿ ಉದ್ಯೋಗ ಒದಗಿಸುವ ನೆಪದಲ್ಲಿ ಹಣಕ್ಕೆ ಬೇಡಿಕೆ ಇಡುತ್ತಾರೆ.
    * ತಂತ್ರಜ್ಞಾನ ಕುರಿತ ಬಳಕೆದಾರರ ಸೀಮಿತ ಜ್ಞಾನವನ್ನೇ ಬಂಡವಾಳವಾಗಿ ಮಾಡಿಕೊಂಡು, ಸಂತ್ರಸ್ತರ ಕಂಪ್ಯೂಟರ್‌ನ ಪಾಸ್‌ವರ್ಡ್ ಪಡೆದು ವೈಯಕ್ತಿಕ ಮತ್ತು ಗೌಪ್ಯ ಮಾಹಿತಿ ಕದಿಯುತ್ತಾರೆ.
    * ನಕಲಿ ವೆಬ್‌ಸೈಟ್ ಅಥವಾ ಸಾಮಾಜಿಕ ಜಾಲತಾಣ ಖಾತೆ ತೆರೆದು ವಿಪತ್ತು ಪರಿಹಾರ, ಆರೋಗ್ಯ ನಿಧಿಗೆ ಸಂಬಂಧಿಸಿದ ಕಾರ್ಯಕ್ಕಾಗಿ ದೇಣಿಗೆ ನೀಡುವಂತೆ ಮನವಿ ಮಾಡುತ್ತಾರೆ.
    * ಕೆಲ ವಂಚಕರು ಇ-ಮೇಲ್ ಅಥವಾ ಜಾಲತಾಣಗಳ ಮೂಲಕ ಸಂಪರ್ಕಿಸಿ, ತಪ್ಪಾಗಿ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಿದೆ. ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಬೇಕೆಂದಿದ್ದರೆ ಕೂಡಲೇ ಹಣ ವರ್ಗಾಯಿಸಿ ಎಂದು ಕೇಳುತ್ತಾರೆ.
    * ನಕಲಿ ಆನ್‌ಲೈನ್ ಸ್ಟೋರ್ ಸೃಷ್ಟಿಸಿ ʻಕ್ಯಾಶ್ ಆನ್ ಡೆಲಿವರಿ’ ಅಯ್ಕೆ ನೀಡುತ್ತಾರೆ. ಆದರೆ ವಿಳಾಸಕ್ಕೆ ತಲುಪಿದ ವಸ್ತುವು ನಕಲಿಯಾಗಿರುತ್ತದೆ ಅಥವಾ ಆರ್ಡರ್ ಮಾಡಿದ್ದಕ್ಕಿಂತ ಕಳಪೆಯಾಗಿರುತ್ತದೆ.
    * ಟೆಲಿಕಾಂ ನಿಯಂತ್ರಣ ಸಂಸ್ಥೆ ಹೆಸರಿನಲ್ಲಿ ಸಂತ್ರಸ್ತರಿಗೆ ಕರೆ ಮಾಡಿ, ʻಸೇವೆಯಲ್ಲಿ ಸಮಸ್ಯೆ ತಲೆದೋರಿದೆ. ಅದಕ್ಕಾಗಿ ಗುರುತು ಪರಿಶೀಲನೆಗಾಗಿ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಮತ್ತು ಬ್ಯಾಂಕ್ ಮಾಹಿತಿ ಹಂಚಿಕೊಳ್ಳಿ’ ಎಂದು ಕೇಳುತ್ತಾರೆ. ಹೀಗೆ ಅನೇಕ ರೀತಿಯಲ್ಲಿ ಡಿಜಿಟಲ್‌ ವಂಚಕರು ಹಣ ಪೀಕುತ್ತಿದ್ದಾರೆ.