Tag: ವಿಜಯಪುರ

  • ಕೃಷಿ ವಿಸ್ತೀರ್ಣಾಧಿಕಾರಿಯಿಂದ ಭಾರಿ ವಂಚನೆ – ಬರೋಬ್ಬರಿ 40 ಲಕ್ಷ ಪಂಗನಾಮ

    ಕೃಷಿ ವಿಸ್ತೀರ್ಣಾಧಿಕಾರಿಯಿಂದ ಭಾರಿ ವಂಚನೆ – ಬರೋಬ್ಬರಿ 40 ಲಕ್ಷ ಪಂಗನಾಮ

    ವಿಜಯಪುರ: ಮೊಬೈಲ್‌ಗಳಲ್ಲಿ ಕ್ಲೌಡ್ ಮಾರಾಟ ಮಾಡುವ ಕಂಪನಿ ಹೆಸರಿನಲ್ಲಿ ಸರ್ಕಾರಿ ನೌಕರ ಲಕ್ಷ ಲಕ್ಷ ವಂಚನೆ ಮಾಡಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಯನ್ನು ರವೀಂದ್ರ ಬೆಳ್ಳಿ ಎಂದು ಗುರುತಿಸಲಾಗಿದ್ದು, ನಗರದ ಹೊರವಲಯದಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಸ್ತೀರ್ಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇದನ್ನೂ ಓದಿ:8ನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ: ಯಶ್‌ಗೆ ರಾಧಿಕಾ ಲವ್ಲಿ ವಿಶ್

    ದಿ ಬ್ಯಾಂಕ್ ಎಂಬ ಕಂಪನಿ ಹೆಸರಿನಲ್ಲಿ ಹಣ ಹೂಡಿಕೆ ಮಾಡುವುದಾಗಿ ಬಸವರಾಜ ಜಿರಾಳೆ ಎಂಬುವವರಿಗೆ 40 ಲಕ್ಷ ರೂ. ಹಣ ವಂಚನೆ ಮಾಡಿದ್ದಾರೆ. ಈ ಕುರಿತು ಬಸವರಾಜ ಜಿರಾಳೆ ಅ.17 ರಂದು ವಿಜಯಪುರದ ಜಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರವೀಂದ್ರ ಬೆಳ್ಳಿ ಎ1 ಆರೋಪಿಯಾಗಿದ್ದು, ಒಟ್ಟು 7 ಜನರ ಮೇಲೆ ದೂರು ದಾಖಲಿಸಿದ್ದಾರೆ.

    ದಿ ಬ್ಯಾಂಕ್ ಎಂಬ ಕಂಪನಿ ಮೊಬೈಲ್ ಸ್ಟೋರೇಜ್‌ಗಾಗಿ ಕ್ಲೌಡ್ ಸೇಲ್ಸ್ ಮಾಡುತ್ತದೆ. ಇದೊಂದು ಚೈನ್ ಸಿಸ್ಟಮ್ ವ್ಯಾಪಾರವಾಗಿದ್ದು, ದೂರುದಾರರಿಂದ 40 ಲಕ್ಷ ರೂ.ಗಳನ್ನು ಹೂಡಿಕೆಗಾಗಿ ಪಡೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ರವೀಂದ್ರ ಬೆಳ್ಳಿ ಅವರ ಬಳಿ ಕೇಳಿದರೆ ನಾನು ದಿ ಬ್ಯಾಂಕ್‌ನಲ್ಲಿ ಕೆಲಸ ಮಾಡಿದ್ದು ನಿಜ. ನಾನೂ ಇದರಲ್ಲಿ ಹಣ ಹೂಡಿಕೆ ಮಾಡಿದ್ದೇನೆ. ಬಸವರಾಜ ಅವರಿಂದ ಯಾವುದೇ ಹಣ ಪಡೆದಿಲ್ಲ. ಅವರು ನನಗೂ ಹಣ ಮರಳಿ ನೀಡಿಲ್ಲ ಎಂದು ಹೇಳುತ್ತಿದ್ದಾರೆ.

    ಈಗಾಗಲೇ ರವೀಂದ್ರ ಅವರ ಮೇಲೆ ಎಫ್‌ಐಆರ್ ದಾಖಲಾಗಿ ಎರಡು ತಿಂಗಳುಗಳು ಕಳೆದಿದೆ. ಆದರೆ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಜೊತೆಗೆ ಎಫ್‌ಐಆರ್ ದಾಖಲಾದರೂ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ಯಾವುದೆ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಇದರ ಹಿಂದೆಯೂ ಹಿರಿಯ ಅಧಿಕಾರಿಗಳ ಕೈವಾಡ ಇದೆ ಎಂದು ಅನುಮಾನ ವ್ಯಕ್ತವಾಗಿದೆ. ಈ ಪ್ರಕರಣದ ತನಿಖೆ ನಡೆಸಿದರೆ ಮತ್ತಷ್ಟು ಸರ್ಕಾರಿ ನೌಕರರ ಕರಾಳ ದಂಧೆ ಹೊರಬೀಳಬಹುದು ಎನ್ನಲಾಗುತ್ತಿದೆ.ಇದನ್ನೂ ಓದಿ: ಬಾಂಗ್ಲಾದೇಶದವರಿಗೂ ರಾಜ್ಯದಲ್ಲಿ BPL ಕಾರ್ಡ್ ಕೊಡಲಾಗಿದೆ: ಸಿ.ಟಿ ರವಿ

  • 5 ಲಕ್ಷ ಹೆಕ್ಟರ್ ತೊಗರಿ ಹೂ ಬಿಡದೇ ಸರ್ವನಾಶ – ಬೆಳೆ ಹಾನಿ ಸಮೀಕ್ಷೆಗೆ ರೈತರ ಒತ್ತಾಯ

    5 ಲಕ್ಷ ಹೆಕ್ಟರ್ ತೊಗರಿ ಹೂ ಬಿಡದೇ ಸರ್ವನಾಶ – ಬೆಳೆ ಹಾನಿ ಸಮೀಕ್ಷೆಗೆ ರೈತರ ಒತ್ತಾಯ

    – ತೊಗರಿ ಕಣಜದ ನಾಡಲ್ಲಿಯೇ ತೊಗರಿಗೆ ಬರ

    ವಿಜಯಪುರ: ಗುಮ್ಮಟ ನಗರಿ ವಿಜಯಪುರ (Vijayapura) ತೊಗರಿಯ ಕಣಜ ಎಂದು ಖ್ಯಾತಿ ಪಡೆದಿದೆ. ಆದರೆ ಖ್ಯಾತಿಯಾಗಿರುವ ಜಿಲ್ಲೆಯಲ್ಲಿ ತೊಗರಿಗೆ ಈಗ ಬರ ಬಂದಿದೆ. ಚಿತ್ರದುರ್ಗದ (Chitradurga) ಕೃಷಿ ಇಲಾಖೆಯಲ್ಲಿ ತೊಗರಿ ಬೀಜ ಖರೀದಿಸಿ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ರೈತರಿಗೆ ತೊಗರಿ ಬೆಳೆ ಕೈಕೊಟ್ಟಿದೆ.

    ಜಿಲ್ಲೆಯನ್ನು ಜೋಳದ ನಾಡು ಎಂದು ಕರೆಯುತ್ತಿದ್ದರು. ಆದರೆ ದಶಕದ ಈಚೆಗೆ ತೊಗರಿಯ ಕಣಜ ಎಂದು ಕರೆಸಿಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣ ಜಿಲ್ಲೆಯಲ್ಲಿ ಅತೀ ಹೆಚ್ಚು ತೊಗರಿ ಬೆಳಯಲಾಗುತ್ತಿತ್ತು. ಆದರೆ ಇದೀಗ ಈ ಹೆಸರು ಅಳಿಸುವಂತೆ ಗೋಚರಿಸುತ್ತಿದೆ. ಅದಕ್ಕೆ ಕಾರಣ ಈ ಬಾರಿ ಜಿಲ್ಲೆಯಲ್ಲಿ ತೊಗರಿ ಬೆಳೆ ಹೂ ಬಿಡದೇ ಸಂಪೂರ್ಣ ಹಾಳಾಗಿ ಹೋಗಿದೆ.ಇದನ್ನೂ ಓದಿ: ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿ: ಆದಿತ್ಯ ಠಾಕ್ರೆ ಕಿರಿಕ್‌

    ಜಿಲ್ಲೆಯಲ್ಲಿ 5 ಲಕ್ಷ 34 ಹೆಕ್ಟರ್‌ನಲ್ಲಿ ತೊಗರಿ ಬೆಳೆಯಲಾಗಿದ್ದು, 80% ರಷ್ಟು ಬೆಳೆ ಹಾನಿಯಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇಷ್ಟೊಂದು ಬೆಳೆ ಹಾಳಾಗಲು ರಾಜ್ಯ ಸರ್ಕಾರದಿಂದ ವಿತರಿಸಿದ ಬೀಜ ಒಂದು ಕಡೆಯಾದರೆ, ಇನ್ನೊಂದೆಡೆ ಅಕಾಲಿಕ ಮಳೆ, ಮೋಡಕವಿದ ವಾತಾವರಣದಿಂದ ಇಬ್ಬನಿ ಬಿದ್ದು, ಬೆಳೆ ಹಾಳಾಗಿದೆ. ಇದರಿಂದ ಜಿಲ್ಲೆಯ ಸಾವಿರಾರು ರೈತರು ಕಂಗಾಲಾಗಿ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಕೊಟಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮಗೊಳ್ಳದ ಅಧಿಕಾರಿಗಳು, ಸರ್ಕಾರದ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಡಿ.10ರಂದು ಜಿಲ್ಲಾಧಿಕಾರಿ ಹಾಗೂ ಜಂಟಿ ಕೃಷಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.

    ಚಿತ್ರದುರ್ಗ ಜಿಲ್ಲೆಯಾದ್ಯಂತ ಕೃಷಿ ಇಲಾಖೆ ಸರಬರಾಜು ಮಾಡಿರುವ ತೊಗರಿಯ ಬಿತ್ತನೆ ಬೀಜಗಳು ಕಳಪೆಯಾಗಿವೆ. ಹೀಗಾಗಿ ತೊಗರಿ ಬೆಳೆ ಸಂಪಾಗಿ ಬೆಳೆದಿವೆ. ಆದರೆ ಕಾಯಿ ಮಾತ್ರ ಹಿಡಿದಿಲ್ಲ. ಕೆಲವೆಡೆ ಕಾಯಿಹಿಡಿದರೂ ಗಟ್ಟಿಯಾಗದೇ ಉದುರುತ್ತಿವೆ. ಹೂವು ಕಾಯಾಗುವ ಮುನ್ನವೇ ನೆಲಕ್ಕೆ ಬೀಳುತ್ತಿವೆ. ಹೀಗಾಗಿ ಒಂದು ಎಕರೆಗೆ 10 ರಿದ 15 ಸಾವಿರ ಖರ್ಚು ಮಾಡಿ, ತೊಗರಿ ಬೆಳೆದ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ.

    ಇನ್ನೂ ಬಿತ್ತನೆ ಬೀಜದ ಬೆಲೆಯನ್ನು ಸಹ ದಿಢೀರ್ ಎಂದು 2 ಪಟ್ಟು ಹೆಚ್ಚಿಸಿರುವ ಸರ್ಕಾರ ರೈತರಿಗೆ ಕಳಪೆ ಬೀಜ ಕೊಟ್ಟು ವಂಚಿಸಿದೆ. ಹೀಗಾಗಿ ರೈತರು ಭಾರೀ ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಸರ್ಕಾರ ಕೂಡ ಬೆಳೆನಷ್ಟ ಪರಿಹಾರ ಒದಗಿಸುವಂತೆ ರೈತ ಮುಖಂಡರು ಆಗ್ರಹಿಸಿದ್ದಾರೆ.

    ಒಟ್ಟಾರೆ ಕಳಪೆ ತೊಗರಿ ಬೀಜದ ದೆಸೆಯಿಂದ ವಿಜಯಪುರ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಹೇಳಿಕೊಂಡಂತೆ ಬೆಳೆ ಬಂದಿಲ್ಲ. ಈ ಎರಡೂ ಜಿಲ್ಲೆಗಳಲ್ಲಿ ತೊಗರಿಬೆಳೆ ಕೈಕೊಡಲು ಕಳಪೆ ಬೀಜ, ಅಕಾಲಿಕ ಮಳೆ ಕಾರಣವಾಗಿದೆ. ನಷ್ಟದಲ್ಲಿರುವ ರೈತರಿಗೆ ಸರ್ಕಾರ ಪರಿಹಾರ ನೀಡಲು ಮುಂದಾದರೆ, ಬೆಳೆ ಸಿಗದೆ ಕುಗ್ಗಿಹೋಗಿರುವ ರೈತರು ಕೊಂಚ ಸುಧಾರಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎನ್ನುವುದು ಕುತೂಹಲವಾಗಿದೆ.ಇದನ್ನೂ ಓದಿ: ಉಗ್ರರು ಕೈವಶ ಮಾಡಿದ ಬೆನ್ನಲ್ಲೇ ಸಿರಿಯಾದ ಮೇಲೆ ಅಮೆರಿಕ ವಾಯು ದಾಳಿ

  • ಕಾರು, ಕಬ್ಬು ಕಟಾವು ಮಿಷಿನ್ ನಡುವೆ ಭೀಕರ ಅಪಘಾತ; ಐವರು ದುರ್ಮರಣ

    ಕಾರು, ಕಬ್ಬು ಕಟಾವು ಮಿಷಿನ್ ನಡುವೆ ಭೀಕರ ಅಪಘಾತ; ಐವರು ದುರ್ಮರಣ

    ವಿಜಯಪುರ: ಕಾರು ಮತ್ತು ಕಬ್ಬು ಕಟಾವು ಮಿಷಿನ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿಳೇಭಾವಿ (Bilebhavi) ಕ್ರಾಸ್ ಬಳಿ ನಡೆದಿದೆ.

    ಮೃತರನ್ನು ವಿಜಯಪುರ ತಾಲೂಕಿನ ಅಲಿಯಾಬಾದ್ ನಿವಾಸಿಗಳೆಂದು ಗುರುತಿಸಲಾಗಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ಶಾಸಕರೊಂದಿಗೆ ಅನುಚಿತ ವರ್ತನೆ – ಆರ್‌ಟಿಓ ಇನ್ಸ್‌ಪೆಕ್ಟರ್ ಅಮಾನತು

    ಹುಣಸಗಿಯಿಂದ ತಾಳಿಕೋಟೆಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾರು ಮತ್ತು ಕಬ್ಬು ಕಟಾವು ಮಷಿನ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಘಟನಾ ಸ್ಥಳಕ್ಕೆ ತಾಳಿಕೋಟೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಡಿವೋರ್ಸ್ ವದಂತಿಗೆ ಫುಲ್ ಸ್ಟಾಪ್- ಜೊತೆಯಾಗಿ ಕಾಣಿಸಿಕೊಂಡ ಅಭಿಷೇಕ್, ಐಶ್ವರ್ಯಾ ರೈ

     

  • ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಬದಲಾವಣೆ ತಂದಿವೆ – ಯಶವಂತರಾಯಗೌಡ ಪಾಟೀಲ್

    ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಬದಲಾವಣೆ ತಂದಿವೆ – ಯಶವಂತರಾಯಗೌಡ ಪಾಟೀಲ್

    ವಿಜಯಪುರ: ಗ್ಯಾರಂಟಿ ಯೋಜನೆಗಳು (Guarantee Scheme) ಬಡವರ ಬದುಕಿಗೆ ಬದಲಾವಣೆ ತಂದಿವೆ ಎಂದು ಇಂಡಿ (Indi)ಶಾಸಕ ಯಶವಂತರಾಯಗೌಡ ಪಾಟೀಲ್ (Yashvantraygoud Patil) ಹೇಳಿದರು.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಕದ ರಾಜ್ಯ ಮಹರಾಷ್ಟ್ರದಲ್ಲಿ (Maharashtra) ವಿರೋಧ ಪಕ್ಷದವರು ಸರ್ಕಾರ ರಚನೆ ಮಾಡುತ್ತಿದ್ದಾರೆ. ನಿಮಗೆ ಗೊತ್ತಿದೆ ಅಲ್ಲಿ ಯಾವ ಆಧಾರದ ಮೇಲೆ ಆಯ್ಕೆ ಆಗಿದ್ದಾರೆ. ನಮ್ಮ ರಾಜ್ಯದಲ್ಲಿ ಗ್ಯಾರಂಟಿಗಳು ಬಡವರ ಬದುಕಿನಲ್ಲಿ ಬದಲಾವಣೆ ತಂದಿವೆ. ನಾವು ಕೇವಲ ಬಿಪಿಎಲ್ ಕೊಟ್ಟರೆ, ಮಹರಾಷ್ಟ್ರದಲ್ಲಿ ಎಲ್ಲರಿಗೂ ಗ್ಯಾರಂಟಿ ಯೋಜನೆ ಎಂದು ಬಿಜೆಪಿಗರ ಕಾಲೆಳೆದರು.ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಫಡ್ನವಿಸ್‌ ರಾಜ್ಯಭಾರ ಶುರು – ಡಿಸಿಎಂಗಳಾಗಿ ಶಿಂಧೆ, ಪವಾರ್ ಪದಗ್ರಹಣ

    ಬಿಜೆಪಿಯವರೇ (BJP) ಗ್ಯಾರಂಟಿ ಯೋಜನೆಗಳಿಗೆ ವಿರೋಧ ಮಾಡಿದ್ದರು. ಇವತ್ತು ಗ್ಯಾರಂಟಿಗಳ ಮೇಲೆ ಅವರು ಸರ್ಕಾರ ರಚನೆ ಮಾಡುತ್ತಿರುವುದಾಗಿ ಅವರೇ ಹೇಳಿದ್ದಾರೆ ಎಂದು ಟಾಂಗ್ ಕೊಟ್ಟರು.

    ಇನ್ನೂ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, ಅದು ಸಿಎಂ ಅವರ ಪರಮಾಧಿಕಾರ. ವಿಧಾನಸಭೆ ಚುನಾವಣೆ ವೇಳೆ ಜಿಲ್ಲೆಯ ಮೂವರನ್ನು ಕರೆಸಿ, ಮೂವರು ಸೇರಿ ಚುನಾವಣೆ ಮಾಡಿ, ಮೂವರಿಗೂ ಒಳ್ಳೆಯ ಸ್ಥಾನಮಾನ ಕೊಡುತ್ತೇವೆ ಎಂದಿದ್ದರು. ಅದೇ ರೀತಿ ಇಬ್ಬರಿಗೆ ಜಿಲ್ಲೆಯಲ್ಲಿ ಪ್ರಾತಿನಿಧ್ಯ ನೀಡಿದ್ದಾರೆ. ಈಗ ಸಿಎಂ ಅವರು ಅದನ್ನು ಗಮನದಲ್ಲಿಟ್ಟು ನೋಡುತ್ತಾರೆ ಅಂದುಕೊಂಡಿದ್ದೀನಿ ಎಂದು ಸಚಿವ ಸ್ಥಾನದ ಆಕಾಂಕ್ಷಿ ಎನ್ನುವುದನ್ನು ಪರೋಕ್ಷವಾಗಿ ಹೇಳಿದರು.ಇದನ್ನೂ ಓದಿ: ಜನಕಲ್ಯಾಣ ಸಮಾವೇಶಕ್ಕೆ ತೆರಳುವಾಗ ಸಚಿವ ಮುನಿಯಪ್ಪ ಕಾರು ಅಪಘಾತ

  • ಬೆಂಚ್ ಇಲ್ಲದ ಶಾಲೆಗೆ ಸೌಲಭ್ಯ ಕಲ್ಪಿಸಿದ ಪಬ್ಲಿಕ್ `ಬೆಳಕು’

    ಬೆಂಚ್ ಇಲ್ಲದ ಶಾಲೆಗೆ ಸೌಲಭ್ಯ ಕಲ್ಪಿಸಿದ ಪಬ್ಲಿಕ್ `ಬೆಳಕು’

    ವಿಜಯಪುರ: ಸರ್ಕಾರಿ ಶಾಲೆ ಎಂದ ಮೇಲೆ ಮೂಲ ಸೌಕರ್ಯಗಳ ಕೊರತೆ ಇದ್ದೇ ಇರುತ್ತದೆ. ಹಾಗೆಯೇ ಈ ಶಾಲೆಯ ವಿದ್ಯಾರ್ಥಿಗಳು ಬೆಂಚ್ ಕೊರತೆಯಿಂದಾಗಿ ನೆಲದ ಮೇಲೆ ಕುಳಿತು ಅಭ್ಯಾಸ ಮಾಡಬೇಕಾದ ಪರಿಸ್ಥಿತಿ ಇತ್ತು. ಇದರಿಂದ ಆ ಶಾಲೆಯ ಶಿಕ್ಷಕರು `ಪಬ್ಲಿಕ್ ಟಿವಿ ಬೆಳಕು’ (PUBLiC TV Belaku Impact) ಕಾರ್ಯಕ್ರಮದ ಮೊರೆ ಹೋಗಿದ್ದರು. ಇದೀಗ ಶಾಲಾ ಮಕ್ಕಳಿಕೆ ಬೆಂಚ್ ಸೌಲಭ್ಯ ಒದಗಿ ಬಂದಿದೆ.ಇದನ್ನೂ ಓದಿ: 7.99 ಲಕ್ಷಕ್ಕೆ ಅತ್ಯಾಕರ್ಷಕ ಹೊಸ ಅಮೇಜ್ ಕಾರು ಬಿಡುಗಡೆ

    ವಿಜಯಪುರ (Vijayapura) ನಗರದ ಟಕ್ಕೆ ಬಡವಾಣೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ.49. ಉತ್ತಮ ಶಿಕ್ಷಕರ ವೃಂದ, ಕೊಠಡಿ, ಮೈದಾನ ಹೊಂದಿದ್ದ ಈ ಶಾಲೆಯಲ್ಲಿ 1 ರಿಂದ 8ನೇ ತರಗತಿಯವರೆಗೆ ಒಟ್ಟು 321 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಶಾಲೆಯಲ್ಲಿ ಒಟ್ಟು 10 ಕೊಠಡಿಗಳಿದ್ದು, 9 ದೈನಂದಿನ ಶಿಕ್ಷಕರು ಹಾಗೂ 3 ಜನ ಅತಿಥಿ ಶಿಕ್ಷಕರಿದ್ದಾರೆ. ಶಾಲೆಯ 3, 4, 5, 6, 7, 8ನೇ ತರಗತಿಯ ವಿದ್ಯಾರ್ಥಿಗಳಿಗೆ 125 ಡೆಸ್ಕ್ಗಳ ಅವಶ್ಯಕತೆ ಇತ್ತು. ಈ ಸಮಸ್ಯೆಯ ಮೇಲೆ `ಪಬ್ಲಿಕ್ ಟಿವಿ’ `ಬೆಳಕು’ ಚೆಲ್ಲಿತ್ತು, ನ.16 ರಂದು ಕಾರ್ಯಕ್ರಮವೊಂದನ್ನ ಬಿತ್ತರಿಸಿತ್ತು.

    ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು ಬೆಂಚ್ ಇಲ್ಲದೇ ಬಡ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಆಗುತ್ತಿದೆ ಅಳಲು ತೋಡಿಕೊಂಡಿದ್ದರು. ಆಗ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ಅವರು ಬೆಂಚ್ ಸೌಲಭ್ಯ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದರು. ದಾನಿಗಳಾದ ವಿಜಯಪುರ ನಿವಾಸಿ ವಿಶ್ವನಾಥ ಅವರನ್ನು ಸಂಪರ್ಕಿಸಿ ಶಾಲೆಯ ಸಮಸ್ಯೆ ಬಗ್ಗೆ ವಿವರಿಸಿದರು. ವಿಶ್ವನಾಥ ಅವರು ಮುಂಬೈನ ಶ್ರೀ ತಪದಿದಾಸ ತುಳಸಿದಾಸ ವ್ರಜದಾಸ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಬೆಂಚ್ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಶಾಲೆಗೆ 125 ಡೆಸ್ಕ್ಗಳನ್ನು ಒದಗಿಸಿದ್ದಾರೆ.

    ಸದ್ಯ `ಬೆಳಕು’ ಕಾರ್ಯಕ್ರಮದಿಂದ ಸರ್ಕಾರಿ ಶಾಲೆಯ ಬಹುದಿನಗಳ ಸಮಸ್ಯೆ ಬಗೆಹರಿದಿದೆ. ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದ್ದು, `ಪಬ್ಲಿಕ್ ಟಿವಿ’ಗೆ ಅಭಿನಂದನೆ ಸಲ್ಲಿಸಿದ್ದಾರೆ.ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಇಡಿ ಎಂಟ್ರಿಯೇ ದುರುದ್ದೇಶ – ಸುಧಾಕರ್

  • ಕರುನಾಡಿಗೆ ಮತ್ತೊಂದು ಗರಿ: ದೇಶದ ಅತ್ಯಂತ ಕಿರಿಯ ಪೈಲಟ್ ಆಗಿ ವಿಜಯಪುರದ ಸಮೈರಾ

    ಕರುನಾಡಿಗೆ ಮತ್ತೊಂದು ಗರಿ: ದೇಶದ ಅತ್ಯಂತ ಕಿರಿಯ ಪೈಲಟ್ ಆಗಿ ವಿಜಯಪುರದ ಸಮೈರಾ

    ವಿಜಯಪುರ: ಗುಮ್ಮಟ ನಗರಿ ವಿಜಯಪುರ (Vijayapura) ಜಿಲ್ಲೆಯ ಯುವತಿಯೊಬ್ಬರು ದೇಶದ ಅತ್ಯಂತ ಕಿರಿಯ ಪೈಲಟ್ (Youngest Pilot) ಆಗುವ ಮೂಲಕ ರಾಜ್ಯದ ಹಿರಿಮೆ ಹೆಚ್ಚಿಸಿದ್ದಾರೆ.

    ಐತಿಹಾಸಿಕ ಜಿಲ್ಲೆಯಾಗಿ ವಿಜಯಪುರ ಜಗತ್ ವಿಖ್ಯಾತಿ ಪಡೆದಿದೆ. ಜೊತೆಗೆ ಜಿಲ್ಲೆಯ ಅನೇಕರು ರಾಜ್ಯ ಸೇರಿದಂತೆ ದೇಶಕ್ಕೆ ಕೀರ್ತಿ ತಂದಿದ್ದಾರೆ. ಕ್ರೀಡೆ, ವಿಜ್ಞಾನ, ಸಾಹಿತ್ಯ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ಸಾಧನೆಗೈದವರಿದ್ದಾರೆ. ಇದೀಗ ಮತ್ತೊಂದು ಸಾಧನೆಯಿಂದ ಜಿಲ್ಲೆಯ ಹಾಗೂ ರಾಜ್ಯದ ಹಿರಿಮೆ ಹೆಚ್ಚಿದೆ.ಇದನ್ನೂ ಓದಿ: ಎಫ್‌ಬಿಐ ನಿರ್ದೇಶಕನಾಗಿ ಭಾರತೀಯ ಮೂಲದ ಕಶ್ಯಪ್‌ ನಾಮನಿರ್ದೇಶನ

    18 ವರ್ಷದ ಸಮೈರಾ ಹುಲ್ಲೂರು ಕಮರ್ಶಿಯಲ್ ಪೈಲಟ್ ಲೈಲೆನ್ಸ್ ಪಡೆಯುವ ಮೂಲಕ ಅಭೂತಪೂರ್ವ ಸಾಧನೆಗೈದಿದ್ದಾರೆ. ಈ ಸಾಧನೆಯಿಂದ ಕುಟುಂಬದಲ್ಲಿ ಸಂತೋಷ ಮನೆ ಮಾಡಿದೆ. ಇತಿಹಾಸ ಸೃಷ್ಟಿಸಿರುವ ಸಮೈರಾ ವಿಜಯಪುರ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಕೀರ್ತಿಯ ಪತಾಕೆಯನ್ನು ಹಾರಿಸಿದ್ದಾರೆ.

    ತಮ್ಮ ಶಿಕ್ಷಣವನ್ನು ವಿಜಯಪುರದಲ್ಲಿ ಮುಗಿಸಿ, 6 ತಿಂಗಳ ಕಾಲ ದೆಹಲಿಯಲ್ಲಿ ಪೈಲಟ್ ಟ್ರೇನಿಂಗ್ ಮುಗಿಸಿ 18ನೇ ವಯಸ್ಸಿಗೆ ಪೈಲಟ್ ಆಗಿ ಹೊರಹೊಮ್ಮಿದ್ದಾರೆ. 25ನೇ ವಯಸ್ಸಿಗೆ ಪೈಲಟ್ ಆಗಿರುವ ಕ್ಯಾಪ್ಟನ್ ತಪೇಶ್ ಕುಮಾರ್ ಇವರ ಈ ಸಾಧನೆಗೆ ಪ್ರೇರಣೆಯಾಗಿದ್ದಾರೆ.

    ಸಮೈರಾಳ ಸಾಧನೆಗೆ ಜಿಲ್ಲೆ, ರಾಜ್ಯ ಹಾಗೂ ದೇಶದ ಹಲವೆಡೆಯಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಹೆಣ್ಣು ಮಕ್ಕಳನ್ನು ಕಡೆಗಣೆಸುವ ಜನರಿಗೆ ಸಮೈರಾ ಕುಟುಂಬ ಮಾದರಿ ಆಗಿದೆ. ಜೊತೆಗೆ ಇಂದಿನ ಕಾಲದ ಯುವ ಪೀಳಿಗೆಗೆ ಸಮೈರಾ ಸಾಧನೆ ಪ್ರೇರಣೆ ಆಗಿದೆ.ಇದನ್ನೂ ಓದಿ: ಶೋ ಕಂಟಿನ್ಯೂ ಮಾಡೋಕೆ ಆಗಲ್ಲ ಎಂದು ಕಣ್ಣೀರಿಟ್ಟ ಶೋಭಾ- ಕಿಚ್ಚನ ಮಾತಿಗೆ ಡೋರ್ ಓಪನ್

  • ಒಳ್ಳೆಯ ರಾಜಕಾರಣದ ಬಗ್ಗೆ ಮಾನ ಮರ್ಯಾದೆ ಇರುವವರ ಬಳಿ ಪ್ರಶ್ನೆ ಕೇಳಿ – ಯತ್ನಾಳ್ ಟಾಂಗ್

    ಒಳ್ಳೆಯ ರಾಜಕಾರಣದ ಬಗ್ಗೆ ಮಾನ ಮರ್ಯಾದೆ ಇರುವವರ ಬಳಿ ಪ್ರಶ್ನೆ ಕೇಳಿ – ಯತ್ನಾಳ್ ಟಾಂಗ್

    – ಬಿಎಸ್‌ವೈ ಮೇಲೆ ಕಾಂಗ್ರೆಸ್‌ನಿಂದ ದ್ವೇಷದ ರಾಜಕಾರಣ

    ವಿಜಯಪುರ: ಒಳ್ಳೆಯ ರಾಜಕಾರಣದ ಬಗ್ಗೆ ಮಾನ ಮರ್ಯಾದೆ ಇರುವವರ ಬಳಿ ಪ್ರಶ್ನೆ ಕೇಳಿ ಎಂದು ವಿಜಯಪುರ (Vijayapura) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಟಾಂಗ್ ನೀಡಿದರು.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ರೇಣುಕಾಚಾರ್ಯ (MP Renukacharya) ಹಿಗ್ಗಾಮುಗ್ಗಾ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಲಪುಟ್ ನನ್ ಮಕ್ಕಳ ಯಾವುದೇ ಪ್ರತಿಕ್ರಿಯೆ ಕೇಳಬೇಡಿ. ಒಳ್ಳೆಯ ರಾಜಕಾರಣದ ಬಗ್ಗೆ ಮಾನ ಮರ್ಯಾದೆ ಇರುವವರ ಬಳಿ ಪ್ರಶ್ನೆ ಕೇಳಿ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಬಿಜೆಪಿಯಿಂದ ಯತ್ನಾಳ್ ಉಚ್ಚಾಟನೆ ಮಾಡಬೇಕು: ರೇಣುಕಾಚಾರ್ಯ ಆಗ್ರಹ

    ಮಾಜಿ ಸಿಎಂ ಯಡಿಯೂರಪ್ಪ ಮೇಲೆ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಲು ಸಚಿವ ಸಂಪುಟದಲ್ಲಿ ಈಗ ಒಪ್ಪಿಗೆ ನೀಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಕಾಂಗ್ರೆಸ್ ಸರ್ಕಾರ ಮಾಡಿದ್ದು ಏನು? ಒಂದೂವರೆ ವರ್ಷದ ಆಡಳಿತದ ಬಳಿಕ ಸಿದ್ದರಾಮಯ್ಯ ಈಗ ಏಕೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

    ಮುಡಾ ಹಗರಣ ಈಗ ಗಂಭೀರತೆ ಪಡೆದುಕೊಂಡಿದೆ. ಇಡಿಯವರು ತನಿಖೆ ಮಾಡುತ್ತಿದ್ದಾರೆ. ವಾಲ್ಮೀಕಿ ನಿಗಮದ ಹಗರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಒತ್ತಾಯಿಸಿದ್ದೇವೆ. ಇಷ್ಟು ದಿನ ಹೊಂದಾಣಿಕೆಯಿಂದ ಇದ್ದರು. ನಮ್ಮದನ್ನು ನೀವು ಮುಚ್ಚಿಡುವುದು, ನಿಮ್ಮದನ್ನು ನಾವು ಮುಚ್ಚಿಡುವುದು ಎಂಬ ಒಪ್ಪಂದವಿತ್ತು. ಆ ಒಪ್ಪಂದ ಈಗ ಮುರಿದುಹೋಗಿದೆ. ಹಾಗಾಗಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯ ನಿವೃತ್ತಿಯಾಗಿರುವ ಯಡಿಯೂರಪ್ಪ ಅವರ ಮೇಲೆ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದರು.ಇದನ್ನೂ ಓದಿ: ಕೂಡಿ ಬಾಳಿದರೆ ಸ್ವರ್ಗ ಸುಖ – ಬಿಜೆಪಿ ಭಿನ್ನಮತಕ್ಕೆ ಛಲವಾದಿ ನಾರಾಯಣಸ್ವಾಮಿ ಅಸಮಾಧಾನ

  • ರೈತನ ಸೋಗಿನಲ್ಲಿ ಬಂದು ದಾಳಿಂಬೆ ಖರೀದಿ – 6.5 ಲಕ್ಷ ಪಂಗನಾಮ

    ರೈತನ ಸೋಗಿನಲ್ಲಿ ಬಂದು ದಾಳಿಂಬೆ ಖರೀದಿ – 6.5 ಲಕ್ಷ ಪಂಗನಾಮ

    ವಿಜಯಪುರ: ರೈತನ ಸೋಗಿನಲ್ಲಿ ಬಂದು ದಾಳಿಂಬೆ ಖರೀದಿಸಿ 6.5 ಲಕ್ಷ ಹಣ ಕೊಡದೇ ಪರಾರಿಯಾಗಿರುವ ಘಟನೆ ವಿಜಯಪುರ (Vijayapura) ತಾಲೂಕಿನ ಜಂಬಗಿ ಗ್ರಾಮದಲ್ಲಿ ನಡೆದಿದೆ.

    ಜಂಬಗಿ (Jambagi) ನಿವಾಸಿಗಳಾದ ಸುಭಾಸ ಹಿಟ್ನಳ್ಳಿ, ಗುರಪ್ಪಾ ಹಿಟ್ನಳ್ಳಿ ಎಂಬುವವರು ವಂಚನೆಗೆ ಒಳಗಾಗಿದ್ದಾರೆ. ಒಟ್ಟು ನಾಲ್ವರು ಆರೋಪಿಗಳಿದ್ದು, ದಾವಣಗೆರೆ ಮೂಲದವರು ಎಂದು ಗುರುತಿಸಲಾಗಿದೆ. ಓರ್ವನನ್ನು ರಫೀಕ್ ಶೇಖ್ ಎಂದು ಪತ್ತೆಹಚ್ಚಲಾಗಿದೆ.ಇದನ್ನೂ ಓದಿ: ನವಜಾತ ಶಿಶು ಕದ್ದು 50,000 ರೂ.ಗೆ ಮಾರಾಟ – ಮೂವರು ಖತರ್ನಾಕ್‌ ಕಳ್ಳಿಯರು ಅರೆಸ್ಟ್‌

    ವಿಜಯಪುರ ಜಿಲ್ಲೆಯ ರೈತರು ಒಂದೆಡೆ ಮಳೆ ಅಭಾವದಿಂದ ಬೇಸತ್ತಿದ್ದಾರೆ. ಆದರೂ ಕೂಡ ಸಾಲ ಮಾಡಿ ಕಷ್ಟಪಟ್ಟು ಬೆಳೆ ಬೆಳೆದಿದ್ದಾರೆ. ಸುಭಾಸ ಹಿಟ್ನಳ್ಳಿ, ಗುರಪ್ಪಾ ಹಿಟ್ನಳ್ಳಿ ಸಹೋದರರು ತಮ್ಮ ಮೂರು ಎಕರೆ ಜಮೀನಲ್ಲಿ ದಾಳಿಂಬೆ ಬೆಳೆದಿದ್ದರು. ಈ ದಾಳಿಂಬೆಯನ್ನು ಖರೀದಿಸಲು ರೈತರ ಸೋಗಿನಲ್ಲಿ ರಫೀಕ್ ಶೇಖ್ ಸೇರಿದಂತೆ ನಾಲ್ವರು ಖದೀಮರು ಬಂದಿದ್ದರು. ದಾಳಿಂಬೆಯನ್ನ ಖರೀದಿಸಿ ಅರ್ಧ ಹಣ ನೀಡಿ, ಇನ್ನುಳಿದ ಹಣ ನೀಡದೆ 6.5 ಲಕ್ಷ ರೂ. ಪಂಗನಾಮ ಹಾಕಿ ಪರಾರಿಯಾಗಿದ್ದಾರೆ.

    ರಫೀಕ್ ಆಂಡ್ ಗ್ಯಾಂಗ್ ಎರಡು ದಿನದ ಹಿಂದೆ ಜಂಬಗಿ ಗ್ರಾಮದ ಪಕ್ಕದ ನಾಗಠಾಣಾ ಗ್ರಾಮಕ್ಕೆ ಬಂದು ವಾಸ್ತವ್ಯ ಹೂಡಿದ್ದರು. ನಂತರ ದಾಳಿಂಬೆ ಬೆಳೆದಿದ್ದ ಅಲ್ಲಿನ ರೈತರ ಬಗ್ಗೆ ವಿಚಾರಿಸಿದ್ದಾರೆ. ಆಗ ಸುಭಾಸ, ಗುರಪ್ಪ ಸಹೋದರರ ದಾಳಿಂಬೆ ಬೆಳೆಯನ್ನು ಪತ್ತೆ ಹಚ್ಚಿ ಅವರ ಜಮೀನಿಗೆ ತೆರಳಿದ್ದಾರೆ. ಒಟ್ಟು 3 ಎಕರೆ ಜಮೀನಿನ ದಾಳಿಂಬೆಗೆ 12 ಲಕ್ಷ ರೂ. ಹೊಂದಿಸಿದ್ದಾರೆ. ನಂತರ 5.5 ಲಕ್ಷ ರೂ ಹಣ ನೀಡಿ, ಒಳ್ಳೆಯ ದಾಳಿಂಬೆಯ ಒಂದು ಲೋಡ್ ಕೊಂಡೊಯ್ದಿದ್ದಾರೆ. ಮರುದಿನ ಬಂದು ಉಳಿದ ಹಣ ನೀಡಿ ಇನ್ನುಳಿದ 2 ವಾಹನದ ಲೋಡ್ ದಾಳಿಂಬೆಯನ್ನ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿ ಹೋಗಿದ್ದಾರೆ. ಬಳಿಕ ಕರೆ ಮಾಡಿ ಹಣ ಕೇಳಿದರೆ ಯಾವ ದಾಳಿಂಬೆ, ಯಾವ ಹಣ? ಎಂದು ಹೇಳಿದ್ದಾರೆ.

    ರೈತ ಸುಭಾಸ ಹಾಗೂ ಇತರರು ಸೇರಿ ದಾವಣಗೆರೆಯ ಆಜಾದ್‌ನಗರ ಪೊಲೀಸ್ ಠಾಣೆಗೆ ತೆರಳಿ ವಂಚನೆ ಮಾಡಿರುವ ಕುರಿತು ತಿಳಿಸಿದ್ದಾರೆ. ಆಗ ಪೊಲೀಸರು ಖದೀಮರನ್ನು ವಿಚಾರಣೆಗೆ ಕರೆಸಿದಾಗ ನಾವು ಯಾವುದೇ ಹಣ ನೀಡುವುದಿಲ್ಲ, ನಾವು ಯಾವುದೇ ದಾಳಿಂಬೆ ಖರೀದಿ ಮಾಡಿಲ್ಲ ಎಂದು ರೀಲ್ ಬಿಟ್ಟಿದ್ದಾರೆ. ಈ ಕುರಿತು ರೈತ ಸುಭಾಸ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರಫೀಕ್ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.ಇದನ್ನೂ ಓದಿ: ದಿನ ಭವಿಷ್ಯ: 27-11-2024

  • ಉಪಚುನಾವಣಾ ಫಲಿತಾಂಶ ಕಂಡು ಟಿವಿ ಒಡೆದು ಹಾಕಿದ ಬಿಜೆಪಿ ಕಾರ್ಯಕರ್ತ

    ಉಪಚುನಾವಣಾ ಫಲಿತಾಂಶ ಕಂಡು ಟಿವಿ ಒಡೆದು ಹಾಕಿದ ಬಿಜೆಪಿ ಕಾರ್ಯಕರ್ತ

    – ಬಿಜೆಪಿ ನಾಯಕರ ಒಗ್ಗಟ್ಟಿನ ಕೊರತೆಯೇ ಸೋಲಿಗೆ ಕಾರಣ

    ವಿಜಯಪುರ: ಉಪಚುನಾವಣಾ ಫಲಿತಾಂಶ ಕಂಡು ಟಿವಿ ಒಡೆದು ಹಾಕಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ಕೋಲ್ಹಾರ (Kolhar) ಪಟ್ಟಣದಲ್ಲಿ ನಡೆದಿದೆ.

    ರಾಜ್ಯದಲ್ಲಿ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ 3 ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಇಂದು (ನ.23) ಹೊರಬಿದ್ದಿದೆ. ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ (Congress) ಭರ್ಜರಿಯಾಗಿ ಗೆಲುವನ್ನು ಸಾಧಿಸಿದೆ.ಇದನ್ನೂ ಓದಿ: ರಾಜ್ಯದ ಜನ ಕಾಂಗ್ರೆಸ್ ಪರವಾಗಿದ್ದಾರೆ, ಗ್ಯಾರಂಟಿಗಳಿಂದ ಆಶೀರ್ವಾದ ಸಿಕ್ಕಿದೆ: ಕೆಹೆಚ್ ಮುನಿಯಪ್ಪ

    ಕೋಲ್ಹಾರ ಪಟ್ಟಣದ ನಿವಾಸಿ ಹಾಗೂ ಬಿಜೆಪಿ (BJP) ಕಾರ್ಯಕರ್ತರಾದ ವೀರಭದ್ರಪ್ಪ ಭಾಗಿ ಚುನಾವಣಾ ಫಲಿತಾಂಶವನ್ನು ಟಿವಿಯಲ್ಲಿ ನೋಡುತ್ತಿದ್ದರು. ಈ ವೇಳೆ ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲುವನ್ನು ಸಾಧಿಸಿ ಬಿಜೆಪಿ ಸೋತಿರುವುದು ಕಾರ್ಯಕರ್ತನ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಮನೆಯಲ್ಲಿದ್ದ ಟಿವಿಯನ್ನು ಎತ್ತಿಕೊಂಡು ಹೊರಕ್ಕೆ ಬಿಸಾಡಿದ್ದಾರೆ.

    ರಾಜ್ಯದಲ್ಲಿ ಬಿಜೆಪಿ ನಾಯಕರ ನಡುವಿನ ಭಿನ್ನಮತಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯಕರ ನಡುವಿನ ಬಿರುಕು, ಕಾರ್ಯಕರ್ತರಲ್ಲಿ ಆಕ್ರೋಶ ಉಂಟಾಗುವಂತೆ ಮಾಡಿದೆ. ಬಿಜೆಪಿ ನಾಯಕರಲ್ಲಿ ಒಗ್ಗಟಿನ ಕೊರತೆಯಿಂದ ಈ ಹೀನಾಯ ಸೋಲಿಗೆ ಕಾರಣವಾಗಿದೆ. ಬಿಜೆಪಿ ವರಿಷ್ಠರು ಮೊದಲು ಬಿಜೆಪಿ ನಾಯಕರು, ಮುಖಂಡರ ಸಭೆ ಕರೆಯಿರಿ. ಇಲ್ಲವಾದರೆ ಬಿಜೆಪಿ ನಾಯಕರ ನಡುವಿನ ಭಿನ್ನಾಭಿಪ್ರಾಯದಿಂದ ಕಾರ್ಯಕರ್ತರು ಹಾಳಾಗುವ ಪರಿಸ್ಥಿತಿ ಬರುತ್ತದೆ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: NC 24: ಪೌರಾಣಿಕ ಕಥೆ ಹೇಳಲು ಸಜ್ಜಾದ ನಾಗಚೈತನ್ಯ- ಪೋಸ್ಟರ್ ಔಟ್

  • ವಕ್ಫ್ ವಿರುದ್ಧ ಅಧಿವೇಶನದ ವೇಳೆ ಹೋರಾಟ ಮಾಡ್ತೇವೆ : ಯತ್ನಾಳ್

    ವಕ್ಫ್ ವಿರುದ್ಧ ಅಧಿವೇಶನದ ವೇಳೆ ಹೋರಾಟ ಮಾಡ್ತೇವೆ : ಯತ್ನಾಳ್

    ವಿಜಯಪುರ: ವಕ್ಫ್ ನೋಟಿಸ್ ವಾಪಸ್ ತೆಗೆದುಕೊಂಡರೆ ಸಾಲುವುದಿಲ್ಲ ಅದನ್ನು ರದ್ದುಗೊಳಿಸಬೇಕು. ಇಲ್ಲವಾದರೆ ವಕ್ಫ್ ವಿರುದ್ಧ ಅಧಿವೇಶನ ವೇಳೆ ಹೋರಾಟ ಮಾಡುತ್ತೇವೆ ಎಂದು ವಿಜಯಪುರದಲ್ಲಿ (Vijayapura) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal)  ಆಗ್ರಹಿಸಿದರು.

    ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ (Waqf) ಕರಾಳ ಕಾನೂನನ್ನು ವಾಪಸ್ ಪಡೆಯಬೇಕು ಎಂದು ಪ್ರಧಾನಿಗಳಿಗೂ ಮನವಿ ಮಾಡಿದ್ದೇವೆ. ಮುಸ್ಲಿಮರಿಗಾಗಿ ವಕ್ಫ್ ಟ್ರಿಬ್ಯುನಲ್ ಒಪ್ಪುವುದಿಲ್ಲ. ದೇಶದಲ್ಲಿ ಇರಬೇಕಾದರೆ ನಮ್ಮ ದೇಶದ ಕಾನೂನು ಪಾಲಿಸಬೇಕು ಎಂದರು.ಇದನ್ನೂ ಓದಿ: 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಗೊ.ರು ಚನ್ನಬಸಪ್ಪ ಆಯ್ಕೆ

    ನ.25 ರಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಹೋರಾಟ ಮಾಡಲಿದ್ದೇವೆ. ನೋಟಿಸ್ ನೀಡದೆ ಇಲ್ಲಿಯವರೆಗೆ ಸೇರ್ಪಡೆಯಾದ ವಕ್ಫ್ ಹೆಸರು ರದ್ದಾಗಬೇಕು. ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ವಕ್ಫ್ ವಿರುದ್ಧ ದೆಹಲಿಗೆ ನಿಯೋಗ ಕೊಂಡೊಯ್ಯುತ್ತೇವೆ. ಇನ್ನೊಮ್ಮೆ ಜಂಟಿ ಸಂಸದೀಯ ಸಮಿತಿಗೆ ಮನವಿ ಮಾಡುತ್ತೇವೆ ಎಂದು ಕಿಡಿಕಾರಿದರು.

    ಮೊದಲು ವಕ್ಫ್ ಟ್ರಿಬ್ಯುನಲ್ ರದ್ದಾಗಬೇಕು ಇದು ನಮ್ಮ ಆಗ್ರಹವಾಗಿದೆ. ಅವರದೇ ಕೋರ್ಟ್, ಅವರದೇ ನ್ಯಾಯಾಲಯ. ಕಳ್ಳರ ಬಳಿ ನ್ಯಾಯ ಬೇಡುವ ಹಾಗಾಗುತ್ತದೆ. ವಕ್ಫ್ ವಿರುದ್ಧ ನಿರಂತರ ಹೋರಾಟ ಮುಂದುವರೆಯಲಿದೆ. ವಕ್ಫ್ ಸಾಯುವವರೆಗೂ ಹೋರಾಟ ಮುಂದುವರೆಯಲಿದೆ. ಮೋದಿಯವರು 42 ಆಫರೇಶನ್ ಮಾಡುತ್ತಿದ್ದಾರೆ. ಅದರಲ್ಲಿಯೂ ವಕ್ಫ್ ಜೀವಂತವಾಗಿ ಉಳಿಯಲ್ಲ. ಜೀವಂತ ಉಳಿದರೂ ಇಂಜೆಕ್ಷನ್ ಕೊಟ್ಟು ಕೊಲ್ಲುತ್ತೇವೆ ಎಂದು ಹೇಳಿದರು.ಇದನ್ನೂ ಓದಿ: ನಮ್ಮ ಸರ್ಕಾರದ ವಿರುದ್ಧ ಮಾತಾಡಲು ಬಿಜೆಪಿಗೆ ನೈತಿಕತೆ ಇಲ್ಲ: ಶಾಮನೂರು