Tag: ವಿಜಯಪುರ

  • ಕಾಲುವೆಗೆ 4 ಮಕ್ಕಳು, ಹೆಂಡತಿಯನ್ನು ತಳ್ಳಿದ ಕೇಸ್‌ಗೆ ಟ್ವಿಸ್ಟ್‌ – ಪತಿಯ ಬಣ್ಣ ಬಯಲು ಮಾಡಿದ ಪತ್ನಿ

    ಕಾಲುವೆಗೆ 4 ಮಕ್ಕಳು, ಹೆಂಡತಿಯನ್ನು ತಳ್ಳಿದ ಕೇಸ್‌ಗೆ ಟ್ವಿಸ್ಟ್‌ – ಪತಿಯ ಬಣ್ಣ ಬಯಲು ಮಾಡಿದ ಪತ್ನಿ

    – ನನ್ನ ಗಂಡನನ್ನ ತುಂಬಾ ನಂಬಿದ್ದೆ, ಅವನು ಮೋಸ ಮಾಡ್ಬಿಟ್ಟ ಎಂದು ಕಣ್ಣೀರು
    – ತಂದೆ ಕುತಂತ್ರಕ್ಕೆ ಮುದ್ದು ಕಂದಮ್ಮಗಳು ಬಲಿ

    ವಿಜಯಪುರ: ಕಾಲುವೆಗೆ ನಾಲ್ಕು ಮಕ್ಕಳು ಮತ್ತು ಪತ್ನಿಯನ್ನು ದೂಡಿ ಪತಿ ಆತ್ಮಹತ್ಯೆಗೆ ಯತ್ನದ ನಾಟಕವಾಡಿದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಪ್ರಕರಣದಲ್ಲಿ ಬದುಕುಳಿದ ಮಹಿಳೆ ತನ್ನ ಪತಿಯ ಬಣ್ಣವನ್ನು ಬಯಲು ಮಾಡಿದ್ದಾರೆ.

    ಆರೋಪಿ ಲಿಂಗರಾಜು ನಾಟಕಕ್ಕೆ ತನು, ರಕ್ಷಾ, ಹಸೇನ್‌, ಹುಸೇನ್‌ ಮಕ್ಕಳು ದುರಂತ ಸಾವು ಕಂಡಿವೆ. ಲಿಂಗರಾಜು ಪತ್ನಿ ಭಾಗ್ಯ ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಡೆದ ಘಟನೆಯನ್ನು ಸಂಬಂಧಿಕರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ವೇಳೆ ಆಕೆಯ ಪತಿ ನಿಜ ಬಣ್ಣ ಬಯಲಾಗಿದೆ.

    ಮಹಿಳೆ ಹೇಳಿದ್ದೇನು?
    ಮನೆಯಲ್ಲಿ ಸಾಯೋಣ ಅಂತ ಮೂರು ದಿನದ ಹಿಂದೆ ನನ್ನ ಪತಿ ಲಿಂಗರಾಜು ವಿಷ ತಂದು ಇಟ್ಟಿದ್ದ. ಮಕ್ಕಳಿಗೆ ವಿಷ ಕುಡಿಸಿದ್ದ. ಮನೆಯಲ್ಲಿ ಸಂಪೂರ್ಣ ವಿಷ ತೆಗೆದುಕೊಂಡರೆ ಎಲ್ಲರಿಗೂ ಗೊತ್ತಾಗುತ್ತದೆ ಅಂತಾ ಹೊರಗಡೆ ಕರೆದುಕೊಂಡು ಬಂದ. ನಂತರ ಕಾಲುವೆ ಹತ್ತಿರ ಬಂದು ಮೊದಲು ಎರಡು ಮಕ್ಕಳನ್ನು ತಳ್ಳಿದ. ತದನಂತರ ಎರಡು ಮಕ್ಕಳು ಮತ್ತು ನನ್ನನ್ನು ಕಾಲುವೆಗೆ ದೂಡಿದ. ನನ್ನ ಗಂಡನನ್ನು ತುಂಬಾ ನಂಬಿದ್ದೆ. ದೇವರಿಗಿಂತ ಹೆಚ್ಚು ನಂಬಿದ್ದೆ. ಆದರೆ, ಅವನು ನನಗೆ ಮೋಸ ಮಾಡಿಬಿಟ್ಟ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.

    ನಾಲ್ಕು ಮಕ್ಕಳನ್ನು (Childrens) ಕಾಲುವೆಗೆ ಎಸೆದು ತಾಯಿ (Mother) ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ನಾಲ್ವರು ಮಕ್ಕಳು ಜಲಸಮಾಧಿಯಾದ ಘಟನೆ ವಿಜಯಪುರ (Vijayapura) ಜಿಲ್ಲೆ ನಿಡಗುಂದಿ (Nidagundi) ತಾಲೂಕಿನ ಬೇನಾಳ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ನಡೆದಿತ್ತು.

    ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ತನು ಲಿಂಗರಾಜ ಭಜಂತ್ರಿ (5), ರಕ್ಷಾ ಲಿಂಗಗರಾಜ ಭಜಂತ್ರಿ (3), ಹಸನ್ ಲಿಂಗರಾಜ ಭಜಂತ್ರಿ ಹಾಗೂ ಹುಸೇನ್ ಲಿಂಗರಾಜ ಭಜಂತ್ರಿ (13 ತಿಂಗಳು) ಮೃತ ಮಕ್ಕಳು. ನಾಲ್ವರು ಮಕ್ಕಳ ತಾಯಿ ಭಾಗ್ಯ ಭಜಂತ್ರಿಯನ್ನ ಸ್ಥಳೀಯರು ಕಾಪಾಡಿದ್ದಾರೆ. ಕೌಟುಂಬಿಕ ಕಾರಣವೇ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

    ಬಹುದಿನಗಳಿಂದ ಭಾಗ್ಯಳ ಪತಿ ನಿಂಗರಾಜ ಅಣ್ಣತಮ್ಮಂದಿರ ಮಧ್ಯೆ ಆಸ್ತಿಗಾಗಾಗಿ ಕಲಹ ನಡೆದಿತ್ತು. ಆಸ್ತಿಯಲ್ಲಿ ಬಿಡಿಗಾಸು ಕೊಡಲ್ಲ ಅಂತಾ ಲಿಂಗರಾಜ್‌ಗೆ ಅಣ್ಣತಮ್ಮಂದಿರು ಹೇಳಿದ್ದರು. ಅದೆ ರೀತಿ ಇಂದು ಕೂಡ ಪರಸ್ಪರ ಗಲಾಟೆ ನಡೆದಿತ್ತು. ಗಲಾಟೆಯ ನಂತರ ಮನೆಯಿಂದ ತೆಲಗಿಗೆ ಹೊರಟಾಗ ಕಾಲುವೆ ಹತ್ತಿರ ನಿಂಗರಾಜನ ದ್ವಿಚಕ್ರ ವಾಹನದ ಪೆಟ್ರೋಲ್ ಖಾಲಿ ಆಗಿದೆ. ಆಗ ಪೆಟ್ರೋಲ್ ತರಲೆಂದು ನಿಂಗರಾಜ ಸ್ವಲ್ಪ ದೂರ ಹೋಗುತ್ತಿದ್ದಂತೆ ಭಾಗ್ಯ ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ದಾಳೆ ಎಂದು ಪತಿ ಲಿಂಗರಾಜು ಕಣ್ಣೀರು ಹಾಕಿ ನಾಟಕವಾಡಿದ್ದ. ಆದರೆ, ಬದುಕುಳಿದ ಪತಿಯ ನಾಟಕವನ್ನು ಪತ್ನಿ ಬಯಲು ಮಾಡಿದ್ದಾರೆ.

  • ವಿಜಯಪುರ| ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆಗೆ ಯತ್ನ

    ವಿಜಯಪುರ| ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆಗೆ ಯತ್ನ

    ವಿಜಯಪುರ: ನಾಲ್ಕು ಮಕ್ಕಳನ್ನು (Childrens) ಕಾಲುವೆಗೆ ಎಸೆದು ತಾಯಿ (Mother) ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ನಾಲ್ವರು ಮಕ್ಕಳು ಜಲಸಮಾಧಿಯಾದ ಘಟನೆ ವಿಜಯಪುರ (Vijayapura) ಜಿಲ್ಲೆ ನಿಡಗುಂದಿ (Nidagundi) ತಾಲೂಕಿನ ಬೇನಾಳ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ನಡೆದಿದೆ.

    ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ತನು ನಿಂಗರಾಜ ಭಜಂತ್ರಿ (5), ರಕ್ಷಾ ನಿಂಗರಾಜ ಭಜಂತ್ರಿ (3), ಹಸನ್ ನಿಂಗರಾಜ ಭಜಂತ್ರಿ ಹಾಗೂ ಹುಸೇನ್ ನಿಂಗರಾಜ ಭಜಂತ್ರಿ (13 ತಿಂಗಳು) ಮೃತ ಮಕ್ಕಳು. ನಾಲ್ವರು ಮಕ್ಕಳ ತಾಯಿ ಭಾಗ್ಯ ಭಜಂತ್ರಿಯನ್ನ ಸ್ಥಳಿಯರು ಕಾಪಾಡಿದ್ದಾರೆ. ಕೌಟುಂಬಿಕ ಕಾರಣವೇ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇಲ್ಲ – ಸುರ್ಜೇವಾಲ ಸ್ಪಷ್ಟನೆ

    ಬಹುದಿನಗಳಿಂದ ಭಾಗ್ಯಳ ಪತಿ ನಿಂಗರಾಜ ಅಣ್ಣತಮ್ಮಂದಿರ ಮಧ್ಯೆ ಆಸ್ತಿಗಾಗಾಗಿ ಕಲಹ ನಡೆದಿತ್ತು. ಆಸ್ತಿಯಲ್ಲಿ ಬಿಡಿಗಾಸು ಕೊಡಲ್ಲ ಅಂತಾ ಲಿಂಗರಾಜ್‌ಗೆ ಅಣ್ಣತಮ್ಮಂದಿರು ಹೇಳಿದ್ದರು. ಅದೆ ರೀತಿ ಇಂದು ಕೂಡ ಪರಸ್ಪರ ಗಲಾಟೆ ನಡೆದಿತ್ತು. ಗಲಾಟೆಯ ನಂತರ ಮನೆಯಿಂದ ತೆಲಗಿಗೆ ಹೊರಟಾಗ ಕಾಲುವೆ ಹತ್ತಿರ ನಿಂಗರಾಜನ ದ್ವಿಚಕ್ರ ವಾಹನದ ಪೆಟ್ರೋಲ್ ಖಾಲಿ ಆಗಿದೆ. ಆಗ ಪೆಟ್ರೋಲ್ ತರಲೆಂದು ನಿಂಗರಾಜ ಸ್ವಲ್ಪ ದೂರ ಹೋಗುತ್ತಿದ್ದಂತೆ ಭಾಗ್ಯ ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ದಾಳೆ ಎಂದು ಪತಿ ನಿಂಗರಾಜ ಕಣ್ಣೀರು ಹಾಕುತ್ತಿದ್ದಾನೆ. ಇದನ್ನೂ ಓದಿ: ಜಮೀರ್ ನೂರು ಹಸು ಕೊಡಿಸಿದ್ರೂ ಪಾಪ ಪರಿಹಾರ ಆಗಲ್ಲ – ಛಲವಾದಿ ಸಿಡಿಮಿಡಿ

    ಸದ್ಯ ಇಬ್ಬರು ಹೆಣ್ಣು ಮಕ್ಕಳ ಮೃತದೇಹವನ್ನು ಮೀನುಗಾರರು ಹೊರತೆಗೆದಿದ್ದಾರೆ. ಇಬ್ಬರು ಗಂಡು ಮಕ್ಕಳ ಶವಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ನಿಡಗುಂದಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಶವ ಶೋಧಕಾರ್ಯ ಮುಂದುವರಿದಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ನಿಂಗರಾಜ ಹಾಲಿ ತೆಲಗಿ ಗ್ರಾಮ ಪಂ ಸದಸ್ಯನಾಗಿದ್ದು, ಮೊಹರಂನಲ್ಲಿ ದೇವರನ್ನು ಹೊರುತ್ತಿದ್ದರು. ಈ ಕಾರಣದಿಂದ ಗಂಡು ಮಕ್ಕಳಿಗೆ ಹಸೇನ್‌ ಹಾಗೂ ಹುಸೇನ್‌ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ | ವರ್ಷಪೂರ್ತಿ ಸಂಪರ್ಕ ಕಲ್ಪಿಸುವ ಝಡ್-ಮೋರ್ಹ್ ಸುರಂಗ ಮಾರ್ಗ ಉದ್ಘಾಟಿಸಿದ ಮೋದಿ

  • ಗುಮ್ಮಟನಗರಿಯಲ್ಲಿ ಜ.11ರಿಂದ ವಿಶ್ವವಿಖ್ಯಾತ ಮೈಸೂರು ಸ್ಯಾಂಡಲ್ ಸಾಬೂನು ಮೇಳ

    ಗುಮ್ಮಟನಗರಿಯಲ್ಲಿ ಜ.11ರಿಂದ ವಿಶ್ವವಿಖ್ಯಾತ ಮೈಸೂರು ಸ್ಯಾಂಡಲ್ ಸಾಬೂನು ಮೇಳ

    ವಿಜಯಪುರ: ಶ್ರೀಗಂಧ ಬೆಳೆಗಾರರಿಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಜಿಲ್ಲೆಯಲ್ಲಿ ಜ.11 ರಿಂದ 20 ರವರೆಗೆ ವಿಶ್ವವಿಖ್ಯಾತ ಮೈಸೂರು ಸ್ಯಾಂಡಲ್ ಸಾಬೂನು ಮೇಳವನ್ನು (Mysuru Sandal Soap Mela) ಆಯೋಜಿಸಲಾಗಿದೆ.

    ಈ ಕುರಿತು ಕೆಎಸ್‌ಡಿಎಲ್ (KSDL) ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ ಪಿಕೆಎಂ ಮಾತನಾಡಿ, ಮೈಸೂರು ಶ್ರೀಗಂಧದ ಎಣ್ಣೆ ಮತ್ತು ಶ್ರೀಗಂಧದ ಸಾಬೂನು ಉತ್ಪನ್ನಗಳನ್ನು ಪ್ರಚುರಪಡಿಸುವ ಮೂಲಕ ಶ್ರೀಗಂಧ ಬೆಳೆಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಈ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೀಗ ವಿಜಯಪುರದಲ್ಲಿ (Vijayapura) ಜ.11 ರಿಂದ 20ರವರೆಗೆ ಮೇಳ ಆಯೋಜಿಸಲಾಗಿದ್ದು, ನಗರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಶಿವಾನುಭವ ಮಂಟಪದಲ್ಲಿ ಈ ಸಾಬೂನು ಮೇಳ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 09:30 ರಿಂದ ರಾತ್ರಿ 09:30 ರವರೆಗೆ ಮೇಳ ನಡೆಯಲಿದೆ.ಇದನ್ನೂ ಓದಿ: ಹೃದಯಾಘಾತದಿಂದ 8 ವರ್ಷದ ಬಾಲಕಿ ಸಾವು

    ಈ ಬಾರಿ ವಿಶೇಷ ಆಕರ್ಷಣೆಯೊಂದಿಗೆ ಮೈಸೂರು ಆರಮನೆಯ ದರ್ಬಾರ್ ಹಾಲ್ ಸೆಟ್ ನಿರ್ಮಾಣ ಮಾಡಲಾಗುತ್ತಿದೆ. ಸಂಸ್ಥೆ ಉತ್ಪಾದಿಸುತ್ತಿರುವ 48ಕ್ಕೂ ಹೆಚ್ಚು ಉತ್ಕೃಷ್ಟ ದರ್ಜೆಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (Karnataka Soaps and Detergents Limited) ಸಂಪೂರ್ಣ ಸರ್ಕಾರಿ ಸ್ವಾಮ್ಯದ ಒಡೆತನದಲ್ಲಿದ್ದು, ನೈಸರ್ಗಿಕ ಶ್ರೀಗಂಧದ ಎಣ್ಣೆಯಿಂದ ತಯಾರಿಸಿರುವ ಮೈಸೂರು ಸ್ಯಾಂಡಲ್ ಸಾಬೂನಿನಿಂದ ವಿಶ್ವವಿಖ್ಯಾತಿ ಪಡೆದಿದೆ. ಭೌಗೋಳಿಕ ಸ್ವಾಮ್ಯ ಪ್ರಮಾಣ ಪತ್ರವನ್ನು ಕೇಂದ್ರ ಸರ್ಕಾರದಿಂದ ಪಡೆದಿದ್ದು, ಭಾರತದ ಬೌದ್ಧಿಕ ಆಸ್ತಿಯಾಗಿರುತ್ತದೆ. ಸಂಸ್ಥೆಯು 2010ರಲ್ಲಿ ಮತ್ತು 2019ರಲ್ಲಿ ಸಾರ್ವಜನಿಕ ಶ್ರೇಷ್ಠತೆಗಾಗಿ ಮುಖ್ಯಮಂತ್ರಿ ರತ್ನ ಪ್ರಶಸ್ತಿಯೂ ಸೇರಿದಂತೆ ರಫ್ತು ಹಾಗೂ ಕಾಸ್ಟ್ ಅಕೌಂಟಿಂಗ್ ನಿರ್ವಹಣೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ ಎಂದರು.

    ಸAಸ್ಥೆಯ ಶ್ರೀಗಂಧದೆಣ್ಣೆ ಸೇರಿದಂತೆ ಸಾಬೂನು, ಮಾರ್ಜಕ, ಸೌಂದರ್ಯವರ್ಧಕ, ಅಗರಬತ್ತಿ ಸೇರಿದಂತೆ ಸುಮಾರು 38 ಉತ್ಪನ್ನಗಳನ್ನು ತಯಾರಿಸುತ್ತಿದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆಯು ನಮ್ಮ ಪರಂಪರೆ, ನಮ್ಮ ಸಂಸ್ಕೃತಿಯ ಪ್ರತೀಕವಾದ ಸುಗಂಧ ರಾಯಭಾರಿ ಎಂದೇ ವಿಶ್ವವಿಖ್ಯಾತಿ ಪಡೆದಿದೆ.

    ಮೈಸೂರು ಶ್ರೀಗಂಧದ ಎಣ್ಣೆ ಮತ್ತು ಮೈಸೂರು ಶ್ರೀಗಂಧದ ಸಾಬೂನು ತಯಾರಿಸುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆ 100 ವರ್ಷಗಳ ಭವ್ಯ ಪರಂಪರೆ ಮತ್ತು ಇತಿಹಾಸವಿರುವ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಸಂಸ್ಥೆ. ಶ್ರೀಗಂಧದ ಎಣ್ಣೆ ಮತ್ತು ಮೈಸೂರು ಶ್ರೀಗಂಧದ ಸಾಬೂನು ವಿಶ್ವದರ್ಜೆಯ ಉತ್ಪನ್ನಗಳಾಗಿದ್ದು, ಭಾರತೀಯ ಜಿಯೋಗ್ರಾಫಿಕಲ್ ರಿಜಿಸ್ಟ್ರಿಯಲ್ಲಿ ನೋಂದಣಿಗೊಂಡಿರುತ್ತದೆ ಎಂದು ತಿಳಿಸಿದರು.ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಪೆಟ್ಟು- ‘ಸಿಖಂದರ್’ ಚಿತ್ರದ ಶೂಟಿಂಗ್ ಸ್ಥಗಿತ

  • ನಕ್ಸಲರ ಶರಣಾಗತಿ ಬಗ್ಗೆ ಸರ್ಕಾರದ ವಿರುದ್ಧ ಯತ್ನಾಳ್ ಕಿಡಿ

    ನಕ್ಸಲರ ಶರಣಾಗತಿ ಬಗ್ಗೆ ಸರ್ಕಾರದ ವಿರುದ್ಧ ಯತ್ನಾಳ್ ಕಿಡಿ

    ವಿಜಯಪುರ: ಆರು ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ (Vijayapura) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಟ್ವೀಟ್ ಮಾಡಿ ವಿರೋಧ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಶರಣಾದ ನಕ್ಸಲರಿಗೆ ಜ.30ರ ವರೆಗೆ ನ್ಯಾಯಾಂಗ ಬಂಧನ

    ಟ್ವೀಟ್‌ನಲ್ಲಿ ಏನಿದೆ?
    ನಕ್ಸಲರ ಬೇಡಿಕೆಗಳನ್ನು ಆಲಿಸಿ ಅವರನ್ನು ಮುಖ್ಯವಾಹಿನಿಗೆ ತಂದು ಅವರು ಕೂಡ ಸಾಮಾನ್ಯರಂತೆ ಬದುಕುವುದಕ್ಕೆ ಹಕ್ಕಿದೆ. ಆದರೆ, ಶರಣಾಗಲು ಪ್ಯಾಕೇಜ್ ಕೊಡುವುದು ಸರಿಯಾದ ಕ್ರಮವಲ್ಲ.

    ನಕ್ಸಲರು ಕೈಗೊಂಡ ಹಿಂಸೆಗಳಿಂದ ಅನೇಕ ಪೊಲೀಸ್ ಅಧಿಕಾರಿಗಳು, ಕಾರ್ಯಾಚರಣಾ ತಂಡದ ಸದಸ್ಯರು ಜೀವ ಕಳೆದುಕೊಂಡಿದ್ದಾರೆ. ಯಾರದ್ದೋ ಮೇಲೆ ಕೋಪಕ್ಕೆ ಬಡ ಗ್ರಾಮಸ್ಥರ ಮೇಲೆ, ಪೊಲೀಸರನ್ನು ಬಲಿ ತೆಗೆದುಕೊಂಡವರಿಗೆ ವಿಶೇಷ ಆತಿಥ್ಯ ಕೊಡುವುದು ಖಂಡಿತ ಸರಿಯಾದ ಕ್ರಮವಲ್ಲ. ಅವರು ಮಾಡಿರುವ ಅಪರಾಧಕ್ಕೆ ತಕ್ಕಂತೆ ಶಿಕ್ಷೆ ಅನುಭವಿಸಿ ನಂತರ ಮುಖ್ಯವಾಹಿನಿಗೆ ಬರಲಿ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.ಇದನ್ನೂ ಓದಿ: ಹೆಬ್ಬಾಳ್ಕರ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಪ್ರಕರಣ – 1 ಗಂಟೆ ಸಿಐಡಿ ವಿಚಾರಣೆ ಎದುರಿಸಿದ ಸಿ.ಟಿ ರವಿ

  • ಚಲಿಸುತ್ತಿದ್ದ ಓಮಿನಿಯಲ್ಲಿ ಏಕಾಏಕಿ ಬೆಂಕಿ – ಸುಟ್ಟು ಕರಕಲು

    ಚಲಿಸುತ್ತಿದ್ದ ಓಮಿನಿಯಲ್ಲಿ ಏಕಾಏಕಿ ಬೆಂಕಿ – ಸುಟ್ಟು ಕರಕಲು

    ವಿಜಯಪುರ: ಚಲಿಸುತ್ತಿದ್ದ ಓಮಿನಿಯಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಬಸವನ ಬಾಗೇವಾಡಿ (Basavana Bagewadi) ತಾಲೂಕಿನ ಉಕ್ಕಲಿ ಗ್ರಾಮದ ಬಳಿ ನಡೆದಿದೆ.

    ವಿಜಯಪುರ (Vijayapura) ಮೂಲದ ಬಸಯ್ಯ ಹಿರೇಮಠ ಎಂಬವರಿಗೆ ಸೇರಿದ ಓಮಿನಿ ವಾಹನ ಸುಟ್ಟು ಭಸ್ಮವಾಗಿದೆ.ಇದನ್ನೂ ಓದಿ: ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಹಾಡಹಗಲೇ ಚಾಕು ಇರಿದ ಸ್ನೇಹಿತ – ಆರೋಪಿ ಅರೆಸ್ಟ್

    ಉಕ್ಕಲಿ ಗ್ರಾಮದಿಂದ ಸಂಬಂಧಿಕರನ್ನು ಕರೆದುಕೊಂಡು ಎಡೆಯೂರುಗೆ ಹೊರಟ್ಟಿದ್ದ ವೇಳೆ ಈ ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ವಾಹನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ವಾಹನದಲ್ಲಿದ್ದವರು ಕೆಳಗಿಳಿದಿದ್ದಾರೆ.

    ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬರುವ ಮೊದಲೆ ವಾಹನ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.ಇದನ್ನೂ ಓದಿ: ದೆಹಲಿ ಚುನಾವಣೆಗೆ ಆಪ್‌ಗೆ ಟಿಎಂಸಿ ಬೆಂಬಲ – ಧನ್ಯವಾದ ಎಂದ ಕೇಜ್ರಿವಾಲ್

  • ವಿಜಯಪುರ ನಗರದಲ್ಲಿ ಚಿರತೆ ಪ್ರತ್ಯಕ್ಷ – ಜನರಲ್ಲಿ ಆತಂಕ

    ವಿಜಯಪುರ ನಗರದಲ್ಲಿ ಚಿರತೆ ಪ್ರತ್ಯಕ್ಷ – ಜನರಲ್ಲಿ ಆತಂಕ

    ವಿಜಯಪುರ: ನಗರದ ಸಿಂದಗಿ ಬೈಪಾಸ್ (Sindagi Bypass) ಬಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ (Leopard) ಓಡಾಟ ನಡೆಸಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.

    ನಗರದ ಮುನೇಶ್ವರಬಾಗ್ ಪ್ರದೇಶದಲ್ಲಿ ಚಿರತೆ ಓಡಾಡಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭಾಗದ ಜನರು ಸುರಕ್ಷಿತ ಕ್ರಮ ತೆಗೆದುಕೊಳ್ಳುವಂತೆ ಅರಣ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಒಂದೇ ಒಂದು ಎನ್‌ಕೌಂಟರ್‌ಗೆ ಬೆಚ್ಚಿದ ನಕ್ಸಲರು – ಸದ್ಯದಲ್ಲೇ 6 ಜನ ಶರಣಾಗತಿ ಸಾಧ್ಯತೆ

    ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ನಗರದ ಸಿಂದಗಿ ನಾಕಾ, ಮುನೇಶ್ವರಭಾಗ್ ಪ್ರದೇಶದ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಚಿರತೆ ಓಡಾಟದಿಂದ ಮನೆ ಬಿಟ್ಟು ಜನರು ಹೊರ ಬರುತ್ತಿಲ್ಲ. ಆದಷ್ಟು ಬೇಗ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಜನರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಜನ ಕೋವಿಡ್‌ ವಿರುದ್ಧ ಹೋರಾಡುತ್ತಿರುವಾಗ ʻಶೀಷ್‌ ಮಹಲ್‌ʼ ನವೀಕರಣ – ಮೋದಿ ಮತ್ತೆ ಕಿಡಿ

  • ಕರ್ನಾಟಕದ ಗಂಡಸರು ಮುಂದಿನ ಚುನಾವಣೆಯಲ್ಲಿ `ಕೈ’ಗೆ ಮತ ಹಾಕಬಾರದು – ಯತ್ನಾಳ್ ಗರಂ

    ಕರ್ನಾಟಕದ ಗಂಡಸರು ಮುಂದಿನ ಚುನಾವಣೆಯಲ್ಲಿ `ಕೈ’ಗೆ ಮತ ಹಾಕಬಾರದು – ಯತ್ನಾಳ್ ಗರಂ

    ವಿಜಯಪುರ: ಕರ್ನಾಟಕ ಗಂಡಸರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಬಾರದು ಎಂದು ವಿಜಯಪುರ (Vijayapura)  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಕಿಡಿಕಾರಿದ್ದಾರೆ.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸ್ ಟಿಕೆಟ್ ದರ 15% ಏರಿಕೆ ವಿಚಾರವಾಗಿ, ಹೆಣ್ಣುಮಕ್ಕಳಿಗೆ ಉಚಿತ ಕೊಟ್ಟು ಗಂಡಸರಿಗೆ ಹೆಚ್ಚಿನ ದುಡ್ಡು ಹಾಕಿದ್ದಾರೆ. ಗಂಡಸರು ಏನು ಪಾಪ ಮಾಡಿದ್ದಾರೆ? ಇದು ಹೆಣ್ಣು ಮಕ್ಕಳಿಗೂ ಅನ್ಯಾಯವಾಗುತ್ತದೆ. ಮಕ್ಕಳು ಮನೆಯ ಯಜಮಾನರಿಗೂ ಅನ್ಯಾಯವಾಗುತ್ತದೆ. ಇವರ ರಕ್ಷಣೆ ಮಾಡಬೇಕೆಂದರೆ ಹೆಣ್ಣು ಮಕ್ಕಳೂ ಸಹ ಕಾಂಗ್ರೆಸ್‌ಗೆ ಮತ ಹಾಕಬಾರದೆಂದು ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಸಲ್ಮಾನ್ ಖಾನ್ ಸಿನಿಮಾ ನೋಡಲು ಕಾಯುತ್ತಿದ್ದೇವೆ: ರಾಮ್ ಚರಣ್

    ಕಲಬುರಗಿ ಪ್ರತಿಭಟನೆಯಲ್ಲಿ ವಿಜಯೇಂದ್ರ ಭಾಗಿ ಆಗದ ವಿಚಾರವಾಗಿ ಮಾತನಾಡಿ, ವಿಜಯೇಂದ್ರ ಅವರ ನೇತೃತ್ವದಲ್ಲಿ ಎಲ್ಲೆಡೆ ಪ್ರತಿಭಟನೆ ಎಂದು ಹೇಳಿಕೊಂಡಿದ್ದರು. ಪಾಪಾ ವಿಜಯೇಂದ್ರ ಅವರಿಗೆ ಏನು ಕೆಲಸ ಇತ್ತು ಗೊತ್ತಿಲ್ಲ. ನಿನ್ನೆ ಮೂರು ಕಡೆ ಹೋರಾಟ ಆಗಿದೆ. ಒಂದು ವಕ್ಫ್ ವಿರುದ್ಧ, ಪ್ರಿಯಾಂಕ್ ಖರ್ಗೆ ವಿರುದ್ಧ ಹೋರಾಟ, ಇನ್ನೊಂದು ಬಾಣಂತಿಯರ ಸಾವು ಹೋರಾಟ. ಆ ಪೈಕಿ ವಿಜಯೇಂದ್ರ ಅವರು ಬಾಣಂತಿಯರ ಸಾವಿನ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇದರಿಂದ ನಮ್ಮಲ್ಲಿ ಸಾಮೂಹಿಕ ನಾಯಕತ್ವ ಹೇಗಿದೆ ಎನ್ನುವುದು ಗೊತ್ತಾಗುತ್ತದೆ. ಅವರು ಅಲ್ಲಿ ಮಾಡಿದ್ದಾರೆ, ನಾವು ಇಲ್ಲಿ ಮಾಡಿದ್ದೇವೆ ಅಷ್ಟೇ ಎಂದು ಕಾಲೆಳದರು.

    ಆರ್.ಅಶೋಕ್ ಹಾಗೂ ವಿಜಯೇಂದ್ರ ಮಧ್ಯೆ ಹೊಂದಾಣಿಕೆ ಕೊರತೆ ವಿಚಾರವಾಗಿ, ಹಾಗೇನಿಲ್ಲ, ಆರ್.ಅಶೋಕ್ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗ್ತಾರೆ. ಬೆಳಗಾವಿ ಅಅಧಿವೇಶನದ ವೇಳೆ ನಮ್ಮ ಹಿರಿಯರ ಸಲಹೆ ಪಡೆದು ಚರ್ಚೆ ಮಾಡಿದ್ದಾರೆ. ಎಲ್ಲರಗೂ ಅವಕಾಶ ಕೊಟ್ಟಿದ್ದಾರೆ. ಅವರ ಬಗ್ಗೆ ನಮ್ಮದೇನು ಆರೋಪಗಳಿಲ್ಲ.

    ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆ ವಿಚಾರವಾಗಿ, ಚುನಾವಣೆ ಪ್ರಕ್ರಿಯೆ ಇದ್ದೇ ಇರುತ್ತದೆ. ಪ್ರಹ್ಲಾದ್ ಜೋಶಿ ಅವರು ಹೇಳಿದ್ದು ಸರಿಯಿದೆ. ಅವರು ಹೇಳಿದ್ರಲ್ಲಿ ತಪ್ಪೇನಿಲ್ಲ. ಇನ್ನು ಮುಂದೆ ಬರೋದು ರೆಗ್ಯುಲರ್ ಚುನಾಯಿತ ಅಧ್ಯಕ್ಷರು. ಅದು ಯಾರು ಆಗುತ್ತಾರೆ? ಯಾರು ಆಗಬೇಕು? ಎಂದು ರಾಜ್ಯ ಘಟಕ ಕೇಂದ್ರ ಹೈಕಮಾಂಡ್‌ಗೆ ಅಧಿಕಾರಿ ಕೊಟ್ಟಿದೆ. ಕೇಂದ್ರದ ಹೈಕಮಾಂಡ್ ಯಾರಿಗೆ ಅಧ್ಯಕ್ಷರನ್ನ ಮಾಡಬೇಕು ಎಂದು ಇಚ್ಛಿಸುತ್ತದೆ ಅವರನ್ನು ಮಾಡ್ತಾರೆ. ಚುನಾವಣೆ ಆಗೋದಿಲ್ಲ,ಸಹಮತ ಮಾಡಿಕೊಂಡು ರಾಜ್ಯಾಧ್ಯಕ್ಷ ಆಯ್ಕೆ ಮಾಡುತ್ತಾರೆ ಎಂದರು.

    ಇದೇ ವೇಳೆ ಸಂಕ್ರಾಂತಿ ಸಿದ್ದೇಶ್ವರ ಜಾತ್ರೆ ಕುರಿತು ಮಾತನಾಡಿದ ಅವರು, ಜನವರಿ 11 ರಿಂದ ಜಾತ್ರೆಗೆ ಚಾಲನೆ ನೀಡಲಾಗುವುದು. ಈ ಬಾರಿ ಮದ್ದು ಸುಡುವ ಕಾರ್ಯಕ್ರಮ ಕೇವಲ ಸಾಂಪ್ರಾದಾಯಿಕವಾಗಿ ಆಚರಿಸಲಾಗುವುದು. ಅಂತರಾಷ್ಟ್ರೀಯ ಮಟ್ಟದ ಕುಸ್ತಿ ಪಟುಗಳಿಂದ ಕುಸ್ತಿ ಸ್ಪರ್ಧೆ ನಡೆಯಲಿದ್ದು, ವಿವಿಧ ಕ್ರೀಡೆಗಳ ಸ್ಪರ್ಧೆ ಏರ್ಪಾಟು ಮಾಡಲಾಗುವುದು ಎಂದು ಹೇಳಿದರು.ಇದನ್ನೂ ಓದಿ: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ – ಪತಿ, ಅತ್ತೆಯ ವಿರುದ್ಧ ಕೊಲೆ ಆರೋಪ

  • ಫೆ.4ರಂದು ಬಸವನ ಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ: ಈಶ್ವರಪ್ಪ

    ಫೆ.4ರಂದು ಬಸವನ ಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ: ಈಶ್ವರಪ್ಪ

    ವಿಜಯಪುರ: ಫೆಬ್ರವರಿ 4 ರಂದು ವಿಜಯಪುರ (Vijayapura) ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ (Basavana Bagewadi) ಕ್ರಾಂತಿವೀರ ಬ್ರಿಗೇಡ್ (Krantiveera Brigade) ಉದ್ಘಾಟನೆ ನಡೆಯಲಿದೆ. 1,008 ಸಾದು ಸಂತರ ಪಾದ ಪೂಜೆ ಮೂಲಕ ಬ್ರಿಗೇಡ್ ಉದ್ಘಾಟನೆ ನಡೆಯಲಿದೆ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ.

    ಈ ಕುರಿತು ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 1 ಲಕ್ಷ ಜನ ಸೇರಿಸಿ ಕಾರ್ಯಕ್ರಮ ಮಾಡುತ್ತೇವೆ. ಇದಕ್ಕಾಗಿ ಜನವರಿ 12ರಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇವೆ. ಪ್ರವಾಸ ಮಾಡಿ ಬ್ರಿಗೇಡ್ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಬ್ರಿಗೇಡ್ ಅನ್ನು ಕನ್ಹೇರಿ ಮಠದ ಶ್ರೀಗಳು ಹಾಗೂ ಕಾಗಿನೆಲೆ ಮಹಾ ಸಂಸ್ಥಾನದ ಕನಕ ಗುರುಪೀಠದ ತಿಂಥಣಿ ಶಾಖಾ ಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಉದ್ಘಾಟನೆ ಮಾಡುತ್ತಾರೆ. ರಾಜ್ಯದ ವಿವಿಧ ಭಾಗಗಳಿಂದ ಒಂದು ಲಕ್ಷ ಜನ ಸೇರುವ ಸಾಧ್ಯತೆ ಇದೆ ಎಂದರು. ಇದನ್ನೂ ಓದಿ: ಚಿತ್ರಸಂತೆಗೆ ಚಾಲನೆ – ಮನೆಗೊಂದು ಕಲಾಕೃತಿ ಇರಬೇಕು: ಸಿಎಂ

    ಹಿಂದೂ ಸಮಾಜದ ಪರವಾಗಿ ಬ್ರಿಗೇಡ್ ಹೋರಾಟ ಮಾಡಲಿದೆ. ಹಿಂದುಳಿದ ವರ್ಗದ ಸ್ವಾಮೀಜಿಗಳ ಪರ ಬ್ರಿಗೇಡ್ ಕೆಲಸ ಮಾಡಲಿದೆ. ನನ್ನ ಜೀವನದಲ್ಲಿ ನಾನು ರಾಜಕಾರಣದ ಜೊತೆ ಜೊತೆಗೆ ಸಾಧು ಸಂತರ ಸೇವೆ ಮಾಡಿದ್ದೇನೆ. ಬ್ರಿಗೇಡ್ ಸ್ಥಾಪನೆ ಮಾಡೋದಕ್ಕೆ ಮುಖ್ಯ ಉದ್ದೇಶ ಹಿಂದುಳಿದ ಮಠಗಳ ಅಭಿವೃದ್ಧಿ. ಹಿಂದೂಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಇರಲಿದೆ ಎಂದು ಹೇಳಿದರು. ಇದನ್ನೂ ಓದಿ: ಸಚಿನ್ ಆತ್ಮಹತ್ಯೆ ಕೇಸ್ – ಬೀದರ್‌ನಲ್ಲಿ ಬಹುತೇಕ ತನಿಖೆ ಮುಕ್ತಾಯ, ಕಲಬುರಗಿಗೆ ತೆರಳಿದ ಸಿಐಡಿ ಟೀಂ

    ರಾಜಕಾರಣದ ಜೊತೆಗೆ ಧಾರ್ಮಿಕ ಕಾರ್ಯದಲ್ಲೂ ನಾನು ಭಾಗಿಯಾಗುತ್ತಿದ್ದೇನೆ. ಈ ಹಿಂದೆ ಮಠ, ಮಂದಿರಗಳಿಗೆ ಹಣ ನೀಡುವಂತೆ ಮಾಡಿದ್ದು ನಾನೇ. ಹೀಗಾಗಿ ನಾನು ಧಾರ್ಮಿಕ ಕೆಲಸ ಮಾಡುತ್ತಿದ್ದೇನೆ ಎಂದರು. ಇದನ್ನೂ ಓದಿ: Photo Gallery: ಬೆಂಗಳೂರಲ್ಲಿ ಚಿತ್ರಸಂತೆ – ಕಲಾಸಕ್ತರನ್ನು ಕೈಬೀಸಿ ಕರೆಯುತ್ತಿವೆ ಕಲಾಕೃತಿಗಳು..

    ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿ ನನ್ನ ವಿರುದ್ಧ ಆರೋಪ ಬಂದಾಗ ನಾನು ರಾಜೀನಾಮೆ ನೀಡಿದ್ದೇನೆ.ನಾನು ಆರ್‌ಎಸ್‌ಎಸ್‌ನಿಂದ ಬೆಳೆದು ಬಂದವನು. ಆರೋಪ ಬಂದ ತಕ್ಷಣವೇ ರಾಜೀನಾಮೆ ನೀಡಿದ್ದೇನೆ. ಕೆಲವರು ನನ್ನ ವಿರುದ್ಧ ರಾಜಕೀಯ ಮಾಡಿದರು. ಅವರು ಈಗ ಅನುಭವಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಯಾವುದೇ ಮಂತ್ರಿ, ಶಾಸಕರ ಮಕ್ಕಳು ಬಸ್‌ನಲ್ಲಿ ಓಡಾಡಲ್ಲ: ಟಿಕೆಟ್ ದರ ಏರಿಕೆಗೆ ಹೆಚ್‌ಡಿಕೆ ಕಿಡಿ

    ನನ್ನ ವಿರುದ್ಧ ಕೆಲವರು ಕೆಲಸ ಮಾಡಿದ್ದರು, ಅವರಿಗೆ ದೇವರೇ ಉತ್ತರ ನೀಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ಅವರಿಗೆ ದೇವರು ಒಳ್ಳೆದು ಮಾಡುತ್ತಾರೆ. ಇನ್ನು ನನ್ನ ವಿರುದ್ಧ ಕೆಲಸ ಮಾಡಿದವರು ಯಾರು, ಯಾವ ಪಕ್ಷದವರು ಅನ್ನೋದನ್ನ ಸಮಯ ಬಂದಾಗ ಗೊತ್ತಾಗುತ್ತೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಗುಜರಾತ್‌ನ ಪೋರಬಂದರ್‌ನಲ್ಲಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ, 3 ಸಾವು

  • ಸಿದ್ದೇಶ್ವರ ಶ್ರೀಗಳ 2ನೇ ಪುಣ್ಯಸ್ಮರಣೆ – ನಡೆದಾಡುವ ದೇವರ ನೆನಪಲ್ಲಿ ಗುರುನಮನ

    ಸಿದ್ದೇಶ್ವರ ಶ್ರೀಗಳ 2ನೇ ಪುಣ್ಯಸ್ಮರಣೆ – ನಡೆದಾಡುವ ದೇವರ ನೆನಪಲ್ಲಿ ಗುರುನಮನ

    ವಿಜಯಪುರ: ನಡೆದಾಡುವ ದೇವರು ಎಂದೇ ಕರೆಯಿಸಿಕೊಳ್ಳುತ್ತಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ (Siddeshwar Swamiji) 2ನೇ ಪುಣ್ಯಸ್ಮರಣೆ ಹಿನ್ನೆಲೆ ಗುರುನಮನ ಹಮ್ಮಿಕೊಳ್ಳಲಾಗಿತ್ತು.

    ಇಂದಿಗೆ (ಜ.02) ನಮ್ಮನ್ನೆಲ್ಲ ಅಗಲಿ ಎರಡು ವರ್ಷಗಳು ಕಳೆದಿವೆ. ಈ ಹಿನ್ನೆಲೆ ವಿಜಯಪುರದ (Vijayapura) ಜ್ಞಾನಯೋಗಾಶ್ರಮದಲ್ಲಿ ಗುರುನಮನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಇದನ್ನೂ ಓದಿ: ವಿಜಯಪುರ-ಮಂಗಳೂರು ರೈಲು ಯಲಿವಿಗಿಯಲ್ಲಿ ನಿಲುಗಡೆ – ರೈಲ್ವೆಗೆ ಬೊಮ್ಮಾಯಿ ಥ್ಯಾಂಕ್ಸ್

    ಕಾರ್ಯಕ್ರಮದಲ್ಲಿ ಮೇಘಾಲಯ ರಾಜ್ಯಪಾಲ ವಿಜಯಶಂಕರ್, ಸಚಿವ ಶಿವಾನಂದ ಪಾಟೀಲ, ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಹಾಗೂ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿಗಳು ಭಾಗಿಯಾಗಿದ್ದರು. ಶ್ರೀಗಳಿಗೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ಮಾತನಾಡಿದ ಹಲವರು ಸಿದ್ದೇಶ್ವರ ಸ್ವಾಮೀಜಿಗಳನ್ನು ನೆನೆದು, ನಾವೆಲ್ಲರು ಅವರ ಮಾರ್ಗದರ್ಶನದಂತೆ ನಾವೆಲ್ಲರೂ ನಡೆಯಬೇಕಾಗಿರುವುದು ನಮ್ಮ ಕರ್ತವ್ಯ ಎಂದರು. ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗಿಯಾಗಿದ್ದರು.ಇದನ್ನೂ ಓದಿ: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಯುವಕ

  • ವಿಜಯಪುರ-ಮಂಗಳೂರು ರೈಲು ಯಲಿವಿಗಿಯಲ್ಲಿ ನಿಲುಗಡೆ – ರೈಲ್ವೆಗೆ ಬೊಮ್ಮಾಯಿ ಥ್ಯಾಂಕ್ಸ್

    ವಿಜಯಪುರ-ಮಂಗಳೂರು ರೈಲು ಯಲಿವಿಗಿಯಲ್ಲಿ ನಿಲುಗಡೆ – ರೈಲ್ವೆಗೆ ಬೊಮ್ಮಾಯಿ ಥ್ಯಾಂಕ್ಸ್

    ಹಾವೇರಿ: ವಿಜಯಪುರ-ಮಂಗಳೂರು (Vijayapura-Mangaluru) ನಡುವೆ ಸಂಚರಿಸುವ ಮಂಗಳೂರು ಎಕ್ಸ್‌ಪ್ರೆಸ್‌ ರೈಲನ್ನು ಯಲವಿಗಿ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲು ಅವಕಾಶ ಕಲ್ಪಿಸಿರುವ ಕೇಂದ್ರ ರೈಲ್ವೆ ಸಚಿವರು ಹಾಗೂ ಅಧಿಕಾರಿಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಧನ್ಯವಾದ ತಿಳಿಸಿದ್ದಾರೆ.ಇದನ್ನೂ ಓದಿ:ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಯುವಕ

    ಈ ಕುರಿತು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಅವರು, ವಿಜಯಪುರ-ಮಂಗಳೂರು ರೈಲಿನ ಮೂಲಕ ಸಂಚರಿಸುವ ಪ್ರಯಾಣಿಕರಿಗೆ ಯಲವಿಗಿ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ರಾಜ್ಯದ ಪ್ರಮುಖ ದೇವಸ್ಥಾನಗಳಾದ ಶ್ರೀ ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ ಕ್ಷೇತ್ರಗಳಿಗೆ ಭೇಟಿ ನೀಡಲು ಅನುಕೂಲವಾಗಲಿದೆ. ಬಂದರು ನಗರಿ ಮಂಗಳೂರು ನಗರಕ್ಕೆ ಈ ರೈಲು ನೇರ ಸಂಪರ್ಕವನ್ನು ಒದಗಿಸಲಿದ್ದು, ಇದರ ಸದುಪಯೋಗವನ್ನು ಪಡೆಯಬೇಕೆಂದು ಜನತೆಗೆ ಮನವಿ ಮಾಡಿದ್ದಾರೆ. ನನ್ನ ಕೋರಿಕೆಗೆ ಸ್ಪಂದಿಸಿ ಯಲವಿಗಿ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲು ಅವಕಾಶ ಕಲ್ಪಿಸಿದ ರೈಲ್ವೆ ಇಲಾಖೆಗೆ ಧನ್ಯವಾದಗಳು ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

    ಯಲವಿಗಿ ರೈಲು ನಿಲ್ದಾಣದಲ್ಲಿ ವಿಜಯಪುರ – ಮಂಗಳೂರು ಎಕ್ಸ್‌ಪ್ರೆಸ್‌ ರೈಲು ಪ್ರತಿದಿನ ರಾತ್ರಿ 9:49 ಗಂಟೆಗೆ ನಿಲುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಮಾದಪ್ಪನ ಬೆಟ್ಟಕ್ಕೆ ಹೋಗುತ್ತಿದ್ದಾಗ ಕೆರೆಗೆ ಉರುಳಿದ ಕಾರು – ಇಬ್ಬರು ಸಾವು