Tag: ವಿಜಯಪುರ

  • ದುಬೈನಲ್ಲಿ ಅರಳಿದ ಪ್ರೀತಿ, ವಿಜಯಪುರದಲ್ಲಿ ಅಂತ್ಯ – ಹಣ, ಮೊಬೈಲ್ ದೋಚಿ ಪತಿ ಪರಾರಿ

    ದುಬೈನಲ್ಲಿ ಅರಳಿದ ಪ್ರೀತಿ, ವಿಜಯಪುರದಲ್ಲಿ ಅಂತ್ಯ – ಹಣ, ಮೊಬೈಲ್ ದೋಚಿ ಪತಿ ಪರಾರಿ

    ವಿಜಯಪುರ: ದುಬೈನ (Dubai) ಕತಾರ್‌ನಲ್ಲಿ ಪ್ರೀತಿ ಶುರುವಾಗಿ ಹಣ, ಮೊಬೈಲ್ ದೋಚಿ ಪತಿ ಪರಾರಿಯಾಗಿರುವ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ.

    ಯುವಕನನ್ನು ಆರೀಫ್ ಹಾಗೂ ಯುವತಿಯನ್ನು ಆಂಧ್ರದ ಚಿತ್ತಾಪುರ ಮೂಲದವಳು ಎಂದು ಗುರುತಿಸಲಾಗಿದೆ. ಯುವತಿಯ ಮೇಲೆ ಹಲ್ಲೆ ನಡೆಸಿ, ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದಾನೆ.ಇದನ್ನೂ ಓದಿ:ಗ್ಲ್ಯಾಮರಸ್‌ ಅವತಾರದಲ್ಲಿ ಸಾರಾ ಅಣ್ಣಯ್ಯ ಮಿಂಚಿಂಗ್

    ಕಳೆದ ನಾಲ್ಕು ವರ್ಷಗಳ ಹಿಂದೆ ದುಬೈನ ಕತಾರ್‌ನಲ್ಲಿ ಯುವತಿ ಕೆಲಸ ಮಾಡುತ್ತಿದ್ದಳು. ಆಗ ಯುವತಿಗೆ ಆರೀಫ್‌ನ ಪರಿಚಯವಾಗಿತ್ತು. ಅಲ್ಲಿ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. ಮೂರು ವರ್ಷಗಳ ಕಾಲ ದುಬೈನಲ್ಲಿ ಒಟ್ಟಿಗೆ ಇದ್ದರು. ಬಳಿಕ ಕರ್ನಾಟಕದ ಸ್ವಗ್ರಾಮಕ್ಕೆ ತೆರಳಿ ಸೆಟಲ್ ಆಗೋಣ ಎಂದು ಹೇಳಿ ವಿಜಯಪುರಕ್ಕೆ ಕರೆದುಕೊಂಡು ಬಂದಿದ್ದ. ಆಗ ಆರೀಫ್ ಕುಟುಂಬದವರು ಇಬ್ಬರಿಗೂ ಮದುವೆ ಮಾಡಿಸಿದ್ದರು.

    ಮದುವೆಯಾದ 20 ದಿನದಲ್ಲಿಯೇ ಆರೀಫ್ ಮನೆಯವರು ಯುವತಿಗೆ ತಲಾಖ್ ನೀಡುವಂತೆ ಒತ್ತಾಯಿಸಿ, ಕಿರುಕುಳ ನೀಡಿದ್ದರು. ಇದರಿಂದ ಬೇಸತ್ತ ಯುವತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಳು. ಆಗ ಆರೀಫ್ ಯುವತಿ ಜೊತೆ ಸರಿಯಾಗಿ ಸಂಸಾರ ಮಾಡುವುದಾಗಿ ತಿಳಿಸಿ ಮನೆಗೆ ಕರೆದುಕೊಂಡು ಬಂದಿದ್ದ.

    ಸ್ವಲ್ಪ ದಿನ ಸರಿಯಾಗಿದ್ದ, ಬಳಿಕ ಮತ್ತೆ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಅದಾದ ಮೇಲೆ ವಿಜಯಪುರದ ಬುರನಾಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ಅಲ್ಲಿಯೂ ಕೂಡ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಆಗ ಆರೀಫ್ ತನ್ನ ಇಬ್ಬರು ಸಂಬಂಧಿಕರೊಟ್ಟಿಗೆ ಬಂದು ಚಾಕು ತೋರಿಸಿ, ಜೀವ ಬೆದರಿಕೆ ಹಾಕಿದ್ದಾನೆ. ಜೊತೆಗೆ ಯುವತಿ ಬಳಿ ಇದ್ದ ಹಣ, ಮೊಬೈಲ್ ಸೇರಿದಂತೆ ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.

    ಸದ್ಯ ಯುವತಿ ಬೀದಿ ಪಾಲಾಗಿದ್ದು, ಆರೀಫ್ ಸಂಬಂಧಿಕರು ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ನನಗೆ ನ್ಯಾಯ ಸಿಗುತ್ತಿಲ್ಲ, ನ್ಯಾಯ ಸಿಗಲಿಲ್ಲ ಅಂದ್ರೆ ಆರೀಫ್ ಕುಟುಂಬಸ್ಥರು, ನನ್ನ ಮದುವೆ ಮಾಡಿಸಿದವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾಳೆ. ಇದೀಗ ನನ್ನ ಗಂಡನನ್ನ ಹುಡುಕಿ ಕೊಡಿ ಎಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.ಇದನ್ನೂ ಓದಿ: ಕೇಂದ್ರ ಸರ್ಕಾರದ ಬಜೆಟ್ ದೊಡ್ಡ ದೊಡ್ಡ ಘೋಷಣೆಗಳಿಗಷ್ಟೇ ಸೀಮಿತ: ಪ್ರಿಯಾಂಕ್‌ ಖರ್ಗೆ

     

  • ಹಾಡಹಗಲೇ ಶೂಟೌಟ್ – ಓರ್ವನ ಬರ್ಬರ ಹತ್ಯೆ, ಹಳೇ ದ್ವೇಷಕ್ಕೆ ಹರಿಯಿತಾ ನೆತ್ತರು?

    ಹಾಡಹಗಲೇ ಶೂಟೌಟ್ – ಓರ್ವನ ಬರ್ಬರ ಹತ್ಯೆ, ಹಳೇ ದ್ವೇಷಕ್ಕೆ ಹರಿಯಿತಾ ನೆತ್ತರು?

    ವಿಜಯಪುರ: ಕಾರಿನಲ್ಲಿ ಬರುತ್ತಿದ್ದ ಓರ್ವ ವ್ಯಕ್ತಿಯ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆಸಿ, ಬರ್ಬರ ಹತ್ಯೆಗೈದಿರುವ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಅರಕೇರಿ (Arakeri) ಗ್ರಾಮದ ಮನಾವರ ದೊಡ್ಡಿ ಬಳಿ ನಡೆದಿದೆ.

    ಮೃತನನ್ನು ಮನಾವರ ದೊಡ್ಡಿಯ ಸತೀಶ ರಾಠೋಡ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ:ಕೊಡಗಿನ ಕಟ್ಟೆಮಾಡು ದೇವಾಲಯದ ಅರ್ಚಕನ ಮೇಲೆ ಹಲ್ಲೆ ಕೇಸ್‌ – ಆರೋಪಿಗಳ ಪತ್ತೆಗೆ ತೀವ್ರ ಶೋಧ

    ಮೃತ ಸತೀಶ್ ಅರಕೇರಿ ಅಮೋಘಸಿದ್ಧ ದೇವಸ್ಥಾನಕ್ಕೆ ತೆರಳಿ ಮರಳುತ್ತಿದ್ದಾಗ 5 ಜನ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಕಾರಿನಲ್ಲಿದ್ದ ಸತೀಶ್ ಓಡಿ ಹೋಗುವಾಗ ಗುಂಡು ಹಾರಿಸಿದ್ದು, ಕೆಲ ಮೈಲಿ ದೂರ ಬಿದ್ದಿದ್ದಾನೆ. ಬಳಿಕ ಐವರು ಸ್ಥಳದಿಂದ ಪರಾರಿಯಾಗಿದ್ದಾರೆ.

    ಈ ಕುರಿತು ಸತೀಶ್ ತಂದೆ ಪ್ರೇಮಸಿಂಗ್ ಮಾತನಾಡಿ, ಮೃತ ಸತೀಶ್ ಮನೆಯ ಹತ್ತಿರದ ರಮೇಶ ಚವ್ಹಾಣ ಎಂಬುವವರ ಮಗಳನ್ನು ಪ್ರೀತಿಸುತ್ತಿದ್ದರು. ಇದನ್ನು ತಿಳಿದ ಸತೀಶ್ ತಂದೆ ಕುಟುಂಬ ಸಮೇತ ರಮೇಶ ಮನೆಗೆ ತೆರಳಿ ಇಬ್ಬರಿಗೂ ಮದುವೆ ಮಾಡಿಸುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಒಪ್ಪದ ರಮೇಶ್ ಮಗಳಿಗೆ ತಾಕೀತು ಮಾಡಿದ್ದರು. ಆದರೆ ಕಳೆದ ಒಂದು ವರ್ಷದ ಹಿಂದೆ ರಮೇಶ್ ಮಗಳು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅದೇ ದ್ವೇಷದಿಂದ ರಮೇಶ ಹಾಗೂ ಕೆಲವರು ಸೇರಿ ಸತೀಶ್ ಹತ್ಯೆ ಮಾಡಿದ್ದಾರೆಂದು ಆರೋಪಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಹತ್ಯೆಗೆ ಹಳೆಯ ದ್ವೇಷವೇ ಕಾರಣ ಎಂದು ಶಂಕಿಸಲಾಗಿದೆ. ಜೊತೆಗೆ ಶ್ವಾನ ದಳದಿಂದ ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ನಡೆದಿದ್ದು, ವಿಜಯಪುರ ಗ್ರಾಮೀಣ ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸರ ಸಂಪೂರ್ಣ ತನಿಖೆಯ ನಂತರ ಸತ್ಯಾಸತ್ಯತೆ ಹೊರಬರಲಿದೆ.ಇದನ್ನೂ ಓದಿ: ಫೆಬ್ರವರಿಗೆ ಪ್ರಧಾನಿ ಮೋದಿ ಅಮೆರಿಕಗೆ ಭೇಟಿ ಕೊಡ್ತಾರೆ: ಟ್ರಂಪ್‌

     

     

  • ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ: ಯತ್ನಾಳ್

    ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ: ಯತ್ನಾಳ್

    ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾನು ಸಿದ್ಧ. ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಿಷ್ಠಾವಂತರ ಗುಂಪಿನ ಕೋರ್ ಕಮಿಟಿಯಲ್ಲಿ ನನ್ನ ಹೆಸರು ಅಂತಿಮವಾದರೆ ಸ್ಪರ್ಧಿಸುವೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾನು ರೆಡಿ ಎಂದರು. ಇದನ್ನೂ ಓದಿ: ಐದು ವರ್ಷವೂ ಸಿದ್ದರಾಮಯ್ಯ ಸಿಎಂ: ಜಮೀರ್

    ಉಸ್ತುವಾರಿ ಸಭೆಗೆ ನಾನು ಹೋಗಿಲ್ಲ. ಅಲ್ಲಿ 600 ಶಾಸಕರ ಬೆಂಬಲ ಇದೆ, ಅಲ್ಲಿ ನಮಗೇನು ಕೆಲಸ. 600 ಶಾಸಕರು, 1,500 ಸಂಸದರು, 2,000 ಎಂಎಲ್‌ಸಿಗಳ ಬೆಂಬಲ ಇದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಕಳೆದ 1 ತಿಂಗಳಿಂದ ಸಿಕ್ತಿಲ್ಲ ಹೊಸ ಡಿಎಲ್‌, ಆರ್‌ಸಿ‌ ಸ್ಮಾರ್ಟ್ ಕಾರ್ಡ್; 15 ದಿನದಲ್ಲಿ ಸಮಸ್ಯೆ ಬಗೆಹರಿಯುತ್ತೆ: ರಾಮಲಿಂಗಾರೆಡ್ಡಿ

    ಯತ್ನಾಳ್, ಜಾರಕಿಹೊಳಿ ಹಿಂದೆ ಯಾವ ಮಗಾ ಇದ್ದಾನೆ? ಅದಕ್ಕೆ ನಾವು ಹೋಗಿಲ್ಲ. ಕಾರ್ಯಕರ್ತರ ಹುರುಪು ಆಗುವಂತೆ ಅಧ್ಯಕ್ಷರಾಗಬೇಕು. ರಾತ್ರಿ ಡಿಕೆಶಿ ಮನೆಯಲ್ಲಿ, ಮುಂಜಾನೆ ಸಿದ್ದರಾಮಯ್ಯ ಮನೆ. ಮತ್ತೆ ಬೆಳಗ್ಗೆ 11ಕ್ಕೆ ಬೋಲೋ ಭಾರತ್ ಮಾತಾ ಕೀ ಜೈ ಎಂದರೆ ಹೇಗೆ? ಎಂದು ಪರೋಕ್ಷವಾಗಿ ವಿಜಯೇಂದ್ರರನ್ನು ಕುಟುಕಿದರು. ಇದನ್ನೂ ಓದಿ: Kolar| ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಟ್ಯಾಂಕರ್ ಪಲ್ಟಿ

  • ಮರಕ್ಕೆ ಕಾರು ಡಿಕ್ಕಿ – ಸ್ಥಳದಲ್ಲೇ ಮೂವರು ಸಾವು

    ಮರಕ್ಕೆ ಕಾರು ಡಿಕ್ಕಿ – ಸ್ಥಳದಲ್ಲೇ ಮೂವರು ಸಾವು

    ವಿಜಯಪುರ: ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ಕನ್ನಾಳ ಕ್ರಾಸ್ (Kannal Cross) ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.

    ಮೃತರನ್ನು ಅಭಿಷೇಕ್ ಸಾವಂತ್ (23), ವಿಜಯಕುಮಾರ್ ಔರಂಗಾಬಾದ್ (24) ರಾಜು ಬಿರಾದಾರ (23) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಕಠಿಣ ಕಾನೂನು ಜಾರಿ: ಪರಮೇಶ್ವರ್

    ಕಾರಿನಲ್ಲಿ ಐವರು ಸೊಲ್ಲಾಪುರಕ್ಕೆ ಹೋಗಿದ್ದರು. ತಡರಾತ್ರಿ ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

    ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತರ ಶವಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಮತ್ತೆ ಕೋಟಿ ಒಡೆಯನಾದ ಮಾದಪ್ಪ – 30 ದಿನಗಳಲ್ಲಿ 2.29 ಕೋಟಿ ಕಾಣಿಕೆ ಸಂಗ್ರಹ

  • PUBLiC TV Impact | ಕಾರ್ಮಿಕರಿಗೆ ಥಳಿತ ಪ್ರಕರಣ – ಮಾಲೀಕ ಸೇರಿ ಮೂವರು ಅರೆಸ್ಟ್

    PUBLiC TV Impact | ಕಾರ್ಮಿಕರಿಗೆ ಥಳಿತ ಪ್ರಕರಣ – ಮಾಲೀಕ ಸೇರಿ ಮೂವರು ಅರೆಸ್ಟ್

    ವಿಜಯಪುರ: ಜಿಲ್ಲೆಯಲ್ಲಿ ಕಾರ್ಮಿಕರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಜಿಲ್ಲೆಯ ಎಪಿಎಂಸಿ (APMC) ಪೊಲೀಸರು ಬಂಧಿಸಿದ್ದಾರೆ.

    ವಿಜಯಪುರದ (Vijayapura) ಗಾಂಧಿನಗರ ಏರಿಯಾದಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ ಕಾರ್ಮಿಕರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ `ಪಬ್ಲಿಕ್ ಟಿವಿ’ ಸುದ್ದಿ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೆ ಆರೋಪಿ ಖೇಮು ರಾಠೋಡ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ.ಇದನ್ನೂ ಓದಿ: ಮೊದಲು ಕಾಂಗ್ರೆಸ್ ಶಾಸಕರನ್ನ ಉಳಿಸಿಕೊಳ್ಳಲಿ: ಎಂ.ಬಿ ಪಾಟೀಲ್‌ಗೆ ವಿಜಯೇಂದ್ರ ಟಕ್ಕರ್

    ಈ ಕುರಿತು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಿದ್ದೇವೆ. ಆದಷ್ಟು ಬೇಗ ಅವರನ್ನ ಬಂಧಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಬಿಎನ್‌ಎಸ್ ಸೆಕ್ಷನ್ 109ರ ಅಡಿಯಲ್ಲಿ (ಕೊಲೆಗೆ ಯತ್ನ) ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಘಟನೆ ಏನು?
    ಕೆಲಸಕ್ಕೆ ಬರುವುದಿಲ್ಲ ಎಂದ ಕಾರ್ಮಿಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ವಿಜಯಪುರದ ಗಾಂಧಿನಗರ ಏರಿಯಾದಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ ನಡೆದಿತ್ತು.

    ಬಾಗಲಕೋಟೆ ಜಿಲ್ಲೆಯ ಚಿಕ್ಕಲಗಿ ಗ್ರಾಮದ ನಿವಾಸಿಗಳಾದ ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ ಮಾದರ ಎಂಬ ಕಾರ್ಮಿಕರ ಮೇಲೆ ಖೇಮು ರಾಠೋಡ ಹಾಗೂ ಸಂಬಂಧಿಕರು ಮನಬಂದಂತೆ ಹಲ್ಲೆ ನಡೆಸಿದ್ದರು. ಸದ್ಯ ಕಾರ್ಮಿಕರು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಲೀಕ ಪ್ರತಿದಿನ ಕಾರ್ಮಿಕರಿಗೆ 600 ರೂ. ಕೂಲಿ ನೀಡಲಾಗುತ್ತಿತ್ತು. ಕಳೆದ ಸಂಕ್ರಮಣದಂದು ಮನೆಗೆ ತೆರಳಿದ್ದ ಕಾರ್ಮಿಕರು ಮರಳಿ 16 ರಂದು ಇಟ್ಟಿಗೆ ಭಟ್ಟಿಗೆ ಬಂದಿದ್ದರು. ಬಂದ ಕಾರ್ಮಿಕರು ತಮ್ಮ ಸಾಮಾನುಗಳನ್ನು ಕೊಂಡೊಯ್ಯಲು ಮುಂದಾಗುತ್ತಿದ್ದರು.

    ಈ ವಿಚಾರ ತಿಳಿದ ಮಾಲೀಕ ಬೇರೆ ಕಡೆ ಕೆಲಸಕ್ಕೆ ಹೋಗುತ್ತಿರುವುದು ಯಾಕೆ ಎಂದು ಹೇಳಿ ತನ್ನ ಜನರನ್ನು ಕರೆಸಿ ಹಲ್ಲೆ ಮಾಡಿಸಿದ್ದ. ಮೂರು ದಿನ ಕೂಡಿ ಹಾಕಿ ಪೈಪ್‌ನಿಂದ ಬೆನ್ನು, ಕಾಲು, ಸೊಂಟದ ಮೇಲೆ ಮನಬಂದಂತೆ ಥಳಿಸಿದ್ದರು.ಇದನ್ನೂ ಓದಿ: ನನ್ನನ್ನು ಟಾರ್ಗೆಟ್ ಮಾಡೋರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಯತ್ನಾಳ್‌ಗೆ ವಿಜಯೇಂದ್ರ ತಿರುಗೇಟು

  • ಕಾರ್ಮಿಕರ ಹಲ್ಲೆ ಖಂಡನೀಯ, ಆರೋಪಿಗಳ ಬಂಧನಕ್ಕೆ ಸೂಕ್ತ ಕ್ರಮ – ಎಂ.ಬಿ ಪಾಟೀಲ್

    ಕಾರ್ಮಿಕರ ಹಲ್ಲೆ ಖಂಡನೀಯ, ಆರೋಪಿಗಳ ಬಂಧನಕ್ಕೆ ಸೂಕ್ತ ಕ್ರಮ – ಎಂ.ಬಿ ಪಾಟೀಲ್

    ಬೆಂಗಳೂರು/ವಿಜಯಪುರ: ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ, ಆರೋಪಿಗಳ ಬಂಧನಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ (MB Patil)  ಹೇಳಿದರು.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾರ್ಮಿಕರ ಮೇಲೆ ಹಲ್ಲೆ ಖಂಡನೀಯ, ಈ ಕುರಿತು ಎಸ್‌ಪಿ ಜೊತೆ ಸಂಪರ್ಕದಲ್ಲಿದ್ದೇನೆ. ಪೊಲೀಸರಿಂದ ನಾನು ಮಾಹಿತಿ ಪಡೆದಿದ್ದೇನೆ. ಈಗಾಗಲೇ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಎಪಿಎಂಸಿ ವ್ಯಾಪ್ತಿಯ ಬಾವಿಕಟ್ಟಿ ತಾಂಡಾದಲ್ಲಿ ಈ ಘಟನೆ ನಡೆದಿದೆ. ಮೂವರು ದಲಿತ ಸಮುದಾಯಕ್ಕೆ ಸೇರಿದವರು. ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸುತ್ತೇವೆ. ಈ ಕುರಿತು ಜಿಲ್ಲಾಧಿಕಾರಿಯ ಜೊತೆಗೂ ಮಾತನಾಡಿದ್ದೇನೆ. ಮಾಲೀಕ ಖೇಮು ರಾಠೋಡ ಕಾಂಪ್ರಮೈಸ್‌ಗೂ ಯತ್ನ ನಡೆಸಿದ್ದ. ಆದರೆ ಅದ್ಯಾವುದಕ್ಕೂ ಅವಕಾಶ ಕೊಡದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ಕಿತ್ತಾಟ ಜೋರು – ಕೊನೆಗೂ ಹೈಕಮಾಂಡ್‌ ಎಂಟ್ರಿ

    ಘಟನೆ ಏನು?
    ಕೆಲಸಕ್ಕೆ ಬರುವುದಿಲ್ಲ ಎಂದ ಕಾರ್ಮಿಕರಿಗೆ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ವಿಜಯಪುರದ ಗಾಂಧಿನಗರ ಏರಿಯಾದಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ ನಡೆದಿತ್ತು.

    ಬಾಗಲಕೋಟೆ ಜಿಲ್ಲೆಯ ಚಿಕ್ಕಲಗಿ ಗ್ರಾಮದ ನಿವಾಸಿಗಳಾದ ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ ಮಾದರ ಎಂಬ ಕಾರ್ಮಿಕರ ಮೇಲೆ ಖೇಮು ರಾಠೋಡ ಹಾಗೂ ಸಂಬಂಧಿಕರು ಮನ ಬಂದಂತೆ ಹಲ್ಲೆ ನಡೆಸಿದ್ದರು. ಸದ್ಯ ಕಾರ್ಮಿಕರು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಲೀಕ ಪ್ರತಿದಿನ ಕಾರ್ಮಿಕರಿಗೆ 600 ರೂ. ಕೂಲಿ ನೀಡಲಾಗುತ್ತಿತ್ತು. ಕಳೆದ ಸಂಕ್ರಮಣದಂದು ಮನೆಗೆ ತೆರಳಿದ್ದ ಕಾರ್ಮಿಕರು ಮರಳಿ 16 ರಂದು ಇಟ್ಟಿಗೆ ಭಟ್ಟಿಗೆ ಬಂದಿದ್ದರು. ಬಂದ ಕಾರ್ಮಿಕರು ತಮ್ಮ ಸಾಮಾನುಗಳನ್ನು ಕೊಂಡೊಯ್ಯಲು ಮುಂದಾಗುತ್ತಿದ್ದರು.

    ಈ ವಿಚಾರ ತಿಳಿದ ಮಾಲೀಕ ಬೇರೆ ಕಡೆ ಕೆಲಸಕ್ಕೆ ಹೋಗುತ್ತಿರುವುದು ಯಾಕೆ ಎಂದು ಹೇಳಿ ತನ್ನ ಜನರನ್ನು ಕರೆಸಿ ಹಲ್ಲೆ ಮಾಡಿಸಿದ್ದ. ಮೂರು ದಿನ ಕೂಡಿ ಹಾಕಿ ಪೈಪ್‌ನಿಂದ ಬೆನ್ನು, ಕಾಲು, ಸೊಂಟದ ಮೇಲೆ ಮನ ಬಂದಂತೆ ಥಳಿಸಿದ್ದರು.ಇದನ್ನೂ ಓದಿ: ಗೋಮೂತ್ರದ ಔಷಧೀಯ ಗುಣಗಳನ್ನ ಪರಿಗಣಿಸಬೇಕು – ಐಐಟಿ ಮದ್ರಾಸ್‌ ನಿರ್ದೇಶಕ

  • ಕೆಲಸಕ್ಕೆ ಬರಲ್ಲ ಎಂದಿದ್ದಕ್ಕೆ ಕಾರ್ಮಿಕರ ಮೇಲೆ ಮನಬಂದಂತೆ ಥಳಿತ

    ಕೆಲಸಕ್ಕೆ ಬರಲ್ಲ ಎಂದಿದ್ದಕ್ಕೆ ಕಾರ್ಮಿಕರ ಮೇಲೆ ಮನಬಂದಂತೆ ಥಳಿತ

    ವಿಜಯಪುರ: ಕೆಲಸಕ್ಕೆ ಬರುವುದಿಲ್ಲ ಎಂದ ಕಾರ್ಮಿಕರಿಗೆ ಹಿಗ್ಗಾ ಮುಗ್ಗಾ ಥಳಿಸಿದ (Assult) ಘಟನೆ ವಿಜಯಪುರದ (Vijayapura)  ಗಾಂಧಿನಗರ ಏರಿಯಾದಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ ನಡೆದಿದೆ.

    ಮಾಲೀಕ ಖೇಮು ರಾಠೋಡ ಹಾಗೂ ಸಂಬಂಧಿಕರು ಮನ ಬಂದಂತೆ ಹಲ್ಲೆ ನಡೆಸಿದ್ದಾರೆ. ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ ಮಾದರ ಮೇಲೆ ಹಲ್ಲೆ ನಡೆದಿದ್ದು ಕಾರ್ಮಿಕರು ಈಗ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪ್ರತಿದಿನ ಕಾರ್ಮಿಕರಿಗೆ 600 ರೂ. ಕೂಲಿ ನೀಡಲಾಗುತ್ತಿತ್ತು. ಕಳೆದ ಸಂಕ್ರಮಣದಂದು ಮನೆಗೆ ತೆರಳಿದ್ದ ಕಾರ್ಮಿಕರು ಮರಳಿ 16 ರಂದು ಇಟ್ಟಿಗೆ ಭಟ್ಟಿಗೆ ಬಂದಿದ್ದರು. ಬಂದ ಕಾರ್ಮಿಕರು ತಮ್ಮ ಸಾಮಾನುಗಳನ್ನು ಕೊಂಡೊಯ್ಯಲು ಮುಂದಾಗುತ್ತಿದ್ದರು.

    ಈ ವಿಚಾರ ತಿಳಿದ ಮಾಲೀಕ ಬೇರೆ ಕಡೆ ಕೆಲಸಕ್ಕೆ ಹೋಗುತ್ತಿರುವುದು ಯಾಕೆ ಎಂದು ಹೇಳಿ ತನ್ನ ಜನರನ್ನು ಕರೆಸಿ ಹಲ್ಲೆ ಮಾಡಿಸಿದ್ದಾನೆ. ಮೂರು ದಿನ ಕೂಡಿ ಹಾಕಿ ಪೈಪ್‌ನಿಂದ ಬೆನ್ನು, ಕಾಲು, ಸೊಂಟದ ಮೇಲೆ  ಮನ ಬಂದಂತೆ ಥಳಿಸಿದ್ದಾರೆ.

      

  • ವಿಜಯೇಂದ್ರ ಯಡಿಯೂರಪ್ಪಗೆ ಹೊರಗೆ ಪೂಜ್ಯ ತಂದೆ, ಮನೇಲಿ ಮುದಿಯಾ ಅಂತಾನೆ – ಯತ್ನಾಳ್

    ವಿಜಯೇಂದ್ರ ಯಡಿಯೂರಪ್ಪಗೆ ಹೊರಗೆ ಪೂಜ್ಯ ತಂದೆ, ಮನೇಲಿ ಮುದಿಯಾ ಅಂತಾನೆ – ಯತ್ನಾಳ್

    ವಿಜಯಪುರ: ಯಡಿಯೂರಪ್ಪಗೆ ಮನೆಯಲ್ಲಿ ಕಿಮ್ಮತ್ತಿಲ್ಲ, ವಿಜಯೇಂದ್ರ ಹೊರಗಡೆ ಪೂಜ್ಯ ತಂದೆ, ಮನೆಯಲ್ಲಿ ಮುದಿಯಾ ಎಂದು ಕರೆಯುತ್ತಾನೆ ಎಂದು ವಿಜಯಪುರ (Vijayapura) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ (BY Vijayendra) ಮಾಡಿದ ತಪ್ಪಿನಿಂದಲೇ ಯಡಿಯೂರಪ್ಪ (BS Yediyurappa) ಜೈಲಿಗೆ ಹೋದದ್ದು, ಅವನಿಂದಲೇ ಹಾಳಾಗಿದ್ದು, ಮೊದಲು ಮಗನ ವ್ಯಾಮೋಹ ಬಿಡಲಿ. ಯಡಿಯೂರಪ್ಪಗೆ ಮನೆಯಲ್ಲಿ ಕಿಮ್ಮತ್ತಿಲ್ಲ. ಹೊರಗಡೆ ಪೂಜ್ಯ ತಂದೆ, ಮನೆಯಲ್ಲಿ ಮುದಿಯಾ ಎಂದು ಕರೆಯುತ್ತಾನೆ. ಯಡಿಯೂರಪ್ಪ ಕೂಡ ಎಷ್ಟು ಜನರಿಗೆ ಮೋಸ ಮಾಡಿಲ್ಲ. ಬಿಬಿ ಶಿವಪ್ಪ, ಮಲ್ಲಿಕಾರ್ಜುನಯ್ಯ ಅವರಿಗೆ ಅನ್ಯಾಯ ಮಾಡಿದ್ದಾನೆ. ತಮ್ಮ ಸ್ವಾರ್ಥಕ್ಕಾಗಿ ಅನೇಕರನ್ನು ಮಣ್ಣಲ್ಲಿ ಇಟ್ಟಿದ್ದಾರೆ. ಸುಮ್ಮನೇ ಮೊಮ್ಮಕ್ಕಳ ಜೊತೆ ಆಟ ಆಡುತ್ತಾ ಕೂಡಲಿ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಪೆಟ್ರೋಲ್ ಟ್ಯಾಂಕರ್ ಪಲ್ಟಿ, ಕ್ಯಾನ್‌ನಲ್ಲಿ ತುಂಬಿಕೊಳ್ಳುತ್ತಿದಾಗ ಸ್ಫೋಟ – 70 ಮಂದಿ ಸಾವು

    ನಮ್ಮ ವಿರುದ್ಧ ಎರಡು ಹಂದಿಗಳು ಬಿಟ್ಟರೆ ಬೇರೆ ಯಾರೂ ಮಾತನಾಡಲ್ಲ. ಆ ಹಂದಿಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ವಿಜಯೇಂದ್ರ ಪರ ಹೊಗಳು ಭಟರು ಮಾತ್ರ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

    ನಾನು ಸದಾಕಾಲ ರಮೇಶ್ ಜಾರಕಿಹೊಳಿ ಪರವಾಗಿದ್ದೇನೆ. ವಿಜಯೇಂದ್ರ ರಾಜ್ಯಾಧ್ಯಕ್ಷನಾಗಲು ಲಾಯಕ್ಕಿಲ್ಲ. ಅವನನ್ನು ನಾವ್ಯಾರು ಒಪ್ಪಲ್ಲ, ಅವನು ಕೂಡ ರಾಜೀನಾಮೆ ಕೊಡಬೇಕು. ಇವನಿಂದಲೇ ಪಾಪ ಸುನೀಲ್ ಕುಮಾರ್ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ ಅಂತಾ ಇದೆ. ರಮೇಶ್ ಜಾರಕಿಹೊಳಿ ಅವರು ಮಾತನಾಡಿರುವುದರಲ್ಲಿ ತಪ್ಪೇನಿಲ್ಲ. ನಾವು ಉತ್ತರ ಕರ್ನಾಟಕದ ಜನರು ಹೀಗೇ, ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾಗ ಕೂಡ ನಾನು ಒಬ್ಬನೆ ಹೋಗಿದ್ದೆ. ನಾವು ಯಾರಿಗೂ ಹೆದರಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ಡಾಬಾ, ಬೀಡಾ ಅಂಗಡಿಗೆ ಗುದ್ದಿದ ಬಿಎಂಟಿಸಿ ಬಸ್!

  • 60 ಜನ ಕಾಂಗ್ರೆಸ್‌ನವರು ನಮ್ಮೊಟ್ಟಿಗೆ ಬರಲು ರೆಡಿಯಾಗಿದ್ದರು – ಯತ್ನಾಳ್ ಬಾಂಬ್

    60 ಜನ ಕಾಂಗ್ರೆಸ್‌ನವರು ನಮ್ಮೊಟ್ಟಿಗೆ ಬರಲು ರೆಡಿಯಾಗಿದ್ದರು – ಯತ್ನಾಳ್ ಬಾಂಬ್

    -ನೋ ಆಪರೇಷನ್, ಓನ್ಲಿ ಕಾಂಗ್ರೆಸ್ ಡೈವರ್ಷನ್ ಎಂದ ಶಾಸಕ

    ವಿಜಯಪುರ: ಕಾಂಗ್ರೆಸ್‌ನ (Congress) ಸಾಕಷ್ಟು ಜನ ನಮಗೆ ಅಪ್ರೋಚ್ ಮಾಡಿದ್ದರು, 60 ಜನ ನಮ್ಮೊಟ್ಟಿಗೆ ಬರಲು ರೆಡಿಯಾಗಿದ್ದರು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal)  ಹೇಳಿದರು.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಆಗುತ್ತಿಲ್ಲ. ಹೀಗಾಗಿ ನಮ್ಮ ಕ್ಷೇತ್ರಕ್ಕೆ ದುಡ್ಡು ಸಿಗುತ್ತಿಲ್ಲ ಎಂದು ನನ್ನ ಜೊತೆ ಸಾಕಷ್ಟು ಜನ ಮಾತನಾಡಿದರು. ಸಾಕಷ್ಟು ಜನ ನಮಗೆ ಅಪ್ರೋಚ್ ಮಾಡಿ, ನಾವು ಒಂದಿಷ್ಟು ಜನ ಕಾಂಗ್ರೆಸ್ ಬಿಟ್ಟು ಬರ್ತೀವಿ ಎಂದು ಹೇಳಿದ್ದರು. ಜೊತೆಗೆ ಕಾಂಗ್ರೆಸ್ ಸರ್ಕಾರವನ್ನು ತೆಗೆದು ಹಾಕೋಣ ಎಂದಿದ್ದರು. ಕಾಂಗ್ರೆಸ್ ಶಾಸಕರಿಂದಲೇ ಸರ್ಕಾರ ಉರುಳಿಸಲು ಪ್ಲಾನ್ ನಡೆದಿತ್ತಾ? ಎಂಬ ಸ್ಪೋಟಕ ಮಾಹಿತಿಯನ್ನು ಹೊರಹಾಕಿದರು.ಇದನ್ನೂ ಓದಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೋಲ್ಕತ್ತಾ ಟ್ರೈನಿ ವೈದ್ಯೆ ರೇಪ್‌ ಕೇಸ್‌ – ಸಂಜಯ್‌ ರಾಯ್‌ ದೋಷಿ

    ಇದೇ ವೇಳೆ ಸತೀಶ್ ಜಾರಕಿಹೊಳಿ (Satish Jarkiholi) ಟೀಂ ವಿದೇಶ ಪ್ರಯಾಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸತೀಶ್ ಜಾರಕಿಹೊಳಿ ಸಿಎಂ ಪರವಾಗಿರುವ ವ್ಯಕ್ತಿ. ಇದರ ಹಿಂದೆ ಸಿದ್ದರಾಮಯ್ಯನವರೇ (CM Siddaramaiah) ಇರಬಹುದು. ಇನ್ನೂ ಕಳೆದ ವರ್ಷವೇ ಸತೀಶ್ ಜಾರಕಿಹೊಳಿ ಬೆಂಬಲಿಗರು ದುಬೈಗೆ ಹೋಗುವ ಪ್ಲಾನ್ ಇತ್ತು. ಸತೀಶ್ ಜಾರಕಿಹೊಳಿ ಹಾಗೂ ಸಿದ್ದರಾಮಯ್ಯನವರು ಎಲ್ಲರೂ ಒಂದೇ ಆಗಿದ್ದಾರೆ. ಅಲ್ಲಿ ಎಲ್ಲವೂ ಸಿದ್ದರಾಮಯ್ಯನವರ ನಿರ್ದೇಶನದಂತೆ ನಡೆಯುತ್ತದೆ. ಒಟ್ಟಾರೆ ಕಾಂಗ್ರೆಸ್‌ನಲ್ಲಿ ಗುಂಪು ರಾಜಕೀಯಕ್ಕೆ ರಾಷ್ಟ್ರೀಯ ಅಧ್ಯಕ್ಷರು ಎಚ್ಚರಿಕೆ ಕೊಟ್ಟರೂ ಸಹ ಕೇರ್ ಮಾಡುತ್ತಿಲ್ಲ. ಇದರ ಅರ್ಥ ಸರ್ಕಾರದಲ್ಲಿ ಅಸಮಾಧಾನದ ಹೊಗೆ ಇದೆ ಎಂದರ್ಥ ಎಂದು ವಾಗ್ದಾಳಿ ನಡೆಸಿದರು.

    ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಕಾರ್ಯಕರ್ತರನಿಗೂ ನಿಲ್ಲುವ ಹಕ್ಕಿದೆ. ವಿಜಯೇಂದ್ರ ಸ್ಪರ್ಧೆ ಮಾಡುತ್ತಿದ್ದರೆ ಮಾಡಲಿ, ಚುನಾವಣೆ ಆಗಿದ್ದೇ ಆದಲ್ಲಿ ನಾವು ಕೂಡ ಯೋಚನೆ ಮಾಡಿದ್ದೇವೆ, ಅದನ್ನು ಆಗ ಪ್ರಕಟಣೆ ಮಾಡುತ್ತೇವೆ. ಚುನಾವಣೆ ನಡೆದರೆ ಯರ‍್ಯಾರು ಸ್ಪರ್ಧಿಸುತ್ತಾರೆ ಎಂದು ನೋಡಬೇಕು. ನಮ್ಮ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ಗುಂಪಿನಲ್ಲಿ ಚರ್ಚೆ ಮಾಡುತ್ತೇವೆ. ಸದ್ಯ ಈಗಿನ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷರ ಆಯ್ಕೆ ಆಗುತ್ತಿದೆ. ಅದು ಪಾರದರ್ಶಕವಾಗಿ ನಡೆಯಬೇಕು. ಮುಂದೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಜಿಲ್ಲಾಧ್ಯಕ್ಷರುಗಳು ಮತದಾನ ಮಾಡುತ್ತಾರೆ. ಆಗ ಅವರಿಗೆ ಒತ್ತಡ ಹೇರಿದಂತಾಗುತ್ತದೆ ಎಂದರು.

    ವಿಜಯೇಂದ್ರ (BY Vijayendra) ಕಲೆಕ್ಷನ್ ಮಾಸ್ಟರ್, ಯಡಿಯೂರಪ್ಪ ಅವರನ್ನ ಜೈಲಿಗೆ ಕಳಿಸಿದ್ದೆ ವಿಜಯೇಂದ್ರ. ಸುಮ್ಮನೆ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟುಬಿಡು. ನಮ್ಮ ಕೈಯಲ್ಲಿ ಪಕ್ಷ ಸಿಕ್ಕರೆ 130 ಸೀಟ್ ತರುತ್ತೇವೆ. ಇಲ್ಲವಾದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಸವಾಲ್ ಹಾಕಿದರು. ದೇವರಾಣೆ ಮಾಡಿ ಹೇಳುತ್ತೇನೆ. ಈಗಲೂ 60 ಮಂದಿ ಬಿಜೆಪಿಗೆ ಬರಲು ರೆಡಿಯಾಗಿದ್ದಾರೆ. ಆದರೆ ನಾವು ಆಪರೇಷನ್ ಮಾಡಲ್ಲ. ಕಾಂಗ್ರೆಸ್ ಶಾಸಕರು ಬರಬೇಕು ಎನ್ನುವ ಇಚ್ಛೆ ನಮಗೆ ಇಲ್ಲ. ಅವರು ಬಂದರೆ ಬಿಜೆಪಿಯ ಸಿದ್ಧಾಂತಗಳು ಹಾಳಾಗುತ್ತವೆ. ಹಿಂದೂಗಳ ಮೇಲೆ ಅತ್ಯಾಚಾರವಾಗುತ್ತದೆ, ಲವ್ ಜಿಹಾದ್ ನಡೆಯುತ್ತವೆ. ಎಲ್ಲರನ್ನು ತೆಗೆದುಕೊಂಡರೆ ನಮ್ಮ ಸಿದ್ಧಾಂತ ಬಲಿಯಾಗುತ್ತೇವೆ. ಈ ಬಾರಿ ಬಲಿಯಾಗುವುದು ಬೇಡ ಎಂದು ಸುಮ್ಮನಿದ್ದೇವೆ. ನೋ ಆಪರೇಷನ್, ಓನ್ಲಿ ಕಾಂಗ್ರೆಸ್ ಡೈವರ್ಷನ್. ಮುಂದಿನ ಚುನಾವಣೆಯಲ್ಲಿ ಜನ ಬಿಜೆಪಿಗೆ ಪರ್ಮಿಷನ್ ಕೊಡುತ್ತಾರೆ. ನಾವು ಆಯ್ಕೆಯಾಗ್ತೀವಿ, ಸರ್ಕಾರ ನಡೆಸುತ್ತೇವೆ ಎಂದು ತಿಳಿಸಿದರು.ಇದನ್ನೂ ಓದಿ: ಇಡಿಯಿಂದ 300 ಕೋಟಿ ಮೌಲ್ಯದ ಆಸ್ತಿ ಜಪ್ತಿ – ಮುಡಾ ಕೇಸ್‌ ಸಿಬಿಐಗೆ ನೀಡಬೇಕು: ಅಶೋಕ್‌

  • ವಿಜಯಪುರದಲ್ಲಿ ಮುಸುಕುಧಾರಿ ಗ್ಯಾಂಗ್‌ ಅಟ್ಟಹಾಸ – ದರೋಡೆಕೋರರ ಬೆನ್ನತ್ತಿ ಗುಂಡಿಟ್ಟ ಖಾಕಿ ಪಡೆ

    ವಿಜಯಪುರದಲ್ಲಿ ಮುಸುಕುಧಾರಿ ಗ್ಯಾಂಗ್‌ ಅಟ್ಟಹಾಸ – ದರೋಡೆಕೋರರ ಬೆನ್ನತ್ತಿ ಗುಂಡಿಟ್ಟ ಖಾಕಿ ಪಡೆ

    ವಿಜಯಪುರ: ನಗರದಲ್ಲಿ ಖತರ್ನಾಕ್ ಮುಸುಕುಧಾರಿಗಳ ಗ್ಯಾಂಗ್ ದಾಂಧಲೆ ನಡೆಸಿದೆ. ರಾತ್ರೋ ರಾತ್ರಿ ಮನೆಗೆ ನುಗ್ಗಿ ದಾಂಧಲೆ ಸೃಷ್ಟಿಸಿದ ಮುಸುಕುಧಾರಿಗಳು ನಗರದ ಜೈನಾಪೂರ ಲೈಔಟ್‌ನಲ್ಲಿ ಅಟ್ಟಹಾಸ ಮೆರೆದಿದ್ದಾರೆ. ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಹಲ್ಲೆ ಮಾಡಿ ಬಂಗಾರ ದೋಚಿ ಪರಾರಿಯಾಗಿದ್ದಾರೆ. ದರೋಡೆಕೋರರ ಬೆನ್ನುಹತ್ತಿದ್ದ ಪೊಲಿಸರು ಗುಂಡಿನ ದಾಳಿ ಮಾಡಿದ್ದಾರೆ.

    ಕೈಯ್ಯಲ್ಲಿ ಕೊಡಲಿ, ರಾಡ್, ತಲ್ವಾರ್‌ ಹಿಡಿದು ಬರ್ತಿರೋ ಮುಸುಕುಧಾರಿ ಗ್ಯಾಂಗ್ ವಿಜಯಪುರ ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಮುಸುಕುಧಾರಿಗಳ ಗ್ಯಾಂಗ್ ಜಿಲ್ಲೆಯಲ್ಲಿ ಆಕ್ಟೀವ್‌ ಆಗಿದ್ದು, ಒಂದು ವಾರದಲ್ಲಿ ಜಿಲ್ಲೆಯ ಮೂರು ಕಡೆ ದರೋಡೆ ನಡೆಸಿದ್ದಾರೆ. ಗುರುವಾರ ತಡರಾತ್ರಿ ನಗರದ ಜೈನಾಪುರ ಬಡಾವಣೆಯಲ್ಲಿ ಸಂತೋಷ ಎಂಬುವರ ಮನೆಯ ಬಾಗಿಲು ಮುರಿದು ನುಗ್ಗಿ ಸಂತೋಷನ ಪತ್ನಿಯ ಬಂಗಾರದ ಮಾಂಗಲ್ಯ ಸರ ಕದ್ದಿದ್ದಾರೆ. ಅಲ್ಲದೇ ಇದನ್ನ ತಡೆಯಲು ಬಂದ ಸಂತೋಷನ ಮೇಲೆ ಚಾಕುವಿನಿಂದ ಮೂರು ಕಡೆ ಚುಚ್ಚಿ ಮೊದಲನೇ ಮಹಡಿಯಿಂದ ಬಿಸಾಕಿ ಪರಾರಿಯಾಗಿದ್ದಾರೆ. ಈ ದರೋಡೆಕೋರರನ್ನ ಬೆನ್ನುಹತ್ತಿದ್ದ ಗೋಲ್‌ಗುಂಬಜ್‌ ಪೊಲೀಸರ ಶುಕ್ರವಾರ (ಇಂದು) ಬೆಳಗ್ಗಿನ ಜಾವ ನಗರದ ಹೊರವಲಯದ ಬೆಂಗಳೂರಿನ ಟೋಲ್ ಬಳಿ ದರೋಡೆಕೋರರನ್ನ ಚೇಸ್ ಮಾಡಿದ್ದಾರೆ. ಆಗ ಬೈಕ್ ಮೇಲಿಂದ ತಪ್ಪಿಸಿಕೊಳ್ಳಲು ದರೋಡೆಕೋರರು ಯತ್ನಿಸಿದ್ದು ಪೊಲೀಸರು ಗುಂಡು ಹಾರಿಸಿದ್ದಾರೆ.

    ಈ ವೇಳೆ ಒಟ್ಟು ನಾಲ್ವರು ದರೋಡೆಕೋರರು ಇದ್ದರು ಎನ್ನಲಾಗಿದೆ. ಪೊಲೀಸರು 5 ಸುತ್ತು ಗುಂಡು ಹಾರಿಸಿದ್ದು, ಅದರಲ್ಲಿ ಓರ್ವ ಆರೋಪಿ ಕಾಲಿಗೆ ಮೂರು ಗುಂಡು ತಗುಲಿದೆ. ಮಧ್ಯಪ್ರದೇಶ ಮೂಲದ ಮಹೇಶ್‌ ಎಂಬ ಆರೋಪಿಗೆ ಗುಂಡು ತಗುಲಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

    ವಿಜಯಪುರದ ಕನಕದಾಸ ಬಡಾವಣೆಯಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದಾಗ, ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ. ಆಗ ಅವರನ್ನ ಪೋಲಿಸರು ಚೇಸ್ ಮಾಡಿದ್ದಾರೆ. ದರೋಡೆಕೋರರು ಬೈಕ್ ಮೇಲೆ ಪರಾರಿಯಾಗಲು ಯತ್ನಿಸಿದ್ದಾಗ ಗುಂಡು ಹಾರಿಸಿದ್ದು, ಎಡಗಾಲಿಗೆ 2 ಗುಂಡು, ಬಲಗಾಲಿಗೆ ಒಂದು ಗುಂಡು ತಗುಲಿದೆ. ಸದ್ಯ ಆರೋಪಿ ಮಹೇಶ್‌ನ ಆರೋಗ್ಯ ಸ್ಥರವಾಗಿದೆ. ಸ್ಕ್ಯಾನಿಂಗ್‌ಗೆ ಒಳಪಡಿಸಿದ ನಂತರ ಗುಂಡು ತಗುಲಿದೆಯಾ ಇಲ್ವಾ ಅನ್ನೊದು ಗೊತ್ತಾಗಲಿದೆ ಅಂತಾ ಜಿಲ್ಲಾಸ್ಪತ್ರೆಯ ಸರ್ಜನ್ ಶಿವಾನಂದ ಮಾಸ್ತಿಹೊಳಿ ʻಪಬ್ಲಿಕ್ ಟಿವಿʼಗೆ ಸ್ಪಷ್ಟಪಡಿಸಿದ್ದಾರೆ.

    ಇನ್ನೂ ಮೂವರು ದರೋಡೆಕೋರರು ಪರಾರಿಯಾಗಿದ್ದು, ಪೊಲೀಸರು ಶೋಧ ನಡೆಸಿದ್ದಾರೆ. ಈ ನಡುವೆ ಕೆಲವು ಸ್ಥಳೀಯರು ದರೋಡೆಕೋರರನ್ನ ಹಿಡಿಯಲು ಹಕ್ಕು ಕೊಡಿ, ನಾವು ರಾತ್ರಿ ಹೊತ್ತು ಗಸ್ತು ಕಾಯುತ್ತೇವೆ ಅಂತ ಪೊಲೀಸರಿಗೆ ಮನವಿ ಮಾಡಿದ್ದಾರೆ.