ಮಾದೇವ ಯಾದವಾಡ, ಈರಣ್ಣ ಮೇತ್ರಿ, ಸಂತೋಷ ತಾಂಬೆ, ಕಲ್ಲಪ್ಪ ಕೋಟ್ಯಾಳ ಎಂಬುವವರ ಮೇಲೆ ದಾಳಿ ನಡೆಸಿತ್ತು. ಮಾದೇವ ಯಾದವಾಡ ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಚಡಚಣ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದೇ ವೇಳೆ ಚಿರತೆ ಹಿಡಿಯಲು ಜನರು ಜಮೀನಿನ ಸುತ್ತ ನೆರೆದಿದ್ದು, ಝಳಕಿ ಪೊಲೀಸರ ನೆರವಿನಿಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ವ್ಯಕ್ತಿಯ ಬರ್ಬರ ಹತ್ಯೆ – ಜೊತೆಗಿದ್ದ ಪ್ರೇಯಸಿ ಮೇಲೆಯೇ ಅನುಮಾನ
ಕಬ್ಬು ಕಟಾವು ಮಾಡಿ ಟ್ರ‍್ಯಾಕ್ಟರ್‌ಗೆ ಲೋಡ್ ಮಾಡಿದ ಬಳಿಕ ಯುವಕರು ಅದರಲ್ಲಿ ಭಾರತ ನಕ್ಷೆ ರಚಿಸಿದ್ದಾರೆ. ಬಳಿಕ ನಕ್ಷೆಗೆ ಕೇಸರಿ, ಬಿಳಿ, ಹಸಿರು ಬಣ್ಣದಿಂದ ನಕ್ಷೆಗೆ ಅಲಂಕಾರ ಮಾಡಿ ಸಂತಸಪಟ್ಟಿದ್ದಾರೆ. ಜೊತೆಗೆ ನಕ್ಷೆಯೊಳಗಡೆ ರಾಯಣ್ಣ ಭಾವಚಿತ್ರವಿಟ್ಟು ದೇಶಭಕ್ತಿಯನ್ನು ಮೆರೆದಿದ್ದಾರೆ.
ವಿಜಯಪುರ: 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ವಿಜಯಪುರಕ್ಕೆ (Vijayapura) ಬಂಪರ್ ಗಿಫ್ಟ್ ನೀಡಲಾಗಿದ್ದು, ಜಿಲ್ಲೆಯ ಬಹುನಿರೀಕ್ಷಿತ ವಿಮಾನ ನಿಲ್ದಾಣ ಈ ವರ್ಷದಿಂದ ಕಾರ್ಯಾರಂಭಿಸಲಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿಕಪ್ ಪಲ್ಟಿ – 18 ಮಂದಿಗೆ ಗಾಯ
ದಾಖಲೆಯ 16ನೇ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯನವರು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಜಿಲ್ಲೆಯ ಜೀವನದಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತದ 3 ಅಡಿ ಮುಳುಗಡೆಯಾಗುವ ಜಮೀನುಗಳನ್ನು ಒಪ್ಪಂದ ತೀರ್ಪಿನ ಮುಖಾಂತರ ಒಂದೇ ಹಂತದಲ್ಲಿ ಭೂಸ್ವಾಧೀನಪಡಿಸಿ, ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಅಪ್ರಾಪ್ತ ಬೈಕ್ ಚಲಾಯಿಸುತ್ತಿರುವುದನ್ನು ರೈಲ್ವೇ ಪಿಎಸ್‌ಐ ಶಿವನಾಂದ ಅರೇನಾಡ ಗಮನಿಸಿದ್ದರು. ಬೈಕ್ ಚಲಾಯಿಸುತ್ತಿದ್ದ ಅಪ್ರಾಪ್ತನ ಬಗ್ಗೆ ಪಿಎಸ್‌ಐ ಮಾಹಿತಿ ಕಲೆಹಾಕಿದ್ದು, 2024ರ ನವೆಂಬರ್ 16ರಂದು ಸಂಚಾರಿ ನಿಯಮ ಉಲ್ಲಂಘನೆ ಅಡಿ ಹುಸೇನ್‌ಸಾಬ್ ವಿರುದ್ಧ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ 4ನೇ ಹೆಚ್ಚುವರಿ ದಿವಾಣಿ ಮತ್ತು ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿತ್ತು.
ವಿಜಯಪುರ: ಗಾಂಧಿ ಚೌಕ್ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಎ.ಎಸ್ ಬಂದುಗೋಳ ಅವರ ಪತ್ನಿಗೆ 3ನೇ ಹೆರಿಗೆ ಆಗಿದೆ ಅಂತ ತಿಳಿದುಬಂದಿದೆ. ಆದ್ರೆ ಬಂದುಗೋಳ ಅವರಿಂದ ರಜೆಗಾಗಿ ಯಾವುದೇ ಮನವಿ ಬಂದಿಲ್ಲ. ಇಲಾಖಾ ಸಿಬ್ಬಂದಿ ಗ್ರೂಪ್ ನಲ್ಲಿ ಈ ರೀತಿ ಪೋಸ್ಟ್ ಹಾಕಿದ್ದಾರೆ. ಘಟನೆ ಕುರಿತು ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಸ್ಪಷ್ಟನೆ ನೀಡಿದ್ದಾರೆ.
ಅಲ್ಲದೇ ನವಜಾತ ಶಿಶು ಚಿಕಿತ್ಸೆಗೆ ರಜೆ ನೀಡಿಲ್ಲ ಎಂಬ ಪೊಲೀಸ್ ಕಾನ್‌ಸ್ಟೇಬಲ್ ಪೋಸ್ಟ್ ವೈರಲ್ ವಿಚಾರಕ್ಕೆ ಗಾಂಧಿ ಚೌಕ್ ಠಾಣಾ ಬರಹಗಾರರು ಮತ್ತೊಂದು ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ವಾಟ್ಸಪ್ ಸಂದೇಶದಲ್ಲಿ ಏನಿದೆ?
ಕಾನ್‌ಸ್ಟೇಬಲ್ ಪೋಸ್ಟ್‌ಗೆ ವಾಟ್ಸಪ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಠಾಣಾ ಬರಹಗಾರ ಸುನೀಲ್ ಮೋಳೆ, ಆತ್ಮೀಯ ಸಹೋದರ ಸಿಬ್ಬಂದಿ ವರ್ಗದವರೇ ಹಾಗೂ ಅಧಿಕಾರಿಗಳೇ, ನಮ್ಮ ಠಾಣೆಯ ಸಹೋದರ ಸಿಬ್ಬಂದಿ ಅಕ್ಬರ್ ಬಂದುಗೋಳ ಇವರ ಮಗನ ಅಕಾಲಿಕ ಮರಣದ ಬಗ್ಗೆ ಎಲ್ಲರಿಗೂ ಕೂಡ ತುಂಬಾ ಖೇದವಿದೆ. ಆ ದೇವರು ಬಂದೂಗೋಳ ಇವರಿಗೂ ಇವರ ಕುಟುಂಬದವರಿಗೆ ಆ ಮಗುವಿನ ಅಗಲಿಕೆಯ ದುಃಖದ ನೋವನ್ನು ಭರಿಸುವ ಶಕ್ತಿಯನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ನಾನು ಗಾಂಧಿ ಚೌಕ್ ಠಾಣೆಯಲ್ಲಿ ಕಳೆದ ಮೂರು ವರ್ಷಗಳಿಂದ ಬಾರ್ನೀಷಿ ಕೆಲಸವನ್ನು ಮಾಡುತ್ತಿದ್ದೇನೆ. ಸದರಿ ಸಹೋದರ ಸಿಬ್ಬಂದಿ ಬಂಧುಗೊಳ್ ಇವರು ನಮ್ಮ ಠಾಣೆಯಲ್ಲಿ ಜನರಲ್ ಡ್ಯೂಟಿ ಮಾಡುತ್ತಿದ್ದಾರೆ. ಇವರಿಗೆ ದಿನಾಂಕ 1.3.2025 ರಂದು ಬೆಳಗಾವಿ ಟಪಾಲ್ ಕರ್ತವ್ಯದ ಮೇಲೆ ಕಳುಹಿಸಲಾಗಿತ್ತು. ಅಲ್ಲಿಂದ ಮರಳಿ ಬರುವಾಗ ಅವರು ನಮ್ಮ ಠಾಣಾ ಬರಹಗಾರರಿಗೆ ಹಾಗೂ ನನಗೆ ಫೋನ್ ಮಾಡಿ ತನ್ನ ಮಗನಿಗೆ ಹುಷಾರಿರುವುದಿಲ್ಲ, ಆದ್ದರಿಂದ ತನಗೆ ಠಾಣೆಗೆ ಬರಲು ಆಗುವುದಿಲ್ಲ ಎಂದು ತಿಳಿಸಿದರು.
ಅದಕ್ಕೆ ನಾವು ಆಯ್ತು ನೀವು ಹೋಗಿ ನಿಮ್ಮ ಮಗನ ಬಗ್ಗೆ ಕಾಳಜಿ ವಹಿಸಿ ನಾವು ಡ್ಯೂಟಿ ಅಡ್ಡಸ್ಟ್ ಮಾಡುತ್ತೇವೆ ಎಂದು ಹೇಳಿದ್ದೆವು. ನಂತರ ನಾವು ನಿನ್ನೆ ಸಂಜೆ ಸದರಿ ಬಂದುಗೋಳ ಇವರಿಗೆ ಫೋನ್ ಮಾಡಿ ರೋಲಕಾಲಿಗೆ ಬಂದಿಲ್ಲವಲ್ಲ ಎಂದು ಕೇಳಿದ್ದೆವು. ಅದಕ್ಕೆ ಅವರು ನನ್ನ ಮಗನಿಗೆ ಹುಷಾರಿಲ್ಲ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದೇನೆ ಎಂದು ಹೇಳಿದರು. ಆಗ ನಾವು ಆಯ್ತು ನೀವು ಮಗನನ್ನು ನೋಡಿಕೊಳ್ಳಿ ನಾವು ಡ್ಯೂಟಿ ಅಡ್ಡಸ್ಟ್ ಮಾಡುತ್ತೇವೆ ಎಂದು ಹೇಳಿದ್ದೆವು. ಅದರಂತೆ ನಾವು ಠಾಣಾ ದಿನಚರಿಯಲ್ಲಿ ಅವರನ್ನು ಕರ್ತವ್ಯದ ಮೇಲೆ ಇರುವಂತೆ ತೋರಿಸಿರುತ್ತೇವೆ. ಇಲ್ಲಿಯವರೆಗೂ ಸಹ ಇವರು ಯಾವುದೇ ರಜಾ ಚೀಟಿಯನ್ನು ಯಾರಿಗೂ ಕೊಟ್ಟಿರುವುದಿಲ್ಲ. ಯಾರಿಗೂ ರಜೆಯನ್ನು ಕೇಳಿರುವುದಿಲ್ಲ ಎಂದು ತಿಳಿಸಿದ್ದಾರೆ.
ಪೊಲೀಸ್ ಕಾನ್‌ಸ್ಟೇಬಲ್ ಪೋಸ್ಟ್ ಏನಿತ್ತು?
ವಿಜಯಪುರ ನಗರದ ಗಾಂಧಿಔಕ್ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಆಗಿರುವ ಎ.ಎಸ್ ಬಂದುಗೊಳ ಅವರು ಜಿಲ್ಲಾ ಪೊಲೀಸ್ ಸಿಬ್ಬಂದಿ ಗ್ರೂಪ್‌ನಲ್ಲಿ ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. `ನನ್ನ ಮಗನಿಗೆ ಚಿಕಿತ್ಸೆ ನೀಡಲು ರಜೆ ಸಿಗಲಿಲ್ಲ, ಕಡೆಗೂ ನನ್ನ ಮಗ ಉಳಿಯಲಿಲ್ಲ… ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು… ನನಗೆ ಬಹಳ ನೋವಾಗಿದೆ..’ ಅನ್ನೋ ಸಂದೇಶವನ್ನು ತನ್ನ ಮಗು ಐಸಿಯುನಲ್ಲಿರುವ ಫೋಟೋದೊಂದಿಗೆ ಹಂಚಿಕೊಂಡಿದ್ದರು.
ಕಾನ್ಸ್ಟೇಬಲ್ ಎ.ಎಸ್ ಬಂದುಗೋಳ ಅವರ ನವಜಾತ ಶಿಶು ಅನಾರೋಗ್ಯದ ಕಾರಣ ಐಸಿಯುನಲ್ಲಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಮಗು ಮೃತಪಟ್ಟ ಬಳಿಕ ಪೊಲೀಸ್ ಸಿಬ್ಬಂದಿ ಗ್ರೂಪ್‌ನಲ್ಲಿ ಈ ರೀತಿ ಮೆಸೇಜ್ ಹಾಕಿದ್ದಾರೆ. ಇನ್ನೂ ಈ ಘಟನೆಯನ್ನು ಡಿಜಿಪಿ, ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಮಾಧ್ಯಮಗಳಿಗೆ ಜೊಹೇದ್ ಕಿಂಗ್ ಎಂಬ ಹೆಸರಿನ ಇನ್‌ಸ್ಟಾಗ್ರಾಮ್‌ನಿಂದ ಟ್ಯಾಗ್ ಕೂಡ ಮಾಡಲಾಗಿತ್ತು.
ವಿಜಯಪುರ: ʻನನ್ನ ಮಗನಿಗೆ ಚಿಕಿತ್ಸೆ ನೀಡಲು ರಜೆ ಸಿಗಲಿಲ್ಲ, ಕಡೆಗೂ ನನ್ನ ಮಗ ಉಳಿಯಲಿಲ್ಲ… ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು… ನನಗೆ ಬಹಳ ನೋವಾಗಿದೆ..ʼ ಈ ರೀತಿ ಪೊಲೀಸ್ ಕಾನ್‌ಸ್ಟೇಬಲ್‌ವೊಬ್ಬರು ವಾಟ್ಸಪ್ ಗ್ರೂಪ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಘಟನೆ ನಡೆದಿದೆ.
ವಿಜಯಪುರ ನಗರದ ಗಾಂಧಿಔಕ್ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಆಗಿರುವ ಎ.ಎಸ್ ಬಂಡುಗೊಳ ಅವರು ಜಿಲ್ಲಾ ಪೊಲೀಸ್ ಸಿಬ್ಬಂದಿ ಗ್ರೂಪ್‌ನಲ್ಲಿ ಈ ರೀತಿ ಪೊಸ್ಟ್ ಹಾಕಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರೊ ಮಗುವಿನ ಫೋಟೋದೊಂದಿಗೆ ಮೆಸೇಜ್ ಹಾಕಿದ್ದಾರೆ.
ಕಾನ್ಸ್‌ಟೇಬಲ್ ಎ.ಎಸ್ ಬಂಡುಗೋಳ ಅವರ ನವಜಾತ ಶಿಶು ಅನಾರೋಗ್ಯದ ಕಾರಣ ಐಸಿಯುನಲ್ಲಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಮಗು ಮೃತಪಟ್ಟ ಬಳಿಕ ಪೊಲೀಸ್ ಸಿಬ್ಬಂದಿ ಗ್ರೂಪ್‌ನಲ್ಲಿ ಈ ರೀತಿ ಮೆಸೇಜ್ ಹಾಕಿದ್ದಾರೆ. ಇನ್ನೂ ಈ ಘಟನೆಯನ್ನು ಡಿಜಿಪಿ, ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಮಾಧ್ಯಮಗಳಿಗೆ ಜೊಹೇದ್ ಕಿಂಗ್ ಎಂಬ ಹೆಸರಿನ ಇನ್‌ಸ್ಟಾಗ್ರಾಮ್‌ನಿಂದ ಟ್ಯಾಗ್ ಕೂಡ ಮಾಡಲಾಗಿದೆ.
ಸದ್ಯ ಈ ಕುರಿತು ಮಾಹಿತಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು ಎ.ಎಸ್ ಬಂಡುಗೋಳ ಯಾವುದೇ ರಜೆ ಕೇಳಿಲ್ಲ. ಮೌಖಿಕವಾಗಿ ಹಾಗೂ ಲಿಖಿತವಾಗಿ ಗಾಂಧಿಚೌಕ್ ಪೊಲೀಸ್ ಠಾಣಾಧಿಕಾರಿಗಳ ಬಳಿ ರಜೆ ಕೇಳಿಲ್ಲ. ಮೊನ್ನೆ ಹಾಗೂ ನಿನ್ನೆ ಅವರು ಕರ್ತವ್ಯಕ್ಕೂ ಹಾಜರಾಗಿಲ್ಲ ಎಂದಿದ್ದಾರೆ.
ಎ.ಎಸ್ ಬಂಡುಗೋಳ ಅವರ ಪತ್ನಿಗೆ ಇದು 3ನೇ ಹೆರಿಗೆ ಎಂದು ತಿಳಿದುಬಂದಿದ್ದು, ರಜೆಗಾಗಿ ಯಾವುದೇ ಮನವಿ ಮಾಡಿಲ್ಲ. ಇಲಾಖಾ ಸಿಬ್ಬಂದಿ ಗ್ರೂಪ್ ನಲ್ಲಿ ಈ ರೀತಿ ಪೋಸ್ಟ್ ಹಾಕಿದ್ದಾರೆ. ಘಟನೆ ಕುರಿತು ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಸ್ಪಷ್ಟನೆ ನೀಡಿದ್ದಾರೆ.
ವಿಜಯಪುರ: ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಹಿಂದೂ ಅಲ್ವಾ. ಅವರು ಶಿವರಾತ್ರಿಗೆ ಹೋದರೆ ಏನಾಗುತ್ತದೆ. ಶಿವರಾತ್ರಿ ಆಚರಿಸುವುದು ಪಕ್ಷದ ವಿರುದ್ಧ ಆಗುತ್ತಾ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (M B Patil) ಪ್ರಶ್ನಿಸಿದರು.
ಡಿಕೆಶಿ ಶಿವರಾತ್ರಿ ಆಚರಣೆಯಲ್ಲಿ ಭಾಗಿ ವಿಚಾರಕ್ಕೆ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಅದು ಅವರ ವೈಯಕ್ತಿಕ ವಿಚಾರ. ನನ್ನ ವೈಯಕ್ತಿಕ ವಿಚಾರ ಪಕ್ಷದಲ್ಲ. ಪಕ್ಷದ ವಿಚಾರ ನನ್ನ ವೈಯಕ್ತಿಕ ಅಲ್ಲ. ನನ್ನ ವೈಯಕ್ತಿಕ ಅಸ್ಮಿತೆ, ನನ್ನ ವೈಯಕ್ತಿಕ ಆಚರಣೆ ಅದು ಬೇರೆ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: 1ನೇ ತರಗತಿಗೆ ದಾಖಲಾತಿ ವಯಸ್ಸು ಸಡಿಲಿಕೆಯಿಲ್ಲ – ಮಧು ಬಂಗಾರಪ್ಪ
ಹೀಗಾಗಿ ಒಂದಕ್ಕೊಂದು ಮಿಕ್ಸ್ ಮಾಡುವ ಅವಶ್ಯಕತೆ ಇಲ್ಲ. ಪಕ್ಷದ ಸಿದ್ದಾಂತ ಇರುತ್ತದೆ. ಡಿಕೆಶಿ ಅವರು ಹಿಂದೂ ಅಲ್ವಾ. ಶಿವರಾತ್ರಿಗೆ ಹೋದ್ರೆ ಏನಾಗುತ್ತೆ, ಪಕ್ಷದ ವಿರುದ್ಧ ಆಗುತ್ತಾ. ನಾನು ಶಿವರಾತ್ರಿಗೆ ಲಿಂಗದ ಗುಡಿಗೆ ಹೋಗಿದ್ದೆ. ಶಿವಗಿರಿಗೆ ಹೋಗಿದ್ದೆ. ಅಮಿತ್ ಶಾ ಅವರ ಜೊತೆಯಲ್ಲಿ ಡಿಕೆಶಿ ಅವರು ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗಿ ಆದರೆ ಏನು ತಪ್ಪಿದೆ. ಅನೇಕ ಕಾರ್ಯಕ್ರಮಗಳಲ್ಲಿ ನಮ್ಮನ್ನೂ ಕರೆದಿರುತ್ತಾರೆ, ಅವರನ್ನೂ ಕರೆದಿರುತ್ತಾರೆ ಎಂದು ಹೇಳಿದರು.
ವಿಜಯಪುರ: ವಿಜಯಪುರ-ಹುಬ್ಬಳ್ಳಿ ಮತ್ತು ವಿಜಯಪುರ-ಬೆಳಗಾವಿ ಹೆದ್ದಾರಿಯನ್ನು ಷಟ್ಪಥ (ಆರು ಪಥ) ಅಂದರೆ 6 ಲೈನ್ ಮಾರ್ಗವಾಗಿ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಬರೆದಿದ್ದ ಪತ್ರಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಜ.15, 2025 ರಂದು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದ ಸುನೀಲಗೌಡ ಪಾಟೀಲ, ವಿಜಯಪುರ ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆದ್ದಾರಿ ಪ್ರಮುಖ ಪಾತ್ರ ವಹಿಸುತ್ತಿದ್ದು, ವಿಜಯಪುರದಿಂದ ಹುಬ್ಬಳ್ಳಿ ಮತ್ತು ವಿಜಯಪುರದಿಂದ ಬೆಳಗಾವಿಗೆ ಈಗ ಇರುವ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸುವುದು ಅಗತ್ಯವಾಗಿದೆ. ಈಗ ಇರುವ ಹೆದ್ದಾರಿಯನ್ನು ಆರು ಪಥದ ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದ್ದರು.ಇದನ್ನೂ ಓದಿ: ಡಿಕೆಶಿ ಮುಂದೆಯೇ ಸದ್ಗುರು ಕಾಂಗ್ರೆಸ್ ಪಕ್ಷವನ್ನು ಅವಮಾನಿಸಿದ್ರಾ?
ಉತ್ತರ ಕರ್ನಾಟಕದ ಕೇಂದ್ರ ಭಾಗದಲ್ಲಿರುವ ಐತಿಹಾಸಿಕ ವಿಜಯಪುರ ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಇಲ್ಲಿರುವ ಪ್ರಾಚೀನ ಸ್ಮಾರಕಗಳು, ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳು ದೇಶವಷ್ಟೇ ಅಲ್ಲ, ವಿದೇಶಗಳಲ್ಲಿಯೂ ಹೆಸರುವಾಸಿಯಾಗಿವೆ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಈ ಜಿಲ್ಲೆಯಿಂದ ಹುಬ್ಬಳ್ಳಿ ಮತ್ತು ಬೆಳಗಾವಿ ಸಂಪರ್ಕಿಸುವ ಹೆದ್ದಾರಿಗಳು ಕಿರಿದಾಗಿದ್ದು, ವಾಹನಗಳ ಸಂಚಾರಕ್ಕೆ ಹೆಚ್ಚು ಸಮಯ ತಗಲುತ್ತಿದೆ. ಇದರಿಂದ ಆರ್ಥಿಕತೆಗೂ ಹಿನ್ನಡೆಯಾಗಿದೆ. ಈ ಹೆದ್ದಾರಿಗಳನ್ನು ಆರು ಪಥಕ್ಕೆ ಅಗಲೀಕರಣ ಮಾಡುವುದರಿಂದ ಸರಕು ಸಾಗಾಣಿಕೆಗೆ ಅನುಕೂಲವಾಗಲಿದ್ದು, ಸುರಕ್ಷತೆಯ ಜೊತೆಗೆ ಸಂಚಾರಕ್ಕೆ ಸಮಯವೂ ತಗ್ಗಲಿದೆ. ಜೊತೆಗೆ ಆರ್ಥಿಕ ನಗರಗಳಾದ ಹುಬ್ಬಳ್ಳಿ ಮತ್ತು ಬೆಳಗಾವಿಗಳ ಜೊತೆ ವಾಣಿಜ್ಯ ವ್ಯವಹಾರವೂ ವೃದ್ಧಿಸಿ ಪ್ರವಾಸೋದ್ಯಮದ ಅವಕಾಶವನ್ನೂ ಹೆಚ್ಚಿಸಲಿದೆ. ಉದ್ಯೋಗ ಸೃಷ್ಠಿ, ಯುವಕರಲ್ಲಿ ಕೌಶಲ್ಯಾಭಿವೃದ್ಧಿ ಹೆಚ್ಚಳ, ಹೊಸ ಕೈಗಾರಿಕೆಗಳ ಸ್ಥಾಪನೆ, ಆರೋಗ್ಯ, ಶಿಕ್ಷಣ ಮತ್ತಿತರ ಕ್ಷೇತ್ರಗಳಿಗೂ ಇದರಿಂದ ಲಾಭವಾಗಲಿದೆ. ಹೀಗಾಗಿ ಈ ಬೇಡಿಕೆಗೆ ಸ್ಪಂದಿಸಿ ತಮ್ಮ ಅವಧಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹಾಗೂ ಈ ಭಾಗದಲ್ಲಿ ಅನುಕೂಲ ಮಾಡಿಕೊಡುವಂತೆ ಶಾಸಕರು ಪತ್ರದಲ್ಲಿ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದರು.
ಈ ಪತ್ರಕ್ಕೆ ಸ್ಪಂದಿಸಿರುವ ಸಚಿವ ನಿತಿನ್ ಗಡ್ಕರಿ ಬೇಡಿಕೆ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅವರ ಉತ್ತರಕ್ಕೆ ಕೃತಜ್ಞತೆ ಸಲ್ಲಿಸಿರುವ ಶಾಸಕ ಸುನೀಲಗೌಡ ಪಾಟೀಲ, ಸಚಿವರು ವಿಜಯಪುರ-ಹುಬ್ಬಳ್ಳಿ ಮತ್ತು ವಿಜಯಪುರ- ಬೆಳಗಾವಿ ಹೆದ್ದಾರಿಗಳನ್ನು ಆದಷ್ಟು ಬೇಗ ಷಟ್ಪಥ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸುವ ವಿಶ್ವಾಸವಿದೆ ಎಂದು ಹೇಳಿದರು.ಇದನ್ನೂ ಓದಿ: ಪ್ರಾಣಿ ರಕ್ಷಣೆಯಲ್ಲಿನ ಉತ್ಕೃಷ್ಟ ಸೇವೆಗೆ ಅನಂತ್ ಅಂಬಾನಿಯ `ವಂತಾರ’ಗೆ ರಾಷ್ಟ್ರೀಯ ಪ್ರಾಣಿ ಮಿತ್ರ ಪ್ರಶಸ್ತಿ
ವಿಜಯಪುರ: ಪ್ರಯಾಗ್‌ರಾಜ್ (Prayagraj) ತೆರಳುತ್ತಿದ್ದಾಗ ರಸ್ತೆ ಅಪಘಾತದಲ್ಲಿ ವಿಜಯಪುರದ (Vijayapura) ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಪೋರ್‌ಬಂದರ್ (Porbandar) ಸಮೀಪ ನಡೆದಿದೆ.
ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಿಂದ ಚಾಲಕ ಸೇರಿ 17 ಮಂದಿ ಮ್ಯಾಕ್ಸಿ ಕ್ಯಾಬ್‌ನಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿದ್ದರು. ಈ ವೇಳೆ ಮ್ಯಾಕ್ಸಿ ಕ್ಯಾಬ್, ಗುಜರಾತ್‌ನ ಪೋರ್‌ಬಂದರ್ ಸಮೀಪ ನಿಂತಿದ್ದ ಟಿಪ್ಪರ್‌ಗೆ ಡಿಕ್ಕಿಯಾಗಿದೆ. ಇದನ್ನೂ ಓದಿ: Exclusive| ಬೆಳಗಾವಿ ಕಂಡಕ್ಟರ್ ಮೇಲೆ ದಾಖಲಿಸಿದ್ದ ಪೋಕ್ಸೋ ಕೇಸ್ ಹಿಂಪಡೆದ ದೂರುದಾರೆ
ವಿಜಯಪುರ: ತಾಲೂಕಿನ ಕನ್ನೂರು (Kannur) ಗ್ರಾಮದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸರ್ಕಾರದ ಉಚಿತ ಪುಸ್ತಕಗಳನ್ನು ಬೀದಿಪಾಲು ಮಾಡಿ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯೋಪಾಧ್ಯಾಯರನ್ನು (Headmaster) ಅಮಾನತು ಮಾಡಲಾಗಿದೆ.
ಘಟನೆಯ ಬಗ್ಗೆ ನಿಮ್ಮ ‘ಪಬ್ಲಿಕ್ ಟಿವಿ’ ವಿಸ್ತೃತ ವರದಿಯನ್ನು ಬಿತ್ತರಿಸಿತ್ತು. ವರದಿಯ 12 ಗಂಟೆಯಲ್ಲೇ ಶಾಲೆಯ ಮುಖ್ಯೋಪಾಧ್ಯಾಯ ವಿಜಯಕುಮಾರ ಅವತಾಡೆಯನ್ನು ಅಮಾನತು ಮಾಡಲು ಡಿಡಿಪಿಐ ಟಿಎಸ್ ಕೋಲಾರ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ನಿಯಂತ್ರಣಕ್ಕೆ ಬಂದ ಕಾಡ್ಗಿಚ್ಚು