Tag: ವಿಜಯಪುರ

  • ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ – ಮಾತಿನ ವೇಗದಲ್ಲಿ ತಪ್ಪಾಗಿದೆ ಎಂದ ಯತ್ನಾಳ್

    ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ – ಮಾತಿನ ವೇಗದಲ್ಲಿ ತಪ್ಪಾಗಿದೆ ಎಂದ ಯತ್ನಾಳ್

    – ಜಾತಿಗಣತಿ ಸಮೀಕ್ಷೆ ಸರಿಯಿಲ್ಲ, ಲಿಂಗಾಯತರನ್ನ ಒಡೆದಂತೆ ಮುಸ್ಲಿಂ ಜಾತಿಯನ್ನೂ ಒಡೆಯಲಿ; ಕಿಡಿ

    ವಿಜಯಪುರ: ನಾನು ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಮಾತನಾಡಿಲ್ಲ. ಮಹಮ್ಮದ್ ಅಲಿ ಜಿನ್ನಾ ಬಗ್ಗೆ ಮಾತನಾಡುತ್ತಿದೆ. ಮಾತಿನ ವೇಗದಲ್ಲಿ ತಪ್ಪಾಗಿದೆ ಎಂದು ವಿಜಯಪುರ (Vijayapura) ಶಾಸಕ ಬಸನಗೌಡ ಪಾಟೀಲ್ (Basanagouda Patil Yatnal) ಸ್ಪಷ್ಟನೆ ನೀಡಿದರು.

    ಜಿಲ್ಲೆಯಲ್ಲಿ ತಮ್ಮ ಹತ್ಯೆಗೆ ಸಂಚು ವಿಚಾರವಾಗಿ ಮಾತನಾಡಿದ ಅವರು, ಪ್ರವಾದಿ ಮಹಮ್ಮದ್ ಪೈಗಂಬರ್ ಎಂದರೆ ಮಾತ್ರ ಇಸ್ಲಾಂ ಧರ್ಮದ ಸಂಸ್ಥಾಪಕರ ಹೆಸರು ತೆಗೆದುಕೊಂಡಂತಾಗುತ್ತದೆ. ವಿಜಯಪುರದಲ್ಲಿ ಕಾಂಗ್ರೆಸ್ (Congress) ಬಿಟ್ಟರೇ ಬೇರೆಯವರು ಮಾತನಾಡಿಲ್ಲ. ಕಾಂಗ್ರೆಸ್ಸಿಗರು ಹತಾಶೆಯಾಗಿದ್ದಾರೆ. ಅವರಿಗೆ ಒಂದು ವಿಷಯ ಬೇಕಿದೆ ಅದಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದರು.ಇದನ್ನೂ ಓದಿ: ಶಾಸಕ ಯತ್ನಾಳ್‌ ಕೊಲೆಗೆ ಸಂಚು? – ಅನ್ಯಕೋಮಿನ ಯುವಕನ ಸ್ಫೋಟಕ ಆಡಿಯೋ ವೈರಲ್‌

    ವಿಜಯಪುರದಲ್ಲಿ ಬರೀ ಗೂಂಡಾಗಿರಿ, ಹಪ್ತಾ ವಸೂಲಿ ನಡೆಯುತ್ತಿತ್ತು. ಅದೆಲ್ಲ ಈಗ ಬಂದ್ ಆಗಿದೆ. ದೇವರಿಗೆ ಬೈದಿದ್ದಾರೆ ಎಂದು ನೆಪ ಹೇಳುತ್ತಿದ್ದು, ಕಾಂಗ್ರೆಸ್‌ನವರು ಮಾತ್ರ ವಿರೋಧ ಮಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಬೇರೆ ದೇವರ ಅವಹೇಳನ ಮಾಡುವುದನ್ನು ಕಲಿಸಿಲ್ಲ. ರಾಮ, ಕೃಷ್ಣ, ಲಕ್ಷ್ಮೀ, ಸರಸ್ವತಿ ಅವಹೇಳನ ಮಾಡಿದಾಗ ಹೀಗೆ ಮಾಡಬೇಕು ಎಂದು ಪ್ರಶ್ನಿಸಿದರು.

    ಇದೊಂದು ಸಂಚು, ನನ್ನನ್ನು ಮುಗಿಸಲು ಸಂಚು. ಯತ್ನಾಳ್‌ನ್ನು ಮುಗಿಸಲು ಹೋದರೆ ರಾಜ್ಯದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ. ಸದ್ಯ ಪೊಲೀಸ್ ಇಲಾಖೆ ತನಿಖೆ ಮಾಡುತ್ತಿದ್ದು, ಇದರ ಹಿಂದೆ ಯಾರಿದ್ದಾರೆ ಎಂದು ಹೊರಬರುತ್ತದೆ. ಈ ಬಗ್ಗೆ ಎನ್‌ಐಎ (NIA) ತನಿಖೆಯಾಗಲಿ. ನನ್ನನ್ನು ಮುಗಿಸೋಕೆ ಆಗಲ್ಲ. ನಮ್ಮಲ್ಲಿ ರಾಣಿಚೆನ್ನಮ್ಮ, ರಾಯಣ್ಣ, ಅಂಬೇಡ್ಕರ್ ರಕ್ತ ಇದೆ. ಹೀಗೆ ಮುಂದುವರೆದರೆ ನಮ್ಮವರು ಹೋರಾಟಕ್ಕೆ ಮುಂದಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

    ಇದೇ ವೇಳೆ ಬಿಜೆಪಿ (BJP) ಜನಾಕ್ರೋಶ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿ ಗ್ಯಾಸ್, ಪೆಟ್ರೋಲ್ ದರ ಏರಿಕೆಯಾಗಿದೆ ಎನ್ನುತ್ತಾರೆ. ಅದನ್ನು ಜನ ನಿರ್ಣಯ ಮಾಡುತ್ತಾರೆ. ಯಾವುದು ಸತ್ಯ? ಯಾವುದು ಸುಳ್ಳು? ಎಂದು ಜನರು ನಿರ್ಧರಿಸುತ್ತಾರೆ ಎಂದರು. ಇನ್ನೂ ಕಾಂಗ್ರೆಸ್‌ನವರು ಅಬಕಾರಿಯಲ್ಲಾದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿಲ್ಲ. ಹೊಂದಾಣಿಕೆ ಇರುವುದನ್ನು ಬಿಟ್ಟು, ಹೊಂದಾಣಿಕೆ ಇಲ್ಲದವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು. ಇನ್ನೂ ಜಾತಿಗಣತಿ (Caste Census) ಸಮೀಕ್ಷೆ ಸರಿಯಿಲ್ಲ. ದಲಿತರು ರಾಜ್ಯದ ನಂ.1, ಮುಸ್ಲಿಂ ನಂ.1 ಆದರೆ ಅವರನ್ನು ಅಲ್ಪಸಂಖ್ಯಾತ ಸ್ಥಾನದಿಂದ ಇಳಿಸಿ. ಹಾಲುಮತ ದೊಡ್ಡ ಸಮಾಜ, ಲಿಂಗಾಯತರು, ಕ್ಷತ್ರಿಯ, ಬ್ರಾಹ್ಮಣ ಸಮುದಾಯಗಳಿವೆ. ಬ್ರಾಹ್ಮಣರು 2% ಇದ್ದಾರೆ, ಅವರಿಗೆ ಅಲ್ಪಸಂಖ್ಯಾತ ಸ್ಥಾನ ಸಿಗಬೇಕು. ಮರಾಠ, ಬೌದ್ಧರು, ಕ್ರಿಶ್ಚಿಯನ್‌ರಿಗೆ ಅಲ್ಪಸಂಖ್ಯಾತ ಸ್ಥಾನ ಸಿಗಬೇಕು. ಲಿಂಗಾಯತರನ್ನು ಒಡೆದಂತೆ ಮುಸ್ಲಿಂ ಜಾತಿ ಒಡೆಯಲಿ. ಮುಸ್ಲಿಂ ಒಳಜಾತಿಗಳ ಸರ್ವೇ ಆಗಲಿ. ಸರ್ಕಾರ ಮುಸ್ಲಿಂರನ್ನು ಜಾತಿವಾರು ಒಡೆಯಲಿ ಎಂದು ಆಗ್ರಹಿಸಿದರು.ಇದನ್ನೂ ಓದಿ: ಬಿಹಾರ ಮೂಲದ ಸೈಕೋ ಎನ್‌ಕೌಂಟರ್: ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹೊಡೆದಿದ್ದಾರೆ – ಪರಮೇಶ್ವರ್

  • ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಆಗಲು ನಾವೇ ಕಾರಣ: ಎಂ.ಬಿ.ಪಾಟೀಲ್

    ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಆಗಲು ನಾವೇ ಕಾರಣ: ಎಂ.ಬಿ.ಪಾಟೀಲ್

    ವಿಜಯಪುರ: ಜಾತಿಗಣತಿಯಲ್ಲಿ (Caste Census) ಲಿಂಗಾಯತರ ಸಂಖ್ಯೆ ಕಡಿಮೆ ಆಗಲು ನಾವೇ ಕಾರಣ. ನಮ್ಮವರು ಮೀಸಲಾತಿಗಾಗಿ ಹಿಂದೂ ರೆಡ್ಡಿ, ಹಿಂದೂ ಬಣಜಿಗ ಈ ತರಹ ಬರೆಸಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿದರೇ ಲಿಂಗಾಯತರು 1 ಕೋಟಿಗೂ ಅಧಿಕ ಆಗುತ್ತಾರೆ ಎಂದು ಸಚಿವ ಎಂ.ಬಿ.ಪಾಟೀಲ್ (M B Patil)  ಹೇಳಿದರು.

    ವಿಜಯಪುರದಲ್ಲಿ (Vijayapura) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಅಧ್ಯಯನ ಮಾಡಲು ಇಂದು ವರದಿ ಪ್ರತಿ ಬಂದಿದೆ. ನಾನು ಇದುವರೆಗೂ ಅಧ್ಯಯನ ಮಾಡಿಲ್ಲ. ಅದನ್ನ ತಗೆದು ನೋಡುತ್ತೇನೆ. ಇವತ್ತು ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಆಗಿದೆ. ಮಾಧ್ಯಮಗಳ ವರದಿಯಲ್ಲಿ ನೋಡಿದ್ದೇನೆ. ಲಿಂಗಾಯತ ಕೆಲ ಸಮಾಜದವರು ಮೀಸಲಾತಿಗಾಗಿ ದಾಖಲಾತಿಗಳಲ್ಲಿ ಬೇರೆ ನಮೂದಿಸಿದ್ದಾರೆ ಎಂದರು. ಇದನ್ನೂ ಓದಿ: ಜಾತಿ ಜನಗಣತಿ ವರದಿಯೇ ಸಿದ್ದರಾಮಯ್ಯಗೆ ಮರಣ ಶಾಸನ ಆಗಬಹುದು: ವಿ. ಸೋಮಣ್ಣ

    ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಆಗಲು ನಾವೇ ಕಾರಣ. ನಮ್ಮವರು ಮೀಸಲಾತಿಗಾಗಿ ಹಿಂದೂ ರೆಡ್ಡಿ, ಹಿಂದೂ ಬಣಜಿಗ ಈ ತರಹ ಬರೆಸಿದ್ದಾರೆ. ಇದರಿಂದ ಲಿಂಗಾಯತರ ಸಂಖ್ಯೆ ಕಡಿಮೆಯಾಗಿದೆ. ಎಲ್ಲರನ್ನೂ ಒಗ್ಗೂಡಿಸಿದರೆ ಲಿಂಗಾಯತರು 1 ಕೋಟಿಗೂ ಅಧಿಕ ಆಗುತ್ತಾರೆ. ಮೊದಲು ವರದಿಯನ್ನ ಅಧ್ಯಯನ ಮಾಡಿದ ನಂತರ ನಮ್ಮ ಸಂಶಯಗಳೇನಿವೆ ಅದನ್ನ ಚರ್ಚಿಸುತ್ತೇವೆ. ವರದಿಯ ಒಳಗಡೆ ಏನಿದೆ ಎಂದು ನೋಡಿ ನಂತರ ಅದರ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಪತ್ನಿ ಆತ್ಮಹತ್ಯೆ; ಹಳೇ ಲವರ್ ಜೊತೆಗಿದ್ದ ಅಕ್ರಮ ಸಂಬಂಧದ ಬಗ್ಗೆ ಒಪ್ಪಿಕೊಂಡ ಟೆಕ್ಕಿ ಪತಿ

    ಬಿಜೆಪಿಯವರು ಕೇಂದ್ರದ ವಿರುದ್ಧ ಹೋರಾಟ ಮಾಡಲಿ
    ಬಿಜೆಪಿ (BJP) ಜನಾಕ್ರೋಶ ಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವ ಮುಖ ಇಟ್ಟುಕೊಂಡು ಯಾತ್ರೆ ಮಾಡುತ್ತಾರೆ. ಕನ್ನಡಿಯಲ್ಲಿ ಮುಖ ನೋಡೋಕೆ ಹೇಳಿ ಅವರಿಗೆ. ಇಲ್ಲ ಮೋದಿ ಮುಖ ನೋಡಿ ಮೋದಿಗೆ ನಮಸ್ಕಾರ ಮಾಡಲು ಹೇಳಿ. 50 ರೂ. ಸಿಲಿಂಡರ್ ದರ ಜಾಸ್ತಿ ಆಗಿದೆ. ಡಿಸೇಲ್, ಪೆಟ್ರೋಲ್ ದರ ಜಾಸ್ತಿ ಮಾಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಖಳನಟ ಶೇಷಗಿರಿ ಬಸವರಾಜು ವಿರುದ್ಧ ರೇಪ್ ಆರೋಪ ಪ್ರಕರಣ‌; ಬಿ-ರಿಪೋರ್ಟ್ ಸಲ್ಲಿಕೆ

    ಬಿಜೆಪಿ ಅವರು ಹೋರಾಟ ಮಾಡುವುದು ಸರಿಯಾಗಿದೆ. ಆದರೆ ಕಾಂಗ್ರೆಸ್ ವಿರುದ್ಧದ ಹೋರಾಟ ಬೇಡ. ಕೇಂದ್ರ ಸರ್ಕಾರ, ನರೇಂದ್ರ ಮೋದಿ ವಿರುದ್ಧ ಮಾಡಲಿ ಎಂದು ಸಲಹೆ ಕೊಡುತ್ತೇನೆ ಟೀಕಿಸಿದರು. ಇದನ್ನೂ ಓದಿ: ಜಾತಿಗಣತಿ ವರದಿ ತಯಾರಿಕೆಯ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ: ರಂಭಾಪುರಿ ಶ್ರೀ

    ಯತ್ನಾಳ್ ಹತ್ಯೆಗೆ ಸಂಚು ವಿಚಾರವಾಗಿ ಮಾತನಾಡಿ, ಕಾನೂನು ಎಲ್ಲರಿಗೂ ಅನ್ವಯ ಆಗುತ್ತದೆ. ಯತ್ನಾಳ್ ಅವರು ಇವತ್ತು ಮುಸ್ಲಿಂಮರ ಪೈಗಂಬರ್ ಬಗ್ಗೆ ಮಾತನಾಡಿರುವುದು ಸರಿಯಲ್ಲ. ಯತ್ನಾಳ್ ಮೇಲೆ ಬೆದರಿಕೆ ಹಾಕಿದ್ದು ಅದು ಕೂಡ ತಪ್ಪು. ಈ ಎರಡು ಘಟನೆಗಳ ಪ್ರಕರಣ ದಾಖಲಾಗುತ್ತದೆ ಹಾಗೂ ತನಿಖೆಯೂ ಆಗುತ್ತದೆ. ಆದರೆ ಯತ್ನಾಳ್ ಅವರೇ ಇದನೆಲ್ಲಾ ಅಹ್ವಾನಿಸಿಕೊಂಡಿದ್ದಾರೆ. ಯತ್ನಾಳ್ ಅವರಿಗೆ ಸೂಕ್ತ ಭದ್ರತೆ ಕೊಡುತ್ತೇವೆ ಆತಂಕ ಬೇಡ ಎಂದರು.

  • ಶಾಸಕ ಯತ್ನಾಳ್‌ ಕೊಲೆಗೆ ಸಂಚು? – ಅನ್ಯಕೋಮಿನ ಯುವಕನ ಸ್ಫೋಟಕ ಆಡಿಯೋ ವೈರಲ್‌

    ಶಾಸಕ ಯತ್ನಾಳ್‌ ಕೊಲೆಗೆ ಸಂಚು? – ಅನ್ಯಕೋಮಿನ ಯುವಕನ ಸ್ಫೋಟಕ ಆಡಿಯೋ ವೈರಲ್‌

    ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಪ್ರವಾದಿ ಮಹಮ್ಮದ್ ಪೈಗಂಬರ್ (Mohammad Paigambar) ಕುರಿತು ಅವಹೇಳನ ಕಾರಿ ಹೇಳಿಕೆ ನೀಡಿದ ಹಿನ್ನೆಲೆ, ಶಾಸಕನ ಹತ್ಯೆಗೆ ಸಂಚು ನಡೆದಿತ್ತು ಎನ್ನುವ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಯುವಕನ ಆಡಿಯೋದಲ್ಲಿ ನಡೆದ ಸಂಭಾಷಣೆ ಪುಷ್ಟಿ ನೀಡಿದೆ.

    ಹೌದು. ಏ.7 ರಂದು ಹುಬ್ಬಳ್ಳಿಯ (Hubballi) ಬಾಣಿ ಓಣಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ಯತ್ನಾಳ್ ಮಾತನಾಡುತ್ತಾ ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಯತ್ನಾಳ್‌ ವಿರುದ್ಧ ಪ್ರತಿಭಟನೆ ನಡೆಸಲು ಒಟ್ಟಾಗಿ ಎಂದು ಕರೆ ನೀಡಿರುವ ಮುಸ್ಲಿಂ ಯುವಕನ (Muslim Boy) ಸ್ಫೋಟಕ ಆಡಿಯೋ ವೈರಲ್‌ ಆಗಿದೆ. ಇದು ವಿಜಯಪುರದಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಇದನ್ನೂ ಓದಿ: ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ – ಯತ್ನಾಳ್ ವಿರುದ್ಧ ಎಫ್‍ಐಆರ್

    ಆಡಿಯೋ ಸಂಭಾಷಣೆಯಲ್ಲಿ ಏನಿದೆ?
    ಗೆಳೆಯರೇ.. ನಮಸ್ಕಾರ ಎಲ್ಲ ಸಹೋದರ, ಸಹೋದರಿಯರಿಗೆ ನಮಸ್ಕಾರ. ವಿಜಯಪುರದಲ್ಲಿಂದ ದೊಡ್ಡ ಮೀಟಿಂಗ್‌ ಕರೆಯಲಾಗಿತ್ತು. ನಗರದ ಆಲಂಗೀರ್ ಹಾಲ್‌ನಲ್ಲಿ ಎಂಎಂಸಿ ಮೀಟಿಂಗ್‌ನಲ್ಲಿ ವಿಜಯಪುರದ ಎಲ್ಲ ದಿಗ್ಗಜ ಸದಸ್ಯರು, ಉಲ್ಮಾಗಳು ಅಲ್ಲಿ ಇದ್ರೂ. ಅಲ್ಲಿ ಇದೇ ತಿಂಗಳ ಏ.15 ರಂದು ವಿಜಯಪುರ ಬಂದ್ ಮಾಡಲು ನಿರ್ಧಾರ ಆಗಿದೆ. ಇನ್ನು ಯತ್ನಾಳ್‌ಗೆ ಅದು ಫೈನಲ್ ದಿನ. ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾನೆ ಯತ್ನಾಳ್. ಇದನ್ನ ವಿರೋಧಿಸಿ 1 ಲಕ್ಷ ಜನರು ರ‍್ಯಾಲಿಯಲ್ಲಿ ಸೇರುತ್ತಿದ್ದಾರೆ. ಈ ಬಾರಿ ಎಲ್ಲರು ನಿರ್ಧರಿಸಿದ್ದಾರೆ ಅವನದ್ದು ಕೊನೆಯ ದಿನ ಅಂತಾ. ಅವನು ಅರೆಸ್ಟ್ ಆಗಬೇಕು ಇಲ್ಲ, ರ‍್ಯಾಲಿ ಅವನ ಮನೆಗೆ ತೆರಳಬೇಕು, ರ‍್ಯಾಲಿ ಅಲ್ಲಿಂದ ಅವನ ಮನೆಗೆ ನೇರವಾಗಿ ಹೋಗುತ್ತೆ. ಆದ್ದರಿಂದ ಎಲ್ಲ ಸಹೋದರ, ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಬೇಕು. ಏ.15ರಂದು ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಸೇರಬೇಕು, ನಿಮ್ಮ ಅಕ್ಕ-ಪಕ್ಕದ ಊರುಗಳಲ್ಲಿರುವ ಎಲ್ಲ ಸ್ನೇಹಿತರು, ಅಣ್ಣ-ತಮ್ಮಂದಿರಿಗೆ ವಿಷಯ ಹೇಳಿ.

    ಈ ಬಾರಿ ಅವನದ್ದು ಫೈನಲ್ ದಿನ ಇದೆ. ಇಲ್ಲಿವರೆಗೂ ಅವನ ವಿರುದ್ಧ ದೂರು ಕೊಡುತ್ತಿದ್ದೆವು. ಆದ್ರೆ ಏನಾಗುತ್ತಿತ್ತು ಅವನು ಬೇಲ್ ಮೇಲೆ ಹೊರಗಡೆ ಬರ್ತಾ ಇದ್ದ. ಈ ಬಾರಿ ಆ ರೀತಿ ಆಗಲ್ಲ. ಈ ಬಾರಿ ಅವನು ಅರೆಸ್ಟ್ ಆಗಬೇಕು, ಇಲ್ಲ ಅವನ ರುಂಡ ದೇಹದಿಂದ ಇಬ್ಭಾಗ ಆಗಬೇಕು. ಮುಸ್ಲಿಂ ಸದಸ್ಯರು ಎಲ್ಲರೂ ಸಿದ್ಧರಾಗಿ ಕುಳಿತಿದ್ದಾರೆ. ಏ.15ರಂದು ಯಾವುದೇ ಕೆಲಸ ಇದ್ದರೂ ರಜೆ ಮಾಡಿ, ಅಂಬೇಡ್ಕರ್ ವೃತ್ತದಲ್ಲಿ ಜಮಾವಣೆ ಆಗಿ. ಇನ್ ಷಾ ಅಲ್ಲಾ.. ಎಲ್ಲರು ಅಲ್ಲೇ ಸಿಗೋಣ ಎಂದು ಆಡಿಯೋನಲ್ಲಿ ಹೇಳಿದ್ದಾನೆ. ಇದನ್ನೂ ಓದಿ: ಹುಬ್ಬಳ್ಳಿ, ಬೆಳಗಾವಿ ಏರ್‌ಪೋರ್ಟ್‌ನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿ ಘೋಷಿಸಲು ಕೇಂದ್ರಕ್ಕೆ ಪತ್ರ

    ಸದ್ಯ ಶಾಸಕನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎನ್ನುವುದಕ್ಕೆ ಪುಷ್ಟಿ ನೀಡುವಂತಿರುವ ಈ ಆಡಿಯೋ ತೀವ್ರ ಸದ್ದು ಮಾಡುತ್ತಿದೆ.

  • ಲಾರಿ, ಬೈಕ್, ಅಂಬುಲೆನ್ಸ್ ನಡುವೆ ಸರಣಿ ಅಪಘಾತ – ಬಿಎಸ್‌ಎಫ್ ಯೋಧ ಸ್ಥಳದಲ್ಲೇ ಸಾವು

    ಲಾರಿ, ಬೈಕ್, ಅಂಬುಲೆನ್ಸ್ ನಡುವೆ ಸರಣಿ ಅಪಘಾತ – ಬಿಎಸ್‌ಎಫ್ ಯೋಧ ಸ್ಥಳದಲ್ಲೇ ಸಾವು

    – ಅಂಬುಲೆನ್ಸ್ ಚಾಲಕ ಗಂಭೀರ

    ವಿಜಯಪುರ: ಲಾರಿ, ಬೈಕ್ ಹಾಗೂ ಅಂಬುಲೆನ್ಸ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಬೈಕ್‌ನಲ್ಲಿದ್ದ ಬಿಎಸ್‌ಎಫ್ ಯೋಧ (BSF soldier) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ನಿಡಗುಂದಿ (Nidagundi) ಪಟ್ಟಣದ ಎನ್‌ಎಚ್ 50ರಲ್ಲಿ ನಡೆದಿದೆ.

    ಮುದ್ದೇಬಿಹಾಳ ತಾಲೂಕಿನ ಕಾಳಗಿ ಗ್ರಾಮದ ಮೌನೇಶ ರಾಠೋಡ್(35) ಮೃತ ಯೋಧ. ಲಾರಿ ಬೈಕ್‌ಗೆ ಡಿಕ್ಕಿಯಾದ ಬಳಿಕ ಬೈಕ್ ಸಮೇತ ಎಳೆದುಕೊಂಡು ಎದುರಿಗೆ ಬರುತ್ತಿದ್ದ ಅಂಬುಲೆನ್ಸ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಅಂಬುಲೆನ್ಸ್ ಚಾಲಕ ಕೇರಳ ಮೂಲದ ರಿತೇಶ್ ಎಂಬಾತನ ಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: 26 ರಫೇಲ್ ಯುದ್ಧ ವಿಮಾನ ಖರೀದಿ – ಭಾರತ ಫ್ರಾನ್ಸ್ ಮಧ್ಯೆ 63,000 ಕೋಟಿ ಡೀಲ್‌ಗೆ ಅನುಮೋದನೆ

    ಕ್ರೇನ್ ಮೂಲಕ ಲಾರಿ ಹಾಗೂ ಅಂಬುಲೆನ್ಸ್ ಅನ್ನು ಬೇರ್ಪಡಿಸಿ ಚಾಲಕ ರಿತೇಶ್‌ನನ್ನ ಪೊಲೀಸರು ಹೊರ ತೆಗೆದಿದ್ದಾರೆ. ಗಾಯಾಳು ರಿತೇಶ್‌ನನ್ನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: 3.5 ಕೆಜಿ ಚಿನ್ನಾಭರಣ ದರೋಡೆ ಕೇಸ್ – ಐವರು ಅರೆಸ್ಟ್, ಓರ್ವ ಆರೋಪಿ ನೇಣಿಗೆ ಶರಣು

    ಅಪಘಾತದ ಕಾರಣ ಎನ್‌ಎಚ್ 50ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಪಘಾತಕ್ಕೀಡಾದ ಲಾರಿ, ಅಂಬುಲೆನ್ಸ್ ಹಾಗೂ ಬೈಕ್ ತೆರವು ಮಾಡಿ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಂಬುಲೆನ್ಸ್‌ನಲ್ಲಿದ್ದ ಸಹಾಯಕನಿಗೆ ಹಾಗೂ ಲಾರಿ ಚಾಲಕ, ಕ್ಲೀನರ್‌ಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಏಪ್ರಿಲ್ 10ರಂದು ತೆರೆಗಾಣಲು ಸಜ್ಜಾದ ‘ವಿದ್ಯಾಪತಿ’!

    ಘಟನಾ ಸ್ಥಳಕ್ಕೆ ನಿಡಗುಂದಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯಿತು ಲಕ್ಷ್ಮೀನಾರಾಯಣ, ಆಂಜನೇಯ ಸ್ವಾಮಿ ರಥೋತ್ಸವ

    ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯಿತು ಲಕ್ಷ್ಮೀನಾರಾಯಣ, ಆಂಜನೇಯ ಸ್ವಾಮಿ ರಥೋತ್ಸವ

    ಬಳ್ಳಾರಿ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ (Mariyammanahalli Town) ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ (Lakshminarayana Swamy) ಮತ್ತು ಶ್ರೀ ಆಂಜನೇಯ ಸ್ವಾಮಿ (Anjaneya Swamy) ಜೋಡಿ ರಥೋತ್ಸವ ಅದ್ದೂರಿಯಾಗಿ ಅತ್ಯಂತ ಸಂಭ್ರಮ, ಸಡಗರದಿಂದ ನಡೆಯಿತು.

    ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ್ ನಾಯ್ಕ್ ಹಾಗೂ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ಜೋಡಿ ರಥೋತ್ಸವ ಎಳೆದು ಚಾಲನೆ ನೀಡಿದರು. ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ಜೋಡಿ ರಥೋತ್ಸವ ಎಳೆಯುವ ಸಂಪ್ರದಾಯಕ್ಕೆ 650-700 ವರ್ಷಗಳ ಇತಿಹಾಸ ಇದೆ. ಇದನ್ನೂ ಓದಿ: ಇಂದು ವಿಶ್ವವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ

    ಈ ವರ್ಷ ಹೊಸ ಜೋಡಿ ರಥೋತ್ಸವಗಳನ್ನ ಮಾಡಿಸಲಾಗಿತ್ತು. ರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ, ಲಕ್ಷ್ಮೀನಾರಾಯಣ ಹಾಗೂ ಆಂಜನೇಯನ ಕೃಪೆಗೆ ಪಾತ್ರರಾದರು. ಇದನ್ನೂ ಓದಿ: ಕಾಶಿಯಲ್ಲಿ ಮುಸ್ಲಿಂ ಮಹಿಳೆಯರಿಂದ ʻಶ್ರೀರಾಮ ಆರತಿʼ – ಏಕತೆ ಸಂದೇಶ ಸಾರಿದ ರಾಮನವಮಿ ಆಚರಣೆ

    ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿಯ ಫೋಟ 8 ಲಕ್ಷ ರೂ.ಗೆ ಹರಾಜು ಆದರೆ ಶ್ರೀ ಆಂಜನೇಯ ಸ್ವಾಮಿಯ ಫೋಟೋ 12.10 ಲಕ್ಷ ರೂ.ಗೆ ಹರಾಜಾಯ್ತು.

  • ಆಸ್ಪತ್ರೆಯಲ್ಲೇ ಹಿರಿಯ ವೈದ್ಯ ನೇಣಿಗೆ ಶರಣು

    ಆಸ್ಪತ್ರೆಯಲ್ಲೇ ಹಿರಿಯ ವೈದ್ಯ ನೇಣಿಗೆ ಶರಣು

    ವಿಜಯಪುರ: ವೈದ್ಯರೊಬ್ಬರು(Doctor) ಆಸ್ಪತ್ರೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರದ (Vijayapura) ತಾಳಿಕೋಟೆ (Thalikote) ಪಟ್ಟಣದ ಶ್ರೀ ಸಾಯಿ ಆಸ್ಪತ್ರೆಯಲ್ಲಿ ನಡೆದಿದೆ.

    ಸಾಯಿ ಆಸ್ಪತ್ರೆಯ ಡಾ.ರಾಜಶೇಖರ ಮುಚ್ಚಂಡಿ ಆತ್ಮಹತ್ಯೆ ಮಾಡಿಕೊಂಡ ವೈದ್ಯ. ಇದೀಗ ವೈದ್ಯರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ಯುವತಿಯೆಂದು ಯುವಕನಿಗೆ ಅಶ್ಲೀಲ ಮೆಸೇಜ್ – ಕಾಮುಕನಿಗೆ ಬಿತ್ತು ಧರ್ಮದೇಟು

    ಘಟನಾ ಸ್ಥಳಕ್ಕೆ ತಾಳಿಕೋಟೆ ಠಾಣೆಯ ಪೋಲಿಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಅಮೆರಿಕಕ್ಕೆ ಭಾರತದಿಂದ 5 ವಿಮಾನ ಭರ್ತಿ ಐಫೋನ್‌ ಕಳುಹಿಸಿದ ಆಪಲ್‌

  • ವಿಜಯಪುರದಲ್ಲಿ ಕಂಪಿಸಿದ ಭೂಮಿ – ಗಾಬರಿಗೊಂಡು ಮನೆಯಿಂದ ಹೊರಗೆ ಓಡಿದ ಜನ

    ವಿಜಯಪುರದಲ್ಲಿ ಕಂಪಿಸಿದ ಭೂಮಿ – ಗಾಬರಿಗೊಂಡು ಮನೆಯಿಂದ ಹೊರಗೆ ಓಡಿದ ಜನ

    ವಿಜಯಪುರ: ಜಿಲ್ಲೆಯ ತಿಕೋಟಾ(Tikota) ತಾಲೂಕಿನೆಲ್ಲೆಡೆ ಭೂಕಂಪನದ ಅನುಭವವಾಗಿದ್ದು, ಭೂಮಿಯಿಂದ ಕೇಳಿಸಿದ ಜೋರಾದ ಶಬ್ದಕ್ಕೆ ಜನರು ಗಾಬರಿಗೊಂಡು ಮನೆಯಿಂದ ಹೊರಗೆ ಓಡೋಡಿ ಬಂದಿದ್ದಾರೆ.

    ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಮಲಕನದೇರಹಟ್ಟಿ, ಹುಬನೂರ, ಟಕ್ಕಳಕಿ, ಘೋಣಸಗಿ, ಕಳ್ಳಕವಟಗಿ, ಬಾಬಾ ಪ್ರದೇಶದಲ್ಲಿ 2:14ರಿಂದ 2:15 ಸಮಯದಲ್ಲಿ ಭೂಮಿಯಿಂದ ಜೋರಾದ ಶಬ್ದವಾಗಿದೆ. ಇದನ್ನೂ ಓದಿ: ಒಡಿಶಾ ಕರಾವಳಿಯಲ್ಲಿ ಸೈಕ್ಲೋನ್ ಎಫೆಕ್ಟ್ – ಬೆಂಗಳೂರಿಗೆ ಮಳೆ ಮುನ್ಸೂಚನೆ, ಯೆಲ್ಲೋ ಅಲರ್ಟ್ ಘೋಷಣೆ

    ಕಳೆದ ವರ್ಷ ನಾಲ್ಕೈದು ಬಾರಿ ಭೂಮಿ ಕಂಪಿಸಿದ್ದು, ಈ ವರ್ಷ ಮೊದಲ ಭೂಕಂಪನ ಅನುಭವವಾಗಿದೆ. ಭೂಮಿ ಕಂಪಿಸಿದ್ದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಇದನ್ನೂ ಓದಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 41 ರೂ. ಇಳಿಕೆ

  • ಉಚ್ಛಾಟನೆ ಬಳಿಕ ವಿಜಯಪುರಕ್ಕೆ ಯತ್ನಾಳ್ ಆಗಮನ – ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ; ಹೋಮ, ಹವನ

    ಉಚ್ಛಾಟನೆ ಬಳಿಕ ವಿಜಯಪುರಕ್ಕೆ ಯತ್ನಾಳ್ ಆಗಮನ – ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ; ಹೋಮ, ಹವನ

    ವಿಜಯಪುರ: ಯುಗಾದಿ ಪಾಡ್ಯ ಹಿನ್ನೆಲೆ ಬಿಜೆಪಿಯಿಂದ (BJP) ಉಚ್ಛಾಟನೆಯಾದ ಬಳಿಕ ಮೊದಲ ಬಾರಿಗೆ ವಿಜಯಪುರ ನಗರಕ್ಕೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ (Basanagouda Patil Yatnal) ಆಗಮಿಸಿದ್ದಾರೆ.

    ಬೆಂಗಳೂರಿನಿಂ‌ದ (Bengaluru) ತಡರಾತ್ರಿ ಪ್ರಯಾಣ ಬೆಳೆಸಿ ವಿಜಯಪುರಕ್ಕೆ ಆಗಮಿಸಿದ್ದಾರೆ. ವಿಜಯಪುರದ ಪ್ರಸಿದ್ಧ ಸಿದ್ದೇಶ್ವರ ದೇವಸ್ಥಾನದಲ್ಲಿ ಯತ್ನಾಳ್ ಹಾಗೂ ಕುಟುಂಬ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಪತ್ನಿ ಶೈಲಜಾ ಹಾಗೂ ಸಿದ್ದೇಶ್ವರ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಅಮಾಯಕರ ಜೀವ ಬಲಿ ಪಡೆಯುತ್ತಲೇ ಇದೆ ಬಿಬಿಎಂಪಿ ಕಸದ ಲಾರಿ – 4 ವರ್ಷಗಳಲ್ಲಿ ಸಾಲು ಸಾಲು ಅಪಘಾತ

    ಪೂಜೆ ಬಳಿಕ ಮಂಗಳಾರತಿ ಕಾರ್ಯಕ್ರಮ ಮುಗಿಸಿದ್ದಾರೆ. ನಂತರ ಇದೀಗ ಪ್ರತಿ ವರ್ಷ ಯುಗಾದಿ ಪಾಡ್ಯಾದಂದು ನಡೆಸುವ ಹೋಮ ಹವನ ಪೂಜೆ ಕಾರ್ಯಗಳಲ್ಲಿ ಭಾಗಿ ಆಗಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬದ ದೇಸಿ ಸೊಗಡು, ಗ್ರಾಮೀಣ ಕ್ರೀಡೆಗಳ ಗಮ್ಮತ್ತು!

    ಹೋಮ ಮುಗಿದ ನಂತರ ಸಿದ್ದೇಶ್ವರ ಸಂಸ್ಥೆಯಿಂದ ನಿರ್ಮಿಸಿರೋ ದಾಸೋಹ ನಿಲಯ ಹಾಗೂ ಕಟ್ಟಡ ಉದ್ಘಾಟನೆ ಪೂಜಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: Myanmar Earthquake | ಭೀಕರ ಭೂಕಂಪಕ್ಕೆ 1,600ಕ್ಕೂ ಹೆಚ್ಚು ಮಂದಿ ಬಲಿ – 3,000ಕ್ಕೂ ಅಧಿಕ ಮಂದಿಗೆ ಗಾಯ

  • ಯತ್ನಾಳ್ ಉಚ್ಚಾಟನೆಯಿಂದ ಒತ್ತಡಕ್ಕೆ ಒಳಗಾಗಿದ್ದ ಬಿಜೆಪಿ ಪದಾಧಿಕಾರಿ – ಕಾರು ಅಪಘಾತದಲ್ಲಿ ಸಾವು

    ಯತ್ನಾಳ್ ಉಚ್ಚಾಟನೆಯಿಂದ ಒತ್ತಡಕ್ಕೆ ಒಳಗಾಗಿದ್ದ ಬಿಜೆಪಿ ಪದಾಧಿಕಾರಿ – ಕಾರು ಅಪಘಾತದಲ್ಲಿ ಸಾವು

    ವಿಜಯಪುರ: ಬಿಜೆಪಿಯಿಂದ (BJP) ಯತ್ನಾಳ್ ಉಚ್ಚಾಟನೆ ಮಾಡಿದ್ದರಿಂದ ಒತ್ತಡಕ್ಕೆ ಒಳಗಾಗಿದ್ದ ಬಿಜೆಪಿ ಪದಾಧಿಕಾರಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

    ವಿಜಯಪುರ (Vijayapura) ನಗರದ ರಂಭಾಪುರ ನಿವಾಸಿ, ಬಿಜೆಪಿ ನಗರದ ಮಂಡಲದ ಎಸ್‌ಟಿ ಮೋರ್ಚಾದ ಕಾರ್ಯದರ್ಶಿಯಾಗಿದ್ದ ಸಂತೋಷ ತಟಗಾರ ಮೃತ ದುರ್ದೈವಿ. ಡಿಪ್ರೆಷನ್‌ನಲ್ಲಿ ಕಾರನ್ನು ಮರಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ರಾಜ್ಯದ ಜನತೆಗೆ ಮತ್ತೊಂದು ಶಾಕ್‌ – ನಂದಿನಿ ಹಾಲಿನ ದರ 4 ರೂ. ಹೆಚ್ಚಳ

    ಬುಧವಾರ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರನ್ನು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ದ ಸುದ್ದಿಯನ್ನು ಕೇಳಿ ಸಂತೋಷ ಒತ್ತಡಕ್ಕೆ ಒಳಗಾಗಿದ್ದರು. ಬಳಿಕ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರಗೆ ಕರೆ ಮಾಡಿ ಉಚ್ಚಾಟನೆ ಬಗ್ಗೆ ಮನನೊಂದು ಮಾತನಾಡಿದ್ದರು. ಮುಂದೆ ಏನು ಮಾಡೋದು ಹೇಳಿ? ಮೊದಲು ನಾನು ರಾಜೀನಾಮೆ ಕೊಡುತ್ತೇನೆ. ಕೊನೆಗೆ ನಾನು ಏನು ಮಾಡುತ್ತೇನೆ ನೋಡಿ ಎಂದು ಹೇಳಿ ಸಂತೋಷ್ ಕಾಲ್ ಕಟ್ ಮಾಡಿದ್ದರು.

    ಅದಾದ ಸ್ವಲ್ಪ ಹೊತ್ತಿನಲ್ಲಿ ಶಂಕರ್ ಅವರು ಸಂತೋಷ್ ಸಾವಿನ ಸುದ್ದಿ ಕೇಳಿದ್ದರು. ಸದ್ಯ ಸಂತೋಷ ಸಾವಿಗೆ ಬಿಜೆಪಿ ಹೈಕಮಾಂಡ್ (BJP High Command) ಕಾರಣ. ಹೈಕಮಾಂಡ್‌ನ ಉಚ್ಚಾಟನೆ ನಿರ್ಧಾರ ಬಿಜೆಪಿ (BJP) ಪದಾಧಿಕಾರಿಯ ಬಲಿ ಪಡೆದಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.ಇದನ್ನೂ ಓದಿ: ನನ್ನ ಜಾತ್ರೆ ನಿಲ್ಸಿದ್ದೀರಿ.. ಮೂರು ದಿನಗಳಲ್ಲಿ ಮೂರು ಹೆಣ ಬೀಳುತ್ತೆ – ಮೈಮೇಲೆ ದೇವರು ಬಂದಿದೆ ಅಂತೇಳಿ ಮಹಿಳೆ ಶಾಪ!

  • ಯತ್ನಾಳ್‌ ಉಚ್ಛಾಟನೆ ಬೆನ್ನಲ್ಲೇ ಬಿಜೆಪಿಯ ಮತ್ತೊಬ್ಬ ಮುಖಂಡ ರಾಜೀನಾಮೆ – ಬೆಂಬಲಿಗರಿಂದ ಪ್ರತಿಭಟನೆಗೆ ಸಜ್ಜು!

    ಯತ್ನಾಳ್‌ ಉಚ್ಛಾಟನೆ ಬೆನ್ನಲ್ಲೇ ಬಿಜೆಪಿಯ ಮತ್ತೊಬ್ಬ ಮುಖಂಡ ರಾಜೀನಾಮೆ – ಬೆಂಬಲಿಗರಿಂದ ಪ್ರತಿಭಟನೆಗೆ ಸಜ್ಜು!

    – ಉಚ್ಛಾಟನೆ ಬೆನ್ನಲ್ಲೇ ಕಲಬುರಗಿಗೆ ಯತ್ನಾಳ್‌ ನೇರ ಭೇಟಿ

    ವಿಜಯಪುರ: ಬಿಜಿಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಉಚ್ಚಾಟನೆ ಬೆನ್ನಲ್ಲೇ ವಿಜಯಪುರ (Vijayapura) ಜಿಲ್ಲಾ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಜಿಲ್ಲಾ ಬಿಜೆಪಿ ನಗರ ಮಂಡಲ ಅಧ್ಯಕ್ಷ ಸೇರಿದಂತೆ ಅನೇಕ ಪದಾಧಿಕಾರಿಗಳು ರಾಜೀನಾಮೆ ನೀಡಿದ ಬೆನ್ನಲ್ಲೇ ಇಂದು ಜಿಲ್ಲಾ ಕಾರ್ಯದರ್ಶಿ ಸಿದ್ದು ಹೆಬ್ಬಾಳ ಸಹ ರಾಜೀನಾಮೆ ನೀಡಿದ್ದಾರೆ.

    ಹಿಂದೂ ಫೈರ್‌ಬ್ರಾಂಡ್, ಹಿಂದೂತ್ವದ ಗಟ್ಟಿಧ್ವನಿಯ ಉಚ್ಛಾಟನೆಯನ್ನ ಖಂಡಿಸುತ್ತೇವೆ ಎಂದಿರುವ ಸಿದ್ದು ಹೆಬ್ಬಾಳ ಅವರು, ರಾಜೀನಾಮೆ ಪತ್ರ ಬರೆದು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ರವಾನಿಸಿದ್ದಾರೆ. ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಶುರು

    ಪ್ರತಿಭಟನೆಗೆ ಸಜ್ಜು:
    ಇನ್ನೂ ಯತ್ನಾಳ್‌ ಅವರ ಉಚ್ಛಾಟನೆ ಮಾಡಿರುವ ಹೈಕಮಾಂಡ್‌ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ಯತ್ನಾಳ್‌ ಬೆಂಬಲಿಗರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಪ್ರತಿಭಟನೆ ಬಳಿಕ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆಯೂ ಚರ್ಚೆ ನಡೆಸುವುದಕ್ಕೂ ತಯಾರಿ ಮಾಡಿಕೊಂಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಯತ್ನಾಳ್‌ ಉಚ್ಛಾಟನೆ – ವಿಜಯಪುರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು

    ಯತ್ನಾಳ್‌ ಎಲ್ಲಿದ್ದಾರೆ?
    ಇಂದು ಬೆಳಗ್ಗೆ ಹೈದ್ರಾಬಾದ್ ಮೂಲಕ ಕಲಬುರಗಿಯ ಚಿಂಚೋಳಿಗೆ ಆಗಮಿಸಿರುವ ಯತ್ನಾಳ್‌, ತಮ್ಮ ಒಡೆತನದ ಎಥೆನಾಲ್ ಕಾರ್ಖಾನೆಯ ಗೇಸ್ಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದನ್ನೂ ಓದಿ: 2ನೇ ಬಾರಿ ಬಿಜೆಪಿಯಿಂದ ಯತ್ನಾಳ್‌ ಉಚ್ಛಾಟನೆ