Tag: ವಿಜಂಯ್ ಹಜಾರೆ

  • 19 ಬೌಂಡರಿ, 11 ಸಿಕ್ಸ್ ಸಿಡಿಸಿ ಇಶಾನ್ ಕಿಶಾನ್ ಸಿಡಿಲಬ್ಬರದ ಬ್ಯಾಟಿಂಗ್

    19 ಬೌಂಡರಿ, 11 ಸಿಕ್ಸ್ ಸಿಡಿಸಿ ಇಶಾನ್ ಕಿಶಾನ್ ಸಿಡಿಲಬ್ಬರದ ಬ್ಯಾಟಿಂಗ್

    ಭೋಪಾಲ್: ಜಾರ್ಖಾಂಡ್ ತಂಡದ ನಾಯಕ ಇಶಾನ್ ಕಿಶನ್ ಇಂದೋರ್‍ ನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ 19 ಬೌಂಡರಿ 11 ಸಿಕ್ಸರ್ ಬಾರಿಸಿ ಮತ್ತೊಮ್ಮೆ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ.

    ಮಧ್ಯಪ್ರದೇಶದ ಇಂದೋರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಗ್ರೂಪ್ ಬಿ ತಂಡಗಳಾದ ಜಾರ್ಖಂಡ್ ಮತ್ತು ಮಧ್ಯಪ್ರದೇಶ ನಡುವಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಟಾಸ್ ಗೆದ್ದ ಮಧ್ಯಪ್ರದೇಶ ತಂಡದ ನಾಯಕ ಅಭಿಷೇಕ್ ಭಂಡಾರಿ ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಇದರ ಪೂರ್ಣ ಲಾಭವೆತ್ತಿದ ಜಾರ್ಖಾಂಡ್ ತಂಡದ ನಾಯಕ ಇಶಾನ್ ಕಿಶನ್ 173 ರನ್ (94 ಎಸೆತ, 19 ಬೌಂಡರಿ, 11 ಸಿಕ್ಸರ್) ಸಿಡಿಸಿ ಬ್ಯಾಟಿಂಗ್ ಪರಾಕ್ರಮ ಮೆರೆದರು.

    ಮೊದಲು 50 ರನ್‍ಗಳಿಸಲು 42 ಬಾಲ್‍ಗಳನ್ನು ಎದುರಿಸಿದ ಇಶಾನ್ ಕಿಶನ್ ನಂತರ ಲಯಕ್ಕೆ ಬಂದು ತಮ್ಮ ಬ್ಯಾಟಿಂಗ್ ಗೇರ್ ಬದಲಾಯಿಸಿಕೊಂಡು 74 ಬಾಲ್‍ಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಶತಕದ ಬಳಿಕ ಮತ್ತಷ್ಟು ಬಿರುಸಿನ ಬ್ಯಾಟಿಂಗ್ ನಡೆಸಿದ ಕಿಶನ್ 173 ರನ್‍ಗಳಿಸಿ ಗೌರವ್ ಯಾದವ್‍ಗೆ ವಿಕೆಟ್ ಒಪ್ಪಿಸಿದರು.

    ಇಶಾನ್ ಕಿಶನ್ ಬ್ಯಾಟಿಂಗ್ ಪರಾಕ್ರಮದ ಮುಂದೆ ಮಂಡಿಯೂರಿದ ಎದುರಾಳಿ ಮಧ್ಯಪ್ರದೇಶ ತಂಡ ಜಾರ್ಖಂಡ್ ನೀಡಿದ 422 ರನ್‍ಗಳ ಟಾರ್ಗೆಟ್ ಚೇಸ್ ಮಾಡಲಾಗದೆ ಕೇವಲ 98 ರನ್‍ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಜಾರ್ಖಂಡ್ ತಂಡ 324ರನ್ ಗಳ ಭರ್ಜರಿ ಜಯ ಗಳಿಸಿದೆ.

  • ಮತ್ತೆ ಮಿಂಚಿದ ಮಯಂಕ್: ಸೌರಾಷ್ಟ್ರ ಸೋಲಿಸಿ ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ

    ಮತ್ತೆ ಮಿಂಚಿದ ಮಯಂಕ್: ಸೌರಾಷ್ಟ್ರ ಸೋಲಿಸಿ ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ

    ನವದೆಹಲಿ: ಸೌರಾಷ್ಟ್ರ ವಿರುದ್ಧ ಕರ್ನಾಟಕ 41 ರನ್ ಗಳಿಂದ ಜಯಗಳಿಸುವ ಮೂಲಕ ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯನ್ನು ಮೂರನೇ ಬಾರಿ ಗೆದ್ದುಕೊಂಡಿದೆ.

    ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಕರ್ನಾಟಕ 45.5 ಓವರ್ ಗಳಲ್ಲಿ 253 ರನ್ ಗಳಿಗೆ ಆಲೌಟ್ ಆಗಿತ್ತು. 254 ರನ್ ರನ್‍ಗಳ ಗುರಿಯನ್ನು ಪಡೆದ ಸೌರಾಷ್ಟ್ರ 46.3 ಓವರ್ ಗಳಲ್ಲಿ 212 ರನ್ ಗಳಿಸಿ ಆಲೌಟ್ ಆಯಿತು.

    ಸರಣಿ ಉದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದ್ದ ಮಯಂಕ್ ಅಗರ್ ವಾಲ್ 90 ರನ್(79 ಎಸೆತ, 11 ಬೌಂಡರಿ, 3 ಸಿಕ್ಸರ್), ಪವನ್ ದೇಶಪಾಂಡೆ 49 ರನ್(60 ಎಸೆತ, 4 ಬೌಂಡರಿ, 1 ಸಿಕ್ಸರ್), ರವಿಕುಮಾರ್ ಸಮರ್ಥ್ 48 ರನ್(65 ಎಸೆತ, 1 ಬೌಂಡರಿ, 1 ಸಿಕ್ಸರ್) ಶ್ರೇಯಸ್ ಗೋಪಾಲ್ 31 ರನ್(28 ಎಸೆತ, 6 ಬೌಂಡರಿ) ಸಿಡಿಸಿ ಔಟಾದರು.

    ಸೌರಾಷ್ಟ್ರ ನಾಯಕ ಚೇತೇಶ್ವರ ಪೂಜಾರ 94 ರನ್(127 ಎಸೆತ, 10 ಬೌಂಡರಿ, 1 ಸಿಕ್ಸರ್) ಸಿಡಿಸಿ 9ನೇಯವರಾಗಿ ಔಟಾದರು. ಕರ್ನಾಟಕದ ಪರವಾಗಿ ಕೆ.ಗೌತಮ್ ಮತ್ತು ಕೃಷ್ಣಾ 3 ವಿಕೆಟ್ ಕಿತ್ತರೆ, ಸ್ಟುವರ್ಟ್ ಬಿನ್ನಿ ಮತ್ತು ದೇಶಪಾಂಡೆ ತಲಾ ಒಂದೊಂದು ವಿಕೆಟ್ ಪಡೆದರು.

    2013-14ರಲ್ಲಿ, 2015-16 ರಲ್ಲಿ ಕರ್ನಾಟಕ ಚಾಂಪಿಯನ್ ಆಗಿತ್ತು. ಈಗ ಕರುಣ್ ನಾಯರ್ ನೇತೃತ್ವದಲ್ಲಿ ಮೂರನೇ ಬಾರಿ ಕರ್ನಾಟಕ ಟ್ರೋಫಿಯನ್ನು ಗೆದ್ದುಕೊಂಡಿದೆ.

    27 ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ‘ಎ’ ಗುಂಪಿನಿಂದ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ರಾಜ್ಯ ತಂಡ ಹೈದರಾಬಾದ್ ತಂಡವನ್ನು ಮಣಿಸಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿತ್ತು. ನಾಲ್ಕರ ಘಟ್ಟದಲ್ಲಿ 9 ವಿಕೆಟ್‍ಗಳಿಂದ ಮಹಾರಾಷ್ಟ್ರವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.