Tag: ವಿಚ್ಛೇದನ

  • ಬೆಳಗಾವಿ | ಪ್ರೀತಿಸಿ ಮದ್ವೆಯಾದ, ವಿಚ್ಛೇದನ ಪಡೆದು ಮಾಜಿ ಪತ್ನಿ ಕೊಂದ ಪೊಲೀಸಪ್ಪ

    ಬೆಳಗಾವಿ | ಪ್ರೀತಿಸಿ ಮದ್ವೆಯಾದ, ವಿಚ್ಛೇದನ ಪಡೆದು ಮಾಜಿ ಪತ್ನಿ ಕೊಂದ ಪೊಲೀಸಪ್ಪ

    ಬೆಳಗಾವಿ: ಪ್ರೀತಿಸಿ ಮದುವೆಯಾಗಿ ವಿಚ್ಛೇದನ ಪಡೆದ ಬಳಿಕ ಮಾಜಿ ಪತ್ನಿಯನ್ನ ಪೊಲೀಸಪ್ಪ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಪತ್ನಿಗೆ ಚಟ್ಟಕಟ್ಟಿ ಮನೆಯ ಹೊರಗಿನಿಂದ ಬೀಗ ಹಾಕಿಕೊಂಡು ಪೊಲೀಸಪ್ಪ ಕಾಣೆಯಾಗಿದ್ದ ಎನ್ನಲಾಗಿದೆ. ಮೃತದೇಹ ಕೊಳೆತು ವಾಸನೆ ಬಂದಾಗ ಸ್ಥಳೀಯರಿಂದ ಪ್ರಕರಣ ಬೆಳಕಿಗೆ ಬಂದಿದೆ. ‌ಮನೆಗೆ ನುಗ್ಗಿ ಭೀಕರವಾಗಿ ಹತ್ಯೆಗೈದು ಬಳಿಕ ಡೋರ್ ಲಾಕ್ ಮಾಡಿಕೊಂಡು ಹಂತಕ ಪರಾರಿಯಾಗಿದ್ದ ಎನ್ನಲಾಗಿದೆ. ಇದನ್ನೂ ಓದಿ: ವಿಜಯಪುರದಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು -‌ ಎನ್‌ಕೌಂಟರ್‌ಗೆ ರೌಡಿಶೀಟರ್ ಬಲಿ

    ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಈ ದಾರುಣ ಘಟನೆ ನಡೆದಿದೆ. ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಕಾಶಮ್ಮ‌ ನೆಲ್ಲಿಗಣಿ (34) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ. ಕಾಗವಾಡ ತಾಲೂಕಿನ ಬನಜವಾಡ ಗ್ರಾಮ ಸಂತೋಷ ಕಾಂಬಳೆ ಕೊಲೆ ಆರೋಪಿ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪಕ್ಷ‌ ನಿಷ್ಠೆಗೆ ಫಲ ಸಿಗಲಿದೆ ತಾಳ್ಮೆಯಿಂದಿರಿ – ಡಿಕೆಶಿಗೆ ಖರ್ಗೆ ಅಭಯ, 1 ಗಂಟೆಗೂ ಹೆಚ್ಚುಕಾಲ ಮಾತುಕತೆ

    ಸವದತ್ತಿ ಕೆಎಸ್‌ಆರ್‌ಟಿಸಿ ಡಿಪೋ ವ್ಯಾಪ್ತಿಯಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡ್ತಿದ್ದ ಕಾಶಮ್ಮ ಪೊಲೀಸ್‌ ಇಲಾಖೆಯಲ್ಲಿ‌ ಕೆಲಸ ಮಾಡ್ತಿದ್ದ ಸಂತೋಷ ಪಾಟೀಲ್ ಇಬ್ಬರೂ ಸೇರಿ ಕಳೆದ 13 ವರ್ಷಗಳ ಹಿಂದೆಯೇ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ಜಾತಿ ಬೇರೆಯಾಗಿದ್ದರೂ ಸಹ ಹಿರಿಯರ ಸಮ್ಮುಖದಲ್ಲಿ ಸಂಪ್ರದಾಯದಂತೆ ಮದುವೆ ಜೋಡಿ ಸಪ್ತಪದಿ ತುಳಿದಿತ್ತು. ಮದುವೆಯಾಗಿ ಕೆಲವೇ ದಿನಗಳಲ್ಲಿ ಕಾಶಮ್ಮಳಿಗೆ ಪತಿ ಸಂತೋಷ ನಿರಂತರ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿ ಬಂದಿದ್ದು ಗಂಡನ ಕಿರುಕುಳ ಹೆಚ್ಚಾದಂತೆ ಸವದತ್ತಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಕಾಶಮ್ಮ ವಾಸವಾಗಿದ್ದಳು ಎನ್ನಲಾಗಿದೆ.

    ಬಳಿಕ ಸಂತೋಷನ ಕಾಟ ತಾಳಲಾರದೇ ವಿವಾಹ ವಿಚ್ಛೇದನ ಪಡೆದಿದ್ದಳು. ಕಳೆದ ಐದು ತಿಂಗಳ ಹಿಂದಷ್ಟೇ ಬೈಲಹೊಂಗಲ ಕೌಟುಂಬಿಕ ನ್ಯಾಯಾಲಯದಿಂದ ವಿಚ್ಛೇದನವಾಗಿತ್ತು. ಆದರೇ, ಅಕ್ಟೋಬರ್ 13ರಂದು ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದ ಕಾಶಮ್ಮಳ ಮನೆಗೆ ಅದೇ ದಿನ ರಾತ್ರಿ 8ಗಂಟೆ ಸುಮಾರಿಗೆ ಸಂತೋಷ‌ ಬಂದಿದ್ದಾನೆ. ಈ ವೇಳೆ ಹರಿತವಾದ ಆಯುಧ ಬಳಸಿ ಕಾಶಮ್ಮ‌ಳ ಕತ್ತು, ಹೊಟ್ಟೆಗೆ ಚುಚ್ಚಿ ಆರೋಪಿ ಪರಾರಿಯಾಗಿದ್ದ. ಮೃತದೇಹದ ವಾಸನೆ ಬರುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಪೊಲೀಸರ ಪರಿಶೀಲನೆ ವೇಳೆ ಕೊಳೆತ ಸ್ಥಿತಿಯಲ್ಲಿ ಲೇಡಿ ಕಂಡಕ್ಟರ್ ಶವ ಪತ್ತೆಯಾಗಿದೆ. ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಕೊಲೆ ಆರೋಪಿ ಸಂತೋಷನನ್ನು ಪೊಲೀಸರು ಬಂಧಿಸಿದ್ದು ಈ ಕುರಿತು ಸವದತ್ತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಳೆಗಾಲದ ಮಧ್ಯೆ ನೀರಿಗೆ ಹಾಹಾಕಾರ – ಬೀದರ್‌ನ ಕುಗ್ರಾಮದ ಜನರಿಗೆ ಕೆಮಿಕಲ್ ನೀರು ಕುಡಿಯುವ ಕರ್ಮ

  • ಡಿಗ್ನಿಫೈಡ್ ರೀತಿಯಲ್ಲಿ ಹ್ಯಾಂಡಲ್ ಮಾಡಿ ಸಾಲ್ವ್ ಮಾಡಿಕೊಳ್ತೀನಿ: ಅಜಯ್‌ ರಾವ್‌

    ಡಿಗ್ನಿಫೈಡ್ ರೀತಿಯಲ್ಲಿ ಹ್ಯಾಂಡಲ್ ಮಾಡಿ ಸಾಲ್ವ್ ಮಾಡಿಕೊಳ್ತೀನಿ: ಅಜಯ್‌ ರಾವ್‌

    ಬೆಂಗಳೂರು: ಇದು ನನ್ನ ವೈಯಕ್ತಿಕ ವಿಚಾರ. ಇದನ್ನ ನಾವು ಪರಿಹಾರ ಮಾಡಿಕೊಳ್ಳುತ್ತೇವೆ ಎಂದು ನಟ ಅಜಯ್‌ ರಾವ್‌ (Ajai Rao) ಹೇಳಿದ್ದಾರೆ.

    ನಾವು ಗೌರವಯುತವಾಗಿ ಪರಿಹಾರ ಮಾಡುತ್ತೇವೆ. ಈಗ ನಾನು ಪ್ರತಿಕ್ರಿಯಿಸಿ ನನ್ನ ಮಗಳ ಭವಿಷ್ಯಕ್ಕೆ ತೊಂದರೆ ಆಗುವುದು ಬೇಡ. ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ತಿಳಿಸಿದ್ದಾರೆ.

    ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿರುವ ಪತ್ನಿ ಸ್ವಪ್ನಾ ರಾವ್ (Swapna Rao) ವಿಚ್ಛೇದನ ಕೋರಿ ಕೌಟುಂಬಿಕ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಜಯ್ ರಾವ್ ಹಾಗೂ ಪತ್ನಿ ಸ್ವಪ್ನಾ (Swapna) ಇಬ್ಬರು 2014 ರ ಡಿಸೆಂಬರ್‌ನಲ್ಲಿ ಪ್ರೇಮ ವಿವಾಹವಾಗಿದ್ದರು. ಇದನ್ನೂ ಓದಿ: ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದರಿಂದ ಅಜಯ್ರಾವ್ಬಾಳಲ್ಲಿ ಬಿರುಗಾಳಿ!

    ಕುಟುಂಬಸ್ಥರ ಸಮ್ಮುಖದಲ್ಲಿ ಬಳ್ಳಾರಿಯ ಹೊಸಪೇಟೆಯಲ್ಲಿ ಸರಳವಾಗಿ ವಿವಾಹವಾಗಿದ್ದರು. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಒಂದು ಹೆಣ್ಣು ಮಗು ಕೂಡ ಇದ್ದು ಇಬ್ಬರು ಅನ್ಯೋನ್ಯವಾಗಿದ್ದರು.

    ಇತ್ತೀಚಿಗೆ ದಂಪತಿ ಹೊಸ ಮನೆಯ ಗೃಹಪ್ರವೇಶ ಮಾಡಿದ್ದರು. ಯುದ್ಧಕಾಂಡ ಸಿನಿಮಾಕ್ಕಾಗಿ ಸಾಕಷ್ಟು ಸಾಲ ಮಾಡಿದ್ದ ಅಜಯ್ ರಾವ್ ಇದರಿಂದ ಕಂಗೆಟ್ಟಿದ್ದರು ಎನ್ನಲಾಗಿದೆ.

    2003 ರಲ್ಲಿ ಬಿಡುಗಡೆಯಾದ ಎಕ್ಸ್‌ಕ್ಯೂಸ್‌ಮೀ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟ ಅಜಯ್ ರಾವ್, ಇದೇ ವರ್ಷ ಬಿಡುಗಡೆ ಆದ ಯುದ್ಧಕಾಂಡ 2 ಸಿನಿಮಾನಲ್ಲಿ ನಟಿಸುವ ಜೊತೆಗೆ ನಿರ್ಮಾಣವನ್ನೂ ಸಹ ಮಾಡಿದ್ದರು.

  • ಸ್ಯಾಂಡಲ್‌ವುಡ್‌ ನಟನ ಬಾಳಲ್ಲಿ ಬಿರುಗಾಳಿ – ನಟ ಅಜಯ್ ರಾವ್ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ

    ಸ್ಯಾಂಡಲ್‌ವುಡ್‌ ನಟನ ಬಾಳಲ್ಲಿ ಬಿರುಗಾಳಿ – ನಟ ಅಜಯ್ ರಾವ್ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ

    ಇತ್ತೀಚೆಗೆ ಸೆಲೆಬ್ರಿಟಿಗಳು ವಿಚ್ಛೇದನ (Divorce) ತೆಗೆದುಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಪ್ರತಿ ದಿನ ಒಬ್ಬರಲ್ಲ ಒಬ್ಬರ ಡಿವೋರ್ಸ್ ಸುದ್ದಿಗಳು ಬೆಳಕಿಗೆ ಬರುತ್ತಲೇ ಇವೆ, ಈಗ ಆ ಸಾಲಿಗೆ ಸ್ಯಾಂಡಲ್‌ವುಡ್‌ನ ನಟ ಅಜಯ್‌ ರಾವ್‌ (Ajay Rao) ಕೂಡ ಸೇರಿಕೊಂಡಿದ್ದಾರೆ. ಹೌದು. ನಟ ಅಜಯ್‌ ರಾವ್‌ ಪತ್ನಿ ಸಪ್ನಾ (Sapna) ವಿಚ್ಛೇದನ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

    2014ರಲ್ಲಿ ಡಿಸೆಂಬರ್‌ 18ರಲ್ಲಿ ಪ್ರೀತಿಸಿ ಮದ್ವೆಯಾಗಿದ್ದ (Love Marriage) ಈ ಜೋಡಿ ಇತ್ತೀಚಿಗೆ ಹೊಸ ಮನೆಯ ಗೃಹ ಪ್ರವೇಶ ಮಾಡಿತ್ತು. ಹೊಸಪೇಟೆಯಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಇತ್ತೀಚೆಗಷ್ಟೇ ಹೊಸ ಮನೆಗೆ ಗೃಹ ಪ್ರವೇಶ ಮಾಡಿತ್ತು ಈ ಜೋಡಿ. ಇದನ್ನೂ ಓದಿ: `ಗ್ರೀನ್ ಗರ್ಲ್’ಗೆ ಸಿಕ್ತು ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯ ಸಾಥ್

    ಇದೀಗ ನಟನ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಪತ್ನಿ ಸ್ವಪ್ನ ರಾವ್‌ ವಿಚ್ಛೇದನ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅಜಯ್‌ ರಾವ್‌ ಸಪ್ನಾ ದಂಪತಿಗೆ ಓರ್ವ ಪುತ್ರಿ ಕೂಡ ಇದ್ದಾರೆ. ಇದನ್ನೂ ಓದಿ: ಡಿ ಗ್ಯಾಂಗ್‌ಗೆ ಮತ್ತಷ್ಟು ಢವಢವ – ಫಾಸ್ಟ್‌ ಟ್ರ್ಯಾಕ್ ಕೋರ್ಟ್‌ಗೆ ಮನವಿ ಸಲ್ಲಿಸಲು ಪೊಲೀಸರ ತಯಾರಿ

    11 ವರ್ಷಗಳ ಬಳಿಕ ದೂರಾಗಲು ನಿರ್ಧರಿಸಿದ್ದೇಕೆ? 
    2014ರಲ್ಲಿ ಮದ್ವೆಯಾಗಿದ್ದ ಈ ಜೋಡಿ 11 ವರ್ಷಗಳ ಬಳಿಕ ದಾಂಪತ್ಯ ಜೀವನಕ್ಕೆ ವಿದಾಯ ಹೇಳಲು ಬಯಸಿದೆ. ಅಜಯ್ ರಾವ್ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪತ್ನಿ ದೂರು ದಾಖಲಿಸಿದ್ದಾರೆ. ಪತ್ನಿ ಜೊತೆಗೆ ಮಗಳು ಚರಿಷ್ಮಾ ಸಹ ಅಜಯ್ ರಾವ್ ವಿರುದ್ಧ ದೂರು ದಾಖಲಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಇವರೇ ಕರ್ಕೊಂಡು ಹೋಗಿ ಹೊಡಿ ಬಡಿ ಮಾಡಿದ್ದು ತಪ್ಪು: ಪ್ರಿಯಾ ಹಾಸನ್‌

  • ಫೋಟೋ ತೆಗೆಯುವ ನೆಪದಲ್ಲಿ ಪತಿಯನ್ನ ಪತ್ನಿ ನದಿಗೆ ತಳ್ಳಿದ ಆರೋಪ ಕೇಸ್‌ – ಪರಸ್ಪರ ವಿಚ್ಛೇದನಕ್ಕೆ ಮುಂದಾದ ದಂಪತಿ

    ಫೋಟೋ ತೆಗೆಯುವ ನೆಪದಲ್ಲಿ ಪತಿಯನ್ನ ಪತ್ನಿ ನದಿಗೆ ತಳ್ಳಿದ ಆರೋಪ ಕೇಸ್‌ – ಪರಸ್ಪರ ವಿಚ್ಛೇದನಕ್ಕೆ ಮುಂದಾದ ದಂಪತಿ

    ರಾಯಚೂರು: ಜಿಲ್ಲೆಯ ಕೃಷ್ಣಾ ನದಿಯ ಗುರ್ಜಾಪುರ ಬ್ಯಾರೇಜ್ ಬಳಿ ಫೋಟೋ ತೆಗೆಯುವ ನೆಪದಲ್ಲಿ ಪತಿಯನ್ನ ಪತ್ನಿ ನದಿಗೆ ತಳ್ಳಿದ ಆರೋಪ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಪತ್ನಿಯಿಂದ ವಿಚ್ಛೇದನ ಪಡೆಯಲು ಪತಿ ತಾತಪ್ಪ ಮುಂದಾಗಿದ್ದಾನೆ. ಪತ್ನಿ ಗದ್ದೆಮ್ಮ ಸಹ ಸ್ವಯಂ ವಿವಾಹ ವಿಚ್ಛೇದನ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದಾಳೆ.

    ಕುಟುಂಬದ ಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆಸಿ ಕುಟುಂಬಸ್ಥರು ಬಾಂಡ್ ಬರೆಯಿಸಿಕೊಂಡಿದ್ದಾರೆ. ಘಟನೆ ಬಳಿಕ ಇಬ್ಬರು ಒಟ್ಟಿಗೆ ಇರುವುದು ಬೇಡ ಅಂತ ನಿರ್ಧರಿಸಿದ್ದಾರೆ. ಮದುವೆಯಾಗಿ ಕೆಲವೇ ದಿನಕ್ಕೆ ಸಂಸಾರ ಕೆಟ್ಟಿದ್ದರೂ ನಮ್ಮ ತಮ್ಮ ಹೇಳಿಕೊಂಡಿರಲಿಲ್ಲ. ನದಿಗೆ ತಳ್ಳಿದ ಬಳಿಕ ಗಂಡನಿಗೆ ಚಪ್ಪಿಲಿ ತೋರಿಸಿದ್ದಾಳೆ. ಕೂಡಲೇ ತನ್ನ ಚಿಕ್ಕಮ್ಮಳಿಗೆ ಫೋನ್ ಮಾಡಿ ನದಿಗೆ ಬಿದ್ದಿದ್ದಾನೆ ಅಂತ ಹೇಳಿದ್ದಾಳೆ ಅಂತ ತಾತಪ್ಪನ ಸಹೋದರರು ಆರೋಪಿಸಿದ್ದಾರೆ. ನಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲ್ಲಾ, ಕೋರ್ಟ್‌ನಲ್ಲಿ ವಿಚ್ಛೇದನ ಪಡೆಯುತ್ತೇವೆ ಎಂದಿದ್ದಾರೆ.

    ಮದುವೆಯಾಗುವಾಗ ಇಷ್ಟಪಟ್ಟಿದ್ದ ಗದ್ದೆಮ್ಮ ಮದುವೆ ನಂತರ ಪತಿಯನ್ನ ದೂರ ಇಟ್ಟಿದ್ದಳು. ಈಗ ಇಬ್ಬರು ಪ್ರತ್ಯೇಕವಾಗಿ ತಮ್ಮ ಪಾಡಿಗೆ ತಾವು ಸುಖವಾಗಿರಲಿ ನಮ್ಮ ತಮ್ಮನಿಗೆ ಒಂದೆರಡು ತಿಂಗಳಲ್ಲಿ ಬೇರೆ ಮದುವೆ ಮಾಡುತ್ತೇವೆ ಆ ಹುಡುಗಿ ಬೇಡ. ಹಳೆ ವೈಷಮ್ಯಗಳನ್ನ ಮರೆತು ತಂದೆಯಿಲ್ಲದ ಮಗಳು ಅಂತ ಮದುವೆ ಮಾಡಿಕೊಂಡಿದ್ದೆವು. ಹಳೆಯ ಸಂಬಂಧದಲ್ಲೇ ಮದುವೆ ಮಾಡಿದ್ದರೂ ಸಂಸಾರ ಸರಿಯಿರಲಿಲ್ಲ ಪತಿಯನ್ನೇ ಕೊಲೆ ಮಾಡಲು ಯತ್ನಿಸಿದ್ದಾಳೆ ಅಂತ ತಾತಪ್ಪನ ಸಹೋದರರು ಆರೋಪಿಸಿದ್ದಾರೆ.

  • ಯುವ ಗಾಯಕಿ ಅಖಿಲಾ ಪಜಿಮಣ್ಣು ಬಾಳಲ್ಲಿ ಬಿರುಗಾಳಿ – ವಿವಾಹ ವಿಚ್ಛೇದನಕ್ಕೆ ಅರ್ಜಿ

    ಯುವ ಗಾಯಕಿ ಅಖಿಲಾ ಪಜಿಮಣ್ಣು ಬಾಳಲ್ಲಿ ಬಿರುಗಾಳಿ – ವಿವಾಹ ವಿಚ್ಛೇದನಕ್ಕೆ ಅರ್ಜಿ

    ಇತ್ತೀಚೆಗೆ ಸೆಲೆಬ್ರಿಟಿಗಳು ವಿಚ್ಛೇದನ (Divorce) ತೆಗೆದುಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಪ್ರತಿ ದಿನ ಒಬ್ಬರಲ್ಲ ಒಬ್ಬರ ಡಿವೋರ್ಸ್ ಸುದ್ದಿಗಳು ಬೆಳಕಿಗೆ ಬರುತ್ತಲೇ ಇವೆ, ಈಗ ಆ ಸಾಲಿಗೆ ʻಕನ್ನಡ ಕೋಗಿಲೆʼ ರಿಯಾಲಿಟಿ ಶೋನ ಗಾಯಕಿ ಅಖಿಲಾ ಪಜಿಮಣ್ಣು ಕೂಡ ಸೇರಿಕೊಂಡಿದ್ದಾರೆ. ಮಧುರ ಕಂಠದಿಂದ ಜನಮನ ಗೆದ್ದಿದ್ದ ಅಖಿಲಾ ಪಜಿಮಣ್ಣು (Akhila Pajimannu) ಈಗ ದಾಂಪತ್ಯ ವಿಷಯವಾಗಿ ಸುದ್ದಿಯಲ್ಲಿದ್ದಾರೆ.

    ಅಖಿಲಾ ಮೂರು ವರ್ಷಗಳ ಹಿಂದೆ ಅಮೆರಿಕದಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್ ಧನಂಜಯ್ ಶರ್ಮಾ ಅವರೊಂದಿಗೆ ವಿವಾಹವಾಗಿದ್ದರು. ಆದ್ರೀಗ ಇವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇಬ್ಬರು‌ ಪರಸ್ಪರ ಒಪ್ಪಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಮೋಹದ ಬಣ್ಣ ನೀಲಿ: ಯೋಗರಾಜ್ ಭಟ್ಟರ ಹೊಸ ಪ್ರಯೋಗ

    ಗಾಯಕಿ ಅಖಿಲಾ ಪಜಿಮಣ್ಣು ಮತ್ತು ಪತಿ ಟಿ.ಆರ್ ಧನರಾಜ್ ಶರ್ಮಾ ಪರಸ್ಪರ ಒಪ್ಪಿ ಇದೇ ಜೂನ್ 12 ರಂದು ಪುತ್ತೂರು ಕೋರ್ಟ್‌ನಲ್ಲಿ (Puttur Court) ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪುತ್ತೂರಿನ ವಕೀಲ ಮಹೇಶ್ ಕಜೆ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮಾಜಿ ಪತಿಯ ಅಂತ್ಯಕ್ರಿಯೆ ನೆರವೇರಿಸಿದ ಕರಿಷ್ಮಾ ಕಪೂರ್

    ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಇಬ್ಬರದ್ದೂ ಅರೇಂಜ್ಡ್‌ ಮ್ಯಾರೇಜ್. ಎರಡು ಕುಟುಂಬಗಳ ಸಮ್ಮುಖದಲ್ಲಿ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಎಲ್ಲವೂ ಖುಷಿ ಖುಷಿಯಾಗಿಯೇ ಇದ್ದ ಇಬ್ಬರ ದಾಂಪತ್ಯದಲ್ಲಿ ಅಂತಹದ್ದೇನಾಯ್ತೋ ಗೊತ್ತಿಲ್ಲ. ಬೇರೆಯಾಗುವುದಕ್ಕೆ ಇಬ್ಬರೂ ನಿರ್ಧರಿಸಿದ್ದಾರೆ. ಸದ್ಯ ಗಾಯಕಿಯ ಅಭಿಮಾನಿಗಳಿಗೆ ಈ ಸುದ್ದಿ ಬೇಸರ ಮೂಡಿಸಿದೆ.

    2022ರಲ್ಲಿ ಕನ್ನಡ ಕೋಗಿಲೆ ಗಾಯಕಿ ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಇಬ್ಬರೂ ಗುರು ಹಿರಿಯರ ಆಸೆಯಂತೆಯೇ ವಿವಾಹವಾಗಿದ್ದರು. ಆದ್ರೀಗ ಪರಸ್ಪರ ಒಪ್ಪಿಗೆ ಮೇಲೆ ಡಿವೋರ್ಸ್ ಪಡೆಯುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:  ರುಕ್ಮಿಣಿ ಸೆಲ್ಫಿ `ಟೈಗರ್’ ಪ್ರಿಂಟ್ ಶರ್ಟ್ ಸೀಕ್ರೆಟ್ ರಿವೀಲ್! ಜೂ.ಎನ್‌ಟಿಆರ್‌ಗೆ ನಾಯಕಿ?

  • ಡಿವೋರ್ಸ್‌ ಬಳಿಕ ಪತ್ನಿಗೆ ಜೀವನಾಂಶ ಹೊಂದಿಸಲು ದರೋಡೆಗೆ ಯತ್ನ – ಮಾಜಿ ಪತಿ ಸೇರಿ ಮೂವರು ಅರೆಸ್ಟ್‌

    ಡಿವೋರ್ಸ್‌ ಬಳಿಕ ಪತ್ನಿಗೆ ಜೀವನಾಂಶ ಹೊಂದಿಸಲು ದರೋಡೆಗೆ ಯತ್ನ – ಮಾಜಿ ಪತಿ ಸೇರಿ ಮೂವರು ಅರೆಸ್ಟ್‌

    ನವದೆಹಲಿ: ವಿಚ್ಛೇದನದ (Divorce) ಬಳಿಕ ಪತ್ನಿಗೆ ಜೀವನಾಂಶ (Alimony) ನೀಡಲು ಹಣವಿಲ್ಲದೇ ವೃದ್ಧೆಯೊಬ್ಬರ ಮನೆಯಲ್ಲಿ ದರೋಡೆಗೆ ಯತ್ನಿಸಿದ್ದ ಪತಿ ಹಾಗೂ ಆತನ ಸಹಚರರನ್ನು ದೆಹಲಿ (Delhi) ಪೊಲೀಸರು ಬಂಧಿಸಿದ್ದಾರೆ.

    ಮಾ.31 ರಂದು ದೆಹಲಿಯ ಪಿತಾಂಪುರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ, ಕೊರಿಯರ್ ಇದೆ ಎಂದು ಹೇಳಿಕೊಂಡು ಮನೆಯಲ್ಲಿದ್ದ ವೃದ್ಧೆಗೆ ಬಂದೂಕು ತೋರಿಸಿ ದರೋಡೆಗೆ ಯತ್ನಿಸಿದ್ದ. ಈ ವೇಳೆ ಇನ್ನೊಬ್ಬ ವ್ಯಕ್ತಿಯೂ ಗನ್‌ ಹಿಡಿದು ಬಂದಿದ್ದಾನೆ. ಇದನ್ನು ಕಂಡ ಆಕೆಯ ಮಗಳು ಓಡಿಹೋಗಿ ಮನೆಯ ಬಾಗಿಲನ್ನು ಲಾಕ್ ಮಾಡಿದ್ದಳು. ಬಳಿಕ ಮತ್ತೋರ್ವ ಸಹೋಚರನ ಜೊತೆ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದರು. ಇದನ್ನೂ ಓದಿ: Bengaluru | ಕುಟುಂಬ ಕಲಹದಿಂದ ಮಾನಸಿಕವಾಗಿ ನೊಂದು ಟೆಕ್ಕಿ ಆತ್ಮಹತ್ಯೆ

    ಈ ಬಗ್ಗೆ ಸಮೀಪದ ಪೊಲೀಸ್‌ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ, ವೃದ್ಧೆ ಕಮಲೇಶ್ ಅರೋರಾ (72), ದೂರುದಾರ ಹೇಮಂತ್ ಕುಮಾರ್ ಅವರ ಪತ್ನಿ ಘಟನೆಯನ್ನು ವಿವರಿಸಿದ್ದರು. ಈ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಪೊಲೀಸರು ಸಿಸಿಟಿವಿ ದೃಶ್ಯಾವಳಿ, ಗುಪ್ತಚರ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಪಂಕಜ್ (25) ಮತ್ತು ನಿವಾಸಿ ರಾಮ ಸ್ವಾಮಿ (28) ಹಾಗೂ ಹರ್ಷ ಎಂದು ಗುರುತಿಸಲಾಗಿದೆ. ಪಂಕಜ್ ತನ್ನ ವಿಚ್ಛೇದನದ ನಂತರ ಜೀವನಾಂಶ ನೀಡಲು ಹಣ ಹೊಂದಿಸಲು ದರೊಡೆಗೆ ಮುಂದಾಗಿದ್ದಾಗಿ ಒಪ್ಪಿಕೊಂಡಿದ್ದಾನೆ.

    ಬಂಧಿತ ಆರೋಪಿಗಳಿಂದ ಪೊಲೀಸರು ಒಂದು ಬೈಕ್, ದೇಶಿ ನಿರ್ಮಿತ ಪಿಸ್ತೂಲ್, ಒಂದು ಬ್ಯಾಗ್ ಮತ್ತು ಕೃತ್ಯದ ವೇಳೆ ಧರಿಸಿದ್ದ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತಿಥಿ ಶಿಕ್ಷಕನಿಂದ ಅತ್ಯಾಚಾರ

  • ಗಂಡನಿಂದ ಡೈವೋರ್ಸ್ ಪಡೆಯಲು ಸೆಕ್ಸ್ ವರ್ಕರ್ ಬಳಸಿ ಟ್ರ್ಯಾಪ್‌ಗೆ ಯತ್ನ – ಚೀನಾ ಮಹಿಳೆಯ ಖತರ್ನಾಕ್ ಪ್ಲ್ಯಾನ್

    ಗಂಡನಿಂದ ಡೈವೋರ್ಸ್ ಪಡೆಯಲು ಸೆಕ್ಸ್ ವರ್ಕರ್ ಬಳಸಿ ಟ್ರ್ಯಾಪ್‌ಗೆ ಯತ್ನ – ಚೀನಾ ಮಹಿಳೆಯ ಖತರ್ನಾಕ್ ಪ್ಲ್ಯಾನ್

    ಬೀಜಿಂಗ್: ಗಂಡನಿಂದ ಡಿವೋರ್ಸ್‌ ಪಡೆಯಲು ಸೆಕ್ಸ್‌ ವರ್ಕರ್‌ ಬಳಿ, ಪತಿಯನ್ನೇ ಟ್ರ್ಯಾಪ್‌ ಮಾಡಲು ಹೋಗಿ ಮಹಿಳೆ ಸಿಕ್ಕಿಬಿದ್ದಿರುವ ಘಟನೆ ಚೀನಾದಲ್ಲಿ ನಡೆದಿದೆ.

    ಪತಿಯನ್ನು ಟ್ರ್ಯಾಪ್‌ ಮಾಡಲು ಮುಂದಾಗಿದ್ದ ಚೀನಾದ (China) ಮಹಿಳೆ ಮತ್ತು ಆಕೆಯ ಸಹಚರರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಪತಿ ವೇಶ್ಯೆ ಜೊತೆ ಸಂಬಂಧ ಹೊಂದಿದ್ದಾನೆಂದು ಬಿಂಬಿಸಲು ಮಹಿಳೆ ಯೋಜನೆ ರೂಪಿಸಿದ್ದಳು. ಇದನ್ನೂ ಓದಿ: ಸಿರಿಯಾದಲ್ಲಿ ಬಿಕ್ಕಟ್ಟು – ಅಲ್ಲೋಲ ಕಲ್ಲೋಲ ಎಬ್ಬಿಸಿದೆ ಆಕೆಯ ಒಂದು ವೀಡಿಯೋ; ದೊಡ್ಡಣ್ಣನ ಕುತಂತ್ರದಿಂದ ಹೀಗಾಯ್ತಾ?

    ಪತ್ನಿಯ ಟ್ರ್ಯಾಕಿಂಗ್‌ ಬಲೆಗೆ ಬೀಳುವ ಮುನ್ನ ಪತಿ ಎಚ್ಚೆತ್ತುಕೊಂಡು, ತಕ್ಷಣ ಪೊಲೀಸರಿಗೆ ವರದಿ ಮಾಡಿದ್ದಾನೆ. ಇದರಿಂದ ಪತ್ನಿಯ ಯೋಜನೆಗೆ ಹಿನ್ನಡೆಯಾಗಿದೆ. ಈ ಪ್ರಕರಣವನ್ನು ನಂತರ ನೈಋತ್ಯ ಚೀನಾದ ಗುಯಿಝೌ ಪ್ರಾಂತ್ಯದಲ್ಲಿರುವ ಲಾಂಗ್ಲಿ ಕೌಂಟಿಯ ನ್ಯಾಯಾಲಯದ ಮುಂದೆ ತರಲಾಯಿತು.

    ಕೊನೆಗೆ ನ್ಯಾಯಾಲಯ ಆರೋಪಿತ ಮಹಿಳಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇದನ್ನೂ ಓದಿ: ವೈಟ್ ಹೌಸ್ AI ವಿಭಾಗದ ನೀತಿ ಸಲಹೆಗಾರನಾಗಿ ಭಾರತ ಮೂಲದ ಶ್ರೀರಾಮ್‌ ಕೃಷ್ಣನ್ ನೇಮಕ

  • ಶ್ರೀಮಂತರೇ ಟಾರ್ಗೆಟ್‌, 3 ರಾಜ್ಯ, 3 ಮದ್ವೆ – 1.25 ಕೋಟಿ ದೋಚಿದ್ದ ಮಹಿಳೆ ಅರೆಸ್ಟ್‌

    ಶ್ರೀಮಂತರೇ ಟಾರ್ಗೆಟ್‌, 3 ರಾಜ್ಯ, 3 ಮದ್ವೆ – 1.25 ಕೋಟಿ ದೋಚಿದ್ದ ಮಹಿಳೆ ಅರೆಸ್ಟ್‌

    ನವದೆಹಲಿ: ಮದುವೆಯಾಗುವುದು (Marriage) ನಂತರ ಗಂಡನ (Husband) ಜೊತೆ ಜಗಳ ಮಾಡುವುದು,  ಬಳಿಕ  ಪತಿಯ ಕುಟುಂಬದವರ ವಿರುದ್ಧ ಕೇಸ್‌ ಹಾಕುವುದು. ಕೊನೆಗೆ ಪ್ರಕರಣದ ಇತ್ಯರ್ಥಕ್ಕಾಗಿ ಹಣ ಸುಲಿಗೆ ಮಾಡುವುದು. ಈ ನಾಟಕ ಮಾಡಲು ಸಾಧ್ಯವಾಗದಿದ್ದರೆ ಕಳ್ಳತನ ಮಾಡಿ ಪರಾರಿಯಾಗುವುದು. ಹೀಗೆ ಮಾಡಿಯೇ 1.25 ಕೋಟಿ ರೂ. ದೋಚಿದ್ದ ಖತರ್ನಾಕ್‌ ಮಹಿಳೆ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ದಶಕಕ್ಕೂ ಹೆಚ್ಚು ಪುರುಷರನ್ನು ಮದುವೆಯಾಗಿ ಸೆಟಲ್‌ಮೆಂಟ್ ಹೆಸರಿನಲ್ಲಿ ಒಟ್ಟು 1.25 ಕೋಟಿ ರೂ. ವಸೂಲಿ ಮಾಡಿದ ಉತ್ತರಾಖಂಡ ಮೂಲದ ಸೀಮಾ ಎಂಬಾಕೆಯನ್ನು ಜೈಪುರ ಪೊಲೀಸರು ಬಂಧಿಸಿದ್ದಾರೆ.

    ಸೀಮಾ 2013ರಲ್ಲಿ ಆಗ್ರಾದ ಉದ್ಯಮಿಯೊಬ್ಬರನ್ನು ಮೊದಲು ವಿವಾಹವಾಗಿದ್ದಳು. ಕೆಲ ಸಮಯದ ಬಳಿಕ ಆ ವ್ಯಕ್ತಿಯ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿ ರಾಜಿ ಸಂಧಾನದ ಭಾಗವಾಗಿ 75 ಲಕ್ಷ ರೂ. ಪಡೆದಿದ್ದಳು.

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ

    2017 ರಲ್ಲಿ ಸೀಮಾ ಗುರುಗ್ರಾಮ್‌ನ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಮದುವೆಯಾದಳು. ನಂತರ ಆತನಿಂದ ಬೇರ್ಪಟ್ಟ ನಂತರ ಪ್ರಕರಣದ ಇತ್ಯರ್ಥಕ್ಕಾಗಿ 10 ಲಕ್ಷ ರೂ. ತೆಗೆದುಕೊಂಡಿದ್ದಳು.

    2023 ರಲ್ಲಿ ಜೈಪುರ ಮೂಲದ ಉದ್ಯಮಿಯನ್ನು ವಿವಾಹವಾಗುತ್ತಾಳೆ. ಆದರೆ ಮದುವೆಯಾದ ಕೆಲ ದಿನಗಳಲ್ಲೇ 36 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಪತಿ ಮನೆಯಿಂದ ಪರಾರಿಯಾಗಿದ್ದಳು. ಕುಟುಂಬದವರು ಪ್ರಕರಣ ದಾಖಲಿಸಿದ ನಂತರ ಜೈಪುರ ಪೊಲೀಸರು ಸೀಮಾಳನ್ನು ಬಂಧಿಸಿದ್ದಾರೆ.

    ತನಿಖೆಯ ವೇಳೆ ಸೀಮಾ ವೈವಾಹಿಕ ಸೈಟ್‌ಗಳಲ್ಲಿ ವಿಚ್ಛೇದನ ಪಡೆದ ಅಥವಾ ಪತ್ನಿಯನ್ನು ಕಳೆದುಕೊಂಡ ಶ್ರೀಮಂತ ವ್ಯಕ್ತಿಯನ್ನು ಹುಡುಕುತ್ತಿದ್ದಳು. ಪ್ರಾಥಮಿಕ ತನಿಖೆಯ ವೇಳೆ ಸೀಮಾ ಒಟ್ಟು 1.25 ಕೋಟಿ ರೂ. ವಸೂಲಿ ಮಾಡಿದ ವಿಚಾರ ಬೆಳಕಿಗೆ ಬಂದಿದೆ. 10 ವರ್ಷ ಅವಧಿಯಲ್ಲಿ ಸೀಮಾ ಹಲವು ಮಂದಿಯನ್ನು ಮದುವೆಯಾಗಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಆಕೆಯನ್ನು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

  • ಚಂದನ್- ನಿವೇದಿತಾ ವಿಚ್ಚೇದನಕ್ಕೆ ನಿಜವಾದ ಕಾರಣ ರಿವೀಲ್!

    ಚಂದನ್- ನಿವೇದಿತಾ ವಿಚ್ಚೇದನಕ್ಕೆ ನಿಜವಾದ ಕಾರಣ ರಿವೀಲ್!

    ನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Chandan Shetty- Niveditha Gowda) ಅವರ ವಿಚ್ಛೇದನ ಶುಕ್ರವಾರ ಭಾರೀ ಸುದ್ದಿಯಾಗಿತ್ತು. ಚಂದನವನದಲ್ಲಿ ಕ್ಯೂಟ್ ಕಪಲ್ ಆಗಿದ್ದ ದಂಪತಿ ಏಕಾಏಕಿ ಬೇರೆಯಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿತು. ಅಲ್ಲದೇ ಹಲವರು ಇದಕ್ಕೆ ಕಾರಣವನ್ನೂ ಹುಡುಕಲು ಮುಂದಾಗಿದ್ದರು. ಈ ಸಂಬಂಧ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆದವು. ಆದರೆ ಇದೀಗ ಚಂದನ್ ಪರ ವಕೀಲೆ ಅನಿತಾ ಅವರು ವಿಚ್ಛೇದನಕ್ಕೆ ನಿಜವಾದ ಕಾರಣ ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ.

    ವಕೀಲೆ ಅನಿತಾ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಒಂದು ವರ್ಷದಿಂದ ದೂರ ಇರುವುದನ್ನೇ ತೋರಿಸಿ ಪರಸ್ಪರ ಮ್ಯೂಚುವಲ್ ಅಂಡರ್ ಸ್ಟಾಂಡಿಂಗ್ ಮೂಲಕ ವಿಚ್ಛೇದನ ಪಡೆದಿದ್ದಾರೆ. ಪತಿ-ಪತ್ನಿಯಾಗಿ ಮುಂದುವರಿಯಲು ಪರಸ್ಪರ ಹೊಂದಾಣಿಕೆ ಇಲ್ಲದಿರುವುದೇ ಮುಖ್ಯ ಕಾರಣ ಕೊಟ್ಟು ವಿಚ್ಛೇದನ ಪಡೆದಿದ್ದಾರೆ ಎಂದರು. ಇದನ್ನೂ ಓದಿ: ಡಿವೋರ್ಸ್ ವಿಚಾರ ಅಧಿಕೃತವಾಗಿ ಬಹಿರಂಗಪಡಿಸಿದ ಚಂದನ್- ನಿವೇದಿತಾ

    ಡಿವೋರ್ಸ್‌ ಪ್ರೊಸೆಸ್‌ ಬೇಗ ಆಗಿದ್ದೇಗೆ..?: ಸಂಧಾನ ಮಾಡುವ ಪ್ರಯತ್ನ ಮಾಡಿದರೂ ಇಬ್ಬರೂ ಯಾವುದೇ ಕಾರಣಕ್ಕೂ ಡಿವೋರ್ಸ್ ಪರಿಹಾರದ ಮಾತಿಗೇ ಬರಲಿಲ್ಲ. ಉತ್ತಮ ಫ್ರೆಂಡ್ಸ್ ಆಗಿ ಮುಂದುವರಿಯಲು ಇಚ್ಛಿಸಿದ್ದಾರೆ. ಆದರೆ ಗಂಡ-ಹೆಂಡತಿಯಾಗಲು ಇಷ್ಟಪಡಲಿಲ್ಲ. ಡಿಸ್ಪ್ಯೂಟ್ ಇದ್ದಲ್ಲಿ ಪ್ರೊಸೆಸ್ ತಡವಾಗುತ್ತೆ. ಆದರೆ ಇವರ ಕೇಸ್ ನಲ್ಲಿ ಇಬ್ಬರದ್ದೂ ಒಂದೇ ಮಾತಾಗಿತ್ತು. 13-ಬಿ ಪ್ರಕಾರ ವಿಚ್ಛೇದನ ಧಾವೆಯಲ್ಲಿ ಒಂದು ವರ್ಷದಿಂದ ಪರಸ್ಪರ ದೂರ ಇರುವುದು ಹಾಗೂ ಹೊಂದಾಣಿಕೆ ಇಲ್ಲದಿರೋದನ್ನ ತೋರಿಸಿದ್ದರಿಂದ ವಿಚ್ಛೇದನದ ಪ್ರೊಸೆಸ್ ಬೇಗ ಆಗಿದೆ ಎಂದು ಹೇಳಿದರು.

    ಕಳೆದ ಮೂರು ತಿಂಗಳಿಂದ ಸಮಯಾವಕಾಶ ಕೊಟ್ಟು ಕೌನ್ಸೆಲಿಂಗ್ ಕೂಡ ಮಾಡಲಾಯಿತು. ಆದರೂ ಇಬ್ಬರ ನಿರ್ಧಾರ ಒಂದೇ ಇರೋದ್ರಿಂದ ಜೂನ್ 7 ರ ಶುಕ್ರವಾರದಂದು ವಿಚ್ಛೇದನ ಪ್ರಕ್ರಿಯೆ ಸಂಪೂರ್ಣವಾಗಿದೆ ಎಂದು ಅನಿತಾ ತಿಳಿಸಿದರು.

    ಬಿಗ್ ಬಾಸ್ ಕನ್ನಡ ಸೀಸನ್ 5ರ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿ, ಸ್ನೇಹ ನಂತರ ಪ್ರೀತಿಯಾಗಿ ಬದಲಾಯಿತು. ಬಳಿಕ 2017ರಲ್ಲಿ ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಶೆಟ್ಟಿ ಅವರು ಪ್ರಪ್ರೋಸ್ ಮಾಡಿದ್ದರು. ಅಲ್ಲದೇ 2020 ಫೆಬ್ರವರಿಯಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

    ಇದಾದ ಬಳಿಕ ಚೆನ್ನಾಗಿಯೇ ಇದ್ದ ಜೋಡಿ, ಸೊಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದರು. ನಿವೇದಿತಾ ರಿಯಾಲಿ ಶೋದಲ್ಲಿ ಕೂಡ ಕೆಲ ಸಮಯದ ಹಿಂದೆ ಕಾಣಿಸಿಕೊಂಡಿದ್ದರು. ಸದ್ಯ ಮೂವಿಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಈ ನಡುವೆ ಶುಕ್ರವಾರ ದಿಢೀರ್ ಎಂದು ಶಾಂತಿನಗರದ ಫ್ಯಾಮಿಲಿ ಕೋರ್ಟ್‍ಗೆ ಹಾಜರಾಗಿ ಅಭಿಮಾನಿಗಳಿಗೆ ಶಾಕ್ ನೀಡಿ ಗೊಂದಲಕ್ಕೀಡು ಮಾಡಿದ್ದರು. ನಂತರ ಸಂಜೆಯ ವೇಳೆಗೆ ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ವಿಚ್ಛೇದನ ವಿಚಾರವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದರು.

  • Divorce Rumours: ಪತ್ನಿ ನತಾಶಾಗೆ ವಿಚ್ಛೇದನ ನೀಡಿದ್ರೆ 70% ಕರಗಲಿದೆ ಪಾಂಡ್ಯ ಸಂಪತ್ತು!

    Divorce Rumours: ಪತ್ನಿ ನತಾಶಾಗೆ ವಿಚ್ಛೇದನ ನೀಡಿದ್ರೆ 70% ಕರಗಲಿದೆ ಪಾಂಡ್ಯ ಸಂಪತ್ತು!

    ಮುಂಬೈ: 2024ರ ಐಪಿಎಲ್‌ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಅವರು ಇಡೀ ತಂಡದ ಕಳಪೆ ಪ್ರದರ್ಶನದಿಂದ ಸೋಲಿನೊಂದಿಗೆ ಆವೃತ್ತಿಗೆ ವಿದಾಯ ಹೇಳಿದ್ದರು. ಇದೀಗ ವೈಯಕ್ತಿಕ ಜೀವನದಲ್ಲಿ ಬಿರುಗಾಳಿಯೇ ಎದ್ದಿದೆ. ಹಾರ್ದಿಕ್‌ ಪಾಂಡ್ಯ ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್‌ಗೆ ವಿಚ್ಛೇದನ ನೀಡುವುದು ಬಹುತೇಕ ಖಚಿತವಾಗಿದೆ. ಅಧಿಕೃತ ಘೊಷಣೆಯೊಂದೇ ಬಾಕಿಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾರ್ದಿಕ್‌ ಪಾಂಡ್ಯ ಅವರು ಪತ್ನಿಗೆ ವಿಚ್ಛೇದನ (Divorce) ನೀಡಿದ್ದೇ ಆದಲ್ಲಿ ಅವರ 70% ಆಸ್ತಿ ಪತ್ನಿ ನತಾಶಾಗೆ ಸೇರಲಿದೆ ಎಂದು ವರದಿಯಾಗಿದೆ.

    ಪಾಂಡ್ಯ ಮತ್ತು ನತಾಶಾ ದೀರ್ಘಕಾಲದಿಂದ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇಬ್ಬರೂ ಕೊನೆಯದ್ದಾಗಿ ಫೆ.14ರಂದು ಇನ್‌ಸ್ಟಾದಲ್ಲಿ ಫೋಟೋವೊಂದನ್ನ ಹಂಚಿಕೊಂಡಿದ್ದರು. ಇದಾದ ನಂತರ ಇಬ್ಬರೂ ಅಂತರ ಕಾಯ್ದುಕೊಂಡಿದ್ದರು. ಕಳೆದ ಮಾರ್ಚ್‌ 4 ರಂದು ನತಾಶಾ ಅವರ ಹುಟ್ಟುಹಬ್ಬದ ದಿನವೂ ಪಾಂಡ್ಯ ಒಂದು ಸ್ಟೇಟಸ್‌ ಸಹ ಹಂಚಿಕೊಂಡಿರಲಿಲ್ಲ. ಜೊತೆಗೆ ಪಾಂಡ್ಯ ಅವರ ನಾಯಕತ್ವದಲ್ಲಿ ನಡೆದ ಯಾವುದೇ ಪಂದ್ಯ ನೋಡುವುದಕ್ಕೂ ನತಾಶಾ (Natasa Stankovic) ಸ್ಟೇಡಿಯಂಗಳಿಗೆ ಬರಲಿಲ್ಲ. ಸರ್ಬಿಯಾದ ಮಾಡೆಲ್‌ ಸಹ ಆಗಿದ್ದ ಸ್ಟಾಂಕೋವಿಕ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ʻಪಾಂಡ್ಯʼ ಉಮನಾಮ ತೆಗೆದುಹಾಕಿ ನತಾಶಾ ಸ್ಟಾಂಕೋವಿಕ್ ಎಂದು ಬದಲಾಯಿಸಿಕೊಂಡಿದ್ದಾರೆ. ಹೀಗಾಗಿ ಇವರಿಬ್ಬರ ವಿಚ್ಛೇದನ ಖಚಿತವಾಗಿದೆ ಎಂಬ ವದಂತಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

    70% ಆಸ್ತಿ ನತಾಶಾ ಪಾಲು:
    ವದಂತಿಗಳ ಪ್ರಕಾರ ಪಾಂಡ್ಯ ಅವರು ಪತ್ನಿಯಿಂದ ವಿಚ್ಛೇದನ ಪಡೆದರೆ ಜೀವನಾಂಶ ಕಾರಣದಿಂದ 70% ಆಸ್ತಿಯನ್ನು ನತಾಶಾಗೆ ನೀಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಹಾರ್ದಿಕ್‌ ಪಾಂಡ್ಯ ಒಟ್ಟಾರೆ 165 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಮುಂಬೈನಲ್ಲಿ 30 ಕೋಟಿ ರೂ.ಗೆ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಇದರೊಂದಿಗೆ ಅವರು ವಡೋದರಾದಲ್ಲಿ ದುಬಾರಿ ಬೆಲೆಯ ವಿಲ್ಲಾ ಹೊಂದಿದ್ದಾರೆ. ವಿಚ್ಛೇದನ ಪಡೆದರೆ ಅವರು 70% ಆಸ್ತಿಯನ್ನು (70% Property) ಪತ್ನಿಗೆ ಬಿಟ್ಟುಕೊಡಬೇಕಾಗುತ್ತದೆ ಎಂದು ಹೇಳಲಾಗಿದೆ. ಆದ್ರೆ ಈ ಬಗ್ಗೆ ಹಾರ್ದಿಕ್ ಅಥವಾ ಅವರ ಪತ್ನಿ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

    ಸೋಷಿಯಲ್‌ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ:
    ಹಾರ್ದಿಕ್‌ ಪಾಂಡ್ಯ ಅವರ ವಿಚ್ಛೇದಿತ ವಿಷಯ ಬೆಳಕಿಗೆ ಬರುತ್ತಿದ್ದಂತೆ ಎಕ್ಸ್‌ ಜಾಲತಾಣದಲ್ಲಿ ಪರ ವಿರೋಧಗಳು ಚರ್ಚೆಯಾಗುತ್ತಿವೆ. ಕೆಲವರು ಹಾರ್ದಿಕ್‌ ಪಾಂಡ್ಯ ಪರ ಬ್ಯಾಟ್‌ ಬೀಸಿದ್ದು, ಪುರುಷರಿಗಾಗಿ ನಮ್ಮ ಸಮಾಜದ ನಿಯಮಗಳು ಯಾವಾಗಲೂ ಕಠಿಣವಾಗಿರುತ್ತವೆ ಎಂದು ಹೇಳಿದ್ದಾರೆ. ಮತ್ತೊಬ್ಬರು ʻಹಾರ್ದಿಕ್‌ ಬ್ರೋ ನೀವು ಈಗಲೇ ಎಲ್ಲಾ ಆಸ್ತಿಯನ್ನು ನಿಮ್ಮ ತಾಯಿ ಹೆಸರಿಗೆ ವರ್ಗಾವಣೆ ಮಾಡಿಬಿಡಿʼ ಎಂಬ ಸಲಹೆಯನ್ನೂ ನೀಡಿದ್ದಾರೆ.

    ಹಾರ್ದಿಕ್ ಪಾಂಡ್ಯ ಅವರು 2020ರ ಜನವರಿ 20 ರಂದು ತಮ್ಮ ವಿಹಾರ ನೌಕೆಯಲ್ಲಿ ನತಾಶಾಗೆ ಪ್ರಪೋಸ್‌ ಮಾಡಿದ್ದರು. ಮೊದಲ ಮಗುವಿನ ನಂತರ ಪ್ರೇಮಿಗಳ ದಿನದಂದು ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.