Tag: ವಿಚ್ಚೇದನ

  • ಮೂರನೇ ಮದ್ವೆಯಾದ ಇಂಗ್ಲೆಂಡ್ ಪ್ರಧಾನಿ – ದಂಪತಿಗೆ ಇದ್ದಾನೆ 1 ವರ್ಷದ ಮಗ

    ಮೂರನೇ ಮದ್ವೆಯಾದ ಇಂಗ್ಲೆಂಡ್ ಪ್ರಧಾನಿ – ದಂಪತಿಗೆ ಇದ್ದಾನೆ 1 ವರ್ಷದ ಮಗ

    ಲಂಡನ್: ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಮೂರನೇ ಬಾರಿ ಮದುವೆಯಾಗಿದ್ದಾರೆ. ಪ್ರೇಯಸಿ ಕ್ಯಾರಿ ಸೈಮಂಡ್ಸ್ ಅವರನ್ನು ಶನಿವಾರ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ.

    ಕುಟುಂಬದವರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ರೋಮನ್ ಕ್ಯಾಥೋಲಿಕ್ ವೆಸ್ಟ್ ಮಿನಿಸ್ಟರ್ ಕ್ಯಾಥೆಡ್ರಲ್‍ನಲ್ಲಿ ಮದುವೆ ನಡೆದಿದೆ. ಇಂಗ್ಲೆಂಡಿನಲ್ಲಿ ಸದ್ಯ ಕೋವಿಡ್ ನಿರ್ಬಂಧಗಳು  ಜಾರಿಯಲ್ಲಿರುವ ಕಾರಣ 30 ಜನರಿಗೆ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು.

     

     

    ಕೇಂದ್ರ ಲಂಡನ್‍ನಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಕೊನೆಯ ಕ್ಷಣಗಳಲ್ಲಿ ಅತಿಥಿಗಳಿಗೆ ಆಹ್ವಾನ ನೀಡಲಾಗಿತ್ತು. ಪ್ರಧಾನಿ ಕಚೇರಿಯ ಹಿರಿಯ ಅಧಿಕಾರಿಗಳಿಗೂ ಈ ಮದುವೆ ಬಗ್ಗೆ ಮಾಹಿತಿ ಇರಲಿಲ್ಲ ಎಂದು ವರದಿಯಾಗಿದೆ.

    56 ವರ್ಷದ ಜಾನ್ಸನ್ ಮತ್ತು 33 ವರ್ಷ ಸೈಮಂಡ್ಸ್ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರಿಗೆ 1 ವರ್ಷದ ಮಗ ಇದ್ದಾನೆ. ಇದನ್ನೂ ಓದಿ:ಮದುವೆ ಆಗಿಲ್ಲ ಅಂತ ವಿಷ ಸೇವಿಸಿ ಯುವಕ ಆತ್ಮಹತ್ಯೆ

     

    2019ರಲ್ಲಿ ಜಾನ್ಸನ್ ಪ್ರಧಾನಿಯಾದ ಸಂದರ್ಭದಿಂದಲೂ ಇಬ್ಬರೂ ಲಿವ್ ಇನ್ ಟುಗೆದರ್ ನಲ್ಲಿ ವಾಸಿಸುತ್ತಿದ್ದಾರೆ. ಕಳೆದ ವರ್ಷ ಇಬ್ಬರೂ ತಾವು ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ಹಾಗೂ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ಘೋಷಿಸಿದ್ದರು. 2020ರ ಏಪ್ರಿಲ್‍ನಲ್ಲಿ ಮಗ ಜನಿಸಿದ್ದ.

    ಬೋರಿಸ್ ಜಾನ್ಸನ್ ಅವರ ಖಾಸಗಿ ಜೀವನದ ಬಗ್ಗೆ ವಿರೋಧ ಪಕ್ಷ ಮತ್ತು ಮಾಧ್ಯಮಗಳು ಟೀಕೆ ಮಾಡಿದ್ದವು. ತಮ್ಮ ವಿವಾಹೇತರ ಸಂಬಂಧದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಆಗ ವಿರೋಧಪಕ್ಷ ಕನ್ಸರ್ವೇಟಿವ್ ಪಾರ್ಟಿಯ ನೀತಿ ತಂಡದಿಂದ ಅವರನ್ನು ತೆಗೆದುಹಾಕಲಾಗಿತ್ತು. ಎರಡು ಬಾರಿ ವಿಚ್ಚೇದನ ಪಡೆದಿರುವ ಜಾನ್ಸನ್, ತಮಗೆ ಎಷ್ಟು ಮಕ್ಕಳಿದ್ದಾರೆ ಎಂಬ ಮಾಹಿತಿ ನೀಡಲು ನಿರಾಕರಿಸಿದ್ದರು.

    ಈ ಮೊದಲು ಅಲ್ಲೆಗ್ರಾ ಮೊಸ್ಟಿನ್ ಅವರ ಜೊತೆ ವಿವಾಹನ ನಡೆದಿತ್ತು. 1993ರಲ್ಲಿ ಬೋರಿಸ್ ಇವರಿಗೆ ವಿಚ್ಚೇದನ ನೀಡಿದ್ದರು. ನಂತರ ವಕೀಲೆ ಮರೀನಾ ವ್ಹೀಲರ್ ಅವರೊಂದಿಗೆ ನಡೆದಿತ್ತು. 2018ರ ಸೆಪ್ಟೆಂಬರ್ ನಲ್ಲಿ  ಇಬ್ಬರೂ ಬೇರೆಯಾಗಿದ್ದಾಗಿ ಪ್ರಕಟಿಸಿದ್ದರೂ 2020ರಲ್ಲಿ ವಿಚ್ಚೇದನ ಪ್ರಕ್ರಿಯೆ ಪೂರ್ಣಗೊಂಡಿತ್ತು. ಇವರಿಬ್ಬರಿಗೂ 4 ಮಂದಿ ಮಕ್ಕಳಿದ್ದಾರೆ.

  • 27 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ ಬಿಲ್ ಗೇಟ್ಸ್, ಮೆಲಿಂಡಾ

    27 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ ಬಿಲ್ ಗೇಟ್ಸ್, ಮೆಲಿಂಡಾ

    ವಾಷಿಂಗ್ಟನ್: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ, ವಿಶ್ವದ ಮಾಜಿ ನಂಬರ್ ಒನ್ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಮತ್ತು ಪತ್ನಿ ಮೆಲಿಂಡಾ ಗೇಟ್ಸ್ ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸುವುದಾಗಿ ಪ್ರಕಟಿಸಿದ್ದಾರೆ.

    27 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಇಬ್ಬರು ಸಮ್ಮತಿಯೊಂದಿಗೆ ಬೇರೆ ಬೇರೆಯಾಗಿ ಜೀವಿಸುವುದಾಗಿ ಪ್ರಕಟಿಸಿದ್ದಾರೆ. ಇಬ್ಬರು ಜಂಟಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದೇ ಬರಹ ಇರುವ ಪೋಸ್ಟ್ ಪ್ರಕಟಿಸುವ ಮೂಲಕ ಈ ವಿಚಾರವನ್ನು ಅಧಿಕೃತವಾಗಿ ತಿಳಿಸಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ನಾವು ನಮ್ಮ ಸಂಬಂಧದ ಬಗ್ಗೆ ದೀರ್ಘವಾಗಿ ಚಿಂತನೆ ನಡೆಸಿದ ಬಳಿಕ ದಾಂಪತ್ಯ ಜೀವನವನ್ನು ಕೊನೆಗೊಳಿಸುವ ನಿರ್ಧಾರವನ್ನು ಕೈಗೊಂಡಿದ್ದೇವೆ. ಕಳೆದ 27 ವರ್ಷಗಳಲ್ಲಿ ನಾವು ಮೂವರು ಮಕ್ಕಳನ್ನು ಬೆಳೆಸಿದ್ದೇವೆ ಮತ್ತು ವಿಶ್ವದ ಜನರು ಆರೋಗ್ಯಕರ ಜೀವನ ನಡೆಸಲು ನಾವು ದತ್ತಿ ಸಂಸ್ಥೆಯೊಂದನ್ನು ಸ್ಥಾಪಿಸಿದ್ದೇವೆ. ಈ ಸಂಸ್ಥೆಯ ಕೆಲಸದಲ್ಲಿ ನಾವು ಪೂರ್ಣವಾಗಿ ತೊಡಗಿಸಿಕೊಂಡು ಜೊತೆಯಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಆದರೆ ನಮ್ಮ ಜೀವನದ ಈ ಮುಂದಿನ ಹಂತದಲ್ಲಿ ದಂಪತಿಯಾಗಿ ನಾವು ಒಟ್ಟಿಗೆ ಮುಂದುವರಿಯಲು ಸಾಧ್ಯವಾಗುವುದಿಲ್ಲ. ನಾವು ಈ ಹೊಸ ಜೀವನವನ್ನು ಆರಂಭಿಸುತ್ತಿರುವ ಕಾರಣ ನಾವು ನಮ್ಮ ಕುಟುಂಬದ ಜೊತೆ ಪ್ರೈವೆಸಿಯನ್ನು ಕೇಳುತ್ತೇವೆ ಎಂದು ಜಂಟಿಯಾಗಿ ಹೇಳಿದ್ದಾರೆ.

    67 ವರ್ಷದ ಬಿಲ್ ಗೇಟ್ಸ್ ಮತ್ತು 56 ವರ್ಷದ ಮೆಲಿಂಡಾ ಗೇಟ್ಸ್ ಮುಂದೇನು ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇಬ್ಬರು ಸೇರಿ ‘ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್’ ಹೆಸರಿನಲ್ಲಿ 2000ನೇ ಇಸ್ವಿಯಲ್ಲಿ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದ್ದರು.

    1987ರಲ್ಲಿ ಮೆಲಿಂಡಾ ಪ್ರಾಡಕ್ಟ್ ಮ್ಯಾನೇಜರ್ ಆಗಿ ಮೈಕ್ರೋಸಾಫ್ಟ್ ಸಂಸ್ಥೆಯನ್ನು ಸೇರಿದ್ದರು. ಇವರಿಬ್ಬರು ಕಂಪನಿಯ ಕೆಲಸದಲ್ಲಿ ಜೊತೆಯಾಗಿ ತೊಡಗಿದ್ದ ಸಮಯದಲ್ಲಿ ಪ್ರೇಮ ಮೊಳೆದು 1994ರಲ್ಲಿ ವಿವಾಹವಾಗಿದ್ದರು.

    ದತ್ತಿ ನಿಧಿ ಕೆಲಸದಲ್ಲಿ ತೊಡಗಿಸಿಕೊಳ್ಳಲು 2008ರಲ್ಲಿ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ಕಾರ್ಯನಿರ್ವಾಹಕ ಹುದ್ದೆಯಿಂದ ಕೆಳಗಿಳಿದಿದ್ದರು. ಬಳಿಕ ಕಂಪನಿಯ ಮಂಡಳಿಯಿಂದಲೂ ಹೊರ ಬಂದು ನಂತರ ತಂತ್ರಜ್ಞಾನ ಸಲಹೆಗಾರನಾಗಿ ಮುಂದುವರಿಯುತ್ತಿರುವುದಾಗಿ ತಿಳಿಸಿದ್ದರು.

    ಅಮೆಜಾನ್ ಸಂಸ್ಥಾಪಕ ಸಿಇಓ, ವಿಶ್ವದ ನಂ.1 ಶ್ರೀಮಂತ ಜೆಫ್ ಬಿಜೋಸ್ ಅವರು 2 ವರ್ಷಗಳ ಹಿಂದೆ ಪತ್ನಿ ಮ್ಯಾಕ್‍ಕೆಂಜೀ ಅವರಿಗೆ ಡೈವೋರ್ಸ್ ನೀಡಿದ್ದರು. 26 ವರ್ಷಗಳ ದಾಂಪತ್ಯ ಜೀವನ ಗುಡ್‍ಬೈ ಹೇಳಿದ್ದ ಬಿಜೋಸ್ ಮ್ಯಾಕ್‍ಕೆಂಜೀ ಅವರಿಗೆ 38 ಶತಕೋಟಿ ಡಾಲರ್ ನೀಡುವ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ವಿಚ್ಛೇದನ ಪರಿಹಾರವನ್ನು ನೀಡಿದ್ದರು. ಇದನ್ನೂ ಓದಿ: ವಿಶ್ವದಲ್ಲೇ ಅತಿ ಹೆಚ್ಚು ವಿಚ್ಛೇದನ ಜೀವನಾಂಶ ಪಡೆದ ಅಮೆಜಾನ್ ಸಂಸ್ಥಾಪಕನ ಪತ್ನಿ

  • ತಂದೆಗೆ ವಿಚ್ಛೇದನ ನೀಡದ್ದಕ್ಕೆ ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದ 17ರ ಮಗ!

    ತಂದೆಗೆ ವಿಚ್ಛೇದನ ನೀಡದ್ದಕ್ಕೆ ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದ 17ರ ಮಗ!

    – ಉಪಾಯದಿಂದ ತಾಯಿಯ ಕೊಲೆಗೈದ ಅಪ್ರಾಪ್ತ

    ನವದೆಹಲಿ: ತಂದೆಗೆ ವಿಚ್ಛೇದನ ನೀಡಲು ಒಪ್ಪದಿದ್ದರಿಂದ 17 ವರ್ಷದ ಬಾಲಕನೊಬ್ಬ ತನ್ನ ತಾಯಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

    ಆರೋಪಿಯ ತಂದೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದನು. ಆದರೆ ತಾಯಿ ಇದನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ. ಇತ್ತ ತಾಯಿಗೆ ತಂದೆ ವಿಚ್ಛೇದನದ ಅರ್ಜಿ ಹಾಕಿದ್ದರಿಂದ ಗೆಳೆಯರು ಗೇಲಿ ಮಾಡಲು ಆರಂಭಿಸಿದ್ದರು. ಇದರಿಂದ ಸಿಟ್ಟಿಗೆದ್ದ ಹುಡುಗ ಈ ಕೃತ್ಯ ಎಸಗಿದ್ದಾನೆ ಎಂಬುದಾಗಿ ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ.

    ಸದ್ಯ ಘಟನೆ ಸಂಬಂಧಿಸಿದಂತೆ ಹುಡುಗನನ್ನು ಬಂಧಿಸಿರುವ ಪೊಲೀಸರು ರಿಮ್ಯಾಂಡ್ ಹೋಂಗೆ ಕಳುಹಿಸಿದ್ದಾರೆ. ಸಂತ್ರಸ್ತೆ ತನ್ನ ಕಿರಿಯ ಮಗ ಹಾಗೂ ಮಗಳೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದರು.

    ಸುಮಾರು ಮೂರು ವರ್ಷಗಳ ಹಿಂದೆ ಮಹಿಳೆ ತನ್ನ ಗಂಡನಿಂದ ಬೇರೆಯಾಗಿ ವಾಸಿಸುತ್ತಿದ್ದರು. ಆದರೆ ಇತ್ತೀಚೆಗೆ ಗಂಡ ತನಗೆ ವಿಚ್ಛೇದನ ನೀಡುವಂತೆ ಕೋರ್ಟ್ ಮೆಟ್ಟಿಲು ಹತ್ತಿದ್ದನು. ಆದರೆ ಮಹಿಳೆ ಮಾತ್ರ ಪತಿಗೆ ವಿಚ್ಛೇದನ ನೀಡಲು ಮುಂದಾಗಿಲ್ಲ. ಹೀಗಾಗಿ ಈ ಪ್ರಕರಣ ನ್ಯಾಯಾಲಯದಲ್ಲಿ ಇನ್ನೂ ಬಾಕಿ ಇದೆ.

    ತಂದೆಯೊಂದಿಗೆ ವಾಸ ಮಾಡುತ್ತಿದ್ದ ಹಿರಿಯ ಮಗ, ಅಪ್ಪ ವಿಚ್ಛೇದನ ನೀಡಲು ಅಮ್ಮನೇ ಕಾರಣ ಎಂದು ಪದೇ ಪದೇ ಹೇಳುತ್ತಿದ್ದನು. ಅಲ್ಲದೆ ಒಂದು ವೇಳೆ ತಾಯಿ, ತಂದೆಗೆ ಡಿವೋರ್ಸ್ ನೀಡಲು ಒಪ್ಪಿಕೊಳ್ಳದಿದ್ದರೆ ಆಕೆಯನ್ನು ಒಡಹುಟ್ಟಿದವರ ಮುಂದೆಯೇ ಹತ್ಯೆ ಮಾಡುವುದಾಗಿ ಬೆದರಿಕೆ ಕೂಡ ಹಾಕುತ್ತಿದ್ದನು ಎಂದು ಆರೋಪಿಯ ಸಹೋದರಿ ಪೊಲೀಸರ ಬಳಿ ಹೇಳಿದ್ದಾಳೆ.

    ನವೆಂಬರ್ 30 ರಂದು ಆರೋಪಿ ತಡರಾತ್ರಿ ತನ್ನ ತಾಯಿಯನ್ನು ಭೇಟಿ ಮಾಡಿ ಊಟ ಕೇಳಿದಾಗ ಈ ಕೊಲೆ ನಡೆದಿದೆ. ಮನೆಗೆ ಬಂದ ಮಗನಿಗೆ ತಾಯಿ ಊಟ ನೀಡಿದ್ದಾರೆ. ಹೀಗೆ ಮಗ ಊಟ ಮಾಡುತ್ತಿದ್ದಾಗ ಆತನ ಜಾಕೆಟ್ ನಲ್ಲಿದ್ದ ಚಾಕುವನ್ನು ತಾಯಿ ನೋಡಿದ್ದಾರೆ. ಇದು ಮಗನ ಗಮನಕ್ಕೆ ಬಂದಾಗ ಆತ ಕೂಡಲೇ ಕಾಣದಂತೆ ನಾಟಕ ಮಾಡಿದ್ದಾನೆ. ಈ ವೇಳೆ ತಾಯಿ ಚಾಕು ಯಾಕೆ ಇಟ್ಟುಕೊಂಡಿದ್ದೀಯಾ ಎಂದು ಕೆಳಿದ್ದಾರೆ. ಆಗ ಆರೋಪಿ ಮಗ, ಅದು ತನ್ನ ಸ್ನೇಹಿತನಿಗಾಗಿ ಎಂದು ಹೇಳಿದ್ದಾನೆ.

    ಊಟ ಮಾಡಿದ ಬಳಿಕ ತುಂಬಾ ತಡವಾಗಿದೆ. ನೀನು ನನ್ನನ್ನು ಮನೆಗೆ ಬಿಟ್ಟು ಬಾ ಎಂದು ತಾಯಿ ಬಳಿ ಮಗ ಹೇಳಿದ್ದಾನೆ. ಇದಕ್ಕೊಪ್ಪಿದ ತಾಯಿ ಆತನನ್ನು ಬಿಡಲು ಹೋಗಿದ್ದಾರೆ. ಮಧ್ಯರಾತ್ರಿ 12.40ರ ಸುಮಾರಿಗೆ ಮನೆಯಿಂದ ಹೋದ ಮಹಿಳೆ ಮನೆಗೆ ವಾಪಸ್ ಬಂದಿರಲಿಲ್ಲ.

    ಡಿಸೆಂಬರ್ 1 ರಂದು ಮಹಿಳೆಯ ಶವ ಮನೆಯ ಸಮೀಪ ಇಟ್ಟಿಗೆಗಳ ರಾಶಿಯಲ್ಲಿ ಪತ್ತೆಯಾಗಿದೆ. ನಂತರ ಪೊಲೀಸರು ಸ್ಥಳೀಯ ನಿವಾಸಿಗಳ ಸಹಾಯದಿಂದ ಶವವನ್ನು ಗುರುತಿಸಿ ಆಕೆಯ ಮಗಳನ್ನು ಸಂಪರ್ಕ ಮಾಡಿದ್ದಾರೆ. ಸಂತ್ರಸ್ತೆಯ ಮಗಳು ತನ್ನ ಸಹೋದರನನ್ನು ಸಂಪರ್ಕಿಸಲು ಪ್ರಯತ್ನಿಸಿದಳು. ಆದರೆ ಅವನ ಫೋನ್ ಸ್ವಿಚ್ ಆಫ್ ಆಗಿತ್ತು. ಸ್ಥಳೀಯ ನಿವಾಸಿಗಳ ಸಹಾಯದಿಂದ ಪೊಲೀಸರು ಬುಧವಾರ ಆರೋಪಿಗಳನ್ನು ಬಂಧಿಸಿದ್ದಾರೆ.

    ವಿಚಾರಣೆ ವೇಳೆ ಆರೋಪಿ ತನ್ನ ತಾಯಿ ತಂದೆಗೆ ವಿಚ್ಛೇದನ ನೀಡುತ್ತಿಲ್ಲ ಎಂದು ಕೋಪಗೊಂಡಿದ್ದೆ. ಈ ವಿಷಯದ ಬಗ್ಗೆ ಸ್ನೇಹಿತರು ಅಪಹಾಸ್ಯ ಮಾಡುತ್ತಿದ್ದರು ಎಂದು ಆರೋಪಿಸಿದ್ದಾನೆ. ಹೀಗಾಗಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.

  • ಐಎಎಸ್‌ ಟಾಪರ್‌ ಟೀನಾ ಡಾಬಿ, ಅಥರ್‌ ಖಾನ್‌ ಜೋಡಿಯಿಂದ ವಿಚ್ಛೇದನಕ್ಕೆ ಅರ್ಜಿ

    ಐಎಎಸ್‌ ಟಾಪರ್‌ ಟೀನಾ ಡಾಬಿ, ಅಥರ್‌ ಖಾನ್‌ ಜೋಡಿಯಿಂದ ವಿಚ್ಛೇದನಕ್ಕೆ ಅರ್ಜಿ

    ಜೈಪುರ: 2015ನೇ ಸಾಲಿನ ಐಎಎಸ್‌ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ಟೀನಾ ಡಾಬಿ ಹಾಗೂ ಅವರ ಪತಿ ಅಥರ್‌ ಖಾನ್‌ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

    ಪ್ರೇಮಿಗಳಾಗಿದ್ದ ಇಬ್ಬರು 2018ರಲ್ಲಿ ಮದುವೆಯಾಗಿದ್ದರು. ಈಗ ದಂಪತಿ ಪರಸ್ಪರ ಒಪ್ಪಿಗೆಯ ಮೇರೆಗೆ ಜೈಪುರ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

     

    ಕೆಲ ದಿನಗಳ ಹಿಂದೆ ಟೀನಾ ಡಾಬಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ʼಖಾನ್‌ʼ ಸರ್‌ ನೇಮ್‌ ತೆಗೆದು ಹಾಕಿದ್ದರು. ಅಥರ್‌ ಖಾನ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಟಿನಾ ಅವರನ್ನು ಅನ್‌ಫಾಲೋ ಮಾಡಿದ್ದರು.

    ಕಾಶ್ಮೀರ ಮೂಲದವರಾದ ಅಥರ್‌ ಖಾನ್‌ ಐಎಎಸ್‌ ಪರೀಕ್ಷೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಟೀನಾ ಮತ್ತು ಅಥರ್‌ ತರಬೇತಿ ಸಂದರ್ಭದಲ್ಲಿ ಪರಸ್ಪರ ಪ್ರೀತಿಸಲಾರಂಭಿಸಿದ್ದರು ಎನ್ನಲಾಗಿದ್ದು, ಸದ್ಯ ಇಬ್ಬರೂ ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಐಎಎಸ್‌ ಟಾಪರ್ಸ್ ಅಂತರ ಧರ್ಮೀಯ ವಿವಾಹವಾಗಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಖ್ಯಾತ ರಾಜಕೀಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದರು. ಹಿಂದೂ ಮಹಾಸಭಾ ಈ ಮದುವೆಯನ್ನು ಲವ್‌ ಜಿಹಾದ್‌ಗೆ ಹೋಲಿಸಿ ಟೀಕಿಸಿತ್ತು.

  • ಪತ್ನಿಯ ಹೇಳಿಕೆಯಿಂದ ಡೈವೋರ್ಸ್‌ ಕೇಸ್‌ ಗೆದ್ದ ಪತಿ

    ಪತ್ನಿಯ ಹೇಳಿಕೆಯಿಂದ ಡೈವೋರ್ಸ್‌ ಕೇಸ್‌ ಗೆದ್ದ ಪತಿ

    ಗುವಾಹಟಿ: ಏನೇನೋ ಕಾರಣಗಳನ್ನು ಹೇಳಿ ಪತಿ, ಪತ್ನಿಯರು ಕೋರ್ಟ್‌ನಲ್ಲಿ ವಿಚ್ಛೇದನ ಸಲ್ಲಿಸುವುದು ಸಾಮಾನ್ಯ. ಆದರೆ ಅಸ್ಸಾಂನಲ್ಲಿ ಪತ್ನಿ ಹೇಳಿದ ಒಂದು ಹೇಳಿಕೆಯಿಂದಾಗಿ ಪತಿಗೆ ವಿಚ್ಛೇದನ ಸಿಕ್ಕಿದೆ.

    ಹೌದು. ನಾನು ಸಿಂಧೂರ ಮತ್ತು ಬಳೆ ತೊಡುವುದಿಲ್ಲ ಎಂದು ಪತ್ನಿ ಹೇಳಿದ್ದರಿಂದ ಪತಿಗೆ ಪ್ರಕರಣದಲ್ಲಿ ಗೆಲುವು ಸಿಕ್ಕಿದೆ. ವಿವಾಹದ ನಂತರವೂ ಪತ್ನಿ ಸಿಂಧೂರ ಮತ್ತು ಬಳೆಯನ್ನು ತೊಡುವುದಿಲ್ಲ ಎಂದು ಹೇಳಿದ್ದಲ್ಲಿ, ಆಕೆ ಮದುವೆಯಾದ ವರನನ್ನು ಪತಿಯಾಗಿ ಸ್ವೀಕರಿಸಿಲ್ಲ ಎಂದೇ ಅರ್ಥ ಎಂದು ಗುವಾಹಟಿ ಹೈಕೋರ್ಟ್‌ ಅಭಿಪ್ರಾಯ ಪಟ್ಟು ಪತಿಯ ಅರ್ಜಿಯನ್ನು ಮಾನ್ಯ ಮಾಡಿದೆ.

    ಏನಿದು ಪ್ರಕರಣ?
    2012ರ ಫೆಬ್ರವರಿಯಲ್ಲಿ ಇಬ್ಬರಿಗೂ ಮದುವೆಯಾಗಿದ್ದು, ಮದುವೆಯಾದ ಆರಂಭದಲ್ಲೇ ಪತ್ನಿ ನಾನು ಕುಟುಂಬದ ಸದಸ್ಯರ ಜೊತೆ ವಾಸ ಮಾಡುವುದಿಲ್ಲ ಎಂದು ಹೇಳಿದ್ದಳು. ಅಷ್ಟೇ ಅಲ್ಲದೇ ಜಗಳ ಮಾಡಲು ಆರಂಭಿಸಿದ್ದಳು. ಇದಾದ ಬಳಿಕ ಜೂನ್‌ 2013ರ ಜೂನ್‌ 30ರ ಬಳಿಕ ಇಲ್ಲಿಯವರೆಗೆ ಇಬ್ಬರು ಪ್ರತ್ಯೇಕವಾಗಿ ವಾಸವಾಗಿದ್ದರು.

    ಪ್ರತ್ಯೇಕವಾಗಿ ವಾಸ ಮಾಡಲು ಆರಂಭಿಸಿದ ಬಳಿಕ ಪತ್ನಿ ಪತಿ ಮನೆಯವರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾಳೆ.

    ಇದಾದ ಬಳಿಕ ಪತಿ ಪತ್ನಿಯಿಂದ ವಿಚ್ಚೇದನ ನೀಡಬೇಕೆಂದು ಕೌಟುಂಬಿಕ ಕೋರ್ಟ್‌ ಮೆಟ್ಟಿಲೇರಿದ್ದಾನೆ. ಈ ವೇಳೆ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದರೂ ಆಕೆ ಸಿಂಧೂರ ಮತ್ತು ಬಳೆಯನ್ನು ತೊಡಲು ನಿರಾಕರಿಸಿದ್ದಾಳೆ. ಹೀಗಾಗಿ ವಿಚ್ಛೇದನ ನೀಡಬೇಕೆಂದು ಮನವಿ ಮಾಡಿದ್ದ. ಆದರೆ ಕೋರ್ಟ್‌ ಈತನ ಅರ್ಜಿಯನ್ನು ವಜಾಗೊಳಿಸಿತ್ತು.

    ಪತಿ ನ್ಯಾಯಕ್ಕಾಗಿ ಹೈಕೋರ್ಟ್‌ ಮೆಟ್ಟಲೇರಿದ್ದಾನೆ. ವಿಚಾರಣೆ ನಡೆಸಿದ್ದ ದ್ವಿಸದಸ್ಯ ಪೀಠ, ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದವಳು ಹಣೆಗೆ ಸಿಂಧೂರ ಧರಿಸಬೇಕು. ಕೈಗೆ ಬಳೆಯನ್ನು ತೊಡಬೇಕು. ಪತ್ನಿ ಇದನ್ನು ಮಾಡಲು ಹಿಂದೇಟು ಹಾಕುತ್ತಾಳೆ ಎಂದರೆ ಆಕೆಗೆ ಮದುವೆ ಇಷ್ಟವಿಲ್ಲ ಎಂದೇ ಅರ್ಥ. ಇಷ್ಟ ಇಲ್ಲದೇ ಇದ್ದರೂ ನನ್ನ ಜೊತೆಯೇ ಪತಿ ಜೀವನ ಮಾಡಬೇಕೆಂದು ಹೇಳುವುದು ಪತಿ ಮೇಲೆ ಮಾಡುವ ದೌರ್ಜನ್ಯ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

  • ಪತ್ನಿಯ ಸೆಕ್ಸ್ ವಿಡಿಯೋ ಚಿತ್ರೀಕರಿಸಿ ವಿಚ್ಛೇದನ ಪಡೆದ ಪತಿ

    ಪತ್ನಿಯ ಸೆಕ್ಸ್ ವಿಡಿಯೋ ಚಿತ್ರೀಕರಿಸಿ ವಿಚ್ಛೇದನ ಪಡೆದ ಪತಿ

    ಬೆಂಗಳೂರು: ಪತ್ನಿಯ ಸೆಕ್ಸ್ ವಿಡಿಯೋ ಚಿತ್ರೀಕರಿಸಿ ನ್ಯಾಯಾಲಯಕ್ಕೆ ಸಾಕ್ಷಿಯಾಗಿ ನೀಡಿ ಬಳ್ಳಾರಿ ಮೂಲದ ವ್ಯಕ್ತಿ ವಿಚ್ಛೇದನ ಪಡೆದುಕೊಂಡಿದ್ದಾನೆ. ಹೈಕೋರ್ಟ್ ವಿಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಿ ಪತಿಗೆ ವಿಚ್ಚೇದನ ನೀಡಿದೆ.

    ಬಳ್ಳಾರಿ ಮೂಲದ ವ್ಯಕ್ತಿ ಜುಲೈ 1, 1991ರಂದು ಈ ಮಹಿಳೆಯನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಜೂನ್ 4 ರಿಂದ ಜೂನ್ 9, 2008ರಂದು ವ್ಯಕ್ತಿ ಬೆಂಗಳೂರಿಗೆ ಹೊರಡುವಾಗ ತನ್ನ ಬೆಡ್‍ರೂಮಿನಲ್ಲಿ ವಿಡಿಯೋ ರೆಕಾರ್ಡರ್ (ಡಿವಿಆರ್-ಡಿಜಿಟಲ್ ವಿಡಿಯೋ ರೆಕಾರ್ಡರ್) ಪತ್ನಿಗೆ ಗೊತ್ತಾಗದಂತೆ ಇರಿಸಿದ್ದರು. ಈ ವೇಳೆ ಪತಿಯ ಸ್ನೇಹಿತನೊಂದಿಗೆ ಪತ್ನಿ ಲೈಂಗಿಕ ಸಂಪರ್ಕ ಹೊಂದಿದ್ದಳು. ಈ ಎಲ್ಲ ದೃಶ್ಯಗಳು ಪತಿ ಇರಿಸಿದ್ದ ಡಿವಿಆರ್ ನಲ್ಲಿ ರೆಕಾರ್ಡ್ ಆಗಿತ್ತು. ವಿಚ್ಚೇದನ ತೀರ್ಪು ನೀಡಿ ವಿದ್ಯುನ್ಮಾನ ಸಾಕ್ಷ್ಯವು ನೈಜತೆ ಮತ್ತು ಪ್ರಸ್ತುತತೆಯಿಂದ ಕೂಡಿದ್ದರೆ ಅದನ್ನು ನ್ಯಾಯಾಲಯ ಒಪ್ಪುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

    ಪತಿಯ ಆರೋಪ ಏನು?
    ವಿಡಿಯೋವನ್ನು ಸಾಕ್ಷಿಯಾಗಿರಿಸಿಕೊಂಡು ಪತಿ ವಿಚ್ಛೇದನಕ್ಕಾಗಿ ಬಳ್ಳಾರಿಯ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಪತ್ನಿಯ ವಿರುದ್ಧ ಕ್ರೌರ್ಯ ಮತ್ತು ವ್ಯಭಿಚಾರ ಆರೋಪ ಮಾಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪತ್ನಿಯ ನಡವಳಿಕೆ ಸರಿ ಇಲ್ಲ ಮತ್ತು ಆಕೆ ಕೋಪಿಷ್ಠಳಾಗಿದ್ದಾಳೆ. ಆಕೆಗೆ ಬೇರೆಯೊಬ್ಬ ವ್ಯಕ್ತಿಯೊಬ್ಬನ ಜೊತೆ ಸಂಪರ್ಕವಿದೆ. ಒಂದು ದಿನ ಕೆಲಸದಿಂದ ಬೇಗ ಹೋದಾಗ ಬೇರೆಯೊಬ್ಬ ಮನೆಯಲ್ಲಿದ್ದನು. ಈ ಕುರಿತು ಪ್ರಶ್ನಿಸಿದಾಗ ಸಬೂಬು ಹೇಳಿ ವಿಷಯಾಂತರ ಮಾಡಿದಳು. ಅದೇ ವ್ಯಕ್ತಿಯೊಂದಿಗೆ ಪತ್ನಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ನನ್ನ ಗಮನಕ್ಕೆ ಬಂದಿದೆ ಎಂದು ದೂರುದಾರ ಪತಿ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

    ಪತ್ನಿಯ ಆರೋಪ ಏನು?
    ಪತಿಗೆ ಲೈಂಗಿಕ ವಿಡಿಯೋಗಳನ್ನು ನೋಡುವ ಮತ್ತು ಚಿತ್ರೀಕರಿಸುವ ಕೆಟ್ಟ ಹವ್ಯಾಸವಿದೆ. ಸೆಕ್ಸ್ ಸಿನಿಮಾಗಳಂತೆ ಲೈಂಗಿಕ ಸಂಪರ್ಕ ಹೊಂದುವಂತೆ ಕಿರುಕುಳ ನೀಡುತ್ತಾನೆ. ತಾವೇ ತಂತ್ರಜ್ಞಾನ ಬಳಸಿ ನಕಲಿ ವಿಡಿಯೋ ಸೃಷ್ಟಿಸಿದ್ದಾರೆ ಎಂದು ಪತ್ನಿ ಆರೋಪಿಸಿದ್ದಳು.

    ಹೈಕೋರ್ಟ್ ಮೊರೆ: ಪ್ರಕರಣವನ್ನು ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ ಕ್ರೌರ್ಯ ಆರೋಪವನ್ನು ಕೈ ಬಿಟ್ಟು, ವ್ಯಭಿಚಾರ ಆರೋಪವನ್ನು ಪರಿಗಣಿಸಿತ್ತು. 2003 ಜುಲೈ 30ರಂದು ಇಬ್ಬರ ಮದುವೆಯನ್ನು ಅನೂರ್ಜಿತಗೊಳಿಸಿ ತೀರ್ಪು ನೀಡಿತ್ತು. ಪತ್ನಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದಳು.

    ದ್ವಿಸದಸ್ಯ ಪೀಠ: ಪ್ರಕರಣವನ್ನು ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾ.ಅಲೋಕ್ ಅರಾಧೆ ಮತ್ತು ನ್ಯಾ.ಪಿಜಿಎಂ ಪಾಟೀಲ್ ದ್ವಿಸದಸ್ಯ ಪೀಠ ವಾದ-ಪ್ರತಿವಾದವನ್ನು ಆಲಿಸಿತ್ತು. ದಂಪತಿಯ ಇಬ್ಬರ ಮಕ್ಕಳಲ್ಲಿ ಒಬ್ಬರನ್ನು ಸಾಕ್ಷಿ ನೀಡಿದ್ದರು. 2008ರ ಜೂನ್ 4ರಿಂದ ಜೂನ್ 9ರವರೆಗೆ ತಾವು ತಾಯಿಯೊಂದಿಗೆ ಬಳ್ಳಾರಿಯ ನಿವಾಸದಲ್ಲಿ ಇದ್ದೇವು. ಆ ದಿನಗಳಲ್ಲಿ ತಂದೆ ನಮ್ಮ ಜೊತೆಗಿರಲಿಲ್ಲ ಎಂಬ ಹೇಳಿಕೆಯನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿತ್ತು.

    ಆರೋಪಿತ ವ್ಯಕ್ತಿಯ ಮೇಲೆ ವ್ಯಭಿಚಾರದ ಆರೋಪವನ್ನು ಮಾಡಿ ವಿಚ್ಛೇದನ ಪಡೆಯಬಹುದು. ಯಾಕೆಂದರೆ ಕರ್ನಾಟಕ ಹಿಂದೂ ವಿವಾಹ ನಿಯಮ 1956 ವ್ಯಬಿಚಾರವನ್ನು ಒಪ್ಪುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

  • ವಿಚ್ಚೇದನಕ್ಕಾಗಿ ಪಬ್‍ನಲ್ಲಿ ಹಲ್ಲೆ ಮಾಡಿದ್ರು ಅಂತಾ ಕಥೆ ಹೆಣೆದ ಪತ್ನಿ!

    ವಿಚ್ಚೇದನಕ್ಕಾಗಿ ಪಬ್‍ನಲ್ಲಿ ಹಲ್ಲೆ ಮಾಡಿದ್ರು ಅಂತಾ ಕಥೆ ಹೆಣೆದ ಪತ್ನಿ!

    ಮೈಸೂರು: ಒಂದು ತಿಂಗಳ ಹಿಂದೆ ಪಬ್‍ನಲ್ಲಿ ಯುವತಿ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ಗಲಾಟೆ ನಡೆದಿರುವುದು ಸ್ಪಷ್ಟವಾಗಿದೆ.

    ಕೆಲ ದಿನಗಳ ಹಿಂದೆ ಮೈಸೂರಿನ ಜಯಲಕ್ಷ್ಮಿಪುರಂನ ಪಬ್‍ನಲ್ಲಿ ಯುವಕರು ತಮ್ಮ ಮೇಲೆ ಹಲ್ಲೆ ಮಾಡಿದ್ದರು ಎಂದು ಅಮೃತಾ ಹಾಗೂ ಮಹಾಲಕ್ಷ್ಮಿ ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಪ್ರಕಾರ ಉಮೇಶ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು.

    ಪ್ರಕರಣ ದಾಖಲಾದ ಬಳಿಕ ಉಮೇಶ್ ಮತ್ತು ಅಮೃತಾ ಪತಿ ಪತ್ನಿ ಎನ್ನುವ ವಿಚಾರ ಗೊತ್ತಾಗಿದೆ. ಉಮೇಶ್ ಅಮೃತಾ ಪ್ರೀತಿಸಿ ಮದುವೆಯಾಗಿದ್ದರು. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಪತಿ ಜೊತೆ ಜಗಳವಾಡಿಕೊಂಡು ಅಮೃತಾ ತವರು ಮನೆ ಸೇರಿದ್ದರು. ಇದಾದ ಬಳಿಕ ವಿಚ್ಛೇದನ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಲು ಸಿದ್ದ ಎಂದು ಉಮೇಶ್ ಹೇಳಿದ್ದರು.

    ಉಮೇಶ್ ಆರೋಪ ಏನು?
    ನಾನು ಆಕೆಯನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದರೂ ಅಮೃತಾ ವಿಚ್ಚೇದನ ನೀಡುವಂತೆ ಮತ್ತೆ ಮತ್ತೆ ಒತ್ತಡ ಹೇರಿದ್ದಾಳೆ. ಇದಕ್ಕೆ ಒಪ್ಪದ್ದಕ್ಕೆ ಪಬ್‍ನಲ್ಲಿ ಆಕೆ ಮತ್ತು ಆಕೆಯ ಸ್ನೇಹಿತೆ ಮೇಲೆ ಹಲ್ಲೆ ನಡೆಸಿದ್ದಾಗಿ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಉಮೇಶ್ ಈಗ ಆರೋಪಿಸಿದ್ದಾರೆ. ಈ ಹಿಂದೆ ನನ್ನ ಕಚೇರಿಯ ಬಳಿ ಕೆಲವರು ದಾಂಧಲೆ ನಡೆಸಿದ್ದರು. ಈ ದಾಂಧಲೆ ಹಿಂದೆ ಅಮೃತ ಕೈವಾಡವಿದೆ ಎನ್ನುವುದು ನನಗೆ ಈಗ ಗೊತ್ತಾಗಿದೆ ಎಂದು ಹೇಳಿದ್ದಾರೆ.

    ಈಗ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಉಮೇಶ್ ಅವರು ದಾಂಧಲೆ ನಡೆಸಿದ್ದಕ್ಕೆ ಪತ್ನಿ ವಿರುದ್ಧ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

  • ಮಾಜಿ ಗಂಡನ ಎದುರೇ 2ನೇ ಮದ್ವೆಯಾದ ಮಹಿಳೆ

    ಮಾಜಿ ಗಂಡನ ಎದುರೇ 2ನೇ ಮದ್ವೆಯಾದ ಮಹಿಳೆ

    ಚಿಕ್ಕಬಳ್ಳಾಪುರ: ಮಂತ್ರ ಘೋಷಗಳೊಂದಿಗೆ ಕಲ್ಯಾಣ ಮಂಟಪದಲ್ಲಿ ಸಂಪ್ರದಾಯಬದ್ಧವಾಗಿ ವಿವಾಹವಾಗಿದ್ದ ಮಹಿಳೆಯೊಬ್ಬರು ತಮ್ಮ ಮೊದಲ ಪತಿ ಎದುರೇ ಮತ್ತೊಬ್ಬ ಪುರುಷನೊಂದಿಗೆ ಮದುವೆ ಮಾಡಿಕೊಂಡಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಅಶ್ವಿನಿ ಬಡಾವಣೆಯ ನಿವಾಸಿಯಾದ ವಕೀಲೆ ಹಾಗೂ ರಾಜ್ಯ ರೈತ ಸಂಘದ ಮಹಿಳಾ ರಾಜ್ಯಾಧ್ಯಕ್ಷೆ ಎಸ್.ರಚನಾ ತಾಲೂಕಿನ ಪೆದ್ದೂರು ಗ್ರಾಮದ ಈಶ್ವರಗೌಡರವರನ್ನು ಹದಿನೈದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದ್ರೆ ಈಶ್ವರಗೌಡರಿಗೆ ವಿಚ್ಛೇದನ ನೀಡಿದ್ದು, ಇದೀಗ ರಚನಾ ಅವರು ನಡೆಸುತ್ತಿದ್ದ ರಚನಾ ಕ್ರಿಯೇಟಿವ್ ಖಾಸಗಿ ಶಾಲೆಯ ವ್ಯಾನ್ ಚಾಲಕ ಮಂಜುನಾಥ್ ಎಂಬವರನ್ನು ಗಂಡನ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

    ಮನೆಯ ದೇವರಗುಡಿಯ ಮುಂದೆ ಮಂಜುನಾಥ್ ರಚನಾಗೆ ತಾಳಿ ಕಟ್ಟಿ, ಹಾರ ಬದಲಾಯಿಸಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತನ್ನ ಮಾಜಿ ಹೆಂಡತಿಯ ಮದುವೆ ಸಂದರ್ಭದಲ್ಲಿ ಈಶ್ವರಗೌಡ ಕೂಡ ಅವರಿಬ್ಬರ ಜೊತೆ ನಿಂತು ಫೋಟೋ ವಿಡಿಯೋಗೆ ಪೋಸ್ ಕೊಟ್ಟಿದ್ದಾರೆ.

    ರಚನಾ ಹಾಗೂ ಈಶ್ವರಗೌಡರಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗ ಕೂಡ ಇದ್ರು. ಆದರೆ ಸಂಸಾರದಲ್ಲಿ ಅನ್ಯೋನ್ಯತೆ ಇಲ್ಲದೇ ಅವರಿಬ್ಬರು 2016ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ವಿಚ್ಛೇದನ ಪಡೆದಿದ್ದರು.

    ರಚನಾರನ್ನ ಮದುವೆಯಾದ ಮಂಜುನಾಥ್‍ಗೆ ಕೆಲವರು ಗೂಸಾ ಕೊಟ್ಟಿದ್ದು ಈ ಬಗ್ಗೆ ನಗರ ಠಾಣೆಯ ಮೆಟ್ಟಲೇರಿದ್ದರು. ನಂತರ ಠಾಣೆಯಲ್ಲಿ ರಾಜಿ ಪಂಚಾಯತಿ ಮೂಲಕ ಸಮಸ್ಯೆ ಬಗೆಹರಿದಿದೆ. ಮರುಮದುವೆಯಾಗಿರುವ ವಕೀಲೆ ರಚನಾ ತಾನು ವಿಚ್ಛೇದನ ಪಡೆದಿದ್ದು ನನ್ನ ಜೀವನದ ಮುಂದಿನ ಹಾದಿಗೆ ಮತ್ತು ನನ್ನನ್ನು ಇಷ್ಟಪಡುವವರನ್ನು ಮದುವೆಯಾಗಿದ್ದೇನೆ ಎಂದು ಹೇಳಿದ್ದಾರೆ.

     

     

  • ಹೆಂಡತಿ ಮೊಬೈಲ್ ಎಂದು ಮಾವನಿಗೆ ಅಶ್ಲೀಲ ವಿಡಿಯೋ ಸೆಂಡ್ ಮಾಡಿದ್ದ ಅಳಿಯ ಅರೆಸ್ಟ್!

    ಹೆಂಡತಿ ಮೊಬೈಲ್ ಎಂದು ಮಾವನಿಗೆ ಅಶ್ಲೀಲ ವಿಡಿಯೋ ಸೆಂಡ್ ಮಾಡಿದ್ದ ಅಳಿಯ ಅರೆಸ್ಟ್!

    ಹುಬ್ಬಳ್ಳಿ: ಹೆಂಡತಿ ಎಂದು ತಿಳಿದು ಮಾವನ ಮೊಬೈಲ್‍ಗೆ ಅಶ್ಲೀಲ ವಿಡಿಯೋ ಸಂದೇಶ ಕಳುಹಿಸುತ್ತಿದ್ದ ಅಳಿಯನನ್ನು ಪೊಲೀಸರು ಬಂಧಿಸಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ನಿವಾಸಿ ಅರುಣ್ ನಾಯಕ್ ಬಂಧಿತ ಆರೋಪಿ. ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಡಾಕ್ಟರ್ ಜೊತೆ ಮದುವೆಯಾಗಿತ್ತು. ಆದರೆ ಮದುವೆ ನಂತರ ಪತ್ನಿ ಗಂಡನ ಮನೆ ತೊರೆದು ಹುಬ್ಬಳ್ಳಿಯ ತವರು ಮನೆಗೆ ಬಂದು ನೆಲೆಸಿದ್ದರು.

    ಕೆಲವು ದಿನಗಳ ಹಿಂದೆ ಪತ್ನಿ ತಮ್ಮ ತಂದೆಯ ಮೊಬೈಲ್‍ನಿಂದ ಪತಿ ಅರುಣ್‍ಗೆ ಕರೆ ಮಾಡಿದ್ದರು. ಅರುಣ್ ಇದುವೇ ತನ್ನ ಪತ್ನಿ ನಂಬರ್ ಎಂದು ತಿಳಿದು ನಿರಂತರವಾಗಿ ಮೊಬೈಲ್‍ಗೆ ಅಶ್ಲೀಲ ವಿಡಿಯೋ, ಚಿತ್ರ ಹಾಗೂ ಸಂದೇಶಗಳನ್ನು ಕಳುಹಿಸಿ ಮಾನಸಿಕ ಹಿಂಸೆ ನೀಡುತ್ತಿದ್ದನು. ಅಳಿಯನ ಕಾಮಾವತಾರ ಕಂಡ ಮಾವ ಮೋಹನ್ ಹೆಗಡೆ ಅಶೋಕ್ ನಗರದ ಪೊಲೀಸ್ ಠಾಣೆ ದೂರು ನೀಡಿದ್ದರು.

    ಕಳೆದ ಒಂದು ವರ್ಷದ ಹಿಂದೆ ವಿಚ್ಚೇದನ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಕೋರ್ಟ್ ವಿಚಾರಣೆಗಾಗಿ ಮಾರ್ಚ್ 19 ಅಂದರೆ ಸೋಮವಾರ ಹುಬ್ಬಳ್ಳಿ ನಗರಕ್ಕೆ ಬಂದಿದ್ದ ಅರುಣ್ ನಾಯಕ್‍ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.