Tag: ವಿಚಿತ್ರ ಕರು

  • 3 ಕಣ್ಣು, 2 ಬಾಯಿ, 2 ಮೂಗು ಇರುವ ವಿಚಿತ್ರ ಕರು ಜನನ..!

    3 ಕಣ್ಣು, 2 ಬಾಯಿ, 2 ಮೂಗು ಇರುವ ವಿಚಿತ್ರ ಕರು ಜನನ..!

    ಬೆಳಗಾವಿ (ಚಿಕ್ಕೋಡಿ): 3 ಕಣ್ಣು, 2 ಬಾಯಿ, 2 ಮೂಗು ಇರುವ ವಿಚಿತ್ರ ಕರುವೊಂದು ಜಿಲ್ಲೆಯ ಕಿತ್ತೂರು ತಾಲೂಕಿನ ಡೊಂಬರಕೊಪ್ಪ ಗ್ರಾಮದಲ್ಲಿ ಜನಿಸಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ.

    ಡೊಂಬರಕೊಪ್ಪ ಗ್ರಾಮದ ನಿವಾಸಿ ಶಿವರುದ್ರಪ್ಪ ಬೆಡಸೂರ ಎಂಬವರ ಮನೆಯಲ್ಲಿ ಈ ವಿಚಿತ್ರ ಕರು ಜನಿಸಿದೆ. ಇದನ್ನು ನೋಡಿ ಮಾಲೀಕರು ಹಾಗೂ ಗ್ರಾಮಸ್ಥರು ಅಚ್ಚರಿಪಟ್ಟಿದ್ದಾರೆ. ಸಾಮಾನ್ಯವಾಗಿ ದನ ಕರುಗಳಿಗೆ ಎರಡು ಕಣ್ಣು, 1 ಬಾಯಿ, 1 ಮೂಗು ಇರುತ್ತೆ. ಆದ್ರೆ ಈ ವಿಚಿತ್ರ ಕರುವಿಗೆ ಮಾತ್ರ ಮೂರು ಕಣ್ಣು, ಎರಡು ಬಾಯಿ, ಎರಡು ನಾಲಿಗೆ, ಎರಡು ಮೂಗು ಇರುವುದು ಆಶ್ಚರ್ಯದ ಸಂಗತಿಯಾಗಿದೆ.

    ಈ ಅಪರೂಪದ ಕರುವನ್ನ ನೋಡಲು ಸುತ್ತಮುತ್ತ ಗ್ರಾಮಸ್ಥರು ಡೊಂಬರಕೊಪ್ಪ ಗ್ರಾಮಕ್ಕೆ ಬರುತ್ತಿದ್ದಾರೆ. ಅಲ್ಲದೆ ಕರುವನ್ನು ನೋಡಿ ಅದರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈ ಕರುವಿಗೆ 3 ಕಣ್ಣು, 2 ಮೂಗು- ಮಂಡ್ಯದಲ್ಲಿ ವಿಚಿತ್ರ ಕರು ನೋಡಲು ಮುಗಿಬಿದ್ರು ಜನ

    ಮಂಡ್ಯ: ಮೂರು ಕಣ್ಣು, ಎರಡು ಮೂಗಿರುವ ವಿಚಿತ್ರ ಹೆಣ್ಣು ಕರುವೊಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ನೀಲನಹಳ್ಳಿಯಲ್ಲಿ ಜನಿಸಿದೆ.

    ಗ್ರಾಮದ ದೇವರಾಜು ಎಂಬ ರೈತ ಒಂದು ವರ್ಷದ ಹಿಂದೆ ಹಸುವೊಂದನ್ನು ಕೊಂಡು ತಂದಿದ್ರು. ಇದೀಗ ಹಸು ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಬೇರೆಲ್ಲ ಕರುಗಳಿಗಿಂತ ಇದು ಭಿನ್ನವಾಗಿದೆ. ಈ ಹೆಣ್ಣು ಕರುವಿಗೆ ಮೂರು ಕಣ್ಣುಗಳು, ಎರಡು ಮೂಗು ಇದೆ. ಮುಖದ ಎರಡು ಬದಿ ಮತ್ತು, ಹಣೆಯ ಮಧ್ಯಭಾಗದಲ್ಲಿ ಕರುವಿಗೆ ಕಣ್ಣಿದೆ. ಕರು ಆರೋಗ್ಯವಾಗಿದ್ದು ಅದರ ತಾಯಿ ಕೂಡ ಸುಮಾರು ಆರು ಲೀಟರ್‍ನಷ್ಟು ಹಾಲು ನೀಡುತ್ತಿದೆ.

    ಮೂರು ಕಣ್ಣುಗಳಿರುವ ಕರು ಜನಿಸಿದ ವಿಷಯ ತಿಳಿದ ಗ್ರಾಮಸ್ಥರು, ರೈತ ದೇವರಾಜು ಮನೆಗೆ ಬಂದು ಕರುವನ್ನ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಇನ್ನು ತಮ್ಮ ಮನೆಯಲ್ಲಿ ಜನಿಸಿರುವ ಮೂರು ಕಣ್ಣುಗಳಿರುವ ಕರುವನ್ನ ಸ್ವಲ್ಪ ದಿನ ಸಾಕಿ, ಆ ನಂತರ ಯಾವುದಾದರೂ ದೇವಸ್ಥಾನಕ್ಕೆ ದಾನ ಮಾಡುತ್ತೇವೆ ಅಂತಿದ್ದಾರೆ ಕರುವಿನ ಮಾಲೀಕ ದೇವರಾಜು.