Tag: ವಿಗ್ರಹ

  • ಕನಸಲ್ಲಿ ಬರುತ್ತಿದ್ದ ವಿಗ್ರಹಗಳು ಕಣ್ಣೆದುರೇ ಪ್ರತ್ಯಕ್ಷ

    ಕನಸಲ್ಲಿ ಬರುತ್ತಿದ್ದ ವಿಗ್ರಹಗಳು ಕಣ್ಣೆದುರೇ ಪ್ರತ್ಯಕ್ಷ

    ಚಿಕ್ಕಬಳ್ಳಾಪುರ: ಈಗ ಎಲ್ಲೆಲ್ಲೂ ಕರಾವಳಿಯ ದೈವಾರಾಧನೆಯ ಕಥಾ ಹಂದರದ ʻಕಾಂತಾರʼ ಸಿನಿಮಾದ್ದೇ ಸದ್ದು. ಇದೇ ಹೊತ್ತಲ್ಲಿ ಕಾಂತಾರ ಸಿನಿಮಾದ ಕಥೆಯಂತೆ ಬಯುಲುಸೀಮೆಯ ಅದೊಂದು ಊರಲ್ಲಿ ದೈವಾಂಶ ಸಂಭೂತ ವಿಗ್ರಹಗಳು ಪತ್ತೆಯಾಗಿವೆ. ಮನೆ ಯಜಮಾನನ ಕನಸಲ್ಲಿ ಬರ್ತಿದ್ದ ವಿಗ್ರಹಗಳು ಈಗ ಕಣ್ಣೆದುರಿಗೆ ಕಾಣಿಸಿಕೊಂಡಿದೆ.

    ಹೌದು… ಹೀಗೆ ಒಂದೇ ಕಲ್ಲಿನಲ್ಲಿ ನಿಂತ ಭಂಗಿಯಲ್ಲಿರೋ ದೇವರ ವಿಗ್ರಹಗಳು ಪತ್ತೆಯಾಗಿರೋದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊನ್ನಪ್ಪನಹಳ್ಳಿ ಗ್ರಾಮದಲ್ಲಿ. ಗ್ರಾಮದ ಶಿವಕುಮಾರ್ ಮತ್ತು ಬಾಬು ಎಂಬ ಅಣ್ಣ ತಮ್ಮಂದಿರು, ತೋಟದಲ್ಲಿ ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಮನೆ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಮನೆಗೆ ವಿದ್ಯುತ್ ಸಂಪರ್ಕ ನೀಡಲು ಮುಂದಾಗಿದ್ದಾರೆ. ವಿದ್ಯುತ್ ಸಂಪರ್ಕ ನೀಡಲು ಗ್ರೌಂಡಿಂಗ್ ಕೇಬಲ್ ಆಳವಡಿಸಲು ಮನೆಯ ಪಕ್ಕದಲ್ಲೇ ಗುಂಡಿ ಅಗೆಯುವಾಗ ಈ ಕಲ್ಲಿನ ಕೆತ್ತನೆಗಳು ಪತ್ತೆಯಾಗಿವೆ. ಬರಿಗೈಯಲ್ಲಿ ಕಲ್ಲು ಮೇಲೆ ಎತ್ತಲು ಸಾಧ್ಯವಾಗದೇ ಇದ್ದಾಗ ಜೆಸಿಬಿ ಮೂಲಕ ಗುಂಡಿ ತೆಗೆದು ನೋಡಿದಾಗ ದೇವರ ಕೆತ್ತನೆ ಇರುವ ಕಲ್ಲುಗಳನ್ನ ಮೇಲೆತ್ತಲಾಗಿದೆ. ಇದನ್ನೂ ಓದಿ: 14 ದಲಿತ ಕೂಲಿ ಕಾರ್ಮಿಕರನ್ನು ಕೂಡಿ ಹಾಕಿ ಮಾಲೀಕನಿಂದ ಹಲ್ಲೆ- ಮಹಿಳೆಗೆ ಗರ್ಭಪಾತ

    ಮನೆ ಯಜಮಾನ ಕುಮಾರ್ ಎಂಬವರಿಗೆ ಮನೆ ಕಟ್ಟುವ ಆರಂಭದಿಂದಲೂ ಕನಸಲ್ಲಿ ಮನೆ ಬಳಿ ಯಾರೋ ಬಂದು ಇರುವಂತೆ ಭಾಸವಾಗುತ್ತಿತ್ತಂತೆ. ಅದು ಈಗ ನಿಜವಾಗಿದೆ ಅಂತಾರೆ. ಸದ್ಯ ಈ ವಿಗ್ರಹಗಳು ಪತ್ತೆಯಾದ ದಿನದಿಂದಲೂ ಮನೆಯಲ್ಲಿ ನೆಮ್ಮದಿ ಮೂಡಿದೆ. ಯಾವುದೇ ಸಮಸ್ಯೆಗಳು ಇಲ್ಲವಾಗಿದೆ ಅಂತ ಸಂತಸ ಹಂಚಿಕೊಂಡಿದ್ದಾರೆ.

    ಸದ್ಯ ಪತ್ತೆಯಾಗಿರೋ ವಿಗ್ರಹಗಳು ನಾರಾಯಣ, ಲಕ್ಷ್ಮೀ ರೂಪ ಅಂತಲೇ ಭಾವಿಸಿದ್ದು, ಮನೆ ಮಂದಿಯೆಲ್ಲಾ ನಿತ್ಯ ವಿಶೇಷ ಪೂಜೆ-ಪುನಸ್ಕಾರ ನೇರವೇರಿಸುತ್ತಿದ್ದಾರೆ. ಮನೆ ಮುಂದೆಯೇ ಗುಡಿ ಕಟ್ಟಿ ಪೂಜಿಸೋಕೆ ನಿರ್ಧರಿಸಿದ್ದು, ಗ್ರಾಮದ ಜನ ಸಹ ಪೂಜೆ-ಪುನಸ್ಕಾರಕ್ಕೆ ಮುಂದಾಗಿದ್ದಾರೆ. ಪುರಾತತ್ವ ಇಲಾಖೆಯವರು ಪರಿಶೀಲನೆ ಮಾಡಿ ಸಂಶೋಧನೆ ನಡೆಸಿದರೆ, ಇದು ಯಾವ ವಿಗ್ರಹಗಳು ಎಂಬ ಆಸಲಿ ಸತ್ಯ ತಿಳಿಯಲಿದೆ. ಇದನ್ನೂ ಓದಿ: ಮೊರಾರ್ಜಿ ಶಾಲೆಗಳಲ್ಲಿ ನಡೆದಿದ್ಯಾ ಆರ್‌ಎಸ್‍ಎಸ್ ಶಿಬಿರ..?

    Live Tv
    [brid partner=56869869 player=32851 video=960834 autoplay=true]

  • ಮಾಲೇಕಲ್ ತಿರುಪತಿಯಲ್ಲಿ ದುಷ್ಕರ್ಮಿಗಳಿಂದ ವಿಗ್ರಹ ಧ್ವಂಸ

    ಮಾಲೇಕಲ್ ತಿರುಪತಿಯಲ್ಲಿ ದುಷ್ಕರ್ಮಿಗಳಿಂದ ವಿಗ್ರಹ ಧ್ವಂಸ

    ಹಾಸನ: ಅರಸೀಕೆರೆ ಮಾಲೇಕಲ್ ತಿರುಪತಿಯಲ್ಲಿ ದುಷ್ಕರ್ಮಿಗಳು ವಿಗ್ರಹಗಳನ್ನು ಧ್ವಂಸ ಮಾಡಿದ್ದಾರೆ.

    ಹಾಸನ ಜಿಲ್ಲೆಯ ಅರಸೀಕೆರೆಯ ಮಾಲೇಕಲ್ ತಿರುಪತಿಯಲ್ಲಿ ದೇವಾಲಯದ ಕಲ್ಯಾಣಿ ಬಳಿ ವಿಗ್ರಹಗಳು ನಿರ್ಮಾಣವಾಗುತ್ತಿತ್ತು. ಈ ಮ್ಯೂಸಿಯಂ ಒಳಗಿದ್ದ 13 ವಿಗ್ರಹಗಳನ್ನು ಕಿಡಿಗೇಡಿಗಳನ್ನು ಧ್ವಂಸಗೊಳಿಸಿದ್ದಾರೆ. ಈ ಕೃತ್ಯವನ್ನು ಕಲ್ಯಾಣಿಯಲ್ಲಿ ಈಜಲು ಬಂದ ದುಷ್ಕರ್ಮಿಗಳಿಂದ ನಡೆದಿದೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ನಾವೆಲ್ಲಾ ಪೋಸ್ಟ್ ಮ್ಯಾನ್ ಕೆಲಸ ಮಾಡ್ತೇವೆ- ಬಿಜೆಪಿ ಕುರಿತು ನಟ ಜಗ್ಗೇಶ್ ಹೇಳಿದ್ದಿಷ್ಟು

    ವಿಗ್ರಹವನ್ನು ಯಾಕೆ ಮತ್ತು ಯಾರು ಧ್ವಂಸಗೊಳಿಸಿದರು ಎಂಬ ಕುರಿತು ಯಾವುದೇ ನಿಖರ ಮಾಹಿತಿ ತಿಳಿದುಬಂದಿಲ್ಲ. ಸೋಮವಾರ ಈ ಘಟನೆ ನಡೆದಿದ್ದು, ಈಗಾಗಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಈ ಕುರಿತು ದೇವಸ್ಥಾನ ಮುಜರಾಯಿ ಇಲಾಖೆಯೂ ಪರಿಶೀಲನೆ ನಡೆಸುತ್ತಿದೆ. ಶ್ರೀನಿವಾಸ ಕಲ್ಯಾಣಕ್ಕೆ ಸಂಬಂಧಿಸಿದಂತೆ ದಾನಿಗಳು ವಿಗ್ರಹ ಮಾಡಿಸುತ್ತಿದ್ದರು. ಇದನ್ನೂ ಓದಿ: ರಾಜಭವನದಲ್ಲಿ ಡಾ.ಅಂಬೇಡ್ಕರ್ ಪುತ್ಥಳಿ ಅನಾವರಣ – ನಾಡಿಗೆ ಸಾಮಾಜಿಕ ನ್ಯಾಯದ ಸಂದೇಶ ರವಾನಿಸಿದ ರಾಜಭವನ

  • ನಿಧಿಗಳ್ಳರಿಂದ ಐತಿಹಾಸಿಕ ಬೀರೇಶ್ವರ ದೇವರ ವಿಗ್ರಹ ಕಳ್ಳತನ

    ನಿಧಿಗಳ್ಳರಿಂದ ಐತಿಹಾಸಿಕ ಬೀರೇಶ್ವರ ದೇವರ ವಿಗ್ರಹ ಕಳ್ಳತನ

    ಚಿಕ್ಕೋಡಿ: ದೇವಸ್ಥಾನದ ಕಲ್ಲಿನ ದೇವರ ಮೂರ್ತಿಯನ್ನೇ ಕಳ್ಳರು ಕದ್ದೋಯ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ನಡೆದಿದೆ.

    ಶನಿವಾರ ತಡರಾತ್ರಿ ಕೊಕಟನೂರ ಗ್ರಾಮದ ಐತಿಹಾಸಿಕ ದೇವಸ್ಥಾನವಾಗಿದ್ದ ಬಿರೇಶ್ವರ ದೇವಸ್ಥಾನದ ಕಲ್ಲಿನ ವಿಗ್ರಹವನ್ನು ಎತ್ತಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ರಸ್ತೆ ಮಧ್ಯೆ ಹುಲಿ ಪ್ರತ್ಯಕ್ಷ – ಬೆಚ್ಚಿಬಿದ್ದ ವಾಹನ ಸವಾರರು 

    ದೇವರ ಮೂರ್ತಿಯನ್ನು ನಿಧಿಗಳ್ಳರು ಅಥವಾ ವಾಮಾಚಾರ ಮಾಡುವ ಖದೀಮರು ಕದ್ದಿರಬಹದು ಎನ್ನುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಬೆಳಗಿನ ಜಾವ ಪೂಜೆಗಾಗಿ ಅರ್ಚಕರು ಬಂದ ಮೇಲೆ ಘಟನೆ ಬೆಳಕಿಗೆ ಬಂದಿದೆ.

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಐತಿಹಾಸಿಕ ಶಿವ, ಗಣೇಶನ ಮೂರ್ತಿಗಳನ್ನು ವಿರೂಪಗೊಳಿಸಿದ ಕಿಡಿಗೇಡಿಗಳು

    ಐತಿಹಾಸಿಕ ಶಿವ, ಗಣೇಶನ ಮೂರ್ತಿಗಳನ್ನು ವಿರೂಪಗೊಳಿಸಿದ ಕಿಡಿಗೇಡಿಗಳು

    ಬೀದರ್: ಐತಿಹಾಸಿಕ ಶಿವನ ಹಾಗೂ ಗಣೇಶನ ಮೂರ್ತಿಗಳನ್ನು ಕೆಲ ಕಿಡಿಗೇಡಿಗಳು ವಿರೂಪಗೊಳಿಸಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪೂರ್ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

    ಗ್ರಾಮದಲ್ಲಿರುವ ಚಾಳಕಾದೇವಿ ಬೆಟ್ಟದಲ್ಲಿರುವ ಶಿವನ ಮೂರ್ತಿಯ ಜೊತೆಗೆ ಗಣೇಶನ ಮೂರ್ತಿಯನ್ನೂ ವಿರೂಪಗೊಳಿಸಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಶ್ರೀ ಮಹಾನ್ ಸಿದ್ಧಿ ಪುರುಷ ಸಿದ್ದಾರೂಢರ ಜನ್ಮ ಸ್ಥಳದಲ್ಲಿ ಈ ಘಟನೆ ನಡೆದಿದೆ. ಶಿವನ ಹಾಗೂ ಗಣೇಶನ ಮೂರ್ತಿಗಳು ವಿರೂಪಗೊಳಿಸಿದ್ದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶಗೊಂಡಿದ್ದಾರೆ. ಇದನ್ನೂ ಓದಿ: ಶಿಕ್ಷಕರ ಒತ್ತಾಯಕ್ಕೆ 100 ಬಸ್ಕಿ ಹೊಡೆದ 7 ಮಂದಿ ವಿದ್ಯಾರ್ಥಿನಿಯರು – ಆಸ್ಪತ್ರೆಗೆ ದಾಖಲು

    POLICE JEEP

    ಐತಿಹಾಸಿಕ ಮೂರ್ತಿಗಳನ್ನು ವಿರೂಪಗೊಳಿಸಿದ ಕಿಡಿಗೇಡಿಗಳನ್ನು ಈ ಕೂಡಲೇ ಬಂಧಿಸಬೇಕು ಎಂದು ಗ್ರಾಮಸ್ಥರು ಪೊಲೀಸರಿಗೆ ಒತ್ತಾಯ ಮಾಡಿದ್ದಾರೆ. ಖಟಕ್ ಚಿಂಚೋಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಖಟಕ್ ಚಿಂಚೋಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ನೂತನ ಪ್ರಧಾನಿಗೆ ಮೋದಿ ಅಭಿನಂದನೆ

  • ವಿಗ್ರಹ ಮಾಡೋದು ಹರಾಮ್, ಆದ್ರೇ ಜೀವನೋಪಾಯಕ್ಕೆ ಅದು ಅನಿವಾರ್ಯ: ಉಮರ್ ಷರೀಫ್

    ವಿಗ್ರಹ ಮಾಡೋದು ಹರಾಮ್, ಆದ್ರೇ ಜೀವನೋಪಾಯಕ್ಕೆ ಅದು ಅನಿವಾರ್ಯ: ಉಮರ್ ಷರೀಫ್

    ಬೆಂಗಳೂರು: ವಿಗ್ರಹ ಮಾಡೋದು ಹರಾಮ್ ಆದರೆ ಜೀವನೋಪಾಯಕ್ಕೆ ಅದು ಅನಿವಾರ್ಯವಾಗಿದೆ ಎಂದು ಮುಸ್ಲಿಂ ಮುಖಂಡ ಉಮರ್ ಷರೀಫ್ ಹೇಳಿದರು.

    ಮುಸ್ಲಿಮರು ತಯಾರಿಸುವ ವಿಗ್ರಹವನ್ನು ಹಿಂದೂಗಳು ಪ್ರತಿಷ್ಠಾಪನೆ ಮಾಡಬಾರದು ಎಂಬ ಅಭಿಯಾನಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ವಿಗ್ರಹ ಆರಾಧನೆ ಒಪ್ಪಲ್ಲ. ವಿಗ್ರಹ ತಯಾರಿಸುವುದು ಕೂಡ ನಮ್ಮ ಧರ್ಮದ ಪ್ರಕಾರ ಹರಾಮ್. ಆದರೆ ಹೊಟ್ಟೆಪಾಡಿನ ವಿಚಾರಕ್ಕೆ ಬಂದರೆ ಸಂವಿಧಾನ ಪ್ರತಿಯೊಬ್ಬನಿಗೂ ದುಡಿದು ತಿನ್ನುವ ಹಕ್ಕು ನೀಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಹಲಾಲ್‌ ಆಯ್ತು ಈಗ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ

    ಪ್ರತಿಯೊಂದು ವಿಚಾರಕ್ಕೂ ಧರ್ಮ ತರೋದು ಸರಿಯಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಜೀವನಕ್ಕೆ ಮತ್ತೆ ಮುಸ್ಲಿಮರು ಏನು ಮಾಡಬೇಕು? ಈ ಅಭಿಯಾನ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

  • ಸಂಕ್ರಾಂತಿಗೆ ಇಂಗ್ಲೆಂಡಿನಿಂದ ತಾಯ್ನಾಡಿಗೆ ಮರಳಿ ಬಂತು 10ನೇ ಶತಮಾನದ ಯೋಗಿನಿ ವಿಗ್ರಹ

    ನವದೆಹಲಿ: ಉತ್ತರ ಪ್ರದೇಶದ ಹಳ್ಳಿಯೊಂದರಿಂದ ಇಂಗ್ಲೆಂಡ್‍ಗೆ ಹೊತ್ತೊಯ್ಯಲಾದ 10ನೇ ಶತಮಾನದ ವಿಗ್ರಹ ಈ ವರ್ಷದ ಸಂಕ್ರಾಂತಿಯಲ್ಲಿ ತಾಯ್ನಾಡಿಗೆ ಮರಳಿ ಬಂದಿದೆ.

    ವಿಗ್ರಹವನ್ನು 40 ವರ್ಷಗಳ ಹಿಂದೆ ಭಾರತದಿಂದ ಇಂಗ್ಲೆಂಡ್‍ಗೆ ಕದ್ದೊಯ್ಯಲಾಗಿತ್ತು. ಇಂಗ್ಲೆಂಡ್‍ನ ಖಾಸಗಿ ನಿವಾಸದ ಉದ್ಯಾನದಲ್ಲಿ 10ನೇ ಶತಮಾನದ ಪ್ರಾಚೀನ ವಿಗ್ರಹವನ್ನು ಇತ್ತೀಚೆಗೆ ಪತ್ತೆ ಮಾಡಲಾಗಿತ್ತು. ಈ ವಿಗ್ರಹವನ್ನು ಶುಕ್ರವಾರ ಭಾರತಕ್ಕೆ ತಂದು ಮರು ಸ್ಥಾಪಿಸಲಾಗಿದೆ. ಇದನ್ನೂ ಓದಿ: ರಿಯಲ್ ಸ್ಟಾರ್  ಉಪ್ಪಿ ಮನೆಯಲ್ಲಿ ಸಂಕ್ರಾತಿ ಸಡಗರ

    ವಿಗ್ರಹವನ್ನು ಸ್ವದೇಶಕ್ಕೆ ತರುವ ಜಾವಾಬ್ದಾರಿಯನ್ನು ಭಾರತೀಯ ಹೈ ಕಮಿಷನರ್ ಗಾಯತ್ರಿ ಇಸ್ಸಾರ್ ಕುಮಾರ್ ವಹಿಸಿಕೊಂಡಿದ್ದು, ಇವರಿಗೆ ಆರ್ಟ್ ರಿಕವರಿ ಇಂಟರ್‍ನ್ಯಾಶನಲ್ ಕ್ರಿಸ್ ಮರಿನೆಲ್ಲೋ ಸಹಾಯ ಮಾಡಿದ್ದಾರೆ.

    ಮರಳುಗಲ್ಲಿನಲ್ಲಿ ಸುಂದರವಾಗಿ ಕೆತ್ತಲಾಗಿರುವ ಮೇಕೆ ತಲೆಯ ಯೋಗಿನಿ ವಿಗ್ರಹ ಉತ್ತರ ಪ್ರದೇಶದ ಬಂದಾ ಜಿಲ್ಲೆ ಲೋಖಾರಿ ದೇವಸ್ಥಾನದ್ದಾಗಿತ್ತು. ಇದೀಗ ವಿಗ್ರಹವನ್ನು ನವದೆಹಲಿಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ರವಾನಿಸಲಾಗುತ್ತಿದೆ. ಇದನ್ನೂ ಓದಿ: ಇನ್ಫಿ ನಾರಾಯಣ ಮೂರ್ತಿ ಅಳಿಯ ಮುಂದಿನ ಬ್ರಿಟನ್ ಪ್ರಧಾನಿ?

    ಮೇಕೆ ತಲೆಯ ಯೋಗಿನಿ ವಿಗ್ರಹ 1980ರಲ್ಲಿ ಲೋಖಾರಿ ದೇವಸ್ಥಾನದಿಂದ ನಾಪತ್ತೆಯಾಗಿತ್ತು. ನಂತರ 1988ರಲ್ಲಿ ಇಂಗ್ಲೆಂಡ್‍ನ ಕಲಾ ಮಾರುಕಟ್ಟೆಯಲ್ಲಿ ಪತ್ತೆಯಾಗಿತ್ತು.

  • 108 ವರ್ಷ ನಂತ್ರ ಕಾಶಿಗೆ ಅನ್ನಪೂರ್ಣೆ ವಿಗ್ರಹ

    108 ವರ್ಷ ನಂತ್ರ ಕಾಶಿಗೆ ಅನ್ನಪೂರ್ಣೆ ವಿಗ್ರಹ

    ವಾರಣಾಸಿ: ಅನ್ನಪೂರ್ಣೆ ವಿಗ್ರಹ ಕೆನಡಾದಿಂದ 108 ವರ್ಷ ನಂತರ ಕಾಶಿಗೆ ಮರಳಿ ತಂದಿದ್ದ ವಿಗ್ರಹವನ್ನು ಕಾಶಿ ವಿಶ್ವನಾಥ ದೇವಾಲಯದಲ್ಲಿ ನಿನ್ನೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿಷ್ಠಾಪನೆ ಮಾಡಿದ್ದಾರೆ.

    ಈ ವಿಗ್ರಹಲವು 18ನೇ ಶತಮಾನದ್ದಾಗಿದ್ದು, ಸುಮಾರು 108 ವರ್ಷಗಳ ಹಿಂದೆ ಕಳವಾಗಿತ್ತು. ಬಳಿಕ ಕೆನಡಾದಲ್ಲಿ ಪತ್ತೆ ಆಗಿದ್ದ ಮೂರ್ತಿ, ಮೋದಿ ಸರ್ಕಾರದ ಪ್ರಯತ್ನದ ಫಲವಾಗಿ ಭಾರತಕ್ಕೆ ಮರಳಿದೆ. ಇದನ್ನೂ ಓದಿ:  ಜಗತ್ತಿನಲ್ಲಿ ಮೊಟ್ಟ ಮೊದಲು ವಿಮಾನ ಹಾರಿಸಿದವನು ರಾವಣನೇ?- ಲಂಕಾ ಅಧ್ಯಯನ

    17 ಸೆಂ.ಮೀ ಎತ್ತರ, 9 ಸೆಂ.ಮೀ ಅಗಲ, 4 ಸೆಂ.ಮೀ ದಪ್ಪವಿರುವ ಈ ವಿಗ್ರಹವನ್ನು ಇರಿಸಲಾಗಿದ್ದ ಬೆಳ್ಳಿಯ ಪಲ್ಲಕ್ಕಿಗೆ ಯೋಗಿ ಆದಿತ್ಯನಾಥ್ ಅವರು ಸ್ವತಃ ಹೆಗಲ ನೀಡಿದರು. ಮಂತ್ರೋಚ್ಚರಣೆಯೊಂದಿಗೆ ದೇವಾಲಯ ಈಶಾನ್ಯ ಭಾಗದಲ್ಲಿ ಅನ್ನಪೂರ್ಣಾ ದೇವಿ ವಿಗ್ರಹ ಸೇರಿದಂತೆ ಈ ವಿಗ್ರಹವನ್ನೂ ಪ್ರತಿಷ್ಠಾಪಿಸಲಾಗಿದೆ. ಇದನ್ನೂ ಓದಿ: ಆದಿವಾಸಿಗಳ ದುಸ್ಥಿತಿಗೆ ಕಾಂಗ್ರೆಸ್ ಕಾರಣ: ಮೋದಿ

    108 ವರ್ಷಗಳ ಹಿಂದೆ ಅನ್ನಪೂರ್ಣ ಮಾತೆಯ ವಿಗ್ರಹವನ್ನು ಕಾಶಿಯಿಂದ ಕಳವು ಮಾಡಲಾಗಿತ್ತು. ಇದು ಕೈಯಿಂದ ಕೈಗೆ ಬದಲಾವಣೆ ಹೊಂದುತ್ತಾ ಕಡೆಗೆ ಕೆನಡಾದ ವಿಶ್ವವಿದ್ಯಾನಿಲಯದ ವಸ್ತು ಸಂಗ್ರಹಾಲಯ ತಲುಪಿತ್ತು. ಕೆನಡಾ ವಿಶ್ವವಿದ್ಯಾನಿಲಯದಿಂದ ವಿಗ್ರಹ ಮರಳಿಸುವ ಭಾರತ ಸರ್ಕಾರದ ಮನವಿಗೆ ಮನ್ನಣೆ ಸಿಕ್ಕಿದೆ. ಇದನ್ನೂ ಓದಿ:  ದಲಿತರೊಂದಿಗೆ ಚಹಾ ಸೇವಿಸಿ, ಬಿಜೆಪಿಗೆ ಮತ ಹಾಕುವಂತೆ ಮನವೊಲಿಸಿ: ಸ್ವತಂತ್ರ ದೇವ್

  • 45 ಅಡಿ ಎತ್ತರದ ಪರಿಸರ ಸ್ನೇಹಿ ದುರ್ಗಾದೇವಿ ಮೂರ್ತಿ – ಫೋಟೋ ವೈರಲ್

    45 ಅಡಿ ಎತ್ತರದ ಪರಿಸರ ಸ್ನೇಹಿ ದುರ್ಗಾದೇವಿ ಮೂರ್ತಿ – ಫೋಟೋ ವೈರಲ್

    ಹೈದರಾಬಾದ್: ಹೈದರಾಬಾದಿನ ಎಸಾಮಿಯಾ ಬಜಾರ್‌ನಲ್ಲಿ 45 ಅಡಿ ಎತ್ತರದ ದುರ್ಗಾದೇವಿ ಮೂರ್ತಿಯನ್ನು ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸಿ ಸ್ಥಾಪಿಸಲಾಗಿದೆ.

    Durga Devi

    ಈ ಮೂರ್ತಿಯನ್ನು ಹುಲ್ಲು, ಮಣ್ಣು, ಕೆಂಪು ಮರಳು ಮತ್ತು ಪೇಯಿಂಟ್‍ನಿಂದ ವಿನ್ಯಾಸಗೊಳಿಸಲಾಗಿದೆ. ಈ ವಿಗ್ರಹವು 9 ಮುಖ ಹಾಗೂ 9 ಜೋಡಿ ಕೈಗಳನ್ನು ಹೊಂದಿದ್ದು, ದೇವತೆಯ 9 ರೂಪಗಳನ್ನು ಸೂಚಿಸುತ್ತದೆ. ಈ ವಿಗ್ರಹವನ್ನು ಸ್ಥಾಪಿಸಲು ಗುಲಾಬ್ ಶ್ರೀನಿವಾಸ್ ಗಂಗಪುತ್ರ ಅವರು, 22 ಕೆಲಸಗಾರರೊಂದಿಗೆ 35 ದಿನಗಳ ಕಾಲ ಸಮಯ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಸಚಿವ ಎಸ್.ಟಿ ಸೋಮಶೇಖರ್‌ರಿಂದ ಡೋಲು ಬಡಿತ, ವೀರಗಾಸೆ ಕುಣಿತ

    Durga Devi

    ಸದ್ಯ ಈ ಮೂರ್ತಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಮಗೆ ಬೇಕಾಗಿರುವುದು ಪರಿಸರ ಸ್ನೇಹಿ ಮೂರ್ತಿಗಳು. ಆದರೆ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ಸಿದ್ದಪಡಿಸಿದ ವಿಗ್ರಹಗಳು ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸುವುದರಿಂದ ನಮ್ಮ ಪರಿಸರ ಹಾಳಾಗುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್

    ಅಕ್ಟೋಬರ್ 7ರಿಂದ ಆರಂಭವಾದ ನವರಾತ್ರಿಯ ಹಬ್ಬವನ್ನು ದೇಶಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ವರ್ಷ ಅಕ್ಟೋಬರ್ 13 ರಂದು ಅಷ್ಟಮಿ ಬರುತ್ತದೆ ಮತ್ತು ದಶಮಿ ಅಕ್ಟೋಬರ್ 15 ರಂದು ಬರುತ್ತದೆ. ವಿಜಯ ದಶಮಿಯನ್ನು ದಸರಾ ಎಂದೂ ಕರೆಯುತ್ತಾರೆ, ಇದು ರಾಮನ ಕೈಯಲ್ಲಿ 10 ತಲೆಯ ರಾವಣನ ಸೋಲನ್ನು ಸೂಚಿಸುತ್ತದೆ.

  • ಚೌವೀಸ ತೀರ್ಥಂಕರರ ಪುರಾತನ ಕಾಲದ ವಿಗ್ರಹ ಪತ್ತೆ

    ಚೌವೀಸ ತೀರ್ಥಂಕರರ ಪುರಾತನ ಕಾಲದ ವಿಗ್ರಹ ಪತ್ತೆ

    ಧಾರವಾಡ: ಬಸದಿ ಜಾಗದಲ್ಲಿ ಮುನಿ ನಿವಾಸ ನಿರ್ಮಾಣಕ್ಕೆ ಅಗೆಯುವ ಸಮಯದಲ್ಲಿ ಚೌವೀಸ ತೀರ್ಥಂಕರರ ಪುರಾತನ ಕಾಲದ ವಿಗ್ರಹ ಪತ್ತೆಯಾಗಿದೆ.

    ಜಿಲ್ಲೆಯ ಕೊಟಬಾಗಿ ಗ್ರಾಮದಲ್ಲಿ ಹಳೆಯ ಬಸದಿ ಜಾಗದಲ್ಲಿ ಮುನಿ ನಿವಾಸಕ್ಕಾಗಿ ಜಾಗವನ್ನು ಅಗೆಯಲಾಗುತ್ತಿತ್ತು. ಈ ವೇಳೆ ಸುಮಾರು 10 ಅಡಿ ಆಳದಲ್ಲಿ ಚೌವೀಸ ತೀರ್ಥಂಕರರ ಪುರಾತನ ಮೂರ್ತಿಯು ದೊರೆತಿದೆ. ಈ ಮೂರ್ತಿ 8ನೇ ಶತಮಾನಕ್ಕಿಂತ ಹಳೆಯದಾಗಿರಬಹುದೆಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ದಸರಾ ಉದ್ಘಾಟನೆ- ಎಸ್.ಎಂ.ಕೃಷ್ಣಾರನ್ನು ಅಧಿಕೃತವಾಗಿ ಆಹ್ವಾನಿಸಿದ ಸರ್ಕಾರ

    ಇದೇ ಜಾಗದಲ್ಲಿ ಕೆಲವು ವರ್ಷಗಳ ಹಿಂದೆ ಭಗವಾನ ಆದಿನಾಥರ ಹಾಗೂ ಭಗವಾನ ವಿಮಲನಾಥ ತೀರ್ಥಂಕರರ ಮೂರ್ತಿಗಳು ದೊರೆತಿದ್ದವು. ಅಲ್ಲದೆ ಹಳೆಗನ್ನಡದಲ್ಲಿರುವ ಶಾಸನಗಳು ದೊರೆತಿವೆ. ಶ್ರೀ ಪ್ರಸಂಗಸಾಗರ ಮಹಾರಾಜರು ಕೊಟಬಾಗಿ ಗ್ರಾಮದಲ್ಲಿ ಚಾತುರ್ಮಾಸವನ್ನು ಆಚರಿಸುತ್ತಿದ್ದಾರೆ. ಜಿನಬಿಂಬ ನೋಡಲು ಗ್ರಾಮದ ಹಳೆಯ ಬಸದಿ ಕಡೆ ಜನಸಾಗರ ಹರಿದುಬರುತ್ತಿದೆ.

  • USನಿಂದ 157 ಪುರಾತನ ಕಲಾಕೃತಿಗಳನ್ನು ವಾಪಸ್ ಭಾರತಕ್ಕೆ ತಂದ ಪ್ರಧಾನಿ ಮೋದಿ

    USನಿಂದ 157 ಪುರಾತನ ಕಲಾಕೃತಿಗಳನ್ನು ವಾಪಸ್ ಭಾರತಕ್ಕೆ ತಂದ ಪ್ರಧಾನಿ ಮೋದಿ

    ನವದೆಹಲಿ: ಹಿಂದೆ ಕಳವಾಗಿದ್ದ ವಿಗ್ರಹಗಳೆಲ್ಲವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್‍ನಿಂದ 157 ಪುರಾತನ ಕಲಾಕೃತಿಗಳನ್ನು ಭಾರತಕ್ಕೆ ತಂದಿದ್ದಾರೆ.

    ನಮ್ಮ ದೇಶಕ್ಕೆ ಸಂಬಂಧಪಟ್ಟ ಸುಮಾರು 157 ಪುರಾತನ ಕಲಾಕೃತಿಗಳು, ದೇವರ ವಿಗ್ರಹಗಳನ್ನು ವಾಪಸ್ ತರುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಕಲಾಕೃತಿಗಳೆಲ್ಲ ಹಿಂದೆ ಕಳವಾಗಿ, ಯುಎಸ್‍ಗೆ ಸಾಗಿಸಲ್ಪಟ್ಟಿದ್ದವು. ಅದನ್ನೀಗ ಪ್ರಧಾನಿ ಮೋದಿಯವರಿಗೆ ಅಮೆರಿಕ ಹಸ್ತಾಂತರ ಮಾಡಿದೆ. ಈ ಬಗ್ಗೆ ಪ್ರಧಾನಿ ಮೋದಿ (Narendra Modi)ಯವರೂ ಕೂಡ ತುಂಬ ಖುಷಿ ವ್ಯಕ್ತಪಡಿಸಿದ್ದಾರೆ.

    ಇದೀಗ ಪ್ರಧಾನಿ ಮೋದಿಯವರು ಭಾರತಕ್ಕೆ ತರಲಿರುವ ಪುರಾತನ ವಸ್ತುಗಳಲ್ಲಿ 12ನೇ ಶತಮಾನದ ಕಂಚಿನ ನಟರಾಜ ವಿಗ್ರಹ, 10ನೇ ಶತಮಾನದ ರೇವಂತ ದೇವರ ಮೂರ್ತಿಗಳು ಇವೆ. ಹೀಗೆ ವಾಪಸ್ ತರಲಾದ 45 ಕಲಾಕೃತಿಗಳು ಸಾಮಾನ್ಯ ಯುಗಕ್ಕಿಂತಲೂ ಮುಂಚಿನವು. 71 ಸಾಂಸ್ಕೃತಿಕ ಕಲಾಕೃತಿಗಳಾಗಿದ್ದು, 60 ಹಿಂದೂ ಧರ್ಮ ಬಿಂಬಕ ಕಲಾಕೃತಿಗಳಾಗಿವೆ. ಇನ್ನು 16 ಕಲಾಕೃತಿಗಳು ಬೌದ್ಧಧರ್ಮಕ್ಕೆ ಸೇರಿದ್ದಾಗಿದ್ದು, 9 ಜೈನಧರ್ಮದ್ದಾಗಿವೆ. ಇದನ್ನೂ ಓದಿ:  ಹೂವಿನ ಬೆಲೆ ಕುಸಿತ, ಗುಲಾಬಿ ತೋಟಕ್ಕೆ ಬೆಂಕಿ ಇಟ್ಟ ರೈತ

    ಕಂಚಿನಿಂದ ಮಾಡಲಾದ ಲಕ್ಷ್ಮೀ ನಾರಾಯಣ ಅಲಂಕೃತ ಮೂರ್ತಿಗಳು, ಬುದ್ಧ, ವಿಷ್ಣು, ಶಿವ-ಪಾರ್ವತಿ ಮತ್ತು 24 ಜೈನ ತೀರ್ಥಂಕರ ಮೂರ್ತಿಗಳ ವಿಗ್ರಹ ಇದೆ. ದೇವರ ವಿಗ್ರಹಗಳ ಹೊರತಾಗಿಯೂ ಕೆಲವು ಸಾಂಸ್ಕೃತಿ ಪ್ರತಿಬಿಂಬಕ ಕಲಾಕೃತಿಗಳಿವೆ. ಮೂರು ತಲೆಯ ಬ್ರಹ್ಮ, ರಥ ಚಾಲನೆ ಮಾಡುತ್ತಿರುವ ಸೂರ್ಯ, ವಿಷ್ಣು, ದಕ್ಷಿಣಾಮೂರ್ತಿಯಾಗಿರುವ ಶಿವ, ನೃತ್ಯ ಮಾಡುತ್ತಿರುವ ಗಣೇಶನ ವಿಗ್ರಹಗಳು, ತಾರ, ಜೈನ ತೀರ್ಥಂಕರ , ಪದ್ಮಾಸನ ತೀರ್ಥಂಕರ ಮತ್ತು ಜೈನ ಚೌಬಿಸಿ ಮೂರ್ತಿಗಳೂ ಇವೆ. ಇದನ್ನೂ ಓದಿ:  ಹುಟ್ಟುಹಬ್ಬದ ಪಾರ್ಟಿಗೆ ಆಗಮಿಸಿದ ಟೆಕ್ಕಿ ಸಾವು

    ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಯುಎಸ್ ಪ್ರವಾಸ ಮುಗಿಸಿ, ಅಲ್ಲಿಂದ ಹೊರಟಿದ್ದಾರೆ. ನಿನ್ನೆ ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ್ದರು. ಸೆಪ್ಟೆಂಬರ್ 24ರಂದು ಕ್ವಾಡ್ ಶೃಂಗಸಭೆ (Quad Summit)ಯಲ್ಲಿ ಮಾತನಾಡಿದ್ದರು. ನಿನ್ನೆ (ಸೆಪ್ಟೆಂಬರ್ 25) ಅವರ ಅಮೆರಿಕ ಪ್ರವಾಸ ಮುಕ್ತಾಯಗೊಂಡಿದ್ದು, ಈಗಾಗಲೇ ಅಲ್ಲಿಂದ ಹೊರಟಿದ್ದಾರೆ. ಆದರೆ ಹೀಗೆ ಭಾರತಕ್ಕೆ ಬರುವಾಗ, ನಮ್ಮ ದೇಶಕ್ಕೆ ಸಂಬಂಧಪಟ್ಟ ಸುಮಾರು 157 ಪುರಾತನ ಕಲಾಕೃತಿಗಳು, ದೇವರ ವಿಗ್ರಹಗಳನ್ನು ವಾಪಸ್ ತರುತ್ತಿದ್ದಾರೆ ಎಂದು ಹೇಳಲಾಗಿದೆ.