Tag: ವಿಕ್ರಾಂತ್ ರೋಣ 2

  • ‘ವಿಕ್ರಾಂತ್ ರೋಣ’ ಪಾರ್ಟ್ 2 ಮಾಡುವ ಬಗ್ಗೆ ಸುಳಿವು ಕೊಟ್ಟ ಅನೂಪ್ ಭಂಡಾರಿ

    ‘ವಿಕ್ರಾಂತ್ ರೋಣ’ ಪಾರ್ಟ್ 2 ಮಾಡುವ ಬಗ್ಗೆ ಸುಳಿವು ಕೊಟ್ಟ ಅನೂಪ್ ಭಂಡಾರಿ

    ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಅನೂಪ್ ಭಂಡಾರಿ ಮತ್ತೊಮ್ಮೆ ಸುದೀಪ್ (Sudeep) ಜೊತೆ ಕೈಜೋಡಿಸಿದ್ದಾರೆ. ‘ಬಿಲ್ಲಾ ರಂಗ ಭಾಷಾ’ ಸಿನಿಮಾಗಾಗಿ ಜೊತೆಯಾಗುತ್ತಿದ್ದಾರೆ. ‘ವಿಕ್ರಾಂತ್ ರೋಣ 2’ ಬರುವ ಬಗ್ಗೆ ನಿರ್ದೇಶಕ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಜೊತೆಗೆ ಈ ಹಿಂದೆ ಸುದೀಪ್ ಜೊತೆ ‘ಅಶ್ವತ್ಥಾಮ’ ಚಿತ್ರಕ್ಕೆ ಅನೂಪ್‌ ನಿರ್ದೇಶನ ಮಾಡಬೇಕಿತ್ತು. ಆ ಪ್ರಾಜೆಕ್ಟ್ ಏನಾಯ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:‌’ವೆಟ್ಟೈಯಾನ್’ ಚಿತ್ರದ ಸಾಂಗ್ ರಿಲೀಸ್- ಮಂಜು ವಾರಿಯರ್ ಜೊತೆ ತಲೈವಾ ಸಖತ್ ಸ್ಟೆಪ್ಸ್

    ‘ಅಶ್ವತ್ಥಾಮ’ ಸಿನಿಮಾ ಸುದೀಪ್ ಅವರ ಜೊತೆ ಮಾಡಬೇಕಿತ್ತು. ಅದು ವಿಕ್ರಾಂತ್ ರೋಣ ನಂತರ ಚಿತ್ರ ಮಾಡಲು ಪ್ಲ್ಯಾನ್ ಆಗಿತ್ತು. 2020ರಲ್ಲಿ ‘ವಿಕ್ರಾಂತ್ ರೋಣ’ ನನ್ನ ಹುಟ್ಟುಹಬ್ಬದ ದಿನವೇ ಶೂಟಿಂಗ್ ಶುರುವಾಗಿತ್ತು. ಎರಡೆರಡು ಬಾರಿ ಕೊವೀಡ್‌ನಿಂದ ಲಾಕ್‌ಡೌನ್ ಆಯ್ತು. ಶೂಟಿಂಗ್ ನಿಂತು ನಿಂತು ಒಂದೂವರೆ ವರ್ಷ ಪ್ಲ್ಯಾನ್ ಮಾಡಿದ ಪ್ರಾಜೆಕ್ಟ್ 4 ವರ್ಷ ತೆಗೆದುಕೊಂಡಿತ್ತು. ಚಿತ್ರೀಕರಣ ಬೇಗ ಮುಗಿದಿದ್ರೆ, ವಿಕ್ರಾಂತ್ ರೋಣ ಬಳಿಕ ‘ಅಶ್ವತ್ಥಾಮ’ ಸಿನಿಮಾ ಮಾಡುತ್ತಿದ್ವಿ ಎಂದು ನಿರ್ದೇಶಕ ಅನೂಪ್ ಭಂಡಾರಿ (Anup Bhandari) ಮಾತನಾಡಿದ್ದಾರೆ.

    ಅಷ್ಟರಲ್ಲಿ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಬಂತು ಅದರಲ್ಲಿ ಅಶ್ವತ್ಥಾಮ ಪಾತ್ರ ಹೈಲೆಟ್ ಆಯ್ತು. ಮತ್ತೊಂದು ‘ಅಶ್ವತ್ಥಾಮ’ ಸಿನಿಮಾ ಅನೌನ್ಸ್ ಆಯಿತು. ಅದಕ್ಕೆ ಮುಂದೆ ನೋಡೋಣ ಎಂದು ಹೋಲ್ಡ್ ಮಾಡಿದ್ವಿ. ಈಗ ನಮ್ಮ ಹತ್ತಿರ ‘ಬಿಲ್ಲಾ ರಂಗ ಭಾಷಾ’ (Billa Ranga Basha) ಇದೆ. ‘ವಿಕ್ರಾಂತ್ ರೋಣ 2’ ಮಾಡಬೇಕು ಅಂದ್ರು ಅದಕ್ಕೂ ಅವಕಾಶ ಇದೆ ಎಂದು ಸೀಕ್ವೆಲ್ ಬರುವ ಬಗ್ಗೆ ಸುಳಿವು ನೀಡಿದ್ದಾರೆ ಅನೂಪ್. ಹಾಗಾದ್ರೆ ಈ ಸಿನಿಮಾ ಬಗ್ಗೆಯೂ ಅಧಿಕೃತವಾಗಿ ಅನೌನ್ಸ್ ಆಗುತ್ತಾ? ಕಾದುನೋಡಬೇಕಿದೆ.

  • ವಿಕ್ರಾಂತ್ ರೋಣ 2 ಮುನ್ಸೂಚನೆ ಕೊಟ್ಟರಾ ಸುದೀಪ್?

    ವಿಕ್ರಾಂತ್ ರೋಣ 2 ಮುನ್ಸೂಚನೆ ಕೊಟ್ಟರಾ ಸುದೀಪ್?

    ಕಿಚ್ಚ ಸುದೀಪ್ ಮತ್ತು ವಿಕ್ರಾಂತ್ ರೋಣ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ಮತ್ತೊಂದು ಸಿನಿಮಾ ಮಾಡುವುದು ಖಚಿತವಾಗಿದೆ. ಈ ಹಿಂದೆಯೇ ಸ್ವತಃ ಸುದೀಪ್ ಅವರೇ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಈಗ ಮತ್ತೊಂದು ಸುದ್ದಿಯನ್ನು ಸ್ವತಃ ಸುದೀಪ್ ಅವರೇ ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ. ಅದು ವಿಕ್ರಾಂತ್ ರೋಣ 2 ಕುರಿತಾದದ್ದಾ ಅಥವಾ ಅನೂಪ್ ಭಂಡಾರಿ ಅವರ ಜತೆ ಮಾಡಬೇಕಿದ್ದ ಮತ್ತೊಂದು ಸಿನಿಮಾ ಬಿಲ್ಲ, ರಂಗ, ಬಾಷಾ ಚಿತ್ರದ್ದಾ ಎನ್ನುವ ಕುರಿತು ಕುತೂಹಲ ಮೂಡಿದೆ. ಇದನ್ನೂ ಓದಿ : ಏನಾಯ್ತು ಅಮಿತಾಭ್ ಬಚ್ಚನ್ ಗೆ? ಆತಂಕದಲ್ಲಿ ಅಭಿಮಾನಿಗಳು

    ವಿಕ್ರಾಂತ್ ರೋಣಕ್ಕಿಂತ ಮುಂಚೆಯೇ ‘ಬಿಲ್ಲ ರಂಗ ಬಾಷಾ’ ಸಿನಿಮಾ ಆಗಬೇಕಿತ್ತು. ಆದರೆ, ಅದಕ್ಕೂ ಮುನ್ನ ‘ವಿಕ್ರಾಂತ್ ರೋಣ’ ಸಿದ್ಧವಾಯಿತು. ಇತ್ತೀಚೆಗಷ್ಟೇ ಮತ್ತೆ ನಾವು ಜತೆಯಾಗಿ ಕೆಲಸ ಮಾಡುತ್ತಿದ್ದೇವೆ. ಆದಷ್ಟು ಬೇಗ ಆ ಕುರಿತು ಮಾಹಿತಿ ನೀಡುತ್ತೇನೆ ಎಂದು ಸುದೀಪ್ ಬರೆದುಕೊಂಡಿದ್ದರು. ಯಾವ ಚಿತ್ರ ಮಾಡುತ್ತಾರೆ ಎಂದು ಮಾತ್ರ ಅವರು ಈವರೆಗೂ ಹೇಳಿಲ್ಲ. ಇದನ್ನೂ ಓದಿ : ಕಂಠೀರವ ಸ್ಟುಡಿಯೋ ಆವರಣದಲ್ಲಿ 14 ಅಡಿ ಎತ್ತರದ ಅಂಬರೀಶ್ ಪ್ರತಿಮೆ

     

    ಸುದೀಪ್ ಅವರ ಗರಡಿಯಲ್ಲೇ ಸದಾ ಇರುವ ನಟ ಪ್ರದೀಪ್, ಈ ವಿಷಯ ಕುರಿತಾಗಿ ಸುದೀಪ್ ಅವರಿಗೆ ನೇರವಾಗಿ ಪ್ರಶ್ನೆಯನ್ನು ಕೇಳಿದ್ದಾರೆ. ನೀವು ಈಗ ಮಾಡಿರುವ ಟ್ವಿಟ್.. ವಿಕ್ರಾಂತ್ ರೋಣ 2 ಅಥವಾ ಬಿಲ್ಲ ರಂಗ ಬಾಷಾ? ಎಂದು ಕೇಳಿದ್ದಾರೆ. ಅವರ ಈ ಪ್ರಶ್ನೆಯೇ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

    ಸುದೀಪ್ ಅವರ ಆಪ್ತರು ಹೇಳುವ ಪ್ರಕಾರ, ಇನ್ನೂ ಎರಡು ಸಿನಿಮಾ ಮಾಡುವಷ್ಟ ಕಥೆ ವಿಕ್ರಾಂತ್ ರೋಣದಲ್ಲಿ ಇದೆಯಂತೆ. ಅಲ್ಲದೇ, ಮುಂದಿನ ಭಾಗಕ್ಕೆ ಬೇಕಾದ ಒಂದಷ್ಟು ದೃಶ್ಯಗಳನ್ನು ಈಗಾಗಲೇ ಪ್ಲ್ಯಾನ್ ಮಾಡಲಾಗಿದೆಯಂತೆ. ಹೀಗಾಗಿ ವಿಕ್ರಾಂತ್ ರೋಣ ಭಾಗ 2 ಬಂದರೂ ಅಚ್ಚರಿ ಪಡಬೇಕಿಲ್ಲ.