Tag: ವಿಕ್ರಂ ಲ್ಯಾಂಡರ್

  • ಇಸ್ರೋ ಅಧ್ಯಕ್ಷರಿಗೆ ವಿಕ್ರಂ ಲ್ಯಾಂಡರ್ ಗಿಫ್ಟ್ ನೀಡಿದ ಪುಟ್ಟ ಬಾಲಕ

    ಇಸ್ರೋ ಅಧ್ಯಕ್ಷರಿಗೆ ವಿಕ್ರಂ ಲ್ಯಾಂಡರ್ ಗಿಫ್ಟ್ ನೀಡಿದ ಪುಟ್ಟ ಬಾಲಕ

    ಬೆಂಗಳೂರು: ಚಂದ್ರಯಾನ-3 (Chandrayaan-3) ಯಶಸ್ವಿಯಾದ ಹಿನ್ನೆಲೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮುಖ್ಯಸ್ಥ ಎಸ್. ಸೋಮನಾಥ್ (S.Somanath)ಅವರಿಗೆ ಪುಟ್ಟ ಪೋರನೋರ್ವ ವಿಕ್ರಂ ಲ್ಯಾಂಡರ್ (Vikram Lander) ಮಾದರಿಯನ್ನು ಗಿಫ್ಟ್ (Gift) ಕೊಡುವ ಮೂಲಕ ಅಭಿನಂದನೆ ಸಲ್ಲಿಸಿದ್ದು, ಈ ಚಿತ್ರ ಎಲ್ಲರ ಮನಗೆದ್ದಿದೆ.

    ಆಗಸ್ಟ್ 23ರಂದು ಚಂದ್ರಯಾನ-3 ಮಿಷನ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಿದ್ದು, ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವ ದಿನ ಅದಾಗಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಮಾಡಿದ ಮೊದಲ ದೇಶ ಎಂಬ ಕೀರ್ತಿ ಭಾರತಕ್ಕೆ ಸಂದಿದೆ. ಇಸ್ರೋ ವಿಜ್ಞಾನಿಗಳ ಈ ಅಭೂತಪೂರ್ವ ಕಾರ್ಯಕ್ಕೆ ಗಣ್ಯಾತಿಗಣ್ಯರಿಂದ ಹಿಡಿದು ಇಡೀ ವಿಶ್ವವೇ ಅಭಿನಂದನೆ ಸಲ್ಲಿಸಿತ್ತು. ಇದನ್ನೂ ಓದಿ: ಹೆಚ್‌ಡಿಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ – ಅಭಿಮಾನಿಯಿಂದ ಕುಂಕುಮ ಅಕ್ಷತೆ ಸ್ವೀಕರಿಸಿದ ಮಾಜಿ ಸಿಎಂ

    ಅದೇ ರೀತಿ ಈ ಪುಟ್ಟ ಬಾಲಕ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ವಿಕ್ರಂ ಲ್ಯಾಂಡರ್‌ನ ಮಾದರಿಯನ್ನು ರಚಿಸಿದ್ದು, ಎಲ್ಲರ ಪರವಾಗಿ ಇಸ್ರೋ ಅಧ್ಯಕ್ಷರಿಗೆ ನೀಡಿದ್ದಾನೆ. ಇಸ್ರೋ ವಿಜ್ಞಾನಿ ಪಿವಿ ವೆಂಕಟಕೃಷ್ಣನ್ ಅವರು ಟ್ವಿಟ್ಟರ್‌ನಲ್ಲಿ ಈ ಸುಂದರ ಕ್ಷಣದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದು, ಬಾಲಕ ಎಸ್ ಸೋಮನಾಥ್ ಅವರಿಗೆ ಗಿಫ್ಟ್ ನೀಡುತ್ತಿರುವ ಚಿತ್ರವನ್ನು ಸಹಾ ಹಂಚಿಕೊಂಡಿದ್ದಾರೆ. ಈ ಕ್ಯೂಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಮನಗೆದ್ದಿದೆ. ಇದನ್ನೂ ಓದಿ: ಮಹಿಳೆಯ ಮೇಲೆ ಅತ್ಯಾಚಾರ ಆರೋಪ- ತೆಲಂಗಾಣ ಕಾಂಗ್ರೆಸ್ ನಾಯಕನಿಗೆ ನೋಟಿಸ್

    ಸೆ.2ರಂದು ಇಸ್ರೋ ತನ್ನ ಸೌರ ಮಿಷನ್ ಆದಿತ್ಯ ಎಲ್-1 ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಿದೆ. ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಮಿಷನ್ ಇದಾಗಿದೆ. ಈ ಸೋಲಾರ್ ಮಿಷನ್‌ಗೆ ಸುಮಾರು 300 ಕೋಟಿ ರೂ. ವೆಚ್ಚವಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ: ಎಂ.ಕೆ ಸ್ಟಾಲಿನ್ ಪುತ್ರನಿಂದ ವಿವಾದಾತ್ಮಕ ಹೇಳಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Chandrayaan-3: ‘ಸ್ಮೈಲ್ ಪ್ಲೀಸ್’ – ವಿಕ್ರಂನ ಫೋಟೋ ಕ್ಲಿಕ್ಕಿಸಿದ ಪ್ರಗ್ಯಾನ್

    Chandrayaan-3: ‘ಸ್ಮೈಲ್ ಪ್ಲೀಸ್’ – ವಿಕ್ರಂನ ಫೋಟೋ ಕ್ಲಿಕ್ಕಿಸಿದ ಪ್ರಗ್ಯಾನ್

    ನವದೆಹಲಿ: ಭಾರತದ ಹೆಮ್ಮೆಯ ಚಂದ್ರಯಾನ-3 (Chandrayaan-3) ಯಶಸ್ವಿಯಾಗಿ ಚಂದ್ರನ (Moon) ದಕ್ಷಿಣ ಧ್ರುವದಲ್ಲಿ ಇಳಿದು ತನ್ನ ಕಾರ್ಯಾಚರಣೆ ಪ್ರಾರಂಭಿಸಿದೆ. ಚಂದ್ರನ ಮೇಲ್ಮೈಯಲ್ಲಿ ಅನ್ವೇಷಣೆ ನಡೆಸುತ್ತಿರುವ ಚಂದ್ರಯಾನ-3 ಮಿಷನ್‌ನ ಪೋಟೋಗಳನ್ನು ಇಸ್ರೋ (ISRO) ನಿರಂತರವಾಗಿ ಹಂಚಿಕೊಳ್ಳುತ್ತಿದೆ.

    ಬುಧವಾರ ಬೆಳಗ್ಗೆ ಚಂದ್ರಯಾನ ಮಿಷನ್‌ನ ಪ್ರಗ್ಯಾನ್ ರೋವರ್ (Pragyan Rover) ವಿಕ್ರಂ ಲ್ಯಾಂಡರ್‌ನ (Vikram Lander) ಚಿತ್ರವನ್ನು ಕ್ಲಿಕ್ಕಿಸಿದೆ. ಈ ಚಿತ್ರವನ್ನು ಇಸ್ರೋ ತನ್ನ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೋ, ‘ಸ್ಮೈಲ್ ಪ್ಲೀಸ್!’ ಇಂದು ಬೆಳಗ್ಗೆ ರೋವರ್ ವಿಕ್ರಮ್ ಲ್ಯಾಂಡರ್‌ನ ಚಿತ್ರವನ್ನು ಕ್ಲಿಕ್ಕಿಸಿದೆ. ರೋವರ್‌ನಲ್ಲಿನ ನ್ಯಾವಿಗೇಷನ್ ಕ್ಯಾಮೆರಾದಿಂದ ಮಿಷನ್‌ನ ಚಿತ್ರವನ್ನು ತೆಗೆಯಲಾಗಿದೆ. ಚಂದ್ರಯಾನ-3 ಮಿಷನ್‌ಗಾಗಿ ನ್ಯಾವಿಗೇಷನ್ ಕ್ಯಾಮೆರಾಗಳನ್ನು ಲ್ಯಾಬೊರೇಟರಿ ಫಾರ್ ಎಲೆಕ್ಟ್ರೋ ಆಪ್ಟಿಕ್ಸ್ ಸಿಸ್ಟಮ್ಸ್ (LEOS) ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ ಪತ್ತೆ ಹಚ್ಚಿದ ಚಂದ್ರಯಾನ-3

    ಚಂದ್ರನ ಅಂಗಳದಲ್ಲಿ ಈಗಾಗಲೇ ಚಂದ್ರಯಾನ-3 ಮಿಷನ್ 5 ದಿನಗಳ ಕಾರ್ಯಾಚರಣೆಯನ್ನು ನಡೆಸಿದೆ. ಈ ಕಾರ್ಯಾಚರಣೆ 14 ದಿನಗಳೊಳಗೆ ಮುಕ್ತಾಯಗೊಳಿಸಬೇಕಿದೆ. ಮಂಗಳವಾರ ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ ಇರುವುದು ದೃಢಪಟ್ಟಿದೆ ಎಂದು ಇಸ್ರೋ ತಿಳಿಸಿದೆ. ಇದನ್ನೂ ಓದಿ: ಹಲವು ವರ್ಷಗಳ ಹೆತ್ತವರ ಕನಸನ್ನು ಸಾಕಾರಗೊಳಿಸಿದ್ದೀರಿ- ಆನಂದ್ ಮಹೀಂದ್ರಾಗೆ ಪ್ರಜ್ಞಾನಂದ ಥ್ಯಾಂಕ್ಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ʼಶಿವಶಕ್ತಿʼ ನಾಮಕರಣ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ, ಹೊರಗಿನ ಹುಡುಕಾಟಕ್ಕೆ ವಿಜ್ಞಾನವಾದರೆ ಅಂತರಂಗಕ್ಕೆ ಆಧ್ಯಾತ್ಮ: ಇಸ್ರೋ ಅಧ್ಯಕ್ಷ

    ʼಶಿವಶಕ್ತಿʼ ನಾಮಕರಣ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ, ಹೊರಗಿನ ಹುಡುಕಾಟಕ್ಕೆ ವಿಜ್ಞಾನವಾದರೆ ಅಂತರಂಗಕ್ಕೆ ಆಧ್ಯಾತ್ಮ: ಇಸ್ರೋ ಅಧ್ಯಕ್ಷ

    ತಿರುವನಂತಪುರಂ: ವಿಕ್ರಂ ಲ್ಯಾಂಡರ್‌ (Vikram Lander) ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಸ್ಥಳವನ್ನು ಶಿವಶಕ್ತಿ ಪಾಯಿಂಟ್‌ (Shivashakti Point) ಎಂದು ಪ್ರಧಾನಿ ಮೋದಿ ನಾಮಕರಣ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಇಸ್ರೋ (ISRO) ಅಧ್ಯಕ್ಷ ಸೋಮನಾಥ್‌ (Somanath) ಹೇಳಿದ್ದಾರೆ.

    ಚಂದ್ರಯಾನ-3 (Chandrayaan-3) ಯಶಸ್ವಿಯಾದ ಬಳಿಕ ಕೇರಳದ ತಿರುವನಂತಪುರಂನಲ್ಲಿರುವ ಪೌರ್ಣಮಿಕಾವು-ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಸೋಮನಾಥ್‌ ಪ್ರಾರ್ಥನೆ ಸಲ್ಲಿಸಿದರು.

    ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, ವಿಕ್ರಂ ಲ್ಯಾಂಡರ್‌ ಚಂದ್ರನನ್ನು ಸ್ಪರ್ಶಿಸಿದ ಜಾಗಕ್ಕೆ ‘ಶಿವಶಕ್ತಿ’ ಎಂದು ನಾಮಕರಣ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಆ ಸ್ಥಳಕ್ಕೆ ಹೆಸರಿಡುವ ಹಕ್ಕು ರಾಷ್ಟ್ರಕ್ಕೆ ಇದೆ ಎಂದರು. ಇದನ್ನೂ ಓದಿ: ಚಂದ್ರಲೋಕದಲ್ಲಿ ಜೈ ಹಿಂದ್‌ – ಮೊದಲ ಬಾರಿಗೆ ತಾಪಮಾನ ಪರೀಕ್ಷೆ

    ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನಮಗೆಲ್ಲರಿಗೂ ಸರಿಹೊಂದುವ ರೀತಿಯಲ್ಲಿ ಶಿವಶಕ್ತಿ ಅರ್ಥವನ್ನು ವಿವರಿಸಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಾನು ಭಾವಿಸುತ್ತೇನೆ. ಚಂದ್ರಯಾನ–2 ಪತನವಾಗಿದ್ದ ಸ್ಥಳವನ್ನು ‘ತಿರಂಗಾ ಪಾಯಿಂಟ್‌ʼ ಎಂದು ಹೆಸರನ್ನು ಇರಿಸಿದ್ದಾರೆ. ಎರಡೂ ಭಾರತೀಯ ಧ್ವನಿಯ ಹೆಸರುಗಳಾಗಿವೆ. ನಾವು ಏನು ಮಾಡುತ್ತಿದ್ದೇವೆ ಎಂಬುದರ ಮಹತ್ವ ನಮಗೆ ತಿಳಿದಿರಬೇಕು  ಎಂದು ಹೇಳಿದರು.

    ನಾನೊಬ್ಬ ಅನ್ವೇಷಕ. ನಾನು ಚಂದ್ರನನ್ನು ಅನ್ವೇಷಿಸುತ್ತೇನೆ. ಆಂತರಂಗದ ಜಾಗವನ್ನು ಅನ್ವೇಷಿಸುತ್ತೇನೆ. ಹೊರಗಿನ ಹುಡುಕಾಟಕ್ಕೆ ವಿಜ್ಞಾನ. ಅಂತರಂಗದ ಹುಡುಕಾಟಕ್ಕೆ ಆಧ್ಯಾತ್ಮ. ನಾನು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡುತ್ತೇನೆ ಮತ್ತು ಅನೇಕ ಗ್ರಂಥಗಳನ್ನು ಓದುತ್ತೇನೆ. ಈ ಬ್ರಹ್ಮಾಂಡದಲ್ಲಿ ನಮ್ಮ ಅಸ್ತಿತ್ವ ಮತ್ತು ನಮ್ಮ ಪ್ರಯಾಣದ ಅರ್ಥವನ್ನು ಕಂಡುಹಿಡಿಯಲು ನಾನು ಪ್ರಯತ್ನಿಸುತ್ತೇನೆ. ಇದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಹೊರಗಡೆ ವಿಜ್ಞಾನ ಮಾಡಿದರೆ ಅಂತರಂಗಕ್ಕೆ ದೇವಸ್ಥಾನಗಳಿಗೆ ಬರುತ್ತೇನೆ ಎಂದು ಹೇಳಿದರು.

    ಮಿಷನ್‌ನ ಪ್ರಸ್ತುತ ಸ್ಥಿತಿಯ ಬಗ್ಗೆ ಕೇಳಿದ್ದಕ್ಕೆ, ಎಲ್ಲವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಚಂದ್ರಯಾನ 3, ಲ್ಯಾಂಡರ್, ರೋವರ್ ತುಂಬಾ ಆರೋಗ್ಯಕರವಾಗಿದ್ದು, ಬೋರ್ಡ್‌ನಲ್ಲಿರುವ ಎಲ್ಲಾ ಐದು ಉಪಕರಣಗಳನ್ನು ಸ್ವಿಚ್ ಆನ್ ಮಾಡಲಾಗಿದೆ. ಇವುಗಳು ಸುಂದರವಾದ ಡೇಟಾವನ್ನು ನೀಡುತ್ತಿದೆ. ಇನ್ನೂ ಹತ್ತು ದಿನಗಳು ಉಳಿದಿವೆ. ವಿವಿಧ ವಿಧಾನಗಳ ಸಂಪೂರ್ಣ ಸಾಮರ್ಥ್ಯದೊಂದಿಗೆ ನಾವು ಎಲ್ಲಾ ಪ್ರಯೋಗಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ತಿಳಿಸಿದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರಲೋಕದಲ್ಲಿ ಜೈ ಹಿಂದ್‌ – ಮೊದಲ ಬಾರಿಗೆ ತಾಪಮಾನ ಪರೀಕ್ಷೆ

    ಚಂದ್ರಲೋಕದಲ್ಲಿ ಜೈ ಹಿಂದ್‌ – ಮೊದಲ ಬಾರಿಗೆ ತಾಪಮಾನ ಪರೀಕ್ಷೆ

    – ಗ್ರಾಫ್ ಚಿತ್ರವನ್ನು ಹಂಚಿಕೊಂಡ ಇಸ್ರೋ

    ಬೆಂಗಳೂರು: ಬಾಹ್ಯಾಕಾಶ ಸಂಶೋಧನೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಚಂದ್ರನ ಮಣ್ಣಿನ ತಾಪಮಾನ ಪತ್ತೆ ಹಚ್ಚಲಾಗಿದೆ. ಭಾರತದ ಚಂದ್ರಯಾನ 3 ಯೋಜನೆಯ ಮೂಲಕ ದಕ್ಷಿಣ ಧ್ರುವ ತಲುಪಿರುವ ವಿಕ್ರಮ್ ಲ್ಯಾಂಡರ್ ತನ್ನ ChaSTE ಪೇಲೋಡ್‌ನ ಸಹಾಯದಿಂದ ಮಣ್ಣಿನ ಅಧ್ಯಯನ ಆರಂಭಿಸಿದೆ.

    ಆಗಸ್ಟ್ 23 ರಂದು ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿತ್ತು. ಇದಾದ ನಾಲ್ಕು ದಿನಗಳ ಬಳಿಕ ವೈಜ್ಞಾನಿಕ ಪ್ರಯೋಗಗಳ ಮಾಹಿತಿ ಲಭ್ಯವಾಗುತ್ತಿದೆ. ChaSTE (Chandra’s Surface Thermophysical Experiment) ಪೇಲೋಡ್ ಚಂದ್ರನ ಭೂಮಿಯನ್ನು 10 ಸೆಂಟಿ ಮೀಟರ್ ಕೊರೆದು ಪರೀಕ್ಷೆ ನಡೆಸಿದ್ದು, – 10 ಡಿಗ್ರಿಯಿಂದ 60 ಡಿಗ್ರಿ ತಾಪಮಾನ ಇದೆ ಎಂದು ತಿಳಿಸಿದೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಚಂದ್ರಯಾನ-3 ನೌಕೆ ಸೆರೆ ಹಿಡಿದ ಮೊದಲ ಫೋಟೋ ಉಡುಗೊರೆ

    ಚಂದ್ರನ ಮೇಲ್ಮೈಯ ಉಷ್ಣ ವರ್ತನೆಯನ್ನು ಅರ್ಥಮಾಡಿಕೊಳ್ಳಲು ChaSTE ಚಂದ್ರನ ಮೇಲ್ಮೈ ಮೇಲೆ ಥರ್ಮೋಫಿಸಿಕಲ್ ಪ್ರಯೋಗ ನಡೆಸಿದೆ ಎಂದು ಟ್ವೀಟ್‌ನಲ್ಲಿ ಇಸ್ರೋ ವಿವರಿಸಿದ್ದು, ಗ್ರಾಫ್ ಚಿತ್ರಣವನ್ನು ಹಂಚಿಕೊಂಡಿದೆ. ತನಿಖೆಗೆ 10 ಪ್ರತ್ಯೇಕ ತಾಪಮಾನ ಸಂವೇದಕಗಳನ್ನು ಅಳವಡಿಸಲಾಗಿದೆ ಎಂದು ಟ್ವೀಟ್ ಹೇಳಿದೆ. ಅಹಮದಾಬಾದ್‌ನ ಭೌತಿಕ ಸಂಶೋಧನಾ ಪ್ರಯೋಗಾಲಯ (PRL) ಸಹಯೋಗದೊಂದಿಗೆ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯ (SPL) ನೇತೃತ್ವದ ತಂಡವು ಪೇಲೋಡ್ ಅನ್ನು ಅಭಿವೃದ್ಧಿಪಡಿಸಿದೆ. ಇದನ್ನೂ ಓದಿ: ಚಂದ್ರಯಾನ ಸಂಭ್ರಮಾಚರಣೆ ಮಾಡಿದವರ ಮೇಲೆ ಕಾಶ್ಮೀರಿ ವಿದ್ಯಾರ್ಥಿಗಳಿಂದ ಹಲ್ಲೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Chandrayaan-3 ಲ್ಯಾಂಡರ್‌ನಿಂದ ಚಂದ್ರನ ಮೇಲೆ ಇಳಿಯುತ್ತಿರುವ ರೋವರ್ – ವೀಡಿಯೋ ರಿಲೀಸ್ ಮಾಡಿದ ಇಸ್ರೋ

    Chandrayaan-3 ಲ್ಯಾಂಡರ್‌ನಿಂದ ಚಂದ್ರನ ಮೇಲೆ ಇಳಿಯುತ್ತಿರುವ ರೋವರ್ – ವೀಡಿಯೋ ರಿಲೀಸ್ ಮಾಡಿದ ಇಸ್ರೋ

    ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶುಕ್ರವಾರ ಚಂದ್ರಯಾನ-3 (Chandrayaan-3) ರೋವರ್ ಪ್ರಗ್ಯಾನ್ (Rover Pragyaan), ವಿಕ್ರಂ ಲ್ಯಾಂಡರ್‌ನಿಂದ (Vikram Lander) ಚಂದ್ರನ (Moon) ಮೇಲೆ ಇಳಿಯುತ್ತಿರುವ ಸಂದರ್ಭದ ವೀಡಿಯೋವನ್ನು ಹಂಚಿಕೊಂಡಿದೆ.

    ಟ್ವಿಟ್ಟರ್‌ನಲ್ಲಿ ವೀಡಿಯೋವನ್ನು ಹಂಚಿಕೊಂಡಿರುವ ಇಸ್ರೋ, ಚಂದ್ರಯಾನ-3 ರೋವರ್, ಲ್ಯಾಂಡರ್‌ನಿಂದ ಚಂದ್ರ ಮೇಲ್ಮೈಗೆ ಹೇಗೆ ಚಲಿಸಿತು ಎಂಬ ದೃಶ್ಯ ಇಲ್ಲಿದೆ ಎಂದು ಬರೆದಿದೆ. ಇದನ್ನೂ ಓದಿ: ಭಾರತದ ಚಂದ್ರಯಾನ-3 ಯಶಸ್ಸಿಗೆ ವಿಶ್ವಸಂಸ್ಥೆಯಲ್ಲಿ ಸಂಭ್ರಮಾಚರಣೆ

    ಚಂದ್ರಯಾನ-3 ಬುಧವಾರ ಸಂಜೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ನಡೆಸಿತು. ಭಾರತ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿರುವ 4ನೇ ದೇಶವಾಗಿದೆ. ಮಾತ್ರವಲ್ಲದೇ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿರುವ ಮೊದಲ ನೌಕೆಯಾಗಿದೆ. ಇದನ್ನೂ ಓದಿ: KRSನಲ್ಲಿ ಕುಸಿದ ನೀರಿನ ಮಟ್ಟ – ಮಳೆ ಬಾರದಿದ್ರೆ ವರ್ಷಾಂತ್ಯಕ್ಕೆ ಕುಡಿಯುವ ನೀರಿಗೂ ತತ್ವಾರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದ ಚಂದ್ರಯಾನ-3 ಯಶಸ್ಸಿಗೆ ವಿಶ್ವಸಂಸ್ಥೆಯಲ್ಲಿ ಸಂಭ್ರಮಾಚರಣೆ

    ಭಾರತದ ಚಂದ್ರಯಾನ-3 ಯಶಸ್ಸಿಗೆ ವಿಶ್ವಸಂಸ್ಥೆಯಲ್ಲಿ ಸಂಭ್ರಮಾಚರಣೆ

    ನ್ಯೂಯಾರ್ಕ್: ಭಾರತದ (India) ಹೆಮ್ಮೆಯ ಚಂದ್ರಯಾನ-3 (Chandrayaan-3) ಮಿಷನ್ ಯಶಸ್ವಿಯಾದ ಹಿನ್ನೆಲೆ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಮಿಷನ್ (India’s Permanent Mission To UN) ಶುಕ್ರವಾರ ಸಂಭ್ರಮಾಚರಣೆ ಮಾಡಿದೆ.

    ಚಂದ್ರಯಾನ-3 ಮಿಷನ್‌ನ ಯಶಸ್ವಿಯನ್ನು ಗುರುತಿಸುತ್ತಾ ನಾವು ನ್ಯೂಯಾರ್ಕ್‌ನಲ್ಲಿರುವ ಖಾಯಂ ಮಿಷನ್‌ಗಳಿಂದ ನಮ್ಮ ಸಹೋದ್ಯೋಗಿಗಳು ಒಟ್ಟಾಗಿದ್ದೇವೆ. ಈ ಸಂದರ್ಭದಲ್ಲಿ ನಿಮ್ಮ ಉಪಸ್ಥಿತಿ ಹಾಗೂ ಅಚಲ ಬೆಂಬಲಕ್ಕಾಗಿ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಭಾರತೀಯ ಖಾಯಂ ಮಿಷನ್ ಟ್ವಿಟ್ಟರ್‌ನಲ್ಲಿ ವಿಶ್ವಸಂಸ್ಥೆಗೆ ತಿಳಿಸಿದೆ.

    ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್, ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿರುವುದು ಐತಿಹಾಸಿಕ ಕ್ಷಣವಾಗಿದೆ. ಭಾರತದ ಚಂದ್ರಯಾನ-3 ಮಿಷನ್ ತನ್ನ ವಿಕ್ರಮ್ ಲ್ಯಾಂಡರ್ ಮಾಡ್ಯೂಲ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಸಿತು. ಇದರ ಗಮನಾರ್ಹ ಸಂಗತಿಯೆಂದರೆ, ವಿಶ್ವದ ಯಾವುದೇ ದೇಶ ಇಲ್ಲಿಯವರೆಗೆ ತಲುಪಲು ಸಾಧ್ಯವಾಗದ ಚಂದ್ರನ ದಕ್ಷಿಣ ಧ್ರುವವನ್ನು ಭಾರತ ತಲುಪಿದೆ ಎಂದು ಅವರು ಶ್ಲಾಘಿಸಿದರು.

    ಚಂದ್ರಯಾನ-3 ಮಿಷನ್ ಚಂದ್ರನ ಮೇಲೆ ಭಾರತದ ಉಪಸ್ಥಿತಿಯನ್ನು ಗುರುತಿಸುವುದು ಮಾತ್ರವಲ್ಲದೆ 1.4 ಶತಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಸಂಕೇತಿಸುತ್ತದೆ. ಅದಕ್ಕೂ ಮೀರಿ ನಾವು ಚಂದ್ರನ ದಕ್ಷಿಣ ಧ್ರುವದ ಬಳಿ ಇಟ್ಟಿರುವ ಹೆಜ್ಜೆ ಮಾನವೀಯತೆಗೆ ಐತಿಹಾಸಿಕ ಕ್ಷಣವಾಗಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ತಮಿಳುನಾಡಿಗೆ ಕೆಆರ್‌ಎಸ್ ನೀರು ಬಂದ್ – ಇಂದು ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ವಿಚಾರಣೆ

    ಚಂದ್ರಯಾನ-3 ಬುಧವಾರ ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ನಡೆಸಿತು. ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಮಿಷನ್‌ನ ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಇದನ್ನೂ ಓದಿ: ಚುನಾವಣಾ ಅಕ್ರಮ ಆರೋಪ – ಡೊನಾಲ್ಡ್ ಟ್ರಂಪ್ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರಯಾನ-3 ಸಕ್ಸಸ್ – ಇಸ್ರೋ ಅಧ್ಯಕ್ಷರಿಗೆ ಸೋನಿಯಾ ಗಾಂಧಿ ಪತ್ರ

    ಚಂದ್ರಯಾನ-3 ಸಕ್ಸಸ್ – ಇಸ್ರೋ ಅಧ್ಯಕ್ಷರಿಗೆ ಸೋನಿಯಾ ಗಾಂಧಿ ಪತ್ರ

    ನವದೆಹಲಿ: ಚಂದ್ರಯಾನ-3ರ ಯಶಸ್ಸಿನ ಕುರಿತು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ (S Somanath) ಅವರಿಗೆ ಕಾಂಗ್ರೆಸ್‌ನ (Congress) ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ (Sonia Gandhi) ಗುರುವಾರ ಪತ್ರ (Letter) ಬರೆಯುವ ಮೂಲಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

    ಬಾಹ್ಯಾಕಾಶ ಸಂಸ್ಥೆಯ ಅತ್ಯುತ್ತಮ ಸಾಮರ್ಥ್ಯಗಳನ್ನು ದಶಕಗಳಿಂದ ನಿರ್ಮಿಸಲಾಗಿದೆ ಮತ್ತು 1960ರ ದಶಕದಿಂದ ಆರಂಭಗೊಂಡ ಇಸ್ರೋ (ISRO) ಈಗ ಸ್ವಾವಲಂಬನೆ ಸಾಧಿಸಿರುವುದು ಅದರ ಯಶಸ್ಸಿಗೆ ಕೊಡುಗೆ ನೀಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರನ ಮೇಲೆ ನಡೆದಾಡಿದ ಪ್ರಗ್ಯಾನ್‌ ರೋವರ್‌ – ವಿಕ್ರಮ್‌ ಲ್ಯಾಂಡರ್‌ನಿಂದ ಹೊರಬರಲು ತಡವಾಗಿದ್ಯಾಕೆ?

    ಪತ್ರದಲ್ಲಿ ಏನಿದೆ?
    ಬುಧವಾರ ಸಂಜೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅದ್ಭುತ ಸಾಧನೆಯಿಂದ ನಾನು ಎಷ್ಟು ರೋಮಾಂಚನಗೊಂಡಿದ್ದೇನೆ ಎಂಬುದನ್ನು ತಿಳಿಸಲು ಪತ್ರ ಬರೆದಿದ್ದು, ಇದು ಎಲ್ಲಾ ಭಾರತೀಯರಿಗೆ, ವಿಶೇಷವಾಗಿ ಯುವ ಪೀಳಿಗೆಗೆ ಬಹಳ ಹೆಮ್ಮೆ ಮತ್ತು ಉತ್ಸಾಹದ ವಿಷಯವಾಗಿದೆ. ಇದನ್ನೂ ಓದಿ: ಚಂದ್ರಯಾನ-3 ರಾಷ್ಟ್ರದ ಮೆರವಣಿಗೆಯಲ್ಲಿ ಒಂದು ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ: ಡಿ.ವೈ ಚಂದ್ರಚೂಡ್

    ಇಡೀ ಇಸ್ರೋ ಭ್ರಾತೃತ್ವಕ್ಕೆ ನಾನು ಶುಭ ಹಾರೈಸುತ್ತೇನೆ ಮತ್ತು ಈ ಮಹತ್ವದ ಸಂದರ್ಭದಲ್ಲಿ ಅದರ ಪ್ರತಿಯೊಬ್ಬ ಸದಸ್ಯರಿಗೂ ನನ್ನ ಆತ್ಮೀಯ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಬರೆಯುವ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇದನ್ನೂ ಓದಿ: ಯುವ ಕನಸುಗಾರರ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ- ಚಂದ್ರಯಾನ ಯಶಸ್ಸಿಗೆ ರಾಗಾ ಶ್ಲಾಘನೆ

    ಭಾರತದ ಚಂದ್ರಯಾನ-3 ಮಿಷನ್ ಬುಧವಾರ ಸಂಜೆ 6:04ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಮಾಡಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆ ಗಳಿಸಿದೆ. ರಷ್ಯಾದ ಲ್ಯಾಂಡರ್ ಅಪಘಾತಕ್ಕೀಡಾದ ಒಂದು ವಾರದ ಬಳಿಕ ವಿಕ್ರಂ ಲ್ಯಾಂಡರ್ (Vikram Lander) ಚಂದ್ರನ ಮೇಲೆ ಲ್ಯಾಂಡ್ ಆಗಿದ್ದು, ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೇ ದೇಶ ಭಾರತವಾಗಿದೆ. ಇದನ್ನೂ ಓದಿ: ಚಂದ್ರಯಾನದ ಯಶಸ್ಸು ಸಂಭ್ರಮಿಸಿದ ಟೀಂ ಇಂಡಿಯಾ

    ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ಬಳಿಕ ಹಲವು ಗಂಟೆಗಳ ನಂತರ ವಿಕ್ರಮ್ ಲ್ಯಾಂಡರ್‌ನಿಂದ ರೋವರ್ ಹೊರಬಂದಿದ್ದು, ಚಂದ್ರನ ಮೇಲೆ ವೈಜ್ಞಾನಿಕ ಅಧ್ಯಯನ ಆರಂಭಿಸಿದೆ. ಇದನ್ನೂ ಓದಿ: Chandrayaan-3: ಚಂದ್ರನ ದಕ್ಷಿಣ ಧ್ರುವದಲ್ಲಿ ಹೆಜ್ಜೆ ಇಟ್ಟ ಮೊದಲ ದೇಶ ಭಾರತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆ.26ಕ್ಕೆ ಬೆಂಗಳೂರಿಗೆ ಮೋದಿ – ಇಸ್ರೋ ಕೇಂದ್ರ ಕಚೇರಿಗೆ ಭೇಟಿ

    ಆ.26ಕ್ಕೆ ಬೆಂಗಳೂರಿಗೆ ಮೋದಿ – ಇಸ್ರೋ ಕೇಂದ್ರ ಕಚೇರಿಗೆ ಭೇಟಿ

    ಬೆಂಗಳೂರು: ವಿಕ್ರಂ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಿ ಜಗತ್ತಿಗೆ ಸಾಧ್ಯವಾಗದ ಸಾಧನೆಯನ್ನು ಇದೀಗ ಇಸ್ರೋ (ISRO) ಮಾಡಿ ತೋರಿಸಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಸ್ಟ್ 26ರಂದು ಬೆಳಗ್ಗೆ ಬೆಂಗಳೂರಿಗೆ (Bengaluru) ಭೇಟಿ ನೀಡಲಿದ್ದು, ಇಸ್ರೋ ಕೇಂದ್ರ ಕಚೇರಿಗೆ ತೆರಳಿ ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ.

    ಬ್ರಿಕ್ಸ್ ಶೃಂಗಸಭೆ ಹಿನ್ನೆಲೆ ನರೇಂದ್ರ ಮೋದಿ ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಪ್ರವಾಸದಲ್ಲಿದ್ದಾರೆ. ಸಭೆಯ ನಡುವೆಯೂ ಮೋದಿ ಚಂದ್ರಯಾನ (Chandrayaan-3) ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಲೈವ್ ಆಗಿ ವೀಕ್ಷಿಸಿದ್ದರು. ಯಶಸ್ವಿ ಲ್ಯಾಂಡಿಂಗ್ ಬಳಿಕ ವಿಜ್ಞಾನಿಗಳನ್ನು ಅಭಿನಂದಿಸಿದ್ದರು.

    ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಬಳಿಕ ಇಸ್ರೋ ಅಧ್ಯಕ್ಷ ಸೋಮನಾಥ್ ಜೊತೆ ಮೋದಿ ದೂರವಾಣಿ ಮೂಲಕ ವೈಯಕ್ತಿಕವಾಗಿ ಮಾತುಕತೆ ನಡೆಸಿದ್ದರು. ಆದರೂ ಮೋದಿ ಇದೀಗ ಬೆಂಗಳೂರಿಗೆ ಬರಲಿದ್ದು, ಇಸ್ರೋ ಕಚೇರಿಗೆ ತೆರಳಿ ಅಭಿನಂದನೆ ಸಲ್ಲಿಸಲು ನಿರ್ಧರಿಸಿದ್ದಾರೆ. ಅತ್ಯುನ್ನತ ಸಾಧನೆ ಮಾಡಿದ ವಿಜ್ಞಾನಿಗಳಿಗೆ ಗೌರವ ನೀಡಲಿದ್ದಾರೆ. ಇದನ್ನೂ ಓದಿ: ಚಂದ್ರನ ಮೇಲೆ ಭಾರತದ ಮುದ್ರೆ – ಚಂದ್ರಯಾನ 3 ಸಕ್ಸಸ್ ಮುಂದೇನು?

    ಬುಧವಾರ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗುತ್ತಿದ್ದಂತೆಯೇ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಪ್ರಧಾನಿ ಮೋದಿ ಸಂಭ್ರಮ ಹಂಚಿಕೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ನಾನು ದಕ್ಷಿಣ ಆಫ್ರಿಕಾದಲ್ಲಿದ್ದೇನೆ. ಆದರೆ ನನ್ನ ಮನಸ್ಸು ಚಂದ್ರಯಾನ ಮೇಲಿತ್ತು. ಚಂದ್ರಯಾನ ಯಶಸ್ವಿ ಜನರಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ನಾನು ನಮ್ಮ ಜನರ ಖುಷಿಯ ಸಮಯದಲ್ಲಿ ಭಾಗಿಯಾಗಿದ್ದೇನೆ. ನಾನು ಇಸ್ರೋ ಮತ್ತು ದೇಶದ ವಿಜ್ಞಾನಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಚಂದ್ರಯಾನ- 3 ಯಶಸ್ಸಿನ ರೂವಾರಿಗಳು ಇವರೇ..

    
    

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುವ ಕನಸುಗಾರರ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ- ಚಂದ್ರಯಾನ ಯಶಸ್ಸಿಗೆ ರಾಗಾ ಶ್ಲಾಘನೆ

    ಯುವ ಕನಸುಗಾರರ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ- ಚಂದ್ರಯಾನ ಯಶಸ್ಸಿಗೆ ರಾಗಾ ಶ್ಲಾಘನೆ

    ನವದೆಹಲಿ: ಬಹುನಿರೀಕ್ಷಿತ ಚಂದ್ರಯಾನ-3 (Chandrayaan-3) ಚಂದ್ರನ ಮೇಲೆ ಸುರಕ್ಷಿತವಾಗಿ ಲ್ಯಾಂಡ್ ಆದ ಹಿನ್ನೆಲೆ ರಾಜಕಾರಣಿಗಳು ಸೇರಿದಂತೆ ಗಣ್ಯಾತಿಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ. ಅದೇ ರೀತಿ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಚಂದ್ರಯಾನ-3 ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದ್ದು, ಟ್ವೀಟ್ (Tweet) ಮೂಲಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

    ಚಂದ್ರಯಾನ-3 ವಿಕ್ರಂ ಲ್ಯಾಂಡರ್ (Vikram Lander) ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟು ಇಡೀ ದೇಶಕ್ಕೆ ಕೀರ್ತಿಯನ್ನು ತಂದಿದೆ. ಈ ಕುರಿತು ರಾಹುಲ್ ಗಾಂಧಿ ಟ್ವೀಟ್ ಮೂಲಕ ಇಸ್ರೋ (ISRO) ಸಂಸ್ಥೆಗೆ ಹಾಗೂ ವಿಜ್ಞಾನಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ. ಇದನ್ನೂ ಓದಿ: ಚಂದ್ರಯಾನದ ಯಶಸ್ಸು ಸಂಭ್ರಮಿಸಿದ ಟೀಂ ಇಂಡಿಯಾ

    ಟ್ವೀಟ್‌ನಲ್ಲಿ ಏನಿದೆ?
    ಇಂದಿನ ಪ್ರವರ್ತಕ ಸಾಧನೆಗಾಗಿ ಇಸ್ರೋ ತಂಡಕ್ಕೆ ಅಭಿನಂದನೆಗಳು. ನಮ್ಮ ವೈಜ್ಞಾನಿಕ ಸಮುದಾಯದ ದಶಕಗಳ ಪ್ರಚಂಡ ಚತುರತೆ ಮತ್ತು ಕಠಿಣ ಪರಿಶ್ರಮದ ಫಲವಾಗಿ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಿದೆ. ಇದನ್ನೂ ಓದಿ: ಚಂದ್ರಯಾನ-3 ಮಿಷನ್ ಸಕ್ಸಸ್: ಅಭಿನಂದನೆ ಸಲ್ಲಿಸಿದ ರಷ್ಯಾ ಬಾಹ್ಯಾಕಾಶ ಸಂಸ್ಥೆ

    1962ರಿಂದ ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ಹೊಸ ಎತ್ತರವನ್ನು ಅಳೆಯುವುದನ್ನು ಮುಂದುವರಿಸಿದೆ ಮತ್ತು ಯುವ ಕನಸುಗಾರರ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಶ್ಲಾಘಿಸಿ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವಿಕ್ರಮ್ ಲ್ಯಾಂಡ್ ಆದ ಬಳಿಕ ಮೊದಲ ಚಿತ್ರ ರಿಲೀಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರಯಾನ-3 ಮಿಷನ್ ಸಕ್ಸಸ್: ಅಭಿನಂದನೆ ಸಲ್ಲಿಸಿದ ರಷ್ಯಾ ಬಾಹ್ಯಾಕಾಶ ಸಂಸ್ಥೆ

    ಚಂದ್ರಯಾನ-3 ಮಿಷನ್ ಸಕ್ಸಸ್: ಅಭಿನಂದನೆ ಸಲ್ಲಿಸಿದ ರಷ್ಯಾ ಬಾಹ್ಯಾಕಾಶ ಸಂಸ್ಥೆ

    ಮಾಸ್ಕೋ: ಪ್ರತಿಯೊಬ್ಬ ಭಾರತೀಯ ಕಾತುರದಿಂದ ಕಾಯುತ್ತಿದ್ದ ಚಂದ್ರಯಾನ-3 (Chandrayaan-3) ವಿಕ್ರಂ ಲ್ಯಾಂಡರ್ (Vikram Lander) ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಿದ್ದು, ಈ ಐತಿಹಾಸಿಕ ಕ್ಷಣಕ್ಕೆ ರಷ್ಯಾದ ರೋಸ್ಕೋಸ್ಮಾಸ್ ಬಾಹ್ಯಾಕಾಶ ಸಂಸ್ಥೆ (Roscosmos Space Agency)  ಭಾರತವನ್ನು ಅಭಿನಂದಿಸಿದೆ.

    ಮಾಸ್ಕೋದ (Moscow) ಸ್ವಂತ ಮಿಷನ್ ಅಪಘಾತಕ್ಕೆ ಈಡಾದ ಬಳಿಕ ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ್ದಕ್ಕಾಗಿ ರಷ್ಯಾ ಬಾಹ್ಯಾಕಾಶ ಸಂಸ್ಥೆ ಭಾರತಕ್ಕೆ ಶುಭಾಶಯಗಳನ್ನು ಕೋರಿದೆ. ಇದನ್ನೂ ಓದಿ: ಚಂದ್ರಯಾನ- 3 ಸಕ್ಸಸ್: ಇಸ್ರೋಗೆ ಸಿದ್ದರಾಮಯ್ಯ, ಡಿಕೆಶಿ ಅಭಿನಂದನೆ

    ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ಭಾರತೀಯ ಸಹೋದ್ಯೋಗಿಗಳನ್ನು ರೋಸ್ಕೋಸ್ಮಾಸ್ ಅಭಿನಂದಿಸುತ್ತದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೇ ಚಂದ್ರನ ಪರಿಶೋಧನೆಯು ಇಡೀ ಮಾನವಕುಲಕ್ಕೆ ಮುಖ್ಯವಾಗಿದ್ದು, ಭವಿಷ್ಯದಲ್ಲಿ ಇದು ಬಾಹ್ಯಾಕಾಶದ ಆಳವಾದ ಮಾಸ್ಟರಿಂಗ್‌ಗೆ ವೇದಿಕೆಯಾಗಬಹುದು ಎಂದು ರೋಸ್ಕೋಸ್ಮಾಸ್ ಬಾಹ್ಯಾಕಾಶ ಸಂಸ್ಥೆ ಭಾರತವನ್ನು ಶ್ಲಾಘಿಸಿದೆ. ಇದನ್ನೂ ಓದಿ: ಚಂದ್ರಯಾನ-3 ಯಶಸ್ವಿ: ಇಸ್ರೋಗೆ ನಾಸಾ ಆಡಳಿತಾಧಿಕಾರಿ ಅಭಿನಂದನೆ

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]