Tag: ವಿಕ್ಟರಿ ವೆಂಕಟೇಶ್

  • ಸೆಟ್ಟೇರಿತು ಚಿರಂಜೀವಿ 157ನೇ ಸಿನಿಮಾ- ಕ್ಲಾಪ್ ಮಾಡಿ ಶುಭ ಹಾರೈಸಿದ ವಿಕ್ಟರಿ ವೆಂಕಟೇಶ್

    ಸೆಟ್ಟೇರಿತು ಚಿರಂಜೀವಿ 157ನೇ ಸಿನಿಮಾ- ಕ್ಲಾಪ್ ಮಾಡಿ ಶುಭ ಹಾರೈಸಿದ ವಿಕ್ಟರಿ ವೆಂಕಟೇಶ್

    ಮೆಗಾಸ್ಟಾರ್ ಚಿರಂಜೀವಿ ಹೊಸ ಸಿನಿಮಾ ಸೆಟ್ಟೇರಿದೆ. ಬಹುನಿರೀಕ್ಷಿತ ವಿಶ್ವಂಭರ ಸಿನಿಮಾ ರಿಲೀಸ್‌ಗೂ ಮುನ್ನವೇ ಹೊಸ ಚಿತ್ರಕ್ಕೆ ಚಿರಂಜೀವಿ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಅವರ ಮುಂದಿನ ಸಿನಿಮಾಗೆ ಖ್ಯಾತ ನಿರ್ದೇಶಕ ಅನಿಲ್‌ ರವಿಪುಡಿ ನಿರ್ದೇಶನ ಮಾಡ್ತಿದ್ದಾರೆ. ಇದನ್ನೂ ಓದಿ:ವಿಜಯ್‌ ಸೇತುಪತಿಗೆ ‘ಅಪ್ಪು’ ಚಿತ್ರದ ನಿರ್ದೇಶಕ ಆ್ಯಕ್ಷನ್ ಕಟ್- ಜೂನ್‌ನಿಂದ ಶೂಟಿಂಗ್‌ ಶುರು

    ಹೈದರಾಬಾದ್‌ನಲ್ಲಿ ಚಿತ್ರದ ಮುಹೂರ್ತ ಸಮಾರಂಭ ಜರುಗಿದೆ. ಚಿತ್ರಕ್ಕೆ ವಿಕ್ಟರಿ ವೆಂಕಟೇಶ್ ಕ್ಲ್ಯಾಪ್ ಮಾಡಿ ಶುಭಕೋರಿದ್ದಾರೆ. ನಿರ್ಮಾಪಕ ಅಲ್ಲು ಅರವಿಂದ್ ಕ್ಯಾಮೆರಾಗೆ ಚಾಲನೆ ನೀಡಿದರು. ಖ್ಯಾತ ನಿರ್ದೇಶಕ ಕೆ. ರಾಘವೇಂದ್ರ ಫಸ್ಟ್ ಶಾಟ್ ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಖ್ಯಾತ ನಿರ್ಮಾಪಕರಾದ ದಿಲ್ ರಾಜು ಹಾಗೂ ಸಿರೀಶ್ ಸ್ಕ್ರಿಪ್ಟ್ ಹಸ್ತಾಂತರಿಸಿದ್ದಾರೆ. ಮುಹೂರ್ತ ಸಮಾರಂಭದಲ್ಲಿ ನಿರ್ದೇಶಕರಾದ ಬಾಬಿ, ವಸಿಷ್ಠ, ಶ್ರೀಕಾಂತ್ ಒಡೆಲಾ, ಖ್ಯಾತ ಕಥೆಗಾರ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದನ್ನೂ ಓದಿ:ಯುಗಾದಿ ಹಬ್ಬದ ಹಿನ್ನೆಲೆ ಪತ್ನಿ ಜೊತೆ ಡಾಲಿ ಟೆಂಪಲ್ ರನ್

    ಚಿರಂಜೀವಿ ನಟನೆಯ 157ನೇ ಚಿತ್ರಕ್ಕೆ ನಿರ್ದೇಶಕ‌ ಅನಿಲ್ ರವಿಪುಡಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೂಲಕ ಮೆಗಾಸ್ಟಾರ್ ಅವರನ್ನು ಹೊಸ ಅವತಾರದಲ್ಲಿ ಪರಿಚಯಿಸಲು ರೆಡಿಯಾಗಿದ್ದಾರೆ. ಶಂಕರ್ ವರಪ್ರಸಾದ್ ಎಂಬ ಪಾತ್ರದಲ್ಲಿ ಚಿರಂಜೀವಿ ನಟಿಸಲಿದ್ದಾರೆ.‌‌ಅನಿಲ್ ರವಿಪುಡಿ ಮನರಂಜನೆಗೆ ಎಮೋಷನ್ ಟಚ್ ಕೊಟ್ಟು ಕಥೆ ರೂಪಿಸಿದ್ದಾರಂತೆ.

    ಶೈನ್ ಸ್ಕ್ರೀನ್‌ಗಳು ಮತ್ತು ಗೋಲ್ಡ್ ಬಾಕ್ಸ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ನಡಿ ಸಾಹು ಗರಪತಿ ಮತ್ತು ಸುಶ್ಮಿತಾ ಕೊನಿಡೇಲ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅರ್ಚನಾ ಪ್ರೆಸೆಂಟ್ ಮಾಡುತ್ತಿದ್ದಾರೆ. ಭೀಮ್ ಸಿಸಿರೋಲಿಯೋ ಸಂಗೀತ ನಿರ್ದೇಶನ, ತಮ್ಮಿರಾಜು ಸಂಕಲನ, ಸಮೀರ್ ರೆಡ್ಡಿ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ. ಶೀಘ್ರದಲ್ಲೇ ಚಿರಂಜೀವಿಯವರ 157 ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.

  • ‘ಸೈಂಧವ್’ ಬಳಗ ಮತ್ತೊಬ್ಬ ಸ್ಟಾರ್ : ತಮಿಳು ನಟ ಆರ್ಯ ಫಸ್ಟ್ ಲುಕ್ ರಿಲೀಸ್

    ‘ಸೈಂಧವ್’ ಬಳಗ ಮತ್ತೊಬ್ಬ ಸ್ಟಾರ್ : ತಮಿಳು ನಟ ಆರ್ಯ ಫಸ್ಟ್ ಲುಕ್ ರಿಲೀಸ್

    ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ (Victory Venkatesh) ನಟನೆಯ 75ನೇ ಪ್ಯಾನ್ ಇಂಡಿಯಾ ಸಿನಿಮಾ ‘ಸೈಂಧವ್’ (Saindhav) ಭಾರೀ ನಿರೀಕ್ಷೆ ಹೆಚ್ಚಿಸಿದೆ. ಶೈಲೇಶ್ ಕೋಲನು ಸಾರಥ್ಯದಲ್ಲಿ ಮೂಡಿ ಬರ್ತಿರುವ ಈ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಇತ್ತೀಚೆಗೆಷ್ಟೇ ಮುಕ್ತಾಯಗೊಂಡಿತ್ತು. 18 ದಿನದ ಕಾಲ ನಡೆದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ 8 ಪ್ರಮುಖ ಸ್ಟಾರ್ ಭಾಗಿಯಾಗಿದ್ದು, ದಕ್ಷಿಣ ಚಿತ್ರರಂಗದ ಖ್ಯಾತ ಸ್ಟಂಟ್ ಮಾಸ್ಟರ್ಸ್ ರಾಮ ಲಕ್ಷ್ಮಣ ಸಾಹಸ ನಿರ್ದೇಶನ ಮಾಡಿದ್ದಾರೆ.

    ಸ್ವಾತಂತ್ರ್ಯ ದಿನದ ಅಂಗವಾಗಿ 8 ಸ್ಟಾರ್ಸ್ ಒಳಗೊಂಡ ಸಣ್ಣ ವಿಡಿಯೋ ಝಲಕ್ ನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಇದೀಗ ಸೈಂಧವ್ ಚಿತ್ರತಂಡದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಮತ್ತೊಬ್ಬ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಸಿನಿಮಾ ಬಳಗ ಸೇರಿಕೊಂಡಿದ್ದಾರೆ. ತಮಿಳುನಟ ಆರ್ಯ (Arya) ಸೈಂಧವ್ ಭಾಗವಾಗಿದ್ದಾರೆ. ಅವ್ರ ಫಸ್ಟ್ ಲುಕ್ (First Look) ಅನಾವರಣಗೊಂಡಿದ್ದು, ಉದ್ದವಾದ ಕೂದಲು ಬಿಟ್ಟು ಸ್ಟೈಲೀಶ್ ಲುಕ್ ನಲ್ಲಿ ಮಿಂಚಿರುವ ಆರ್ಯ ಕೈಯಲ್ಲಿ ಗನ್ ಹಿಡಿದು ಹೆಜ್ಜೆ ಹಾಕ್ತಿರುವ ಪೋಸ್ಟರ್ ನೋಡುಗರನ್ನು ಇಂಪ್ರೆಸ್ ಮಾಡುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ದೊಡ್ಮನೆ ಆಟಕ್ಕೆ ಮುಹೂರ್ತ ಫಿಕ್ಸ್

    ನಿಹಾರಿಕಾ ಎಂಟರ್ ಟೈನ್ಮೆಂಟ್ ನಡಿ ವೆಂಕಟ್ ಬೋಯನಪಲ್ಲಿ ನಿರ್ಮಿಸುತ್ತಿರುವ ಸೈಂಧವ್ ಸಿನಿಮಾದಲ್ಲಿ ಶ್ರದ್ದಾ ಮನೋಜ್ಞಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಡಾ ರೇಣು ಪಾತ್ರದಲ್ಲಿ ರುಹಾನಿ ಶರ್ಮಾ ಮತ್ತು ಜಾಸ್ಮಿನ್ ಪಾತ್ರದಲ್ಲಿ ಆಂಡ್ರಿಯಾ ಜೆರೆಮಿಯಾ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಈ ಚಿತ್ರದ ಮೂಲಕ ಸೌತ್ ಸಿನಿರಂಗ ಪ್ರವೇಶಿಸಿದ್ದಾರೆ.

    ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿರುವ ಸೈಂಧವ್ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್ ಮಣಿಕಂದನ್ ಛಾಯಾಗ್ರಹಣ, ಗ್ಯಾರಿ ಬಿಎಚ್ ಸಂಕಲನ ಮತ್ತು ಅವಿನಾಶ್ ಕೊಲ್ಲ ನಿರ್ಮಾಣ ವಿನ್ಯಾಸ ಮಾಡಿದ್ದು, ಕಿಶೋರ್ ತಲ್ಲೂರ್ ಸಹ ನಿರ್ಮಾಪಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸೈಂಧವ್ ಸಿನಿಮಾವನ್ನು ಡಿಸೆಂಬರ್ 22 ರಂದು ಕ್ರಿಸ್ಮಸ್ ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ವಾತಂತ್ರ‍್ಯ ದಿನಕ್ಕೆ ವೆಂಕಟೇಶ್ ‘ಸೈಂಧವ್’ ಟೀಮ್‌ನಿಂದ ಸ್ಪೆಷಲ್ ಗಿಫ್ಟ್- ಡಿಸೆಂಬರ್‌ 22ಕ್ಕೆ ಸಿನಿಮಾ ರಿಲೀಸ್

    ಸ್ವಾತಂತ್ರ‍್ಯ ದಿನಕ್ಕೆ ವೆಂಕಟೇಶ್ ‘ಸೈಂಧವ್’ ಟೀಮ್‌ನಿಂದ ಸ್ಪೆಷಲ್ ಗಿಫ್ಟ್- ಡಿಸೆಂಬರ್‌ 22ಕ್ಕೆ ಸಿನಿಮಾ ರಿಲೀಸ್

    ಟಾಲಿವುಡ್ (Tollywood) ನಟ ವಿಕ್ಟರಿ ವೆಂಕಟೇಶ್ (Victory Venkatesh) ನಟನೆಯ 75ನೇ ಪ್ಯಾನ್ ಇಂಡಿಯಾ ಸಿನಿಮಾ ‘ಸೈಂಧವ್’ (Saindhav Film) ಭಾರೀ ನಿರೀಕ್ಷೆ ಹೆಚ್ಚಿಸಿದೆ. ಶೈಲೇಶ್ ಕೋಲನು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಇತ್ತೀಚೆಗೆಷ್ಟೇ ಮುಕ್ತಾಯಗೊಂಡಿತ್ತು. 18 ದಿನದ ಕಾಲ ನಡೆದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ 8 ಪ್ರಮುಖ ಸ್ಟಾರ್ ಭಾಗಿಯಾಗಿದ್ದು, ದಕ್ಷಿಣ ಚಿತ್ರರಂಗದ ಖ್ಯಾತ ಸ್ಟಂಟ್ ಮಾಸ್ಟರ್ಸ್ ರಾಮ ಲಕ್ಷ್ಮಣ ಸಾಹಸ ನಿರ್ದೇಶನ  ಮಾಡಿದ್ದಾರೆ.

    ಸ್ವಾತಂತ್ರ‍್ಯ ದಿನದ ಅಂಗವಾಗಿ 8 ಸ್ಟಾರ್ಸ್ ಒಳಗೊಂಡ ಸಣ್ಣ ವಿಡಿಯೋ ಝಲಕ್ ನ್ನು ಬಿಡುಗಡೆ ಮಾಡಲಾಗಿದೆ. ವೆಂಕಟೇಶ್, ನವಾಜುದ್ದೀನ್ ಸಿದ್ದಿಕಿ, ಶ್ರದ್ಧಾ ಶ್ರೀನಾಥ್ (Shradha Srinath), ರುಹಾನಿ ಶರ್ಮಾ, ಆಂಡ್ರಿಯಾ ಜೆರೆಮಿಯಾ, ಸಾರಾ ಮತ್ತು ಜಯಪ್ರಕಾಶ್ ಪಾತ್ರಗಳನ್ನು ಪರಿಚಯ ಮಾಡಲಾಗಿದೆ. ಎಲ್ಲಾ ಅದ್ಭುತ ಕಲಾವಿದರನ್ನು ಒಟ್ಟಿಗೆ ನೋಡುವುದೇ ಕಣ್ಣಿಗೆ ಹಬ್ಬ. ಇದನ್ನೂ ಓದಿ:ಶಕ್ತಿಧಾಮದಲ್ಲಿ ಮಕ್ಕಳ ಜೊತೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಶಿವಣ್ಣ

    ನಿಹಾರಿಕಾ ಎಂಟರ್ ಟೈನ್ಮೆಂಟ್ ನಡಿ ವೆಂಕಟ್ ಬೋಯನಪಲ್ಲಿ ನಿರ್ಮಿಸುತ್ತಿರುವ ‘ಸೈಂಧವ್’ ಸಿನಿಮಾದಲ್ಲಿ ಶ್ರದ್ದಾ ಮನೋಜ್ಞಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಡಾ ರೇಣು ಪಾತ್ರದಲ್ಲಿ ರುಹಾನಿ ಮತ್ತು ಜಾಸ್ಮಿನ್ ಪಾತ್ರದಲ್ಲಿ ಆಂಡ್ರಿಯಾ ಜೆರೆಮಿಯಾ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಈ ಚಿತ್ರದ ಮೂಲಕ ಸೌತ್ ಸಿನಿರಂಗ ಪ್ರವೇಶಿಸಿದ್ದಾರೆ.

    ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿರುವ ಸೈಂಧವ್ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್ ಮಣಿಕಂದನ್ ಛಾಯಾಗ್ರಹಣ, ಗ್ಯಾರಿ ಬಿಎಚ್ ಸಂಕಲನ ಮತ್ತು ಅವಿನಾಶ್ ಕೊಲ್ಲ ನಿರ್ಮಾಣದಲ್ಲಿ ವಿನ್ಯಾಸ ಮಾಡಿದ್ದು, ಕಿಶೋರ್ ತಲ್ಲೂರ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸೈಂಧವ್ ಸಿನಿಮಾವನ್ನು ಡಿಸೆಂಬರ್ 22 ರಂದು ಕ್ರಿಸ್ಮಸ್ ಹಬ್ಬದಂದು ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೈಂಧವ್ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ನವಾಜುದ್ದೀನ್ ಸಿದ್ದಿಕಿ

    ಸೈಂಧವ್ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ನವಾಜುದ್ದೀನ್ ಸಿದ್ದಿಕಿ

    ಬಾಲಿವುಡ್ ಕಂಡ ಅತ್ಯದ್ಭುತ ನಟರಲ್ಲಿ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಕೂಡ ಒಬ್ಬರು. ಯಾವುದೇ ಪಾತ್ರ ಕೊಟ್ಟರು‌ ಲೀಲಾಜಾಲವಾಗಿ ಅಭಿನಯಿಸುವ, ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದಿರುವ ಸಿದ್ದಿಕಿ ಸೈಂಧವ್ (Saindhav) ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟ್ರೀಯತ್ತ ಹೆಜ್ಜೆ ಇಟ್ಟಿದ್ದಾರೆ.

    ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ (Victory Venkatesh) ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಸೈಂಧವ್’. ಶೈಲೇಶ್ (Shailesh) ಕೋಲನು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ವಿಲನ್ ಆಗಿ ಬಣ್ಣ ಹಚ್ಚಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಕ್ಯಾರೆಕ್ಟರ್ ಪೋಸ್ಟರ್ ರಿಲೀಸ್ ಮಾಡಿದೆ. ವಿಕಾಸ್ ಮಲಿಕ್ ಎಂಬ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ,  ದುಬಾರಿ ಕಾರಿನ ಬಾನೆಟ್ ಮೇಲೆ ಕುಳಿತು ಬೀಡಿ ಸೇದುತ್ತಾ ಸಖತ್ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ.

    ಶ್ರದ್ಧಾ ಶ್ರೀನಾಥ್ ಮನೋಜ್ಞ ಎಂಬ ಪಾತ್ರದಲ್ಲಿ, ಡಾ ರೇಣು ಪಾತ್ರದಲ್ಲಿ ರುಹಾನಿ ಶರ್ಮಾ ಮತ್ತು ಜಾಸ್ಮಿನ್ ಪಾತ್ರದಲ್ಲಿ ಆಂಡ್ರಿಯಾ ಜೆರೆಮಿಯಾ ಕಾಣಿಸಿಕೊಂಡಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್ ಮಣಿಕಂದನ್ ಛಾಯಾಗ್ರಹಣ, ಗ್ಯಾರಿ ಬಿಎಚ್ ಸಂಕಲನ ಮತ್ತು ಅವಿನಾಶ್ ಕೊಲ್ಲಾ ನಿರ್ಮಾಣ ವಿನ್ಯಾಸ ಚಿತ್ರಕ್ಕಿದೆ. ಇದನ್ನೂ ಓದಿ:ಕಾಲೆಳೆದ ನಟಿಗೆ ಸ್ನೇಹದ ಹಸ್ತಚಾಚಿದ ರಶ್ಮಿಕಾ ಮಂದಣ್ಣ

    ನಿಹಾರಿಕಾ ಎಂಟರ್ಟೈನ್ಮೆಂಟ್ ಅಡಿ ವೆಂಕಟ್ ಬೋಯನಪಲ್ಲಿ ನಿರ್ಮಿಸುತ್ತಿರುವ ಸೈಂಧವ್‌ ಚಿತ್ರಕ್ಕೆ ಕಿಶೋರ್ ತಲ್ಲೂರ್ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಸೈಂಧವ ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು,  ಡಿಸೆಂಬರ್ 22 ರಂದು ಕ್ರಿಸ್ಮಸ್ ವಿಶ್ವಾದ್ಯಂತ ರಿಲೀಸ್ ಆಗಲಿದೆ.‌

  • ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ’ಯೂಟರ್ನ್’ ಬೆಡಗಿ ಶ್ರದ್ಧಾ ಶ್ರೀನಾಥ್

    ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ’ಯೂಟರ್ನ್’ ಬೆಡಗಿ ಶ್ರದ್ಧಾ ಶ್ರೀನಾಥ್

    ಯೂಟರ್ನ್ ಸಿನಿಮಾ ಮೂಲಕ ಕನ್ನಡ ಸಿನಿಪ್ರೇಕ್ಷಕರನ್ನು ರಂಜಿಸಿದ್ದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ (Shraddha Srinath) ಸದ್ಯ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಮಾಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಸಕ್ರಿಯರಾಗಿರುವ ಶ್ರದ್ಧಾ ಕೈ ತುಂಬಾ ಅವಕಾಶಗಳಿವೆ. ಇದೀಗ ಅವರು ಪ್ಯಾನ್ ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ನಟನೆಯ 75ನೇ ಪ್ಯಾನ್ ಇಂಡಿಯಾ ಸಿನಿಮಾ ‘ಸೈಂಧವ್’ ಭಾರೀ ನಿರೀಕ್ಷೆ ಹೆಚ್ಚಿಸಿದೆ. ಶೈಲೇಶ್ ಕೋಲನು ಸಾರಥ್ಯದಲ್ಲಿ ಮೂಡಿ ಬರ್ತಿರುವ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯ ವೈಜಾಗ್ ನಲ್ಲಿ ಎರಡನೇ ಹಂತದ ಶೂಟಿಂಗ್ ನಡೆಯುತ್ತಿದೆ. ನಿಹಾರಿಕಾ ಎಂಟರ್ ಟೈನ್ಮೆಂಟ್ ನಡಿ ವೆಂಕಟ್ ಬೋಯನಪಲ್ಲಿ ನಿರ್ಮಿಸುತ್ತಿರುವ ಸೈಂಧವ್ ಗೆ ಕನ್ನಡತಿ ಶ್ರದ್ಧಾ ಶ್ರೀನಾಥ್ ಎಂಟ್ರಿ ಕೊಟ್ಟಿದ್ದಾರೆ. ವಿಕ್ಟರಿಗೆ ವೆಂಕಟೇಶ್ ಗೆ ಜೋಡಿಯಾಗಿ ನಟಿಸ್ತಿರುವ ಮೂಗುತಿ ಸುಂದರಿಯ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ.

    ಸೈಂಧವ್ ಸಿನಿಮಾದಲ್ಲಿ ಶ್ರದ್ಧಾ ಮನೋಜ್ಞಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಅವರ ಫಸ್ಟ್ ಲುಕ್ ನೋಡುಗರ ಗಮನಸೆಳೆಯುತ್ತಿದೆ. ಸೀರೆಯುಟ್ಟು ಹೋಮ್ಲಿ ಲುಕ್ ಕಾಣಿಸಿಕೊಂಡಿರುವ ಶ್ರದ್ದಾ, ಕೈಯಲ್ಲಿ ಟಿಫನ್ ಬಾಕ್ಸ್ ಹಿಡಿದು ಗಂಭೀರ ಆಲೋಚನೆಯಲ್ಲಿ ತೊಡಗಿದ್ದಾರೆ. ಜೆರ್ಸಿ ಸಿನಿಮಾದಲ್ಲಿ ಅದ್ಭುತ ಅಭಿಯನದ ಪ್ರದರ್ಶಿಸಿದ್ದ ಶ್ರದ್ದಾ ಶ್ರೀನಾಥ್, ಸೈಂಧವ್ ಸಿನಿಮಾದಲ್ಲಿ ಮತ್ತೊಮ್ಮೆ ಎಲ್ಲರ ಗಮನಸೆಳೆಯಲಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಎದುರು ಅಬ್ಬರಿಸಲಿದ್ದಾರೆ ಸೈಫ್ ಅಲಿ ಖಾನ್

    ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಈ ಚಿತ್ರದ ಮೂಲಕ ಸೌತ್ ಸಿನಿರಂಗ ಪ್ರವೇಶಿಸಿದ್ದಾರೆ. ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿರುವ ಸೈಂಧವ್ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್ ಮಣಿಕಂದನ್ ಛಾಯಾಗ್ರಹಣ, ಗ್ಯಾರಿ ಬಿಎಚ್ ಸಂಕಲನ ಮತ್ತು ಅವಿನಾಶ್ ಕೊಲ್ಲ ನಿರ್ಮಾಣ ವಿನ್ಯಾಸ ಮಾಡಿದ್ದು, ಕಿಶೋರ್ ತಲ್ಲೂರ್ ಸಹ ನಿರ್ಮಾಪಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶೀಘ್ರದಲ್ಲೇ ಇತರ ಪಾತ್ರವರ್ಗ ರಿವೀಲ್ ಮಾಡಲಿರುವ ಚಿತ್ರತಂಡ, ಸೈಂಧವ್ ಸಿನಿಮಾವನ್ನು ಡಿಸೆಂಬರ್ 22 ರಂದು ಕ್ರಿಸ್ಮಸ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

  • ವಿಕ್ಟರಿ ವೆಂಕಟೇಶ್ ನಟನೆಯ ಎಪ್ಪತ್ತೈದನೇ ಸಿನಿಮಾ ಜನವರಿ 25ಕ್ಕೆ ಅನೌನ್ಸ್

    ವಿಕ್ಟರಿ ವೆಂಕಟೇಶ್ ನಟನೆಯ ಎಪ್ಪತ್ತೈದನೇ ಸಿನಿಮಾ ಜನವರಿ 25ಕ್ಕೆ ಅನೌನ್ಸ್

    ‘ಎಫ್ 3’ ಬ್ಲಾಕ್ ಬಸ್ಟರ್ ಹಿಟ್ ಬಳಿಕ ವಿಕ್ಟರಿ ವೆಂಕಟೇಶ್ (Victory Venkatesh) ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕರೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಹಿಟ್ ಸೀರೀಸ್ ನಿರ್ದೇಶಕ ಶೈಲೇಶ್ ಕೋಲನು (Shailesh Kola) ನಿರ್ದೇಶನದ ಸಿನಿಮಾದಲ್ಲಿ (New Movie) ವಿಕ್ಟರಿ ವೆಂಕಟೇಶ್ ನಟಿಸುತ್ತಿದ್ದು. ಈ ಚಿತ್ರ ವಿಕ್ಟರಿ ವೆಂಕಟೇಶ್ ಗೆ ತುಂಬಾ ಸ್ಪೆಶಲ್ ಸಿನಿಮಾವಾಗಿದ್ದು ಸಿನಿ ಕೆರಿಯರ್ ನ 75ನೇ ಸಿನಿಮಾ ಇದಾಗಿದೆ.

    ಜನವರಿ 25ರಂದು ವಿಕ್ಟರಿ ವೆಂಕಟೇಶ್ 75ನೇ ಸಿನಿಮಾ ಅನೌನ್ಸ್ ಆಗಲಿದೆ. ನಿಹಾರಿಕ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ವೆಂಕಟ್ ಬೋಯನಪಲ್ಲಿ ಈ ಚಿತ್ರವನ್ನು ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.  ನಿಹಾರಿಕ ಎಂಟರ್ಟೈನ್ಮೆಂಟ್ ಎರಡನೇ ಸಿನಿಮಾ ಇದಾಗಿದ್ದು, ಈ ಹಿಂದೆ ನಿರ್ಮಾಣ ಮಾಡಿದ್ದ ‘ಶ್ಯಾಮ್ ಸಿಂಗ ರಾಯ್’ ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಇದೀಗ ಮತ್ತೊಂದು ಬಿಗ್ ಬಜೆಟ್ ಸಿನಿಮಾವನ್ನು ವಿಕ್ಟರಿ ವೆಂಕಟೇಶ್ ಗೆ ನಿರ್ಮಾಣ ಮಾಡುತ್ತಿದೆ. ಇದನ್ನೂ ಓದಿ: ಜನವರಿ 27ಕ್ಕೆ ಮಂಸೋರೆ ನಿರ್ದೇಶನದ ‘19.20.21’ ಚಿತ್ರದ ಟ್ರೈಲರ್ ಬಿಡುಗಡೆ

    ಈಗಾಗಲೇ ಬಿಡುಗಡೆಯಾಗಿರುವ ಪ್ರಿ ಲುಕ್ ಪೋಸ್ಟರ್ ಕ್ಯೂರಿಯಾಸಿಟಿ ಹುಟ್ಟು ಹಾಕಿದ್ದು, ಜನವರಿ 25ರ ಅನೌನ್ಸ್ ಮೆಂಟ್ ಗಾಗಿ ಸಿನಿ ರಸಿಕರು ಕಾತುರದಿಂದ ಕಾಯುತ್ತಿದ್ದಾರೆ. ಶೈಲೇಶ್ ಕೊಲನು ವೆಂಕಟೇಶ್ ಗಾಗಿ ಸಕ್ಸಸ್ ಫುಲ್ ಸ್ಟೋರಿ ಮಾಡಿಕೊಂಡಿದ್ದು, ಸ್ಟಾರ್ ಕಲಾವಿದರು, ತಂತ್ರಜ್ಞರು ಚಿತ್ರದ ಭಾಗವಾಗಲಿದ್ದು, ಶೀಘ್ರದಲ್ಲೇ ಚಿತ್ರತಂಡ ಆ ಬಗ್ಗೆ ಅಪ್ಡೇಟ್ ನೀಡಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ಟಾರ್ ನಟನ ಮಗಳ ಜೊತೆ ಸಮಂತಾ ಮಾಜಿ ಪತಿ ನಾಗಚೈತನ್ಯ

    ಸ್ಟಾರ್ ನಟನ ಮಗಳ ಜೊತೆ ಸಮಂತಾ ಮಾಜಿ ಪತಿ ನಾಗಚೈತನ್ಯ

    ಮಂತಾ (Samantha) ಮತ್ತು ನಾಗಚೈತನ್ಯ (Nagachaitanya) ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಒಂದು ವರ್ಷವಾದರೂ ಕೂಡ ಸದಾ ಒಂದಲ್ಲಾ ಒಂದು ವಿಷ್ಯವಾಗಿ ನಾಗಚೈತನ್ಯ ಸುದ್ದಿಯಲ್ಲಿರುತ್ತಾರೆ. ಸಮಂತಾ ಜೊತೆಗಿನ ಡಿವೋರ್ಸ್ ನಂತರ ಶೋಭಿತಾ (Shobitha) ಜೊತೆ ಓಡಾಟ ಜಾಸ್ತಿಯಾಗಿತ್ತು. ಇದೀಗ ಸ್ಟಾರ್ ಹೀರೋ ಮಗಳ ಜೊತೆಯಿರುವ ನಾಗಚೈತನ್ಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

     

    View this post on Instagram

     

    A post shared by Infinity Platter (@infinityplatter)

    ನಾಗಚೈತನ್ಯ ಜೀವನದಲ್ಲಿ ಸಮಂತಾ ಹೊರಗೋದ ಮೇಲೆ ಸದಾ ಚರ್ಚೆಯಲ್ಲಿರುತ್ತಾರೆ. ಈಗ ಸ್ಟಾರ್ ಹೀರೋ ವಿಕ್ಟರಿ ವೆಂಕಟೇಶ್ (Victory Venkatesh) ಪುತ್ರಿ ಜೊತೆಗಿರುವ ನಾಗಚೈತನ್ಯ ವೀಡಿಯೋವೊಂದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ವೆಂಕಟೇಶ್‌ ಪುತ್ರಿ ಆಶ್ರಿತಾ ದಗ್ಗುಭಾಟಿ (Ashritha Daggubati) ಸಂಬಂಧದಲ್ಲಿ ನಾಗಚೈತನ್ಯ ಅವರಿಗೆ ಮಾವನ ಮಗಳಾಗಬೇಕು.

    ವಿಕ್ಟರಿ ವೆಂಕಟೇಶ್ ಪುತ್ರಿ ಆಶ್ರಿತಾ ಮತ್ತು ನಾಗಚೈತನ್ಯ ಒಟ್ಟಿಗೆ ಅಡುಗೆ ಮಾಡಿ, ಊಟ ಮಾಡುತ್ತಿರುವ ವೀಡಿಯೋ ಹಲವರ ಚರ್ಚೆಗೆ ಗ್ರಾಸವಾಗಿದೆ. ಆಶ್ರಿತಾ ಅವರು ವಿಶ್ವಾದ್ಯಂತ ಸೇವಿಸುವ ಪದಾರ್ಥವನ್ನ ಸ್ವತಃ ತಯಾರಿಸುವ ಮೂಲಕ ಅಡುಗೆ ಕಾರ್ಯಕ್ರಮವನ್ನು ಮಾಡುತ್ತಾರೆ. ಇದನ್ನೂ ಓದಿ: ವಿದೇಶಿ ಭಾಷೆಗೆ ಡಬ್ ಆಗಲಿದೆ ರಿಷಬ್ ಶೆಟ್ಟಿ ನಟನೆಯ `ಕಾಂತಾರ’

    ಹಾಗಾಗಿ ನಟ ನಾಗಚೈತನ್ಯ ಜೊತೆ ರುಚಿಕರವಾದ ಅಡುಗೆ ಮಾಡಿ, ಒಟ್ಟಿಗೆ ಊಟ ಮಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಪೂಜಾ ಹೆಗ್ಡೆ 1 ಕೋಟಿ ಸಂಭಾವನೆ ಪಡೆದ ಹಾಡಿನಲ್ಲಿ ಏನಿದೆ?: ಫನ್ ಅಂಡ್ ಫ್ರಸ್ಟ್ರೇಷನ್

    ಪೂಜಾ ಹೆಗ್ಡೆ 1 ಕೋಟಿ ಸಂಭಾವನೆ ಪಡೆದ ಹಾಡಿನಲ್ಲಿ ಏನಿದೆ?: ಫನ್ ಅಂಡ್ ಫ್ರಸ್ಟ್ರೇಷನ್

    ರ್ನಾಟಕ ಮೂಲದ ದಕ್ಷಿಣದ ಚೆಲುವೆ ಪೂಜಾ ಹೆಗ್ಡೆ ಹಾಡೊಂದಕ್ಕೆ ಹೆಜ್ಜೆ ಹಾಕಲು ಬರೋಬ್ಬರಿ ಒಂದು ಕೋಟಿ ಸಂಭಾವನೆ ಪಡೆದುಕೊಂಡ ವಿಚಾರ ವಾರದಿಂದ ಸಿನಿಮಾ ರಂಗದಲ್ಲಿ ಗಿರಿಕಿ ಹೊಡೆಯುತ್ತಿದೆ. ಸಾಲು ಸಾಲು ಸೋಲುಗಳನ್ನೇ ಉಂಡಿರುವ ಪೂಜಾ, ನಿಜಕ್ಕೂ ಅಷ್ಟೊಂದು ಸಂಭಾವನೆ ಪಡೆದರಾ ಅನ್ನುವ ಅನುಮಾನ ಕೂಡ ಮೂಡಿದೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪೂಜಾ, ತಮ್ಮ ಪಾಡಿಗೆ ತಾವು ಒಪ್ಪಿಕೊಂಡಿರುವ ಹಾಡಿಗೆ ಹೆಜ್ಜೆ ಹಾಕಿ ಬಂದಿದ್ದಾರೆ. ಇದನ್ನೂ ಓದಿ : ಕೆಜಿಎಫ್-2 : ಎರಡನೇ ದಿನಕ್ಕೆ 240 ಕೋಟಿ ಬಾಚಿದ ರಾಕಿ ಭಾಯ್ : ಗ್ರೌಂಡ್ ರಿಪೋರ್ಟ್

    ಹೌದು, ಪೂಜಾ ಇದೀಗ ‘ಎಫ್ 3’ ಹೆಸರಿನ ಸಿನಿಮಾವೊಂದರಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಿನ್ನೆಯಷ್ಟೇ ಆ ಸಿನಿಮಾದ ಹಾಡಿನ ಚಿತ್ರೀಕರಣ ನಡೆದಿದೆ. ದಟ್ಟ ಪಿಂಕ್ ಬಣ್ಣದ ತುಂಡುಡುಗೆಯಲ್ಲಿ ಪೂಜಾ ಸೊಂಟ ಬಳುಕಿಸಿದ್ದಾರೆ. ಇದೊಂದು ಪಾರ್ಟಿ ಸಾಂಗ್ ಆಗಿದ್ದು, ಪಡ್ಡೆಗಳಿಗೆ ಕಿಕ್ ಏರಿಸುವಂತಹ ಸಾಹಿತ್ಯ ಈ ಹಾಡಿನಲ್ಲಿ ಇದೆಯಂತೆ. ಇದನ್ನೂ ಓದಿ : ಹನುಮ ಜಯಂತಿ : ದೂರದ ಬೆಟ್ಟ ಸಿನಿಮಾದಲ್ಲಿಯ ಡಾ.ರಾಜ್ ಅವರ ಹನುಮನ ಪಾತ್ರ ಏನಾಯಿತು?

    ‘ಎಫ್ 3’ ಅಂದರೆ ಏನು? ಅನ್ನುವುದರ ಕುರಿತು ಸಿನಿಮಾ ರಂಗವು ಈವರೆಗೂ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಫೋಸ್ಟರ್ ನಲ್ಲಿ ಇರುವಂತೆ ‘ಎಫ್’ ಅಂದರೆ ಫನ್, ‘ಎಫ್’ ಅಂದರೆ ಫ್ರಸ್ಟ್ರೇಷನ್. ಇವೆರಡರ ಸಂಗಮವೇ ಈ ಸಿನಿಮಾ ಎನ್ನಬಹುದು. ವಿಕ್ಟರಿ ವೆಂಕಟೇಶ್ ಮತ್ತು ವರುಣ್ ತೇಜ್ ಕಾಂಬಿನೇಷನ್ ನ ಈ ಸಿನಿಮಾಗೆ ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರೇ ಪೂಜಾ ಡ್ಯಾನ್ಸ್ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಹಸೆಮಣೆ ಏರಿದ ಆಲಿಯಾ-ರಣಬೀರ್‌ಗೆ ಜೋಡಿ ಕುದುರೆ ಉಡುಗೊರೆ

    ಪೂಜಾ ಹೆಗ್ಡೆ ನಟನೆಯ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳು ಅಂದುಕೊಂಡಷ್ಟು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಪ್ರಭಾಸ್ ಜತೆ ನಟಿಸಿದ್ದ ರಾಧೆ ಶ್ಯಾಮ್ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಲಿದೆ ಎಂದು ನಂಬಲಾಗಿತ್ತು. ಆ ನಂಬಿಕೆ ಹುಸಿ ಆಯಿತು. ಅಲ್ಲದೇ, ಮೊನ್ನೆಯಷ್ಟೇ ರಿಲೀಸ್ ಆಗಿರುವ ದಳಪತಿ ವಿಜಯ್ ಅವರ ಬೀಸ್ಟ್ ನಲ್ಲೂ ಪೂಜಾ ನಟಿಸಿದ್ದಾರೆ. ಈ ಸಿನಿಮಾ ಕೂಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಹಿಂದೆ ಬಿದ್ದಿದೆ.

  • ವಿನೂತನ ದಾಖಲೆ ಬರೆದ ವಿಕ್ಟರಿ ವೆಂಕಟೇಶ್ ಮಗಳು

    ವಿನೂತನ ದಾಖಲೆ ಬರೆದ ವಿಕ್ಟರಿ ವೆಂಕಟೇಶ್ ಮಗಳು

    ಹೈದರಾಬಾದ್: ಟಾಲಿವುಡ್‍ನಟ ವಿಕ್ಟರಿ ವೆಂಕಟೇಶ್ ಅವರ ಮಗಳು ಆಶ್ರೀತಾ ದಗ್ಗುಬಾಟಿ ಒಂದು ಕ್ಷೇತ್ರದಲ್ಲಿ ವಿನೂತನ ದಾಖಲೆಯನ್ನು ಬರೆಯುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಇತ್ತೀಚೆಗೆ ಬಿಡುಗಡೆಯಾದ ಇನ್‍ಸ್ಟಾಗ್ರಾಮ್ ಶ್ರೀಮಂತರ ಪಟ್ಟಿಯಲ್ಲಿ ಆಶ್ರೀತಾ ಕೂಡಾ ಸ್ಥಾನ ಪಡೆದಿದ್ದಾರೆ. ಅಡುಗೆ ಮಾಡುವ ಹವ್ಯಾಸ ಹೊಂದಿರುವ ಇವರು ಇನ್ಫಿನಿಟಿ ಪ್ಲ್ಯಾಟರ್ ಹೆಸರಿನಲ್ಲಿ ಇನ್‍ಸ್ಟಾಗ್ರಾಮ್‍ನಲ್ಲಿ ಖಾತೆ ತೆರೆದು ವಿವಿಧ ಅಡುಗೆ ರೆಸಪಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್‍ಸ್ಟಾಗ್ರಾಮ್‍ನಲ್ಲಿ 13 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.

     

    View this post on Instagram

     

    A post shared by Infinity Platter (@infinityplatter)

    ಇತ್ತೀಚೆಗೆ Hopper.com ಇನ್‍ಸ್ಟಾಗ್ರಾಮ್‍ನಲ್ಲಿ ಹೆಚ್ಚು ಸಂಪಾದಿಸುವ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಫುಟ್‍ಬಾಲ್ ಆಟಗಾರ ಕ್ರಿಶ್ಚಿಯನೋ ರೊನಾಲ್ಡೊ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭಾರತದಿಂದ ವಿರಾಟ್ ಕೊಹ್ಲಿ, ಪ್ರಿಯಾಂಕಾ ಚೋಪ್ರಾ ಪಟ್ಟಿಯಲಿದ್ದಾರೆ. ಅದೇ ಪಟ್ಟಿಯಲ್ಲಿ ವೆಂಕಟೇಶ್ ಪುತ್ರಿ ಆಶ್ರೀತಾ ಕೂಡಾ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ವಿಶ್ವದ 337ನೇ ಸ್ಥಾನ ಪಡೆದಿರುವ ಆಶ್ರೀತಾ ಏಷ್ಯಾದಲ್ಲಿ 27ನೇ ಸ್ಥಾನದಲ್ಲಿದ್ದಾರೆ.

     

    View this post on Instagram

     

    A post shared by Infinity Platter (@infinityplatter)

    ಈ ಬಗ್ಗೆ ಆಶ್ರೀತಾ ಸಂತಸವನ್ನು ಸೋಶಿಯಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 2019ರಲ್ಲಿ ವಿನಾಯಕ ರೆಡ್ಡಿ ಅವರನ್ನು ಮದುವೆಯಾಗಿ ಪ್ರಸ್ತುತ ಸ್ಪೇನ್‍ನ ಬಾರ್ಸಿಲೋನಾದಲ್ಲಿ ನೆಲೆಸಿದ್ದಾರೆ.