Tag: ವಿಕ್ಕಿ ಶೆಟ್ಟಿ

  • ಬ್ಲಡ್ ಕ್ಯಾನ್ಸರ್‌ನಿಂದ ಬಳಲ್ತಿರೋ ಬಾಲಕಿಗೆ ಒಂದೇ ದಿನ 3ಲಕ್ಷ ಸಂಗ್ರಹಿಸಿದ ವಿಚಿತ್ರ ಜೀವಿ

    ಬ್ಲಡ್ ಕ್ಯಾನ್ಸರ್‌ನಿಂದ ಬಳಲ್ತಿರೋ ಬಾಲಕಿಗೆ ಒಂದೇ ದಿನ 3ಲಕ್ಷ ಸಂಗ್ರಹಿಸಿದ ವಿಚಿತ್ರ ಜೀವಿ

    ಮಂಗಳೂರು: ಬ್ಲಡ್ ಕ್ಯಾನ್ಸರ್ ಪೀಡಿತ ಪುಟ್ಟ ಕಂದಮ್ಮನ ಚಿಕಿತ್ಸೆಗಾಗಿ ಶ್ರೀ ಕಟೀಲು ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಯುವಕರ ತಂಡವೊಂದು ವಿಶೇಷ ವೇಷ ಧರಿಸಿ 3,00,136 ರೂ. ಹಣ ಸಂಗ್ರಹಿಸಿ ಮಗುವಿನ ಪೋಷಕರಿಗೆ ನೀಡಿ ಮಾನವೀಯತೆ ಮೆರೆದಿದೆ.

    ನಿಹಾರಿಕ ಎಂಬ 5 ವರ್ಷದ ಪುಟ್ಟ ಕಂದಮ್ಮ ರಕ್ತದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಚಿಕಿತ್ಸೆಗೆ 10 ಲಕ್ಷ ಆಗತ್ಯವಿದೆ. ಆದರೆ ನಿಹಾರಿಕಾಳ ತಂದೆ ತಾಯಿ ಬಡ ಕುಟುಂಬದವರಾಗಿದ್ದು, ಚಿಕಿತ್ಸೆ ಬೇಕಾದ ಹಣ ಸಂಗ್ರಹಿಸುವುದು ಕಷ್ಟವಾಗಿತ್ತು. ಹೀಗಾಗಿ ಮೂಡಬಿದಿರೆಯ ನೇತಾಜಿ ಬ್ರಿಗೇಡ್ ಯುವ ಸಂಘಟನೆಯ ಸದಸ್ಯರು ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದ ತಂಡದ ಸದಸ್ಯ ವಿಕ್ಕಿ ಶೆಟ್ಟಿ ಬೆದ್ರ ಎಂಬವರಿಗೆ ವಿಶೇಷ ವೇಷ ಧರಿಸಿ ಕಟೀಲು ಬ್ರಹ್ಮಕಲಶೋತ್ಸವದ ಒಂದು ದಿನ ಪೂರ್ತಿ ಭಕ್ತ ಸಮೂಹದ ಮುಂದೆ ದೇಣಿಗೆ ಸಂಗ್ರಹಿಸಿದ್ದರು.

    ಬಾಲಕಿಯ ಚಿಕಿತ್ಸೆ ಹಾಗೂ ವಿಕ್ಕಿ ಶೆಟ್ಟಿಯ ಪರಿಶ್ರಮವನ್ನು ನೋಡಿದ ಕ್ಷೇತ್ರಕ್ಕೆ ಬಂದಿದ್ದ ಭಕ್ತರು, ತಮ್ಮ ಕೈಲಾದ ಹಣದ ಸಹಾಯವನ್ನು ನೀಡಿದ್ದರು. ಹೀಗೆ ಒಂದೇ ದಿನದಲ್ಲಿ 3,00,136 ರೂ. ಸಹಾಯ ಧನವನ್ನು ಸಂಗ್ರಹಿಸಿದ್ದರು. ಸಂಗ್ರಹವಾದ ಹಣವನ್ನು ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಕಟೀಲು ದೇವಾಲಯದ ಪ್ರಧಾನ ಅರ್ಚಕ ಹರಿನಾರಾಯಣ ಆಸ್ರಣ್ಣ ಅವರು ಮಗುವಿನ ಪೋಷಕರಿಗೆ ಹಸ್ತಾಂತರ ಮಾಡಿದರು.

  • ಪಟ್ಲ ಸತೀಶ್ ಕಟೀಲು ಮೇಳದಿಂದ ಹೊರಕ್ಕೆ – ಭೂಗತ ಲೋಕದಿಂದ ಉದ್ಯಮಿಗೆ ಕೊಲೆ ಬೆದರಿಕೆ

    ಪಟ್ಲ ಸತೀಶ್ ಕಟೀಲು ಮೇಳದಿಂದ ಹೊರಕ್ಕೆ – ಭೂಗತ ಲೋಕದಿಂದ ಉದ್ಯಮಿಗೆ ಕೊಲೆ ಬೆದರಿಕೆ

    ಉಡುಪಿ: ಕಟೀಲು ಯಕ್ಷಗಾನ ಮೇಳದ ಭಾಗವತ ಪಟ್ಲ ಸತೀಶ್ ಶೆಟ್ಟಿಯನ್ನು ಈ ಬಾರಿ ತಿರುಗಾಟದಿಂದ ಕೈಬಿಡಲಾಗಿದೆ. ಈ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತಲೋಕದ ಎಂಟ್ರಿಯಾಗಿದೆ.

    ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಭಾಗವತ ಸತೀಶ್ ಪಟ್ಲ ಅವರಿಗೆ ಈ ಬಾರಿ ಗೇಟ್ ಪಾಸ್ ಕೊಡಲಾಗಿದೆ. ಒಂದು ವಾರದಿಂದ ಈ ಬೆಳವಣಿಗೆ ಕರಾವಳಿಯ ಜಿಲ್ಲೆಯಲ್ಲಿ ಚರ್ಚೆಯ ವಿಷಯವಾಗಿದೆ. ಪ್ರಕರಣದಲ್ಲಿ ಕಟೀಲು ದೇವಸ್ಥಾನದ ಮೇಳದ ಮ್ಯಾನೇಜರ್ ಗೆ ಬೆಂಬಲಿಸಿದ್ದ ಪಡುಬಿದ್ರೆ ಉದ್ಯಮಿಗೆ ಭೂಗತ ಲೋಕದಿಂದ ಬೆದರಿಕೆ ಕರೆ ಬಂದಿದೆ.

    ಉದ್ಯಮಿ ಧನಪಾಲ್ ಶೆಟ್ಟಿಗೆ ವಿಕ್ಕಿ ಶೆಟ್ಟಿ ಎಂಬಾತನಿಂದ ಕೊಲೆ ಬೆದರಿಕೆ ಕರೆ ಬಂದಿದ್ದು ಈ ಸಂಬಂಧ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಧನಪಾಲ್ ಶೆಟ್ಟಿ ಪ್ರತಿಕ್ರಿಯಿಸಿ, ವಿಕ್ಕಿ ಶೆಟ್ಟಿ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಹೋದರನಾಗಿದ್ದು, ಈತ ಭೂಗತ ಲೋಕದ ನಂಟಿರುವ ವ್ಯಕ್ತಿ. ಮೇಳದ ಮ್ಯಾನೇಜರ್ ಕಲ್ಲಾಡಿ ದೇವಿಪ್ರಸಾದ್ ಗೆ ಬೆಂಬಲಿಸಿದ್ದಕ್ಕೆ ಬೆದರಿಕೆ ಹಾಕಿದ್ದು, ನಿನ್ನನ್ನು ಕೊಲೆ ಮಾಡುವುದಾಗಿ ಫೋನ್ ಕರೆಯಲ್ಲಿ ಎಚ್ಚರಿಕೆ ನೀಡಿದ್ದಾನೆ. ಈ ಸಂಬಂಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಮತ್ತು ವಿಕ್ಕಿ ಶೆಟ್ಟಿ ವಿರುದ್ಧ ದೂರು ನೀಡಿದ್ದೇವೆ. ನನ್ನ ಗೆಳೆಯ ಗಣಪತಿ ಕಾಮತ್ ಎಂಬವರಿಗೆ ಕರೆ ಮಾಡಿ ತಾನು ವಿಕ್ಕಿ ಶೆಟ್ಟಿ ಎಂದು ಹೇಳಿಕೊಂಡಿದ್ದಾನೆ. ಕಟೀಲು ಪ್ರಕರಣದಲ್ಲಿ ಕಲ್ಲಾಡಿಗೆ ಬೆಂಬಲಿಸಿದರೆ ಸುಮ್ಮನಿರಲ್ಲ. ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಹೇಳಿದ್ದಾರೆ.