Tag: ವಿಕ್ಕಿ ಕೌಶಾಲ್

  • ಮದುವೆಗೆ ಬರುವ ಅತಿಥಿಗಳಿಗೆ ಕತ್ರಿನಾ-ವಿಕ್ಕಿ ವೆಲ್​ಕಮ್ ನೋಟ್

    ಮದುವೆಗೆ ಬರುವ ಅತಿಥಿಗಳಿಗೆ ಕತ್ರಿನಾ-ವಿಕ್ಕಿ ವೆಲ್​ಕಮ್ ನೋಟ್

    ಮುಂಬೈ: ನಟಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಾಲ್ ಮದುವೆ ಬಾಲಿವುಡ್‍ನಲ್ಲಿ ಸಖತ್ ಸುದ್ದಿಯಲ್ಲಿದೆ. ಈ ಜೋಡಿಯು ಅತಿಥಿಗಳನ್ನು ಸ್ವಾಗತಿಸಲು ಒಂದು ವೆಲ್‍ಕಮ್ ನೋಟ್ ನೀಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೆಲ್‍ಕಮ್ ನೋಟ್  ಫೋಟೋ ವೈರಲ್ ಆಗುತ್ತಿದೆ.

    ಪತ್ರದಲ್ಲಿ ಏನಿದೆ?: ಈ ಮದುವೆಯನ್ನು ಬಹಳ ಸೀಕ್ರೆಟ್ ಆಗಿ ಮಾಡಲಾಗುತ್ತಿದೆ. ಮದುವೆಯ ಯಾವುದೇ ವಿವರಗಳೂ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಬಾರದು ಎಂದು ಎಚ್ಚರಿಕೆ ವಹಿಸಲಾಗುತ್ತಿದೆ. ಹಾಗಾಗಿ ಮದುವೆ ಬಂದ ಅತಿಥಿಗಳಿಗೆ ಈ ಬಗ್ಗೆ ಮೊದಲೇ ತಿಳಿಸಲಾಗಿದೆ. ನೀವೆಲ್ಲರೂ ನಿಮ್ಮ ಮೊಬೈಲ್ ಫೋನ್‍ಗಳನ್ನು ರೂಮ್‍ನಲ್ಲಿಯೇ ಇಟ್ಟುಬರಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ. ಯಾವುದೇ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡಬೇಡಿ. ನಿಮ್ಮೆಲ್ಲರನ್ನೂ ಭೇಟಿಯಾಗಲು ನಾವು ಕಾದಿದ್ದೇವೆ ಎಂದು ಬರೆಯಲಾಗಿದೆ. ಇದನ್ನೂ ಓದಿ: 7 ಬಿಳಿ ಕುದುರೆಗಳ ಜೊತೆ ಮಂಟಪಕ್ಕೆ ವಿಕ್ಕಿ ಕೊಡಲಿದ್ದಾರೆ ರಾಯಲ್ ಎಂಟ್ರಿ

    ಈ ಮದುವೆಯನ್ನು ಬಹಳ ಸೀಕ್ರೆಟ್ ಆಗಿ ಮಾಡಲಾಗುತ್ತಿದೆ. ಮದುವೆಯ ಯಾವುದೇ ವಿವರಗಳೂ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಬಾರದು ಎಂದು ಎಚ್ಚರಿಕೆ ವಹಿಸಲಾಗುತ್ತಿದೆ. ಹಾಗಾಗಿ ಮದುವೆ ಬಂದ ಅತಿಥಿಗಳಿಗೆ ಈ ಬಗ್ಗೆ ಮೊದಲೇ ತಿಳಿಸಲಾಗಿದೆ. ನೀವೆಲ್ಲರೂ ನಿಮ್ಮ ಮೊಬೈಲ್ ಫೋನ್‍ಗಳನ್ನು ರೂಮ್‍ನಲ್ಲಿಯೇ ಇಟ್ಟುಬರಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ. ಯಾವುದೇ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಬೇಡಿ. ನಿಮ್ಮೆಲ್ಲರನ್ನೂ ಭೇಟಿಯಾಗಲು ನಾವು ಕಾದಿದ್ದೇವೆ ಎಂದು ಬರೆಯಲಾಗಿದ್ದು, ಈ ವೆಲ್‍ಕಮ್ ನೋಟ್ ಸೋಶಿಯಲ್ ಮೀಡಿಯಾ ತುಂಬಾ ಹರಿದಾಡುತ್ತಿದೆ. ಇದನ್ನೂ ಓದಿ: ಅರಬ್ಬಿ ಸಮುದ್ರದ ಹತ್ತು ಮೀಟರ್ ಆಳದಲ್ಲಿ ಸ್ಕೂಬಾ ಡೈವ್ ಮಾಡಿದ್ರು ಅಪ್ಪು

    ವಿಕ್ಕಿ-ಕತ್ರಿನಾ ಡಿಸೆಂಬರ್ 9 ರಂದು ರಾಜಸ್ಥಾನದ ಖಾಸಗಿ ಹೋಟೆಲ್‌ನ ಗಾಜಿನ ಮಂಟಪದಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದ್ದು, ಈ ಜೋಡಿ ಮಾತ್ರ ಎಲ್ಲಿಯೂ ಈ ಕುರಿತು ಅಧಿಕೃತವಾಗಿ ಹೇಳಿಕೊಂಡಿಲ್ಲ. ವರದಿಗಳ ಪ್ರಕಾರ ಈ ಜೋಡಿಯ ಮದುವೆ ಮಾತ್ರ ರಾಯಲ್ ಆಗಿ ನಡೆಯುತ್ತಿದ್ದು, ಇವರ ಮದುವೆ ಕ್ಲಿಪ್‍ಸ್‍ಗೆ ಓಟಿಟಿ ಫ್ಲಾಟ್‍ಫಾರ್ಮ್ 100 ಕೋಟಿ ರೂ. ಆಫರ್ ಮಾಡಿದೆ. ಇದನ್ನೂ ಓದಿ:  ಓಟಿಟಿಯಿಂದ ವಿಕ್ಕಿ-ಕತ್ರಿನಾ ವೆಡ್ಡಿಂಗ್ ಕ್ಲಿಪ್ಸ್ 100 ಕೋಟಿ ರೂ. ಆಫರ್

  • ಭಾರತೀಯ ಸೇನೆಗೆ ನನ್ನ ‘ಉರಿ’ ರಾಷ್ಟ್ರಪ್ರಶಸ್ತಿ: ವಿಕ್ಕಿ ಕೌಶಾಲ್

    ಭಾರತೀಯ ಸೇನೆಗೆ ನನ್ನ ‘ಉರಿ’ ರಾಷ್ಟ್ರಪ್ರಶಸ್ತಿ: ವಿಕ್ಕಿ ಕೌಶಾಲ್

    ನವದೆಹಲಿ: 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದ್ದು, ‘ಉರಿ-ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರಕ್ಕಾಗಿ ಬಾಲಿವುಡ್ ನಟ ವಿಕ್ಕಿ ಕೌಶಾಲ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ.

    ವಿಕ್ಕಿ ಕೌಶಾಲ್ ಅವರಿಗೆ ಸಾಕಷ್ಟು ಮಂದಿ ಟ್ವಿಟ್ಟರಿನಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಹೀಗಿರುವಾಗ ನಟ ವಿಕ್ಕಿ ಕೌಶಾಲ್ ಟ್ವೀಟ್ ಮಾಡುವ ಮೂಲಕ ಭಾರತೀಯ ಸೇನೆಗೆ, ನನ್ನ ಪೋಷಕರಿಗೆ ಹಾಗೂ ಉರಿ ಚಿತ್ರತಂಡಕ್ಕೆ ಈ ರಾಷ್ಟ್ರಪ್ರಶಸ್ತಿಯನ್ನು ಡೆಡಿಕೇಟ್ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಟ್ವಿಟ್ಟರಿನಲ್ಲಿ ವಿಕ್ಕಿ ಕೌಶಾಲ್, “ನಾನು ಎಷ್ಟು ಖುಷಿಯಾಗಿದ್ದೇನೆ ಎಂದು ವಿವರಿಸಲು ಪದಗಳು ಕಡಿಮೆ ಆಗಬಹುದು. ನನ್ನ ಕೆಲಸವನ್ನು ಗುರುತಿಸಿ ಗೌರವಾನ್ವಿತ ರಾಷ್ಟ್ರ ಪ್ರಶಸ್ತಿ ನೀಡಿದ ಈ ಕ್ಷಣವನ್ನು ನಾನು ಹಾಗೂ ನನ್ನ ಪೋಷಕರು ಮರೆಯುವುದಿಲ್ಲ. ‘ಉರಿ- ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರಕ್ಕೆ ನನಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿದ ಎಲ್ಲ ತೀರ್ಪುಗಾರರಿಗೆ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ. ಈ ಪ್ರಶಸ್ತಿಯನ್ನು ನಟ ಆಯುಷ್ಮಾನ್ ಅವರ ಜೊತೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.

    ಅಲ್ಲದೆ “ನಾನು ಈ ಪ್ರಶಸ್ತಿಯನ್ನು ನನ್ನ ಪೋಷಕರಿಗೆ, ಉರಿ ಚಿತ್ರತಂಡಕ್ಕೆ ಹಾಗೂ ಮಳೆ ಇರಲಿ, ಬಿರುಗಾಳಿ ಇರಲಿ ಪ್ರತಿದಿನ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ದೇಶ ಕಾಯುವ ಯೋಧರಿಗೆ ಅರ್ಪಿಸುತ್ತೇನೆ” ಎಂದು ಪತ್ರದಲ್ಲಿ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

    ಉರಿ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಅಲ್ಲದೆ, ಅತ್ಯುತ್ತಮ ಬ್ಯಾಕ್‍ಗ್ರೌಂಡ್ ಪ್ರಶಸ್ತಿ, ಅತ್ಯುತ್ತಮ ಸೌಂಡ್ ಡಿಸೈನ್ ಪ್ರಶಸ್ತಿ ಹಾಗೂ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ದೊರೆತಿದೆ.

  • ಯೋಧರಿಗಾಗಿ ಚಪಾತಿ ಮಾಡಿಕೊಟ್ಟ ‘ಉರಿ’ ಚಿತ್ರದ ನಟ

    ಯೋಧರಿಗಾಗಿ ಚಪಾತಿ ಮಾಡಿಕೊಟ್ಟ ‘ಉರಿ’ ಚಿತ್ರದ ನಟ

    ಇಟಾನಗರ: ಬಾಲಿವುಡ್ ನಟ ವಿಕ್ಕಿ ಕೌಶಾಲ್ ಯೋಧರಿಗಾಗಿ ಚಪಾತಿ ಮಾಡಿಕೊಟ್ಟು ಅವರ ಜೊತೆ ಕಾಲ ಕಳೆದಿದ್ದಾರೆ.

    ವಿಕ್ಕಿ ಅರುಣಾಚಲ ಪ್ರದೇಶದಲ್ಲಿರುವ ತವಾಂಗ್‍ನ ಇಂಡೋ-ಚೀನಾ ಬಾರ್ಡರ್ ಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಯೋಧರಿಗಾಗಿ ಚಪಾತಿ ಮಾಡುತ್ತಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ, “ಮೊದಲ ಬಾರಿಗೆ ಚಪಾತಿ ಮಾಡುತ್ತಿದ್ದೇನೆ. ಅದು ಸೇನೆಗಾಗಿ ಮಾಡುತ್ತಿರುವುದು ಖುಷಿ ಇದೆ” ಎಂದು ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    The first ever roti I made… glad it was for the army.

    A post shared by Vicky Kaushal (@vickykaushal09) on

    ಗುರುವಾರ ವಿಕ್ಕಿ ಕೌಶಾಲ್ ಯೋಧರ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿ ತವಾಂಗ್‍ಗೆ ಆಗಮಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಸದ್ಯ ವಿಕ್ಕಿ ಚಪಾತಿ ಮಾಡುತ್ತಿರುವ ಫೋಟೋ ನೋಡಿ ‘ಪರ್ಫೆಕ್ಟ್ ಪತಿ’, ‘ನನ್ನನ್ನು ಮದುವೆಯಾಗಿ’ ಎಂದು ಕಮೆಂಟ್ ಮಾಡುತ್ತಿದ್ದಾರೆ.

    ಕೊನೆಯದಾಗಿ ವಿಕ್ಕಿ ಕೌಶಾಲ್ ‘ಉರಿ- ದಿ ಸರ್ಜಿಕಲ್ ಸ್ಟೈಕ್’ ಚಿತ್ರದಲ್ಲಿ ನಟಿಸಿದ್ದರು. ಈಗ ಅವರು ಭಾರತೀಯ ಸೇನೆಯ ಮೇಜರ್ ವಿಹಾನ್ ಸಿಂಗ್ ಶೇರ್‍ಗಿಲ್ ಅವರ ಜೀವನಚರಿತ್ರೆಯಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಯಾಮಿ ಗೌತಮ್, ಪರೇಶ್ ರವಲ್ ಹಾಗೂ ಮೋಹಿತ್ ರೈನಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.