Tag: ವಿಕ್ಕಿ ಕೌಶಲ್

  • ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

    ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

    ಮುಂಬೈ: ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್ ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಇತ್ತೀಚೆಗೆ ರಶ್ಮಿಕಾ ಮತ್ತು ಬಾಲಿವುಡ್ ನಟ ವಿಕ್ಕಿ ಕೌಶಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈ ಜಾಹೀರಾತು ಪುರುಷರ ಒಳ ಉಡುಪಿನ ಬಗ್ಗೆಯಾಗಿದ್ದು, ಅದರಲ್ಲಿ ರಶ್ಮಿಕಾ ಯೋಗ ಇನ್‍ಸ್ಟ್ರಾಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ವಿಕ್ಕಿ ಅವರು ಯೋಗ ಕಲಿಯುವ ವಿದ್ಯಾರ್ಥಿಯಾಗಿದ್ದು, ಅವರ ಒಳ ಉಡುಪನ್ನೆ ರಶ್ಮಿಕಾ ನೋಡುವ ಅದರತ್ತ ಆಕರ್ಷಕರಾಗುವ ರೀತಿ ವೀಡಿಯೋವನ್ನು ಚಿತ್ರೀಕರಿಸಲಾಗಿತ್ತು. ಇದನ್ನೂ ಓದಿ: 2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’

    ಈ ಜಾಹೀರಾತಿಗೆ ರಶ್ಮಿಕಾ ಅಭಿಮಾನಿಗಳಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟ್ರೋಲ್ ಪೇಜ್ ಗಳು ಈ ಜಾಹೀರಾತಿನಲ್ಲಿ ರಶ್ಮಿಕಾ ಅಭಿನಯದ ಬಗ್ಗೆ ಫುಲ್ ಟ್ರೋಲ್ ಮಾಡುತ್ತಿದ್ದಾರೆ.

    ಸಖತ್ ಬ್ಯುಸಿಯಾಗಿರುವ ರಶ್ಮಿಕಾ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿದ್ದಾರೆ. ಅದು ಅಲ್ಲದೇ ಇತ್ತೀಚೆಗೆ ಬಾಲಿವುಡ್ ಗೂ ಹಾರಿರುವ ಇವರು ‘ಮಿಷನ್ ಮಜ್ನು’ ಸಿನಿಮಾ ಮುಗಿಸಿ, ಬಾಲಿವುಡ್ ನ ಮತ್ತೊಂದು ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜೊತೆಗೂ ನಟಿಸುತ್ತಿದ್ದಾರೆ. ಇದನ್ನೂ ಓದಿ: ನಾಗಚೈತನ್ಯ ‘ಲವ್ ಸ್ಟೋರಿ’ ಲೀಕ್ ಆಯ್ತು

    ರಶ್ಮಿಕಾ ಅಭಿಮಾನಿಗಳು ಮಾತ್ರ ಇವರ ನಟನೆಯ ‘ಪುಷ್ಪ’ ನೋಡಲು ಕಾಯುತ್ತಿದ್ದು, ಕೊರೊನಾ ಮತ್ತು ಚಿತ್ರಮಂದಿರಗಳ ಸಮಸ್ಯೆಯಿಂದ ಚಿತ್ರದ ರಿಲೀಸ್ ಡೇಟ್ ಮುಂದೆ ಹೋಗುತ್ತಿದೆ.

  • ಕತ್ರಿನಾ, ವಿಕ್ಕಿ ಎಂಗೇಜ್ಮೆಂಟ್ ಸೀಕ್ರೆಟ್

    ಕತ್ರಿನಾ, ವಿಕ್ಕಿ ಎಂಗೇಜ್ಮೆಂಟ್ ಸೀಕ್ರೆಟ್

    ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಲೇ ಇತ್ತು. ಇದೀಗ ಪ್ರೇಮದ ಹಕ್ಕಿಗಳ ಬಗ್ಗೆ ಕುತೂಹಲಕಾರಿ ಸುದ್ದಿ ಹೊರಬಿದ್ದಿದೆ.

    ಕ್ಯಾಟ್-ವಿಕ್ಕಿ ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಒಟ್ಟಾಗಿ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದಾರೆ. ಇವರ ನಡುವೆ ಪ್ರೀತಿ ಹುಟ್ಟಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಇದನ್ನು ಇಬ್ಬರೂ ಅಲ್ಲಗಳೆದಿದ್ದರು. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಷ್ಟೇ ಎಂದು ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ವಿಕ್ಕಿ ಹಾಗೂ ಕತ್ರಿನಾ ಸೈಲೆಂಟ್ ಆಗಿ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಈ ಸುದ್ದಿ ನೋಡಿ ಸಲ್ಮಾನ್ ಖಾನ್ ಬೇಸರ ಮಾಡಿಕೊಳ್ಳಬಹುದು, ಸಲ್ಲು ಮದುವೆ ಲೊಕೇಷನ್ ಕೇಳಬಹುದು ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಿದ್ದಾರೆ. ಇದನ್ನೂ ಓದಿ:  ಚಿತ್ರೀಕರಣ ಸೆಟ್‍ಗೆ ಆಟೋದಲ್ಲಿ ಬಂದ ಬಾಲಿವುಡ್ ನಟಿ

     

    View this post on Instagram

     

    A post shared by Katrina Kaif (@katrinakaif)

    ಅನಿಲ್ ಕಪೂರ್ ಮಗ ಹರ್ಷವರ್ಧನ್ ಕಪೂರ್ ಕತ್ರಿನಾ, ವಿಕ್ಕಿ ಸಂಬಂಧದ ಬಗ್ಗೆ ಮೌನ ಮುರಿದಿದ್ದರು. ಈ ಬಗ್ಗೆ ಮಾತನಾಡಿದ್ದ ಹರ್ಷವರ್ಧನ್, ಕತ್ರಿನಾ-ವಿಕ್ಕಿ ಆಪ್ತರಾಗಿದ್ದಾರೆ. ಇಬ್ಬರೂ ಮದುವೆ ಆಗುವ ಆಲೋಚನೆಯಲ್ಲಿ ಕೂಡ ಇದ್ದಾರೆ. ಬಹುಶಃ ಈ ವಿಚಾರ ಹೇಳಿದ ನಂತರದಲ್ಲಿ ನಾನು ತೊಂದರೆಗೆ ಸಿಲುಕಬಹುದು ಎಂದಿದ್ದರು.

     

    View this post on Instagram

     

    A post shared by Vicky Kaushal (@vickykaushal09)

    2018ರ ಸಮಯದಲ್ಲಿ ಕಾಫಿ ವಿತ್ ಕರಣ್ ಶೋನಲ್ಲಿ ಕತ್ರಿನಾ ಪಾಲ್ಗೊಂಡಿದ್ದರು. ಈ ವೇಳೆ ವಿಕ್ಕಿ ಜತೆ ತೆರೆ ಹಂಚಿಕೊಳ್ಳುವ ಆಸಕ್ತಿ ತೋರಿದ್ದರು ಕತ್ರಿನಾ. ಇದಾದ ನಂತರ 2019ರಲ್ಲಿ ಇಬ್ಬರೂ ಮುಂಬೈನಲ್ಲಿ ಊಟಕ್ಕೆ ಒಟ್ಟಾಗಿ ಸೇರಿದ್ದರು. ಇದರ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕಳೆದ 2-3 ವರ್ಷಗಳಿಂದ ಕ್ಯಾಟ್-ವಿಕ್ಕಿ ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಎಂದೂ ತಮ್ಮ ಲವ್‍ಲೈಫ್ ಬಗ್ಗೆ ಇಬ್ಬರು ತುಟಿ ಬಿಚ್ಚಿಲ್ಲ. ಆದರೆ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  • ಹೊಸ ಗೆಳೆಯನನ್ನು ಅದ್ಧೂರಿಯಾಗಿ ಮನೆಗೆ ಸ್ವಾಗತಿಸಿದ ‘ಉರಿ’ ನಟ..!

    ಹೊಸ ಗೆಳೆಯನನ್ನು ಅದ್ಧೂರಿಯಾಗಿ ಮನೆಗೆ ಸ್ವಾಗತಿಸಿದ ‘ಉರಿ’ ನಟ..!

    ಬಾಲಿವುಡ್ ನ ಬಹುಬೇಡಿಕೆಯ ನಟರಲ್ಲಿ ವಿಕ್ಕಿ ಕೌಶಲ್ ಕೂಡ ಒಬ್ಬರು. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಟ ಇದೀಗ ತನ್ನ ಹೊಸ ಗೆಳೆಯನನ್ನು ಪರಿಚಯಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

    ಹೌದು. ಉರಿ ಖ್ಯಾತಿಯ ನಿರ್ದೇಶಕ ಆದಿತ್ಯಧರ್ ಅವರೊಂದಿಗೆ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿರುವ ವಿಕ್ಕಿ ಕೌಶಲ್, ಈ ಚಿತ್ರಕ್ಕಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ಈ ಹಿಂದೆ ತಾವು ಜಿಮ್ ನಲ್ಲಿ ಬೆವರಿಳಿಸುತ್ತಿರುವ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಇದೀಗ ನಟನಿಗೆ ಹೊಸ ಗೆಳೆಯನೊಬ್ಬ ಸಿಕ್ಕಿದ್ದಾನೆ.

     

    View this post on Instagram

     

    A post shared by Vicky Kaushal (@vickykaushal09)

     

    ಅಂದಹಾಗೆ ವಿಕ್ಕಿ ಹೊಸ ಗೆಳೆಯ ಮತ್ಯಾರು ಅಲ್ಲ ದುಬಾರಿ ರೇಂಜ್ ರೋವರ್. ವಿಕ್ಕಿ ಹೊಸ ಕಾರನ್ನು ಖರೀದಿಸಿದ್ದು, ಫೋಟೋವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ವಿಕ್ಕಿ ಹೊಸ ಪೋಸ್ಟ್ ಗೆ ಅಭಿಮಾನಿಗಳ ಜೊತೆಗೆ ಬಾಲಿವುಡ್ ನ ಅನೇಕ ಸೆಲೆಬ್ರಿಟಿಗಳು ಸಹ ಖುಷಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

    ಇತ್ತ ಉರಿ ನಿರ್ದೇಶಕ ಆದಿತ್ಯ ಧರ್ ಕಾಮೆಂಟ್ ಮಾಡಿ, ಶಾಟ್ ಗನ್! ಅಭಿನಂದನೆಗಳು ನನ್ನ ಸಹೋದರ. ಕಷ್ಟಪಟ್ಟು ಕೆಲಸ ಮಾಡಿ ಉತ್ತಮ ಸಕ್ಸಸ್ ಸಾಧಿಸಿದ್ದೀರಿ ಎಂದು ಹೇಳಿದ್ದಾರೆ. ಇದನ್ನೂ ಓದಿ: “ಕಾರ್ ಪ್ಲೇಟ್ ನಂಬರ್ ಅವರೇ ಕಲ್ಲಿನಿಂದ ಜಜ್ಜಿದ್ರು, ಫೋಟೋ ತೆಗೆದವರನ್ನ ನಿಂದಿಸಿ ಅವಾಜ್ ಹಾಕಿದ್ರು”

  • ಕತ್ರಿನಾ, ವಿಕ್ಕಿ ಸಂಬಂಧ ರಿವೀಲ್ ಮಾಡಿದ ಅನಿಲ್ ಕಪೂರ್ ಪುತ್ರ

    ಕತ್ರಿನಾ, ವಿಕ್ಕಿ ಸಂಬಂಧ ರಿವೀಲ್ ಮಾಡಿದ ಅನಿಲ್ ಕಪೂರ್ ಪುತ್ರ

    ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ಒಂದೆರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇವರಿಬ್ಬರ ನಡುವೆ ಪ್ರೀತಿ ಇದೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಇದೀಗ ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ನಟ ಹರ್ಷವರ್ಧನ್ ಕಪೂರ್ ಅಸಲಿ ಸತ್ಯ ಬಾಯಿಬಿಟ್ಟಿದ್ದಾರೆ.

    ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ನಟ ಅನಿಲ್ ಕಪೂರ್ ಪುತ್ರ ಹರ್ಷವರ್ಧನ್‍ರವರು, ವಿಕ್ಕಿ ಮತ್ತು ಕತ್ರಿನಾ ಒಟ್ಟಿಗೆ ಇದ್ದಾರೆ. ಅದು ನಿಜ. ಈ ವಿಚಾರವನ್ನು ಹೇಳುವ ಮೂಲಕ ನಾನು ತೊಂದರೆಗೆ ಸಿಲುಕಿಕೊಳ್ಳುತ್ತೇನೋ? ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ: ನಾನು 5ಜಿ ವಿರೋಧಿ ಅಲ್ಲ, ಅದರ ಸಮಸ್ಯೆಗಳನ್ನು ತಡೆಯಬೇಕು: ಜೂಹಿ ಚಾವ್ಲಾ

    ಏಪ್ರಿಲ್‍ನಲ್ಲಿ ವಿಕ್ಕಿ ಕೌಶಲ್‍ಗೆ ಕೊರೊನಾ ದೃಢಪಟ್ಟಿತ್ತು. ಈ ಕುರಿತಂತೆ ಮರು ದಿನ ಕತ್ರಿನಾ ಸೋಶಿಯಲ್ ಮೀಡಿಯಾದಲ್ಲಿ ಬೇಗ ಚೇತರಿಸಿಕೊಳ್ಳುವಂತೆ ಹಾರೈಸಿದ್ದರು. ಇದನ್ನು ಓದಿ:ನುಸ್ರತ್ ಜಹಾನ್ 6 ತಿಂಗಳ ಗರ್ಭಿಣಿ, ಮಗು ನನ್ನದಲ್ಲ ಎಂದ ಗಂಡ – ಬಿರುಕಿಗೆ ಕಾರಣರಾದ್ರಾ ಯಶ್?

    2018ರಲ್ಲಿ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ, ವಿಕ್ಕಿ ಕೌಶಲ್ ಜೊತೆ ಸ್ಕ್ರೀನ್ ಶೇರ್ ಮಾಡುವ ಇಚ್ಛೆಯನ್ನು ಕತ್ರಿನಾ ವ್ಯಕ್ತಪಡಿಸಿದ್ದರು. ಬಳಿಕ 2019ರಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮುಂಬೈನಲ್ಲಿ ಡಿನ್ನರ್ ಡೇಟಿಂಗ್ ಎಂದು ಹೆಚ್ಚು ಕಾಲ ಕಳೆಯುತ್ತಿದ್ದರು. ಇವರಿಬ್ಬರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

  • ವಿಕ್ಕಿ ಕೌಶಲ್‍ಗೆ ಕಿಸ್ ಮಾಡುವಾಸೆ: ಜಾಹ್ನವಿ ಕಪೂರ್

    ವಿಕ್ಕಿ ಕೌಶಲ್‍ಗೆ ಕಿಸ್ ಮಾಡುವಾಸೆ: ಜಾಹ್ನವಿ ಕಪೂರ್

    ಮುಂಬೈ: ಬಾಲಿವುಡ್ ಚಾಂದಿನಿ ಶ್ರೀದೇವಿ ಪುತ್ರಿ, ದಢಕ್ ಗರ್ಲ್ ಜಾಹ್ನವಿ ಕಪೂರ್ ತಮ್ಮ ಆಸೆಯೊಂದನ್ನು ಹೊರ ಹಾಕಿದ್ದಾರೆ. ನಟ ವಿಕ್ಕಿ ಕೌಶಲ್‍ಗೆ ಕಿಸ್ ಮಾಡಬೇಕು ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

    ಇತ್ತೀಚೆಗೆ ಸೋದರಿ ಖುಷಿ ಜೊತೆ ಖಾಸಗಿ ಕಾರ್ಯಕ್ರಮದಲ್ಲಿ ಜಾಹ್ನವಿ ಭಾಗಿಯಾಗಿದ್ದರು. ಈ ವೇಳೆ ಕಾರ್ತಿಕ್ ಆರ್ಯನ್ ಅಥವಾ ವಿಕ್ಕಿ ಕೌಶಲ್ ಇಬ್ಬರಲ್ಲಿ ಒಬ್ಬರಿಗೆ ಕಿಸ್ ಮಾಡುವ ಆಸೆಯಿದೆ ಎಂದಿದ್ದಾರೆ. ಇಬ್ಬರಲ್ಲಿ ಯಾರನ್ನು ಆರಿಸಿಕೊಳ್ಳುತ್ತೀರಿ ಎಂದಾಗ ವಿಕ್ಕಿ ಕೌಶಲ್ ಎಂದು ಹೇಳಿ ನಗೆ ಬೀರಿದರು.

    ನಿರ್ದೇಶಕ ಕರಣ್ ಜೋಹರ್ ನಿರೂಪಣೆಯ ಟಾಕ್ ಶೋದಲ್ಲಿ ಭಾಗಿಯಾಗಿದ್ದ ಸೈಫ್ ಪುತ್ರಿ ಸಾರಾ ಅಲಿ ಖಾನ್, ಕಾರ್ತಿಕ್ ಆರ್ಯನ್ ಜೊತೆಗೆ ಡೇಟ್‍ಗೆ ಹೋಗುವ ಇಚ್ಛೆಯನ್ನು ಹೊರ ಹಾಕಿದ್ದರು. ಕಾಕತಾಳೀಯ ಎಂಬಂತೆ ‘ತಖ್ತ್’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಸಾರಾ ಜೊತೆಯಾಗಿದ್ದಾರೆ. ಇದೇ ಚಿತ್ರದಲ್ಲಿಯೇ ಜಾಹ್ನವಿ ಮತ್ತು ವಿಕ್ಕಿ ಕೌಶಲ್ ಸಹ ನಟಿಸಲಿದ್ದಾರೆ.

  • ಉರಿ ಚಿತ್ರದ ಹೀರೋ ವಿಕ್ಕಿ ಕೌಶಲ್ ಆಸ್ಪತ್ರೆಗೆ ದಾಖಲು

    ಉರಿ ಚಿತ್ರದ ಹೀರೋ ವಿಕ್ಕಿ ಕೌಶಲ್ ಆಸ್ಪತ್ರೆಗೆ ದಾಖಲು

    ಮುಂಬೈ: ಉರಿ ಚಿತ್ರದ ಖ್ಯಾತಿಯ ನಟ ವಿಕ್ಕಿ ಕೌಶಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ವಿಕ್ಕಿ ಮೇಲೆ ಬಾಗಿಲು ಬಿದ್ದಿದ್ದರಿಂದ ಗದ್ದದ ಭಾಗ(Cheek Bone)ದಲ್ಲಿ 13 ಹೊಲಿಗೆ ಹಾಕಲಾಗಿದೆ ಎಂದು ವರದಿಯಾಗಿದೆ.

    ಭಾನು ಪ್ರತಾಪ್ ನಿರ್ದೇಶನದ ಹಾರರ್ ಸಿನಿಮಾದಲ್ಲಿ ವಿಕ್ಕಿ ಕೌಶಲ್ ನಟಿಸುತ್ತಿದ್ದಾರೆ. ಆ್ಯಕ್ಷನ್ ದೃಶ್ಯಗಳನ್ನು ಚಿತ್ರೀಕರಿಸುವ ವೇಳೆ ಈ ಘಟನೆ ನಡೆದಿದೆ. ಕಳೆದ ಐದು ದಿನಗಳಿಂದ ಗುಜರಾತಿನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯುತಿತ್ತು. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಕೂಡಲೇ ವಿಕ್ಕಿ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಈ ಸಿನಿಮಾ ಹೊರತಾಗಿ ಆದಿತ್ಯ ನಿರ್ದೇಶನದ ಆ್ಯಕ್ಷನ್ ಸಿನಿಮಾಗೆ ವಿಕ್ಕಿ ಸಹಿ ಮಾಡಿದ್ದಾರೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಸೂಪರ್ ಹೀರೋ ಪಾತ್ರದಲ್ಲಿ ನಟಿಸಲಿದ್ದಾರೆ. ಕರಣ್ ಜೋಹರ್ ನಿರ್ಮಾಣದ ‘ತಖ್ತ್’ ಸಿನಿಮಾದಲ್ಲಿ ರಣ್‍ವೀರ್ ಸಿಂಗ್ ಜೊತೆ ವಿಕ್ಕಿ ಕೌಶಲ್ ತೆರೆ ಹಂಚಿಕೊಳ್ಳಲಿದ್ದಾರೆ. ತಖ್ತ್ ಚಿತ್ರದಲ್ಲಿ ಆಲಿಯಾ ಭಟ್, ಜಾಹ್ನವಿ ಕಪೂರ್, ಭೂಮಿ ಪಡ್ನೇಕರ್ ಮತ್ತು ಅನಿಲ್ ಕಪೂರ್ ಸಹ ನಟಿಸುತ್ತಿದ್ದಾರೆ.

  • How’s the josh  ಗೆ ಪುಟ್ಟ ಕಂದಮ್ಮ ನೀಡ್ತು ಸಖತ್ ಪ್ರತಿಕ್ರಿಯೆ

    How’s the josh ಗೆ ಪುಟ್ಟ ಕಂದಮ್ಮ ನೀಡ್ತು ಸಖತ್ ಪ್ರತಿಕ್ರಿಯೆ

    ಮುಂಬೈ: ಬಾಲಿವುಡ್ ಸೂಪರ್ ಹಿಟ್ ಸಿನಿಮಾ ‘ಉರಿ-ದ ಸರ್ಜಿಕಲ್ ಸ್ಟ್ರೈಕ್’ ಬಿಡುಗಡೆಯಾದ ಬಳಿಕ ‘ಹೌ ದ ಜೋಶ್’ ಡೈಲಾಗ್ ಸಖತ್ ಟ್ರೆಂಡ್ ಆಗಿತ್ತು. ಈ ಡೈಲಾಗ್ ಸಂಸತ್ತಿನಲ್ಲಿ ಘರ್ಜಿಸಿತ್ತು. ಸಾಮಾನ್ಯ ಜನರು ಸಾಮಾಜಿಕ ಜಾಲತಾಣದಲ್ಲಿ ಡಬ್ ಮ್ಯಾಶ್ ಮತ್ತು ಟಿಕ್ ಟಾಕ್ ನಲ್ಲಿ ಡೈಲಾಗ್ ಹಾಕಿಕೊಂಡು ಖುಷಿಪಟ್ಟಿದ್ದಾರೆ. ಪುಟ್ಟ ಮಗು ‘ಹೌ ದ ಜೋಶ್’ ಕೇಳಿದ ಕೂಡಲೇ ನಗುತ್ತದೆ. ಈ ಸುಂದರ ವಿಡಿಯೋವನ್ನು ನಟ ವಿಕ್ಕಿ ಕೌಶಲ್ ತಮ್ಮ ಇನ್ಸ್ಟಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ವಿಡಿಯೋ ಅಪ್ಲೋಡ್ ಮಾಡಿಕೊಂಡ 24 ಗಂಟೆಯಲ್ಲಿ 12 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ತುಂಬಾ ಚೆನ್ನಾಗಿದೆ, ಹೈ ಸರ್ ಎಂದು ಕಮೆಂಟ್ ಹಾಕುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

    ಜನವರಿ 11ರಂದು ಬಿಡುಗಡೆಗೊಂಡಿದ್ದ ಉರಿ ಸಿನಿಮಾ ಇದೂವರೆಗೂ 242 ಕೋಟಿಗೂ ಅಧಿಕ ಹಣವನ್ನು ತನ್ನ ಗಲ್ಲಾ ಪೆಟ್ಟಿಗೆಯಲ್ಲಿ ತುಂಬಿಸಿಕೊಂಡಿದೆ. ಇಂದಿಗೂ ಸಹ ಉರಿ ಚಿತ್ರದ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. 2016ರಲ್ಲಿ ಉಗ್ರರು ಉರಿ ಸೇನಾಶಿಬಿರದ ಮೇಲೆ ದಾಳಿಯ ಪ್ರತಿಕಾರವಾಗಿ ಭಾರತದ ಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿ ಯಶಸ್ವಿಯಾಗಿ ಹಿಂದಿರುಗಿತ್ತು. ಅದೆ ಕಥೆಯನ್ನೇ ನಿರ್ದೇಶಕ ಆದಿತ್ಯ ದಾರ್ ಸಿನಿಮಾವಾಗಿ ಬದಲಿಸಿ ತೆರೆಯ ಮೇಲೆ ತಂದಿದ್ದರು.

    https://www.instagram.com/p/Bu1F4omlPTr/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv