Tag: ವಿಕ್ಕಿ ಕೌಶಲ್

  • ವಿಕ್ಕಿ ಯಾವಾಗಲೂ ಕೂಲ್ ಆಗಿ ಇರುತ್ತಾರೆ: ದಾಂಪತ್ಯದ ಸೀಕ್ರೆಟ್ ಬಿಚ್ಚಿಟ್ಟ ಕತ್ರಿನಾ ಕೈಫ್

    ವಿಕ್ಕಿ ಯಾವಾಗಲೂ ಕೂಲ್ ಆಗಿ ಇರುತ್ತಾರೆ: ದಾಂಪತ್ಯದ ಸೀಕ್ರೆಟ್ ಬಿಚ್ಚಿಟ್ಟ ಕತ್ರಿನಾ ಕೈಫ್

    ಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ (Vicky Kaushal) ಬಾಲಿವುಡ್‌ನ ಬೆಸ್ಟ್ ಜೋಡಿಗಳಲ್ಲಿ ಒಬ್ಬರು ಎಂಬುದನ್ನು ಪ್ರೂವ್ ಮಾಡಿದ್ದಾರೆ. ವಿಕ್ಕಿ ಯಾವಾಗಲೂ ಕೂಲ್ ಆಗಿ ಇರುತ್ತಾರೆ ಎಂದು ಪತಿಯ ನಡೆಗೆ ಕತ್ರಿನಾ ಕೈಫ್ (Katrina Kaif) ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ಹೃದಯಾಘಾತದಿಂದ ಬಹುಭಾಷಾ ನಟಿ ಶಕುಂತಲಾ ನಿಧನ

    ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ನಟಿ, ತೂಕ ಹೆಚ್ಚಾಗುವ ಕುರಿತು, ಬ್ಯೂಟಿ, ಔಟ್‌ಫಿಟ್‌ಗಳ ಬಗ್ಗೆ ಮಾತನಾಡುವಾಗ ವಿಕ್ಕಿ ಕೌಶಲ್ ಹ್ಯಾಂಡಲ್ ಮಾಡುವ ರೀತಿಯನ್ನು ಕತ್ರಿನಾ ವಿವರಿಸಿದ್ದಾರೆ. ನಾನು ವಿಕ್ಕಿ ಜೊತೆ ಹೊರಗಡೆ ಹೋಗುವಾಗ ತೂಕ ಹೆಚ್ಚಾಗಿರುವ ಬಗ್ಗೆ ಲುಕ್ಸ್ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳುತ್ತೇನೆ.

    ಆಗ ವಿಕ್ಕಿ, ನೀವು ಹೇಗಿದ್ದರೂ ಪರವಾಗಿಲ್ಲ. ನೀವು ನೀವಾಗಿರಿ, ನೀವು ಹೇಗಿದ್ದಿರೋ ಹಾಗೆ ಇರಿ ಎಂದು ಕೂಲ್ ಆಗಿ ಹೇಳುತ್ತಾರೆ. ಅವರು ಸದಾ ನನ್ನ ಬೆಂಬಲವಾಗಿ ನಿಂತಿದ್ದಾರೆ ಎಂದು ದಾಂಪತ್ಯದ ಬಗ್ಗೆ ಕತ್ರಿನಾ ಮಾತನಾಡಿದ್ದಾರೆ. ಇದನ್ನೂ ಓದಿ:ರಣ್‌ವೀರ್ ಸಿಂಗ್, ಅಕ್ಷಯ್ ಕುಮಾರ್ ಮನೆ ಪಕ್ಕ ಐಷಾರಾಮಿ ಅಪಾರ್ಟ್‌ಮೆಂಟ್‌ ಖರೀದಿಸಿದ ಪೃಥ್ವಿರಾಜ್

    ಅಂದಹಾಗೆ, 2021ರಲ್ಲಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ರಾಜಸ್ಥಾನದಲ್ಲಿ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು.

  • ಒಂದೇ ಚಿತ್ರದಲ್ಲಿ ರಣ್‌ಬೀರ್, ಆಲಿಯಾ ಭಟ್, ವಿಕ್ಕಿ ಕೌಶಲ್- ಬನ್ಸಾಲಿ ಆ್ಯಕ್ಷನ್ ಕಟ್

    ಒಂದೇ ಚಿತ್ರದಲ್ಲಿ ರಣ್‌ಬೀರ್, ಆಲಿಯಾ ಭಟ್, ವಿಕ್ಕಿ ಕೌಶಲ್- ಬನ್ಸಾಲಿ ಆ್ಯಕ್ಷನ್ ಕಟ್

    ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali)’ಹೀರಾಮಂಡಿ’ ಸಿನಿಮಾದ ನಂತರ ‘ಲವ್ & ವಾರ್’ (Love & War) ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಡೆಡ್ಲಿ ಪ್ರೇಮ ಕಥೆ ಹೇಳೋದಕ್ಕೆ ನಿರ್ದೇಶಕ ಸಜ್ಜಾಗಿದ್ದಾರೆ. ಇದನ್ನೂ ಓದಿ:‘ಬ್ರಹ್ಮರಾಕ್ಷಸ’ನಿಗಾಗಿ ಐಟಂ ಸಾಂಗ್: ಸಂಜೆ ಹೊತ್ನಾಗ ಮೈಪುಳಕ

    ರಣ್‌ಬೀರ್ ಕಪೂರ್, ಆಲಿಯಾ ಭಟ್ (Alia Bhatt) ಜೊತೆ ವಿಕ್ಕಿ ಕೌಶಲ್ ಒಂದೇ ಸಿನಿಮಾದಲ್ಲಿ ಜೊತೆಯಾಗುತ್ತಿದ್ದಾರೆ. ವಿಕ್ಕಿಗೆ ಜೋಡಿಯಾಗಿ ನಟಿಸುತ್ತಿರುವ ಆಲಿಯಾಗೆ ರಣ್‌ಬೀರ್ (Ranbir Kapoor) ವಿಲನ್ ಆಗಿ ನಟಿಸಲಿದ್ದಾರೆ ಎನ್ನಲಾಗಿದೆ. ಇದೇ ಅಕ್ಟೋಬರ್ ಮೊದಲ ವಾರದಿಂದ ಶೂಟಿಂಗ್ ಶುರುವಾಗಲಿದೆ.

    ಈ ಹಿಂದೆ ಎಂದೂ ತೋರಿಸಿರದ ವಿಭಿನ್ನ ತ್ರಿಕೋನ ಪ್ರೇಮಕಥೆಯನ್ನು ಹೇಳೋಕೆ ಸಂಜಯ್ ಲೀಲಾ ಬನ್ಸಾಲಿ ಸಜ್ಜಾಗಿದ್ದಾರೆ. ಆಲಿಯಾ ಭಟ್, ರಣ್‌ಬೀರ್ ಕಪೂರ್, ವಿಕ್ಕಿ ಕೌಶಲ್ ಸುತ್ತ ಈ ಕಥೆ ಇರಲಿದೆ. ಮುಂದಿನ ವರ್ಷ ಈ ಸಿನಿಮಾ ರಿಲೀಸ್ ಆಗಲಿದೆ.

  • ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟನೆಯ ‘ಛಾವಾ’ ಸಿನಿಮಾ ಟೀಸರ್ ರಿಲೀಸ್

    ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟನೆಯ ‘ಛಾವಾ’ ಸಿನಿಮಾ ಟೀಸರ್ ರಿಲೀಸ್

    ಬಾಲಿವುಡ್ ನಟ ವಿಕ್ಕಿ ಕೌಶಲ್ (Vicky Kaushal) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಛಾವಾ’ (Chhava) ಟೀಸರ್ ರಿಲೀಸ್ ಆಗಿದೆ. ವಿಭಿನ್ನ ಗೆಟಪ್‌ನಲ್ಲಿ ವಿಕ್ಕಿ ಕೌಶಲ್ ಕಾಣಿಸಿಕೊಂಡಿದ್ದು, ನಟನ ಖಡಕ್ ಡೈಲಾಗ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

    ಬಹುನಿರೀಕ್ಷಿತ ‘ಛಾವಾ’ ಸಿನಿಮಾದ ಟೀಸರ್‌ನಲ್ಲಿ ಯುದ್ಧದ ದೃಶ್ಯಗಳಿಂದ ತುಂಬಿದೆ. ವಿಕ್ಕಿ ಕೌಶಲ್ ಆ್ಯಕ್ಷನ್ ಅವತಾರಕ್ಕೆ ಫ್ಯಾನ್ಸ್ ದಂಗಾಗಿದ್ದಾರೆ. ರಶ್ಮಿಕಾ ಪಾತ್ರದ ಲುಕ್‌ ಸಣ್ಣ ಝಲಕ್‌ ಅನ್ನು ತೋರಿಸಲಾಗಿದೆ. ಇದನ್ನೂ ಓದಿ:‘ದಿ ಫ್ಯಾಮಿಲಿ ಮ್ಯಾನ್ 2’ ನಿರ್ದೇಶಕನ ಜೊತೆ ಸಮಂತಾ ಡೇಟಿಂಗ್

    ಅಂದಹಾಗೆ, ಮರಾಠಾ ರಾಜ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜನ ಪಾತ್ರವನ್ನು ವಿಕ್ಕಿ ಕೌಶಲ್ ನಿಭಾಯಿಸಿದ್ದಾರೆ. ಸಂಭಾಜಿ ಮಹಾರಾಜರ ಶೌರ್ಯ ಅವರ ತ್ಯಾಗ ಮತ್ತು ಯುದ್ಧಗಳನ್ನು ಗೆಲ್ಲುವ ತಂತ್ರಗಳ ಬಗ್ಗೆ ಇದೆ. ಗಂಡ ಮತ್ತು ಹೆಂಡತಿಯ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ಸಹ ಒಳಗೊಂಡಿದೆ. ಮರಾಠ ಸಾಮ್ರಾಜ್ಯದಿಂದ ಸಂಭಾಜಿ ದೂರ ಇದ್ದಾಗ ಅವರ ಹೆಂಡತಿ ಎಲ್ಲವನ್ನೂ ಯಾವ ರೀತಿ ನಿರ್ವಹಿಸುತ್ತಿದ್ದರು ಎಂಬುದು ಕಥೆಯ ಹೈಲೈಟ್.

    ಇನ್ನೂ ವಿಕ್ಕಿ, ರಶ್ಮಿಕಾ ಮೊದಲ ಬಾರಿ ಜೊತೆಯಾಗಿ ನಟಿಸಿರುವ ‘ಛಾವಾ’ ಸಿನಿಮಾ ಡಿಸೆಂಬರ್ 6ರಂದು ರಿಲೀಸ್ ಆಗುತ್ತಿದೆ. ಇನ್ನೂ ಈ ಸಿನಿಮಾಗಾಗಿ ಇಬ್ಬರೂ ಮರಾಠಿ ಭಾಷೆಯನ್ನು 4 ವಾರಗಳಲ್ಲಿ ಕಲಿತಿರುವುದು ವಿಶೇಷ.

  • ರಶ್ಮಿಕಾ ಮಂದಣ್ಣ ಅದ್ಭುತ ವ್ಯಕ್ತಿ ಎಂದು ಹೊಗಳಿದ ವಿಕ್ಕಿ ಕೌಶಲ್

    ರಶ್ಮಿಕಾ ಮಂದಣ್ಣ ಅದ್ಭುತ ವ್ಯಕ್ತಿ ಎಂದು ಹೊಗಳಿದ ವಿಕ್ಕಿ ಕೌಶಲ್

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಸದ್ದು ಮಾಡುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ರಶ್ಮಿಕಾ ಅದ್ಭುತ ವ್ಯಕ್ತಿ ಎಂದು ಬಾಲಿವುಡ್ ನಟ ವಿಕ್ಕಿ ಕೌಶಲ್ (Vicky Kaushal) ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:ಟ್ರೈನಿ ವೈದ್ಯೆ ಹತ್ಯೆ ಪ್ರಕರಣ: ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದ ಆಶಿಕಾ ರಂಗನಾಥ್

    ‘ಚಾವಾ’ ಎಂಬ ಸಿನಿಮಾದಲ್ಲಿ ರಶ್ಮಿಕಾ ಜೊತೆ ಕತ್ರಿನಾ ಕೈಫ್(Katrina Kaif) ಪತಿ ವಿಕ್ಕಿ ಕೌಶಲ್ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ರಶ್ಮಿಕಾ ಜೊತೆ ನಟಿಸಿದ ಅನುಭವದ ಬಗ್ಗೆ ನಟ ಮಾತನಾಡಿ, ಆಕೆ ಅದ್ಭುತ ವ್ಯಕ್ತಿ, ಯಾವಾಗ ಭೇಟಿಯಾದರೂ ಸದಾ ಪಾಸಿಟಿವಿಯಿಂದ ಇರುತ್ತಾರೆ ಎಂದಿದ್ದಾರೆ.

    ಸೆಟ್‌ಗೆ ರಶ್ಮಿಕಾ ಬಂದಾಗ ಪಾಸಿಟಿವಿ ಇರುತ್ತದೆ. ಸದಾ ಕೆಲಸದಲ್ಲಿ ಅವರು ಬೆಂಬಲಿಸುತ್ತಾರೆ. ಚಾವಾ ಸಿನಿಮಾದಲ್ಲಿ ಕೆಲಸ ಮಾಡುವಾಗ ರಶ್ಮಿಕಾ ಜೊತೆ ಉತ್ತಮ ಸಮಯ ಕಳೆದಿದ್ದೇನೆ. ಯಾವಾಗಲೂ ಅವರು ಖುಷಿಯಿಂದ ಇರುತ್ತಾರೆ. ಅದು ಹೇಗೆ ಎಂಬುದು ನನಗೆ ತಿಳಿದಿಲ್ಲ ಎಂದು ವಿಕ್ಕಿ ಕೌಶಲ್ ನಟಿಯನ್ನು ಕೊಂಡಾಡಿದ್ದಾರೆ.

    ಅಂದಹಾಗೆ, ಛತ್ರಪತಿ ಸಂಭಾಜಿ ಅವರ ಜೀವನ ಕಥೆ ಆಧರಿಸಿ ಸಿನಿಮಾ ಬರುತ್ತಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಹಲವು ಸಂಭಾಷಣೆಗಳು ಮರಾಠಿ ಭಾಷೆಯಲ್ಲಿ ಇರಲಿದ್ದು, ಅದಕ್ಕಾಗಿ 4 ವಾರಗಳ ಕಾಲ ನಟಿ ಮರಾಠಿ ಕಲಿಯಲು ವಿಶೇಷ ತರಬೇತಿ ಕೂಡ ಪಡೆದಿದ್ದಾರೆ.

    ‘ಚಾವಾ’ (Chhava) ಸಿನಿಮಾದಲ್ಲಿನ ತನ್ನ ಪಾತ್ರಕ್ಕೆ ರಶ್ಮಿಕಾ ಅವರೇ ಧ್ವನಿ ನೀಡಲಿದ್ದಾರೆ. ಇನ್ನೂ ಮೊದಲ ಬಾರಿಗೆ ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ನಟಿಸುತ್ತಿರುವ ಕಾರಣ ಈ ಚಿತ್ರದ ಮೇಲೆ ಫ್ಯಾನ್ಸ್‌ಗೆ ಬೆಟ್ಟದಷ್ಟು ನಿರೀಕ್ಷೆಯಿದೆ.

    ಇನ್ನೂ ‘ಚಾವಾ’ ಸಿನಿಮಾವು ಡಿಸೆಂಬರ್ 6ರಂದು ‘ಪುಷ್ಪ 2’ (Pushpa 2) ಮುಂದೆ ರಿಲೀಸ್ ಆಗಲಿದೆ. ಒಂದೇ ದಿನ ರಶ್ಮಿಕಾ ನಟನೆಯ ಎರಡು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ.

  • ಬಿಗ್ ಬಾಸ್ ಶೋ ನಿರೂಪಣೆ ಮಾಡಲ್ಲ: ನಟ ಕಮಲ್ ಹಾಸನ್

    ಬಿಗ್ ಬಾಸ್ ಶೋ ನಿರೂಪಣೆ ಮಾಡಲ್ಲ: ನಟ ಕಮಲ್ ಹಾಸನ್

    ಸ್ಟಾರ್ ನಟ ಕಮಲ್ ಹಾಸನ್ (Kamal Haasan) ಕಳೆದ 7 ವರ್ಷಗಳಿಂದ ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುತ್ತಾ ಬಂದಿದ್ದರು. ಅವರ ನಿರೂಪಣೆಯ ಶೈಲಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಇದೀಗ ಬಿಗ್ ಬಾಸ್ ಶೋ ಮಾಡಲ್ಲ ಎಂದು ಅಭಿಮಾನಿಗಳಿಗೆ ಕಮಲ್ ಹಾಸನ್ ಪತ್ರ ಬರೆದಿದ್ದಾರೆ. ಇದನ್ನೂ ಓದಿ:ವಿಕ್ಕಿ ಕೌಶಲ್ ಜೊತೆಗಿನ ‘ಚಾವಾ’ ಚಿತ್ರಕ್ಕಾಗಿ ಮರಾಠಿ ಕಲಿತ ರಶ್ಮಿಕಾ ಮಂದಣ್ಣ

    7 ವರ್ಷಗಳ ಹಿಂದೆ ಶುರುವಾದ ನನ್ನ ಬಿಗ್ ಬಾಸ್ ಪಯಣಕ್ಕೆ ಬ್ರೇಕ್ ನೀಡಲು ನಿರ್ಧರಿಸಿದ್ದೇನೆ ಎಂದು ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತಿದ್ದೇನೆ. ಈ ಮೊದಲೇ ಒಪ್ಪಿಕೊಂಡ ಸಿನಿಮಾಗಳ ಕೆಲಸದ ಕಾರಣದಿಂದ ನನಗೆ ಈ ಬಾರಿಯ ಬಿಗ್ ಬಾಸ್ ಶೋ ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಮಲ್ ಹಾಸನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Kamal Haasan (@ikamalhaasan)

    ‘ಬಿಗ್ ಬಾಸ್’ ಕಾರ್ಯಕ್ರಮದ ಮೂಲಕ ನಿಮ್ಮ ಮನ ಮತ್ತು ಮನೆ ತಲುಪಿದ್ದೇನೆ. ಅಗಾಧ ಪ್ರೀತಿ ಮತ್ತು ಕಾಳಜಿಯನ್ನು ತೋರಿಸಿದ್ದೀರಿ. ನಿಮ್ಮ ಬೆಂಬಲದಿಂದಾಗಿ ಬಿಗ್ ಬಾಸ್ ತಮಿಳು ರಿಯಾಲಿಟಿ ಶೋ ನನ್ನ ಪಾಲಿಗೆ ಬೆಸ್ಟ್ ಆಯಿತು. ಕಲಿಕೆಯ ಅನುಭವ ನೀಡಿದ ಈ ಶೋಗೆ ನಾನು ಋಣಿಯಾಗಿದ್ದೇನೆ. ಸ್ಪರ್ಧಿಗಳಿಂದ ಹಿಡಿದು ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.

    ಇನ್ನೂ ತಮಿಳಿನ ಬಿಗ್ ಬಾಸ್ ಶೋಗೆ ಮುಂದಿನ ನಿರೂಪಕ ಯಾರು ಎಂಬುದನ್ನು ವಾಹಿನಿ ಅಧಿಕೃತವಾಗಿ ತಿಳಿಸಬೇಕಿದೆ. ಹೀಗಿರುವಾಗ ಮುಂದಿನ ಹೋಸ್ಟ್‌ ಯಾರಿರಬಹುದು ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

  • ವಿಕ್ಕಿ ಕೌಶಲ್ ಜೊತೆಗಿನ ‘ಚಾವಾ’ ಚಿತ್ರಕ್ಕಾಗಿ ಮರಾಠಿ ಕಲಿತ ರಶ್ಮಿಕಾ ಮಂದಣ್ಣ

    ವಿಕ್ಕಿ ಕೌಶಲ್ ಜೊತೆಗಿನ ‘ಚಾವಾ’ ಚಿತ್ರಕ್ಕಾಗಿ ಮರಾಠಿ ಕಲಿತ ರಶ್ಮಿಕಾ ಮಂದಣ್ಣ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ‘ಚಾವಾ’ (Chhava) ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ಕಿ ಕೌಶಲ್ ಜೊತೆಗಿನ ಈ ಚಿತ್ರಕ್ಕಾಗಿ ನಟಿ ಮರಾಠಿ ಭಾಷೆಯನ್ನು ಕಲಿತಿದ್ದಾರೆ ಎಂಬ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಇದನ್ನೂ ಓದಿ:‘ಆರ್ಟಿಕಲ್ 370’ ಚಿತ್ರದ ನಟಿಯ ಪುತ್ರಿ ಮಿಹಿಕಾ ನಿಧನ

    ಛತ್ರಪತಿ ಸಂಭಾಜಿ ಅವರ ಜೀವನ ಕಥೆ ಆಧರಿಸಿ ಸಿನಿಮಾ ಬರುತ್ತಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ನಟಿಸುತ್ತಿದ್ದಾರೆ. ಈ ಸಿನಿಮಾದ ಹಲವು ಸಂಭಾಷಣೆಗಳು ಮರಾಠಿ ಭಾಷೆಯಲ್ಲಿ ಇರಲಿದ್ದು, ಅದಕ್ಕಾಗಿ 4 ವಾರಗಳ ಕಾಲ ನಟಿ ಮರಾಠಿ ಕಲಿಯಲು ವಿಶೇಷ ತರಬೇತಿ ಕೂಡ ಪಡೆದಿದ್ದಾರೆ. ವಿಕ್ಕಿ ಕೌಶಲ್ (Vicky Kaushal) ಕೂಡ ಮರಾಠಿ ಭಾಷೆ ಕಲಿಕೆಯಲ್ಲಿ ನಿರತರಾಗಿದ್ದಾರೆ.

    ‘ಚಾವಾ’ ಸಿನಿಮಾದಲ್ಲಿನ ತನ್ನ ಪಾತ್ರಕ್ಕೆ ರಶ್ಮಿಕಾ ಅವರೇ ಧ್ವನಿ ನೀಡಲಿದ್ದಾರೆ. ಇನ್ನೂ ಮೊದಲ ಬಾರಿಗೆ ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ನಟಿಸುತ್ತಿರುವ ಕಾರಣ ಈ ಚಿತ್ರದ ಮೇಲೆ ಫ್ಯಾನ್ಸ್‌ಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಇದನ್ನೂ ಓದಿ:ಗೋವಾದಲ್ಲಿ ಕೊಡೆ ಹಿಡಿದು ನಿಂತ ‘ಬಿಗ್ ಬಾಸ್’ ಖ್ಯಾತಿಯ ಸೋನು

    ಇನ್ನೂ ‘ಚಾವಾ’ ಸಿನಿಮಾವು ಡಿಸೆಂಬರ್ 6ರಂದು ‘ಪುಷ್ಪ 2’ ಮುಂದೆ ರಿಲೀಸ್ ಆಗಲಿದೆ. ಒಂದೇ ದಿನ ರಶ್ಮಿಕಾ ನಟನೆಯ ಎರಡು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ.

  • ಕತ್ರಿನಾ ಕೈಫ್ ಜೊತೆ ಸಿನಿಮಾ ಮಾಡುವ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ವಿಕ್ಕಿ ಕೌಶಲ್

    ಕತ್ರಿನಾ ಕೈಫ್ ಜೊತೆ ಸಿನಿಮಾ ಮಾಡುವ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ವಿಕ್ಕಿ ಕೌಶಲ್

    ಬಾಲಿವುಡ್‌ನ ಸ್ಟಾರ್ ಜೋಡಿ ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಸಿನಿಮಾದಲ್ಲೂ ಜೊತೆಯಾಗಿ ನಟಿಸಬೇಕು ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಹೀಗಿರುವಾಗ ಸಂದರ್ಶನವೊಂದರಲ್ಲಿ ಕತ್ರಿನಾ ಜೊತೆ ಸಿನಿಮಾ ಮಾಡುವ ಕುರಿತು ಎದುರಾದ ಪ್ರಶ್ನೆಗೆ ವಿಕ್ಕಿ ಕೌಶಲ್ ರಿಯಾಕ್ಟ್ ಮಾಡಿದ್ದಾರೆ. ಈ ಕುರಿತು‌ ಇಂಟರೆಸ್ಟಿಂಗ್ ವಿಚಾರವೊಂದು ಬಿಚ್ಚಿಟ್ಟಿದ್ದಾರೆ.

    ಕತ್ರಿನಾ ಜೊತೆ ಸಿನಿಮಾ ಮಾಡಲು ಎದುರು ನೋಡುತ್ತಿದ್ದೇನೆ. ಹೊಸ ಕಥೆಗಳು ಅರಸಿ ಬರುತ್ತಿವೆ. ಆದರೆ ನಾವು ಆ ಸಿನಿಮಾ ಮಾಡಬೇಕು ಎಂಬುದಕ್ಕಿಂತ ಆ ಕಥೆಯೇ ನಮ್ಮನ್ನು ಆಯ್ಕೆ ಮಾಡುವ ಹಾಗಿರಬೇಕು. ಸ್ಕ್ರಿಪ್ಟ್‌ ನಮ್ಮ ಜೋಡಿಯನ್ನು ಡಿಮ್ಯಾಂಡ್ ಮಾಡುವ ಹಾಗಿರಬೇಕು ಎಂದು ವಿಕ್ಕಿ ಕೌಶಲ್ ಮಾತನಾಡಿದ್ದಾರೆ. ಇದನ್ನೂ ಓದಿ:ಅಜಿತ್‌ಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್- ‘ಕೆಜಿಎಫ್ 3’ಗೆ ಕನೆಕ್ಟ್ ಆಗಲಿದೆ ಈ ಚಿತ್ರ

    ಅಂದಹಾಗೆ, 2 ವರ್ಷಗಳ ಡೇಟಿಂಗ್ ನಂತರ 2021ರಲ್ಲಿ ಡಿ.9ರಂದು ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ:ಡಾಲಿ ಧನಂಜಯ ಅಜ್ಜಿ ಮಲ್ಲಮ್ಮ ನಿಧನ

    ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಬ್ಯಾಡ್‌ ನ್ಯೂಸ್‌’ ಸಿನಿಮಾ ಬಳಿಕ ರಶ್ಮಿಕಾ (Rashmika Mandanna) ಜೊತೆಗಿನ ‘ಚಾವಾ’ ಸಿನಿಮಾ ರಿಲೀಸ್‌ಗೆ ವಿಕ್ಕಿ ಕೌಶಲ್‌ ಎದುರು ನೋಡ್ತಿದ್ದಾರೆ. ಬಯೋಪಿಕ್‌ ಸಿನಿಮಾ ಆಗಿರೋದ್ರಿಂದ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿದೆ.

  • ರಶ್ಮಿಕಾ ಮಂದಣ್ಣಗೆ ಸ್ವೀಟ್ ಹಾರ್ಟ್ ಎಂದ ವಿಕ್ಕಿ ಕೌಶಲ್

    ರಶ್ಮಿಕಾ ಮಂದಣ್ಣಗೆ ಸ್ವೀಟ್ ಹಾರ್ಟ್ ಎಂದ ವಿಕ್ಕಿ ಕೌಶಲ್

    ಬಾಲಿವುಡ್‌ ನಟ ವಿಕ್ಕಿ ಕೌಶಲ್‌ (Vicky Kaushal) ಮತ್ತು ರಶ್ಮಿಕಾ (Rashmika Mandanna) ನಟನೆಯ ಚಾವಾ ಸಿನಿಮಾ ಶೂಟಿಂಗ್‌ ಭರದಿಂದ ಸಾಗುತ್ತಿದೆ. ಇದರ ನಡುವೆ ಸಂದರ್ಶನವೊಂದರಲ್ಲಿ ‘ಚಾವಾ’ (Chhaava) ಸಿನಿಮಾ ಮತ್ತು ರಶ್ಮಿಕಾ ಜೊತೆ ನಟಿಸಿದ ಅನುಭವದ ಬಗ್ಗೆ ನಟ ಹಂಚಿಕೊಂಡಿದ್ದಾರೆ. ರಶ್ಮಿಕಾಗೆ ಸ್ವೀಟ್ ಹಾರ್ಟ್ ಎಂದು ವಿಕ್ಕಿ ಕೌಶಲ್ ಬಣ್ಣಿಸಿದ್ದಾರೆ.

    ಸಂದರ್ಶನವೊಂದರಲ್ಲಿ ವಿಕ್ಕಿ ಕೌಶಲ್ ಮಾತನಾಡಿ, ‘ಚಾವಾ’ ಸಿನಿಮಾದಲ್ಲಿ ಮೊದಲ ಬಾರಿಗೆ ನಾನು ಮತ್ತು ಜೊತೆಯಾಗಿ ನಟಿಸಿದೆವು. ಅವರು ಸಿನಿಮಾ ಸೆಟ್‌ನಲ್ಲಿ ಯಾವಾಗಲೂ ಪಾಸಿಟಿವಿಯಿಂದ ಇರುತ್ತಾರೆ. ರಶ್ಮಿಕಾ ಹೃದಯದಿಂದ ಕೂಡ ಸುಂದರವಾಗಿದ್ದಾರೆ ಎಂದಿದ್ದಾರೆ. ರಶ್ಮಿಕಾ ಎಂದರೆ ಸ್ವೀಟ್ ಹಾರ್ಟ್ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ವಿಶ್ವಕ್ ಸೇನ್‌ಗೆ ಕನ್ನಡತಿ ಶ್ರದ್ಧಾ ಶ್ರೀನಾಥ್‌ ಹೀರೋಯಿನ್

    ನಟಿ ಪ್ರತಿಭೆಯಿಂದ ಮಾತ್ರವಲ್ಲ ಆಕೆಗೆ ಪಾಸಿಟಿವಿ ನೋಡಿಯೇ ರಶ್ಮಿಕಾರನ್ನು ಫ್ಯಾನ್ಸ್ ಆರಾಧಿಸುತ್ತಾರೆ. ಫ್ಯಾನ್ಸ್ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಅವರ ಜೀವನ ಮತ್ತು ವೃತ್ತಿಯ ಕುರಿತು ಆಗಾಗ ಫ್ಯಾನ್ಸ್‌ಗೆ ಅಪ್‌ಡೇಟ್ ಕೊಡುತ್ತಲೇ ಇರುತ್ತಾರೆ ಎಂದು ವಿಕ್ಕಿ ಕೌಶಲ್‌ ಅವರು ರಶ್ಮಿಕಾ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅಂದಹಾಗೆ, ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಚಾವಾ’ ಸಿನಿಮಾ ಈ ವರ್ಷದ ಅಂತ್ಯದಲ್ಲಿ ಡಿ.6ರಂದು ರಿಲೀಸ್ ಆಗಲಿದೆ. ಅಂದಹಾಗೆ, ಛತ್ರಪತಿ ಸಂಭಾಜಿ ಮಹಾರಾಜ್ ಕುರಿತ ಬಯೋಪಿಕ್ ಸಿನಿಮಾ ಇದಾಗಿದೆ.

  • ‘ಬ್ಯಾಡ್ ನ್ಯೂಸ್’ ಚಿತ್ರದ 27 ಸೆಕೆಂಡ್‌ನ ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕಿದ ಸೆನ್ಸಾರ್ ಬೋರ್ಡ್

    ‘ಬ್ಯಾಡ್ ನ್ಯೂಸ್’ ಚಿತ್ರದ 27 ಸೆಕೆಂಡ್‌ನ ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕಿದ ಸೆನ್ಸಾರ್ ಬೋರ್ಡ್

    ಬಾಲಿವುಡ್ ನಟ ವಿಕ್ಕಿ ಕೌಶಲ್, ತೃಪ್ತಿ ದಿಮ್ರಿ (Triptii Dimri), ಆಮಿ ವಿರ್ಕ್ ನಟನೆಯ ‘ಬ್ಯಾಡ್ ನ್ಯೂಸ್’ (Bad Newz) ಸಿನಿಮಾ ಇದೇ ಜು.19ರಂದು ಬಿಡುಗಡೆಯಾಗಲಿದೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಹಾಟ್ ಸಾಂಗ್‌ವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇನ್ನೂ ಚಿತ್ರದ 27 ಸೆಕೆಂಡ್‌ಗಳ ಕಿಸ್ಸಿಂಗ್ ದೃಶ್ಯಕ್ಕೆ ಸೆನ್ಸಾರ್ ಬೋರ್ಡ್ ಕತ್ತರಿ ಹಾಕಿದೆ.

    ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಲಿಪ್‌ಲಾಕ್ ದೃಶ್ಯಗಳಿಗೆ ಕತ್ತರಿ ಹಾಕಿದೆ. ಈ ದೃಶ್ಯಗಳಲ್ಲಿ ಒಂದು 9 ಸೆಕೆಂಡುಗಳ ಕಾಲ ಕಿಸ್ಸಿಂಗ್ ಸೀನ್ ಇದ್ದರೆ, ಇನ್ನೆರಡು ದೃಶ್ಯಗಳಲ್ಲಿ 10 ಸೆಕೆಂಡುಗಳು ಮತ್ತು 8 ಸೆಕೆಂಡುಗಳು ಕಾಲ ಕಿಸ್ಸಿಂಗ್ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ:ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು ಬೆಚ್ಚಿಬಿದ್ದ ನಟಿ ಸುಚಿತ್ರಾ ಕೃಷ್ಣಮೂರ್ತಿ

     

    View this post on Instagram

     

    A post shared by Vicky Kaushal (@vickykaushal09)

    ‘ಅನಿಮಲ್’ ಸಿನಿಮಾದ ಸಕ್ಸಸ್ ಬಳಿಕ ತೃಪ್ತಿ ದಿಮ್ರಿ ‘ಬ್ಯಾಡ್ ನ್ಯೂಸ್’ ಚಿತ್ರ ಒಪ್ಪಿಕೊಂಡಿದ್ದಾರೆ. ವಿಕ್ಕಿ ಕೌಶಲ್ (Vicky Kaushal) ಜೊತೆ ಮೊದಲ ಬಾರಿಗೆ ನಟಿಸಿದ್ದಾರೆ. ಚಿತ್ರದ ‘ತೌಬಾ ತೌಬಾ’ ಸಾಂಗ್ ಹಿಟ್ ಆದ ಬಳಿಕ ಇಬ್ಬರ ರೊಮ್ಯಾಂಟಿಕ್ ಸಾಂಗ್ ಕೂಡ ಪಡ್ಡೆಹುಡುಗರ ನಿದ್ದೆಗೆಡಿಸಿದೆ.

    ಈ ಚಿತ್ರವನ್ನು ಆನಂದ್ ತಿವಾರಿ ನಿರ್ದೇಶನವನ್ನು ಮಾಡಿದ್ದಾರೆ. ಕರಣ್ ಜೋಹರ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಈ ಸಿನಿಮಾ ರಿಲೀಸ್‌ಗಾಗಿ ಪಡ್ಡೆಹುಡುಗರು ಎದುರು ನೋಡ್ತಿದ್ದಾರೆ.

  • ಇಬ್ಬರು ನಟರ ಜೊತೆ ‘ಅನಿಮಲ್‌’ ನಟಿ ತೃಪ್ತಿ ದಿಮ್ರಿ ರೊಮ್ಯಾನ್ಸ್

    ಇಬ್ಬರು ನಟರ ಜೊತೆ ‘ಅನಿಮಲ್‌’ ನಟಿ ತೃಪ್ತಿ ದಿಮ್ರಿ ರೊಮ್ಯಾನ್ಸ್

    ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣಗೆ (Rashmika Mandanna) ಠಕ್ಕರ್ ಕೊಟ್ಟು ‘ಅನಿಮಲ್’ (Animal) ಸಿನಿಮಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ತೃಪ್ತಿ ದಿಮ್ರಿ (Tripti Dimri) ಈಗ ಇಬ್ಬರು ಸ್ಟಾರ್ ನಟರ ಜೊತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

    ರಣ್‌ಬೀರ್ ಕಪೂರ್ (Ranbir Kapoor) ಜೊತೆ ರೊಮ್ಯಾನ್ಸ್ ಮಾಡಿದ್ಮೇಲೆ ತೃಪ್ತಿ ಲಕ್ ಬದಲಾಗಿದೆ. ಬಾಲಿವುಡ್‌ನಲ್ಲಿ ನಟಿಗೆ ರೆಡ್ ಕಾರ್ಪೆಟ್ ಹಾಕಿ ವೆಲ್‌ಕಮ್ ಮಾಡುತ್ತಿದ್ದಾರೆ. ಆಫರ್ ಮೇಲೆ ಆಫರ್ ತೃಪ್ತಿ ಕಡೆ ಅರಸಿ ಬರುತ್ತಿದೆ. ಇದನ್ನೂ ಓದಿ:‘ಓ ಮೈ ಲಿಲ್ಲಿ’ ಎಂದು ಅನುಪಮಾ ಜೊತೆ ಸಿದ್ದು ಡ್ಯುಯೇಟ್

    ವಿಕ್ಕಿ ಕೌಶಲ್, ಆಮಿ ವಿರ್ಕ್ ಜೊತೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ‘ಬ್ಯಾಡ್ ನ್ಯೂಸ್’ (Bad Newz) ಎಂಬ ಸಿನಿಮಾದಲ್ಲಿ ಇಬ್ಬರ ಜೊತೆ ತೃಪ್ತಿ ರೊಮ್ಯಾನ್ಸ್ ಮಾಡಲಿದ್ದಾರೆ. ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದ್ದು, ತೃಪ್ತಿ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇಬ್ಬರ ನಟರ ಇಷ್ಟೋಂದು ಬೋಲ್ಡ್ ಆಗಿ ಕಾಣಿಕೊಳ್ತಾರಾ ಎಂದು ಪ್ರಶ್ನೆಗಳ ಸರಿಮಳೆಯನ್ನೇ ಹರಿಸಿದ್ದಾರೆ.

    ‘ಬ್ಯಾಡ್ ನ್ಯೂಸ್’ (Bad Newz) ಚಿತ್ರಕ್ಕೆ ಕರಣ್ ಜೋಹರ್ (Karan Johar) ನಿರ್ಮಾಣ ಮಾಡಿದ್ದಾರೆ. ವಿಕ್ಕಿ ಕೌಶಲ್, ಆಮಿಗೆ ತೃಪ್ತಿ ಹೀರೋಯಿನ್ ಆಗಿದ್ದಾರೆ. ಇದೊಂದು ರೊಮ್ಯಾಂಟಿಕ್ ಡ್ರಾಮಾ ಚಿತ್ರವಾಗಿದೆ. ಸಿನಿಮಾ ಇದೇ ಜುಲೈ 19ಕ್ಕೆ ರಿಲೀಸ್ ಆಗಲಿದೆ.

    ತೃಪ್ತಿ ಸದ್ಯ ಕಾರ್ತಿಕ್ ಆರ್ಯನ್ ಜೊತೆಗಿನ ಸಿನಿಮಾ ಮತ್ತು ಕೆಲವು ತೆಲುಗು ಪ್ರಾಜೆಕ್ಟ್‌ಗಳನ್ನು ನಟಿ ಒಪ್ಪಿಕೊಂಡಿದ್ದಾರೆ.