Tag: ವಿಕ್ಕಿ ಕೌಶಲ್ಯ

  • ಮಾಲ್ಡಿವ್ಸ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ ನಟಿ ಕತ್ರಿಕಾ ಕೈಫ್

    ಮಾಲ್ಡಿವ್ಸ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ ನಟಿ ಕತ್ರಿಕಾ ಕೈಫ್

    ಬಾಲಿವುಡ್ ನ ಖ್ಯಾತ ನಟಿ ಕತ್ರಿನಾ ಕೈಫ್ ಈ ಬಾರಿ ತಮ್ಮ ಹುಟ್ಟು ಹಬ್ಬವನ್ನು ಮಾಲ್ಡಿವ್ಸ್ ನಲ್ಲಿ ಆಚರಿಸಿಕೊಳ್ಳಲಿದ್ದಾರಂತೆ. ನಾಳೆ ಅವರು ಹುಟ್ಟಿದ ದಿನ ಹಾಗಾಗಿ ಇಂದು ಪತಿ ವಿಕ್ಕಿ ಕೌಶಲ್ ಜೊತೆ ಅವರು ಮಾಲ್ಡಿವ್ಸ್ ಗೆ ಹಾರಿದ್ದಾರೆ. ಶುಕ್ರವಾರ ಮಧ್ಯಾಹ್ನ ಪತಿ ವಿಕ್ಕಿ ಜೊತೆ ವಿಮಾನ ಏರಿರುವ ಕತ್ರಿನಾ ಕೈಫ್ ಇಂದು ಮಧ್ಯ ರಾತ್ರಿಯಿಂದಲೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎನ್ನುತ್ತಿವೆ ಮೂಲಗಳು.

    ಕತ್ರಿನಾ ಕೈಫ್ ಅವರು ಹುಟ್ಟು ಹಬ್ಬವು ಈ ಬಾರಿ ವಿಶೇಷತೆಯಿಂದ ಕೂಡಿರಲಿದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ, ಕತ್ರಿನಾ ಪ್ರಗ್ನೆಂಟ್ ಅನ್ನುವ ಸುದ್ದಿಯೂ ಹರಿದಾಡುತ್ತಿದೆ. ಹುಟ್ಟು ಹಬ್ಬದ ಗಿಫ್ಟ್ ಆಗಿ ಈ ಸಿಹಿ ಸುದ್ದಿಯನ್ನು ನಾಳೆ ಅವರು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ ಎನ್ನುವ ಮಾಹಿತಿಯೂ ಇದೆ. ಕತ್ರಿನಾ ತಾಯಿ ಆಗುತ್ತಿರುವ ವಿಷಯ ಹಲವು ದಿನಗಳಿಂದ ಬಾಲಿವುಡ್ ನಲ್ಲಿ ಹರಿದಾಡುತ್ತಿದ್ದರೂ, ಈವರೆಗೂ ಕತ್ರಿನಾ ಆಗಲಿ, ವಿಕ್ಕಿ ಆಗಲಿ ಖಚಿತ ಪಡಿಸಿಲ್ಲ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

    ನಾಳೆ ನಡೆಯಲಿರುವ ಹುಟ್ಟು ಹಬ್ಬದ ಪಾರ್ಟಿಯಲ್ಲಿ ವಿಕ್ಕಿ ಸಹೋದರ ಸನ್ನಿ ಕೌಶಲ್ ಮತ್ತು ಶಾರ್ವತಿ ವಾಘ್ ಕೂಡ ಭಾಗಿಯಾಗಲಿದ್ದು, ಆಪ್ತರಿಗೂ ಆಹ್ವಾನ ನೀಡಿದ್ದಾರಂತೆ. ಸದ್ಯ ಈ ಜೋಡಿ ಸಿನಿಮಾ ರಂಗದಲ್ಲೂ ಬ್ಯುಸಿಯಾಗಿದ್ದು, ಸಲ್ಮಾನ್ ಖಾನ್ ನಟನೆಯ ಸಿನಿಮಾದಲ್ಲಿ ಕತ್ರಿನಾ ಬ್ಯುಸಿಯಾಗಿದ್ದರೆ, ವಿಕ್ಕಿ ದಿ ಇಮ್ಮಾರ್ಟಲ್ ಅಶ್ವತ್ಥಾಮ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೀಲಿ ಬಿಕಿನಿಯಲ್ಲಿ ಮಿರಮಿರ ಮಿಂಚುತ್ತಿರುವ ಕತ್ರಿನಾ ಕೈಫ್

    ನೀಲಿ ಬಿಕಿನಿಯಲ್ಲಿ ಮಿರಮಿರ ಮಿಂಚುತ್ತಿರುವ ಕತ್ರಿನಾ ಕೈಫ್

    ಬಾಲಿವುಡ್ ನಟಿ ಕತ್ರಿನಾ ಕೈಫ್ ಮದುವೆಯಾದ ನಂತರ ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಫರ್ಹಾನ್ ಅಖ್ತರ್ ನಿರ್ದೇಶನದ ‘ಜೀ ಲೇ ಝರಾ’ ಸಿನಿಮಾದಲ್ಲಿ ಸದ್ಯ ಅವರು ನಟಿಸುತ್ತಿದ್ದರೂ, ಸಿನಿಮಾ ರಂಗದಲ್ಲಿ ಅವರು ಅಷ್ಟೊಂದು ಆಕ್ಟಿವ್ ಆಗಿಲ್ಲ ಎನ್ನುವುದು ಕತ್ರಿನಾರ ಅಭಿಮಾನಿಗಳ ನೋವಾಗಿತ್ತು. ಇದೀಗ ಅಭಿಮಾನಿಗಳಿಗೆ ಹೊಸ ಸುದ್ದಿಯೊಂದನ್ನು ನೋಡಿದ್ದಾರೆ. ಇದನ್ನೂ ಓದಿ : ನಟ ಶಾರುಖ್ ಖಾನ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್

    ಸದ್ಯ ಕತ್ರಿಕಾ ಅವರು ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3; ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅಲ್ಲದೇ, ಪತಿಯ ಜತೆ ಇನ್ನೂ ಹೆಸರಿಡದ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಮಾಹಿತಿ ಇದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಸಾರಾ ಅಲಿ ಖಾನ್ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ.  ಇದನ್ನೂ ಓದಿ : ಹಿಂದಿ ರಾಷ್ಟ್ರ ಭಾಷೆ : ಕರ್ನಾಟಕದಲ್ಲಿ ಅಜಯ್ ದೇವಗನ್ ಸಿನಿಮಾ ರಿಲೀಸ್ ಅಡ್ಡಿ : ಕರವೇಯಿಂದ ಪ್ರತಿಭಟನೆ

     

    View this post on Instagram

     

    A post shared by Katrina Kaif (@katrinakaif)

    2021 ಡಿಸೆಂಬರ್ 9 ರಂದು ರಾಜಸ್ಥಾನದ ಸವಾಯಿ ಮಧೋಪುರದಲ್ಲಿ ವಿಕ್ಕಿ ಕೌಶಲ್ ಜತೆ ಕತ್ರಿನಾ ಕೈಫ್ ಸಪ್ತಪದಿ ತುಳಿದ ನಂತರ ಸಿನಿಮಾ ರಂಗದಲ್ಲಿ ಅವರು ಅಷ್ಟೊಂದು ಸಕ್ರಿಯರಾಗುವುದು ಅನುಮಾನ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಕೆಲ ತಿಂಗಳು ಅವರು ಯಾವುದೇ ಸಿನಿಮಾದಲ್ಲಿ ನಟಿಸದೇ ಇರುವ ಕಾರಣಕ್ಕಾಗಿ ಅದು ನಿಜ ಎಂದು ನಂಬಲಾಗಿತ್ತು. ಇದೀಗ ಕತ್ರಿನಾ ಮೂರು ಚಿತ್ರಗಳಿಗೆ ಸಹಿ ಮಾಡಿದ್ದಾರೆ.

    ಈ ಮಧ್ಯ ಕತ್ರಿನಾ ಹಾಲಿಡೇ ಮೂಡ್ ನಲ್ಲಿದ್ದು, ಸಮುದ್ರದ ದಂಡೆಯ ಮೇಲೆ ನಿಂತುಕೊಂಡು ಸೂರ್ಯನಿಗಾಗಿ ಕಾಯುವಂತೆ ಒಂದು ಫೋಟೋ ತಗೆಸಿಕೊಂಡಿದ್ದು, ನೀಲಿ ಬಣ್ಣದ ಬಿಕಿನಿಯಲ್ಲಿ ಮಿರಮಿರ ಮಿಂಚುತ್ತಿದ್ದಾರೆ.