Tag: ವಿಕೇಂಡ್ ಕರ್ಫ್ಯೂ

  • ವೀಕೆಂಡ್ ಕರ್ಫ್ಯೂ, ಲಾಕ್ ಡೌನ್ ವಿಧಿಸೋದಾದ್ರೆ ವ್ಯಾಕ್ಸಿನ್ ಯಾಕೆ ಬೇಕಿತ್ತು: ಪ್ರತಾಪ್ ಸಿಂಹ

    ವೀಕೆಂಡ್ ಕರ್ಫ್ಯೂ, ಲಾಕ್ ಡೌನ್ ವಿಧಿಸೋದಾದ್ರೆ ವ್ಯಾಕ್ಸಿನ್ ಯಾಕೆ ಬೇಕಿತ್ತು: ಪ್ರತಾಪ್ ಸಿಂಹ

    ಮೈಸೂರು: ವೀಕೆಂಡ್ ಕರ್ಫ್ಯೂ, ಲಾಕ್ ಡೌನ್ ವಿಧಿಸುವದಾದರೆ ವ್ಯಾಕ್ಸಿನ್ ಯಾಕೆ ಬೇಕಿತ್ತು ಎಂದು ಸಂಸದ ಪ್ರತಾಪ್ ಸಿಂಹ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಅಲ್ಲಿ ಪ್ರಚಾರ  ರ್‍ಯಾಲಿ ನಡೆಯುತ್ತದೆ ತಾನೇ? ಹೀಗಿರುವಾಗ ಕರ್ನಾಟಕದಲ್ಲಿ ಯಾಕೆ ಕರ್ಫ್ಯೂ , ಲಾಕ್ ಡೌನ್ ಅಂತಾ ಜನರನ್ನು ಮತ್ತೆ ಕಂಗಾಲು ಮಾಡುತ್ತಿದ್ದಿರಿ? ಜನರನ್ನು ಭೀತಿಯಲ್ಲಿ ಇಡುವುದು ಮೊದಲು ಸರ್ಕಾರ ನಿಲ್ಲಿಸಲಿ. ಕರ್ಫ್ಯೂ, ಲಾಕ್ ಡೌನ್ ನಿಂದ ಜನರಿಗೆ ಬಹಳ ತೊಂದರೆಯಾಗಿದೆ ಎಂದರು. ಇದನ್ನೂ ಓದಿ: ಹಿಂದೂ ಮಹಿಳೆ, ಮುಸ್ಲಿಂ ವ್ಯಕ್ತಿ ರೈಲಿನಲ್ಲಿ ಪ್ರಯಾಣ – ಲವ್ ಜಿಹಾದ್ ಅಂತ ಠಾಣೆಗೆ ಎಳೆದೊಯ್ದ ಭಜರಂಗದಳ ಸದಸ್ಯರು

    ಜನರ ಜೀವನ, ಜೀವ ಎರಡು ಮುಖ್ಯವಾಗಿದೆ. ಜೀವ ಉಳಿಸಿ ಕೊಳ್ಳಲು ವ್ಯಾಕ್ಸಿನ್ ಕೊಟ್ಟಿದ್ದೇವೆ. ಈಗ ಜೀವನ ಉಳಿಯ ಬೇಕಾದರೆ ಕಫ್ರ್ಯೂ, ಲಾಕ್ ಡೌನ್ ತೆಗೆಯಿರಿ. ಸಿಎಂ ಬಸವರಾಜ ಬೊಮ್ಮಾಯಿ ಈ ಬಗ್ಗೆ ಶುಕ್ರವಾರದ ಸಭೆಯಲ್ಲಿ ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಎಲ್ಲಾ ವರ್ಗದ ಜನರಿಗೂ ಕರ್ಫ್ಯೂ, ಲಾಕ್ ಡೌನ್ ನಿಂದ ತೊಂದರೆ ಆಗಿದೆ ಎಂದು ನುಡಿದರು. ಇದನ್ನೂ ಓದಿ: ತಜ್ಞರು ಗ್ರೀನ್ ಸಿಗ್ನಲ್ ಕೊಟ್ರೆ ಬೆಂಗಳೂರಿನಲ್ಲಿ ಮರು ದಿನವೇ ಶಾಲೆ ಪ್ರಾರಂಭ: ಬಿಸಿ ನಾಗೇಶ್

  • ಆಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದ ಸೀರಿಯಲ್ ತಂಡಕ್ಕೆ ಪ್ಯಾಕಪ್ ಹೇಳಿದ ಪೊಲೀಸರು

    ಆಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದ ಸೀರಿಯಲ್ ತಂಡಕ್ಕೆ ಪ್ಯಾಕಪ್ ಹೇಳಿದ ಪೊಲೀಸರು

    ಚಿಕ್ಕಮಗಳೂರು: ರಾಜ್ಯಾದ್ಯಂತ ವೀಕ್ ಎಂಡ್ ಲಾಕ್‍ಡೌನ್ ಮಧ್ಯೆಯೂ ಜನ ರಸ್ತೆಗೆ ಇಳಿದು ಪೊಲೀಸರ ಕೈಗೆ ಸಿಕ್ಕಿ ನರಳಾಡಿದ್ದಾರೆ. ಧಾರಾವಾಹಿಯ ತಂಡದವರು ನಮಗೂ ವೀಕ್ ಎಂಡ್ ಲಾಕ್‍ಡೌನ್‍ಗೂ ಸಂಬಂಧವಿಲ್ಲದಂತೆ ಬಜ್ಜಿ, ಪಾನಿಪೂರಿ ತಿಂದುಕೊಂಡು ಸದ್ದಿಲ್ಲದೆ ಶೂಟಿಂಟ್‍ನಲ್ಲಿ ಬ್ಯುಸಿಯಾಗಿದ್ದಾರೆ.

    ಸರ್… ಆಂಟಿ ಮನೆಗೆ ಹೋಗ್ತಿದ್ದೇನೆ. ಅತ್ತೆ ಮನೆಗೆ ಹೋಗಿ ಬರುತ್ತಿದ್ದೇನೆ. ಅಜ್ಜಿ ಫೋಟೋಗೆ ಫ್ರೇಮ್ ಹಾಕ್ಸೋಕ್ಕೆ ಹೋಗ್ತೀದಿನಿ, ಮಟನ್, ಕೊತ್ತಂಬರಿ ಸೊಪ್ಪು ತರಬೇಕು ನಾನಾ ರೀತಿಯ ಸಬೂಬು ಹೇಳಿಕೊಂಡು ರಸ್ತೆಗಿಳಿದ ಜನಸಾಮಾನ್ಯರು ಪೊಲೀಸರ ಕೈಗೆ ಸಿಕ್ಕಿ ಗಾಡಿ ಸೀಜ್ ಮಾಡಿಸಿಕೊಂಡು ಸರ್… ಬಿಡಿ ಸರ್… ಎಂದು ಗೋಳಾಡಿದ್ದಾರೆ. ಆದರೆ, ಧಾರಾವಾಹಿಯ ತಂಡದವರು ನಮಗೂ ವೀಕ್ ಎಂಡ್ ಕರ್ಫ್ಯೂಗೂ ಸಂಬಂಧವಿಲ್ಲದಂತೆ ಸದ್ದಿಲ್ಲದೆ ಶೂಟಿಂಟ್ ಮಾಡುತ್ತಿದ್ದರು. ಜಿಲ್ಲೆಯ ಮೂಡಿಗೆರೆ ತಾಲೂಕಿನ ಫಲ್ಗುಣಿ ಗ್ರಾಮದ ಕಾಫಿ ಕೆಫೆ ಕಾರ್ನರ್‌ನಲ್ಲಿ ಸೀರಿಯಲ್ ಟೀಂ ಸಂಜೆ ವೇಳೆಯ ಶೂಟಿಂಗ್‍ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಸಂಜೆ ವೇಳೆ ಬಜ್ಜಿ ಹಾಗೂ ಪಾನಿಪೂರಿ ತಿನ್ನುವ ಸನ್ನಿವೇಶದ ಚಿತ್ರೀಕರಣಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ, ವಿಷಯ ತಿಳಿದ ಬಣಕಲ್ ಸಬ್‍ಇನ್ಸ್‌ಪೆಕ್ಟರ್‌ ಗಾಯತ್ರಿ ಸ್ಥಳಕ್ಕೆ ಭೇಟಿ ನೀಡಿ ಶೂಟಿಂಗ್‍ಗೆ ಆಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದ ಸೀರಿಯಲ್ ತಂಡಕ್ಕೆ ಪ್ಯಾಕಪ್ ಹೇಳಿದ್ದಾರೆ. ಇದನ್ನೂ ಓದಿ: ವಿಕೇಂಡ್ ಕರ್ಫ್ಯೂನಲ್ಲಿ ಮತ್ತೆ ಕೊತ್ತಂಬರಿ ಸೊಪ್ಪು, ಮಟನ್ ತರೋರದ್ದೇ ಕಾರುಬಾರು

    ವೀಕ್ ಎಂಡ್ ಲಾಕ್‍ಡೌನ್ ಮಧ್ಯೆಯೂ ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡಕ್ಕೆ ಕ್ಲಾಸ್ ತೆಗೆದುಕೊಂಡು ಫೈನ್ ಹಾಕಿದ್ದಾರೆ. ಚಿತ್ರೀಕರಣದ ಸ್ಥಳದಲ್ಲಿ ಅಂದಾಜು 50 ಜನರಿದ್ದು, ಕೆಲವರು ಕಾರಿನಲ್ಲಿ ಕೂತಿದ್ದರು. ಮತ್ತಲವರು ಶೂಟಿಂಟ್‍ಗೆ ರೆಡಿಯಾಗುತ್ತಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಂತೆ ಕ್ಯಾಮೆರಾಮೆನ್ ಟ್ರೈಪಾಡ್ ಸಮೇತ ಕ್ಯಾಮರಾವನ್ನು ತೆಗೆದುಕೊಂಡು ಹೋಗಿ ಗಾಡಿಯಲ್ಲಿ ಇಟ್ಟಿದ್ದಾರೆ. ಚಿತ್ರೀಕರಣಕ್ಕಾಗಿ ಕಾಫಿ ಕಾರ್ನರ್ ಸುತ್ತಲೂ ಲೈಟ್ ಹಾಕಿ ಎಲ್ಲಾ ಸಿದ್ಧತೆ ಮಾಡಿದ್ದರು. ಪಾನಿಪೂರಿ, ಬಜ್ಜಿ ಕೂಡ ರೆಡಿ ಇತ್ತು. ಇನ್ನೇನು ತಿನ್ನಬೇಕೆನ್ನುವಷ್ಟರಲ್ಲಿ ಪೊಲೀಸರು ಎಲ್ಲರನ್ನೂ ವಾಪಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ಶಲ್ಯ ಮುಖಕ್ಕೆ ಕಟ್‌ಕೊಂಡಿನ್ರೀ ಮತ್ ಮಾಸ್ಕ್ ಯಾಕ್ ಹಾಕಬೇಕು: ವ್ಯಕ್ತಿಯ ಕಿರಿಕ್

  • ವಿಕೇಂಡ್ ಕರ್ಫ್ಯೂನಲ್ಲಿ ಮತ್ತೆ ಕೊತ್ತಂಬರಿ ಸೊಪ್ಪು, ಮಟನ್ ತರೋರದ್ದೇ ಕಾರುಬಾರು

    ವಿಕೇಂಡ್ ಕರ್ಫ್ಯೂನಲ್ಲಿ ಮತ್ತೆ ಕೊತ್ತಂಬರಿ ಸೊಪ್ಪು, ಮಟನ್ ತರೋರದ್ದೇ ಕಾರುಬಾರು

    ಬೆಂಗಳೂರು: ವೀಕೆಂಡ್ ಕರ್ಫ್ಯೂ ವೇಳೆ ಸಣ್ಣ ಪುಟ್ಟ ಕಾರಣಗಳೊಂದಿಗೆ ಬೆಳ್ಳಂಬೆಳಗ್ಗೆ ರಸ್ತೆಗೆ ಬಂದ ಜನಸಾಮಾನ್ಯರು ಪೊಲೀಸರ ಕೈಯಲ್ಲಿ ಸಿಕ್ಕಿ ಒದ್ದಾಡಿದ್ರು. ಅನಗತ್ಯವಾಗಿ ರಸ್ತೆಗೆ ಇಳಿದವರ ಜೊತೆಗೆ ತುರ್ತು ಮತ್ತು ನೈಜ ಕಾರಣಗಳೊಂದಿಗೆ ಮನೆಯಿಂದ ಹೊರಗೆ ಬಂದವರು ಕೂಡ ತೊಂದ್ರೆ ಅನುಭವಿಸಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡು ಬೇರೆ ಬೇರೆ ಸಬೂಬು ಹೇಳಿದ್ದಾರೆ.

    ಕರ್ಫ್ಯೂ ಇದ್ದುದರಿಂದ ಕೆಆರ್ ಮಾರ್ಕೆಟ್ ಬಳಿ ವಾಹನ ತಪಾಸಣೆಗಿಳಿದ್ದ ಬೆಂಗಳೂರು ಪೊಲೀಸರ ಬಳಿ ವ್ಯಕ್ತಿಯೊಬ್ಬ ಕೊತ್ತಂಬ್ರಿ ಸೊಪ್ಪು ತರೋಕೆ ಬಂದೆ ಎಂದು ಹೇಳಿ ಮತ್ತೊಮ್ಮೆ ಹಳೆಯ ಕೊತ್ತಂಬರಿ ಸೊಪ್ಪು ಘಟನೆ ನೆನಪಿಸಿದ್ದಾನೆ. ಮತ್ತೊಬ್ಬ ಸಂಡೇ ಆಂಟಿ ಮನೆಗೆ ಹೊಂಟೀವಿ.. ಬಿಡಿ ಸಾರ್ ಎಂದರೆ, ಅಲ್ಲೊಬ್ಬ ಅತ್ತೆ ಮನೆಲಿದ್ದೆ.. ಮನೆಗೆ ಹೋಗ್ತಿದ್ದಿನಿ ಸಾರ್ ಎಂದು ಕಾರಣ ಕೊಟ್ಟು ನಗೆ ಪಾಟಲಿಗೆ ಕಾರಣರಾದರು. ಇದನ್ನೂ ಓದಿ: ಶಲ್ಯ ಮುಖಕ್ಕೆ ಕಟ್‌ಕೊಂಡಿನ್ರೀ ಮತ್ ಮಾಸ್ಕ್ ಯಾಕ್ ಹಾಕಬೇಕು: ವ್ಯಕ್ತಿಯ ಕಿರಿಕ್

    ಕೆಆರ್ ಮಾರ್ಕೆಟ್ ಬಳಿ ಅಂತೂ, ಮಗುವಿಗೆ ಹುಷಾರಿಲ್ಲ. ತಾಯತದವ್ರನಾ ಹುಡುಕಿ ಬಂದೇ, ಮಟನ್ ತರೋಕೆ ಬಂದೆ ಎಂದು ಕಾರಣ ಹೇಳಿ ಪೊಲೀಸರಿಗೆ ನಗು ತರಿಸಿದರು. ಇನ್ನೂ ಜಿಲ್ಲೆಗಳತ್ತ ಕೂಡ ಇದೇ ಪರಿಸ್ಥಿತಿ ರಾಯಚೂರಿನಲ್ಲಿ ವ್ಯಕ್ತಿಯೊಬ್ಬ ನಿಮಗೆ ಕೊರೊನಾ ಬರಲಿ ಎಂದು ಪೊಲೀಸ್ರಿಗೆ ಹಿಡಿಶಾಪ ಹಾಕಿದರೆ, ಬೆಳಗಾವಿಯಲ್ಲಿ ನಿಮ್ ಪೊಲೀಸ್ರು ಮಾಸ್ಕ್ ಹಾಕಿಲ್ಲ. ಡಿಸಿಪಿ ಜೊತೆ ವೈದ್ಯೆ ವಾಗ್ವಾದಕ್ಕೆ ಇಳಿದಿದ್ದರು. ಮತ್ತೊಬ್ಬ ಹತ್ತು ರೂಪಾಯಿ ಮಾಸ್ಕ್‍ಗೆ 100 ರೂ. ದಂಡ ಕಟ್ಬೇಕಾ? ಎಂದು ಪ್ರಶ್ನೆ ಕೇಳಿದ್ದಾನೆ. ಇದನ್ನೂ ಓದಿ: ಬೆಂಗಳೂರು ಬುಲ್ಸ್ ವಿರುದ್ಧ ಗೆಲುವಿನ ಪಟಾಕಿ ಸಿಡಿಸಿದ ಪಾಟ್ನಾ

    ವಿಜಯಪುರದಲ್ಲಿ ರೈತರೊಬ್ಬರು ಕೊತ್ತಂಬರಿ, ಸೊಪ್ಪು ರಸ್ತೆಗೆ ಎಸೆದು ಆಕ್ರೋಶ ಹೊರಹಾಕಿದರು. ಯಾದಗಿರಿಯಲ್ಲಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಶಲ್ಯ ಹಾಕಿದ್ದೀನಲ್ವಾ..? ಮಾಸ್ಕ್ ಯಾಕೆ ಹಾಕ್ಬೇಕು ಎಂದು ಪೊಲೀಸರಿಗೆ ದಬಾಯಿಸಿದ್ದಾನೆ. ಹೀಗೆ ಹಲವು ಭಾಗಗಳಲ್ಲಿ ಹಲವು ಘಟನೆಗಳು ವಿಕೇಂಡ್ ಕರ್ಫ್ಯೂನಲ್ಲಿ ಕಾಣಸಿಕ್ಕಿತು. ಇದನ್ನೂ ಓದಿ: ಮಗುವಿನ ಎದೆಗೂಡಿನ ಪಕ್ಕದಲ್ಲಿದ್ದ ಎಲುಬಿನ ಬಾಲ ತೆಗೆದುಹಾಕಿದ ವೈದ್ಯರು