Tag: ವಿಕಿಪೀಡಿಯಾ

  • ವಿಕಿಪೀಡಿಯಾಗೆ ಮಸ್ಕ್‌ ಸೆಡ್ಡು- 2 ವಾರದಲ್ಲಿ ಗ್ರೋಕಿಪೀಡಿಯಾ ಬಿಡುಗಡೆ

    ವಿಕಿಪೀಡಿಯಾಗೆ ಮಸ್ಕ್‌ ಸೆಡ್ಡು- 2 ವಾರದಲ್ಲಿ ಗ್ರೋಕಿಪೀಡಿಯಾ ಬಿಡುಗಡೆ

    ವಾಷಿಂಗ್ಟನ್‌: ವಿಕಿಪೀಡಿಯಾಗೆ ಪ್ರತಿಯಾಗಿ ಟೆಸ್ಲಾ ಮುಖ್ಯಸ್ಥ ವಿಶ್ವದ ನಂಬರ್‌ ಶ್ರೀಮಂತ ಉದ್ಯಮಿ ಎಲೋನ್‌ ಮಸ್ಕ್‌ (Elon Musk) ಗ್ರೋಕಿಪೀಡಿಯಾ ತರುವುದಾಗಿ ಘೋಷಣೆ ಮಾಡಿದ್ದು ಆರಂಭಿಕ ಆವೃತ್ತಿ ಮುಂದಿನ ಎರಡು ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

    ಗ್ರೋಕಿಪೀಡಿಯಾ (Grokpedia) ಜನರಿಗೆ ಮತ್ತು AI ಗಾಗಿ ಬಳಕೆಯ ಮೇಲೆ ಯಾವುದೇ ಮಿತಿಗಳಿಲ್ಲದೆ ವಿಶ್ವದ ಅತಿದೊಡ್ಡ, ಅತ್ಯಂತ ನಿಖರವಾದ ಜ್ಞಾನ ಮೂಲವಾಗಲಿದೆ ಎಂದಿದ್ದಾರೆ.

    ಮಸ್ಕ್‌ ಮೊದಲಿನಿಂದಲೂ ವಿಕಿಪೀಡಿಯಾವನ್ನು ಟೀಕಿಸುತ್ತಲೇ ಬಂದಿದ್ದಾರೆ. ವಿಶ್ವಕೋಶ ಎಂದೇ ಬಿಂಬಿತವಾಗಿರುವ ವಿಕಿಪೀಡಿಯಾನ್ನು (Wikipedia) ಎಡಪಂಥೀಯರು ನಿಯಂತ್ರಿಸುತ್ತಿದ್ದು ದೇಣಿಗೆ ನೀಡಬೇಡಿ ಮಸ್ಕ್‌ ಬಹಿರಂಗ ಕರೆ ನೀಡಿದ್ದರು.


    ಮಸ್ಕ್‌ ಹೇಳೋದು ಏನು?
    ವಿಕಿಪೀಡಿಯಾ ತಟಸ್ಥ ನೀತಿಯನ್ನು ಹೊಂದಿಲ್ಲ. ಇದನ್ನು ತೀವ್ರ ಎಡಪಂಥೀಯ ಕಾರ್ಯಕರ್ತರು ನಿರ್ವಹಿಸುತ್ತಿದಾರೆ. ವಿಶ್ವಕೋಶ ಪಕ್ಷಪಾತೀಯವಾಗಿ ಕೆಲಸ ಮಾಡುತ್ತಿದೆ. ತಮ್ಮ ಸಿದ್ಧಾಂತವನ್ನು ಬಳಸುವ ಪ್ರಚಾರ ಸಾಧನವಾಗಿ ಬಳಸುತ್ತಿದ್ದಾರೆ. ಇದನ್ನೂ ಓದಿ:  ಟ್ರಂಪ್‌ H-1B ವೀಸಾ ಟಫ್‌ ರೂಲ್ಸ್‌ ನಡುವೆಯೂ ಭಾರತೀಯರಿಗೆ ಮಣೆ ಹಾಕಿದ ಕಂಪನಿಗಳು – ಮೈಸೂರಲ್ಲಿ ಓದಿದ್ದ ವ್ಯಕ್ತಿಗೆ ಸಿಇಒ ಪಟ್ಟ

    ಇಂದು ಅನೇಕ ಎಐಗಳು ಇಂಟರ್‌ನೆಟ್‌ನಿಂದ ಮಾಹಿತಿಯನ್ನು ಪಡೆದು ಉತ್ತರ ನೀಡುತ್ತಿವೆ. ವಿಕಿಪೀಡಿಯಾದ ಉತ್ತರವನ್ನು ಬಳಸುವುದರಿಂದ ತಪ್ಪು ಮಾಹಿತಿಗಳಿಗೆ ಪ್ರಚಾರ ಸಿಗುತ್ತಿವೆ.

    ಗ್ರೋಕಿಪೀಡಿಯಾವನ್ನು ಯಾವುದೇ ಕಾರ್ಯಕರ್ತರು ಅಥವಾ ರಾಜಕೀಯ ಪಕ್ಷಗಳು ನಿಯಂತ್ರಿಸುವುದಿಲ್ಲ. ಇದು ಮುಕ್ತ ಮೂಲವಾಗಿರುತ್ತದೆ ಮತ್ತು ಎಲ್ಲರಿಗೂ ಬಳಸಲು ಉಚಿತವಾಗಿರುತ್ತದೆ.

    ಇಸ್ರೇಲ್‌-ಹಮಾಸ್‌ ಯುದ್ಧಕ್ಕೆ ಸಂಬಂಧಿಸಿದಂತೆ ವಿಕಿಪೀಡಿಯಾದ ವರದಿಯನ್ನು ಮಸ್ಕ್‌ ಈ ಹಿಂದೆ ಟೀಕಿದ್ದರು. ವಿಕಿಪೀಡಿಯಾದ 40 ಸೂಪರ್‌ ಸಂಪಾದಕರು ಇಸ್ರೇಲ್‌ ವಿರುದ್ಧ ಮತ್ತು ಹಮಾಸ್‌ ಪರವಾಗಿ ಬರಹಗಳನ್ನು ಪ್ರಕಟಿಸುತ್ತಿದ್ದಾರೆ. ಇಸ್ರೇಲ್ -ಪ್ಯಾಲೆಸ್ತೀನ್ ಸಂಘರ್ಷದ ಕುರಿತಾದ ವ್ಯಾಖ್ಯಾನವನ್ನು ಬದಲಿಸುತ್ತಿದ್ದಾರೆ. ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಅನುಕೂಲಕರವಾಗುವಂತೆ ಎಡಿಟ್‌ ಮಾಡಲಾಗುತ್ತಿದೆ. ಇಸ್ಲಾಮಿಕ್ ರಿಪಬ್ಲಿಕ್ ಪಾರ್ಟಿ ಅಧಿಕಾರಿಗಳು ಮಾಡಿರುವ ಮಾನವ ಹಕ್ಕುಗಳ ಅಪರಾಧಗಳನ್ನು ಅಳಿಸಿ ಹಾಕಲಾಗಿದೆ. ಹಲವಾರು ಲೇಖನಗಳಲ್ಲಿ ಇರಾನ್ ಸರ್ಕಾರದ ಹಿತಾಸಕ್ತಿಗಳನ್ನು ಉತ್ತೇಜಿಸಲು ಗುಂಪು ಪ್ರಯತ್ನಿಸುತ್ತಿದೆ ಎಂದು ಮಸ್ಕ್‌ ಹೇಳಿದ್ದರು.

  • ನಿಮಗೆ ಇಷ್ಟವಾಗದೇ ಇದ್ರೆ ಭಾರತದಲ್ಲಿ ಕೆಲಸ ಮಾಡಬೇಡಿ – ವಿಕಿಪೀಡಿಯಗೆ ಹೈಕೋರ್ಟ್‌ ಎಚ್ಚರಿಕೆ

    ನಿಮಗೆ ಇಷ್ಟವಾಗದೇ ಇದ್ರೆ ಭಾರತದಲ್ಲಿ ಕೆಲಸ ಮಾಡಬೇಡಿ – ವಿಕಿಪೀಡಿಯಗೆ ಹೈಕೋರ್ಟ್‌ ಎಚ್ಚರಿಕೆ

    ನವದೆಹಲಿ: ನಿಮಗೆ ಭಾರತ (India) ಇಷ್ಟವಾಗದಿದ್ದರೆ, ದಯವಿಟ್ಟು ಭಾರತದಲ್ಲಿ ಕೆಲಸ ಮಾಡಬೇಡಿ. ನಿಮ್ಮ ಸೈಟ್ ಅನ್ನು ನಿರ್ಬಂಧಿಸಲು ನಾವು ಸರ್ಕಾರವನ್ನು ಸೂಚಿಸುತ್ತೇವೆ ಎಂದು ಉಚಿತ ಆನ್‌ಲೈನ್ ವಿಶ್ವಕೋಶ ವಿಕಿಪೀಡಿಯಗೆ (Wikipedia) ದೆಹಲಿ ಹೈಕೋರ್ಟ್ (Delhi High Court) ಎಚ್ಚರಿಕೆ ನೀಡಿದೆ.

    ಸುದ್ದಿ ಸಂಸ್ಥೆ ಎಎನ್‌ಐ (ANI) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ವಿಕಿಪೀಡಿಯಗೆ ನ್ಯಾಯಾಂಗ ನಿಂದನೆ ನೋಟಿಸ್ (Contempt of Court) ಜಾರಿ ಮಾಡಿದೆ. ಅಷ್ಟೇ ಅಲ್ಲದೇ ಎಎನ್‌ಐಗೆ ಸಂಬಂಧಿಸಿದ ಪೇಜ್‌ ಎಡಿಟ್‌ ಮಾಡದಂತೆ ಸೂಚಿಸಿದೆ.

    ತನ್ನನ್ನು ಭಾರತ ಸರ್ಕಾರದ ಪ್ರಚಾರ ಸಾಧನ (The Propaganda Tool) ಎಂದು ಉಲ್ಲೇಖಿಸಿದ್ದನ್ನು ಪ್ರಶ್ನಿಸಿ ಎಎನ್‌ಐ ಕೋರ್ಟ್‌ ಮೊರೆ ಹೋಗಿದೆ. ಈ ಪೇಜ್‌ ಅನ್ನು ಎಡಿಟ್‌ ಮಾಡಿದ ಮೂರು ಖಾತೆಗಳ ವಿವರವನ್ನು ಬಹಿರಂಗಪಡಿಸಲು ವಿಕಿಪೀಡಿಯಗೆ ಸೂಚಿಸಿತ್ತು. ಆದರೆ ವಿಕೀಪಿಡಿಯಾ ಈ ಮಾಹಿತಿ ನೀಡಿಲ್ಲ. ಈ ಪ್ರಕರಣದಲ್ಲಿ ಹೆಸರಿಸಲಾದ ಮೂವರು ವ್ಯಕ್ತಿಗಳು ತನ್ನ ಸಂಪಾದಕರಲ್ಲ ಎಂದು ವಿಕಿಪೀಡಿಯಾ ಹೇಳಿಲ್ಲ ಎಂದು ಎಎನ್‌ಐ ತಿಳಿಸಿದೆ.  ಇದನ್ನೂ ಓದಿ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ – ಡಿಕೆಶಿ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಯತ್ನಾಳ್

    court order law

    ಅರ್ಜಿ ವಿಚಾರಣೆ ವೇಳೆ ವಿಕಿಪೀಡಿಯ ಪರ ವಕೀಲರು, ತನ್ನ ಕಡೆಯಿಂದ ಕೆಲವು ದಾಖಲೆಗಳ ಸಲ್ಲಿಕೆ ಮಾಡಬೇಕಿದೆ. ವಿಕಿಪೀಡಿಯ ಭಾರತ ಮೂಲದ ಸಂಸ್ಥೆ ಅಲ್ಲದ ಕಾರಣ ಮಾಹಿತಿ ಸಲ್ಲಿಕೆಗೆ ವಿಳಂಬವಾಗಿದೆ ಎಂದು ತಿಳಿಸಿದರು.

    ಈ ಉತ್ತರಕ್ಕೆ ಸಿಟ್ಟಾದ ಹೈಕೋರ್ಟ್‌, ನೀವು ಭಾರತದ ಸಂಸ್ಥೆ ಅಲ್ಲ ಎನ್ನುವುದು ಪ್ರಶ್ನೆಯಲ್ಲ. ಕೋರ್ಟ್‌ ಸೂಚಿಸಿದಾಗ ಮಾಹಿತಿ ನೀಡಬೇಕು. ನಿಮ್ಮ ವ್ಯಾಪಾರ ವಹಿವಾಟುಗಳನ್ನು ನಾವು ಇಲ್ಲಿ ಬಂದ್‌ ಮಾಡುತ್ತೇವೆ. ನೀವು ಭಾರತದಲ್ಲಿ ಇರಬೇಕಾದರೆ ದೇಶದ ಕಾನೂನುಗಳನ್ನು ಪಾಲನೆ ಮಾಡಬೇಕು. ನಿಮಗೆ ಭಾರತ ಇಷ್ಟವಿಲ್ಲದಿದ್ದರೆ, ದಯವಿಟ್ಟು ಭಾರತದಲ್ಲಿ ಕೆಲಸ ಮಾಡಬೇಡಿ ಎಂದು ಸೂಚಿಸಿತು.

    ಮುಂದಿನ ವಿಚಾರಣೆ ವೇಳೆ ವಿಕಿಪೀಡಿಯ ಪ್ರತಿನಿಧಿ ಹಾಜರಾಗಬೇಕು ಎಂದು ಸೂಚಿಸಿ ಅಕ್ಟೋಬರ್‌ಗೆ ವಿಚಾರಣೆಯನ್ನು ಮುಂದೂಡಿತು.

    ವಿಕಿಪೀಡಿಯ ವಿರುದ್ಧ ಎಎನ್‌ಐ 2 ಕೋಟಿ ರೂ. ಮಾನನಷ್ಟ ಕೇಸ್‌ ಹೂಡಿದೆ. 2001 ರಲ್ಲಿ ಜಿಮ್ಮಿ ವೇಲ್ಸ್ ಮತ್ತು ಲ್ಯಾರಿ ಸ್ಯಾಂಗರ್ ಅವರು ವಿಕಿಪೀಡಿಯವನ್ನುಸ್ಥಾಪಿಸಿದ್ದಾರೆ. ವಿಕಿಮೀಡಿಯಾ ಫೌಂಡೇಶನ್‌ನಿಂದ ಇದು ನಡೆಯುತ್ತಿದ್ದು ಅಮೆರಿಕ ಮತ್ತು ಫ್ರಾನ್ಸಿನಲ್ಲಿ ನೆಲೆಗೊಂಡಿದೆ. ವಿಶ್ವಾದ್ಯಂತ  ಲಕ್ಷಕ್ಕೂ ಅಧಿಕ ಸ್ವಯಂಸೇವಕರು ವಿಕಿಪೀಡಿಯ ಪುಟದಲ್ಲಿ ಮಾಹಿತಿಯನ್ನು ಅಪ್‌ಡೇಟ್‌ ಮಾಡುತ್ತಿರುತ್ತಾರೆ.

     

  • ರೇಣುಕಾಸ್ವಾಮಿ ಹತ್ಯೆ ಕೇಸ್‌ – ವಿಕಿಪೀಡಿಯದಲ್ಲಿ ಪೇಜ್‌ ಓಪನ್‌

    ರೇಣುಕಾಸ್ವಾಮಿ ಹತ್ಯೆ ಕೇಸ್‌ – ವಿಕಿಪೀಡಿಯದಲ್ಲಿ ಪೇಜ್‌ ಓಪನ್‌

    ಬೆಂಗಳೂರು: ರೇಣುಕಾಸ್ವಾಮಿ ಹತ್ಯೆಗೆ (Renukaswamy Murder Case) ಸಂಬಂಧಿಸಿದಂತೆ ವಿಕಿಪೀಡಿಯದಲ್ಲಿ ಪೇಜ್‌ (Wikipedia) ಓಪನ್‌ ಆಗಿದೆ.

    ನಟ ದರ್ಶನ್‌ (Darshan) ಮುಖ್ಯ ಆರೋಪಿಯಾಗಿರುವ ದೇಶವ್ಯಾಪಿ ಸಂಚಲನ ಮೂಡಿಸಿದ ಪ್ರಕರಣ ಇದಾಗಿರುವ ಕಾರಣ ವಿಕಿಪೀಡಿಯದಲ್ಲಿ Murder of Renukaswamy ಹೆಸರಿನಲ್ಲಿ ಇಂಗ್ಲಿಷ್‌ನಲ್ಲಿ ಪೇಜ್‌ ತೆರೆಯಲಾಗಿದೆ. ಇದನ್ನೂ ಓದಿ:  NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್‌ – ಬಿಹಾರದಲ್ಲಿ ಇಬ್ಬರನ್ನು ಬಂಧಿಸಿದ ಸಿಬಿಐ 

     

    ಜೂನ್‌ 21ಕ್ಕೆ ಈ ಪೇಜ್‌ ಓಪನ್‌ ಆಗಿದ್ದು ಹಲವು ವಿಕಿಪೀಡಿಯ ಸದಸ್ಯರು ಸೇರಿ ಈ ಕೊಲೆಯ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿ ನಿರಂತರವಾಗಿ ಅಪ್‌ಡೇಟ್‌ ಮಾಡುತ್ತಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದ ಪ್ರತಿ ಮಹತ್ವದ ವಿಷಯಕ್ಕೆ ಮಾಧ್ಯಮ ವರದಿಗಳ ಉಲ್ಲೇಖಗಳನ್ನು ಕೆಳ ಭಾಗದಲ್ಲಿ ನೀಡಲಾಗಿದೆ.

     

  • ಬಿಬಿಸಿ ಮೇಲೆ 10 ಸಾವಿರ ಕೋಟಿ ರೂ. ಮಾನನಷ್ಟ ಕೇಸ್ – ಹೈಕೋರ್ಟ್‍ನಿಂದ ಸಮನ್ಸ್ ಜಾರಿ

    ಬಿಬಿಸಿ ಮೇಲೆ 10 ಸಾವಿರ ಕೋಟಿ ರೂ. ಮಾನನಷ್ಟ ಕೇಸ್ – ಹೈಕೋರ್ಟ್‍ನಿಂದ ಸಮನ್ಸ್ ಜಾರಿ

    ನವದೆಹಲಿ: `ಇಂಡಿಯಾ ದ ಮೋದಿ ಕ್ವೆಶ್ಚನ್’ (India: The Modi Question) ಸಾಕ್ಷ್ಯಚಿತ್ರದ ವಿರುದ್ಧ ದಾಖಲಾದ 10 ಸಾವಿರ ಕೋಟಿ ರೂ. ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ (Delhi High Court) ಸೋಮವಾರ ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಂಪನಿಗೆ (BBC) ಸಮನ್ಸ್ ಜಾರಿ ಮಾಡಿದೆ.

    ಸಾಕ್ಷ್ಯಚಿತ್ರವು ಭಾರತ, ಅದರ ನ್ಯಾಯಾಂಗ ಮತ್ತು ಸ್ವತಃ ಪ್ರಧಾನಿಯ ಪ್ರತಿಷ್ಠೆಗೆ ಅಗೌರವ ತಂದಿದೆ ಎಂದು ಗುಜರಾತ್‌ (Gujarat) ಮೂಲದ ಜಸ್ಟಿಸ್ ಆನ್ ಟ್ರಯಲ್ (Justice on Trial) ಸಂಸ್ಥೆ ಆರೋಪಿಸಿದೆ. ಅಲ್ಲದೆ ಅದು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ಸೆಪ್ಟೆಂಬರ್‍ನಲ್ಲಿ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲಿದೆ. ಇದನ್ನೂ ಓದಿ: ಷೇರು ವಿವಾದ; ಅದಾನಿ ಗ್ರೂಪ್‌ಗೆ ಸುಪ್ರೀಂ ಕೋರ್ಟ್ ಸಮಿತಿ ಕ್ಲೀನ್ ಚಿಟ್

    ಸಾಕ್ಷ್ಯಚಿತ್ರವು ಮಾನಹಾನಿಕರ ವಿಷಯಗಳನ್ನು ಒಳಗೊಂಡಿದೆ. ದೇಶ, ನ್ಯಾಯಾಂಗದ ಪ್ರತಿಷ್ಠೆಯ ಮೇಲೆ ಮತ್ತು ಭಾರತದ ಪ್ರಧಾನ ಮಂತ್ರಿಯ ವಿರುದ್ಧ ಪ್ರಚೋದನೆ ನೀಡುವಂತಹ ಅಂಶಗಳನ್ನು ಒಳಗೊಂಡಿವೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.

    ಈ ಹಿಂದೆ ಬಿಜೆಪಿ (BJP) ನಾಯಕ ಬಿನಯ್ ಕುಮಾರ್ ಸಿಂಗ್ ಅವರು ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯ ಕುರಿತು ದೆಹಲಿಯ ಜಿಲ್ಲಾ ನ್ಯಾಯಾಲಯವು ಬಿಬಿಸಿಗೆ ಸಮನ್ಸ್ ಜಾರಿ ಮಾಡಿತ್ತು. ಭಾರತ ಸರ್ಕಾರವು ಸಾಕ್ಷ್ಯಚಿತ್ರವನ್ನು ನಿಷೇಧಿಸಿದೆ. ಆದರೆ ಸಾಕ್ಷ್ಯ ಚಿತ್ರವನ್ನು ವೀಕ್ಷಿಸಲು ವಿಕಿಪೀಡಿಯಾ ಲಿಂಕ್‍ಗಳನ್ನು ಒದಗಿಸುತ್ತಿದೆ. ಇಂಟರ್ನೆಟ್ ಆರ್ಕೈವ್‍ನಲ್ಲಿ ಇನ್ನೂ ಲಭ್ಯವಿದೆ ಎಂದು ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದರು.

    ಆರ್‍ಎಸ್‍ಎಸ್ (RSS) ಮತ್ತು ವಿಎಚ್‍ಪಿ (VHP) ವಿರುದ್ಧ ಸಾಕ್ಷ್ಯಚಿತ್ರ ಅಥವಾ ಇತರ ಯಾವುದೇ ವಿಷಯವನ್ನು ಪ್ರಕಟಿಸದಂತೆ ತಡೆಯಲು ಬಿಬಿಸಿ, ವಿಕಿಮೀಡಿಯಾ ಮತ್ತು ಇಂಟರ್ನೆಟ್ ಆರ್ಕೈವ್ ವಿರುದ್ಧ ತಡೆಯಾಜ್ಞೆ ನೀಡುವಂತೆ ಸಿಂಗ್ ಕೋರಿದ್ದರು. ಆ ಅರ್ಜಿಯ ವಿಚಾರಣೆ ಮೇ 26ರಂದು ನಡೆಸಲಿದೆ. ಇದನ್ನೂ ಓದಿ: ನೂತನ ಸರ್ಕಾರದಲ್ಲಿ ಸುಪ್ರೀಂಕೋರ್ಟ್ ವಕೀಲ ಸಂಕೇತ್ ಏಣಗಿಗೆ ಒಲಿಯಲಿದ್ಯಾ ಅಡ್ವೊಕೇಟ್ ಜನರಲ್ ಹುದ್ದೆ?

  • ವಿಕಿಪೀಡಿಯಾ ವಿರುದ್ಧ ಗರಂ ಆದ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ

    ವಿಕಿಪೀಡಿಯಾ ವಿರುದ್ಧ ಗರಂ ಆದ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೈಜ ಘಟನೆಯನ್ನು ಆಧರಿಸಿದ ಚಿತ್ರವಾದರೂ, ವಿಕಿಪೀಡಿಯಾ ಬೇರೆ ರೀತಿಯಲ್ಲೇ ಸಿನಿಮಾವನ್ನು ಬಿಂಬಿಸಲಾಗಿದೆ. ಅದೊಂದು ಕಾಲ್ಪನಿಕ ಕಥೆ ಎಂದು ಬರೆಯಲಾಗಿದೆ. ಹಾಗಾಗಿ ಜ್ಯಾತ್ಯಾತೀತ ನಿಲುವಿನ ಉಲ್ಲಂಘನೆಯಾಗಿದೆ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಿಡಿಕಾರಿದ್ದಾರೆ. ವಿದೇಶಿ ಪತ್ರಕರ್ತರು ಕೂಡ ಸಿನಿಮಾದ ಬಗ್ಗೆ ಸಲ್ಲದ ಪ್ರಚಾರ ಮಾಡುತ್ತಿರುವುದಕ್ಕೂ ಅವರು ಆಕ್ಷೇಪನೆ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ : ಬೆಳ್ಳಿತೆರೆಯಲ್ಲಿ ಕಾಯಕಯೋಗಿ ಬಸವಣ್ಣ: ಯಾರೆಲ್ಲ ಪಾತ್ರ ಮಾಡಿದ್ದಾರೆ ಗೊತ್ತಾ?

    ‘ವಿಕಿಪೀಡಿಯಾವನ್ನು ಜಗತ್ತಿನ ವಿಶ್ವಕೋಶ ಎಂದು ಕರೆಯಲಾಗುತ್ತಿದೆ. ಆದರೆ, ಅದು ತಪ್ಪು ಸಂದೇಶಗಳನ್ನು ರವಾನಿಸಲಾಗುತ್ತಿದೆ. ದಿ ಕಾಶ್ಮೀರ್ ಫೈಲ್ಸ್ ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂದು ನಾನು ಹಲವು ಬಾರಿ ಹೇಳಿದ್ದೇನೆ. ಅದಕ್ಕೆ ಪೂರಕ ಸಾಕ್ಷ್ಯವನ್ನು ಒದಗಿಸಿದ್ದೇನೆ. ಆದರೂ, ವಿಕಿಪೀಡಿಯಾದಲ್ಲಿ ಅದು ಕಾಲ್ಪನಿಕ ಕಥೆ ಎಂದು ಉಲ್ಲೇಖಿಸಲಾಗಿದೆ. ಇದು ಉದ್ದೇಶ ಪೂರ್ವಕವಾಗಿ ಆಗಿರುವ ಪ್ರಮಾದ’ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ

    ಇಡೀ ದೇಶವೇ ಸಿನಿಮಾದ ಬಗ್ಗೆ ಕೊಂಡಾಡಿದೆ. ಬಾಕ್ಸ್ ಆಫೀಸಿನಲ್ಲಿ ದಾಖಲೆಯ ರೀತಿಯಲ್ಲಿ ಹಣ ಮಾಡಿದೆ. ದೇಶದ ಜನರು ಸಿನಿಮಾ ಬೆನ್ನಿಗೆ ನಿಂತು, ಆಗಿರುವ ಘಟನೆಯನ್ನು ಖಂಡಿಸಿದ್ದಾರೆ. ಇಷ್ಟಾದರೂ ವಿಕಿಪೀಡಿಯಾ ಈ ಸಿನಿಮಾದ ಬಗ್ಗೆ ಬೇರೆಯ ರೀತಿಯಲ್ಲೇ ಬಿಂಬಿಸಲು ಪ್ರಯತ್ನ ಮಾಡುತ್ತಿದೆ. ಯಾಕೆ ಹೀಗೆ? ಜ್ಯಾತ್ಯಾತೀಯ ನಿಲುವು ಅಂದರೆ ಇದೇನಾ ಎಂದು ಅಗ್ನಿಹೋತ್ರಿ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

    ವಿದೇಶಿ ಪತ್ರಕರ್ತರೊಂದಿಗೆ ಪತ್ರಿಕಾಗೋಷ್ಠಿ ಆಯೋಜನೆ ಮಾಡಿದ್ದೆ. ವಿದೇಶಿ ಪತ್ರಕರ್ತರ ಸಂಘಕ್ಕೂ ಈ ವಿಷಯ ತಿಳಿಸಿದ್ದೆ. ಏಕಾಏಕಿ ಗೋಷ್ಠಿಯನ್ನು ಅವರು ರದ್ದು ಮಾಡಿದ್ದಾರೆ. ಇದರ ಹಿಂದಿರುವ ಉದ್ದೇಶವನ್ನೂ ಅವರು ಹೇಳಲಿಲ್ಲ. ಏನೇ ಆದರೂ, ಮೆ. 5ಕ್ಕೆ ಪತ್ರಿಕಾಗೋಷ್ಠಿಯನ್ನು ನಡೆಸುತ್ತೇನೆ. ಯಾವುದೇ ಕಾರಣಕ್ಕೂ ಈ ವಿಷಯದ ಕುರಿತು ನಾನು ಹಿಂದೇಟು ಹಾಕಲಾರೆ ಎಂದಿದ್ದಾರೆ ವಿವೇಕ್ ಅಗ್ನಿಹೋತ್ರಿ.