Tag: ವಿಕಿಪೀಡಿಯ

  • ಎಡಪಂಥೀಯರ ವಿಕಿಪೀಡಿಯಗೆ ದೇಣಿಗೆ ನೀಡಬೇಡಿ: ಮಸ್ಕ್ ಕರೆ

    ಎಡಪಂಥೀಯರ ವಿಕಿಪೀಡಿಯಗೆ ದೇಣಿಗೆ ನೀಡಬೇಡಿ: ಮಸ್ಕ್ ಕರೆ

    ವಾಷಿಂಗ್ಟನ್: ವಿಶ್ವಕೋಶ ಎಂದೇ ಬಿಂಬಿತವಾಗಿರುವ ವಿಕಿಪೀಡಿಯನ್ನು (Wikipedia) ಎಡಪಂಥೀಯರು ನಿಯಂತ್ರಿಸುತ್ತಿದ್ದು ದೇಣಿಗೆ ನೀಡಬೇಡಿ ಎಂದು ಟೆಸ್ಲಾ, ವಿಶ್ವದ ನಂಬರ್‌ ಶ್ರೀಮಂತ ಉದ್ಯಮಿ ಮುಖ್ಯಸ್ಥ ಎಲಾನ್‌ ಮಸ್ಕ್‌ (Elon Musk) ಬಹಿರಂಗ ಕರೆ ನೀಡಿದ್ದಾರೆ.

    ʼPiratewiresʼ ನಲ್ಲಿ ಪ್ರಕಟವಾದ ತನಿಖಾ ವರದಿಯನ್ನು ಪೋಸ್ಟ್‌ ಮಾಡಿ ವಿಕಿಪೀಡಿಯಗೆ ದೇಣಿಗೆ ಕೊಡಬೇಡಿ ಎಂದು ಹೇಳಿದ್ದಾರೆ.  ಇಸ್ರೇಲ್‌ (Israel) ಮತ್ತು ಹಮಾಸ್‌ (Hamas) ಉಗ್ರರ ನಡುವಿನ ಯುದ್ಧವನ್ನು ಯಾವ ರೀತಿ ತೋರಿಸಲಾಗಿದೆ ಎಂಬ ಸುದ್ದಿಯನ್ನು ಶೇರ್‌ ಮಾಡಿ ಮಸ್ಕ್‌ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

     


    ವರದಿಯಲ್ಲಿ ಏನಿದೆ?
    ವಿಕಿಪೀಡಿಯದ 40 ಸೂಪರ್‌ ಸಂಪಾದಕರು ಇಸ್ರೇಲ್‌ ವಿರುದ್ಧ ಮತ್ತು ಹಮಾಸ್‌ ಪರವಾಗಿ ಬರಹಗಳನ್ನು ಪ್ರಕಟಿಸುತ್ತಿದ್ದಾರೆ. ಇಸ್ರೇಲ್ -ಪ್ಯಾಲೆಸ್ತೀನ್ ಸಂಘರ್ಷದ ಕುರಿತಾದ ವ್ಯಾಖ್ಯಾನವನ್ನು ಬದಲಿಸುತ್ತಿದ್ದಾರೆ. ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಅನುಕೂಲಕರವಾಗುವಂತೆ ಎಡಿಟ್‌ ಮಾಡಲಾಗುತ್ತಿದೆ.

    ಇಸ್ಲಾಮಿಕ್ ರಿಪಬ್ಲಿಕ್ ಪಾರ್ಟಿ ಅಧಿಕಾರಿಗಳು ಮಾಡಿರುವ ಮಾನವ ಹಕ್ಕುಗಳ ಅಪರಾಧಗಳನ್ನು ಅಳಿಸಿ ಹಾಕಲಾಗಿದೆ. ಹಲವಾರು ಲೇಖನಗಳಲ್ಲಿ ಇರಾನ್ ಸರ್ಕಾರದ ಹಿತಾಸಕ್ತಿಗಳನ್ನು ಉತ್ತೇಜಿಸಲು ಗುಂಪು ಪ್ರಯತ್ನಿಸುತ್ತಿದೆ ಎಂದು Piratewires ದಾಖಲೆಗಳೊಂದಿಗೆ ವರದಿ ಪ್ರಕಟಿಸಿತ್ತು. ಇದನ್ನೂ ಓದಿ: ನಿಮಗೆ ಇಷ್ಟವಾಗದೇ ಇದ್ರೆ ಭಾರತದಲ್ಲಿ ಕೆಲಸ ಮಾಡಬೇಡಿ – ವಿಕಿಪೀಡಿಯಗೆ ಹೈಕೋರ್ಟ್‌ ಎಚ್ಚರಿಕೆ

    ಭಾರತದಲ್ಲೂ ಟೀಕೆ:
    ವಿಕಿಪೀಡಿಯಾ ಬಗ್ಗೆ ಭಾರತದಲ್ಲೂ ಆಕ್ಷೇಪ ವ್ಯಕ್ತವಾಗಿದೆ. ಸುದ್ದಿ ಸಂಸ್ಥೆ ಎಎನ್‌ಐ (ANI) ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ ವಿಕಿಪೀಡಿಯಗೆ ನ್ಯಾಯಾಂಗ ನಿಂದನೆ ನೋಟಿಸ್ (Contempt of Court) ಜಾರಿ ಮಾಡಿದೆ. ಅಷ್ಟೇ ಅಲ್ಲದೇ ಎಎನ್‌ಐಗೆ ಸಂಬಂಧಿಸಿದ ಪೇಜ್‌ ಎಡಿಟ್‌ ಮಾಡದಂತೆ ಸೂಚಿಸಿದೆ.

    ತನ್ನನ್ನು ಭಾರತ ಸರ್ಕಾರದ ಪ್ರಚಾರ ಸಾಧನ (The Propaganda Tool) ಎಂದು ಉಲ್ಲೇಖಿಸಿದ್ದನ್ನು ಪ್ರಶ್ನಿಸಿ ಎಎನ್‌ಐ ಕೋರ್ಟ್‌ ಮೊರೆ ಹೋಗಿ ವಿಕೀಪಿಡಿಯಾ ವಿರುದ್ಧ 2 ಕೋಟಿ ರೂ. ಮಾನನಷ್ಟ ಕೇಸ್‌ ಹೂಡಿದೆ. ಅ.25ರ ಅರ್ಜಿ ವಿಚಾರಣೆ ವೇಳೆ, ಯಾರು ಬೇಕಾದರೂ ಪೇಜ್‌ ತಿದ್ದಬಹುದೇ? ಎಲ್ಲರಿಗೂ ಎಡಿಟಿಂಗ್‌ ಮಾಡಲು ಅವಕಾಶ ನೀಡುವುದಾದರೆ ಅದು ಯಾವ ರೀತಿಯ ಪೇಜ್‌? ಮುಕ್ತ ಎಡಿಟಿಂಗ್‌ ಆಯ್ಕೆ ಅಪಾಯಕಾರಿ ಎಂದು ವಿಕೀಪಿಡಿಯಾವನ್ನು ತರಾಟೆಗೆ ತೆಗೆದುಕೊಂಡಿತ್ತು.

    ತನ್ನ ಪೇಜ್‌ ಅನ್ನು ಎಡಿಟ್‌ ಮಾಡಿದ ಮೂವರ ಹೆಸರನ್ನು ಬಹಿರಂಗ ಪಡಿಸುವಂತೆ ವಿಕಿಪೀಡಿಯಾಗೆ ಸೂಚಿಸಿತ್ತು. ತನ್ನ ನೋಟಿಸ್‌ಗೆ ವಿಕಿಪೀಡಿಯಾ ಉತ್ತರ ನೀಡದ್ದಕ್ಕೆ ಈಗ ಎಎನ್‌ಐ ಕೋರ್ಟ್‌ ಮೊರೆ ಹೋಗಿದೆ.

    2001 ರಲ್ಲಿ ಜಿಮ್ಮಿ ವೇಲ್ಸ್ ಮತ್ತು ಲ್ಯಾರಿ ಸ್ಯಾಂಗರ್ ಅವರು ವಿಕಿಪೀಡಿಯವನ್ನುಸ್ಥಾಪಿಸಿದ್ದಾರೆ. ವಿಕಿಮೀಡಿಯಾ ಫೌಂಡೇಶನ್‌ನಿಂದ ಇದು ನಡೆಯುತ್ತಿದ್ದು ಅಮೆರಿಕ ಮತ್ತು ಫ್ರಾನ್ಸಿನಲ್ಲಿ ನೆಲೆಗೊಂಡಿದೆ. ವಿಶ್ವಾದ್ಯಂತ ಲಕ್ಷಕ್ಕೂ ಅಧಿಕ ಸ್ವಯಂಸೇವಕರು ವಿಕಿಪೀಡಿಯ ಪುಟದಲ್ಲಿ ಮಾಹಿತಿಯನ್ನು ಅಪ್‌ಡೇಟ್‌ ಮಾಡುತ್ತಿರುತ್ತಾರೆ.

     

  • ‘ವಿಕಿಪೀಡಿಯ’ ಹೆಸರಿನಲ್ಲೊಂದು ಸಿನಿಮಾ: ಕಿರುತೆರೆಯಿಂದ ಬೆಳ್ಳಿತೆರೆಗೆ ಯಶವಂತ್ ಎಂಟ್ರಿ

    ‘ವಿಕಿಪೀಡಿಯ’ ಹೆಸರಿನಲ್ಲೊಂದು ಸಿನಿಮಾ: ಕಿರುತೆರೆಯಿಂದ ಬೆಳ್ಳಿತೆರೆಗೆ ಯಶವಂತ್ ಎಂಟ್ರಿ

    ಮಾಹಿತಿಯ ಜ್ಞಾನಕೋಶ‌ ಅಂತಾಲೇ ಕರೆಸಿಕೊಳ್ಳುವ ಜಾಲತಾಣ ವಿಕಿಪೀಡಿಯ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಇದೇ ವಿಕಿಪೀಡಿಯ ಎಂಬ ಹೆಸರಿನಲ್ಲಿ ಕನ್ನಡದಲ್ಲೊಂದು ಸಿನಿಮಾ ಬರ್ತಿದೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿ ರಿಲೀಸ್ ಗೆ ಸಜ್ಜಾಗಿದೆ.

    ಸತ್ಯಂ ಶಿವಂ ಸುಂದರಂ, ಒಂದೂರಲ್ಲಿ ರಾಜರಾಣಿ, ಮಹಾದೇವಿ, ಶಾಂತಂಪಾಪಂ, ಯಾರೇ ನೀ‌ ಮೋಹಿನಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಯಶವಂತ್ ವಿಕಿಪೀಡಿಯ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡ್ತಿದ್ದಾರೆ. ವಿಕಾಸ್ ಎಂಬ ಪಾತ್ರದಲ್ಲಿ ಯಶವಂತ್ ಬಣ್ಣ ಹಚ್ಚಿದ್ದು, ಇವರಿಗೆ ಜೋಡಿಯಾಗಿ ಆಶಿಕಾ ಸೋಮಶೇಖರ್ ನಟಿಸಿದ್ದಾರೆ. ಇದನ್ನೂ ಓದಿ:ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ

    ಈಗಾಗಲೇ ಮೋಷನ್ ಪೋಸ್ಟರ್ ಹಾಗೂ ತನು ಮನ ಹಾಡಿನ ಮೂಲಕ ಟಾಕ್ ಕ್ರಿಯೇಟ್ ಮಾಡಿರುವ ವಿಕಿಪೀಡಿಯ ಸಿನಿಮಾಗೆ ಸೋಮು ಹೊಯ್ಸಳ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಡ್ರಾಮಾ, ಎಮೋಷನಲ್, ಲವ್, ಸೆಂಟಿಮೆಂಟ್ ಎಲ್ಲದರ ಮಿಶ್ರಣ ವಿಕಿಪೀಡಿಯ ಚಿತ್ರಕ್ಕೆ ಚಿದಾನಂದ್ ಹೆಚ್ ಕೆ ಕ್ಯಾಮೆರಾ, ರಾಕೇಶ್ ಮತ್ತು ನಿಲೀಮ ರಾವ್ ಸಂಗೀತ, ರವಿಚಂದ್ರನ್ ಸಿ ಸಂಕಲನ ಸಿನಿಮಾಕ್ಕಿದೆ. ರಫ್ ಕಟ್ ಪ್ರೊಡಕ್ಷನ್ ನಡಿ ನಿರ್ಮಾಣವಾಗಿರುವ ಸಿನಿಮಾಗೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ಶೀರ್ಘದಲ್ಲಿಯೇ ಚಿತ್ರ ತೆರೆಗೆ ಬರಲಿದೆ.

    Live Tv
    [brid partner=56869869 player=32851 video=960834 autoplay=true]