Tag: ವಿಕಾಸ್ ಕೊಹ್ಲಿ

  • ಕೊಹ್ಲಿ ಪುತ್ರಿಯ ಮೊದಲ ಫೋಟೋ ವೈರಲ್

    ಕೊಹ್ಲಿ ಪುತ್ರಿಯ ಮೊದಲ ಫೋಟೋ ವೈರಲ್

    ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಹೆಣ್ಣು ಮಗುವನ್ನ ಬರಮಾಡಿಕೊಂಡಿದ್ದಾರೆ. ವಿರಾಟ್ ಈ ಸಂಭ್ರಮವನ್ನು ಹಂಚಿಕೊಂಡಾಗ ಅಭಿಮಾನಿಗಳಲ್ಲಿ ಮಗುವನ್ನು ನೋಡುವ ತವಕ ಹೆಚ್ಚಿತ್ತು. ಆದ್ರೆ ವಿರಾಟ್ ಮಾತ್ರ ಯಾವುದೇ ಫೋಟೋ ಹಂಚಿಕೊಳ್ಳದೆ ಗೌಪ್ಯತೆ ಕಾಪಾಡಿಕೊಂಡಿದ್ದರು. ಆದರೆ ಅವರ ಸಹೋದರ ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಕೋಮಲ ಪಾದದ ಫೋಟೋ ಹಂಚಿಕೊಳ್ಳುವ ಮೂಲಕ ಖುಷಿ ಹೊರಹಾಕಿದ್ದಾರೆ.

    ವಿರಾಟ್ ಕೊಹ್ಲಿ ಸಹೋದರ ವಿಕಾಸ್ ಕೊಹ್ಲಿ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವಿರಾಟ್ ಮಗಳ ಪಾದದ ಪೋಟೋ ಹಂಚಿಕೊಂಡು ಸಂತೋಷ ತುಂಬಿ ತುಳುಕುತ್ತಿದೆ. ನಮ್ಮ ಮನೆಗ ದೇವತೆಯ ಆಗಮನವಾಗಿದೆ ಎಂದು ಬರೆದುಕೊಂಡಿದ್ದಾರೆ. ಇದು ತಿಳಿಯುತ್ತಿದ್ದಂತೆ ವಿರಾಟ್ ಅಭಿಮಾನಿಗಳು ಮಗುವಿನ ಪಾದದ ಚಿತ್ರವನ್ನು ವೈರಲ್ ಮಾಡಿದ್ದಾರೆ. ಜೊತೆಗೆ ಹಲವು ಉತ್ತಮ ಅಡಿಬರಹಗಳನ್ನು ಹಾಕಿಕೊಂಡು ಖುಷಿ ಪಟ್ಟಿದ್ದಾರೆ.

    ಇನ್ನೂ ವಿರಾಟ್ ಕೊಹ್ಲಿಯ ಸಹೋದರಿ ಭಾವನ ತನ್ನ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಂತೋಷವಾಗಿದೆ. ನಮಗೆ ಸಣ್ಣ ದೇವತೆಯನ್ನು ಕರುಣಿಸಿದ್ದಕ್ಕೆ ಎಂದು ವಿರಾಟ್ ದಂಪತಿಗೆ ಧನ್ಯವಾದ ತಿಳಿಸಿ, ಹೆಣ್ಣು ಮಗು ದೇವರ ಆಶೀರ್ವಾದದಿಂದ ಸಿಕ್ಕ ಕಾಣಿಕೆಯಾಗಿದೆ. ಈ ಮುದ್ದಾದ ದೇವತೆಗೆ ಯಾವತ್ತು ಪ್ರೀತಿ ಪಾತ್ರಳಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Vikas Kohli (@vk0681)

    ಸ್ವತಃ ವಿರಾಟ್ ಕೊಹ್ಲಿ ತಮಗೆ ಹೆಣ್ಣು ಮಗುವಾದ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ನಮಗೆ ತುಂಬಾ ರೋಮಾಂಚನವಾಗುತ್ತಿದ್ದು, ಈ ದಿನ ಮಧ್ಯಾಹ್ನ ನಮಗೆ ಹೆಣ್ಣು ಮಗುವಾಗಿದೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಮತ್ತು ಶುಭ ಹಾರೈಕೆಗಾಗಿ ತುಂಬಾ ಧನ್ಯವಾದಗಳು. ಅನುಷ್ಕಾ ಮತ್ತು ಮಗು ಇಬ್ಬರು ಕ್ಷೇಮವಾಗಿದ್ದಾರೆ. ಇಂದಿನಿಂದ ನಮ್ಮ ಬಾಳಲ್ಲಿ ಹೊಸ ಬೆಳಕು ಮೂಡಿದೆ. ಈ ಸಂದರ್ಭದಲ್ಲಿ ನಾನು ಮಾಡುತ್ತಿರುವ ಗೌಪ್ಯತೆಗಳು ನಿಮಗೆ ಅರ್ಥವಾಗಬಹುದು ಎಂದು ಬರೆದುಕೊಂಡು ಅಭಿಮಾನಿಗಳಿಗೆ ತಂದೆಯಾದ ಖುಷಿ ಹಂಚಿಕೊಂಡಿದ್ದರು.