Tag: ವಿಕಸಿತ ಭಾರತ

  • ಪ್ರತಿ ರಾಜ್ಯದಲ್ಲಿ ಒಂದು ವಿಶ್ವದರ್ಜೆಯ ಪ್ರವಾಸಿ ತಾಣ ಅಭಿವೃದ್ಧಿಪಡಿಸಿ: ಮೋದಿ ಕರೆ

    ಪ್ರತಿ ರಾಜ್ಯದಲ್ಲಿ ಒಂದು ವಿಶ್ವದರ್ಜೆಯ ಪ್ರವಾಸಿ ತಾಣ ಅಭಿವೃದ್ಧಿಪಡಿಸಿ: ಮೋದಿ ಕರೆ

    – ಟೀಂ ಇಂಡಿಯಾ ರೀತಿ ಕೇಂದ್ರ, ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕು: ಪ್ರಧಾನಿ

    ನವದೆಹಲಿ: ವಿಕಸಿತ ಭಾರತ (Viksit Bharat) ಗುರಿಯನ್ನು ಸಾಧಿಸಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ‘ಟೀಂ ಇಂಡಿಯಾ’ ರೀತಿ ಕೆಲಸ ಮಾಡಬೇಕೆಂದು ಪ್ರಧಾನಿ ಮೋದಿ (Narendra Modi) ಕರೆ ನೀಡಿದರು.

    ನೀತಿ ಆಯೋಗದ (Niti Aayog) ಹತ್ತನೇ ಸಭೆಯ ಅಧ್ಯಕ್ಷತೆ ವಹಿಸಿದ ಅವರು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದರು. ನಾವು ಅಭಿವೃದ್ಧಿಯ ವೇಗವನ್ನು ಹೆಚ್ಚಿಸಬೇಕು. ಕೇಂದ್ರ ಮತ್ತು ಎಲ್ಲಾ ರಾಜ್ಯಗಳು ಒಟ್ಟಾಗಿ ಟೀಂ ಇಂಡಿಯಾದಂತೆ ಒಟ್ಟಾಗಿ ಕೆಲಸ ಮಾಡಿದರೆ, ಯಾವುದೇ ಗುರಿ ಅಸಾಧ್ಯವಲ್ಲ. ವಿಕಸಿತ ಭಾರತ ಭಾರತ ಪ್ರತಿಯೊಬ್ಬ ಭಾರತೀಯನ ಗುರಿ. ಪ್ರತಿಯೊಂದು ರಾಜ್ಯ ವಿಕಸಿತ ಆದಾಗ, ಭಾರತ ವಿಕಸಿತವಾಗುತ್ತದೆ. ಇದು 140 ಕೋಟಿ ನಾಗರಿಕರ ಆಕಾಂಕ್ಷೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಮೋದಿ ನೇತೃತ್ವದ ನೀತಿ ಆಯೋಗದ ಸಭೆಗೆ ಸಿದ್ದರಾಮಯ್ಯ ಗೈರು

    ರಾಜ್ಯಗಳು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಅಗತ್ಯ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಕನಿಷ್ಠ ಒಂದು ಪ್ರವಾಸಿ ತಾಣವನ್ನು ವಿಶ್ವದರ್ಜೆಯ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು. ಒಂದು ರಾಜ್ಯ, ಒಂದು ಜಾಗತಿಕ ತಾಣ. ಇದು ನೆರೆಯ ನಗರಗಳನ್ನು ಪ್ರವಾಸಿ ಸ್ಥಳಗಳಾಗಿ ಅಭಿವೃದ್ಧಿಪಡಿಸಲು ಸಹ ಕಾರಣವಾಗುತ್ತದೆ ಎಂದರು. ಇದನ್ನೂ ಓದಿ: ಪ್ರೀತಿಸಿದವನೊಂದಿಗೆ ಮನೆಬಿಟ್ಟು ಹೋದ ಮಗಳು – ಮನನೊಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಶಂಕೆ

    ಭಾರತ ವೇಗವಾಗಿ ನಗರೀಕರಣಗೊಳ್ಳುತ್ತಿದೆ. ಭವಿಷ್ಯಕ್ಕೆ ಸಿದ್ಧವಾಗಿರುವ ನಗರಗಳತ್ತ ನಾವು ಕೆಲಸ ಮಾಡಬೇಕು. ಬೆಳವಣಿಗೆ, ನಾವೀನ್ಯತೆ ಮತ್ತು ಸುಸ್ಥಿರತೆಯು ನಮ್ಮ ನಗರಗಳ ಅಭಿವೃದ್ಧಿಗೆ ಎಂಜಿನ್ ಆಗಿರಬೇಕು. ನಮ್ಮ ಕಾರ್ಯಪಡೆಯಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಅವರು ಕಾರ್ಯಪಡೆಯಲ್ಲಿ ಗೌರವಯುತವಾಗಿ ಸಂಯೋಜಿಸಲ್ಪಡುವಂತೆ ನಾವು ಕಾನೂನುಗಳು, ನೀತಿಗಳನ್ನು ರೂಪಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: `ಯುವನಿಧಿ’ ಗ್ಯಾರಂಟಿ ಹಣದಿಂದ ಲ್ಯಾಪ್‌ಟಾಪ್‌ ಖರೀದಿಸಿದ ವಿದ್ಯಾರ್ಥಿನಿ ಇಶಾ ಆಸಿಫ್‌

    ಸರ್ಕಾರ ಜಾರಿಗೆ ತಂದ ನೀತಿಗಳು ಸಾಮಾನ್ಯ ನಾಗರಿಕರ ಜೀವನದಲ್ಲಿ ಬದಲಾವಣೆ ತರುವ ರೀತಿಯಲ್ಲಿ ನಾವು ಕೆಲಸ ಮಾಡಬೇಕು. ಜನರು ಬದಲಾವಣೆಯನ್ನು ಅನುಭವಿಸಿದಾಗ ಮಾತ್ರ, ಅದು ಬದಲಾವಣೆಯನ್ನು ಬಲಪಡಿಸುತ್ತದೆ. ಬದಲಾವಣೆಯನ್ನು ಒಂದು ಚಳುವಳಿಯಾಗಿ ಪರಿವರ್ತಿಸುತ್ತದೆ. 140 ಕೋಟಿ ಜನರ ಆಕಾಂಕ್ಷೆಗಳನ್ನು ಈಡೇರಿಸಲು ನಮಗೆ ಒಂದು ತಂಡವಾಗಲು ಉತ್ತಮ ಅವಕಾಶವಿದೆ. 2047ರ ವೇಳೆಗೆ ಭಾರತವನ್ನು ವಿಕಸಿತ ಮಾಡುವುದು ನಮ್ಮ ಗುರಿಯಾಗಿದೆ. ಪ್ರತಿಯೊಂದು ರಾಜ್ಯ, ಪ್ರತಿಯೊಂದು ನಗರ, ಪ್ರತಿಯೊಂದು ನಗರ ಪಾಲಿಕೆ ಮತ್ತು ಪ್ರತಿಯೊಂದು ಗ್ರಾಮವನ್ನು ವಿಕಸಿತ ಮಾಡುವ ಗುರಿ ನಮಗಿರಬೇಕು. ನಾವು ಈ ಮಾರ್ಗಗಳಲ್ಲಿ ಕೆಲಸ ಮಾಡಿದರೆ, ವಿಕಸಿತ ಭಾರತ ಆಗಲು 2047ರವರೆಗೆ ಕಾಯಬೇಕಾಗಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಡ್ರೆಸ್ ತಪ್ಪಾಗಿದ್ದಕ್ಕೆ ಗಲಾಟೆ – ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್!

    ಪುದುಚೇರಿ ಸಿಎಂ ರಂಗಸ್ವಾಮಿ, ಕರ್ನಾಟಕ ಸಿಎಂ ಸಿದ್ಧರಾಮಯ್ಯ ಮತ್ತು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಸಭೆಗೆ ಗೈರುಹಾಜರಾಗಿದ್ದರು. ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ಮುಖ್ಯಮಂತ್ರಿಗಳಾದ ಎನ್ ಚಂದ್ರಬಾಬು ನಾಯ್ಡು, ಎಂಕೆ ಸ್ಟಾಲಿನ್ ಮತ್ತು ರೇವಂತ್ ರೆಡ್ಡಿ ಉಪಸ್ಥಿತರಿದ್ದರು. ಜಮ್ಮು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಮತ್ತು ಹಿಮಾಚಲ ಪ್ರದೇಶದ ಸುಖವಿಂದರ್ ಸುಖು ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: Vijayapura | ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತ – ಯುವಕ ಸಾವು

  • ಮೋದಿ ನೇತೃತ್ವದ ನೀತಿ ಆಯೋಗದ ಸಭೆಗೆ ಸಿದ್ದರಾಮಯ್ಯ ಗೈರು

    ಮೋದಿ ನೇತೃತ್ವದ ನೀತಿ ಆಯೋಗದ ಸಭೆಗೆ ಸಿದ್ದರಾಮಯ್ಯ ಗೈರು

    ನವದೆಹಲಿ: ದೆಹಲಿಯಲ್ಲಿ (Delhi) ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದಲ್ಲಿ ನಡೆಯುತ್ತಿದ್ದ ನೀತಿ ಆಯೋಗದ ಸಭೆಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಗೈರಾಗಿದ್ದು, ಇಂತಹ ಮಹತ್ವದ ಸಭೆಗೆ ಬರದಿರಲು ಕಾರಣವೇನು ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.

    ದೆಹಲಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿಕಸಿತ ಭಾರತಕ್ಕಾಗಿ ವಿಕಸಿತ ರಾಜ್ಯ ಹೆಸರಿನಲ್ಲಿ (Viksit Rajya for Viksit Bharat 2047) ಹತ್ತನೇ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಆರ್ಥಿಕ ಬೆಳವಣಿಗೆ, ಸಾಮಾಜಿಕ ಕಲ್ಯಾಣ, ಮೂಲಸೌಕರ್ಯ ಅಭಿವೃದ್ಧಿ, ಮತ್ತು ಸುಸ್ಥಿರತೆಯಂತಹ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.ಇದನ್ನೂ ಓದಿ: ಪ್ರೀತಿಸಿದವನೊಂದಿಗೆ ಮನೆಬಿಟ್ಟು ಹೋದ ಮಗಳು – ಮನನೊಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಶಂಕೆ

    ಜೊತೆಗೆ ರಾಷ್ಟ್ರೀಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ಸ್ಥಳೀಯ ಅಗತ್ಯತೆಗಳಿಗೆ ತಕ್ಕಂತೆ ನೀತಿಗಳನ್ನು ರೂಪಿಸಲು ಈ ಸಭೆ ವೇದಿಕೆಯಾಗಿದ್ದು, ಸಾಮಾನ್ಯವಾಗಿ ಎಲ್ಲಾ ಸಿಎಂಗಳು ರಾಜ್ಯದ ಅಭಿವೃದ್ಧಿ ವಿಚಾರಗಳಲ್ಲಿ ತಮ್ಮ ವಾದವನ್ನು ಪ್ರಧಾನಿ ಮುಂದೆ ಮಂಡಿಸುತ್ತಾರೆ.

    ಈ ಸಭೆಗೆ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸಿದ್ದರು. ಈ ಪೈಕಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಹಿಮಾಚಲ ಪ್ರದೇಶ ಸಿಎಂ ಸುಖವಿಂದ್ರ ಸಿಂಗ್ ಸುಖು, ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್, ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಸೇರಿ ಹಲವು ಇತರೆ ಪಕ್ಷಗಳ ಸಿಎಂಗಳು ಭಾಗಿಯಾಗಿದ್ದರು. ಆದ್ರೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಗೈರಾಗಿದ್ದರು.ಇದನ್ನೂ ಓದಿ: `ಯುವನಿಧಿ’ ಗ್ಯಾರಂಟಿ ಹಣದಿಂದ ಲ್ಯಾಪ್‌ಟಾಪ್‌ ಖರೀದಿಸಿದ ವಿದ್ಯಾರ್ಥಿನಿ ಇಶಾ ಆಸಿಫ್‌

  • ವಿಕಸಿತ ಭಾರತಕ್ಕಾಗಿ ಈ ಚುನಾವಣೆ; ಜನ ಅಭಿವೃದ್ಧಿಯ ಟ್ರೇಲರ್ ಮಾತ್ರ ನೋಡಿದ್ದಾರೆ ಎಂದ ಮೋದಿ

    ವಿಕಸಿತ ಭಾರತಕ್ಕಾಗಿ ಈ ಚುನಾವಣೆ; ಜನ ಅಭಿವೃದ್ಧಿಯ ಟ್ರೇಲರ್ ಮಾತ್ರ ನೋಡಿದ್ದಾರೆ ಎಂದ ಮೋದಿ

    – ನಾನೂ ಬಡತನದಲ್ಲಿ ಬದುಕಿದ್ದೇನೆ – ಬಡವರ ದುಃಖ, ನೋವು ನನಗೆ ಅರ್ಥವಾಗುತ್ತದೆ

    ಲಕ್ನೋ: ಈ ಬಾರಿಯ ಲೋಕಸಭಾ ಚುನಾವಣೆ (Lok Sabha Election 202) `ವಿಕಸಿತ ಭಾರತ’ ವನ್ನು (Viksit Bharat) ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

    ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡ ಬಳಿಕ ಉತ್ತರ ಪ್ರದೇಶದಲ್ಲಿ (Uttar Pradesh) ತಮ್ಮ ಮೊದಲ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಕೇವಲ ಸರ್ಕಾರ ರಚನೆಗಾಗಿ ಮಾತ್ರ ಚುನಾವಣೆ ನಡೆಯುವುದಿಲ್ಲ. ಜನರು ದೇಶದ ಅಭಿವೃದ್ಧಿಯ ಟ್ರೇಲರ್ ಅನ್ನು ಮಾತ್ರ ನೋಡಿದ್ದಾರೆ. ಮುಂದಿನ 5 ವರ್ಷಕ್ಕೆ ಬೇಕಾದ ಮಾರ್ಗಸೂಚಿಯನ್ನು ನಮ್ಮ ಸರ್ಕಾರ ಸಿದ್ಧಪಡಿಸುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಮಿತ್‌ ಶಾ ವಿರುದ್ಧ ʻರೌಡಿʼ ಹೇಳಿಕೆ ಸಮರ್ಥಿಸಿಕೊಂಡ ಸಿಎಂ ಪುತ್ರ – ಮೋದಿ ವಿರುದ್ಧವೂ ವಾಗ್ದಾಳಿ

    ಈಗಾಗಲೇ ಮೂರನೇ ಅವಧಿಗೆ ನಮ್ಮ ಸರ್ಕಾರ ಸಿದ್ಧತೆಗಳನ್ನು ಪ್ರಾರಂಭಿಸಿದೆ. ನಾವು ಮುಂದಿನ ಐದು ವರ್ಷಗಳ ಮಾರ್ಗಸೂಚಿಯನ್ನು ತಯಾರಿಸುತ್ತಿದ್ದೇವೆ. ಮೊದಲ 100 ದಿನಗಳಲ್ಲಿ ನಾವು ಯಾವ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಅನ್ನೋ ಬಗೆಗಿನ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಕಳೆದ 10 ವರ್ಷಗಳಲ್ಲಿ, ಜನರು ಅಭಿವೃದ್ಧಿಯ ಟ್ರೇಲರ್‍ನ್ನು ಮಾತ್ರ ನೋಡಿದ್ದೀರಿ, ಈಗ ನಾವು ದೇಶವನ್ನು ಇನ್ನೂ ಹೆಚ್ಚು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ ಎಂದಿದ್ದಾರೆ.

    ನಾನು ಬಡತನದಲ್ಲಿ ಬದುಕಿದ್ದೇನೆ. ಹಾಗಾಗಿಯೇ ಪ್ರತಿಯೊಬ್ಬ ಬಡವರ ದುಃಖ ಮತ್ತು ನೋವು ನನಗೆ ಚೆನ್ನಾಗಿ ಅರ್ಥವಾಗುತ್ತದೆ. ನಾವು ಬಡವರ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಯೋಜನೆಗಳನ್ನು ಕೈಗೊಂಡಿದ್ದೇವೆ. ಬಡವರ ಸಬಲೀಕರಣ ಮಾತ್ರ ಮಾಡಿಲ್ಲ. ಬಡವರ ಆತ್ಮಗೌರವವನ್ನು ಅವರಿಗೆ ಮರಳಿಸಿದ್ದೇವೆ ಎಂದಿದ್ದಾರೆ.

    ಇತ್ತೀಚೆಗೆ ಬಿಜೆಪಿ ನೇತೃತ್ವದ ಎನ್‍ಡಿಎ ಸೇರ್ಪಡೆಗೊಂಡ ರಾಷ್ಟ್ರೀಯ ಲೋಕದಳದ ಅಧ್ಯಕ್ಷ ಜಯಂತ್ ಚೌಧರಿ ಅವರು ರ‍್ಯಾಲಿಯಲ್ಲಿ ಪ್ರಧಾನಿಯೊಂದಿಗೆ ವೇದಿಕೆ ಹಂಚಿಕೊಂಡರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹರಿಯಾಣ ಸಿಎಂ ನಾಯಬ್ ಸಿಂಗ್ ಸೈನಿ ಹಾಗೂ ಮೀರತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ, ರಾಮಾಯಣ ಧಾರಾವಾಹಿ ಖ್ಯಾತಿಯ ಹಿರಿಯ ನಟ ಅರುಣ್ ಗೋವಿಲ್ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಮ್ಯಾಚ್‌ ಫಿಕ್ಸಿಂಗ್‌ ಇಲ್ಲದೇ 400 ಸೀಟು ಗೆಲ್ಲಲು ಸಾಧ್ಯವಿಲ್ಲ – ಮೋದಿ ವಿರುದ್ಧ ಘರ್ಜಿಸಿದ ರಾಗಾ