Tag: ವಿಕಲ ಚೇತನ

  • 2020ಕ್ಕೆ ಸ್ಫೂರ್ತಿದಾಯಕ ವಿಡಿಯೋ ಟ್ವೀಟ್ ಮಾಡಿದ ಸಚಿನ್ – ಧನ್ಯವಾದ ತಿಳಿಸಿದ ಬಾಲಕ

    2020ಕ್ಕೆ ಸ್ಫೂರ್ತಿದಾಯಕ ವಿಡಿಯೋ ಟ್ವೀಟ್ ಮಾಡಿದ ಸಚಿನ್ – ಧನ್ಯವಾದ ತಿಳಿಸಿದ ಬಾಲಕ

    ರಾಂಚಿ: 2020ಕ್ಕೆ ಸ್ವಾಗತ ಕೋರಿರುವ ಟೀಂ ಇಂಡಿಯಾ ಮಾಜಿ ನಾಯಕ ಸಚಿನ್ ತೆಂಡೂಲ್ಕರ್, ಮುಂದಿನ ದಶಕವನ್ನು ಮಕ್ಕಳ ಭವಿಷ್ಯಕ್ಕಾಗಿ ಮೀಸಲಿರುಸವುದಾಗಿ ತಿಳಿಸಿದ್ದಾರೆ. ಅಲ್ಲದೇ ಬಾಲಕನೊಬ್ಬನ ವಿಡಿಯೋ ಟ್ವೀಟ್ ಮಾಡಿ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.

    ಸಚಿನ್ ಟ್ವೀಟ್ ಮಾಡಿರುವ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಸದ್ಯ ಈ ವಿಡಿಯೋದಲ್ಲಿರುವ ಬಾಲಕ ಮದ್ದ ರಾಮ್ ಸಚಿನ್ ಅವರಿಗೆ ಧನ್ಯವಾದ ತಿಳಿಸಿದ್ದಾನೆ.

    ಸಚಿನ್ ಪೋಸ್ಟ್ ಮಾಡಿದ್ದ ವಿಡಿಯೋದಲ್ಲಿ 13 ವರ್ಷದ ಮದ್ದ ರಾಮ್ ಎಂಬ ಬಾಲಕ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಾ ರನ್ ಪಡೆಯುತ್ತಿರುವುದನ್ನು ಕಾಣಬಹುದು. ಆದರೆ ಬಾಲಕ ಮದ್ದ ರಾಮ್ ವಿಕಲ ಚೇತನ ಬಾಲಕನಾಗಿದ್ದು, ಆತನ ಜೀವನೋತ್ಸಾಹಕ್ಕೆ ಫಿದಾ ಆಗಿದ್ದ ಸಚಿನ್ ವಿಡಿಯೋ ಟ್ವೀಟ್ ಮಾಡಿದ್ದರು.

    ಬಾಲಕ ಮದ್ದ ರಾಮ್ ಚತ್ತೀಸ್‍ಗಢದ ದಂತೇವಾಡ ಜಿಲ್ಲೆಯ ಕಾಂಟೆಕಲ್ಯಾಣ್ ಎಂಬ ಸಣ್ಣ ಗ್ರಾಮದ ನಿವಾಸಿಯಾಗಿದ್ದು, ಕ್ರಿಕೆಟ್ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದಾನೆ. ರಾಮ್ ಮಂಡಿಯ ಸಹಾಯದಿಂದಲೇ ತೆವಳುತ್ತಾ ರನ್ ಪಡೆಯುತ್ತಿದ್ದ. ಆ ಬಳಿಕ ಸ್ಟ್ರೈಕ್ ನಲ್ಲಿದ್ದ ಬಾಲಕನಿಗೆ ಮುಂದೇ ಸಾಗಿ ಬ್ಯಾಟ್ ಕೂಡ ನೀಡುತ್ತಿದ್ದ. ಈ ವಿಡಿಯೋ ಹಲವರಿಗೆ ಸ್ಫೂರ್ತಿದಾಯಕವಾಗಿತ್ತು.

    ‘ಈ ಸ್ಫೂರ್ತಿದಾಯಕ ವಿಡಿಯೋದೊಂದಿಗೆ ಹೊಸ ವರ್ಷವನ್ನು ಆರಂಭಿಸಿ. ವಿಡಿಯೋ ನನ್ನ ಮನಸ್ಸನ್ನು ಮಿಡಿಯುವಂತೆ ಮಾಡಿತು. ನಿಮಗೂ ಇದೇ ಅನುಭವವಾಗುತ್ತದೆ’ ಎಂದು ಸಚಿನ್ ತಮ್ಮ ಟ್ವೀಟ್‍ನಲ್ಲಿ ತಿಳಿಸಿದ್ದರು. ಸಚಿನ್ ಅವರ ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಬಾಲಕ ಮದ್ದ ರಾಮ್, ನನ್ನ ಕ್ರಿಕೆಟ್ ದೇವರು ಸಚಿನ್ ಅವರಿಗೆ ಧನ್ಯವಾದ. ಸಚಿನ್ ಎಂದರೇ ನನಗೆ ತುಂಬಾ ಇಷ್ಟ. ನನ್ನ ವಿಡಿಯೋವನ್ನು ಅವರು ಸ್ವತಃ ಹಂಚಿಕೊಂಡಿದ್ದು ಮತ್ತಷ್ಟು ಖುಷಿ ತಂದಿದೆ. ಅವರು ತಮ್ಮ ಗ್ರಾಮಕ್ಕೆ ಬರಬೇಕೆಂದು ಇಚ್ಛಿಸುತ್ತೇನೆ. ನಾನು ಹೆಚ್ಚಿನ ಶಿಕ್ಷಣ ಪಡೆದು ಡಾಕ್ಟರ್ ಆಗಬೇಕೆಂಬ ಆಸೆ ಇದೆ ಎಂದು ತಿಳಿಸಿದ್ದಾನೆ. ವಿಡಿಯೋ ವೈರಲ್ ಆದ ಬಳಿಕ ಸ್ಥಳೀಯ ಶಿಕ್ಷಣ ಇಲಾಖೆಯ ಬ್ಲಾಕ್ ಅಧಿಕಾರಿ ಬಾಲಕನನ್ನು ಭೇಟಿ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

  • ಸಂತ್ರಸ್ತರಿಗೆ ವಿಕಲ ಚೇತನ ವ್ಯಕ್ತಿಯಿಂದ ಆಹಾರ ಸಂಗ್ರಹ

    ಸಂತ್ರಸ್ತರಿಗೆ ವಿಕಲ ಚೇತನ ವ್ಯಕ್ತಿಯಿಂದ ಆಹಾರ ಸಂಗ್ರಹ

    ಚಿಕ್ಕೋಡಿ: ಕೊಡಗು ಸಂತ್ರಸ್ತರಿಗೆ ಗಡಿ ಜಿಲ್ಲೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನತೆ ಸಹಾಯ ಹಸ್ತ ಚಾಚಿದ್ದಾರೆ. ಅಲ್ಲದೇ ಸಂತ್ರಸ್ತರಿಗೆ ವಿಕಲ ಚೇತನ ವ್ಯಕ್ತಿಯೊಬ್ಬರು ಆಹಾರವನ್ನು ಸಂಗ್ರಹಿಸಿದ್ದಾರೆ.

    ವಿಶೇಷ ಅಂದರೆ ಬಿಸ್ಕಟ್, ಬ್ರೆಡ್ ಸೇರಿದಂತೆ ಆಹಾರ ಪದಾರ್ಥವನ್ನು ವಿಕಲ ಚೇತನ ವ್ಯಕ್ತಿಯೊಬ್ಬರು ಜನರಿಂದ ಸಂಗ್ರಹಿಸಿ ಅಥಣಿ ತಹಶಿಲ್ದಾರರ ಮೂಲಕ ಕೊಡಗು ಮತ್ತು ಮಡಿಕೇರಿಯ ಪ್ರವಾಹ ಸಂತ್ರಸ್ತರಿಗೆ ರವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಅಥಣಿ ತಾಲೂಕಿನ ಐನಾಪೂರದ ನಿವಾಸಿ ರಮೇಶ್ ನಾಯಕ ವಿಕಲ ಚೇತನ ಸದ್ಯ ಮಾನವೀಯತೆ ಮೆರೆದಿದ್ದು, ನಾಲ್ಕು ಬಾಕ್ಸ್‍ನಷ್ಟು ಆಹಾರ ಪದಾರ್ಥಗಳನ್ನು ತಹಶಿಲ್ದಾರ ಕಚೇರಿ ಮೂಲಕ ತಲುಪಿಸಲು ಮುಂದಾಗಿದ್ದು ಸಹಾಯದ ಹಸ್ತ ಚಾಚಿದ್ದಾರೆ.

    ಸದ್ಯ ರಮೇಶ್ ನಾಯಕ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಕೊಡುಗು ಸಂತ್ರಸ್ಥರಿಗೆ ತಲುಪಿಸಲಾಗುವುದು ಎಂದು ಅಥಣಿ ತಹಶಿಲ್ದಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv