Tag: ವಿಆರ್ ಮಾಲ್

  • ಮಳೆಯಿಂದಾಗಿ ಮಾಲ್‍ನ ಸೀಲಿಂಗ್ ಕುಸಿತ – ವೀಡಿಯೋ ವೈರಲ್

    ಮಳೆಯಿಂದಾಗಿ ಮಾಲ್‍ನ ಸೀಲಿಂಗ್ ಕುಸಿತ – ವೀಡಿಯೋ ವೈರಲ್

    ಚೆನ್ನೈ: ತಮಿಳುನಾಡಿನಲ್ಲಿ ಗುರುವಾರ ಸುರಿದ ಭಾರೀ ಮಳೆಯಿಂದಾಗಿ ಅಣ್ಣಾನಗರದ ವಿಆರ್ ಮಾಲ್‍ನ ಒಂದು ಭಾಗದಲ್ಲಿ ಸೀಲಿಂಗ್ ಕುಸಿದು ಬಿದ್ದಿದೆ. ಸಂಜೆ 5 ಗಂಟೆ ಸುಮಾರಿಗೆ ನಡೆದ ಘಟನೆಯ ವೀಡಿಯೋ ವೈರಲ್ ಆಗಿದೆ.

    ಛಾವಣಿಯ ಮೇಲೆ ನೀರು ನಿಂತಿದ್ದರಿಂದ ಸೀಲಿಂಗ್ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಘಟನೆ ನಡೆದ 2 ಗಂಟೆಗಳೊಳಗೆ ಮಾಲ್‍ನ ಮೇಲ್ಛಾವಣಿಯನ್ನು ದುರಸ್ಥಿ ಮಾಡಲಾಗಿದ್ದು, ಸಾರ್ವಜನಿಕರಿಗೆ ಮತ್ತೆ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷದ ಸಂಭ್ರಮ ಕಸಿದ ಕೋವಿಡ್ ಹೆಮ್ಮಾರಿ- ಬೆಂಗ್ಳೂರಿನ ಪ್ರಮುಖ ರಸ್ತೆಗಳೆಲ್ಲವೂ ನಿರ್ಜನ

    ಮಾಲ್‍ನ ಸೀಲಿಂಗ್ ಕುಸಿದು ಬಿದ್ದ ಸಂದರ್ಭದಲ್ಲಿ ಜೋರಾಗಿ ಸದ್ದು ಕೇಳಿಸಿತು. ಮಾಲ್‍ನಲ್ಲಿದ್ದ ಜನರೆಲ್ಲರೂ ನೆಲದ ಅಂತಸ್ತಿಗೆ ಓಡಿ ಹೋದರು. ಜೋರಾಗಿ ಮಳೆ ಸುರಿಯುತ್ತಿದ್ದ ಕಾರಣ ಮಾಲ್‍ನಿಂದ ಹೊರಗಡೆ ಹೋಗಲೂ ಸಾಧ್ಯವಾಗಲಿಲ್ಲ. ಮಳೆಯ ನೀರು ಮಾಲ್ ಒಳಗೂ ಪ್ರವೇಶಿಸಿತ್ತು. ಪರಿಸ್ಥಿತಿ ಸ್ವಲ್ಪ ಸಮಯದಲ್ಲಿ ಹತೋಟಿಗೆ ತರಲಾಯ್ತು ಎಂದು ಮಾಲ್‍ನಲ್ಲಿ ನೆರೆದಿದ್ದ ಒಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಸಾಧು ವೇಷದಲ್ಲಿ ಮಾದಕ ವಸ್ತು ಮಾರುತ್ತಿದ್ದ ವ್ಯಕ್ತಿ ಅರೆಸ್ಟ್

    ಭಾರೀ ಮಳೆಯ ಹಿನ್ನೆಲೆಯಲ್ಲಿ ತಮಿಳುನಾಡಿನ ರಾಜ್ಯ ಸರ್ಕಾರ ಚೆನ್ನೈ, ಕಾಂಚೀಪುರಂ, ತಿರುವಳ್ಳೂರು ಹಾಗೂ ಚಿಂಗಲ್‍ಪೇಟೆ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಚೆನ್ನೈನ ಮೆಟ್ರೋ ಪ್ರಯಾಣಿಕರು ಸುರಕ್ಷಿತವಾಗಿ ಮನೆ ತಲುಪಲು ಸುಲಭವಾಗಲು ಕಾರ್ಯಾಚರಣೆ ಸಮಯವನ್ನು ರಾತ್ರಿ 12 ಗಂಟೆಯಿಂದ 1 ಗಂಟೆಗೆ ವಿಸ್ತರಿಸುವುದಾಗಿ ಘೋಷಿಸಿದೆ.