Tag: ವಿಂಡೋ ಸೀಟ್

  • ಶೀತಲ್ ಶೆಟ್ಟಿ ನಿರ್ದೇಶನದ ‘ವಿಂಡೋಸೀಟ್’ ಚಾಲೆಂಜ್ ಗೆಲ್ಲಿ, ಪ್ರೀಮಿಯರ್ ಶೋನಲ್ಲಿ ಭಾಗವಹಿಸಿ

    ಶೀತಲ್ ಶೆಟ್ಟಿ ನಿರ್ದೇಶನದ ‘ವಿಂಡೋಸೀಟ್’ ಚಾಲೆಂಜ್ ಗೆಲ್ಲಿ, ಪ್ರೀಮಿಯರ್ ಶೋನಲ್ಲಿ ಭಾಗವಹಿಸಿ

    ಸ್ಟ್ ಲುಕ್, ಟೀಸರ್ ನಿಂದ ಟಾಕ್ ಆಫ್ ದಿ ಟೌನ್ ಆಗಿರೋ ಶೀತಲ್ ಶೆಟ್ಟಿ ನಿರ್ದೇಶನದ ‘ವಿಂಡೋಸೀಟ್’ ಚಿತ್ರ ಈಗ ‘ವಿಂಡೋಸೀಟ್ ಇನ್ವೆಸ್ಟಿಗೇಶನ್ ಚಾಲೆಂಜ್’ ಮೂಲಕ ಮತ್ತೆ ಸದ್ದು ಮಾಡುತ್ತಿದೆ. ಅರೇ ಇದೇನಪ್ಪಾ ಚಾಲೆಂಜ್ ಅಂದ್ಕೋಂಡ್ರಾ..? ಖಂಡಿತವಾಗಿಯೂ ಇದು ಚಿತ್ರತಂಡ ಸಿನಿರಸಿಕರಿಗೆ ನೀಡಿರೋ ಚಾಲೆಂಜ್. ಈ ಚಾಲೆಂಜ್ ಗೆದ್ದವರು ವಿಂಡೋಸೀಟ್ ಚಿತ್ರತಂಡದ ಜೊತೆ ಪ್ರೀಮಿಯರ್ ಶೋನಲ್ಲಿ ಸಿನಿಮಾ ನೋಡೋ ಅವಕಾಶ ಗಿಟ್ಟಿಸಿಕೊಳ್ಳಬಹುದು.

    ಹೌದು. ಚಾಲೆಂಜ್ ಗೆಲ್ಲಲು ಮಾಡಬೇಕಾಗಿದ್ದು ಇಷ್ಟೆ ಇಂದು ಸಂಜೆ ಏಳು ಗಂಟೆಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ‘ವಿಂಡೋಸೀಟ್ ಇನ್ವೆಸ್ಟಿಗೇಶನ್ ಚಾಲೆಂಜ್’ನಲ್ಲಿ ಭಾಗವಹಿಸಬೇಕು. ಅದಕ್ಕೂ ಮುನ್ನ ವಿಂಡೋ ಸೀಟ್ ಚಿತ್ರದ ಟೀಸರ್ ಮಿಸ್ ಮಾಡ್ದೆ ನೋಡಬೇಕು. ಟೀಸರ್ ನಲ್ಲಿರೋ ನಿಗೂಢ ಘಟನೆ ನಿಮ್ಮ ಸುತ್ತಮುತ್ತ ನಡೆದಾಗ ಒಬ್ಬ ತನಿಖಾಧಿಕಾರಿಯಾಗಿ ರಹಸ್ಯವನ್ನು ಯಾವ ರೀತಿ ಬಗೆಹರಿಸುತ್ತೀರಾ ಅನ್ನೋದು ಚಿತ್ರತಂಡದ ಚಾಲೆಂಜ್. ಸರಿಯಾದ ಉತ್ತರ ನೀಡಿದವರಿಗೆ ಪ್ರೀಮಿಯರ್ ಶೋನಲ್ಲಿ ಇಡೀ ಚಿತ್ರತಂಡದ ಜೊತೆ ಸಿನಿಮಾ ನೋಡೋ ಬಂಪರ್ ಅವಕಾಶ ಸಿಗಲಿದೆ.

    ರೊಮ್ಯಾಂಟಿಂಕ್ ಥ್ರಿಲ್ಲರ್ ಕಥಾಹಂದರವವುಳ್ಳ ‘ವಿಂಡೋಸೀಟ್’ ಚಿತ್ರದಲ್ಲಿ ರವಿಶಂಕರ್, ಮಧುಸೂದನ್ ರಾವ್, ಲೇಖಾ ನಾಯ್ಡು, ಸೂರಜ್ ಸೇರಿದಂತೆ ಹಲವು ಕಲಾವಿದರು ತೆರೆಹಂಚಿಕೊಂಡಿದ್ದಾರೆ. ಜಾಕ್ ಮಂಜು ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವಿಘ್ನೇಶ್ ರಾಜ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಸದ್ಯಕ್ಕಂತೂ ವಿಂಡೋಸೀಟ್ ಟೀಸರ್ ನೋಡಿದವರು ಹೇಗಪ್ಪಾ ಈ ರಹಸ್ಯ ಭೇದಿಸೋದು ಎಂದು ಯೋಚಿಸುತ್ತಿರೋದಂತೂ ಸತ್ಯ.

  • ‘ವಿಂಡೋ ಸೀಟ್’ನಲ್ಲಿ ಕಂಡಿದ್ದು ರೊಮ್ಯಾಂಟಿಕ್ ಫಸ್ಟ್ ಲುಕ್!

    ‘ವಿಂಡೋ ಸೀಟ್’ನಲ್ಲಿ ಕಂಡಿದ್ದು ರೊಮ್ಯಾಂಟಿಕ್ ಫಸ್ಟ್ ಲುಕ್!

    – ಜಡಗಟ್ಟಿದ ಮನಸುಗಳಿಗೆ ತಂಗಾಳಿ ತೀಡಿದ ವಿಂಡೋ ಸೀಟ್!

    ಕೊರೊನಾ ಕಾಲದ ತುಂಬೆಲ್ಲ ಸಾಕಷ್ಟು ಸಂಚಲನ ಸೃಷ್ಟಿಸುತ್ತಾ ಸಾಗಿ ಬಂದಿದ್ದ ಚಿತ್ರ ವಿಂಡೋ ಸೀಟ್. ಶೀತಲ್ ಶೆಟ್ಟಿ ನಿರ್ದೇಶನದ ಮೊದಲ ಸಿನಿಮಾ ಅನ್ನೋದರಿಂದ ಮೊದಲ್ಗೊಂಡು, ರಂಗಿತರಂಗ ಖ್ಯಾತಿಯ ನಿರೂಪ್ ನಾಯಕನಾಗಿರೋ ಚಿತ್ರ ಎಂಬಲ್ಲಿಯವರೆಗೆ ವಿಂಡೋ ಸೀಟ್‍ನತ್ತ ಪ್ರೇಕ್ಷಕರ ಚಿತ್ತ ನೆಟ್ಟುಕೊಳ್ಳಲು ನಾನಾ ಕಾರಣಗಳಿದ್ದವು. ತೀರಾ ಇತ್ತೀಚೆಗೆ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಗೊಂಡಿತ್ತು. ಅದರ ಫಲವಾಗಿಯೇ ಫಸ್ಟ್ ಲುಕ್ ಹೇಗಿರಬಹುದೆಂಬ ಕುತೂಹಲ ಪಡಿಮೂಡಿಕೊಂಡಿತ್ತಲ್ಲಾ? ಅದಕ್ಕೀಗ ಉತ್ತರ ಸಿಕ್ಕಿದೆ. ಇದುವರೆಗೂ ಆವರಿಸಿಕೊಂಡಿದ್ದ ಕಾತರಗಳನ್ನೆಲ್ಲ ತಣಿಸುವಂಥ ರೊಮ್ಯಾಂಟಿಕ್ ಫಸ್ಟ್ ಲುಕ್ ಇದೀಗ ಲಾಂಚ್ ಆಗಿದೆ.

    ಶೀತಲ್ ಶೆಟ್ಟಿ ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಜಾನರಿನ ಸಿನಿಮಾ ಎಂಬುದನ್ನು ಒತ್ತಿ ಹೇಳುತ್ತಾ ಬಂದಿದ್ದರು. ಅದನ್ನು ನಿಜವಾಗಿಸುವಂತೆಯೇ ಈ ಫಸ್ಟ್ ಲುಕ್ ಮೂಡಿ ಬಂದಿದೆ. ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಇಲ್ಲಿ ಪಕ್ಕಾ ರೊಮ್ಯಾಂಟಿಕ್ ಲುಕ್ಕಿನಲ್ಲಿ ಕಂಗೊಳಿಸಿದ್ದಾರೆ. ಈ ಮೂಲಕವೇ ವಿಂಡೋ ಸೀಟ್‍ನಲ್ಲೊಂದು ಮಧುರವಾದ ಪ್ರೇಮಕಾವ್ಯವಿದೆ ಎಂಬುದರ ಸ್ಪಷ್ಟ ಸುಳಿವೂ ಸಿಕ್ಕಂತಾಗಿದೆ. ಇದರ ಆಚೀಚೆಗೆ ಅದೆಂತೆಂಥಾ ಬೆರಗುಗಳಿವೆಯೋ ಗೊತ್ತಿಲ್ಲ. ಆದರೆ, ಈ ಪುಟ್ಟದಾದ ಫಸ್ಟ್ ಲುಕ್ ಅನ್ನು ಶೀತಲ್ ಶೆಟ್ಟಿ ಅಚ್ಚುಕಟ್ಟಾಗಿಯೇ ರೂಪಿಸಿದ್ದಾರೆ. ಈ ಕಾರಣದಿಂದಲೇ ಸದರಿ ಫಸ್ಟ್ ಲುಕ್ಕಿಗೆ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಮೆಚ್ಚುಗೆಗಳು ಕೇಳಿ ಬರಲಾರಂಭಿಸಿವೆ.

    ಈ ಫಸ್ಟ್ ಲುಕ್ ಮೂಲಕವೇ ಒಟ್ಟಾರೆ ಚಿತ್ರ ಮೂಡಿ ಬಂದಿರಬಹುದಾದ ರೀತಿಯ ಝಲಕುಗಳು ಸಿಕ್ಕಿವೆ. ನಿರ್ಮಾಪಕ ಜಾಕ್ ಮಂಜು ಕೂಡಾ ರಿಚ್ ಆಗಿಯೇ ರೂಪಿಸಿದ್ದಾರೆಂಬ ಅಂಶವಂತೂ ಢಾಳಾಗಿಯೇ ಗೋಚರಿಸುವಂತಿದೆ.

    ಇದೆಲ್ಲದಕ್ಕೂ ಮುಖ್ಯವಾಗಿ ಅರ್ಜುನ್ ಜನ್ಯಾ ವಿಂಡೋ ಸೀಟ್ ಅನ್ನು ಮ್ಯೂಸಿಕಲ್ ಹಿಟ್ ಆಗಿಸುವಂತೆ ಮೋಡಿ ಮಾಡಿರೋ ಲಕ್ಷಣ ಈ ಫಸ್ಟ್ ಲುಕ್‍ನ ಹೈಲೈಟ್‍ಗಳಲ್ಲೊಂದಾಗಿ ಗುರುತಿಸಿಕೊಳ್ಳುತ್ತೆ. ಇನ್ನುಳಿದಂತೆ ಶೀತಲ್ ಶೆಟ್ಟಿ ನಿರ್ದೇಶಕಿಯಾಗಿ ಅತ್ಯಂತ ಪರಿಣಾಮಕಾರಿಯಾಗಿ ಮೊದಲ ಹೆಜ್ಜೆಯಿಟ್ಟಿದ್ದಾರೆ. ಇದುವರೆಗೂ ಅವರ ನಿರ್ದೇಶನದ ಮೇಲೆ ಯಾವ ಥರದ ಕುತೂಹಲಗಳಿದ್ದವೋ ಅವೆಲ್ಲವೂ ಈ ಫಸ್ಟ್ ಲುಕ್‍ನಿಂದ ನೋರ್ಮಡಿಸಿರೋದಂತೂ ನಿಜ.

  • ‘ವಿಂಡೋ ಸೀಟ್’ ಫಸ್ಟ್ ಲುಕ್‍ಗೆ ನಿಗದಿಯಾಯ್ತು ಮುಹೂರ್ತ

    ‘ವಿಂಡೋ ಸೀಟ್’ ಫಸ್ಟ್ ಲುಕ್‍ಗೆ ನಿಗದಿಯಾಯ್ತು ಮುಹೂರ್ತ

    ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಈಗಾಗಲೇ ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ ಚಿತ್ರವಾಗಿ ಬಿಂಬಿತವಾಗಿದೆ. ತಿಂಗಳ ಹಿಂದಷ್ಟೇ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತಲ್ಲಾ? ಅದು ಮಾಡಿದ್ದ ಮ್ಯಾಜಿಕ್ಕಿನ ಬಲದಿಂದಲೇ ಪ್ರೇಕ್ಷಕರು ಮತ್ತಷ್ಟು ವಿವರಗಳಿಗಾಗಿ ಕಾದು ಕೂತಿದ್ದರು. ಅದಕ್ಕೆ ಸರಿಯಾಗಿ ಶೀತಲ್ ಶೆಟ್ಟಿ ಕೂಡಾ ಇಷ್ಟರಲ್ಲಿಯೇ ಫಸ್ಟ್ ಲುಕ್ ಅನಾವರಣಗೊಳಿಸೋದಾಗಿಯೂ ಅನೌನ್ಸ್ ಮಾಡಿದ್ದರು. ಇದೀಗ ಕಡೆಗೂ ಅದಕ್ಕೆ ಮುಹೂರ್ತ ನಿಗದಿಯಾಗಿದೆ. ಇದೇ ತಿಂಗಳ 24ರಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ವಿಂಡೋ ಸೀಟ್‍ನ ಫಸ್ಟ್ ಲುಕ್ ಅನಾವರಣಗೊಳ್ಳಲಿದೆ.

    ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಜಾನರಿನ ಸಿನಿಮಾ. ಹೀಗೊಂದು ಸುಳಿವಿನಾಚೆಗೆ ಬೇರೆ ಯಾವ ಅಂಶಗಳೂ ಜಾಹೀರಾಗದಂಥಾ ಜಾಣ್ಮೆಯನ್ನು ಶೀತಲ್ ಶೆಟ್ಟಿ ಅನುಸರಿಸಿಕೊಂಡು ಬಂದಿದ್ದಾರೆ. ಆದರೆ ಈಗಾಗಲೇ ಬಿಡುಗಡೆಗೊಂಡಿರೋ ಮೋಷನ್ ಪೋಸ್ಟರ್ ಮಾತ್ರ ಅಷ್ಟ ದಿಕ್ಕುಗಳಿಂದಲೂ ನಾನಾ ಪ್ರಶ್ನೆಗಳು ಮೂಡಿಕೊಳ್ಳುವಂತೆ ಮಾಡಿಬಿಟ್ಟಿದೆ. ಅದರಲ್ಲಿ ಕಾಣಿಸಿಕೊಂಡಿದ್ದು ಅಗೋಚರ ಚಹರೆಗಳು ಮಾತ್ರ. ಅದರಲ್ಲಿ ನಾಯಕ ನಿರೂಪ್ ಭಂಡಾರಿಯ ಲುಕ್ ಹೇಗಿರಬಹುದು? ಇನ್ನುಳಿದ ಪಾತ್ರಗಳು ಯಾವ್ಯಾವ ಅವತಾರಗಳಲ್ಲಿ ಕಾಣಿಸಿಕೊಂಡಿವೆ ಎಂಬೆಲ್ಲ ಕುತೂಹಲಗಳಿದ್ದವು. ಇದೀಗ ಅದಕ್ಕೆಲ್ಲ ನಿಖರ ಉತ್ತರ ಸಿಗೋ ಕ್ಷಣಗಳು ಹತ್ತಿರಾಗುತ್ತಿವೆ. ಇದನ್ನೂ ಓದಿ: ವಿಂಡೋ ಸೀಟ್‍ನಲ್ಲಿ ಅರ್ಜುನ್ ಜನ್ಯಾರ ವಿಹಂಗಮ ಯಾನ!

    ಇದು ಜಾಕ್ ಮಂಜು ನಿರ್ಮಾಣದ ಚಿತ್ರ. ಶೀತಲ್ ಶೆಟ್ಟಿ ನಿರ್ದೇಶನದ ಮೊದಲ ಚಿತ್ರವೂ ಹೌದು. ಈಗಾಗಲೇ ಶೀತಲ್ ನಟಿಯಾಗಿ ಸೈ ಅನ್ನಿಸಿಕೊಂಡಿದ್ದಾರೆ. ನಾಯಕಿಯಾಗಿಯೂ ಮಿಂಚಿದ್ದಾರೆ. ಈ ಹಿಂದೆ ಎರಡು ಕಿರು ಚಿತ್ರಗಳ ಮೂಲಕ ನಿರ್ದೇಶಕಿಯಾಗೋ ಸುಳಿವು ನೀಡಿದ್ದ, ಅವರೀಗ ಸದ್ದೇ ಇಲ್ಲದೆ ನಿರ್ದೇಶಕಿಯಾಗಿ ಆಗಮಿಸಿದ್ದಾರೆ. ಈ ಹಿಂದೆ ಎರಡೂ ಕಿರುಚಿತ್ರಗಳಲ್ಲಿಯೂ ಸೂಕ್ಷ್ಮವಂತಿಕೆಯ ಕಥಾ ಕುಸುರಿ ಮತ್ತು ಅಷ್ಟೇ ಸೂಕ್ಷ್ಮವಾದ ದೃಶ್ಯಗಳ ನೇಯ್ಗೆಗಳಿಂದ ಗಮನ ಸೆಳೆದಿದ್ದವರು ಶೀತಲ್ ಶೆಟ್ಟಿ. ಈ ಕಾರಣದಿಂದಲೇ ಅವರು ವಿಂಡೋ ಸೀಟ್‍ಗಾಗಿ ಯಾವ ಥರದ ಕಥೆಯನ್ನು ಆಯ್ಕೆ ಮಾಡಿಕೊಂಡಿರಬಹುದೆಂಬ ಕೌತುಕ ಮೂಡಿಕೊಂಡಿದೆ. ಇದೇ ತಿಂಗಳ 24ರಂದು ಅದಕ್ಕೆ ಸ್ಪಷ್ಟ ಉತ್ತರ ದೊರಕೀತೇನೋ. ಇದನ್ನೂ ಓದಿ: ವಿಂಡೋ ಸೀಟ್: ಟೈಟಲ್ ಪೋಸ್ಟರ್‌ನಲ್ಲಿದೆ ಥ್ರಿಲ್ಲರ್ ಕಥಾನಕದ ಕಂಪು!

    ಇತ್ತೀಚೆಗಷ್ಟೇ ಅರ್ಜುನ್ ಜನ್ಯಾ ಈ ಸಿನಿಮಾದ ಸಂಗೀತ ಸಾರಥ್ಯ ವಹಿಸಿಕೊಂಡಿರೋ ಸುದ್ದಿ ಬಂದಿತ್ತು. ಇದೀಗ ಅದೂ ಕೂಡಾ ಅಂತಿಮ ಘಟ್ಟ ತಲುಪಿಕೊಂಡಿದೆ. ಇನ್ನುಳಿದಂತೆ ಎಲ್ಲ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳೂ ಸಂಪನ್ನಗೊಳ್ಳುತ್ತಿವೆ. ಇನ್ನೇನು ಕೊರೊನಾ ಕಂಟಕ ತಿಂಗಳೊಪ್ಪತ್ತಿನಲ್ಲಿಯೇ ನೀಗಿಕೊಳ್ಳುವ ನಿರೀಕ್ಷೆಗಳೂ ಇದ್ದಾವೆ. ಚಿತ್ರಮಂದಿರಗಳೆಲ್ಲ ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಿದರೆ ಬೇಗನೆ ವಿಂಡೋ ಸೀಟ್ ಕೂಡಾ ತೆರೆಗಾಣಲಿದೆ. ಅಂತೂ ಶೀತಲ್ ಶೆಟ್ಟಿ ಮೊದಲ ಹೆಜ್ಜೆಯಲ್ಲಿಯೇ ಭಾರೀ ಗೆಲುವು ತಮ್ಮದಾಗಿಸಿಕೊಳ್ಳೋ ಲಕ್ಷಣಗಳಂತೂ ಇದ್ದೇ ಇವೆ. ಸದ್ಯ ಎಲ್ಲರ ಚಿತ್ತ ಫಸ್ಟ್ ಲುಕ್ಕಿನತ್ತ ನೆಟ್ಟುಕೊಂಡಿದೆ.

  • ವಿಂಡೋ ಸೀಟ್‍ನಲ್ಲಿ ಅರ್ಜುನ್ ಜನ್ಯಾರ ವಿಹಂಗಮ ಯಾನ!

    ವಿಂಡೋ ಸೀಟ್‍ನಲ್ಲಿ ಅರ್ಜುನ್ ಜನ್ಯಾರ ವಿಹಂಗಮ ಯಾನ!

    ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಕೊರೊನಾ ಬಾಧೆಯ ನಡುವೆಯೂ ಒಂದಷ್ಟು ಸುದ್ದಿ ಮಾಡುತ್ತಾ ಬಂದಿತ್ತು. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಸಿನಿಮಾದ ಮೋಷನ್ ಪೋಸ್ಟರ್ ತನ್ನ ನಿಗೂಢ ಚಹರೆಗಳ ಮೂಲಕ ಚರ್ಚೆಗೆ ಗ್ರಾಸವಾಗಿತ್ತು. ಸಿನಿಮಾವನ್ನು ಗಂಭೀರವಾಗಿ ಪರಿಗಣಿಸಿ ಅದನ್ನೇ ಕನಸಾಗಿಸಿಕೊಂಡಿರೋ ಶೀತಲ್ ಈ ಮೂಲಕ ನಿರ್ಣಾಯಕ ಹೆಜ್ಜೆಯಿರಿಸಿದ್ದಾರೆಂಬ ಮೆಚ್ಚುಗೆಯೂ ಕೇಳಿ ಬಂದಿತ್ತು. ಅದೇ ಖುಷಿಯಲ್ಲೀಗ ಶೀತಲ್ ಮತ್ತೊಂದು ಖುಷಿಯ ಸಂಗತಿಯನ್ನೂ ಹಂಚಿಕೊಂಡಿದ್ದಾರೆ.

    ಕೊರೊನಾ ವೈರಸ್ ರುದ್ರತಾಂಡವವಾಡುತ್ತಿರುವಾಗಲೇ ಶೀತಲ್ ವಿಂಡೋ ಸೀಟ್‍ನ ಪೋಸ್ಟ್ ಪ್ರೊಡಕ್ಷನ್ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದರು. ಅದಾದ ನಂತರದಲ್ಲಿ ನಾನಾ ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿ ಜರುಗುತ್ತಾ ಬಂದಿದ್ದವು. ಹೀಗಿರುವಾಗಲೇ ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ವಿಂಡೋ ಸೀಟ್‍ಗೆ ಬಂದು ಕೂತಿರೋ ಸುದ್ದಿ ಸ್ವತಃ ಶೀತಲ್ ಕಡೆಯಿಂದಲೇ ಹೊರ ಬಿದ್ದಿದೆ.

    ವಿಂಡೋ ಸೀಟ್ ಅನ್ನೋದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರದ ಚಿತ್ರ. ಸಂಕೀರ್ಣ ಕಥೆಯನ್ನ ಚೇತೋಹಾರಿಯಾಗಿಯೇ ಸಿನಿಮಾ ಚೌಕಟ್ಟಿಗೆ ಒಗ್ಗಿಸುವ ಸವಾಲನ್ನು ಶೀತಲ್ ಇಲ್ಲಿ ಸ್ವೀಕರಿಸಿದ್ದಾರಂತೆ. ಈ ಕಥೆಯಲ್ಲಿ ನಾಯಕ ನಿರೂಪ್ ಭಂಡಾರಿ ಗಿಟಾರಿಸ್ಟ್ ಆಗಿ ನಟಿಸಿದ್ದಾರೆ. ಅದಕ್ಕೆ ಪೂರಕವಾಗಿ ಈ ಸಿನಿಮಾವನ್ನ ಮ್ಯೂಸಿಕಲ್ ಹಿಟ್ ಆಗಿಸೋ ಜವಾಬ್ದಾರಿಯನ್ನ ಅರ್ಜುನ್ ಜನ್ಯಾ ವಹಿಸಿಕೊಂಡಿದ್ದಾರೆ.

    ಈಗಾಗಲೇ ಅರ್ಜುನ್ ಜನ್ಯಾರ ಕೆಲಸ ಆರಂಭವಾಗಿದೆ. ಜನ್ಯಾ ತನ್ಮಯರಾಗಿ ಸಂಗೀತ ಪಟ್ಟು ಹಾಕುತ್ತಿರೋದರ ಬಗೆಗಿನ ವಿಡಿಯೋ ಒಂದನ್ನು ಶೀತಲ್ ಹಂಚಿಕೊಂಡಿದ್ದಾರೆ. ಅವರ ಪ್ರತಿಭೆ, ಕೆಲಸದ ಬಗ್ಗೆಯೂ ಬೆರಗಿನ ಮಾತುಗಳನ್ನಾಡಿದ್ದಾರೆ. ಜನ್ಯಾರ ಪ್ರತಿಭೆಯಿಂದಲೇ ವಿಂಡೋ ಸೀಟ್ ಮತ್ತಷ್ಟು ಆಕರ್ಷಣೀಯವಾಗುತ್ತಿರೋದರ ಬಗ್ಗೆಯೂ ಶೀತಲ್ ಥ್ರಿಲ್ ಆದಂತಿದ್ದಾರೆ.

    ಈ ಸಿನಿಮಾದ ಹೀರೋ ಗಿಟಾರಿಸ್ಟ್ ಎಂಬ ವಿಚಾರವೇ ಇಲ್ಲಿ ಸಂಗೀತದ ಮಹತ್ವ ಅದೆಷ್ಟಿದೆ ಅನ್ನೋದರ ಸಂಕೇತ. ಕಥೆಯಲ್ಲಿಯೇ ಸಂಗೀತ ಹೊಸೆದುಕೊಂಡಿದ್ದಾಗ ಅದು ಸಂಗೀತ ನಿರ್ದೇಶಕನ ಪಾಲಿಗೂ ಸವಾಲು. ಅದನ್ನು ಅರ್ಜುನ್ ಜನ್ಯಾ ಖುಷಿಯಿಂದಲೇ ಸ್ವೀಕರಿಸಿದ್ದಾರೆ. ಕಥೆಯನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಲೇ ವಿಂಡೋ ಸೀಟ್ ಅನ್ನು ರಾಗಗಳಿಂದ ಕಳೆಗಟ್ಟಿಸೋ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

    ಜಾಕ್ ಮಂಜು ನಿರ್ಮಾಣ ಮಾಡಿರುವ ವಿಂಡೋ ಸೀಟ್ ಕೊರೊನಾ ಕಾಲದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಪ್ರಧಾನವಾದದ್ದು. ಲಾಕ್‍ಡೌನ್ ಆರಂಭವಾಗೋದಕ್ಕೂ ಮುಂಚಿತವಾಗಿಯೇ ಇದರ ಚಿತ್ರೀಕರಣವನ್ನ ಶೀತಲ್ ಮುಗಿಸಿಕೊಂಡಿದ್ದರು. ಯಾವುದೇ ಸದ್ದುಗದ್ದಲವಿಲ್ಲದೆ ಇತ್ತೀಚೆಗೆ ಪೋಸ್ಟ್ ಪ್ರೊಡಕ್ಷನ್ ಅನ್ನೂ ಆರಂಭಿಸಿದ್ದರು. ಅರ್ಜುನ್ ಜನ್ಯಾ ಎಂಟ್ರಿಯ ಮೂಲಕ ಅದೀಗ ನಿರ್ಣಾಯಕ ಹಂತ ತಲುಪಿಕೊಂಡಿದೆ. ಇಷ್ಟರಲ್ಲಿಯೇ ಶೀತಲ್ ಕಡೆಯಿಂದ ಮತ್ತೊಂದಷ್ಟು ಸಿಹಿ ಸುದ್ದಿಗಳು ರವಾನೆಯಾಗೋ ನಿರೀಕ್ಷೆಗಳಿದ್ದಾವೆ.

  • ವಿಂಡೋ ಸೀಟ್: ಟೈಟಲ್ ಪೋಸ್ಟರ್‌ನಲ್ಲಿದೆ ಥ್ರಿಲ್ಲರ್ ಕಥಾನಕದ ಕಂಪು!

    ವಿಂಡೋ ಸೀಟ್: ಟೈಟಲ್ ಪೋಸ್ಟರ್‌ನಲ್ಲಿದೆ ಥ್ರಿಲ್ಲರ್ ಕಥಾನಕದ ಕಂಪು!

    ಸಿನಿಮಾಗಳಲ್ಲಿ ಒಂದಷ್ಟು ಪಾತ್ರಗಳನ್ನು ನಿರ್ವಹಿಸುತ್ತಲೇ ನಟಿಯಾಗಿ ರೂಪುಗೊಂಡಿದ್ದವರು ಶೀತಲ್ ಶೆಟ್ಟಿ. ಈ ಹಿಂದೆ ಎರಡು ಕಿರುಚಿತ್ರಗಳನ್ನು ನಿರ್ದೇಶನ ಮಾಡೋ ಮೂಲಕ ಅವರು ನಿರ್ದೇಶಕಿಯಾಗುತ್ತ ಗಂಭೀರವಾಗಿ ಹೆಜ್ಜೆಯಿಡುತ್ತಿರುವ ಮುನ್ಸೂಚನೆ ನೀಡಿದ್ದರು. ಇದೀಗ ಯಾವ ಸದ್ದುಗದ್ದಲವೂ ಇಲ್ಲದೆ ಅವರೊಂದು ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ವಿಂಡೋ ಸೀಟ್ ಎಂಬ ಆಕರ್ಷಕವಾದ ಈ ಚಿತ್ರದ ಅತ್ಯಾಕರ್ಷಕ ಟೈಟಲ್ ಪೋಸ್ಟರ್ ಇದೀಗ ಲಾಂಚ್ ಆಗಿದೆ.

    ಇದು ಮಂಜುನಾಥ್ ಗೌಡ (ಜಾಕ್ ಮಂಜು) ನಿರ್ಮಾಣದ ಚಿತ್ರ. ಬಹುಕಾಲದಿಂದಲೂ ಈ ಕಥೆಯನ್ನು ಸೃಷ್ಟಿಸಿ ಒಪ್ಪ ಓರಣವಾಗಿಸಿದ್ದ ಶೀತಲ್ ಶೆಟ್ಟಿ ಲಾಕ್‍ಡೌನ್‍ಗಿಂತಲೂ ಮುಂಚಿತವಾಗಿಯೇ ಚಿತ್ರೀಕರಣ ಮುಗಿಸಿಕೊಂಡಿದ್ದರು. ಇದೀಗ ಅದರ ಟೈಟಲ್ ಪೋಸ್ಟರ್ ಬಿಡುಗಡೆಗೊಂಡಿದೆ. ಅದನ್ನು ಇಡೀ ಚಿತ್ರದ ಬಗ್ಗೆ ನಾನಾ ದಿಕ್ಕುಗಳಿಂದ ಆಲೋಚನೆಗೆ ಹಚ್ಚುವಂತೆ, ಕುತೂಹಲ ಮೂಡಿಸುವಂತೆ ರೂಪಿಸಲಾಗಿದೆ. ಈ ಮೂಲವೇ ಚೆಂದದ ಕಥೆಯೊಂದರ ಹೊಳಹನ್ನೂ ಕೂಡಾ ಶೀತಲ್ ಜಾಹೀರು ಮಾಡಿದ್ದಾರೆ.

    ಈ ಚಿತ್ರದಲ್ಲಿ ನಾಯಕನಾಗಿ ನಟಿಸಿರುವವರು ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ. ಈ ರೊಮ್ಯಾಂಟಿಕ್ ಥ್ರಿಲ್ಲರ್ ಕಥೆಯನ್ನು ಅಷ್ಟೇ ಥ್ರಿಲ್ ಆಗಿ ಒಪ್ಪಿಕೊಂಡಿದ್ದ ನಿರೂಪ್ ಇಲ್ಲಿ ವಿಶಿಷ್ಟ ಪಾತ್ರವನ್ನು ನಿರ್ವಹಿಸಿದ್ದಾರಂತೆ. ಇತ್ತೀಚೆಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಅಮೃತಾ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ನಾಯಕಿಯರಾಗಿ ಜೊತೆಯಾಗಿದ್ದಾರೆ. ಯೋಜನೆಯಂತೆಯೇ ಸಾಗರ ಮುಂತಾದ ರಮಣೀಯ ತಾಣಗಳ ಸುತ್ತಮುತ್ತ ಚಿತ್ರೀಕರಣವನ್ನು ನಡೆಸಲಾಗಿದೆ.

    ಇದೀಗ ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಲಾಕ್‍ಡೌನ್ ಮುಗಿದು ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಲೇ ಶೀತಲ್ ವಿಂಡೋ ಸೀಟಿನ ಅಚ್ಚರಿಗಳೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಇದು ಅವರ ಪಾಲಿಗೆ ಅತ್ಯಂತ ಮಹತ್ವದ ಹೆಜ್ಜೆ. ವಿಂಡೋ ಸೀಟಿನ ಮೂಲಕ ಅವರ ಮಹಾ ಕನಸು ನನಸಾಗುತ್ತಿದೆ. ಈ ಬಗ್ಗೆ ಒಂದಷ್ಟು ವಿವರ ಕೊಡಬೇಕೆಂಬಷ್ಟರಲ್ಲಿ ಲಾಕ್‍ಡೌನ್ ಶುರುವಾಗಿತ್ತು. ಇಷ್ಟರಲ್ಲಿಯೇ ವಿಂಡೋ ಸೀಟ್‍ನ ಫಸ್ಟ್ ಲುಕ್ ಕೂಡಾ ಬಿಡುಗಡೆಗೊಳ್ಳಲಿದೆ. ಈಗ ಬಾಕಿ ಉಳಿದಿರೋ ಕೆಲಸ ಕಾರ್ಯಗಳತ್ತ ಗಮನ ಹರಿಸಿರುವ ಶೀತಲ್ ಇಷ್ಟರಲ್ಲಿಯೇ ಒಂದಷ್ಟು ಖುಷಿಯ ಸಂಗತಿಗಳನ್ನು ಪ್ರೇಕ್ಷಕರ ಮುಂದೆ ತಂದು ಹರವಲಿದ್ದಾರೆ.