Tag: ವಿಂಡರ್ಜಿ- 2022 ಸಮ್ಮೇಳನ

  • 61 ಸಾವಿರ ಕೋಟಿ ರೂ. ಒಡಂಬಡಿಕೆಯಿಂದ 12,000 ಉದ್ಯೋಗ ಸೃಷ್ಟಿ – ಸಚಿವ ಸುನೀಲ್‌ಕುಮಾರ್

    61 ಸಾವಿರ ಕೋಟಿ ರೂ. ಒಡಂಬಡಿಕೆಯಿಂದ 12,000 ಉದ್ಯೋಗ ಸೃಷ್ಟಿ – ಸಚಿವ ಸುನೀಲ್‌ಕುಮಾರ್

    ಬೆಂಗಳೂರು: ರಾಜ್ಯದ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 61 ಸಾವಿರ ಕೋಟಿ ರೂ. ಮೊತ್ತದ ಹೂಡಿಕೆಯ ಒಡಂಬಡಿಕೆಗೆ ನಾನಾ ಸಂಸ್ಥೆಗಳು ಸಹಿ ಹಾಕಿದೆ. ಇದರಿಂದ ರಾಜ್ಯದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 12 ಸಾವಿರ ಉದ್ಯೋಗ ಸೃಷ್ಟಿಗೆ ದಾರಿಯಾಗಲಿದೆ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

    SUNIL KUMAR

    ನವದೆಹಲಿಯಲ್ಲಿ ನಡೆಯುತ್ತಿರುವ ವಿಂಡರ್ಜಿ- 2022 ಸಮ್ಮೇಳನದಲ್ಲಿ, ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹಲವಾರು ಹೂಡಿಕೆದಾರರು 61,000 ಕೋಟಿ ರೂಪಾಯಿ ಮೊತ್ತದ ಎಕ್ಸ್ ಪ್ರೆಶನ್ ಆಫ್ ಇಂಟರೆಸ್ಟ್‌ ಸಹಿ ಹಾಕಿದ್ದಾರೆ. ರಾಜ್ಯ ಇಂಧನ ಇಲಾಖೆ ಇತಿಹಾಸದಲ್ಲೇ ಇದೊಂದು ದೊಡ್ಡ ಮೈಲಿಗಲ್ಲು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಸರ್ಕಾರದ ವೈಫಲ್ಯ, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬಿಜೆಪಿಯಿಂದ ಜಾತಿ ರಾಜಕಾರಣ: ನಲಪಾಡ್

    ಕೊಪ್ಪಳ, ಗದಗ, ದಾವಣಗೆರೆ, ಚಿತ್ರದುರ್ಗ, ವಿಜಯನಗರ, ತುಮಕೂರು, ಬಾಗಲಕೋಟೆ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. 9,218 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    SUNIL KUMAR

    ರಿನ್ಯೂ, ಟೊರೆಂಟ್, ಇಡಿಎಫ್ ರಿನ್ಯೂಬಲ್ ನಂತಹ ಖ್ಯಾತ ಕಂಪನಿಗಳು ಎಕ್ಸ್ಪ್ರೆಶನ್ ಆಫ್ ಇಂಟರೆಸ್ಟ್ಗೆ ಸಹಿ ಮಾಡಿವೆ. ಇಂಡಿಯನ್ ವಿಂಡ್ ಟರ್ಬೈನ್ (Turbine) ಮ್ಯಾನ್ಯುಫಾಕ್ಚರರ್ಸ್ ಅಸೋಸಿಯೇಶನ್ (IWTMA) ಹಾಗೂ ಪಿಡಿಎ ಟ್ರೇಡ್ ಫೇರ್ಸ್ ಪ್ರೈವೆಟ್‌ ಲಿಮಿಟೆಡ್ ಮೂರು ದಿನಗಳ ಸಮ್ಮೇಳನ ವಿಂಡರ್ಜಿ- 2022ನ್ನು ಆಯೋಜಿಸಿದೆ. ಈ ವಿಶೇಷ ಸಮ್ಮೇಳನದಲ್ಲಿ ಭಾರತ ಕ್ಲೀನ್ ಎನರ್ಜಿ ಕಡೆಗೆ ಇಡುತ್ತಿರುವ ಹೆಜ್ಜೆಗಳು, ಭಾರತದಲ್ಲಿ ಇರುವ ಅವಕಾಶಗಳು, ತಾಂತ್ರಿಕತೆಯ ಅಭಿವೃದ್ಧಿ ಮತ್ತು ಆವಿಷ್ಕಾರ, ಪವನ ಶಕ್ತಿ ಉತ್ಪಾದನೆಯಲ್ಲಿ ಇರುವ ತೊಡಕುಗಳು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ಹಾಗೂ ವಿಚಾರ ವಿನಿಮಯ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

    SUNIL KUMAR
    ಸಾಂರ್ಭಿಕ ಚಿತ್ರ

    ರಾಜ್ಯ ಸರ್ಕಾರದ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರನಾಯಕ, ಪ್ರಮುಖ ಭಾಷಣ ಮಾಡಿದರು. ಈ ವೇಳೆ ಅವರು ಕರ್ನಾಟಕ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹಾಗೂ ನವೀಕರಿಸಬಹುದಾದ ಇಂಧನಗಳ ಯೋಜನೆಗಳಲ್ಲಿ ಹೂಡಿಕೆಯ ಬಗ್ಗೆ ಹಾಗೂ ರಾಜ್ಯದ ಸಾಧನೆಯ ಬಗ್ಗೆ ವಿವರಣೆ ನೀಡಿದರು.  ಇದನ್ನೂ ಓದಿ: ಮೇ 3ಕ್ಕೆ ಕೇಂದ್ರ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ – ಕಾರ್ಯಕ್ರಮಗಳ ವಿವರ ಹೀಗಿದೆ

    ರೌಂಡ್ ಟೇಬಲ್ ಕಾರ್ಯಕ್ರಮದಲ್ಲಿ ಕ್ರೆಡೆಲ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಪಿ.ರುದ್ರಪ್ಪಯ್ಯ `Karnataka-Green Investment Destination’ ವಿಷಯ ಮಂಡಿಸಿದರು. ಕ್ರೆಡಲ್ ಚೇರ್ಮನ್ ಚಂದ್ರಕಾಂತ್ ಬಿ.ಪಾಟೀಲ್, ಕ್ರೆಡಲ್ ನಿರ್ದೇಶಕ ಮಂಜುನಾಥ್ ಮತ್ತು IWTMA ಚೇರ್ಮನ್ ತುಳಸಿ ತಂತಿ ರೌಂಡ್ ಟೇಬಲ್ ಕಾನ್ಫರೆನ್ಸ್‌ನಲ್ಲಿ ಉಪಸ್ಥಿತರಿದ್ದರು.

    ವಿಂಡರ್ಜಿ-2022ರಲ್ಲಿ ಕರ್ನಾಟಕದ ಮಳಿಗೆಗಳು, ರಾಜ್ಯವು ನವೀಕರಿಸಬಹುದಾದ ಇಂಧನ ವಲಯದಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ಬೆಳಕು ಚೆಲ್ಲುತ್ತಿದೆ. ಗೌರವಾನ್ವಿತ ಫ್ರೆಡ್ಡಿ ಸ್ವೇನ್ ಈ ಮಳಿಗೆ ಕೂಡ ಉದ್ಘಾಟಿಸಿದ್ದರು.